ಮೂಲ : ಸಚಿನ್ ಕೇಟ್ಕರ್

ಕನ್ನಡಕ್ಕೆ: ಉದಯ ಇಟಗಿ
1
ನನ್ನ ತಾಯಿಗೆ ಬರೀ ಎರಡು ಮೊಲೆಗಳಿದ್ದವು
ದುರದೃಷ್ಟವಶಾತ್ ಹೆಂಗಸರಿಗೆ ಬರೀ ಎರಡು ಮೊಲೆಗಳಷ್ಟೇ ಇವೆ
ಹಾಗಾಗಿಯೇ ಇರಬೇಕು
ನನಗೆ ಒಮ್ಮೆಲೇ ಹತ್ತಾರು ಹೆಂಗಸರು ಬೇಕೆನಿಸುವದು
ಇಲ್ಲವೇ ಹತ್ತು ಕೈಗಳು ಹಾಗೂ ಹತ್ತು ಮೊಲೆಗಳಿರುವ
ಒಬ್ಬಳೇ ಒಬ್ಬ ಪರಿಪೂರ್ಣ ಹೆಂಗಸು ಬೇಕೆಂದನಿಸುವದು
ಆದರೆ ದಯಾಮಯಿಯಾದ
ಸೃಷ್ಟಿಕರ್ತ ಶಂಭುನಾಥ
ಅಂಥ ಹೆಂಗಸರನ್ನು ಸೃಷ್ಟಿಸದೆ
ಸ್ತ್ರೀ ಕುಲಕ್ಕೆ ಉಪಕಾರ ಮಾಡಿದ್ದಾನೆ
ಒಂದುವೇಳೆ
ಅವನು ಅಂಥ ಮಹಿಳೆಯನ್ನು ಸೃಷ್ಟಿ ಮಾಡಿದ್ದರೆ
ನಾವು ಆಕೆಯ ಮೇಲೆ ಹತ್ತತ್ತು ಸಾರಿ ಅತ್ಯಾಚಾರವೆಸಗಿರುತ್ತಿದ್ದೆವು

ಗಂಡಸರಿಗೆ ಒಂದೇ ಒಂದು ಶಿಶ್ನವಿದ್ದರೂ
ನಿಜಕ್ಕೂ
ಅವರಿಗೆ ಹತ್ತಾರು ತೀಟೆಗಳಿವೆ
ಮತ್ತು ಅವರು ತೃಷೆ ತೀರಿಸಿಕೊಳ್ಳಲು ಹತ್ತಾರು ದಾರಿಗಳನ್ನು ಹುಡುಕುತ್ತಾರೆ
ಇವೆಲ್ಲವುಗಳನ್ನು ಚನ್ನಾಗಿ ತಿಳಿದುಕೊಂಡಿರುವ
ನಾನು ನನ್ನ ಮುದಿಗಾಲದಲ್ಲಿ
ಹತ್ತು ತಲೆಯ ಮನುಷ್ಯರಿಗೋಸ್ಕರ
ಹತ್ತು ಸೂತ್ರವನ್ನೊಳಗೊಂಡ
ಬೇರೆಯದೆ ಆದ ಕಾಮಸೂತ್ರವೊಂದನ್ನು
ಬರೆಯಲು ಯೋಚಿಸಿದ್ದೇನೆ
ನಿಮ್ಮ ಪ್ರತಿಗಳನ್ನು ಇಂದೇ ಕಾಯ್ದಿರಿಸಿ
ಮತ್ತು ನನ್ನ ಸಹಿಯಿರುವ ಪ್ರತಿಗಳ ಮೇಲೆ
ಪೂರ್ವ ಪ್ರಕಟಣೆಯ ರೀಯಾಯಿತಿಯನ್ನುಪಡೆಯಿರಿ

ಆದರೆ ಹತ್ತು ಕರಾರುಗಳು ಅವಶ್ಯವಾಗಿ
ಅನ್ವಯಿಸುತ್ತವೆ
2
ದೇಸಿ ಮದ್ಯಕ್ಕಾಗಿ
ಇಂಗ್ಲೀಷ್ ವೈನ್ ಅಂಗಡಿಯಲ್ಲಿ
ಆರ್ಡರ್ ಮಾಡಿದೆ
ಅಂತೆಯೇ ಇಂಗ್ಲೀಷ್ ಮದ್ಯಕ್ಕಾಗಿ
ದೇಸಿ ಅಂಗಡಿಯಲ್ಲಿ
ಆರ್ಡರ್ ಮಾಡಿದೆ






0 Comments