ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂವಿಧಾನ ಸಮಾವೇಶದಲ್ಲಿ ರೇಷ್ಮಾ ಬಂಜಾರ..

ಕಾಡು ಮೇಡುಗಳಲ್ಲಿನ ತಾಂಡಗಳ ಶೋಚನೀಯ ಸ್ಥಿತಿಗಳನ್ನು ಅನಾವರಣಗೊಳಿಸುತ್ತಿದ್ದ ರೇಷ್ಮಾ ಬಂಜಾರ ಬಾಬಾ ಸಾಹೇಬರು ನಡೆದಾಡಿದ ಲಂಡನ್ ಬೀದಿಯಲ್ಲಿ……

“ರೇಷ್ಮಾ ಬಂಜಾರ” ಲಂಬಾಣಿ ಸಮುದಾಯದಲ್ಲಿ ಪತ್ರಕರ್ತೆಯಾಗಿ ಅತ್ಯಂತ ಕ್ರೀಯಾಶೀಲವಾಗಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಚಿರಪರಿಚಿತ ಹೆಣ್ಣು ಮಗಳು. ದಾವಣಗೆರೆ ಚನ್ನಗಿರಿಯ ಹತ್ತಿರ ಬಸವನಹಳ್ಳಿ ಗ್ರಾಮದಲ್ಲಿ ಬಡತನದ ಕುಟುಂಬ, ತಾಯಿ ಶಾಮಲಾ, ತಂದೆ ಸೀತಾರಾಮ್ ನಾಯ್ಕ ಲಂಬಾಣಿ ದಂಪತಿಗೆ ಹುಟ್ಟಿದ ಹೆಣ್ಣು ಮಗು ಲಂಡನ್ ಬೀದಿಯಲ್ಲಿ ಸುತ್ತಾಡುತ್ತಿರುವುದನ್ನು ನೋಡಿ ಹೆಮ್ಮೆ, ಗರ್ವ ಎಲ್ಲವೂ ಆಗಬೇಕಾದ್ದೇ..

ರೇಷ್ಮಾ, ಕಳೆದ ಎಂಟತ್ತು ವರ್ಷಗಳಿಂದ ಪತ್ರಕರ್ತೆಯಾಗಿ, ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡಿದ್ದಾರೆ. ಲಂಬಾಣಿ ಸಮುದಾಯದ ಜ್ವಲಂತ ಸಮಸ್ಯೆಗಳಾದ ಶಿಕ್ಷಣ ವಂಚಿತ, ನಿರುದ್ಯೋಗ, ಗುಳೆ, ಮಕ್ಕಳ ಮಾರಾಟ, ಕಾಫಿ ಎಸ್ಟೇಟ್ ಗಳಲ್ಲಿ‌ ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಗಟ್ಟಿಯಾಗಿ ಹಲವಾರು ವೇದಿಕೆಗಳಲ್ಲಿ ದಿಟ್ಟವಾಗಿ ಮಾತಾಡಿದ್ದಾರೆ. ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆಗೆ ಒಳಗಾದ ಹೆಣ್ಣುಮಕ್ಕಳ ಜೊತೆಯಲ್ಲಿ ನಿಂತು ಕೂಗು ಹಾಕಿದ್ದಾರೆ. ತಾಂಡದ ಜನರ ಶ್ರೀಮಂತ ಸಂಸ್ಕ್ರತಿಯನ್ನು ಕೂಡ ಅನಾವರಣಗೊಳಿಸಿದ್ದಾರೆ. ಇಂತಹ ಗಟ್ಟಿಗಿತ್ತಿ ಯುವ ಪತ್ರಕರ್ತೆ ಲಂಬಾಣಿ ಸಮುದಾಯದಲ್ಲೇ ಮತ್ತೊಬ್ಬರು ಇಲ್ಲ ಅನ್ನೋದನ್ನ ಘಂಟಾಘೋಷವಾಗಿ ಹೇಳಬಲ್ಲೆ.

ಇತ್ತೀಚೆಗೆ ರೇಷ್ಮಾ ಅತ್ಯಂತ ಕ್ರೀಯಾಶೀಲವಾಗಿ ಸಂವಿಧಾನದ ವಿಷಯದಲ್ಲಿ #Reclaimconstitution ತಂಡದೊಂದಿಗೆ ಸಂವಿಧಾನದ ಅಗತ್ಯತೆ, ಅನಿವಾರ್ಯತೆ ಹಾಗೂ ಬದುಕಿನ ಭಾಗವಾಗಿ ಹೇಗೆ ಸಂವಿಧಾನವನ್ನು ನೋಡಬೇಕು ಎನ್ನುವ ತಂಡದೊಂದಿಗೆ ಅರಿವು, ಜಾಗೃತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಖ್ಯಾತ ಹೃದಯ ತಜ್ಞ, ಸಾಮಾಜಿಕ ಬದ್ಧತೆಯ ಅಮೇರಿಕಾದ ಡಾ.ಗಿರೀಶ್ ಮೂಡ್ ಅವರ ಮಾರ್ಗದರ್ಶನದಲ್ಲಿ ಈ ತಂಡ ಕೇರಳ, ತಮಿಳುನಾಡು, ಪಾಂಡಿಚೇರಿ, ಹೀಗೆ ಹಲವಾರು ರಾಜ್ಯಗಳನ್ನು ಸುತ್ತಾಡುತ್ತಿದ್ದಾರೆ. ಸಂವಿಧಾನ ದಿನದಂದು ಕರ್ನಾಟಕದ ತುಟ್ಟತುದಿಯ ಬೀದರ್ ನಿಂದ ದಕ್ಷಿಣದ ತುಟ್ಟತುದಿಯ ಚಾಮರಾಜನಗರದವರೆಗೆ ಲಕ್ಷಾಂತರ ಜನರು ಸೌಹಾರ್ಧ ಮಾನವ ಸರಪಳಿ ನಡೆಸಿ ವಿಶ್ವ ದಾಖಲೆಗೆ ಸರಿಗಟ್ಟಿದ ವಿಶೇಷ ಕಾರ್ಯಕ್ರಮದಲ್ಲಿ ಈ ತಂಡದ ಪಾತ್ರವೇ ಮಹತ್ವದ್ದಾಗಿದೆ.

ಲಂಬಾಣಿ ಸಮುದಾಯವೂ ಸೇರಿದಂತೆ ವಿದ್ಯಾರ್ಥಿ ಯುವಜನರಲ್ಲಿ ಸಂವಿಧಾನದ ಜಾಗೃತಿಯ ಪ್ರಕ್ರಿಯೇ ಭಾಗವಾಗಿಯೇ ರೇಷ್ಮಾ ಬಂಜಾರ ಲಂಡನ್ ತಲುಪಿದ್ದಾಳೆ. ಶೋಷಿತ, ತಳ ಸಮುದಾಯದ ಜನರಿಗೆ ಹಗಲಿರುಳು ತಮ್ಮ ಬದುಕನ್ನ ಅರ್ಪಣೆ ಮಾಡಿದ ಬಾಬಾ ಸಾಹೇಬರು 1921–1922ರಲ್ಲಿ ವಾಸವಿದ್ದ ಲಂಡನ್ ನಗರದ ಪ್ರಿಮ್‌ರೋಸ್‌ ಹಿಲ್‌ ಬಳಿಯ ಕಿಂಗ್‌ ಹೆನ್ರಿ ರಸ್ತೆಯ ಹತ್ತನೇ ನಂಬರ್‌ ಮನೆಯಲ್ಲಿ ರೇಷ್ಮಾ ಬಾಬಾ ಸಾಹೇಬರಿಂದ ಪ್ರೇರಣೆಗೊಳಗಾಗುತ್ತಿದ್ದಾರೆ ಅಂತಲೇ ನಾನಂತು ಭಾವಿಸಿದ್ದಾನೆ.

ಈ ತಂಡ ಸಮಗ್ರ ಅಧ್ಯಯನ, ಪ್ರೇರಣೆಯೊಂದಿಗೆ ಭಾರತಕ್ಕೆ ಮರಳಿದೆ. ಅವರ ಉತ್ಸಾಹ ಮತ್ತಷ್ಟು ಹಿರಿದಾಗಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬಾಬಾ ಸಾಹೇಬ ಅರಿವಿನ ಹಣತೆ ತುಳಿತಕ್ಕೊಳಗಾದ ಸಮುದಾಯಗಳಿಗೆ ಬೆಳಕಾಗಲಿ. ಡಾ.ಗಿರೀಶ್ ಮೂಡ್, ಲೀಲಾ ಸಂಪಿಗೆ ರೇಷ್ಮಾ ಮತ್ತು ಅವರ ತಂಡದ ಉತ್ಸಾಹಕ್ಕೆ ಪ್ರೋತ್ಸಾಹವೂ ದೊರಯಲಿ ಎಂದು ನನ್ನೀ…

‍ಲೇಖಕರು Admin

26 September, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading