
-ಎಸ್.ಜಿ.ಶಿವಶಂಕರ್
ಸತ್ಯನಿಗೆ ಭಯವಾಯಿತು. ಕಡಲು ಅಷ್ಟು ಭೀಕರವಾಗಿದ್ದನ್ನು ಹಿಂದೆಂದೂ ಅವನು ನೋಡಿಯೇ ಇರಲಿಲ್ಲ! ಅಂತ ಭಾರೀ ಅಲೆಗಳನ್ನೆಂದೂ ಕಂಡಿರಲಿಲ್ಲ. ಬೊಬ್ಬಿರಿಯುತ್ತಾ ಆಕಾಶದೆತ್ತರಕ್ಕೆ ಎದ್ದು ದಡಕ್ಕೆ ರಾಚಿತು. ಹೆದರಿ ಕಣ್ತೆರೆದ ಸತ್ಯ! ತಾನಿದ್ದ ಕಡೆ ಕಡಲೇನೂ ಇರಲಿಲ್ಲ. ತಾನು ಕಡಲ ತೀರದಲ್ಲಿಯೂ ಇರಲಿಲ್ಲ. ತುಂಬ ಕ್ಷೀಣವಾಗಿದ್ದ ಬೆಳಕಿನಲ್ಲಿ ತಾನು ಆಸ್ಪತ್ರೆಯಲ್ಲಿರುವುದನ್ನು ಕಂಡುಕೊಂಡ. ಈ ಸಮುದ್ರ ತನ್ನನ್ನೇಕೆ ಕಾಡುತ್ತಿದೆ ? ಕಣ್ಣು ಮುಚ್ಚಿದರೆ ಬಿರುಗಾಳಿ, ಕಡಲಿನ ಭೋರ್ಗರೆತ, ಭೀಕರವಾದ ಅಲೆಗಳು, ರಕ್ತ ರಾಚುತ್ತ ಮುಳುಗುತ್ತಿರುವ ಸೂರ್ಯ! ಇವೇಕೆ ತನ್ನನ್ನು ಎಡಬಿಡದೆ ಕಾಡುತ್ತಿವೆ? ಏಕೆ ಹೀಗಾಗುತ್ತಿದೆ ? ಪ್ರಯಾಸದಿಂದ ಎಡಕ್ಕೆ ಹೊರಳಲು ಪ್ರಯತ್ನಿಸಿದ. ಅರೆ ಮುಚ್ಚಿದ ಬಾಗಿಲು ಕಂಡಿತು. ಆಡಃರೆ ತಿರುಗಲಾಗಲಿಲ್ಲ. ತಿರುಗುವುದು ಸಾಧ್ಯವೂ ಇರಲಿಲ್ಲ. ಕಾರಣ ಎಡ ತೋಳಿನಲ್ಲಿನ ಅಗಾಧವಾದ ನೋವು. ಈ ಎಲ್ಲ ನೋವುಗಳು ಅದೆಷ್ಟು ಕಾಲ ತನ್ನಲ್ಲಿಯೇ ಬೀಜದೊಳಗೆ ಅ
ವ್ಯಕ್ತವಾಗಿರುವ ವೃಕ್ಷದಂತೆ ಅಡಗಿದ್ದವೋ? ಒಮ್ಮೆಲೇ ಎಲ್ಲಾ ಅಮರಿಕೊಂಡುವಲ್ಲಾ ಎಂದು ಸತ್ಯ ಆಶ್ಚರ್ಯಪಟ್ಟ. ತಾನು ಮಲಗಿರುವ ಎಡಭಾಗದಲ್ಲಿನ ಮಂಚದ ಮೇಲೆ ತನ್ನ ಪತ್ನಿ ಮಲಗಿರುವಳು ಎಂಬುದನ್ನು ಪ್ರಜ್ಞೆ ತಿಳಿಸಿತು.
ತಾನಿರುವ ಸ್ಥಿತಿಯನ್ನು ಸ್ಪಷ್ಟಮಾಡಿಕೊಳ್ಳಲು ಪ್ರಯತ್ನಿಸಿದ. ಬಹಳ ಕಾಲ ತಾನು ನಿದ್ರೆಯಲ್ಲಿದ್ದೆ ಎನಿಸಿತು. ಎಚ್ಚರ ಮತ್ತು ನಿದ್ರೆಗಳ ನಡುವೆ ಅದೆಷ್ಟು ಕಾಲ ಕಳೆದಿದೆ ಎಂಬುದರ ಅರಿವು ಅವನಿಗೆ ಂಮ್ಮೆಲೇ ಬರಲಿಲ್ಲ. ಆದರೆ ಬಹಳ ಕಾಲದಿಂದಲೂ ಹೀಗೆಯೇ ಇದ್ದೇನೆ ಎಂಬ ಭಾವನೆ ಭದ್ರವಾಗಿತ್ತು. ಎಚ್ಚರ ಮತ್ತು ನಿದ್ರೆಗಳ ಸ್ಥಿತಿಯಲ್ಲಿ ಅಗಾಧ ವ್ಯತ್ಯಾಸವಿತ್ತು. ಎಚ್ಚರದಲ್ಲಿ ಇದೀ ದೇಹವನ್ನು ನೋವಿನ ಗಾಣದಲ್ಲಿ ಸಿಕ್ಕಿಸಿ ಹಿಂಡಿದಂತಹ ಅನುಭವ. ನಿದ್ರೆಯಲ್ಲಿ ಮಾತ್ರ ನೋವಿನ ಅರಿವೇ ಇರುತ್ತಿರಲಿಲ್ಲ. ಈ ಎರಡು ಸ್ಥಿತಿಗಳನ್ನು ಎಚ್ಚರ ಮತ್ತು ನಿದ್ರೆಗಳ ಸ್ಥಿತಿ ಎಂದು ಹೇಳುವುದಕ್ಕಿಂತ ಪ್ರಜ್ಞೆ ಮತ್ತು ಮರೆವಿನ ಸ್ಥಿತಿ ಎನ್ನುವುದು ಸೂಕ್ತವೆನಿಸಿತು ಸತ್ಯನಿಗೆ.
ಎಚ್ಚರದೊಡನೆಯೇ ದೇಹದ ಹಲವಾರು ಭಾಗಗಳಿಂದ ನೋವಿನ ಅಲೆಗಳು ಎದ್ದು ಪ್ರಜ್ಞೆಗೆ ರಾಚಲು ಪ್ರಾರಂಭವಾದವು. ಪ್ರಜ್ಞಾಹೀನ ಸ್ಥಿತಿಯೇ ನೆಮ್ಮದಿಯಾಗಿತ್ತಲ್ಲ..ಈ ಎಚ್ಚರ ಏಕಾದರೂ ಬೇಕು ಎಂಬ ಚಿಂತನೆ ಮುಂದುವರಿದು ಪ್ರಜ್ಞಾಹೀನ ಸ್ಥಿತಿಯಲ್ಲೇ ಇಂತ ನೆಮ್ಮದಿ ಇರುವಾಗ ಇನ್ನು ಸಾವು ಹೇಗಿದ್ದೀತು? ಅದು ಚಿರಶಾಂತಿಯಲ್ಲವೆ ? ಎಚ್ಚರದಲ್ಲಿ ನೋವುಣ್ಣುವುದಕ್ಕಿಂತ ಸಾವು ಮೇಲಲ್ಲವೆ! ಹೌದು ಸಾವು ಮೇಲು.. ತನ್ನಮಟ್ಟಿಗಾದರೂ ಅದು ಚಿರ ನೆಮ್ಮದಿಯನ್ನೇ ನೀಡುವುದು. ಆದರೆ ಉಳಿದವರಿಗೆ…? ಹೆಂಡತಿ, ಮಕ್ಕಳು ಮತ್ತು ಬಂಧು-ಬಾಂಧವರಿಗೆ ? ಇದೇ ಚಿಂತೆ ಪದೇ ಪದೇ ಸೂತ್ರಕಿತ್ತು ಹಾರಲಿದ್ದ ಗಾಳಿಪಟವನ್ನು ಮತ್ತೆ ಸೂತ್ರಕ್ಕೆ ಬಂಧಿಸುತ್ತಿತ್ತು!
ಹಿಂದನದನ್ನು ನೆನೆಪು ಮಾಡಿಕೊಳ್ಳಲು ಪ್ರಯತ್ನಿಸಿದ. ಹೌದು ಸ್ವಲ್ಪಮಟ್ಟಿಗೆ ನೆನಪಿದೆ. ತಾನು ಮಲಗಿದ್ದಂತೆಯೇ ಶ್ರಮದಿಂದ ಪತ್ರವೊಂದಕ್ಕೆ ಸಹಿ ಹಾಕಿದ್ದೆ- ಬ್ಯಾಂಕಿನ ಲಾಕರನ್ನು ತೆರೆಯಲು ಹೆಂಡತಿಗೆ ಅನುಮತಿ ಪತ್ರ. ಲಾಕರಿನಲ್ಲಿನ ಕೆಲವು ಒಡವೆಗಳನ್ನು ಮಾರುವುದು ಅನಿವಾರ್ಯವಾಗಿತ್ತು. ಇಲ್ಲದಿದ್ದಲ್ಲಿ ಇನ್ನೆಷ್ಟು ದಿನ ಆಸ್ಪತ್ರೆಯಲ್ಲಿಟ್ಟುಕೊಂಡಿದ್ದಾರು. ಕೆಲಸ ಮಾಡುವ ಕಂಪನಿಯ ಕಡೆಯಿಂದೇನೋ ಆಸ್ಪತ್ರೆಯ ಖಚರ್ು ಕೆಲ ಮಟ್ಟಿಗೆ ನೋಡಿಕೊಳ್ಳುತ್ತಿದ್ದಾರೆ, ಇದಲ್ಲದೆ ಇನ್ನೂ ಖಚರ್ುಗಳಿವೆಯಲ್ಲ…? ತನಗೆ ಸಂಬಳ ಬರುತ್ತಿಲ್ಲ! ಆಸ್ಪತ್ರೆಯಲ್ಲಿ ಮಲಗಿರುವಾಗ ಸಂಬಳದ ಪ್ರಶ್ನೆಯೆಲ್ಲಿ? ಚೆನ್ನಾಗಿ ಕೆಲಸ ಮಾಡಿದರೂ ಸಂಬಳ ಸಿಗದಂತ ಕೆಟ್ಟ ದಿನಗಳು ಬರುತ್ತಿವೆ. ಖಚರ್ಿಗೆ ಕೆಲವು ಂಡವೆಗಳು ಕರಗಲೇಬೇಕು..!
ಅವನಿಂದಲೇ ತನಗೆ ಇಂತಾ ಕೆಟ್ಟ ಸ್ಥಿತಿ! ತನ್ನನ್ನು ಈ ಸ್ಥಿತಿಗೆ ತಂದ ಅವನಿಗೆ ಶಾಪ ಹಾಕಲಾರೆ! ಅವನಿಂದ ತನಗೆ ವಂಚನೆಯಾಗದೆ ಇದಿದ್ದರೆ ತನ್ನ ಬದುಕು ಹೀಗೆ ಹದ್ದು,ನಾಯಿ,ನರಿಗಳು ಹರಿಯುವ ಸತ್ತ ಪ್ರಾಣಿಯ ದೇಹದಂತಾಗುತ್ತಿರಲಿಲ್ಲ! ಸತ್ಯನಿಗೆ ತನ್ನಲ್ಲಿ ಏಳುತ್ತಿರುವ ಭಾವನೆಗಳ ಬಗೆಗೆ ದಿಗಿಲಾಯಿತು. ಹಿಂದೆಂದೂ ತಾನು ಹೀಗೆ ಸಂಕುಚಿತ ಭಾವನೆಗಳು ತನ್ನಲ್ಲಿ ಚಿಮ್ಮಿರಲಿಲ್ಲ! ಜಗತ್ತೆನ್ನೆಲ್ಲಾ ದೇವರು ಆವರಿಸಿಕೊಂಡಿರುವನು ಎಂದ ಮೇಲೆ ಮೋಸ ಮಾಡುವವನು ಯಾರು ? ಮೋಸ ಹೋಗುವವನು ಯಾರು ? ಎಲ್ಲವೂ ಅವನೇ ಅಲ್ಲವೆ? ಇಂತ ನಂಬಿಕೆಯಲ್ಲಿದ್ದ ತನ್ನಲ್ಲಿ ಈಗ ಇಂತ ಕ್ಷುಲ್ಲಕ ಯೋಚನೆಗಳು ಬಂದಿದ್ದಾರೂ ಹೇಗೆ ..? ಬರುತ್ತಿರುವುದಾದರೂ ಎಲ್ಲಿಂದ ?

ದಡಕ್ಕೆ ಅಪ್ಪಳಿಸಿದ ಅಲೆ ಮೆಲ್ಲನೆ ಹಿಂದೆ ಸರಿಯತೊಡಗಿತು. ಮೊದಲಿನ ವೇಗ ಅದರಲ್ಲಿ ಉಳಿದಿರಲಿಲ್ಲ! ಸತ್ಯನಿಗೆ ಮೆಲ್ಲಗೆ ಮಂಪರು ಕವಿಯತೊಡಗಿತು. ದೇಹ ಜಡವಾದಂತೆ…ಆದರೆ ಮನಸ್ಸು ಮಾತ್ರ ಕ್ರಿಯಾತ್ಮಕವಾಗಿತ್ತು. ಅಲೆಯ ನೀರು ಹಿಂದೆ ಹಿಂದೆ ಸರಿದು ಸಾಗರದೊಳಕ್ಕೆ ಸೇರಿ ನಿಲರ್ಿಪ್ತವಾಯಿತು. ಸತ್ಯ ನಿದ್ರೆಗೆ ಜಾರಿದ್ದ.
ನಿದ್ರೆಯಲ್ಲಿಯೂ ನೆಮ್ಮದಿಯಿರಲಿಲ್ಲ. ಸಮುದ್ರದ ಅಬ್ಬರ ಕೇಳುತ್ತಿತ್ತು, ಆದರೆ ಕಾಣಲಿಲ್ಲ. ಸುಂಯ್ಗುಟ್ಟುವ ಗಾಳಿಯ ಹುಯ್ಲಾಟ ಅವನ ಕಿವಿಯನ್ನು ತಾಕುತ್ತಿತ್ತು. ತಾನು ಮಲಗಿರುವ ಆಸ್ಪತ್ರೆಯ ವಾಡರ್ಿನ ಗೋಡೆಯ ಪಕ್ಕದಲ್ಲಿಯೇ ಕಡಲು ತನ್ನ ಂಡಲನ್ನು ಚಾಚಿಕೊಂಡಿದೆ ಎಂಬ ಭಾವನೆ ಸತ್ಯನಿಗೆ.
ಈಗ ಮತ್ತವನು ಕಡಲ ತೀರದಲ್ಲಿ ಮಲಗಿದ್ದ. ಎದುರಿಗೆ ವಿಶಾಲವಾದ ಅಗಾಧವಾದ ಕಡಲು. ಇದ್ದಕ್ಕಿದ್ದಂತೆಯೇ ಇಡೀ ವಾತಾವರಣ ರೌದ್ರ ರೂಪ ತಾಳಿತು. ಕಡಲಿನೊಡಲಿಂದ ಮುಗಿಲೆತ್ತರದ ಅಲೆಗಳು ಭೂಮಿಯನ್ನೂ ಆಕಾಶವನ್ನೂ ನುಂಗುವಂತೆ ಎದ್ದಿದ್ದವು! ಈ ಸ್ಥಿತಿಯಲ್ಲಿ ತನ್ನ ಗತಿಯೇನು? ಸತ್ಯ ಭಯವಿಹ್ವಲನಾದ.
ಕಡಲು ಈಗ ಇಬ್ಬಾಗವಾಯಿತು. ಮಧ್ಯದಲ್ಲಿ ಭೂಮಿ ಕಂಡಿತು-ಕಾಲುವೆಯಂತೆ. ಇದು ಹೇಗೆ ಸಾಧ್ಯ? ಕಡಲು ಇಬ್ಬಾಗವಾಗುವುದೆಲ್ಲಿ ಸಾಧ್ಯ? ಹೇಗೆ ಸಾಧ್ಯ? ಮಧ್ಯದಲ್ಲಿ ಭೂಮಿಯೆಲ್ಲಿಂದ ಬಂತು? ಂಮ್ಮೆಲೇ ಅವನಿಗೆ ಚಿಕ್ಕಂದಿನಲ್ಲಿ ನೋಡಿದ್ಡ ಸಿನೀಮಾ ನೆನಪಾಯಿತು. ಹೌದು ಅದು `ಂೆನ್ ಕಮ್ಯಾಂಡ್ಮೆಂಂ್’ ಎಂಬ ಇಂಗ್ಲೀಷು ಚಿತ್ರ! ಥೇಂ್ ಅದರಲ್ಲಿ ನಡೆದಂತೇ ಎದುರು ನಡೆಯುತ್ತಿದೆ. ನೋಡುನೋಡುತ್ತಿದ್ದಂತೆ ಮಧ್ಯದಲ್ಲಿ ಪರಮೇಶ ಕಂಡ! ಎಲಾ…ಇವನು ಎಲ್ಲಿದ್ದ? ಇಲ್ಲಿಗೆ ಹೇಗೆ ಬಂದ? ಅದೇನು ಗಾತ್ರ ಅವನದು..? ವಾಮನನಂತೆ ಕ್ಷಣಕ್ಷಣಕ್ಕೂ ಬೆಳೆಯುತ್ತಿದ್ದ. ಅವನು ನಗುತ್ತಿದ್ದ. ಸತ್ಯನನ್ನೇ ಕಂಡು ನಗುತ್ತಿದ್ದ! ಎಲಾ..ತನಗಷ್ಟು ಮೋಸ ಮಾಡಿ ಮತ್ತೆ ಅಣಕಿಸುತ್ತಿದ್ದಾನಲ್ಲ! ಇದಕ್ಕೆ ಗುಂಡಿಗೆಯೆನ್ನಬೇಕು…ಇಲ್ಲಾ ಇದಕ್ಕೆ ಬೇಕಾಗಿರುವುದು ಗುಂಡಿಗೆಯಲ್ಲ..ಬಂಡತನ!
ಇದ್ಡಕ್ಕಿದ್ದಂತೆ ಪರಮೇಶನ ಮುಂದೆ ಅವನಿಗಿಂತಲೂ ಬೃಹತ್ತಾಗಿ ಬೆಳೆದವನೊಬ್ಬ ಅಕಾಶದಿಂದ ಧುಮಿಕಿದ! ಅವನು ಪರಮೇಶನನ್ನೂ ಆವರಿಸಿಬಿಟ್ಟಿದ್ದ. ಇವನಾರು…? ಸತ್ಯ ಯೋಚಿಸಿದ…ಸ್ವಲ್ಪಸ್ವಲ್ಪವಾಗಿ ನನಪಿಗೆ ಬಂತು! ಅವನು ಬ್ಯಾಂಕ್ ಮ್ಯಾನೇಜರ್! ಎಲಾ..ಇವನೂ ಇಲ್ಲಿ ಬಂದನೆ?
`ನೀನು ಮತ್ತು ಪರಮೇಶ’
ಮೋಡಗಳು ಗುಡುಗಿದಂತೆ ಬ್ಯಾಂಕ್ ಮ್ಯಾನೇಜರನ ಮಾತು!
`ಪ್ಲೀಸ್ ಗೀವ್ ರೆಸ್ಪೆಕ್ಟ್ ಅಂಡ್ ಂೇಕ್ ರೆಸ್ಪೆಕ್ಟ್!’
`ನಿನಗೆ ರೆಸ್ಪೆಕ್ಟ್ ಕೊಡಬೇಕೋ..? ಡಿಫಾಲ್ಟರ್!’
`ನಾನು ಡಿಫಾಲ್ಟರ್ ಅಲ್ಲ! ನಾನು ಪರಮೇಶನ ಮೇಲಧಿಕಾರಿ. ನಾನು ಬರೀ ಷೂರಿಟಿಯಾಗಿ ಸೈನು ಹಾಕಿರೋದಷ್ಟೆ. ಸಾಲ ತಗೊಂಡಿರೋದು.. ಪರಮೇಶ’
ಶಾಂತ ರೀತಿಯಲ್ಲಿ ಉತ್ತರಿಸಿದ ಸತ್ಯ!
`ಇದು ಜಾಯಿಂಂ್ ಸಾಲ. ಅಸಲು ಬಡ್ಡಿ ಸೇರಿಸಿ ಎರಡು ಲಕ್ಷವಾಗಿದೆ. ತೀರಿಸುವ ಪ್ರಯತ್ನ ನೀನು ಮಾಡಿಲ್ಲ’
`ನಾನೇಕೆ ಮಾಡಲಿ..? ಸಾಲ ತೆಗೆದುಕೊಂಡಿರೋನು ಪರಮೇಶ’
`ಅದಕ್ಕೇ ನಿನ್ನ ಅಕೌಂಟಿಂದ ನಮಗೆ ಬರಬೇಕಾದ ಸಾಲ ರಿಕವರ್ ಮಾಡ್ಕೊಂಡಿದ್ದೀವಿ..’
`ಅಯ್ಯೋ….ಅದು ನನ್ನ ಮಗಳ ಕಾಲೇಜ್ ಫೀಸಿಗಿಟ್ಟಿರೋದು..ಅವಳನ್ನು ಮೆಡಿಕಲ್ಗೆ ಸೇರಿಸಬೇಕೂಂತ ಪ್ರಾವಿಡೆಂಟ್ ಫಂಡಿನಿಂದ ಸಾಲ ತೆಗೆದಿರೋದು. ಅದನ್ನು ನನ್ನ ಲಿಖಿತ ಅನುಮತಿಯಿಲ್ಲದೆ ನನ್ನದೇ ಅಕೌಂಟಿಂದ ಹೇಗೆ ರಿಕವರ್ ಮಾಡ್ತೀರ..? ನಾನು ಕೋಟರ್ಿಗೆ ಹೋಗ್ತೀನಿ..!’
`ನೀನು ಬೇಕಾದ್ರೆ ಸುಡುಗಾಡಿಗೆ ಹೋಗು! ನಮ್ಮ ಹಣ ರಿಕವರ್ ಮಾಡ್ಕೊಂಡಿದ್ದೀವಿ’
ಥೇಟ್ ಸಿನಿಮಾ ಖಳನಾಯಕನ ತರಾ ನಗತೊಡಗಿದ! ನಗುತ್ತಿದ್ದಂತೆ ಅವನ ಮೈಗೆ ಬಗ್ಗನೆ ಬೆಂಕಿ ಹೊತ್ತಿಕೊಂಡಿತು! ಬೆಂಕಿಯಲ್ಲಿ ಸುಟ್ಟು ಹೊಗೆಯಾಗಿ ಪರಮೇಶನಲ್ಲಿ ಸೇರಿಕೊಂಡ! ಈವರೆಗೆ ಹಿಂದೆ ಅಡಗಿದ್ದ ಪರಮೇಶ ಈಗ ಎದುರೇ ಕಾಣಿಸಿಕೊಂಡ. ಅವನ ನಗು ಏನೂ ಕಮ್ಮಿ ಇಲ್ಲ! ವಿಕಟ ನಗೆ!
`ನೀನಿನ್ನು ಸುಡುಗಾಡಿಗೇ ಹೋಗಬೇಕು!’
ಎಂದು ಕೂಗಿ ಹೇಳಿ ಭೂಮಿ ಆಕಾಶ ಬಿರುಯುವಂತೆ..ಕಡಲ ಭೋರ್ಗರೆತವನ್ನೂ ಮೀರಿ ನಗುತ್ತ ಹಿಂದೆ ತಿರುಗಿ ಓಡತೊಡಗಿದ ಪರಮೇಶ. ಅವನು ಹೋಗುತ್ತಿದ್ಡಂತೆ ಅವನಿಗಾಗಿ ಕಡಲು ಇಬ್ಭಾಗವಾಗಿ ಎರಡಾಯಿತು. ನಡುವಿನಲ್ಲಿ ಪರಮೇಶ ಓಡಿದ. ಅವನು ಓಡುತ್ತಿದ್ದಂತೆ ಎರಡಾಗಿದ್ದ ಕಡಲಿನ ಒಡಲು ಮತ್ತೆ ಒಂದಾಗತೊಡಗಿತು!
ಯಾರೋ ಕೂಗುತ್ತಿದ್ದರು. ಪರಮೇಶನ ಧ್ವನಿಯಾಗಲೀ ಇಲ್ಲಾ ಬ್ಯಾಂಕ್ ಮ್ಯಾನೇಜರನ ಕರ್ಕಶ ಧ್ವನಿಯಾಗಿರಲಿಲ್ಲ. ಅದು ಹೆಣ್ಣು ಧ್ವನಿಯಂತೆ ಇತ್ತು. ಹೌದು ಅದು ತನ್ನ ಹೆಂಡತಿಯದು. ಹಾಗಾದರೆ ತಾನು ಪ್ರಜ್ಞಾವಸ್ಥೆಯಲ್ಲಿ ಇದ್ದೇನೆ.
ಸತ್ಯ ಕಣ್ಣು ಬಿಟ್ಟ. ಬೆಳಗಾಗಿದ್ದಂತೆ ಇತ್ತು. ಎದುರು ಡಾಕ್ಟರುಗಳ ತಂಡವೇ ಇತ್ತು. ಅವರುಗಳು ಮೆಲು ಧ್ವನಿಯಲ್ಲಿ ಮಾತಾಡಿಕೊಂಡರು. ನಸರ್್ ಒಬ್ಬಳು ಡಾಕ್ಟರ್ ಬಳಿ ಏನೋ ಹೇಳುತ್ತಿದ್ದಳು.
`ಹೇಗಿದ್ದೀರಿ..?’ ಸತ್ಯ ನಗಲು ಪ್ರಯತ್ನಿಸಿದ. ಅದೂ ಪ್ರಯಾಸವೆನಿಸಿತು. ಮುಖದ ಸ್ನಾಯುಗಳು ಸಡಿಲವಾಗದೆ, ಹಿಗ್ಗದೆ ನೋವು ಕೊಟ್ಟವು. ತನ್ನ ಮುಖದಲ್ಲಿ ನಗು ಮೂಡಿಲ್ಲ ಎನ್ನುವುದರ ಅರಿವಾಯಿತು ಸತ್ಯನಿಗೆ. ಏನು ಹೇಳೋದು..? ದೇಹದ ತುಂಬಾ ಉದ್ಭವವಾಗಿರುವ ವಿಧವಿಧದ ನೋವುಗಳಲ್ಲಿ ಯಾವ ನೋವಿನ ಬಗೆಗೆ ಹೇಳೋದು…?
`ನೀವು ಯಾವುದನ್ನೋ ತುಂಬಾ ಮನಸ್ಸಿಗೆ ಹಚ್ಕೊಂಡಿದ್ಡೀರಿ. ನೀವು ಬೆಳಸಿಕೊಳ್ಳೋ ಧೋರಣೆ ಮೇಲೆ ನಮ್ಮ ಟ್ರೀಂ್ಮೆಂಟಿನ ಫಲ….. ಐ ಥಿಂಕ್ ಯೂ ಹ್ಯಾವ್ ಡಿಸೈಡೆಡ್ ನಾಂ್ ಟು ರೆಸ್ಪಾಂಡ್’
ಸತ್ಯ ಪ್ರಯಾಸದಿಂದ ಮುಖದ ಮೇಲೆ ಒಂದಿಷ್ಟು ನಗುವನ್ನು ತೋರುವುದರಲ್ಲಿ ಸಫಲನಾಗಿದ್ದ. . ಆ ನಗುವಿನೊಳಗೇ ನೋವೂ ಹಾಡುತ್ತಿತ್ತು!
`ನೀವು ಹೀಗ್ಮಾಡಿದರೆ ನಮ್ಮ ಪ್ರಯತ್ನಕ್ಕೆ ಯಾವ ಫಲವೂ ಸಿಕ್ಕುವುದಿಲ್ಲ! ಪ್ಲೀಸ್ ಟೆಲ್ ಅಸ್ ವಾಟ್ ಈಸ್ ಬಾದರಿಂಗ್ ಯೂ’
ಸತ್ಯನಿಗೆ ಹೇಳಬೇಕೆನಿಸಿತು `ನನಗೆ ಯಾವ ಫಲದ ಅಪೇಕ್ಷೆಯೂ ಇಲ್ಲ! ಯಾವ ನಿರೀಕ್ಷೆಯೂ ಇಲ್ಲ’ ಎಂದು.
`ಇಡೀ ಜೀವನದುದ್ದ ಇವರು ಯಾರಿಗೂ ಬೈದಿಲ್ಲ, ಕೋಪ ಮಾಡಿಕೊಂಡಿಲ್ಲ! ತುಂಬಾ ಮೃದು ಸ್ವಭಾವದವರು ಇವರಿಗೆ ಮೋಸ ಮಾಡಿ ಹೋದವರೇ ಬಹಳ ಜನ. ಇವರ ಒಳ್ಳೆಯತನ ದುರುಪಯೋಗ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಇವರ ಕೈಕೆಳಗೆ ಕೆಲಸ ಮಾಡುತ್ತಿದ್ದೋನೊಬ್ಬ ಸುಮಾರು ಎರಡು ಲಕ್ಷ ಬ್ಯಾಂಕ್ ಸಾಲಕ್ಕೆ ಶೂರಿಟಿ ಹಾಕಿಸಿಕೊಂಡು ಓಡಿ ಹೋದ. ಇವರು ಮಗಳ ಮೆಡಿಕಲ್ ಅಡ್ಮಿಷನ್ನಿಗೆ ಇಟ್ಟಿದ್ದ ಹಣಾನೆಲ್ಲಾ ಬ್ಯಾಂಕ್ನವರು ರಿಕವರ್ ಮಾಡ್ಕೊಂಡುಬಿಟ್ಟರು. ಆಮೇಲೂ ಕೆಲವು ತಿಂಗಳು ಧೈರ್ಯವಾಗೇ ಇದ್ದರು..ಈಗ ಒಂದು ಹದಿನೈದು ದಿನಗಳ ಹಿಂದೆ ಹಿಂದು ದಿನ ಇದ್ದಕ್ಕಿದ್ದಂತೆ ಕುಸಿದು ಬಿದ್ದರು. ಈ ಹದಿನೈದೇ ದಿನಗಳಲ್ಲಿ ಈ ಮಟ್ಟಕ್ಕೆ ಬಂದಿದ್ದಾರೆ..’ ಸತ್ಯನ ಹೆಂಡತಿ ಡಾಕ್ಟರುಗಳಿಗೆ ಹೇಳುತ್ತಿದ್ದಳು.
ಸಭೆ ಸಮಾರಂಭಗಳಲ್ಲಿ ಕರೆಂಟು ಕೈಕೊಟ್ಟಾಗ ಮೈಕು ಸ್ಥಬ್ದವಾದಂತೆ ಸತ್ಯನಿಗೆ ಅವರ ಮಾತುಗಳು ಇದ್ದಕ್ಕಿದ್ದಂತೆ ಕೇಳದಂತಾದವು. ಒಳ್ಳೆಯದೇ ಆಯಿತು..! ಆ ಮಾತುಗಳಲ್ಲಿನ ಕರ್ಕಶತೆಯಿಂದ ಅವನ ಕಿವಿಗೆ ತುಂಬಾ ನೋವಾಗುತ್ತಿತ್ತು.
ಯಾರೋ ಅವನ ಕಾಲು ಹಿಡಿದು ಎಳೆಯತೊಡಗಿದರು. ಚಿಕ್ಕಂದಿನಲ್ಲಿ ಹೊಳೆಯಲ್ಲಿ ಈಜುತ್ತಿದ್ದಾಗ ಪಕ್ಕದಲ್ಲಿದ್ದವನು ಆಟಕ್ಕೆ ಕಾಲು ಹಿಡಿದು ನೀರಿನೊಳಕ್ಕೆ ಎಳೆದಂತೆ! ಅದು ಭ್ರಮೆ ಎನಿಸಲಿಲ್ಲ! ನಿಜಕ್ಕೂ ತಾನು ನೀರಿನೊಳಗೆ ಮುಳುಗುತ್ತಿರುವೆ ಎನಿಸಿತು ಸತ್ಯನಿಗೆ. ಮುಳುಗದೆ ಮೇಲೇರುವ ಪ್ರಯತ್ನ ಮಾಡಿದ. ಆದರೆ ಸಾಧ್ಯವಾಗಲಿಲ್ಲ! ಯಾರೋ ಬಲವಾಗಿರುವವರು ಅವನನ್ನು ಒಳಗೆಳೆಯುತ್ತಿದ್ದರು. ಯಾರದು? ಹೀಗೇಕೆ ತನ್ನನ್ನು ಎಳೆಯುತ್ತಿರುವರು ? ಸತ್ಯ ತಲೆಯನ್ನು ಎಳೆತದ ಬಲವಿರುವ ಕಡೆಗೆ ತಿರುಗಿಸಿದ. ಅಲ್ಲಿ ಒಂದಲ್ಲ ನೂರಾರು ಕೈಗಳಿದ್ದವು! ತನ್ನ ಮೈಯನ್ನೂ ಬಿಟ್ಟು ಇನ್ನೂ ಹಲವಾರು ಕೈಗಳು ತನಗಾಗಿ ತಡಕುತ್ತಿದ್ದವು! ವಿಚಿತ್ರವೆಂದರೆ ಆ ಕೈಗಳಿಗೆ ಹೊಂದಿಕೊಂಡಂತೆ ದೇಹಗಳೇ ಇರಲಿಲ್ಲ! ಅವೆಲ್ಲವೂ ಬರಿಯ ಕೈಗಳೇ…ಸ್ವತಂತ್ರವಾದ ಕೈಗಳು! ಇದು ಹೇಗೆ ಸಾಧ್ಯ? ಈ ಕೈಗಳಿಗೆ ದೇಹವೇ ಇಲ್ಲದೆ ಅಸ್ತಿತ್ವ ಹೇಗೆ ? ಈ ಕೈಗಳ ತುದಿಯಲ್ಲೆಲ್ಲೋ ದೇಹ ಇರಲೇಬೇಕು!
`ನೋಡಿ ಡಾಕ್ಟರ್…! ಅವರ ಮಾತುಗಳನ್ನ ಕೇಳಿ..’
ಯಾರೋ ನೀರಿನ ಮೇಲೆ ಮಾತಾಡುತ್ತಿದ್ದರು. ಸತ್ಯನಿಗೆ ಅದರ ಬಗ್ಗೆ ಚಿಂತೆ ಇರಲಿಲ್ಲ! ಮುಖ್ಯ ಅವನಿಗೆ ಕೈಗಳ ಒಡೆಯರನ್ನು ನೋಡಬೇಕಾಗಿತ್ತು!
ಇದ್ದಕ್ಕಿದ್ದಂತೆ ಸತ್ಯ ಒಂದು ಕೈಯನ್ನು ಹಿಡಿದುಬಿಟ್ಟ; ಅದು ತನ್ನನ್ನು ಸೆಳೆಯುವುದನ್ನು ತಡೆದು ತಾನೇ ಅದನ್ನು ಎಳೆದ. ಕೈಯ ಜೊತೆಯಲ್ಲಿ ತನಗೆ ತುಂಬಾ ಪರಿಚಿತವಾದ ಮುಖವನ್ನು ಹೊತ್ತ ದೇಹ ಬಂದಿತು. ಎಲಾ..ಇದು..ತನ್ನ ಬಾಸ್ ಅಲ್ಲವೆ! ಆ ಗುರುತಿನ ಜೊತೆಗೇ ಅವನ ದೇಹದಲ್ಲಿನ ಬಲವೆಲ್ಲಾ ಸೋರಿಹೋಯಿತು. ಬಾಸಿನದೇ ಮೇಲುಗೈ! ತನ್ನನ್ನು ಆಳಕ್ಕೆ ..ತುಂಬಾ ಆಳಕ್ಕೆ ಎಳೆದೊಯ್ದರು. ಆಳ…ತೀರಾ ಆಳ..ಬಹುಶಃ ಅದು ಸಮುದ್ರದ ಗರ್ಭವೇ ಇರಬಹುದು.
ಅಲ್ಲೊಂದು ಪುಟ್ಟದಾದ, ಚೆನ್ನಾಗಿ ಅಲಂಕರಿಸಿದ ಸಭಾಂಗಣ!
ಇದಂತೂ ತೀರಾ ವಿಚಿತ್ರವೇ! ಕಡಲಿನೊಳಗೆ ಸಭಾಂಗಣವೆ?
ದುಂಡು ಮೇಜಿನ ಒಂದು ತುದಿಯಲ್ಲಿ ತಾನು ಕುಳಿತಿದ್ದೆ. ಅವರೆಲ್ಲಾ ಆಚೆ ಬದಿಯಲ್ಲಿ ಕುಳಿತಿದ್ದರು. ಅವರು ಬಹಳ ಜನರಿದ್ದರು-ಎಲ್ಲಾ ಹಿರಿಯ ಹುದ್ದೆಯವರು.
`ನಿಮ್ಮ ಡಿಪಾಂ್ಮರ್ೆಂಟಿನಲ್ಲಿ ಕೆಲಸ ಮಾಡುತ್ತಿರುವ ಪರಮೇಶ ಬಹಳ ತಿಂಗಳುಗಳಿಂದ ಕಾಖರ್ಾನೆಯ ಒಳಗೇ ಲೇವಾದೇವಿ, ಚೀಟಿ ವ್ಯವ್ಯಹಾರ ಮುಂತಾದುವೆಲ್ಲಾ ಮಾಡ್ತಿದ್ದರೂ ಅದನ್ನು ನೀವು ರಿಪೋಟರ್್ ಮಾಡಿಲ್ಲ. ನಿಮ್ಮ ಮೇಲೆ ಡಿಸಿಪ್ಲಿನ್ ಆಕ್ಷನ್ ಯಾಕೆ ತಗೋಬಾರದು?’
ದೊಡ್ಡ ಸುತ್ತಿಗೆಯಂತ ಮಾತುಗಳಿಂದ ಬಡಿದರು ಬಾಸು.
`ಪರಮೇಶನ ಥರಾ ಕನಿಷ್ಟ ಹತ್ತು ಜನರನ್ನು ನಾನು ತೋರಿಸಬಲ್ಲೆ. ಅವರ ಬಗ್ಗೆ, ಡಿಪಾಂ್ಮರ್ೆಂಂ್ ಮುಖ್ಯಸ್ಥರು ಯಾರಾದರೂ ರಿಪೋಟರ್್ ಮಾಡಿದ್ದಾರಾ..?’
ಸತ್ಯನಿಗೆ ರೋಸಿ ಹೋಗಿತ್ತು. ಜೀವನದಲ್ಲಿ ಮೊದಲ ಬಾರಿಗೆ ಮೇಲಧಿಕಾರಿಯೊಬ್ಬರನ್ನು ಮರುಪ್ರಶ್ನೆ ಮಾಡಿದ್ದ. ಇವರೆಂತಾ ಜನ..? ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆಯೇ ?
`ಪ್ರಶ್ನೆ ಕೇಳಲು ನಿನ್ನ ಇಲ್ಲಿ ಕರೆಸಿಲ್ಲ…! ಉತ್ತರ ಹೇಳೋದಕ್ಕಷ್ಟೆ ಕರೆಸಿರೋದು’
ಈ ಮಾತು ಮುಗಿಯುವುದರಲ್ಲಿಯೇ ಎಲ್ಲರೂ ಎದ್ದು ಸತ್ಯನ ಕಡೆಗೆ ಧಾವಿಸಿದರು. ಎಲ್ಲರ ಕೈಯಲ್ಲೂ ದೊಡ್ಡ ಇರಿದು ಸಾಯಿಸುವಂತ ಚಾಕುಗಳು. ಕಣ್ಣುಗಳೋ… ಕೆಂಡದ ಉಂಡೆಗಳು! ಬಾಯಿಯಲ್ಲಿ ಕೋರೆ ಹಲ್ಲು! ಥೇಂ್ ರಾಕ್ಷಸರೇ..ಅವರು! ಸತ್ಯನಿಗೆ ಓಡಬೇಕೆನ್ನಿಸಿದರೂ ಒಂದು ಹೆಜ್ಜೆಯನ್ನೂ ಮುಂದಿಡಲಾಗಲಿಲ್ಲ! ದೇಹವನ್ನು ಕುಳಿತಿದ್ದ ಕುಚರ್ಿಗೆ ಲಾಕ್ ಮಾಡಿದಂತೆ ಇತ್ತು!
ಎಲ್ಲರೂ ಸುತ್ತ ಸೇರಿ ಮನಸೋ ಇಚ್ಚೆ ಸಿಕ್ಕಿದ ಕಡೆ ಸತ್ಯನನ್ನು ಇರಿದರು! ರಕ್ತ ಚಿಲ್ಲನೆ ಚಿಲುಮೆಯಂತೆ ಚಿಮ್ಮುತ್ತಿತ್ತು! ಅವರಿಗೆ ಆಷ್ಟಕ್ಕೆ ತೃಪ್ತಿಯಾದಂತಿರಲಿಲ್ಲ..ಚುಚ್ಚುತ್ತಲೇ ಇದ್ದರು! ಕೊನೆಗೆ ಸತ್ಯ ಚೀರಿದ!
`ನಿಮಗೆ ಕರುಣೆ ಇಲ್ಲವೆ? ನಾನಾಗಲೇ ಸತ್ತಿದ್ದೇನೆ…’ಮರುಕ್ಷಣವೇ ಅವನು ಬೆಚ್ಚಿದ-ತನ್ನ ಬಾಯಿಂದ ಮಾತುಗಳಿಗೆ!
ಎಲಾ..ಇದೇನು ತನ್ನ ಬಾಯಿಂದ ಇಂತಾ ಮಾತು ? ಸತ್ತಿರುವೆನೆಂದು ತಾನೇ ಡಿಕ್ಲೇರ್ ಮಾಡಿಕೊಳ್ಳುವುದೆ ? ತಾನು ಸತ್ತಿರುವೆನೆ ಇಲ್ಲ ಬದುಕಿರುವೆನೋ..?’
`ಆರ್ ಯೂ ಗೆಟಿಂಗ್ ಹಿಸ್ ಪಲ್ಸ್..?’
ಯಾರೋ ಕೇಳಿದರು ಎಲ್ಲಿಂದಲೋ..!
ಈಗ ಸತ್ಯ ತೇಲುತ್ತಿದ್ದ. ಅವನ ಶರೀರ ಹಗುರವಾಗಿತ್ತು. ನೀರಿನಲ್ಲಿ ತೇಲುವಂತೆ ತೇಲಿತು. ಸಮುದ್ರದ ಆಳದಿಂದ ಮೇಲೆ ಬಂದು ಗಾಳಿ ಮತ್ತು ಬೆಳಕಿಗೆ ಒಡ್ಡಿಕೊಂಡಂತೆ ಆಗಿತ್ತು ಸತ್ಯನಿಗೆ.
`ಐ ಗಾಟ್ ಇಟ್..ತುಂಬಾ ಫೀಬಲ್..ಬಟ್..ಐ ಥಿಂಕ್ ಹಿ ವಿಲ್ ಸವರ್ೆವ್!’
ಸತ್ಯ ಕಣ್ತೆರೆದ. ಕಣ್ಣು ಕೋರೈಸುವಂತ ಬೆಳಕು. ಬದುಕಿರುವ ದಿನಗಳಲ್ಲಿ ಇಂಥ ಪ್ರಕಾಶಮಾನವಾದ ಬೆಳಕನ್ನು ಕಂಡಿರಲಿಲ್ಲ. ಏನಿಂಥಾ ಬೆಳಕು? ಯಾಕಿಂಥಾ ಬೆಳಕು ? ಇದರ ಅರ್ಥವೇನು? ತಾನೆಲ್ಲಿರುವೆ..? ಸತ್ತಿರುವೆನೆ..? ತನಗೆ ಶರೀರ ಇರುವ ಭಾವನೆಯೇ ಇಲ್ಲ! ಶರೀರದ ಭಾರವೂ ಇಲ್ಲ. ಎದುರಿಗಿನ ಪ್ರಕಾಶಮಾನವಾದ ಆದರೆ ಪ್ರಶಾಂತವಾದ ಆ ಬೆಳಕನ್ನು ನೋಡುವುದು ಕಷ್ಟವಾಯಿತು. ಕಣ್ಣುಗಳು ತಾವಾಗಿಯೇ ಮುಚ್ಚಿಕೊಂಡವು!
`ಪಲ್ಸ್ ಬೆಟರ್! ಹಿ ಶುಡ್ ಸವರ್ೆವ್’
ಯಾರ ಮಾತುಗಳಿವು..? ಇವುಗಳ ಅರ್ಥವೇನು. ಯಾರೋ ರೋಗಿಯನ್ನು ಕುರಿತು ಮಾತಾಡುತ್ತಿರುವಂತಿದೆ. ಮಾತಾಡುತ್ತಿರುವವರು ಯಾರು ? ಸತ್ಯನಿಗೆ ಇವೆಲ್ಲಾ ಅರ್ಥವಾಗುವುದು ಕಷ್ಟವಾಯಿತು. ಆದರೂ ಪ್ರಯತ್ನಿಸಿದ. ಮೊದಲಿಗೆ ಅವನಿಗೆ ತಾನಿರುವ ಜಾಗ ತಿಳಿದುಕೊಳ್ಳಬೇಕಾಗಿತ್ತು. ಜೊತೆಗೆ ತಾನು ಬದುಕಿರುವೇನೋ ಇಲ್ಲಾ ಸತ್ತಿರುವೆನೋ ಎಂದು ತಿಳಿಯುವುದು ಕೂಡ ಅವಶ್ಯಕ ಎನ್ನಿಸಿತು.
ಮತ್ತೆ ಸಮುದ್ರ! ರಾಚುವ ಅಲೆಗಳು. ಹಾಯಾಗಿ ಬೀಚಿನಲ್ಲಿ ಮಲಗುವಂತೆ ಇರಲಿಲ್ಲ. ಎದ್ದು ಓಡಿ ಹೋಗುವಂತೆಯೂ ಇರಲಿಲ್ಲ. ಯಾರ ಸಹಾಯವನ್ನಾದರೂ ಕೇಳೋಣವೆಂದರೆ ಬೀಚು ನಿರ್ಜನವಾಗಿತ್ತು! ಅದು ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಯಾವುದೋ ಂಂದು ಸಮಯ ಎಂದು ಸತ್ಯನಿಗನ್ನಿಸಿತು.
ಭೋರ್ಗರೆಯುವ ಅಲೆಯ ಮೇಲೆ ಯಾರೋ ಸಫರ್ಿಂಗ್ ಮಾಡುತ್ತಾ ಬರುತ್ತಿರುವುದು ಕಾಣಿಸಿತು. ಅದು ಹೆಣ್ಣಾಗಿತ್ತು. ಅದು ತಾನು ಈವರೆಗೆ ಕಂಡ ಯಾವ ಹೆಣ್ಣೂ ಅಲ್ಲ ಎನ್ನಿಸಿತು ಸತ್ಯನಿಗೆ. ಅದೂ ಸಮುದ್ರದ ಎತ್ತರದ ಅಲೆಯ ಬೆನ್ನೇರಿರುವ ಹೆಣ್ಣು..ಯಾರಿದ್ದೀತು? ಆಕೆ ಬಹಳ ದೂರದಲ್ಲಿರುವುದು ಅವನಿಗೇನೂ ತೊಂದರೆಯೆನಿಸಲಿಲ್ಲ! ಏಕೆಂದರೆ ಅಷ್ಟು ದೂರದಲ್ಲ್ನಿ ಕೂಡ ಸ್ಪಷ್ಟವಾಗಿ ನೋಡಲು ಅವನಿಗೆ ಸಾಧ್ಯವಾಗಿತ್ತು. ಆಕೆಯನ್ನು ಅವನು ಈವರೆಗೆ ಕಂಡಿರಲಿಲ್ಲ. ಆಕೆ ಯಾರು ಎಂಬ ಕಲ್ಪನೆ ಕೂಡ ಅವನಿಗೆ ಬರಲಿಲ್ಲ. ಆದರೆ ಆಕೆ ತನ್ನನ್ನೇ ಅರಸುತ್ತಿದ್ದಾಳೆ ಎಂಬ ಭಾವನೆ ಖಚಿತವಾಗಿತ್ತು.
`ನೀವು ನಮ್ಮ ಭಾಗದ ದೇವರು ಅನ್ಕೋತೀವಿ..ನಮ್ಮ ಯಜಮಾನರನ್ನ ಉಳಿಸಿ..ಏನೋನೋ ಮಾಡ್ತೀನೀಂತ ಹಣ ಎಲ್ಲಾ ಕಳೆದ, ಮೈಮೇಲಿದ್ದ ಂಡವೆ ಕಳೆದ..ಮಾಂಗಲ್ಯ ಂಂದೇ ಉಳಿದಿರೋದು..ಅವನ ಕೆಲಸ ಉಳಿಸಿಕೊಡಿ’
ಓಹೋ ಈಕೆ ಪರಮೇಶನ ಪತ್ನಿಯಲ್ಲವೆ ? ಆಕೆ ಅಲೆಯನ್ನು ಏರಿ ಬರುತ್ತಿದ್ದಳು. ಮುಖದಲ್ಲಿ ದೈನ್ಯತೆಯಿತ್ತು. ಅವಳ ಮಾತನ್ನು ಬೀಸುವ ಗಾಳಿ ಹೊತ್ತು ತಂದಿತ್ತು.
`ಅವನಿಗೆ ತೊಂದರೆಯಾಗಬಾರದು ಅಂತ ಇಷ್ಟು ದಿವಸ ಸುಮ್ಮನಿದ್ದ್ದೆ. ಈಗ ನನ್ನ ಬುಡವೇ ಅಲ್ಲಾಡ್ತಿದೆ! ಈಗ ನನ್ನ ಪ್ರಾಮಾಣಿಕತೇನೇ ಸಂಶಯದಲ್ಲಿದೆ. ಈಚಲ ಮರದ ಕೆಳಗೆ ಕುಳಿತು ಮಜ್ಜಿಗೆ ಸೇವಿಸಿದ್ದೇನೆ. ನಂಬುವವರು ಯಾರು ?
ಅಚಲನಾದ ಸತ್ಯ! ಇಲ್ಲದಿದ್ದರೆ ಇದಕ್ಕೆ ಕೊನೆ ಎಲ್ಲಿ..? ಆಕೆ ಅಲೆಯ ಮೇಲಿಂದ ಜಾರಿ ಸಮುದ್ರದೊಳಗೆ ಕರಗಿದಳು. ಇದು ತನಗೆ ಪಾಠವೆ? ದೃಢತೆ, ಅಚಲತೆ, ವಿಶ್ವಾಸ ತನ್ನನ್ನು ದಡ ಮುಟ್ಟಿಸಬಹುದೆ?
ಂಮ್ಮೆಲೇ ಉಸಿರು ಸಿಕ್ಕಿಕೊಂಡಿತು. ಪರಮೇಶ ತನಗೆ ಮೋಸ ಮಾಡಿದ್ದರೂ ತಾನು ಅವನಿಗೆ ತೊಂದರೆ ಮಾಡಿರಲಿಲ್ಲ…ಅವನನ್ನು ಬೈದಿರಲಿಲ್ಲ. ತಮ್ಮನಿಗೆ ಹೇಳಿದಂತೆ ಬುದ್ಧಿ ಹೇಳಿದ್ದೆ. ಆದರೇನು ಪ್ರಯೋಜನ..? ಬೇರೆ ಯಾರಾದರೂ ಆಗಿದ್ಡರೆ..!
ಂಮ್ಮೆಲೇ ಕಡಲು ಶಾಂತವಾಯಿತು. ಇಷ್ಟು ಹೊತ್ತು ತನ್ನ ರೌದ್ರತೆಯನ್ನು ಮೆರೆದಿದ್ದು ಈಗ ಏಕಾಏಕಿ ಶಾಂತವಾಗಿಬಿಟ್ಟಿತು. ಸುಖವೆನಿಸಿತು, ಹಾಯೆನಿಸಿತು. ಎಂತ ಏಕಾಂತ!
ಯಾರೋ ತನ್ನ ಕಾಲು ಹಿಡಿದಿದ್ದರು. ತಲೆಯನ್ನು ಪಾದಕ್ಕೆ ಂತ್ತುತ್ತಿದ್ದರು! ಯಾರಪ್ಪ ಇದು? ಅದೂ ತನಗೆ..? ಇದೆಂತಾ ತಮಾಷೆ! ತಾನೇನು ಸ್ವಾಮಿಯೇ..ಇಲ್ಲ ಸಮಾಜೋದ್ಧಾರಕನೆ ?’
`ನಿಮ್ಮಿಂದ ನಾನು ಉದ್ಧಾರವಾದೆ…ನಿಮ್ಮ ಮಾರ್ಗದರ್ಶನದಿಂದ ಇವತ್ತು ಮನುಷ್ಯನಾದೆ..ಹೆಣ್ಣು ಬಿಂ್ಟೆ, ಹೆಂಡ ಬಿಂ್ಟೆ, ಜನರಿಗೆ ಅನ್ಯಾಯ ಮಾಡೋದು ಬಿಂ್ಟೆ..ಇಷ್ಟು ವರ್ಷ ನಾನು ಎಷ್ಟು ಹಿಂಸೆ ಮಾಡಿದರೂ ನನ್ನ ಕ್ಷಮಿಸಿದ, ಪ್ರೀತಿಸಿದ ಸಮಾಜಕ್ಕೆ, ದೇಶಕ್ಕೆ ನನ್ನ ಜೀವನ ಮುಡಿಪು. ನೀವಿಲ್ಲದೆ ಇದ್ದರೆ..ನಾನು ಸಮಾಜಕಂಟಕನೇ ಆಗಿ ಉಳೀತಿದ್ದೆ’
`ನಮಸ್ಕಾರ ದೈವಕ್ಕಿರಲಿ..ನಾನು ಕೇವಲ ಮಾನವ. ಹಾಡಿದರೆ ದೇವರನ್ನು ಹಾಡು, ಬೇಡಿದರೆ ದೇವರನ್ನು ಬೇಡು..ನಿನಗಾಗಿ ಅಲ್ಲ ಸಮಾಜಕ್ಕಾಗಿ’
ಅವನ ನೆನಪು ಈಗ ಸತ್ಯನಿಗೆ ಬಂತು! ಅವನು ತನ್ನ ಕಾಖರ್ಾನೆಯಲ್ಲಿಯೇ ಕೆಲಸ ಮಾಡುತ್ತಿರುವವ. ಮಹಾನ್ ಕುಡುಕ, ಜೂಜುಗಾರ, ಮೋಸಗಾರ! ಅವನಿಗೆ ಸಮಯ ಸಿಕ್ಕಾಗ ಂಂದಿಷ್ಟು ಬುದ್ಧಿ ಹೇಳಿದ್ದೆ, ಬೈದಿದ್ದೆ..ತಿದ್ದಿಕೊಂಡಿದ್ದ. ಆಬ್ಬಾ ಅವನು ಇವನೇ ಎನ್ನುವಂತಾಗಿದ್ದ.
ಅವನು ಎದ್ದು ರಾಜರ ದಭರ್ಾರಿನಲ್ಲಿ ನಡೆದುಕೊಳ್ಳುವಂತೆ ಮುಖ ಮುಂದೆ ಮಾಡಿಯೇ ಹಿಂದೆಹಿಂದೆ ಸರಿಯುತ್ತಾ ಹೋಗಿ ಕೊನೆಗೆ ಕಡಲಿನ ನೀರಿನಲ್ಲಿ ಂಂದಾಗಿದ್ದ. ಹಾಯೆನಿಸಿತು. ಕಡಲಿನ ಈ ಶಾಂತ ಸ್ವರೂಪ ಅವನಿಗೆ ಬಹಳ ಇಷ್ಟವಾಯಿತು. ಈ ಕಾರಣಕ್ಕಾಗಿಯೇ ಅವನು ಕಡಲನ್ನು ಪ್ರೀತಿಸುತ್ತಿದ್ಡುದು. ತಾನೂ ಹಾಗೆ ಕಡಲಿನ ಹಾಗೆಯೇ ಇರಲು ಬಯಸಿದ್ದು. ಅದರಲ್ಲಿಯೂ ತೀರವನ್ನು ಬಿಟ್ಟು ಮಧ್ಯ ಭಾಗಕ್ಕೆ ಹೋದರೆ ಸಿಗುವ ಪ್ರಶಾಂತ ಸಾಗರವಾಗಬೇಕೆಂಬುದೇ ಅವನಿಚ್ಛೆಯಾಗಿತ್ತು! ಅದಕ್ಕಾಗಿ ಬಹಳ ಪ್ರಯತ್ನಪಟ್ಟಿದ್ದ.
`ಲೈಫ್ ಸೇವಿಂಗ್ ಕೊಡಬೇಕು…ಹಿ ಈಸ್ ಸ್ಲಿಪ್ಪಿಂಗ್’
ಮೆಲು ದನಿಯಲ್ಲಿ ನಾಲ್ಕಾರು ಜನ ಮಾತಾಡುತ್ತಿದ್ದರು. ಅವರೇಕೆ ತನಗೆ ಕಾಣುತ್ತಿಲ್ಲ. ಅವರ ಮಾತಿನ ಅರ್ಥವಾದರೂ ಏನು..?
ಕಡಲಿನ ಪ್ರಶಾಂತತೆಯಿರುವುದು ಅದರ ಮಧ್ಯದಲ್ಲಷ್ಟೆ? ಆದರೆ ದಂಡೆ..? ಬಿರುಗಾಳಿ ಮತ್ತೊಂದು ಅಲೆಯೆಬ್ಬಿಸಿತ್ತು. ಈಗ ಅಲೆಯನೇರಿ ಬಂದದ್ದವರು ಅವನ ಸ್ನೇಹಿತರು
`ನಿನ್ನ ಂಳ್ಳೆಯತನ ನಿನ್ನ ಮುಳುಗಿಸಿತು. ಆ ಪರಮೇಶನನ್ನು ಈವರೆಗೆ ಂಂದು ಮಾತು ಬೈದಿಲ್ಲ! ನೀನು ಅವನ ಬಾಸು. ಅವನಿಗೆ ಶಿಕ್ಷೆ ಕೊಡು! ಬೇರೆ ಯಾರಾದರೂ ಆಗಿದ್ದರೆ ಅವನನ್ನು ಕೊಚ್ಚಿ ಎಸೆಯುತ್ತಿದ್ದರು. ಅವನು ನಿನ್ನ ಹಣ ನುಂಗಿದ್ದು ನಿನ್ನ ಪ್ರಮೋಶನ್ನಿಗೆ ಎರವಾಯಿತು! ನಿನ್ನ ಮಗಳ ಮೆಡಿಕಲ್ ಸೀಟು ತಪ್ಪಿತು! ಇಷ್ಟಾದರೂ ನೀನು ತಣ್ಣಗೆ ಹೇಗಿದ್ದೀಯೋ ಮಾರಾಯಾ..? ನಿನಗೆ ಕೋಪವೇ ಬರೋದಿಲ್ಲವೆ ? ತತ್ವ ಭೋಧನೆಗೆ ಜೀವನಕ್ಕಲ್ಲ…ನಿನ್ನ ಮಕ್ಕಳನ್ನ ಕಂಡರೆ ನಿನಗೆ ಏನೂ ಅನ್ನಿಸೋದಿಲ್ಲವಾ..?’ ಂಬ್ಬ ಹೇಳಿದ.
`ಒಮ್ಮೆ ಬೈದುಬಿಡೋ..! ನಿನಗೆ ಅನ್ಯಾಯ ಮಾಡಿದವರನ್ನೆಲ್ಲಾ ವಾಚಮಗೋಚರವಾಗಿ ಬೈದುಬಿಡು! ಶಾಪ ಹಾಕಿಬಿಡು. ಹೀಗೆ ಮಾತ್ರ ಇರಬೇಡ..ಅದು ಬೆಂಕಿಯ ಹಾಗೆ! ವಿಷ ನುಂಗಿದ್ದಕ್ಕೆ ಶಿವನ ಗತಿ ಏನಾಯ್ತು ಗೊತ್ತಲ್ಲ. ಪಾರ್ವತಿ ಇದ್ದದ್ದಕ್ಕೇನೋ ಸರಿ ಹೋಯಿತು. ನೀನು ವಿಷಕಂಠ ಆಗೋದಿಲ್ಲ! ಆಗೋದಕ್ಕೆ ಸಾಧ್ಯವೂ ಇಲ್ಲ. ವಿಷ ನಿನ್ನ ದಹಿಸಿಬಿಡುತ್ತೆ..’ ಇನ್ನೊಬ್ಬನ ದನಿ.
ಸತ್ಯನಿಗೆ ಅಚ್ಚರಿಯಾಯಿತು ಅಷ್ಟು ಹತ್ತಿರದ ಸ್ನೇಹಿತರ ಹೆಸರುಗಳೆಲ್ಲಾ ಮರೆತೇ ಹೋಗಿದ್ದವು! ಅವರ ಮುಖ ಪರಿಚಯ…ಆದರೆ ಹೆಸರುಗಳೇ ಇಲ್ಲ. ಹೆಸರಾದರೂ ಏಕೆ ಬೇಕು ? ಅವರು ತನ್ನ ಸ್ನೇಹಿತರು ಅಷ್ಟು ಸಾಕಲ್ಲವೆ ?
`ನನಗೆ ಗೊತ್ತು ಸತ್ಯ! ನೀನೊಂದು ಅಗ್ನಿಪರ್ವತ! ನಿದ್ರಿಸುತ್ತಿರುವ ಅಗ್ನಿಪರ್ವತ…ಅದು ಎಚ್ಚತ್ತರೆ ಲಾವಾ ಚಿಮ್ಮುತ್ತಡದ. ಜೀವ ಕೋಟಿ, ಸಸ್ಯಕೋಟಿ ನಾಶವಾಗುತ್ತೆ. ಎಷ್ಟು ಕಾಲ ನಿದ್ರೆಯಲ್ಲಿರುತ್ತೀಯಾ..? ನಿನ್ನ ಅರೋಗ್ಯಕ್ಕೂ ಂಳ್ಳೇದು ಒಂದು ಸಲ ಉರಿದುಬಿಡು..ಲಾವಾ ಹರಿಸಿ ಬಿಡು’
ದಡವನ್ನಪ್ಪಳಿಸಿದ ಅಲೆ ಹಿಂದೆ ಸರಿಯಿತು. ಅದು ಸತ್ಯನನ್ನು ಮುಟ್ಟಲಿಲ್ಲ. ಬಂದಂತೆ ಹಿಂದೆ ಸರಿಯಿತು. ಬಂದ ಸ್ನೇಹಿತರೆಲ್ಲ ಕಡಲಿನಲ್ಲಿ ಕರಗಿ ಅದರ ಭಾಗವಾಗಿ ಹೋಗಿದ್ದರು.
ಹೌದೆ..ತಾನು ಉರಿಯಬೇಕೆ? ದಹಿಸಬೇಕೆ..? ತನ್ನ ಮುಟ್ಟಿದವರನ್ನೆಲ್ಲಾ ಸುಟ್ಟು ಭಸ್ಮ ಮಾಡಬೇಕೆ? ಜನ ಉರಿಯಾದಾಗ ತಾನು ವರ್ಷವಾಗುತ್ತಿದ್ದೆ. ಇಡೀ ಜೀವನ ಹಾಗೇ ಬದುಕಿದ್ದೆ. ಮುಟ್ಟಿದರೆ ಮುನಿಯಂತವರನ್ನು ಜನರಲ್ಲಿ ಬೆರೆಯುವಂತೆ ಮಾಡಿದ್ದೆ. ಅದು ತನ್ನ ಕರ್ತವ್ಯವೆಂದು ಬಗೆದಿದ್ದೆ. ಅದರಲ್ಲಿ ತನಗೆ ಹಾನಿಯೂ ಅಗಿದೆ..ಬೆಂಕಿ ಕರಗಿಸಲು ಹೋದ ನೀರಿಗೆ ಬೆಂಕಿ ತಾಗದಿರದೆ ? ಅದು ಕೆಲ ಸಮಯವಾದರೂ ಕುದಿಯದಿರದೆ..? ಕೊಳೆತ ವಸ್ತುವನ್ನು ಎತ್ತಿ ಜಾಗವನ್ನು ಸ್ವಚ್ಛ ಮಾಡುವಲ್ಲಿ ಕೈಯೂ ಕೊಳೆಯಾಗಿತ್ತು! ಎಷ್ಟೋ ಸಲ ಮೈ ಕೂಡ ಕೊಳೆಯಾಗಿತ್ತು! ಂಳ್ಳೆಯ ಹೆಸರು ಕೆಟ್ಟ ಹೆಸರು ಎರಡೂ ಬಂದಿದ್ದವು. ಹೆಸರಿಗಾಗಿ ತಾನೆಂದೂ ಯಾವ ಕೆಲಸವನ್ನೂ ಮಾಡಿರಲಿಲ್ಲ.
ಎಲ್ಲಿಂದಲೋ ಗುನುಗುತ್ತಿತ್ತು ಹಾಡೊಂದು..`ಹುಲ್ಲಾಗು ಬೆಟ್ಟದಡಿ…ಮನೆಗೆ ಮಲ್ಲಿಗೆಯಾಗು’
`ನಾವೇನು ಮಾಡಬಹುದಿತ್ತೋ ಅದನ್ನೆಲ್ಲ್ನಾ ಮಾಡಿಯಾಗಿದೆ..ಇನ್ನು ಈತನ ಅದೃಷ್ಟ ಅಷ್ಟೆ!’
ಯಾರೋ ನುಡಿದದ್ದು ಸ್ಪಷ್ಟವಾಗಿ ಕೇಳಿಸಿತು. ಆದರೆ ಯಾರದು ? ಕಡಲ ದಂಡೆ ನಿರ್ಜನವಾಗಿತ್ತು. ತಾನಲ್ಲಿ ಬಹಳ ಕಾಲದಿಂದ ಇರುವೆ..ಏರಿಳಿಯುವ ಅಲೆಗಳನ್ನು ನೋಡುತ್ತಾ..ಂಮ್ಮೊಮ್ಮೆ ಇದ್ದಕ್ಕಿದ್ದಂತೆ ರೌದ್ರವಾಗಿ, ಮಗದೊಮ್ಮೆ ಶಾಂತವಾಗುವ ಕಡಲು ಎದುರಿಗಿದೆ. ಇಲ್ಲಿ ಮಾತನಾಡುತ್ತಿರುವವರು ಯಾರು ? ಹಾಡುತ್ತಿರುವವರು ಯಾರು?
`ಗಾಳಿಯು ನಿನ್ನದೆ.. ದೀಪವು ನಿನ್ನದೆ..ಹಡಗೂ ನಿನ್ನದೆ ಕಡಲೂ ನಿನ್ನದೆ..’
ಹಾಡಿನೊಂದಿಗೇ ಯಾರೋ ಬಿಕ್ಕಿಬಿಕ್ಕಿ ಅಳುವುದು ಕೇಳಿಸಿತು. ಂಬ್ಬರ ಜೊತೆಗೆ ಇನ್ನೊಬ್ಬರು, ಮತ್ತೊಬ್ಬರು ಅಳುವಿನಲ್ಲಿ ಸೇರುತ್ತಿದ್ದರು.
`ಸವರ್ೆ ಜನಾಃ ಸುಖಿನೋಭವಂತು..ಸಮಸ್ತ ಸನ್ಮಂಗಳಾನಿಭವಂತು’
ನೂರಾರು ಜನರು ಕಡಲ ನೀರಿನ ಮೇಲೆ ಕುಳಿತು ಧ್ಯಾನದಲ್ಲಿ ತೊಡಗಿದ್ದರು. ಂಟ್ಟಿಗೇ ಅವರೆಲ್ಲಾ ಹಾಡುತ್ತಿದ್ದರು. ತುಂಬಾ ಆನಂದದಾಯಕವಾಗಿತ್ತು! ಶರೀರ ಹಕ್ಕಿಯಾಗಿತ್ತು! ರೆಕ್ಕೆ ಬಿಚ್ಚಿ ಹಾರಿತು! ಏನು ಆನಂದ..ಏನು ಉಲ್ಲಾಸ…! ಇದೆಂತಹ ಸ್ಥಿತಿ. ಇಂತದೊಂದು ಅನುಭವ ಆಗಿಯೇ ಇರಲಿಲ್ಲ. ಇಷ್ಟು ವರ್ಷ ಮಾಡಿದ ಧ್ಯಾನ, ಯೋಗ, ಪ್ರಾಣಯಾಮಗಳಲ್ಲೂ ದೊರೆಯದ ಸ್ಥಿತಿ! ಹತ್ತಿಯಷ್ಟು ಹಗುರ!
`ಕೊನೆಯಲ್ಲಿ ಕೂಡ ಸವರ್ೆ ಜನಾ ಸುಖಿನೋಭವಂತು ಅಂತ ಹೇಳ್ಕೊಂಡೇ ಕೊನೆ ಉಸಿರೆಳೆದರಲ್ಲ..?’
ಯಾರ ಮಾತಿದು? ಕೊನೆಯ ಉಸಿರೆ..ಬರಿಯ ಉಸಿರೇನು..? ತಾನು ಗಾಳಿಯೇ ಆಗಿಬಿಟ್ಟಿರುವೆ..? ತೇಲುತ್ತಿರುವೆ..ಹಾರುತ್ತಿರುವೆ..ಯಾವ ಅಂಕೆಯೂ ಇಲ್ಲ..ಯಾವ ಬಂಧವೂ..ಇಲ್ಲ! ಯಾವ ಬಂಧನವೂ ಇಲ್ಲ! ಯಾವ ನೋವೂ ಇಲ್ಲ..ಯಾವ ದುಃಖವೂ ಇಲ್ಲ.
`ಈ ಸ್ಥಿತಿಗೆ ಕಾರಣರಾದವರಿಗೆ ಶಾಪ ಕೊಡು ಎಂದರೆ ವರ ಕೊಟ್ಟನಲ್ಲಪ್ಪ!’
ಬಹಳ ಜನ ಮಾತಾಡುತ್ತಿದ್ದರು. ಬಹಳ ಜನ ಗದ್ದಲ ಮಾಡುತ್ತಿದ್ದರು. ಸತ್ಯನಿಗೀಗ ಎಲ್ಲದರಿಂದ ಬಿಡುಗಡೆಯಾದ ಅನುಭವ… ಅವರೆಲ್ಲರ ಮಾತುಗಳೂ ಸಹ ನಿಧಾನವಾಗಿ ಕ್ಷೀಣವಾಗುತ್ತಾ ಹೋಗಿ ಕೊನೆಗೆ ಮೌನ! ನೀರವ, ನಿರಾಳ, ಅಖಂಡ ಮೌನ ಆವರಿಸಿತು ಕಡಲು ಕೂಡ ಸ್ತಬ್ಧವಾಯಿತು.
ಯಾವುದೋ ಸೆಳೆತ ಅವನನ್ನು ಕಡಲಿನತ್ತ ಎಳೆಯಿತು. ಪ್ರಶಾಂತ ಕಡಲಿನ ನೀಲಿ ನೀರನ್ನು ಸತ್ಯ ಮುಟ್ಟಿದ. ದಿವ್ಯಭಾವವೊಂದು ಮೂಡಿತು. ಮಂತ್ರಮಗ್ಧನಾದವನಂತೆ ಮೆಲ್ಲನೆ ಸಮುದ್ರದೊಳಕ್ಕೆ ನಡೆಯುತ್ತಾ ಹೋಗಿ ನೀರಿನಲ್ಲಿ ಮುಳುಗಿದ. ಮತ್ತೆ ಏಳಬೇಕೆನಿಸಲಿಲ್ಲ. ಆ ಮಹಾಸಾಗರದ ನೀರಿನಲಿ ಕರಗಿ ಹೋಗಬೇಕೆನ್ನಿಸಿ ಕರಗಿಹೋದ!






ಕಥೆ ತುಂಬಾ ಚೆನ್ನಾಗಿದೆ ಸರ್, ನಿರೂಪಣೆಯೂ ಅಷ್ಟೇ ನೈಜವಾಗಿತ್ತು, ಧನ್ಯವಾದಗಳು.
aktheyannu mecchikondidakke thumba dhanyavadhagalu basavaraju