
ಸಂಗನಗೌಡ ಹಿರೇಗೌಡ
ಕಾದಂಬರಿಯ ಅರ್ಧಭಾಗ ಕತ್ತಲಿನಲ್ಲಿಯೇ ಘಟಿಸುವುದರಿಂದ ಈ ಕಾದಂಬರಿಗೆ ರೂಪಕವಾದ ಶೀರ್ಷಿಕೆ ಸಕ್ಕತ್ತಾಗಿದೆ. ಅಲ್ಲಿಯ ಮ್ಯಾನುಯೆಲ್ ರೋಕಾ, ಎಲ್‍ಗುರೆ, ಸಾಲಿನಸ್, ಟಿಟೋ, ಈ ತರಹದ ಪಾತ್ರಗಳನ್ನೂ ಒಳಗೊಂಡು ಎಲ್ಲವೂ ಕಪ್ಪು, ಕುರುಡು, ರಾತ್ರಿ, ಈ ರೀತಿಯ ಪದಗಳು ಎಡೆಬಿಡದೆ ಬರುವುದರಿಂದ ಭಯಾನಕವಾದ ಭೂಗತಲೋಕದಂತೆ ಚಿತ್ರಿತವಾಗಿದೆ. ಉದಾ. ಅಲ್ಲಿಯ ‘ತೋಟದ ಮನೆಯ ಗೋಡೆಗಳು ಕಪ್ಪಿಟ್ಟು ನಿಂತಿದ್ದವು’ (ಪು.ಸಂ೫೫) ‘ಆ ವ್ಯಕ್ತಿಯು ಬಾವಿಯಿಂದ ಬಕೇಟನ್ನು ಎಳೆದ. ನೀರು ಕಪ್ಪಾಗಿತ್ತು. ಚೊಂಬಿನಿಂದ ಅದನ್ನು ಕಲುಕಿದ.ಆದರೆ ಕಪ್ಪುತನ ಹಾಗೆ ಉಳಿದುಕೊಂಡಿತು’ (ಅದೇ.ಪು) ಈ ತರಹದ ರೂಪಕ ಭಾಷೆ ಬಂದು ಹೋಗುತ್ತವೆ. ಆದರೆ ನಾವು ನೋಡಬೇಕಾದ್ದು ಕಣ್ಣಿನ ಹಂಬಲದಿಂಲೇ ಹೊರತು ಬೆಳಕಿನ ಹಂಗಿನಿಂದಲ್ಲವೆಂಬಂತೆ, ನೆಲಮಾಳಿಗೆಯಲ್ಲಿ ಕುಳಿತ ನೈನಾ ಎಲ್ಲವನ್ನೂ ಅವಗಾಹಿಸಿಕೊಂಡಿದ್ದು, ಕಾದಂಬರಿಯ ತಕ್ಷಣಕ್ಕೆ ಬಿಟ್ಟು ಕೊಡುವುದಿಲ್ಲ.

ಈ ಎಲ್ಲಾ ಕಪ್ಪು ಇರುಳುಗಳ ದುರಂತಕ್ಕೆ ಯುದ್ಧವೇ ಕಾರಣವಾಗುತ್ತದೆ. ಆದರೆ ಕಾದಂಬರಿಯ ಮುಂದಿನ ಅರ್ಧ ಭಾಗ ಸಿಂಹಾವಲೋಕನದ ಮೂಲಕ ಅದರಿಂದ ಬಿಡಿಸಿಕೊಂಡು ಮಾನವೀಯ ಅಂತಃಕರಣದ ಕಡೆಗೆ ವಾಲುತ್ತದೆ.. ಕೊನೆ ಕೊನೆಗೆ ಕೇಪೆಯಲ್ಲಿ ನಡೆಯುವ ನೈನಾ ಮತ್ತು ಟಿಟೋ ನಡುವಿನ ಸಂಭಾಷಣೆ ಮತ್ತು ಸಂಗೀತ, ಕ್ಯಾಲಿಫೋರ್ನಿಯಾ ಹೊಟೇಲ್ ಒಳಗಿನ ಸಂಗತಿಗಳು, ಮನುಷ್ಯನ ನೈಜ ಬದುಕಿನ ಹುಡುಕಾಟದ ಕುರಿತೇ ಹೇಳುತ್ತವೆ. ಚಿಕ್ಕ ಚಿಕ್ಕ ವಾಕ್ಯಗಳನ್ನು ಮೈಗೂಡಿಸಿಕೊಂಡ ಸರಳ ಭಾಷೆಯು ಕಾದಂಬರಿ ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ.
ಒಂದು ಕತೆ, ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ಕೆಲವು ಪಾತ್ರಗಳಾದರೂ ಒಂದಷ್ಟು ದಿನದ ಮಟ್ಟಿಗೆ ನಮ್ಮ ಮನಸ್ಸಿಗೆ ಡಿಸ್ಟರ್ಬ್ ಮಾಡಬೇಕು.. ಇಲ್ಲಿ ‘ನೈನಾ’ ನನ್ನೊಳಗೆ ಒಂದಷ್ಟು ಕಾಲ ಮಗುವಾಗಿ, ಹೆಣ್ಣಾಗಿ, ವೃದ್ಧಳಾಗಿ ಉಳಿಯುತ್ತಾಳೆಂದು ಖಚಿತವಾಗಿ ಹೇಳಬಲ್ಲೆ.ಅಭಿನಂದನೆಗಳು ಸರ್, ಮತ್ತಷ್ಟು ನಮ್ಮ ನೆಲದ ಉಡಿ ತುಂಬಿರಿ.







0 Comments