ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶೇಕ್ಸ್ ಪಿಯರ್ ಮನೆಗೆ ಬಂದ: ಒಬ್ಬ ಕವಿಯನ್ನು ಅರ್ಥ ಮಾಡಿಸುವ ಪ್ರಯೋಗ

ಶೇಕ್ಸ್ ಪಿಯರ್ ಮನೆಗೆ ಬಂದ

ಡಾ.ಎ.ಆರ್.ಗೋವಿಂದಸ್ವಾಮಿ

ಥಿಯೇಟರ್ ತತ್ಕಾಲ್  ರವೀಂದ್ರ ಕಲಾಕ್ಷೇತ್ರದಲ್ಲಿ ನಟರಾಜ್ ಹುಳಿಯಾರ್ ರಚಿಸಿ, ನಟರಾಜ ಹೊನ್ನವಳ್ಳಿ ನಿರ್ದೇಶಿಸಿದ ‘ಶೇಕ್ಸ್ ಪಿಯರ್ ಮನೆಗೆ ಬಂದ’ ನಾಟಕ ಪ್ರಯೋಗಿಸಿತು.
ಮಹಾಕವಿ ನಾಟಕಕಾರ ಅಯ್ಸ್ಕಿಲೂಸ್ ಹಾಗೂ ಸೊಪೊಕ್ಲಿಸ್ ಅವರ ಪ್ರಭಾವದಲ್ಲಿ ಬೆಳೆದ ನಾಟಕ ಚಕ್ರವರ್ತಿ ವಿಲಿಯಂ ಶೇಕ್ಸ್ಪಿಯರ್ ತನ್ನ ದಿ ಟೆಂಪೆಸ್ಟ್ (1611) ನಾಟಕವನ್ನು ಒಂದನೇ ರಾಜ ಜೇಮ್ಸ್ ಮುಂದೆ ಪ್ರಯೋಗಿಸಿದ ಜಾನಪದ ಕಥೆ ಅಥವಾ ರೋಮಾನ್ಸ್ ಕ್ರೋನಿಕಲ್ ನಾಟಕ ಇದು, ಜೋತೆಗೆ ‘ಆ್ಯಸ್ ಯು ಲೈಕ್ಇಟ್’, ಮಚ್ ಆ್ಯಡೋ ಎಬವ್ಟ್ ನಥಿಂಗ್, ಟ್ವೆಲ್ಫ್ತ್ನೈಟ್, ಆಂಟೋನಿ ಮತ್ತು ಕ್ಲಿಯೋ ಪಾತ್ರ, ರೋಮಿಯೋ ಅಂಡ್ ಜೂಲಿಎಟ್, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಮ್ಯಾಕ್ಬೆತ್, ಜೂಲಿಯಸ್ ಸಿಸರ್, ರಿಚರ್ಡ್ & , ಹ್ಯಾಮ್ಲೇಟ್, ಕಿಂಗ್ ಲಿಯರ್, ದಿ ಟೆಮಿಂಗ್ ಆಫ್ ದಿ ಶ್ರ್ಯೂ, ದಿ ಮರ್ಚೆಂಟ್ ಆಫ್ ವೆನಿಸ್, ಹೆನ್ರಿ, ಕಿಂಗ್ ಹೆನ್ರಿ 4 ಭಾಗ-1, ಒಥೇಲೋ, ಕಿಂಗ್ ರಿಚರ್ಡ್ ನಂತಹ ವಿಶ್ವ ಶ್ರೇಷ್ಟ ನಾಟಕಗಳನ್ನು ಬರೆದು, ಬೃಹತ್ಕಾವ್ಯ, 1800 ಕ್ಕೂ ಹೆಚ್ಚಿನ ನುಡಿಗಟ್ಟುಗಳನ್ನು ಸೃಷ್ಟಿಸಿದ ನಾಟಕ ಪಿತಾಮಹನ ಪ್ರತಿಭೆ, ವ್ಯಕ್ತಿತ್ವ, ಎಲ್ಲಾ ಕೃತಿಗಳನ್ನು ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾಹಿತಿಗಳು, ಚಿತ್ರ ಕಲಾವಿದರು, ಸಿನಿಮಾ ರಂಗದವರು, ನಟ-ನಟಿಯರು ನಾಟಕಕಾರರು, ನಿರ್ದೇಶಕರು ಅಲ್ಲದೆ, ವೈದ್ಯರು, ವಕೀಲರು, ಬಾರ್ ನಲ್ಲಿ ಕುಡಿದು ಕುಳಿತ ಜನರಿಂದ ಹಿಡಿದು ನಮ್ಮ ನಿಮ್ಮಂತಹ ಅನೇಕರು ಇದೇ ಶೇಕ್ಸ್ಪಿಯರ್ ನನ್ನು ಹಲವು ಬಗೆಯಲ್ಲಿ ಮುಖಾಮುಖಿಯಾಗಿದ್ದಾರೆ. ಹಾಗೂ ಅನುಸಂಧಾನ ನಡೆಸಿದ್ದಾರೆ ಮತ್ತು ನಡೆಸುತ್ತಿದ್ದಾರೆ.

ಕಲಾವಿದ: ಶೋಯೆಂಕಾ


ಈ ಹಿನ್ನೆಲೆಯಲ್ಲಿ ಗಮನಿಸಿದಾಗ, ‘ಶೇಕ್ಸ್ಪಿಯರ್ ಮನೆಗೆ ಬಂದ’ ಪ್ರಸ್ತುತದ ನಾಟಕ ಕೃತಿ ಹಾಗೂ ರಂಗ ಕೃತಿ ಸಹ ಶೇಕ್ಸ್ಪಿಯರ್ ನ ಎಲ್ಲಾ ಕೃತಿಗಳ ಬಗ್ಗೆ, ಆತನ ಅನನ್ಯ ಪ್ರತಿಭೆ, ವ್ಯಕ್ತಿತ್ವ, ಬದುಕು,ಆತನ ಬಗ್ಗೆ ಬಂದಿರುವ ವಿಮರ್ಶೆಗಳು ಒಳಕೊಂಡಂತೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಆತನ ಇನ್ನೊಂದು ಮುಖವನ್ನು ಅನಾವರಣ ಮಾಡುವ ಪ್ರಯತ್ನ ಮಾಡಲಾಗಿದೆ. ಅಂದರೆ ಒಟ್ಟಾರೆ ರಂಗಭೂಮಿ, ಕಲಾವಿದರು, ಬರಹಗಾರರನ್ನು ಅಂತರ್ ಮುಖಿಯಾಗಿ ಹಾಗೂ ಅವರ ಬಹಿರಂಗವನ್ನು ಕುರಿತು ಮಾತನಾಡುತ್ತಲೇ ಒಬ್ಬ ಸ್ಕಾಲರ್ ನ ಫಿಲಾಸಫಿಯ ಬೇರೆ ಬೇರೆವಾದಗಳು ಹಾಗೂ ಅವರ ಶಕ್ತಿಯನ್ನು, ಕಲೆಯ ಪ್ರಶ್ನೆಗಳನ್ನು ಸಹ ಮುಂದಿಟ್ಟುಕೊಂಡು, ನಾಟಕಕಾರರು ಹಾಗೂ ನಿರ್ದೇಶಕರು ಒಂದು ಖಠಿಡಿಚಿಟ ಣಡಿಣಜಣಣಡಿಜ ನಲ್ಲಿ ಅಂದರೆ ನಿದ್ದೆ-ಎಚ್ಚರ ಅಥವಾ ಎಚ್ಚರದಲ್ಲಿ-ನಿದ್ದೆ ಎಂಬ ಕಲ್ಪನೆಯಲ್ಲಿ ನಾಟಕ ಕೃತಿಯನ್ನು ನಾಟಕಕಾರರು ನೋಡಿದ್ದಾರೆ. ಈ ಶೈಲಿಯನ್ನು ಕಠಿಣ ಒಠಜಜಡಿಟಿಟ ಶೈಲಿ ಅಂದರೆ, ಆಧುನಿಕೋತ್ತರ ಶೈಲಿ’ಯಲ್ಲಿ ಕೃತಿ ಕಟ್ಟಲಾಗಿದೆ ಎಂದು ಹೇಳಬಹುದು. ಇದು ಬಹಳ ವಿಶೇಷವಾಗಿ ನಾಟಕದಲ್ಲಿ ಗುರುತಿಸಬೇಕಾದ ಅಂಶವಾಗಿದೆ.
ಇನ್ನೂ ರಂಗಕೃತಿಯು ರಂಗಭೂಮಿಯ ಮೇಲೆ ಎಲ್ಇಡಿಯ ದೀಪಗಳ ನೀಲವರ್ಣದ ಅದ್ಭುತವಾದ ಮಂದ ಬೆಳಕಿನಲ್ಲಿ ಹಿಂಪಾದ ಕೊಳಲ ದನಿಯ ಭಾವಕ್ಕೆ ಹೊಂದುವಂತೆ ನಿಧಾನಗತಿಯ ಚಲನೆಯಲ್ಲಿ ಶೇಕ್ಸ್ಪಿಯರ್ ಕಾಲದ ವಸ್ತ್ರ ತೊಟ್ಟ ಎಂಟ ರಿಂದ ಹತ್ತು ಕಲಾವಿದರು ಚಕ್ರದಲ್ಲಿ ಅಳಪಡಿಸಿದ ಒಂದು ಸಣ್ಣ ಮನೆಯ ಸೆಟ್ಟನ್ನು ಹಾಗೂ ಕೆಲವು ಪೀಠಗಳನ್ನು ತಳ್ಳುತ್ತಾ, ರಂಗಕ್ಕೆ ತಂದಿರಿಸುತ್ತಾರೆ. ಕಲಾವಿದರು ಪೀಠದ ಮೇಲೆ ಕುಳಿತಾಗ ಹಿನ್ನೆಲೆ ಧ್ವನಿ ಶ್ರೇಷ್ಠ ನಾಟಕಕಾರ ಶೇಕ್ಸ್ಪಿಯರ್ ಊರಿಗೆ ಬರುತ್ತಿದ್ದಾನೆ. ಆತನಿಗೆ ಸನ್ಮಾನ ಎಂಬ ಘೋಷಣೆಯು ಪ್ರೇಷಕರನ್ನು ತನ್ನತ್ತ ಹಿಡಿದಿಟ್ಟುಕೊಳ್ಳುವ ಮೂಲಕ ಪ್ಲಾಷ್ಬ್ಯಾಕ್ ತಂತ್ರದಲ್ಲಿ ಪ್ರಯೋಗ ಚಾಲನೆ ಪಡೆಯುವುದು. ನಾಟಕ ಚಕ್ರವರ್ತಿಯ ಖಿಠ ಛಜ ಠಡಿ ಟಿಠಣ ಣಠ ಛಜ ಸ್ವಾಗತವನ್ನು ಹಾಸ್ಯಮಯವಾಗಿ ಬೆಡ್ ರೂಮ್ನಲ್ಲಿ ಖಿಠ ಜಠ ಟಿಠಣ ಣಠ ಜಠ ಎಂಬ ಹಾಸ್ಯ ಚಟಾಕಿಯೊಂದಿಗೆ ಆರೇಳು ಜನ ಪಾತ್ರಧಾರಿಗಳು ಅಂದರೆ ಈ ಕಲಾವಿದರೆ ಮುಂದೆ ನಿರೂಪಕರು ಹೌದು, ಹಾಸ್ಯ ಕಲಾವಿದರು ಹೌದು, ಕೋಡಂಗಿಗಳಂತೆ, ಬಫೂನುಗಳಂತೆ, ಶೇಕ್ಸ್ಪಿಯರ್ ನಾಟಕಗಳಲ್ಲಿ ಬರುವ ಪಾತ್ರಗಳಾಗಿಯೂ, ಜನರಾಗಿಯೂ, ಪ್ರೇಕ್ಷಕರಾಗಿಯು, ವಿಮರ್ಶಕರಾಗಿಯೂ ಅಭಿನಯಿಸುತ್ತಾ, ಸಾಗುತ್ತಾರೆ. ಇದನ್ನು ಜಗವೇ ರಂಗ ಭೂಮಿ ಜನರು ಬರೆ ನಟರು ನಮಗುಂಟು ನೂರು ಪಾತ್ರಗಳು ಎಂಬ ಈ ನಿರೂಪಕರ ಹಾಡಿನ ಭಾವ ಸಾಗುತ್ತಿದೆ.

ಮತ್ತೋಬ್ಬ ನಿರೂಪಕನು ಲೇಖಕನ (ನಟರಾಜ್ ಹುಳಿಯಾರ್) ಅಪರಾವತಾರವಾಗಿಯೂ ಇರುತ್ತಾನೆ. ಶೇಕ್ಸ್ಪಿಯರ್ ಬರಹಗಳ ಬಗ್ಗೆ ಮಾತನಾಡುತ್ತಾ ಬರಹಗಾರರು ಎಲ್ಲಿ ಕದಿಯುತ್ತಾರೆ. ಹೇಗೆ ಕದಿಯುತ್ತಾರೆ ಎಂಬ ವಿಮರ್ಶಕರ ಪ್ರಶ್ನೆ ಚರ್ಚಿಸುತ್ತಾ, ಬರೆಯೊದು ಕದಿಯೋದು ಸಹಜ ಗುಣ. ಸೂರ್ಯ, ಚಂದ್ರ, ಭೂಮಿ ಸಹ ಕದ್ದು ತನ್ನ ಕರ್ತವ್ಯ ನಿರ್ವಹಿಸುವುದು ಎನ್ನುವ ಉದಾಹರಣೆ ನೀಡುವ ಮೂಲಕ ಪ್ರಯೋಗ ಗಂಭೀರತೆಗೆ ತೆರೆಯುತ್ತದೆ. ಎಲ್ಲ ಪಾತ್ರಗಳನ್ನು, ಸನ್ನಿವೇಶಗಳನ್ನು ನಿರ್ದೇಶಕರು ನಿಧಾನಗತಿಯ ಚಲನೆ ಹಾಗೂ ಮಾತಿನಲ್ಲಿ ಪೋಣಿಸಿರುವುದು, ಹಳ್ಳಿ ಸೊಗಡು, ಪಾಂಡಿತ್ಯ ಭಾಷೆ, ಆಡುನುಡಿ ಕನ್ನಡ ಹೀಗೆ ವಿಭಿನ್ನ ಶೈಲಿಭಾಷೆ ಬಳಸಲಾಗಿದೆ. ಒಟ್ಟಾರೆ ದೃಶ್ಯಗಳು, ಸುಂದರವಾದ ಕತ್ತಲಲ್ಲಿಯೇ ನಾಟಕವು ಕಟ್ಟಲಾಗಿದೆ. ನೋಡುಗರಿಗೆ ಬೆಳದಿಂಗಳ ರಾತ್ರಿ ಮಧ್ಯರಾತ್ರಿ ಆರಂಭವಾಗಿ ಬೆಳಗಿನ ಜಾವ ಮುಗಿದಂತೆ, ಚಂದ್ರನ ಬೆಳಕಿನಲ್ಲಿ ನಾಟಕ ನೋಡಿದ ಅನುಭವ.
ಮಹಿಳಾ ಪಾತ್ರಧಾರಿಗಳು ಶೇಕ್ಸ್ಪಿಯರ್ನ ಹೆಂಡತಿಯಾಗಿ ಹಾಗೂ ಆತನ ನಾಟಕಗಳ ಹೆಣ್ಣು ಪಾತ್ರಗಳಾಗಿಯೂ ಎಕಕಾಲದಲ್ಲಿ ‘ಒನ್ ಆಕ್ಟ್ ಪ್ಲೆ’ ರೀತಿಯಲ್ಲಿ ಅಭಿನಯ ದೃಶ್ಯಗಳಿವೆ. ಒಂದು ಗಂಡು ಹೆಣ್ಣಿನ ಪಾತ್ರವನ್ನು ಎರಡೆರಡು ಜೋಡಿಗಳನ್ನು ಬಳಸಿ ಆ ಪಾತ್ರಗಳ ಭಾವ ತೀವ್ರತೆಯನ್ನು ಇಮ್ಮಡಿಗೊಳಿಸಿದಂತೆ ಪ್ರಯೋಗದಲ್ಲಿ ನಿರ್ದೇಶಕರು ಬಳಸಿದ್ದಾರೆ. ಇದು ಮೂಲ ಪಠ್ಯದಲಿಲ್ಲ. ಬಹುತೇಕ ಪಳಗಿದ ನಟ ವರ್ಗ ನಾಟಕವನ್ನು ಸಹಜ ಉಸಿರಾಟದಂತೆ ಯಾವುದೇ ಅಭಿನಯದ ಒತ್ತಡವಿಲ್ಲದೆ ನೈಜವಾಗಿ ಮುನ್ನಡೆಸುತ್ತಾರೆ. ಸಂಗೀತ ಸಹ (ಎಸ್.ಆರ್.ರಾಮಕೃಷ್ಣ) ಇಂಪಾಗಿದ್ದು ಸ್ಪಲ್ಪ ಮಟ್ಟಿನ ಸಿನಿಮಾ ಗೀತೆಗಳಂತೆ ಕಟ್ಟಲಾಗಿದೆ. ಆದರೆ ನಾಟಕದ ಭಾವವನ್ನು, ಅದರ ಭಾವ ತೀವ್ರತೆಯನ್ನು ಕಳೆದುಕೊಂಡಿಲ್ಲ. 
ಟಿಟಾನಿಯಾಳ ದೃಶ್ಯದಲ್ಲಿ ಒಬ ನಟ ಕೊರಳಲ್ಲಿ ಎಲ್.ಇ.ಡಿ ಲೈಟಿನ ಹಾರ ತೊಟ್ಟು ಕತ್ತಿಯನ್ನು ಎಳೆದಂತೆ ಮಾಡಿ ಸೋಪಿನ ನೀರಿನ ಗುಳ್ಳೆ (ಬಬ್ಬಲ್) ರಂಗದ ತುಂಬ ಹಾರಿಸಿದ್ದು ,ಹಿನ್ನೆಲೆ ಬೆಳಕು, ಸಹನಟರು ಸಹ ರಂಗದ ತುಂಬ ಗುಳ್ಳೆಗಳನ್ನು ಚೆಲ್ಲಿದ್ದು ತಾಂತ್ರಿಕವಾಗಿ ಉತ್ತಮ ಪರಿಣಾಮ ಉಂಟು ಮಾಡಿತು. ಅದೇ ರೀತಿ ಮ್ಯಾಕ್ಬೆತ್, ಒಥೆಲೋ, ರೋಮಿಯೋ ಜೂಲಿಯಟ್ ಪಾತ್ರಗಳು ಒಂದಕ್ಕೊಂದು ಮುಖಾಮುಖಿಯಾಗುವಂತೆ, ಚರ್ಚಿಸುವಂತೆ, ಒಂದು ರೀತಿ ಟೀಕೆ, ವಿಮರ್ಶೆ, ಸ್ವತ: ಶೇಕ್ಸ್ಪಿಯರ್ ಹೆಂಡತಿಯೇ ಆತನನ್ನು ಟೀಕಿಸುವಂತೆ , ಶೇಕ್ಸ್ಪಿಯರ್ ತನ್ನ ನಾಟಕ ದೃಶ್ಯವನ್ನು ಪಾತ್ರವನ್ನು ನಾನು ಹೀಗೆ ಬರೆದಿದ್ದೆನೇಯೇ ಎಂದು ಆತ್ಮ ವಿಮರ್ಶೆ ಮಾಡಿಕೊಳ್ಳುವುದು. ಇದೆಲ್ಲವು ಎಲ್ಲ ಬರಹಗಾರರು, ಚಿಂತಕರನ್ನು, ವಿಮರ್ಶಕರನ್ನು ಸಹ ಮುಖಾಮುಖಿಯಾಗಿಸಿದಂತಹ ಅನುಭವವನ್ನು ಪ್ರಯೋಗ ಕಟ್ಟಿಕೊಡುತ್ತದೆ.
ಲೇಖಕನ ಪೂರ್ವಗ್ರಹಗಳು, ಚೇಷ್ಠೆಗಳು, ಬರೆದದ್ದೆ ನಿಜವಲ್ಲ ಎಂಬುದು ಕಾವ್ಯದಲ್ಲಿ ತಾನು ಬಳಸಿದ ‘ಐ’ ಪದ ತಾನಾಗದೆ ಇತರರನ್ನು ಹೇಳುವುದಾಗಿದೆ ಹಾಗೆ ತಾನು ಕುದುರೆಲಾಯ ಕಾಯುವನೆಂಬ ಅರ್ಥದಲ್ಲಿ ವಿಮರ್ಶಕರ ತಪ್ಪು ಗ್ರಹಿಕೆಗಳು ಸಹ ಚರ್ಚೆಯಾಗುತ್ತಿವೆ. ಎಂಟು ವರ್ಷಗಳ ಶೇಕ್ಸ್ಪಿಯರ್ನ ಸತತ ಪಾಂಡಿತ್ಯದ ಓದು ಸಹ ಇಲ್ಲಿ ಅನಾವರಣಗೊಳ್ಳುತ್ತದೆ. ಒಟ್ಟಾರೆ ಪ್ರಯೋಗವೇ ಒಂದು ವಿಮರ್ಶೆಯಂತೆ ಅನೇಕ ಅನುಮಾನಗಳ ಪರಿಹಾರ ಸೂಚಿಸುವಂತೆ ಕಾಣುತ್ತದೆ. ಕಲಾವಿದರ ರಿಹರ್ಸಲ್ಗಳು ನಟನೆಯ ಕ್ರಮ, ಎಲ್ಲರನ್ನು ಅಂತರ್ ಮುಖಿಯಾಗಿಸಿಸುತ್ತದೆ. ನಿರ್ದೇಶಕರ ಪರಿಪಕ್ವತೆ, ಬೌದ್ದಿಕತೆ ದೃಶ್ಯಗಳನ್ನು ಕಟ್ಟಿರುವಲ್ಲಿ ಕಾಣಬಹುದು.
ನಿರ್ದೇಶಕರು ಬಹುತೇಕ ಮಾತಿನ ನಾಟಕವನ್ನು ಒಂದು ನಾಟಕಾನುಭವದೊಂದಿಗೆ, ಒತ್ತಡವಿಲ್ಲದೆ. ಅಬ್ಬರವಿಲ್ಲದೆ, ಹೆಚ್ಚಿನ ಘರ್ಷಣೆ ಇಲ್ಲದೆಯೂ, ಕೂಲ್ ಕೂಲ್ ಕೂಲ್… ತಂತ್ರದಲ್ಲಿ ನಾಟಕ ಹೇಗೆ ಕಟ್ಟಬಹುದು ಎಂಬುದನ್ನು ಇಲ್ಲಿ ನಟರಾಜ ಹೊನ್ನವಳ್ಳಿ ಸಾಭಿತುಪಡಿಸಿದ್ದಾರೆ. ನಟಿ-ಭವಾನಿ ಪ್ರಕಾಶ್, ನವೀನ್, ಕಿರಣ್, ಶಿವಪ್ರಸಾದ್, ಪ್ರಮೋದ್, ವಿಶ್ವರಾಜ್, ಸಂತೋಷ, ಅರ್ಚನ ರಾವ್, ಗೋಪಾಲಕೃಷ್ಣ ದೇಶಪಾಂಡೆ ಗಣಪತಿ ಗೌಡ ಮುಂತಾದವರ ಅಭಿನಯ ವಿಭಿನ್ನತೆ ಗಮನ ಸೆಳೆಯಿತು. ಬೆಳಕು ನಿರ್ವಹಣೆ ಜಗದೀಶ್, ಪ್ರೇಕ್ಷಾಗೃಹದ ಗದ್ದಲದಲ್ಲಿ ಅಲಲ್ಲಿ ಧ್ವನಿ ಕೇಳಿಸಲಿಲ್ಲ ಎನ್ನುವುದು ಬಿಟ್ಟರೆ ಒಟ್ಟಾರೆ ಪ್ರಯೋಗ ಗಮನ ಸೆಳೆಯಿತು. 
ನಿರ್ದೇಶನ ಶೈಲಿ
ಒಟ್ಟಾರೆಯಾಗಿ ಈ ರಂಗ ಕೃತಿಯನ್ನು ಗ್ರಹಿಸಿದಾಗ, ನಿರ್ದೇಶಕ ನಟರಾಜ್ ಹೊನ್ನವಳ್ಳಿಯವರು ಸಾಂಪ್ರದಾಯಿಕವಾದ ಒಂದು ರಂಗಕೃತಿಯ ಚೌಕಟ್ಟನ್ನು ಮೀರಿ ನಾಟಕ ಕೃತಿಯ ಬೇಡಿಕೆಗೆ ಅನುಗುಣವಾಗಿ ಬೇರೆ ಬೇರೆ ಫಾರ್ಮ್ಗಳ ಜೊತೆ ಜೊತೆಗೆ ಪ್ರಯೋಗ ಕಟ್ಟಿದ್ದಾರೆ. ಶೇಕ್ಸ್ಪಿಯರ್ ಅನ್ನು ಮಲ್ಟಿಪಲ್ ರೀಡಿಂಗ್ನಲ್ಲಿ ನೋಡುವಂತೆ ಅವರ ಸಾನೆಟ್ಗಳು, ಬದುಕು ಆತನ ಬೇರೆ ಬೇರೆ ನರೇಷನ್ಸ್ಗಳು ನಾಟಕಗಳು, ಬೇರೆ ಬೇರೆ ವಿಮರ್ಶೆಗಳು ಸ್ವತ: ಬರಹಗಾರ ತನ್ನನ್ನು ತಾನೇ ಕಂಡುಕೊಳ್ಳುವ ಪರಿಯಂತಹ ವಿಷಯವನ್ನು ಸಹ ಇಟ್ಟುಕೊಂಡು ಒಬ್ಬ ಬಹು ದೊಡ್ಡ ಬರಹಗಾರನನ್ನು ಪ್ರೇಕ್ಷಕರಿಗೆ ಕಾಣಿಸುವುದು ಮಾಡಿದ್ದಾರೆ.
ಆದರೆ ಈ ಪ್ರಯೋಗವನ್ನು ವ್ಯವಧಾನವಾಗಿ ಪ್ರತಿಯೊಂದು ಸೂಕ್ಷ್ಮಭಾವಗಳ ಜೋತೆ ಪ್ರೇಕ್ಷಕ ಮುಖಾಮುಖಿಯಾಗ ಬೇಕಾಗುತ್ತದೆ. ಒಟ್ಟಾರೆ ರಂಗ ಕೃತಿಯನ್ನು ನಿರ್ದೇಶಕರು ರಿಯಾಲಿಸಂ, ಸ್ಟೈಲೈಜ್, ಅಬ್ಸರ್ಡ ಅಭಿನಯ ಶೈಲಿಗಳನ್ನು ಒಳಗೊಂಡ ವಿಭಿನ್ನ ಡೈಲೆಕ್ಟ್ಗಳೊಂದಿಗೆ ಎಲೆಕ್ಟಿಕಲ್(ಇಟಜಛಿಣಛಿಟಜ ಣಥಿಟಜ ) ಶೈಲಿಯಲ್ಲಿ ಪ್ರಯೋಗ ಕಟ್ಟಿದ್ದಾರೆ.
ಈ ಪ್ರಯೋಗಕ್ಕೆ ಬಂದ ಬಹುತೇಕ ಪ್ರೇಕ್ಷಕರು ಓದಿಕೊಂಡವರು, ಶೇಕ್ಸ್ಪಿಯರ್ ಬಗ್ಗೆ ತಿಳಿದವರಿದ್ದರು ಆದರೆ ಆತನನ್ನು ಓದಿರದ ನೇರವಾಗಿ ಮನರಂಜನೆಗಾಗಿ ಬರುವ ಅನೇಕ ಪ್ರೇಕ್ಷಕರಿಗೆ ಇದು ಮುಟ್ಟುತ್ತದೆಯೇ ಎಂಬ ಪ್ರಶ್ನೆ ಇದೆಯಾದರೂ ಪ್ರಯೋಗವು ಶೇಕ್ಸ್ಪಿಯರ್ನ ಬಗ್ಗೆ, ಆತನನ್ನು ಅರ್ಥ ಮಾಡಿಸುವ ಒಂದು ನಾಟಕಾನುಭವ ಇಲ್ಲಿ ಇದ್ದೆ ಇದೆ. ಹಾಗೆ ನೋಡಿದರೆ ‘ಸ್ಮಶಾನ ಕರುಕ್ಷೇತ್ರಂ’ ಎಲ್ಲರಿಗೂ ರೀಚ್ ಆಗದಿದ್ದರೂ ಸಹ ಒಬ್ಬ ಕವಿಯನ್ನು ಅರ್ಥ ಮಾಡಿಸುವಂತೆ ಈ ಪ್ರಯೋಗ ಸಹ ಇದೆ. ಎನ್ನಬಹುದು.

‍ಲೇಖಕರು G

29 August, 2013

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. shadakshari.Tarabenahalli

    Its Awesome capture Geleya. Govind…
    Happy to see you there as well as a treat by reading this too…
    Shadak.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading