ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಗೀತದ ರುಚಿಯನ್ನು ಉಣಬಡಿಸುವ ‘ರಾಗಮಾಲ’

ಶೈಲಜ ಮತ್ತು ಟಿ ಎಸ್ ವೇಣುಗೋಪಾಲ್ ದಂಪತಿಗಳ ಸಂಪಾದಿತ ಪುಸ್ತಕ ಗುಚ್ಛ ‘ರಾಗಮಾಲ’

ಈ ಪುಸ್ತಕವನ್ನು ‘ರಾಗಮಾಲ’ ಪ್ರಕಾಶನ ಪ್ರಕಟಿಸಿದೆ.

ಈ ಕೃತಿಯ ಕುರಿತ ಯೋಗೇಶ್ ಮಾಸ್ಟರ್ ಅವರ ಅನಿಸಿಕೆ ಇಲ್ಲಿದೆ.

ಯೋಗೇಶ್ ಮಾಸ್ಟರ್

ಸಂಗೀತವನ್ನು ಕೇಳುವಷ್ಟೇ ಓದಿಯೂ ಆನಂದಿಸಬಹುದು ಎಂದು ತಿಳಿದಿದ್ದು ಆಕಾಶವಾಣಿಯ ಕೃಷ್ಣಮೂರ್ತಿಯವರ ಸಂಗೀತ ಲಹರಿ ಪುಸ್ತಕವನ್ನು ಓದಿ. ನನ್ನ ಬಾಲ್ಯದಿಂದಲೂ ಆವರಿಸಿದ್ದ ಶಾಸ್ತ್ರೀಯ ಸಂಗೀತದ ಲಹರಿ ಅಕ್ಷರಗಳ ರೂಪ ತಾಳಿ ‘ಸಂಗೀತ ಲಹರಿ’ ಪುಸ್ತಕವಾಗಿ ನನ್ನ ಕೈ ಸೇರಿದ್ದು ನಾನು ಹೈಸ್ಕೂಲಿನಲ್ಲಿ ಇದ್ದಾಗ. ಸಂಗೀತವನ್ನು ಮತ್ತು ಸಂಗೀತದ ಆನಂದವನ್ನು, ಅದರ ರಸಸ್ವಾಧನೆಯನ್ನು ಲೇಖನ ಅಥವಾ ಪ್ರಬಂಧಗಳ ರೂಪದಲ್ಲಿ ಮಂಡಿಸಬಹುದು ಎಂದು ತಿಳಿದಿದ್ದು ಆ ಸಂಗೀತ ಲಹರಿ ಪುಸ್ತಕವನ್ನು ಓದಿ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅದು ಪ್ರಕಟಗೊಂಡಿದ್ದು ಪಕ್ಕದಲ್ಲಿಯೇ ಮಾದರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ನನ್ನ ಕೈ ಸೇರಿತ್ತು.

ಅಷ್ಟೇ ಸಂತೋಷ ಶೈಲಜ ಮತ್ತು ಟಿ ಎಸ್ ವೇಣುಗೋಪಾಲ್ ಹೊರತಂದಿರುವ ರಾಗಮಾಲ ಹತ್ತು ವಿವಿಧ ಪುಸ್ತಕಗಳ ಗುಚ್ಛದಿಂದ ಸಿಕ್ಕಿತು. ಸುಂದರ ಮತ್ತು ಸರಳ ಮುದ್ರಣ.
ಕೈ ಸೇರಿ ಬಹಳ ದಿನಗಳಾದರೂ ಇಂದು ಓದಲು ಕುಳಿತೆ.

ಪ್ರಾರಂಭಿಸಿದ್ದು “ಕೇಳು ಜನಮೇಜಯ.” ಮಹಾಭಾರತದಂತ ಮಹಾಕಾವ್ಯವನ್ನು ಜನಮೇಜಯ ಕೇಳಿದಂತೆ ನಾನು ರಾಗಮಾಲ ಪ್ರಯಾಣ ಇಂದು ಪ್ರಾರಂಭಿಸಿದೆ.

ಸಂಗೀತಾಸಕ್ತರಿಗೆ ಸಾಹಿತ್ಯದ ಅಭಿರುಚಿಯನ್ನು ಮುಟ್ಟಿಸುವ ಮತ್ತು ಸಾಹಿತ್ಯಾಸಕ್ತರಿಗೆ ಸಂಗೀತದ ರುಚಿಯನ್ನು ಉಣಬಡಿಸುವ ಗುಣ ಈ ರಾಗಮಾಲದಲ್ಲಿ ಇದೆ ಎಂದು ಪರಿವಿಡಿಗಳನೆಲ್ಲ ಗಮನಿಸಿದಾಗ ನನಗನಿಸಿತು. ಉತ್ತಮ ಗುಣಮಟ್ಟದ ಮುದ್ರಣ ಮತ್ತು ಪುಸ್ತಕ ವಿನ್ಯಾಸ.

ಬೇಡಿಕೆ ಇತ್ತ ಕೂಡಲೇ ಸ್ಪಂದಿಸಿ, ತಡ ಮಾಡದೆ ಕಳುಹಿಸಿ, ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ ಪುಸ್ತಕಗಳಿಗೆ ಚೂರೂ ಗಾಯವಾಗದಂತೆ ನೋಡಿಕೊಂಡಿದ್ದಾರೆ. ಕಲೆ ಮತ್ತು ಸಂಸ್ಕೃತಿಯ ಅಭಿರುಚಿ ಇರುವ ಓದುಗರ ಸಂಗ್ರಹದಲ್ಲಿ ಇರಬಹುದಾದ ಆಸಕ್ತಿಯ ಮತ್ತು ಕುತೂಹಲದ ಹೊತ್ತಿಗೆಗಳು ಇವು.

‍ಲೇಖಕರು Admin

28 November, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading