ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣು ಹುಲ್ಲೂರ್ ಹೇಳಿದ್ದು: ಅವಳನ್ನು ಕಳೆದುಕೊಂಡು..

ಶರಣು ಹುಲ್ಲೂರ್

ಅವಳನ್ನು ಕಳೆದುಕೊಂಡು ಇವತ್ತು ಸಂಜೆ 6ಕ್ಕೆ ಹತ್ತು ವರ್ಷಗಳಾಯ್ತು!

ನಾನು ಕಾಲ್ನಡಿಗೆಯ ಫಕೀರ. ಅವಳದ್ದು ಲೂನಾ ಸ್ಕೂಟರ್. ಅಪ್ಪ ತಾಲೂಕ ಕಛೇರಿಯಲ್ಲಿ ಆಫೀಸ್ ರ. ಅವರ ಮನೆಗೆ ಪೇಪರ್ ಹಾಕಲೆಂದು ಹೋಗುವ ನನಗಾಗಿ ದಿನವೂ ಕಾಯುತ್ತಿದ್ದಾಳಾಕೆ. ನನ್ನದೇ ಕತೆ, ಕವಿತೆಗಳು ನಾನು ಅವರ ಮನೆಗೆ ದಿನವೂ ಹಾಕುತ್ತಿರುವ ಪತ್ರಿಕೆಯಲ್ಲಿ ಬರುತ್ತವೆಯಂದು ಅದ್ಹೇಗೆ ಗೊತ್ತಾಗಿತ್ತೋ ಏನೋ.. ಅವತ್ತಿಂದ ಪ್ರೀತಿಸುತ್ತಿದ್ದಳಂತೆ.

ಒಂದು ದಿನ ಗಟ್ಟಿ ಧೈರ್ಯ ಮಾಡಿ ಹೇಳಿಯೂ ಬಿಟ್ಟಳು. ಅದ್ಹೇಗೆ ಒಪ್ಪಲು ಸಾಧ್ಯ. ನನಗೂ ಅವಳ ಮೇಲೆ ಪ್ರೀತಿ ಆದಾಗ.. ಅವರ ಮನೆ ಮುಂದೆ ಸಂಜೆ 6ಕ್ಕೆ ನಿಂತಿದ್ದೆ. ಮನೆ ಖಾಲಿ ಮಾಡಿದ್ದಳು. ಇವತ್ತಿಗೂ ಅವಳ ಬಗ್ಗೆ ಸುಳಿವು ಸಿಕ್ಕಿಲ್ಲ.. ಬರೋಬ್ಬರಿ ದಶಕ ಕಳೆದಿವೆ. ಈಗ ಎಲ್ಲಿದ್ದಾಳೆ? ಗೊತ್ತಿಲ್ಲ!ಆದರೆ, ಅವಳ ಮೆಚ್ಚಿಸೋಕೆ ಅಂತ ಬರೆದ ಕವಿತೆಗಳೂ ಹಾಗೆಯೇ ಇವೆ. ಅವಳು ಓದದೆ..

 

‍ಲೇಖಕರು G

27 May, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading