ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶುರುವೇ ಆಗದ ಪ್ರೇಮಗಾಥೆ

chetana2.jpg

 “ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ 

ಸುಂದರಿ….

ಅವಳ ಸವಿಗೆ ದುಂಬಿ ದಂಡು. ದಂಡಿನಲ್ಲೊಬ್ಬ ಪ್ರೇಮ ಪೂಜಾರಿ. ಹಗಲಿರುಳೂ ಅವನದೇ ಸುತ್ತ ಮುತ್ತ.

ಆದರವನ ಪ್ರೇಮಕ್ಕೆ ಬೆಲೆಯೇ ಇಲ್ಲ ಅವಳಲ್ಲಿ. ಅಸಲು, ಪ್ರೀತಿಯೆಂಬುದರ ಅರಿವೇ ಇಲ್ಲ ಅವಳಿಗೆ. ಒಳಗಿಂದೊಳಗೇ ಎಂಥದೋ ತಿರಸ್ಕಾರ. ಅವನ ಬಳಿ ಬೈಕೂ ಇಲ್ಲವಲ್ಲ!

ಹೀಗಿರುವಾಗೊಮ್ಮೆ ಸುಂದರಿಯ ಮದುವೆ.

ಈಗವಳು ಗಂಡನ ಹಿಂದೆ ಮುಂದೆ.  ಅವನೋ!? ಒಣ ಕಾಗದದ ಚೂರುಗಳ ಹಿಂದೆ ಹಿಂದೆ…. ಬರಡು ಬೆಂಚು, ಟೇಬಲ್ಲುಗಳನಪ್ಪಿ, ಕಪಾಟಿನೆದುರೇ ಸಪಾಟು ಮಲಗುವನಾತ! ದುಡ್ಡುಬಾಕ!!

ರಂಭೆ ರೂಪದವಳ ಕಡೆಗಣ್ಣಲೂ ಹೀರದವನ ಅರಸಿಕತೆಗೆ, ಉಪೇಕ್ಷೆಗೆ ಮರುಗುತ್ತಾಳವಳು. ಭಾವನೆಗಳೇ ಇಲ್ಲದ ರಾತ್ರಿಗಳಲ್ಲಿ ರಬ್ಬರಿನಂತಾಗುತ್ತಾಳೆ. ಕಚ್ಚಿಕೋ ಅನ್ನುತ್ತಾಳೆ. ಹೆಣದಂತೆ ಮಲಗುತ್ತಾಳೆ.

ಅವನ ನೆನಪಾಗುತ್ತದೆ. ಅವನ ಪ್ರೀತಿಯ ಹೊಳಪು ಕಣ್ ಚುಚ್ಚುತ್ತದೆ. ಮಗ್ಗುಲಾಗಿ ಮುಲುಗುತ್ತಾಳೆ…. “ಹುಡುಗಾ! ನನ್ನ ಜೀವನವಿಂದು ನೀನಿತ್ತ ಶಾಪ!!”  ಬಿಕ್ಕುತ್ತಾಳೆ.

ಅಲ್ಲೆಲ್ಲೋ ಆ ಹುಡುಗನ ಹೃದಯ ಹಿಂಡುತ್ತಿರುತ್ತದೆ.

jeeva.jpgಶುರುವೇ ಆಗದ ಪ್ರೇಮಗಾಥೆ ಮುಗಿದೂ ಹೋಗುತ್ತದೆ!

jeeva.jpgjeeva.jpg*

ಅತಿ ಚಿಕ್ಕ ಪ್ರೇಮಕಥೆ

ವಳು ಪೀಡಿಸಿದಳು:
‘ಜಗತ್ತಿನ ಅತಿ ಚಿಕ್ಕ ಪ್ರೇಮ ಕಥೆ ಬರಿ’
ಅಂವ ನಸುನಗುತ್ತ, ಅವಳ ಹಣೆ ಮೇಲೊಂದು ಸಿಂಧೂರ ಬಿಂದುವಿಟ್ಟ.
ಕಥೆ….ಶುರುವಾದಲ್ಲೇ ಮುಗಿದೂ ಹೋಯ್ತು!!

( ಇದು ಖಂಡಿತಾ ಎಸ್ ಎಂ ಎಸ್ ಕಥೆಯಲ್ಲ)

‍ಲೇಖಕರು avadhi

21 August, 2007

2 Comments

  1. ಸತೀಶ್ ಪಾಗಾದ್

    ಹಂಗೇಲ್ಲ ಅನ್ಬಾರದು.
    ಅಸಲು ಭೂಮಿಯಲ್ಲಿ ಇನ್ನೂ ಮೊಳಕೆಯೊಡೆಯದೇ ಸತ್ತ ಪ್ರೀತಿಗೆ ಮಗ್ಲಲು ಬದಲಿಸಬೇಕಿಲ್ಲ.ಹುಟ್ಚದೇ ಇದ್ದ ಪ್ರೀತಿಗೆ ಇದ್ದರೆನು ಸತ್ತರೆನು? ಬದುಕಲು ಅವನ ಕಣ್ ಹೊಳಪೊಂದು ಸಾಕಲ್ಲವೆ

  2. shashi sampalli

    ಅತ್ಯಂತ ಸಣ್ಣ ಕಥೆ ಚೆನ್ನಾಗಿದೆ. ಅದಕ್ಕಿಂತ ಸಣ್ಣ ಪ್ರೇಮಕಥೆ ಇಲ್ಲಿದೆ:

    ನಾಲ್ಕೂ ಕಣ್ಣುಗಳು ಕೂಡಿದವು,….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading