
ಡಾ. ಶ್ರೀಪಾದ ಭಟ್ ಕನ್ನಡ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕರಲ್ಲಿಒಬ್ಬರು.
ವೃತ್ತಿಯಲ್ಲಿ ಕನ್ನಡ ಶಿಕ್ಷಕರಾಗಿರುವ ಶ್ರೀಪಾದರು ರಂಗಭೂಮಿ, ಸಂಗೀತ, ಸಾಹಿತ್ಯ, ಶಿಕ್ಷಣ, ಜಾನಪದ.. ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು,‘ಉತ್ತರ ಕನ್ನಡ ಜಿಲ್ಲೆಯ ರಂಗಭೂಮಿ’ ಎಂಬ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಭಾರತ ರಂಗ ಮಹೋತ್ಸವದಲ್ಲಿ ಇವರ ನಿರ್ದೇಶನದ ‘ಕರ್ಣಭಾರ’ ಮತ್ತು ‘ಚಿತ್ರಾ’ ನಾಟಕಗಳು, ಜಶ್ನೆ ಬಚಪನ್ ರಾಷ್ಟ್ರೀಯ ನಾಟಕೋತ್ಸವದಲ್ಲಿ ‘ಕಂಸಾಯಣ’, ‘ಮಕ್ಕಳ ರವೀಂದ್ರ’ ಮತ್ತು ‘ರೆಕ್ಕೆಕಟ್ಟುವಿರಾ’ ಎಂಬ ನಾಟಕಗಳು ಪ್ರದರ್ಶನಗೊಂಡಿವೆ. ಹಾವೇರಿ ಜಿಲ್ಲೆಯ ಶೇಷಗಿರಿ ಎಂಬ ಗ್ರಾಮದಲ್ಲಿ 15 ವರ್ಷದಿಂದ ರಂಗ ಚಟುವಟಿಕೆ ನಡೆಸಿ ಸುಸಜ್ಜಿತ ರಂಗಮಂದಿರವನ್ನೂ ನಿರ್ಮಿಸಿರುವ ಹೆಗ್ಗಳಿಕೆ ಇವರದು.
ಸುಮಾರು 100ಕ್ಕೂ ಹೆಚ್ಚು ನಾಟಕಗಳನ್ನು ಇವರು ನಿರ್ದೇಶಿಸಿದ್ದು ಅನೇಕ ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಇವರ ನಾಟಕಗಳು ಪ್ರದರ್ಶಿಸಲ್ಪಟ್ಟಿವೆ. ಕುವೆಂಪು ವಿಶ್ವವಿದ್ಯಾಲಯ, ಹಂಪಿ ವಿಶ್ವ ವಿದ್ಯಾಲಯಗಳಲ್ಲಿ ರಂಗಭೂಮಿಯ ಸಂಪನ್ಮೂಲ ವ್ಯಕ್ತಿಯಾಗಿ, ಪಠ್ಯ ಪುಸ್ತಕ ರಚನೆಕಾರರಾಗಿ, ಚಿಂತನ ರಂಗ ಅಧ್ಯಯನ ಕೇಂದ್ರದ ಕಾರ್ಯದರ್ಶಿಯಾಗಿ, ಕರ್ನಾಟಕದ ಅನೇಕ ರೆಪರ್ಟರಿ, ರಂಗಶಾಲೆಗಳಲ್ಲಿ ನಾಟಕಗಳ ನಿರ್ದೇಶಕರಾಗಿ ಇವರು ಕೆಲಸ ನಿರ್ವಹಿಸಿದ್ದಾರೆ.
ಇವರ ನಿರ್ದೇಶನದ ‘ಕಾವ್ಯರಂಗ’ ಎಂಬ ಕನ್ನಡ ಕಾವ್ಯಗಳ ವಿಶೇಷ ರಂಗ ಪ್ರಸ್ತುತಿ ನಾಡಿನ ಹಲವು ಕಡೆ ಪ್ರಯೋಗವಾಗಿದೆ. ಇವರು ರಚಿಸಿದ ‘ಬಹು ಭೂಮಿಕಾ’, ‘ಉತ್ತರ ಕನ್ನಡದ ಜನಪದ ರಂಗಭೂಮಿ’, ‘ಯಕ್ಷಗಾನ’ ಎಂಬ ಪುಸ್ತಕಗಳೂ ಪ್ರಕಟಗೊಂಡಿವೆ.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ, ಅನೇಕ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಹಲವಾರು ರಂಗ ತರಬೇತಿ ಕಾರ್ಯಾಗಾರದ ನಿರ್ದೇಶಕರಾಗಿ ದುಡಿದಿರುವ ಭಟ್ಟರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಸಿ.ಜಿ.ಕೆ ಪ್ರಶಸ್ತಿ , ರಾಷ್ಟ್ರಮಟ್ಟದ ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿ, ಸದಾನಂದ ಸುವರ್ಣ ಪ್ರಶಸ್ತಿ, ಮಂಜುನಾಥ ಉದ್ಯಾವರ ಪ್ರಶಸ್ತಿ, ರಾಜ್ಯ ಸರ್ಕಾರದ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.
ರಂಗದ ಮೇಲೆ:
ನಂದಿನಿ: ದಿಶಾ ರಮೇಶ್
ಬಿಶು: ಅಖಿಲೇಶ್ ಕೃಷ್ಣ ಮೈಸೂರು
ರಾಜ: ಮೇಘ ಸಮೀರ
ಗವರ್ನರ್: ಋತ್ವಿಕ್‍ಕೃಪಾಕರ್
ಕೊತ್ವಾಲ: ಚೇತನ್ ಸಿಂಗಾನಲ್ಲೂರು
ಪ್ರೊಫೆಸರ್: ದುಷ್ಯಂತ್ ಸೋಮವಾರಪೇಟೆ
ಪುರಾಣಿಕ: ತಿಲಕ್‍ಕುಮಾರ್
ಫಗು: ವಿನೋದ್‍ಕುಂಬಾರಕೊಪ್ಲು
ಚಂದ್ರಾ: ಶಿಲ್ಪ ತಾತನಹಳ್ಳಿ
ಕಿಶೋರ: ಲಾವಣ್ಯ ಮೈಸೂರು
ಗೋಕುಲ: ನಾಗೇಂದ್ರ ಅರಳಗುಪ್ಪೆ
ಕೆಲಸಗಾರ್ತಿ: ವೀಣಾ ನಾಗಮಂಗಲ
ರಂಗದ ಹಿಂದೆ:
ಮೂಲ: ರವೀಂದ್ರನಾಥಟ್ಯಾಗೋರ
ರಂಗರೂಪ: ಸುಧಾ ಆಡುಕಳ
ಸಂಗೀತ ಸಾಂಗತ್ಯ: ಅನುಷ್ ಶೆಟ್ಟಿ, ಮುನ್ನ
ರಂಗ ಸಜ್ಜಿಕೆ: ಎಚ್.ಕೆ.ವಿಶ್ವನಾಥ್
ಬೆಳಕು: ವಿನಯ್‍ಚಂದ್ರ
ಸಂಘಟನೆ: ರಾಮು ನಟನ, ಸತೀಶ್ ಬೈಕಾಡಿ
ಕಛೇರಿ: ಆನಂದ್‍ಕೆ.ಎಸ್, ಲಕ್ಷ್ಮಿ ನಾಯಕ್
ಸಹ ನಿರ್ದೇಶನ: ಮೇಘ ಸಮೀರ
ನಟನ ನಿರ್ಮಾತೃ: ಮಂಡ್ಯರಮೇಶ್
ಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಡಾ.ಶ್ರೀಪಾದ ಭಟ್








ಶ್ರೀಪಾದರಾಯಣ ಸಂಬಂಧ!
ಶ್ರೀಪಾದ ಭಟ್ ಸ್ಮರಿಸಿಕೊಂಡಾಗೆಲ್ಲ ನೆನಪಾಗುವುದು ಚಿರಸ್ಮರಣೆ. ಚಿರಸ್ಮರಣೆ ನೆನಪಾದಾಗೆಲ್ಲ ಕಣ್ಮುಂದೆ ಬರುವುದು ಕತೆಗಾರ ನಿರಂಜನ. ಅವರಿಗೂ ಇವರಿಗೂ ಎಂಥಾ ಬಾದರಾಯಣ ಸಂಬಂಧ ಎಂದು ಹುಡುಕುತ್ತಾ ಹೊರಟರೆ, ನಿರಂಜನರಿಗೆ ರವೀಂದ್ರನಾಥ್ ಟಾಗೋರ್ ಮತ್ತ ಮಾಂಟೋ ಮೆಚ್ಚಿನ ಲೇಖಕರಾಗಿದ್ದರು ಅನ್ನುವುದು ತಿಳಿಯುತ್ತದೆ. ರವೀಂದ್ರನಾಥ್ ಟಾಗೋರ್, ಮಾಂಟೋ ಮತ್ತು ಶ್ರೀಪಾದರಿಗೆ ಎಂಥಾ ಪಾದರಾಯಣ ಸಂಬಂಧ ಅಂತ ಹುಡುಕಾಡಿದರೆ, ಜೂನ್ ೧೫,೧೬,೧೭ರಂದು ರಂಗಶಂಕರದಲ್ಲಿ ಅವಽ ಸಹಯೋಗದೊಂದಿಗೆ ಮಾಂಟೋ ಮತ್ತು ಟಾಗೋರ್ ಕತೆಗಳನ್ನು ಆಧರಿಸಿದ ಶ್ರೀಪಾದಭಟ್ ನಿರ್ದೇಶಿಸಿದ ಮೂರು ನಾಟಕಗಳ ಪ್ರದರ್ಶನ ಇರುವುದು ಗೊತ್ತಾಗುತ್ತದೆ. ಭೀಮಾಯಣದಂಥ ನಾಟಕ ಕೊಟ್ಟ ಶ್ರೀಪಾದ ಭಟ್ ಅವರಿಗೆ ನಾಟಕೋತ್ಸವ ಎಷ್ಟೊಳ್ಳೇ ಗೌರವ ಅಲ್ವೇ!
‘ನಾನು ಕರ್ನಾಟಕದ ರಂಗಭೂಮಿಯ ಪರಿಽಯಲ್ಲೇ ಕೆಲಸ ಮಾಡಿಕೊಂಡು ಬಂದವನು. ಹೊಸ ತಂಡಗಳಿಗೆ, ಅಪ್ಪಟ ಹವ್ಯಾಸಿಗಳಿಗೆ ರಂಗಪಾಠ ಹೇಳುತ್ತಾ ಬಂದೆ. ಕೃಷಿಕೂಲಿ ಕಾರ್ಮಿಕರಿಗೆ, ಶಿಕ್ಷಕರಿಗೆ ವೈದ್ಯರಿಗೆ- ರಂಗದ ಖುಷಿ ಮನಗಾಣಿಸಲು ಯತ್ನಿಸಿದೆ. ಕಂಪಿನ ಕರೆಗಿಂತ ಕಾಲದ ಕರೆಗೆ ಓಗೊಟ್ಟವನು ನಾನು. ಈಗ ಅಪ್ಪಟ ಹವ್ಯಾಸಿಯೋರ್ವನ ಅರೆಬರೆಗಳನ್ನು ಒಪ್ಪವಾಗಿಸಿ ಉತ್ಸವದ ಘನತೆ ನೀಡುತ್ತಿರುವ ಜಿಎನ್‌ಮೋಹನ್ ತಂಡಕ್ಕೆ ನಮನ’ ಎನ್ನುತ್ತಾರೆ ಶ್ರೀಪಾದ ಭಟ್.
ಅವರು ಸಿರ್ಸಿಯವರು, ಹೈಸ್ಕೂಲ್ ಅಧ್ಯಾಪಕರು. ಮಕ್ಕಳ ರಂಗಭೂಮಿಯಿಂದ ಹೊರಟು ಚಿಂತನ, ಸಮುದಾಯಗಳೊಂದಿಗೆ ಇದ್ದವರು. ತುಳು ನಾಟಕಗಳನ್ನೂ ನಿರ್ದೇಶಿಸಿದವರು. ಕನ್ನಡ ಕಾವ್ಯವನ್ನು ರಂಗದ ಮೇಲೆ ತಂದವರು. ಶೇಷಗಿರಿ ಎಂಬ ಹಳ್ಳಿಯಲ್ಲಿ ರೈತರ ಮಕ್ಕಳಿಗೆ ನಾಟಕ ಕಲಿಸಿ ತಂಡ ಕಟ್ಟಿದವರು. ಅದೇ ತಂಡವೇ ಗಣೇಶ್ ನಿರ್ದೇಶನದಲ್ಲಿ ವಾಲಿವಧೆ ನಾಟಕ ಪ್ರದರ್ಶಿಸಿದ್ದು.
ನಾಟಕ ನೋಡುತ್ತಾ ಭಟ್ಟರನ್ನು ಅರಿಯೋಣ.