ಕಿರಣ್ ಭಟ್
ಹೊನ್ನಾವರದ ‘ ಸಾಕ್ಷಿ ಬಳಗ’ ಕ್ರಿಯಾಶೀಲ ಶಿಕ್ಷಕರ ಒಂದು ಗುಂಪು. ವರ್ಷವಿಡೀ ಒಂದಿಲ್ಲೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಈ ಬಳಗ ನನಗೆ ತುಂಬ ಹತ್ತಿರದ್ದು. ಶಿಕ್ಷಣ, ಸರಕಾರಿ ಶಾಲೆಗಳು ಮತ್ತು ಮಕ್ಕಳ ಕುರಿತು ಸದಾ ಚಿಂತಿಸುವ, ಹೊಸ ಪ್ರಯೋಗಗಳನ್ನು ಮಾಡುವ ಸಮಾನ ಮನಸ್ಕರ ಪಡೆಯೇ ಇಲ್ಲಿದೆ. ಈ ಹಿಂದೆ ಸಾಕ್ಷಿ ಬಳಗದ ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತ್ಯ, ರಂಗಭೂಮಿಯ ಕುರಿತು ಸಂವಾದದಲ್ಲೂ ಭಾಗಿಯಾಗಿದ್ದೆ.
ಕೆಲ ದಿನಗಳ ಹಿಂದೆ ಬಳಗದ ಜನಾರ್ಧನ ನಾಯ್ಕ ‘ಶರಾವತಿಯಲ್ಲೊಂದು ಸುತ್ತು’ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಅವಕಾಶವನ್ನು ಗಬಕ್ಕನೆ ಹಿಡಿದುಕೊಂಡೆ.
ದೂರ ದೂರದ ಕಾಡುಗಳಲ್ಲಿ ಹತ್ತಾರು ಊರುಗಳ ನಡುವೆ ತಣ್ಣಗೆ ಹರಿದು ನಮ್ಮೂರಲ್ಲಿ ಸಮುದ್ರ ಸೇರುವ ಶರಾವತಿ ನಿತ್ಯನೂತನೆ. ಅದರಲ್ಲೂ ಡಿಂಗಿ ಹತ್ತಿ ಶರಾವತಿ ನದಿಗುಂಟ ಯಾನ ಹೊರಟರೆ ಉದ್ದಕ್ಕೂ ಕಾಣುವ ತೆಂಗಿನ ತೋಟಗಳು, ನಾವೆಗಳು, ಧಕ್ಕೆಗಳು, ನದಿಗುಂಟ ಬದುಕುವ ಜನರ ಬದುಕು…ಹೀಗೆ ಕಣ್ತುಂಬಿಕೊಂಡಷ್ಟೂ ಸಾಲದಷ್ಟು ವೈಶಿಷ್ಟ್ಯ.

ಅದರಲ್ಲೂ ಹೊಸ ವಿಚಾರ ಗಳನ್ನ ತುಂಬಿಕೊಂಡ, ಮಕ್ಕಳ ನಡುವೆಯೇ ಬದುಕುವ ಕ್ರಿಯಾಶೀಲ ಶಿಕ್ಷಕರ ಜೊತೆಗೆ ಕಳೆದ ಆ ಕ್ಷಣಗಳು ಅಮೂಲ್ಯ. ಸುಮಾರು ಮೂರು ಗಂಟೆ ನದಿಗುಂಟ ಡಿಂಗಿ ಯ ಪ್ರಯಾಣ, ಹೈಗುಂದ ದಂಥ ಸುಂದರ ದ್ವೀಪದಲ್ಲಿ ಸುತ್ತಾಟ. ಮಧ್ಯಾಹ್ನ ಒಳ್ಳೇ ಊಟ, ಹಾಡು, ಕವನ, ಮಾತು….ನಗು.
ಶರಾವತಿಯಲ್ಲೊಂದು ಸುತ್ತು ಹಾಕಿದ ಕ್ಷಣಗಳ ಕೆಲವು ಚಿತ್ರಗಳು ಇಲ್ಲಿವೆ.











ಧನ್ಯವಾದಗಳು ‘ ಅವಧಿ’