ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಿ ಕೆ ಅಪ್ಪಣ್ಣ ಅವರಿಗೆ ಈ ಸಾಲಿನ ಛಂದ ಪುಸ್ತಕ ಬಹುಮಾನ

ಅವಧಿಯ ಓದುಗರಾದ ಶಾಂತಿ ಕೆ ಅಪ್ಪಣ್ಣ ಅವರಿಗೆ ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಘೋಷಿಸಲಾಗಿದೆ. ಕವಿತೆಗಳ ಮೂಲಕ ಈಗಾಗಲೇ ಹೆಸರಾಗಿರುವ ಶಾಂತಿ ಅವರು ಇತ್ತೀಚಿಗೆ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದರು.

ಛಂದ ಪುಸ್ತಕ ನಾಡಿನ ಯುವಕತೆಗಾರರನ್ನು ಗುರುತಿಸಲು ಪ್ರತೀ ವರ್ಷ ಅತ್ಯುತ್ತಮ ಕಥೆಗಳ ಹಸ್ತಪ್ರತಿಗೆ ಬಹುಮಾನವನ್ನು ನೀಡುತ್ತಾ ಬಂದಿದೆ. ಈ ಸಾಲಿನ ಬಹುಮಾನ ಶಾಂತಿ ಕೆ ಅಪ್ಪಣ್ಣ ಅವರ ಪಾಲಾಗಿದೆ.

ಮೂಲತಃ ಕೊಡಗಿನವರಾದ ಶಾಂತಿ, ಸದ್ಯಕ್ಕೆ ಚೆನ್ನೈನಲ್ಲಿ ಉದ್ಯೋಗದಲ್ಲಿದ್ದಾರೆ. ಸ್ಪರ್ಧೆಗೆ ೫೬ ಹಸ್ತಪ್ರತಿಗಳು ಬಂದಿದ್ದವು. ಮೊದಲ ಸುತ್ತಿನ ಆಯ್ಕೆಯನ್ನು ವಸುಧೇಂದ್ರ ಸೇರಿದಂತೆ ಸುಮಂಗಲಾ, ನಾಗರಾಜ ವಸ್ತಾರೆ, ಶ್ರೀಕಾಂತ ಉಡುಪ ನಿರ್ವಹಿಸಿದ್ದರು. ಅಂತಿಮವಾಗಿ ಹಿರಿಯ ವಿಮರ್ಶಕ ಎಚ್.ಎಸ್. ರಾಘವೇಂದ್ರ ರಾವ್ ಅವರು ಶಾಂತಿ ಅವರ ಹಸ್ತಪ್ರತಿಯನ್ನು ಬಹುಮಾನಕ್ಕೆ ಆಯ್ಕೆ ಮಾಡಿದರು.

ಕತೆಗಾರರಿಗೆ ಇಪ್ಪತ್ತು ಸಾವಿರ ರೂಪಾಯಿ ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕವನ್ನು ನೀಡುವುದಲ್ಲದೆ ‘ಛಂದ ಪುಸ್ತಕ’ವೇ ಈ ಪುಸ್ತಕವನ್ನು ಪ್ರಕಟಿಸುತ್ತದೆ. ಫೆಬ್ರವರಿ 14ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಹಾಗೂ ಬಹುಮಾನ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ವಸುಧೇಂದ್ರ ಅನುವಾದಿಸಿರುವ ಎವರೆಸ್ಟ್ ಹಾಗೂ ಭಾರತಿ ಬಿ ವಿ ಅವರ ಆಯ್ದ ಲಹರಿಗಳ ಕೃತಿಯನ್ನೂ ಬಿಡುಗಡೆ ಮಾಡಲಾಗುತ್ತಿದೆ.

‍ಲೇಖಕರು admin

13 December, 2015

5 Comments

  1. Bharathi b v

    ಕಂಗ್ರ್ಯಾಟ್ಸ್ ಶಾಂತಿ!

  2. ವಸುಧೇಂದ್ರ

    ಪ್ರಕಟಣೆಗೆ ಧನ್ಯವಾದಗಳು. ನನ್ನ ಪುಸ್ತಕ ಎವರೆಸ್ಟ್ ಆಗಲೇ ಅಂಗಡಿಗಳಲ್ಲಿ ಲಭ್ಯ. ಇನ್ನು ಮುಂದೆ ನನ್ನ ಯಾವುದೇ ಪುಸ್ತಕಗಳಿಗೆ ಬಿಡುಗಡೆ ಸಮಾರಂಭವಿರುವದಿಲ್ಲ. ಆದರೆ ಪ್ರಕಾಶನದಿಂದ ಪ್ರಕಟವಾದ ಇತರ ಪುಸ್ತಕಗಳಿಗೆ ಬಿಡುಗಡೆ ಸಮಾರಂಭವಿರುತ್ತದೆ. ಆ ದಿನ ಭಾರತಿಯ ಪುಸ್ತಕದ ಜೊತೆಗೆ ನವೀನ್ ಭಟ್ ಗಂಗೋತ್ರಿ ಅನುವಾದಿಸಿದ ವಿಶೇಷ ಪುಸ್ತಕವೂ ಬಿಡುಗಡೆಯಾಗುತ್ತದೆ.

  3. Shanthi

    Thanks Avadhi,
    Thanks Vasudhendra sir..
    Congratulations bharthi akka

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading