ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣರ ಮೇಲೆ ದಂಡೆತ್ತಿ ಬಂದವರಿಗೆ ಇಲ್ಲಿದೆ ದರ್ಗಾ ಉತ್ತರ – ಭಾಗ ೬

(ಭಾಗ ೫ ಕ್ಕೆ ಇಲ್ಲಿ ಕ್ಲಿಕ್ಕಿಸಿ)
ಗೋತ್ರನಾಮವ ಬೆಸಗೊಂಡಡೆ
ಮಾತು ನೂಕದೆ ಸುಮ್ಮನಿದ್ದಿರಿದೇನಯ್ಯಾ?
ತಲೆಯ ಕುತ್ತಿ ನೆಲನ ಬರೆವುತ್ತಿದ್ದಿರಿದೇನಯ್ಯಾ?
ಗೋತ್ರನಾಮ ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯನೆಂಬುದೇನು
ಕೂಡಲಸಂಗಯ್ಯ.
-ಬಸವಣ್ಣ
 
ಬಸವಣ್ಣನವರು ಈ ವಚನದಲ್ಲಿ ದೇವರನ್ನೂ ಅಸ್ಪೃಶ್ಯರ ಸಾಲಿನಲ್ಲಿ ತಂದು ನಿಲ್ಲಿಸುತ್ತಾರೆ. ಮಾದಾರ ಚೆನ್ನಯ್ಯ ಮತ್ತು ಡೋಹರ ಕಕ್ಕಯ್ಯನವರನ್ನು ದೇವರ ಗೋತ್ರಪುರುಷರನ್ನಾಗಿ ಮಾಡುತ್ತಾರೆ!
ಶಿವಪುರಾಣದ ಪ್ರಸಂಗವೊಂದು ಈ ವಚನಕ್ಕೆ ಹಿನ್ನೆಲೆಯಾಗಿದೆ.’ಗಿರಿಜಾಕಲ್ಯಾಣ’ದ ಸಂದರ್ಭದಲ್ಲಿ ವರನಾದ ಶಿವನಿಗೆ ಮದುವೆ ಮಾಡಿಸುವ ಪುರೋಹಿತ ಗೋತ್ರನಾಮ ಕೇಳುತ್ತಾನೆ. ಗೋತ್ರವಿಲ್ಲದ ಅ ವೈದಿಕ ಶಿವ ಕಕ್ಕಾಬಿಕ್ಕಿಯಾಗುತ್ತಾನೆ. ಆತನ ಬಾಯಿಯಿಂದ ಮಾತುಗಳು ಹೊರಡುವುದಿಲ್ಲ. ಏನೂ ತೋಚದವನಾಗಿ ತಲೆ ಕೆಳಗೆ ಮಾಡಿ ಹೆಬ್ಬೆರಳಿನಿಂದ ನೆಲ ಗೀಚತೊಡಗುತ್ತಾನೆ! ಈ ಪುರಾಣ ಪ್ರಸಂಗದಿಂದ ಬಸವಣ್ಣನವರು ಸಿಡಿಮಿಡಿಗೊಂಡಿದ್ದಾರೆ. ನಿಮ್ಮದು ಮಾದಾರ ಚೆನ್ನಯ್ಯನ ಗೋತ್ರ -ಡೋಹರಕಕ್ಕಯ್ಯನ ಗೋತ್ರ ಎಂಬುದು ಗೊತ್ತಿಲ್ಲವೆ ಎಂದು ಈ ವಚನದಲ್ಲಿ ದೇವರನ್ನು ‘ಗದರಿಸಿದ್ದಾರೆ’. ಜಾತೀಯತೆಯ ಬಗ್ಗೆ ಬಸವಣ್ಣನವರಿಗೆ ಇದ್ದ ತೀವ್ರ ತಿರಸ್ಕಾರಕ್ಕೆ ಈ ವಚನ ಸಾಕ್ಷಿಯಾಗಿದೆ.

ತಾವು ಸಾಕ್ಷಾತ್ಕರಿಸಿಕೊಂಡ ಸತ್ಯದ ಪ್ರತಿಪಾದನೆಗಾಗಿ ಬಸವಣ್ಣನವರು, ಮಾನವ ಕುಲ ನಡೆದು ಬಂದ ದಾರಿಯ ಅರಿವಿನೊಂದಿಗಿನ ಬದುಕಿನ ವಾಸ್ತವತೆಯ ಜೊತೆಗೆ ಸಾಹಿತ್ಯದ ಸೃಜನಶೀಲತೆ ಮತ್ತು ಪುರಾಣದ ಕಲ್ಪನೆಯನ್ನೂ ಬಳಸಿಕೊಳ್ಳುತ್ತಾರೆ. ಮೇಲಿನ ವಚನದಲ್ಲಿ ತಾವು ನಂಬದ ಪುರಾಣದ ಶಿವನನ್ನು ಮತ್ತು ತಾವು ನಂಬಿದ ಜೊತೆಗಾರರಾದ ಚನ್ನಯ್ಯ ಮತ್ತು ಕಕ್ಕಯ್ಯನವರನ್ನು ತಂದು ದಲಿತರ ಪರವಾಗಿ ನಿಂತು ಪುರಾಣದ ಶಿವನನ್ನು ಟೀಕಿಸುತ್ತಾರೆ. ಪುರಾಣದ ಶಿವನಿಗೆ ‘ಕೂಡಲಸಂಗಯ್ಯಾ’ ಎಂದು ಕರೆದು ನಮ್ಮ ಒಳಗನ್ನು ಎಚ್ಚರಗೊಳಿಸಿಕೊಳ್ಳುವ ಕ್ರಮವನ್ನು ಸೂಚಿಸುತ್ತಾರೆ.
ಇಟ್ಟಿಯ ಹಣ್ಣ ನರಿ ತಿಂದು ಸೃಷ್ಟಿ ತಿರುಗಿತ್ತೆಂಬಂತೆ
ಮಟ್ಟಿಯನಿಟ್ಟ ದ್ವಿಜರ ಮಾತೇಕೆ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದಡೆ
ಜಗಕೆ ಇರುಳಪ್ಪುದೆ ಮರುಳೆ?
 
ವೈದಿಕ ವ್ಯವಸ್ಥೆ 12ನೇ ಶತಮಾನದಲ್ಲಿ ಜನಸಮುದಾಯದ ಮೇಲೆ ಯಾವ ರೀತಿ ಹಿಡಿತ ಸಾಧಿಸಿತ್ತು ಎಂಬುದನ್ನು ಈ ವಚನ ತಿಳಿಸುತ್ತದೆ.’ತನಗೆ ಅನಿಸಿದ್ದೇ ಸತ್ಯ’ ಎಂಬ ವೈದಿಕದ ಅಹಂಕಾರವನ್ನು ಬಸವಣ್ಣನವರು ಯಾವರೀತಿ ಪ್ರಶ್ನಿಸಿದರು ಎಂಬುದಕ್ಕೆ ಈ ವಚನ ಸಾಕ್ಷಿಯಾಗಿದೆ. ‘ಮಮಕರ್ತ ಕೂಡಲ ಸಂಗನ ಶರಣರು ಅಕ್ಷಯರಧಿಕರು. ವಿಪ್ರರು ಕೀಳು ಜಗವೆಲ್ಲ ಅರಿಯಲು’ ಎಂದು ಬಸವಣ್ಣನವರು ಹೇಳುತ್ತ ಹಳೆಯ ವ್ಯವಸ್ಥೆಯ ಕ್ರೌರ್ಯ ಮತ್ತು ಹೊಸ ವ್ಯವಸ್ಥೆಯ ಮಾನವೀಯತೆಯ ದರ್ಶನ ಮಾಡಿಸುತ್ತಾರೆ.
‘ಜನನ ಸೂತಕ, ಕುಲ ಸೂತಕ, ರಜಃಸೂತಕ, ಎಂಜಲ ಸೂತಕ, ಪ್ರೇತ ಸೂತಕ ಎಂಬಿವಾದಿಯಾದ ಸರ್ವಸೂತಕಂಗಳು ಅಂಗಲಿಂಗ ಸಂಬಂಧಿಗಳಾದ ಲಿಂಗಭಕ್ತರಿಗಿಲ್ಲ ನೋಡಾ’ ಎಂದು ಬಸವಣ್ಣನವರು ಸೂತಕ ಧರ್ಮವನ್ನು ತಿರಸ್ಕರಿಸಿ ಮಾನವರನ್ನು ಪರಿಶುದ್ಧತೆಯ ಕಡೆಗೆ ಒಯ್ಯುವಂಥ ಲಿಂಗವಂತ ಧರ್ಮದ ಮಹತ್ವವನ್ನು ಸಾರುತ್ತಾರೆ.
ತ್ರಿವಿಧ ಸಾಹಿತ್ಯ: ವಚನ ಸಾಹಿತ್ಯ ಎಲ್ಲ ದೃಷ್ಟಿಯಿಂದಲೂ ಆಧುನಿಕ ಸಾಹಿತ್ಯವೇ ಆಗಿದೆ. ಅದರ ಶೈಲಿ ಕೂಡ ಆಧುನಿಕವಾದ ಗದ್ಯಶೈಲಿಗೆ ಸಮೀಪವಾಗಿದೆ. ಅದೇರೀತಿ ಹಾಡುಗಾರಿಕೆಗೆ ಬೇಕಾದ ಅಂಶಗಳನ್ನೂ ಒಳಗೊಂಡಿದೆ. ಹೀಗೆ ಗದ್ಯದ ದೇಹ ಮತ್ತು ಪದ್ಯದ ಜೀವವನ್ನು ಹೊಂದಿರುವ ಸಾಹಿತ್ಯ ಎಲ್ಲಿಯೂ ಕಾಣಸಿಗುವುದಿಲ್ಲ.
ವಚನಗಳು ಶಾಸ್ತ್ರ, ಸಾಹಿತ್ಯ ಮತ್ತು ಸಮಾಜವೆಂಬ ತ್ರಿವಿಧ ಅಂಶಗಳನ್ನು ಒಳಗೊಂಡಿವೆ. ಮೊದಲನೆಯದಾಗಿ ಧಾರ್ಮಿಕ ಸಾಹಿತ್ಯವಾಗಿರುವುದರಿಂದ ಇದರಲ್ಲಿ ಲಿಂಗವಂತ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಆಚರಣೆ ಮತ್ತು ತತ್ತ್ವದ ವಿಚಾರಗಳಿವೆ. ಇದು ಸೃಜನಶೀಲ ಸಾಹಿತ್ಯವೂ ಆಗಿರುವುದರಿಂದ ಶಬ್ದಾರ್ಥದ ಜೊತೆಗೆ ಲಕ್ಷಣಾರ್ಥ ಮತ್ತು ಧ್ವನ್ಯರ್ಥಗಳು ಸಹಜವಾಗಿಯೇ ಮೂಡಿಬಂದಿವೆ. ಇವುಗಳ ಜೊತೆಗೇ ತತ್ತ್ವಾರ್ಥ ಮತ್ತು ಬೆಡಗಿನ ಅರ್ಥಗಳನ್ನೂ ಒಳಗೊಂಡಿವೆ. ಅನ್ಯೋಕ್ತಿ. ಅಲಂಕಾರ, ಪ್ರತಿಮೆ, ಪ್ರತೀಕ ಮುಂತಾದ ಕಾವ್ಯಮೀಮಾಂಸೆಯ ಇತರ ಅಂಶಗಳೂ ಸೇರಿಕೊಂಡಿವೆ. ಹೀಗೆ ಲಿಂಗಾಯತದ ಧರ್ಮಶಾಸ್ತ್ರವೇ ಆಗಿರುವ ವಚನಗಳು ಸಾಹಿತ್ಯಕವಾಗಿ ಸಾರ್ವತ್ರಿಕವಾಗಿವೆ. ಅಲ್ಲದೆ ಸಕಲಜೀವಾತ್ಮರ ಬಗೆಗಿನ ಕಾಳಜಿಯಿಂದಾಗಿ ಜನಮನವನ್ನು ಸೂರೆಗೊಳ್ಳುವ ಮೂಲಕ ಸಾಮಾಜಿಕವಾಗಿ ಮಹತ್ವದ್ದೆನಿಸುತ್ತವೆ. ಈ ಎಲ್ಲ ಕಾರಣಗಳಿಂದಾಗಿ ವಚನಗಳು ಶಾಸ್ತ್ರವೂ ಹೌದು, ಸಾಹಿತ್ಯವೂ ಹೌದು. ಅಷ್ಟೇ ಅಲ್ಲದೆ’ನಡೆ ನುಡಿ ಸಿದ್ಧಾಂತ’ದ ಪರಿಣಾಮ ಬೀರುವ ನವಸಮಾಜದ ರೂಪುರೇಷೆಯೂ ಹೌದು.

ವಚನ ಸಾಹಿತ್ಯವು ಸಮಷ್ಟಿ ಪ್ರಜ್ಞೆಯಿಂದ ಕೂಡಿದ ಸಾಹಿತ್ಯವಾಗಿದೆ. ವಚನಕಾರರು ತಮ್ಮ ವಚನಗಳನ್ನು ಸಮಾಜೋ ಆಧ್ಯಾತ್ಮಿಕ ಸಂಸತ್ ಆಗಿದ್ದ ಅನುಭವ ಮಂಟಪದಲ್ಲಿ ಮಂಡಿಸಬೇಕಿತ್ತು. ಅಲ್ಲಿ ಚರ್ಚೆ ನಡೆದ ನಂತರವೇ ಅದಕ್ಕೆಅನುಭಾವ ಎಂಬ ಆಧ್ಯಾತ್ಮಿಕ, ಧಾರ್ಮಿಕ, ಸಾಹಿತ್ಯಕ ಮತ್ತು ಸಾಮಾಜಿಕ ಮಹತ್ವ ಬರುತ್ತಿತ್ತು. ಈ ರೀತಿ ಸಾಮಾಜಿಕವಾಗುವ ಮತ್ತು ‘ನಡೆ ನುಡಿ ಸಿದ್ಧಾಂತ’ದಿಂದ ಕೂಡಿದ ವಚನಸಾಹಿತ್ಯದಂಥ ಸಮೂಹ ಸಾಹಿತ್ಯವೊಂದು ಧರ್ಮಗ್ರಂಥವಾಗಿರುವುದು ಜಗತ್ತಿನಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ವಚನಕಾರರ ನಂತರ ಎಷ್ಟೋ ಶತಮಾನಗಳಾದ ಮೇಲೆ ಅಂದರೆ 1708ರಲ್ಲಿ ಸಿಖ್ಖರು ಸ್ವೀಕರಿಸಿದ ‘ಗುರು ಗ್ರಂಥಸಾಹೀಬ್’ ಧರ್ಮಗ್ರಂಥವೊಂದನ್ನು ಬಿಟ್ಟರೆ ಜಗತ್ತಿನಲ್ಲಿ ದೇವರನ್ನು ನಂಬುವ ಎಲ್ಲ ಧರ್ಮಗ್ರಂಥಗಳು ದೇವರ ವಾಕ್ಯಗಳಾಗಿವೆ. ದೇವರು ಮನುಷ್ಯರಿಗೆ ಹೇಳಿದ ಕ್ರಮ ಅವುಗಳಲ್ಲಿದೆ. ಆದರೆ ಲಿಂಗವಂತ ಧರ್ಮಗ್ರಂಥ ‘ಗುರುವಚನ’ ದೇವರ ವಾಕ್ಯಗಳಿಂದ ಕೂಡಿಲ್ಲ. ಸರ್ವ ಶರಣರ ವಚನಗಳಿಂದ ಕೂಡಿದೆ. ಬಸವಣ್ಣನವರು ಪದೆ ಪದೆ ‘ಗುರುವಚನ’ ಪದ ಪ್ರಯೋಗ ಮಾಡಿದ್ದಾರೆ. ‘ಗುರುವಚನ’ ಎಂದರೆ ಬರಿ ಬಸವಣ್ಣನವರ ವಚನಗಳಲ್ಲ. ಸತ್ಯಶುದ್ಧ ಶರಣರೆಲ್ಲ ತಮ್ಮೊಳಗಿನ ದೇವರಿಗೆ ಮಾಡಿಕೊಂಡ ನಿವೇದನೆಯೆ ‘ಗುರುವಚನ’. ತಮ್ಮ ನಡೆ ನುಡಿ ಸಿದ್ಧಾಂತದ ಕುರಿತು ಅವರೆಲ್ಲ ವಚನಗಳ ಮೂಲಕ ತಮ್ಮೊಳಗಿನ ದೇವರಿಗೆ ವರದಿ ಒಪ್ಪಿಸಿದ್ದಾರೆ.
ಮುಖ್ಯವಾಗಿ ಬಸವಣ್ಣನವರ ‘ಷಟ್ಸ್ಥಲದವಚನಗಳು’, ಅಲ್ಲಮ ಪ್ರಭುದೇವರ’ ಮಂತ್ರಗೋಪ್ಯ ‘ಮತ್ತು ಚನ್ನಬಸವಣ್ಣನವರ’ಕರಣಹಸಿಗೆ’ಗಳೆಂಬ ಮೂರು ಗ್ರಂಥಗಳು ಸೇರಿ ಲಿಂಗವಂತರ ಧರ್ಮಗ್ರಂಥ ಎಂಬ ಪರಿಭಾವನೆ ಶರಣರ ಚಳವಳಿಯ ನಂತರದ ಮಧ್ಯಕಾಲೀನ ಲಿಂಗಾಯತರಲ್ಲಿ ಅಸ್ತಿತ್ವಕ್ಕೆ ಬಂದಿತು. ಕಲ್ಯಾಣ ಹತ್ಯಾಕಾಂಡದ ನಂತರ ಮಠೀಯ ವ್ಯವಸ್ಥೆ ಲಿಂಗಾಯತರಲ್ಲಿ ಜಾರಿಗೆ ಬಂದು ಸ್ವಾಮಿಗಳ ಸೃಷ್ಟಿಯಾದಾಗ ಅವರನ್ನು ಮಠಕ್ಕೆ ಪಟ್ಟಗಟ್ಟುವ ಸಂದರ್ಭದಲ್ಲಿ ಗುರುಗಳು ಮೇಲೆ ತಿಳಿಸಿದ ಮೂರೂ ವಚನ ಕಟ್ಟುಗಳನ್ನು ಅವರ ಜೋಳಿಗೆಯಲ್ಲಿಹಾಕುತ್ತಿದ್ದರು.ಆದರೆ ಎಲ್ಲಶರಣರವಚನಗಳುಕೂಡ ಲಿಂಗವಂತ ಧರ್ಮಗ್ರಂಥದಭಾಗಗಳು ಎಂಬುದು ಸಮಂಜಸವಾಗಿದೆ.
ಬಸವಣ್ಣನವರ ವಚನಗಳು ಭೂಮಿ ಪ್ರಧಾನವಾಗಿವೆ, ಅಲ್ಲಮಪ್ರಭುಗಳ ಮಂತ್ರಗೋಪ್ಯ ಬಾಹ್ಯಾಕಾಶ ಪ್ರಧಾನವಾಗಿದೆ. ಚನ್ನಬಸವಣ್ಣನವರ ಕರಣಹಸಿಗೆ ದೇಹ ಮತ್ತು ಮನಸ್ಸು ಪ್ರಧಾನವಾಗಿದೆ. ಹೀಗೆ ಲಿಂಗವಂತರ ಧರ್ಮಗ್ರಂಥ, ಭೂಮಿ ( ಬಸವಣ್ಣನವರ ಲೋಕಜ್ಞಾನ), ಬಾಹ್ಯಾಕಾಶ (ಅಲ್ಲಮ ಪ್ರಭುಗಳ ವ್ಯೋಮಜ್ಞಾನ) ದೇಹ ಮತ್ತು ಮನಸ್ಸಿನ ( ಚನ್ನಬಸವಣ್ಣನವರ ಸ್ವಯಂಜ್ಞಾನ) ಕಡೆಗೆ ಒಯ್ಯುವ ಮಾರ್ಗದಶರ್ಿಯಾಗಿದೆ.ಆದರೆ ಇತರ ಶರಣರ ವಚನಗಳು ಈ ಧರ್ಮಗ್ರಂಥವನ್ನು ಇನ್ನೂ ಪರಿಪೂರ್ಣಗೊಳಿಸುವ ಸಾಮಥ್ರ್ಯ ಹೊಂದಿವೆ.
‘ಸಕಲಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು’ ಎಂದು ಹೇಳುವಲ್ಲಿ ಬಸವಣ್ಣನವರ ಜೀವಕಾರುಣ್ಯ ಎದ್ದು ಕಾಣುತ್ತದೆ. ಮಾನವ ಈ ಜಗತ್ತಿನ ಕೇಂದ್ರಬಿಂದು ಅಲ್ಲ, ಸಕಲ ಜೀವಾತ್ಮರೇ ಈ ಜಗತ್ತಿನ ಕೇಂದ್ರಬಿಂದು ಎಂಬುದನ್ನು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ.ಆಧುನಿಕ ಪರಿಸರ ವಿಜ್ಞಾನಿಗಳು 20ನೇ ಶತಮಾನದಲ್ಲಿ ಹೇಳಿದ್ದನ್ನು ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದಾರೆ. ‘ಜೀವಜಾಲದಲ್ಲಿದೆ ಚರಾಚರವೆಲ್ಲ’ ಎಂದು ಬಸವಣ್ಣನವರು ಹೇಳುವ ಮೂಲಕ ಪರಿಸರದ ಮಹತ್ವವನ್ನು ಸಾರಿದ್ದಾರೆ. ವಸ್ತುಗಳು ಮತ್ತು ಜೀವಿಗಳೆಲ್ಲ ಜೀವಜಾಲದಲ್ಲಿ ಬರುತ್ತವೆ ಎಂದು ಈ ಕಾಲದ ಪರಿಸರ ವಿಜ್ಞಾನಿಗಳು ಹೇಳುತ್ತಿದ್ದಾರೆ. ಬಸವಣ್ಣನವರು ನಿಶ್ಚಲವಾದ ಹಿಮಾಲಯದಂಥ ಭೌತಿಕವಸ್ತುಗಳನ್ನು ಕೂಡ ಜೀವಜಾಲದಲ್ಲಿ ಸೇರಿಸಿದ ಮೊದಲಿಗರು.
ಕಾಯಕಜೀವಿಗಳು ವಸ್ತುಗಳ ಉತ್ಪಾದನೆ ಮಾಡುತ್ತಲೇ ತತ್ತ್ವ, ಸಾಹಿತ್ಯ ಮತ್ತು ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವಂಥ ಸಾಹಿತ್ಯ ರಚನೆ ಮಾಡಿದ್ದು ನಮಗೆಲ್ಲ ಮಾದರಿಯಾಗಿದೆ. 21ನೇ ಶತಮಾನದ ಹಾಹಾಕಾರವನ್ನುತಡೆಗಟ್ಟಲು ಮತ್ತು ಸರಳ ಸಹಜವಾದ ಸಮೃದ್ಧ ಬದುಕನ್ನು ಕಟ್ಟಲು ವಚನಗಳು ಬಹಳ ಅವಶ್ಯವಾಗಿವೆ. ಹೀಗೆ ವಚನ ಸಾಹಿತ್ಯ ಆಧುನಿಕ ಯುಗದಲ್ಲೂ ಪ್ರಸ್ತುತವಾಗಿದೆ.
ಬಸವಣ್ಣನವರು ಮಾನವಕುಲದ ವಿಮೋಚಕರಾಗಿದ್ದಾರೆ. ಮಾನವ ಕುಲದ ವಿಮೋಚಕರಾಗಬೇಕಾದರೆ ಮಾನವರು ಮೊದಲಿಗೆ ತಮ್ಮನ್ನು ಅರಿತುಕೊಳ್ಳಬೇಕು. ಸತಿಪತಿ ಮಧುರಭಾವದ ಮಹತ್ವವನ್ನು ತಿಳಿದುಕೊಳ್ಳಬೇಕು. ಆ ಮೂಲಕ ಮಧುರಭಕ್ತಿಯ ಸಂಸ್ಕಾರ ಪಡೆಯಬೇಕು. ಆ ಮಧುರಭಕ್ತಿಯು ಅವರಿಬ್ಬರೊಳಗೆ ಶಾಂತಿ ಸಮಾಧಾನ ತರುವಂಥದ್ದಾಗಿರಬೇಕು. ಈ ಶಾಂತಿ ಸಮಾಧಾನದ ಸಂಸ್ಕಾರವು ಇಡೀ ಕುಟುಂಬವನ್ನು ಆವರಿಸಬೇಕು. ಮಕ್ಕಳು ಬೆಳೆಯಲು ಸಹಕಾರಿಯಾಗುವ ಇಂಥ ವಾತಾವರಣ ಮನೆಯಲ್ಲೇ ನಿರ್ಮಾಣವಾಗಬೇಕು. ಹೀಗೆ ಮಧುರಭಾವವು ಕುಟುಂಬವನ್ನು ಆವರಿಸಿದಾಗ ಮಕ್ಕಳು ಸುಸಂಸ್ಕೃತರಾಗಿ ಬೆಳೆಯುವರು.ನಂತರ ಸಮಾಜದಲ್ಲಿ ಬೆಳೆಯುವಾಗ ಅವರ ನಡತೆ ಶಾಂತಿ ಸಮಾಧಾನಕ್ಕೆ ಪೂರಕವಾಗಿರುವುದರಿಂದ ಸಹಜವಾಗಿಯೇ ಸಾಮಾಜಿಕ ನೆಲೆಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಯ ವಿಕಸನಕ್ಕೆ ಅವರು ತಮ್ಮ ಅಳಿಲು ಸೇವೆ ಸಲ್ಲಿಸುವರು.
ಇಂಥ ಸಮಾನತೆಯ ಪ್ರಜ್ಞೆ ಮೂಡಿಸುವ ವ್ಯಕ್ತಿತ್ವ ವಿಕಸನ ಹೊಂದಿದವರೇ ಶರಣರು. ಇಂಥವರು ಯಾವ ದೇಶದಲ್ಲೇ ಇದ್ದರೂ ಕಳ್ಳರಾಗಿರುವುದಿಲ್ಲ; ಕೊಲೆಗಡುಕರಾಗಿರುವುದಿಲ್ಲ; ಸುಳ್ಳು ಹೇಳುವವರಾಗಿರುವುದಿಲ್ಲ; ಸಿಟ್ಟಿನ ಕೈಗೆ ಬುದ್ಧಿಯನ್ನು ಕೊಡುವವರಾಗಿರುವುದಿಲ್ಲ; ತಮ್ಮನ್ನೇ ಹೊಗಳಿಕೊಳ್ಳುವಂಥ ಆತ್ಮರತಿಯಲ್ಲಿ ತೊಡಗಿರುವುದಿಲ್ಲ; ಪರನಿಂದೆಯನ್ನು ಮಾಡುವವರಾಗಿರುವುದಿಲ್ಲ; ಬೇರೆಯವರು ಟೀಕಿಸಿದಾಗ ಅವರು ಟೀಕಿಸಿದರೇಕೆ?ಎಂಬುದಕ್ಕೆ ಕಾರಣವನ್ನು ಹುಡುಕದೆ ಪ್ರತಿಯಾಗಿ ಟೀಕಿಸುವ ಅನಾಗರೀಕತೆಯನ್ನು ಪ್ರದರ್ಶಿಸುವವರಾಗಿರುವುದಿಲ್ಲ.
ಹೀಗೆ ಬದುಕುವುದರಿಂದ ಅಂತರಂಗ ಶುದ್ಧಿಯಾಗುತ್ತದೆ. ಬಹಿರಂಗದಲ್ಲಿ ಸಮಾಜದ ಶುದ್ಧಿಯಾಗುತ್ತದೆ. ಇಂಥ ಜೀವನಕ್ರಮದಿಂದ ಮಾತ್ರ ದೇವರನ್ನು ಒಲಿಸಲು ಸಾಧ್ಯ ಎಂಬುದು ಬಸವಣ್ಣನವರ ದೃಢನಿರ್ಧಾರವಾಗಿದೆ. ಈ ಮಾತಿನಲ್ಲಿ ವ್ಯಕ್ತಿ, ಕುಟುಂಬ, ಸಮಾಜ, ದೇಶ ಮತ್ತು ವಿಶ್ವದ ಸಂಬಂಧವನ್ನು ಹೊಸೆಯುವ ಶಕ್ತಿ ಇದೆ.ಇಂಥ ಶರಣರು ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತಾರೆ.ಲೇಸನ್ನೇ ಬಯಸುವುದರಲ್ಲಿ ಶಾಂತಿ, ಪ್ರೀತಿ ಮತ್ತು ಸಮಾನತೆಯ ತತ್ತ್ವ ಅಡಗಿದೆ. ವ್ಯಕ್ತಿಯಿಂದ ವಿಶ್ವದವರೆಗೆ ಜೀವಜಾಲದ ಸಂಬಂಧ ಅಡಗಿದೆ. ಇಂಥ ಶರಣರಿದ್ದ ದೇಶ ಪಾವನವಾಗುತ್ತದೆ. ಅದುವೇ ವಿಶ್ವಶಾಂತಿಗೆ ಕಾರಣವಾಗುತ್ತದೆ. ಇಷ್ಟಲಿಂಗದಿಂದ ಅಂತರಂಗದ ಸಂಸ್ಕಾರ ಪಡೆದು ಬಹಿರಂಗದಲ್ಲಿ ‘ಜಂಗಮಲಿಂಗ’ದ ಅಂದರೆ ಸರ್ವಸಮತ್ವಭಾವದಿಂದ ಕೂಡಿದ ಸಮಾಜವೆಂಬ ದೇವರಸೇವೆಯನ್ನು ದಾಸೋಹಂ ಭಾವದೊಂದಿಗೆ ಮಾಡಲುಸಾಧ್ಯವಾಗುತ್ತದೆ. ವ್ಯಷ್ಟಿಯಿಂದ ಸಮಷ್ಟಿಯವರೆಗೆ, ಸರ್ವ ಸಮತ್ವದ ಪ್ರಜ್ಞೆಯಿಂದ ಮತ್ತು ಪ್ರೇಮಭಾವದಿಂದ ಬದುಕುವುದೇ ಮಧುರಭಕ್ತಿ. ದಯವನ್ನೇ ಧರ್ಮದ ಮೂಲವಾಗಿಸಿ ವಿಶ್ವಕಲ್ಯಾಣವನ್ನು ಸಾಧಿಸುವ ಭಕ್ತಿ.
ಹಳೆಯ ಸಾಮಾಜಿಕ ವ್ಯವಸ್ಥೆ ಇಂಥ ಮಧುರಭಕ್ತಿಯ ಸಾಧನೆಗೆ ತೊಡಕಾಗುವುದನ್ನು ಬಸವಣ್ಣನವರು ಗಮನಿಸಿದರು. ಹಳೆಯ ವ್ಯವಸ್ಥೆಯಿಂದಾಗಿ ಬಹುಪಾಲು ಜನಸಾಮಾನ್ಯರ ಬದುಕು ಕಷ್ಟಕರವಾಗಿತ್ತು. ಜಾತಿಭೇದದ ಕಾರಣ ಮೇಲ್ಜಾತಿಯವರು ಕೆಳಜಾತಿಯವರನ್ನು ಮುಟ್ಟಿಸಿಕೊಳ್ಳದಿರುವುದು, ಹೆಣ್ಣು ಗಂಡಿನ ಮಧ್ಯದ ಭೇದಭಾವದಿಂದಾಗಿ ಹೆಣ್ಣನ್ನು ಕೀಳಾಗಿ ನೋಡುವುದು. ಬಡವರು ಮತ್ತು ಉಳ್ಳವರು ಎಂಬ ಭೇದದಿಂದ ಬಡವರನ್ನು ಕೀಳಾಗಿ ನೋಡುವುದು.ಮಹಿಳೆಯರು, ಕೆಳಜಾತಿ ಮತ್ತು ಹಿಂದುಳಿದ ಜಾತಿಗಳಿಗೆ ಶಿಕ್ಷಣವನ್ನು ಕೊಡದಿರುವುದು.ಎಲ್ಲರೀತಿಯಿಂದಲೂ ಅವರು ಸದಾ ಸೇವಕರಾಗಿಯೇ ಇರುವಂತೆ ನೋಡಿಕೊಳ್ಳುವುದು.ಅಸಮಾನತೆಯ ಸಮಾಜದಲ್ಲಿ ಕಾಯಕಜೀವಿಗಳ ಶೋಷಣೆ ಮಾಡುವುದರ ಮೂಲಕ ಐಹಿಕ ಸುಖವನ್ನು ಅನುಭವಿಸುತ್ತ್ತ ದಾಸಿಯರನ್ನು ಮತ್ತು ವೇಶ್ಯೆಯರನ್ನು ಸುಖದ ಸಾಧನಗಳಾಗಿ ಬಳಸಿಕೊಳ್ಳುವುದು ವೈದಿಕ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿತ್ತು.
ಪುರೋಹಿತಶಾಹಿಗಳು, ಅಧಿಕಾರಶಾಹಿಗಳು ಮತ್ತು ಕುಲೀನರು ಎನ್ನಿಸಿಕೊಳ್ಳುವವರು ಯಥಾಸ್ಥಿತಿವಾದಿಗಳಾಗಿ ಬದುಕುವುವಂಥ ಈ ಸಮಾಜವನ್ನು ಕಳೆದ ಐದುಸಾವಿರ ವರ್ಷಗಳಿಂದ ಪೋಷಿಸಿಕೊಂಡು ಬರಲಾಗಿತ್ತು. ಇಂಥವರ ಸುಖಲೋಲುಪತೆಗೆ ತಕ್ಕಂತೆ ಲೈಂಗಿಕಶಿಲ್ಪಗಳಿಂದ ಕೂಡಿದ ಬೃಹತ್ ದೇವಾಲಯಗಳನ್ನು ನಿರ್ಮಿಸುವುದು ಮತ್ತು ಆ ದೇವಾಲಯಗಳನ್ನು ದೇವದಾಸಿಯರಿಂದ ಕೂಡಿದ ಸುಖದ ತಾಣಗಳನ್ನಾಗಿಸುವುದು ಜಗಜ್ಜಾಹೀರವಾಗಿತ್ತು. ಮೃಷ್ಟಾನ್ನಭೋಜನ, ಹಾಡು, ಕುಣಿತ, ರಸಿಕತೆಯೊಂದಿಗೆ ಧನಕನಕ ಸಂಪತ್ತಿನ ರಕ್ಷಣಾ ತಾಣವನ್ನಾಗಿಯೂ ದೇವಾಲಯಗಳನ್ನು ಬೆಳೆಸುತ್ತ ಪಟ್ಟಭದ್ರರು ರಾಜ್ಯಸತ್ತೆಯನ್ನು ಕೂಡ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವಂಥ ಸಾಮಥ್ರ್ಯ ಪಡೆದದ್ದನ್ನು ಬಸವಣ್ಣನವರು ಗಮನಿಸಿದರು. ರಾಜರಸ್ಥಾನದಿಂದ ಅಷ್ಟೇ ಅಲ್ಲದೆ ದೇವಸ್ಥಾನಗಳಿಂದಲೂ ಕಾಯಕಜೀವಿಗಳ ನಿರಂತರ ಶೋಷಣೆನಡೆಯುತ್ತಿರುವುದನ್ನು ಕೊನೆಗೊಳಿಸಿದರು. ದೇಗುಲಸಂಸ್ಕೃತಿಗೆ ತಿಲಾಂಜಲಿಯನ್ನಿಟ್ಟು ಭಕ್ತಿ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟರು.
ಕುಂಡಲಿಗನ ಕೀಟದಂತೆ ಮೈ ಮಣ್ಣಾಗದಂತೆ ಇದ್ದೆಯಲ್ಲಾ ಬಸವಣ್ಣ;
ಜಲದೊಳಗಣ ತಾವರೆಯಂತೆ ಹೊದ್ದಿ ಹೊದ್ದದಂತೆ ಇದ್ದೆಯಲ್ಲಾ ಬಸವಣ್ಣ;
ಜಲದಿಂದಾದ ಮೌಕ್ತಿಕದಂತೆ ಜಲವು ತಾನಾಗದಂತೆ ಇದ್ದೆಯಲ್ಲಾ ಬಸವಣ್ಣ;
ಗುಹೇಶ್ವರಲಿಂಗದಾಣತಿವಿಡಿದು ತನುಗುಣಮತ್ತರಾಗಿದ್ದ
ಐಶ್ವರ್ಯಾರಾಧಕರ ಮತವನೇನ ಮಾಡಿ ಬಂದೆಯೈ ಬಸವಣ್ಣ.
-ಅಲ್ಲಮಪ್ರಭು
ಮುಂದುವರೆಯುತ್ತದೆ…

‍ಲೇಖಕರು avadhi

29 June, 2013

267 Comments

  1. ಸಹನಾ

    “ನಿಮ್ಮದು ಮಾದಾರ ಚೆನ್ನಯ್ಯನ ಗೋತ್ರ -ಡೋಹರಕಕ್ಕಯ್ಯನ ಗೋತ್ರ ಎಂಬುದು ಗೊತ್ತಿಲ್ಲವೆ ಎಂದು ಈ ವಚನದಲ್ಲಿ ದೇವರನ್ನು ‘ಗದರಿಸಿದ್ದಾರೆ’. ಜಾತೀಯತೆಯ ಬಗ್ಗೆ ಬಸವಣ್ಣನವರಿಗೆ ಇದ್ದ ತೀವ್ರ ತಿರಸ್ಕಾರಕ್ಕೆ ಈ ವಚನ ಸಾಕ್ಷಿಯಾಗಿದೆ.” ಜಾತಿಗಳನ್ನು ನಿರಾಕರಿಸುವರು ಗೋತ್ರಗಳನ್ನೇ ನಿರಾಕರಿಸಬೇಕಿತ್ತಲ್ಲವೇ? ಇದು ಚೆನ್ನಯ್ಯನ ಗೋತ್ರ ಕಕ್ಕಯ್ಯನ ಗೋತ್ರಕ್ಕೂ ಮಹತ್ವವನ್ನು ತಂದುಕೊಡುವ ಹೇಳಿಕೆ ಎನ್ನುವುದು ಎದ್ದು ಕಾಣುತ್ತದೆ. ಅಂದರೆ ಈ ಗೋತ್ರಗಳೂ (ಮತ್ತು ಅವರ ಜಾತಿಗಳೂ) ಶ್ರೇಷ್ಟ ಎಂದಲ್ಲವೇ ಇದರ ಅರ್ಥ ಈ ಗೋತ್ರ ಜಾತಿಗಳೆಲ್ಲವೂ ಇರಬಾರದೆಂದೇ? ಯಾವುದೇ “ಚೌಕಟ್ಟುಗಳನ್ನು” ತಲೆಯಲ್ಲಿಟ್ಟು ಕೊಳ್ಳದೆ ಓದಿದರೆ ನೇರವಾದ ಅರ್ಥ ಇಷ್ಟೇ ಸ್ಪುರಿಸುತ್ತದೆ.
    ದರ್ಗಾರ ಈ ಸಾಲುಗಳನ್ನು ಬಹು ಎಚ್ಚರಿಕೆಯಿಂದ ಓದಬೇಕಾಗಿದೆ:
    “ಪುರೋಹಿತಶಾಹಿಗಳು, ಅಧಿಕಾರಶಾಹಿಗಳು ಮತ್ತು ಕುಲೀನರು ಎನ್ನಿಸಿಕೊಳ್ಳುವವರು ಯಥಾಸ್ಥಿತಿವಾದಿಗಳಾಗಿ ಬದುಕುವುವಂಥ ಈ ಸಮಾಜವನ್ನು ಕಳೆದ ಐದುಸಾವಿರ ವರ್ಷಗಳಿಂದ ಪೋಷಿಸಿಕೊಂಡು ಬರಲಾಗಿತ್ತು. ಇಂಥವರ ಸುಖಲೋಲುಪತೆಗೆ ತಕ್ಕಂತೆ ಲೈಂಗಿಕಶಿಲ್ಪಗಳಿಂದ ಕೂಡಿದ ಬೃಹತ್ ದೇವಾಲಯಗಳನ್ನು ನಿರ್ಮಿಸುವುದು ಮತ್ತು ಆ ದೇವಾಲಯಗಳನ್ನು ದೇವದಾಸಿಯರಿಂದ ಕೂಡಿದ ಸುಖದ ತಾಣಗಳನ್ನಾಗಿಸುವುದು ಜಗಜ್ಜಾಹೀರವಾಗಿತ್ತು. ಮೃಷ್ಟಾನ್ನಭೋಜನ, ಹಾಡು, ಕುಣಿತ, ರಸಿಕತೆಯೊಂದಿಗೆ ಧನಕನಕ ಸಂಪತ್ತಿನ ರಕ್ಷಣಾ ತಾಣವನ್ನಾಗಿಯೂ ದೇವಾಲಯಗಳನ್ನು ಬೆಳೆಸುತ್ತ ಪಟ್ಟಭದ್ರರು ರಾಜ್ಯಸತ್ತೆಯನ್ನು ಕೂಡ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವಂಥ ಸಾಮಥ್ರ್ಯ ಪಡೆದದ್ದನ್ನು ಬಸವಣ್ಣನವರು ಗಮನಿಸಿದರು. ರಾಜರಸ್ಥಾನದಿಂದ ಅಷ್ಟೇ ಅಲ್ಲದೆ ದೇವಸ್ಥಾನಗಳಿಂದಲೂ ಕಾಯಕಜೀವಿಗಳ ನಿರಂತರ ಶೋಷಣೆನಡೆಯುತ್ತಿರುವುದನ್ನು ಕೊನೆಗೊಳಿಸಿದರು. ದೇಗುಲಸಂಸ್ಕೃತಿಗೆ ತಿಲಾಂಜಲಿಯನ್ನಿಟ್ಟು ಭಕ್ತಿ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟರು.”- ಬಹುಷಃ ಇದನ್ನರಿತೇ (ವಚನಕಾರರ ಆಶಗಳನ್ನು ಈಡೇರಿಸಲೆಂದೇ) ಘಸ್ನಿ, ಮಲ್ಲಿಕಾಫರರು ದೇವಾಲಯಗಳ ಮೇಲೆ ದಾಳಿ ಮಾಡಿ ಅವನ್ನು ನಾಶಪಡಿಸಿ ಕಾಯಕ ಜೀವಿಗಳನ್ನು ಶೋಷಿತರನ್ನು ಬಿಡುಗಡೆಗೊಳಿಸುವ ಕಾರ್ಯವನ್ನು ಮಾಡಿದರೆಂದೆನಿಸುತ್ತದೆ. ಅವರೂ ನಿಜ ಅರ್ಥದಲ್ಲಿ ‘ಶರಣ’ಚಳುವಳಿಯ ಭಾಗಿಗಳೇ ಎಂದಾಯಿತು!!. ರಂಜಾನ್ ದರ್ಗಾ ರವರೆ ವಚನಕಾರರ ಈ ವಚನಗಳನ್ನು ಅವುಗಳ ನಿಜ ಅರ್ಥದಿಂದ ಬೇರ್ಪಡಿಸಿ ನಿಮ್ಮೊಳಗಿರುವ “ಐಡಿಯಾಲಜಿ”ಗೆ ಧ್ವನಿ ನೀಡುವಂತೆ ಬಹಳ ಜಾಣ್ಮೆಯಿಂದ ನಿರೂಪಿಸುತ್ತಾ ಹೋಗುತ್ತಿದ್ದೀರಿ. ಶರಣರೊಪ್ಪೊಬಹುದೇನೋ!! ಬೌದ್ದಿಕವಲಯಕ್ಕೆ ಈ ಜಾಣ್ಮೆಯ ಅರಿವಾಗುವುದಿಲ್ಲವೆಂದು ನಿಮ್ಮ ನಂಬುಗೆಯೇ?

    • Annapoorna

      ವಚನಕಾರು ಜಾತಿ, ಹೊಲೆ, ಗೋತ್ರ, ಆಚಾರಗಳು ಹೋಗಬೇಕು ಅಂತ ಎಲ್ಲಿಯೂ ಹೇಳಿಲ್ಲ. ಇವೆಲ್ಲದುರ ಬಗ್ಗೆ ಅವರಿಗೆ ತಕರಾರುಗಳಿದ್ದವು ನಿಜ, ಆದರೆ ಅವುಗಳ ಉದ್ದೇಶ ಹಾಗೂ ಸ್ವರೂಪ ರಂಜಾನ್ ದರ್ಗಾ ಅವರು (mis)interpret ಮಾಡಿರುವ ಹಾಗೆ ಇರಲಿಲ್ಲ. ಎಲ್ಲಿಯೂ ವಚನಕಾರರು ಜಾತಿ/ಕುಲ ಇರಕೂಡದು ಅಂತ ಹೇಳಿಲ್ಲ, ಜಾತಿ ಬಗ್ಗೆ ಗರ್ವ ಬೇಡ ಅಂತ ಹೇಳಿದ್ದಾರೆ. ಹೊಲೆ ಇಲ್ಲ ಅಥವಾ ಹೊಲೆ ಇರಕೂಡದು ಅಂತ ಹೇಳಿಲ್ಲ, ಹೊಲೆಯ ಬಗ್ಗೆ ಜಿಜ್ಞಾಸೆ ಮಾಡಿದ್ದಾರೆ. ವಚನಗಳನ್ನು ಐದಿಯಾಲಿಜಿ ಇಲ್ಲದೆ, ನಿಷ್ಪಕ್ಷಪಾತವಾಗಿ ಸ್ಟಡಿ ಮಾಡಿದರೆ, ಇಂತಹ ಅನೇಕ ಸತ್ಯಗಳು ಹೊಡೆದು ಕಾಣುತ್ತವೆ.

      • ಸಹನಾ

        ನಾನು ಇಲ್ಲಿ ‘ಐಡಿಯಾಲಜಿ’ ಎಂದದ್ದು ‘ಕಾಫಿರರ’ ದೇವಸ್ಥಾನಗಳ ಬಗ್ಗೆ ಇರುವ “ಇಸ್ಲಾಮಿಕ್ ಐಡಿಯಾಲಜಿ”ಯ ಧೋರಣೆಯನ್ನು. ದರ್ಗಾರವರು ನಮ್ಮೊಳಗಿರುವ ಈ ‘ಐಡಿಯಾಲಜಿ’ಯನ್ನು ವಚನಗಳನ್ನು misinterpretation ಮಾಡುವ ಮೂಲಕ ಜಾಣ್ಮೆಯಿಂದ ಹೊರಹಾಕುತ್ತಿದ್ದಾರೆ.

        • santosh anand

          Your so called IDEOLOGY applies to priestly classes of India who have been exploiting the innocent in the name of religions and rituals also

        • Ramjan Darga

          ಸಹನಾ ಅವರೆ ದೇವರನ್ನು ನಂಬುವ ಹಿಂದುಗಳು ಕಾಫಿರರಲ್ಲ. ದೇವರನ್ನು ನಂಬದವರು ಕಾಫಿರರು ಎಂಬುದು ಇಸ್ಲಾಮಿಕ್ ಐಡಿಯಾಲಾಜಿ. ತಮ್ಮ ಅಂತಃಸಾಕ್ಷಿಯನ್ನು ನಂಬದವರೇ ಕಾಫಿರರು. (ತಮ್ಮನ್ನು ನಂಬದವರೇ ನಿರೀಶ್ವರವಾದಿಗಳೆಂದು ವಿವೇಕಾನಂದರು ಕರೆದಿದ್ದಾರೆ.) ‘ನಿಮ್ಮ ಸಮುದಾಯದವರು ತಪ್ಪು ಮಾಡುತ್ತಿದ್ದಗ್ಯೂ ನೀವು ಅವರನ್ನು ಬೆಂಬಲಿಸಿದಾಗ ಅದು ಕೋಮುವಾದವಾಗುತ್ತದೆ’ ಎಂದು ಮುಹಮ್ಮದ್ ಪೈಗಂಬರರು 15 ಶತಮಾನಗಳ ಹಿಂದೆ ಹೇಳಿದ್ದಾರೆ. ಹಿಂದು ಮುಸ್ಲಿಮರು ಒಂದಾಗಿ ಎರಡೂ ಧರ್ಮಗಳ ಹೆಸರಲ್ಲಿ ಕೋಮುವಾದವನ್ನು ಹಬ್ಬಿಸುವ ದುಷ್ಕರ್ಮಿಗಳ ಜೊತೆ ಹೋರಾಡುವುದು ಇಂದಿನ ಅವಶ್ಯಕತೆಯಾಗಿದೆ.
          I am firmly persuaded that without the help of practical Islam, theories of Vedantism, however fine and wonderful they may be, are entirely valueless to the vast mass of mankind… For our own motherland a junction of two great systems, Hinduism and Islam – Vedanta brain and Islam body- is the only hope. I see in my mind’s eye the future perfect India rising out of this chaos and strife, glorious and invincible, with Vedanta brain and Islam body. (VI. 416)
          -Swami Vivekananda

          • ಸಹನಾ

            ಇಸ್ಲಾಂ (ಪವಿತ್ರ ಖುರಾನ್) ಪ್ರಕಾರ ‘ಅಲ್ಲಾ’ನನ್ನು ಬಿಟ್ಟು ಉಳಿದ ಯಾರನ್ನಾದರೂ ಯಾವುದನ್ನಾದರೂ ಆರಾಧಿಸುವುವರರು ಕಾಫಿರರೇ.. ಅಂದ ಹಾಗೆ ‘ಅಲ್ಲಾ’ ಮತ್ತು ‘ದೇವರು’ ಒಂದೇ ಅಲ್ಲ. ಅಂದರೆ ಶಬ್ದಾರ್ಥಕ್ಕೆ ಸಂಬಂದಿಸಿದಂತೆ ಒಂದೇ ಎನಿಸಿದರೂ ಭಾರತೀಯ ಸಂಪ್ರದಾಯಗಳಲ್ಲಿನ ‘ದೇವರ’ ಕಲ್ಪನೆಗೂ ಇಸ್ಲಾಂನಲ್ಲಿರುವ ‘ಅಲ್ಲಾ’ ನ ಪರಿಕಕಲ್ಪನೆಗೂ ಸಂಬಂದವಿಲ್ಲ. ಇದು ಮೂರೂ ಸೆಮಿಟಿಕ್ ರಿಲಿಜನ್ ಗಳಲ್ಲಿರುವ (ಇಸ್ಲಾಂ, ಕ್ರಿಶ್ಚಿಯಾನಿಟಿ ಮತ್ತು ಯಹೂದಿ) ಒಂದು ಸಾಮ್ಯತೆ. ಇವುಗಳ ಪ್ರಕಾರ ಇಡೀ ಜಗತ್ತಿನಲ್ಲಿರುವ ಚರಾಚರವೂ ಅಲ್ಲಾ/ಗಾಡ್ ನ ಸೃಷ್ಟಿ ಯಾಗಿದ್ದು ಈ ಸೃಷ್ಟಿಯ (ಜಗತ್ತಿನ) ಒಳಗೆ ಆತನಿಲ್ಲ. ಆತನ ಇಚ್ಚೆ ಮತ್ತು ಉದ್ದೇಶದಂತೆ ಈ ಜಗತ್ತು ನಡೆಯುತ್ತಿದೆ/ನಡೆಯಬೇಕು. ಆದರೆ ಭಾರತೀಯ ಸಂಪ್ರದಾಯಗಳ ದೇವರುಗಳ ಕಲ್ಪನೆ ಕುರಿತು ವಿಭಿನ್ನ ಸಂಪ್ರದಾಯಗಳಲ್ಲಿ ವಿಭಿನ್ನ ಪರಿಕಲ್ಪನೆ ಇದೆ. ಎಷ್ಟೇ ವಿಭಿನ್ನತೆ ಇದ್ದರೂ ಆತ/ಅವರುಗಳು ಈ ಜಗತ್ತಿನಿಂದ ಹೊರಗಿದ್ದು ಜಗತ್ತನ್ನು ನಿಯಂತ್ರಿಸವವ ಎನ್ನುವ ಕಲ್ಪನೆಯಂತೂ ಇಲ್ಲ. ಈ ಜಗತ್ತಿನ ಚರಾಚರಗಳಲ್ಲೂ ಆತನಿದ್ದಾನೆ. ಹಾಗಾಗಿಯೇ ಇಲ್ಲಿರುವ ಸಕಲ ವಸ್ತುಗಳೂ ದೈವವೆಂದು ಪೂಜಿಸುವ ಸಾಧ್ಯತೆ ಈ ಸಂಪ್ರದಾಯಗಳವರಿಗೆ ಸಾಧ್ಯವಾಗುತ್ತದೆ. ಅದೇ ಸೆಮೆಟಿಕ್ ರಲಿಜನ್ ಗಳ ಪ್ರಕಾರ ಸೃಷ್ಟಿಕರ್ತ ತಾನು ಸೃಷ್ಟಿಸುವುದರೊಳಗೆ ಇರುವುದಿಲ್ಲ. ಅದರಿಂದ ಹೊರಗೆ ಇರುತ್ತಾನೆ. ಈ ಸೆಮೆಟಿಕ್ ರಿಲಿಜನ್ ಗಳಲ್ಲಿ ಆರಾಧನೆ ಎಂದರೇನೆ ಸೃಷ್ಟಿಕರ್ತನಿಗೆ ಸಲ್ಲಿಸಬೇಕಿರುವಂತದ್ದು.(ಮತ್ತು ಆತನ ಇಚ್ಚೆಯ/ನಿಯಮಗಳನುಸಾರ ಈ ಜಗತ್ತಿನಲ್ಲಿ ಜೀವಿಸಿದಲ್ಲಿ ಅಲ್ಲಾನ ಸ್ವರ್ಗಪ್ರಾಪ್ತಿ. ಇಲ್ಲದಿದ್ದರೆ ಶಾಶ್ವತ ನರಕವೇ ಗತಿ) ಆತನ ಸೃಷ್ಟಿಗೆ ಅಲ್ಲ. ಹಾಗಾಗಿ ಈ ಜಗತ್ತಿನ ಒಳಗೆ ಇರುವ ಯಾರಿಗೇ/ಯಾವುದಕ್ಕೇ ಆದರೂ ಆರಾಧನೆ ಮಾಡಿದರೆ ಅದು ಸುಳ್ಳು ಆರಾಧನೆ (superstition) ಮತ್ತು ಶಾಶ್ವತ ನರಕಕ್ಕೆ ದಾರಿ. ಸೈತಾನ್ ಮತ್ತು ಆತನ ಅನುಯಾಯಿಗಳು (ಪ್ರೊಟೆಸ್ಟಂಟರ ಪ್ರಕಾರ ಕ್ಯಾಥೋಲಿಕ್ ಪ್ರೀಸ್ಟ್ ಗಳು, ಹಾಗೂ ತಮ್ಮಂತಹ ಭಾರತೀಯ ಬುದ್ದಿಜೀವಿಗಳ ಪ್ರಕಾರ ಬ್ರಾಹ್ಮಣ ಪುರೋಹಿತರು) ಜನರನ್ನು ದಾರಿ ತಪ್ಪಿಸಿ ಸೃಷ್ಟಿಕರ್ತನ ಆರಾಧನೆಯನ್ನು ತಪ್ಪಿಸಿ ಸುಳ್ಳು ಆರಾಧನೆಗಳನ್ನು ಪ್ರಚೋಧಿಸುತ್ತಿರುತ್ತಾರೆ. ಆ ಮೂಲಕ ಜನರನ್ನು ದಾರಿ ತಪ್ಪಿಸಿ ‘ನಿಜದೇವರಿಂದ’ ಜನರನ್ನು ವಿಮುಖವಾಗಿಸಿ ಸುಳ್ಳುದೇವರುಗಳನ್ನು (ಸೈತಾನ್ ಅನ್ನು)ಆರಾಧಿಸುವಂತೆ ಪ್ರಚೋಧಿಸಿ ಜನರನ್ನು ಶಾಶ್ವತ ನರಕಕ್ಕೆ (ನರಕ ಸೈತಾನನ ಸಾಮ್ರಜ್ಯ) ಕಳುಹಿಸುತ್ತಿರುತ್ತಾರೆ. “ವೈಧಿಕ ಮತ್ತು ಬ್ರಾಹ್ಮಣ ಪುರೋಹಿತಶಾಹಿಗಳ” ಕುರಿತ ಈ ಸೆಮಿಟಿಕ್ (ಇಸ್ಲಾಮಿಕ್) ಐಡಿಯಾಲಜಿಯನ್ನೇ ನೀವು ವಚನಕಾರರ ಹೆಸರಿನಲ್ಲಿ ಉಚ್ಚರಿಸುತ್ತಿದ್ದೀರಿ.
            ದೇವರನ್ನು ನಂಬದವರು ಕಾಫಿರರು ಎನ್ನುತ್ತೀರಿ (ಜಾಣ್ಮೆಯಿಂದ ಅಂತಸಾಕ್ಷಿ ಎಂದು ಸೇರಿಸುತ್ತೀರಿ ಹಾಗೆ ಇಸ್ಲಾಂನಲ್ಲಿ ಇಲ್ಲದಿದ್ದರೂ) ದೇವರಲ್ಲಿ ನಂಬಿಕೆ ಇಲ್ಲದ ನೂರಾರು ನಾಸ್ತಿಕ ಮಾನವತಾ ವಾದಿಗಳು ನಮ್ಮ ನಡುವೆ ಇದ್ದಾರೆ ಅವರೆಲ್ಲರೂ ಕಾಫಿರರೇ???
            ತಮ್ಮ ವಾದದ ಬಗ್ಗೆ ತಕರಾರು ಎತ್ತುತ್ತಿರುವಾಗ ಪ್ರವಾದಿಗಳನ್ನು ಮತ್ತು ವಿವೇಕಾನಂದರವರ ಹೆಸರುಗಳನ್ನು ಮಧ್ಯ ಎಳತರುವುದೇಕೆ? ನಿಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಅವರ ಹೆಸರುಗಳ ಗುರಾಣಿ ಏಕೆ ಬಳಸುತ್ತೀರಿ?
            ಮೂಲತಃ ಮೇಲಿನ ನನ್ನ ಮುಖ್ಯ ಪ್ರಶ್ನೆ ವಚನಕಾರರು ಬಳಸಿರುವ “ಗೋತ್ರಗಳ” ಬಗ್ಗೆ ಅದನ್ನು ಬದಿಗಿರಿಸಿದ್ದೇಕೆ?

          • Ramjan Darga

            ನೀವು ಇಸ್ಲಾಂ ಅನ್ನು ಚರ್ಚೆಗೆ ತಂದಾಗ, ಅದಕ್ಕೆ ಉತ್ತರ ಕೊಟ್ಟರೆ ವಿತಂಡ ವಾದ ಏಕೆ ಮಾಡುತ್ತೀರಿ. ನಾನು ಮಾಡುತ್ತಿರುವುದು ಶರಣರ ಚಿಂತನೆಗಳ ಕುರಿತ ಚರ್ಚೆ. ಶರಣರ ದೇವರು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣನಾಗಿದ್ದಾನೆ. ಆತನ ಬಳಿಗೆ ಹೋಗಲು ಸಾಧ್ಯವಿಲ್ಲ; ಆತನನ್ನು ನೋಡಲು ಸಾಧ್ಯವಿಲ್ಲ; ಆತನನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಮತ್ತು ಆತನ ಆಳ ಎತ್ತರಗಳನ್ನು ಅಳೆಯಲು ಸಾಧ್ಯವಿಲ್ಲ. ಶರಣರ ದೇವರಿಗೆ ಗುಡಿ ಗುಂಡಾರಗಳಿಲ್ಲ. ಇಡೀ ಜಗತ್ತಿನಲ್ಲಿ ದೇವಸ್ಥಾನಗಳಿಲ್ಲದ ಧರ್ಮ ಎಂದರೆ ಲಿಂಗಾಯತ ಧರ್ಮ. ತನ್ನ ಕಾಲದ ಶರಣರಾದ ಮಾದಾರ ಚೆನ್ನಯ್ಯ ಮತ್ತು ಡೋಹಾರ ಕಕ್ಕಯ್ಯನವರನ್ನು ಬಸವಣ್ಣನವರು ಪುರಾಣದ ಶಿವನ ಗೋತ್ರಪುರುಷರನ್ನಾಗಿಸುವುದರ ಅರ್ಥವೇನು? ಗೋತ್ರಗಳಿಂದುಂಟಾಗುವ ಅಹಂಕಾರ ಮರ್ದನವೇ ಬಸವಣ್ಣನವರ ಉದ್ದೇಶವಾಗಿತ್ತು. ಸಮಗಾರ ಹರಳಯ್ಯನವರ ಮಗ ಮತ್ತು ಮಧುವರಸ ಮಗಳಿಗೆ ಮಕ್ಕಳಾಗಿದ್ದರೆ ಅವರು ಕೇವಲ ಮನುಷ್ಯರಾಗಿರುತ್ತಿದ್ದರು.
            ನಡೆಯುವುದೊಂದೇ ಭೂಮಿ/ ಕುಡಿಯುವುದೊಂದೇ ನೀರು/
            ಸುಡುವಗ್ನಿಯೊಂದೆ ಇರುತಿರಲು ಕುಲಗೊತ್ರ/
            ನಡುವೆ ಎತ್ತಣದು? ಸರ್ವಜ್ಞ//
            ಎಂಬುದು ಶರಣರ ಪರಂಪರೆಯಾಗಿದೆ. ಹೀಗೆ ಶರಣರು ಕುಲಗೋತ್ರಗಳನ್ನು ಅಲ್ಲಗಳೆದಿದ್ದಾರೆ.

          • ಸಹನಾ

            ಇವೆಲ್ಲವನ್ನೂ ವಚನಕಾರರು ಬಂದು ನಿಮ್ಮ ಕಿವಿಯಲ್ಲಿ/ಕನಸಲ್ಲಿ ಹೇಳಿದರೇ? ಇದ್ದುದನ್ನು ಇದ್ದಂತೆ ನಿರೂಪಿಸಿದರೆ ಅದು ವೈಜ್ಞನಿಕ ನಿರೂಪಣೆ. ಮಹನೀಯರ ಎರಡು ಸಾಲುಗಳನ್ನು ಉಲ್ಲೇಖಿಸಿ ಆ ಸಾಲುಗಳಿಗೆ ಸಂಬಂದವೇ ಇಲ್ಲದ್ದನ್ನು ಹೇಳುತ್ತಿದ್ದರೆ ತಮ್ಮ ಐಡಿಯಾಲಜಿಯನ್ನು ಅವರ ಮೇಲೆ ಹೇರಿದಂತೆ ಮಾತ್ರವಲ್ಲ ಅದು ಅವೈಜ್ಞಾನಿಕ ಅಲ್ಲವೇ????
            ಕೊನೆಗೆ ಸರ್ವಜ್ಞನನ್ನೂ ಬಿಡಲಿಲ್ಲವಲ್ಲಾ!!!! ಅವನೂ ಶಿವಶರಣನೆಂದು (ತಮ್ಮಂತಹ) ಗೊತ್ತಿರಲಿಲ್ಲ!!!! ಮಾಹಿತಿಗೆ ಧನ್ಯವಾದಗಳು!!….

          • Ramjan Darga

            ಲಿಂಗಕ್ಕೆ ತೋರಿಸುತ/ ನುಂಗುವಾತನೆ ಕೇಳು/
            ಲಿಂಗವುಂಬುವುದೇ? ಇದನರಿತು ಕಪಿಯೇ ನೀ/
            ಜಂಗಮಕೆ ನೀಡು, ಸರ್ವಜ್ಞ//
            ಎಂದು ಹೇಳುವ ಕ್ರಾಂತಿಕಾರಿ ಸರ್ವಜ್ಞ ಶಿವಶರಣನಲ್ಲವೆ? ಶಿವಶರಣರೆಲ್ಲ 12ನೇ ಶತಮಾನದಲ್ಲೇ ಹುಟ್ಟಿರಬೇಕೆ?

          • ಸಹನಾ

            “ಲಿಂಗಕ್ಕಿಟ್ಟ ನೈವೇದ್ಯವನ್ನು ಅದು ತಿನ್ನುವುದಿಲ್ಲ ಅದಕ್ಕೆ ತೋರಿಸಿ ನೀವೇ ತಿನ್ನುವಿರಿ. ಅದ್ಕ್ಕಿಡುವ ಬದಲಿಗೆ ‘ತಿನ್ನುವ ಜೀವಿಗಳಿಗಿಡಿ’ …” ನನಗೆ ಇಲ್ಲಿ ವಿಚಾರವಾದೀ ನಾಸ್ತಿಕ ಸರ್ವಜ್ಞನಷ್ಟೇ ಕಾಣುತ್ತಿದ್ದಾನಪ್ಪ!!!!

          • Amaresh

            ಸಹನಾ ಅವರೇ, ಸರ್ವಜ್ಞನ ವಚನಗಳನ್ನು ರಂಜಾನ್ ದರ್ಗಾ ಅವರು ಎಷ್ಟರ ಮಟ್ಟಿಗೆ ನೋಡಿದ್ದಾರೆ ಅಂತ ನನಗೆ ತಿಳಿದಿಲ್ಲ. ಸರ್ವಜ್ಞನ ವಚನಗಳಲ್ಲಿ ಹಿತನುಡಿಗಳು ಅನೇಕ ಇವೆ. ಹಾಗೆಯೇ ರಂಜಾನ್ ಮೊದಲಾದ ಪ್ರಗತಿಪರರು ಜೀವ ವಿರೋಧಿ ಎಂದು ಹೇಳುವ ಅನೇಕ ವಿಚಾರಗಳೂ ಇವೆ. ನಿಮಗೆ ಆಶ್ಚರ್ಯವಾಗಬಹುದು, ಸರ್ವಜ್ಞ ತುರುಕರು ನೆರೆಹೊರೆಯಲ್ಲಿದ್ದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಅಂತ ಒಂದು ವಚನದಲ್ಲಿ ಹೇಳಿದ್ದಾನೆ! ಅಷ್ಟೇ ಅಲ್ಲ ಹಲವು ಜಾತಿಗಳನ್ನು ನಿಂದಿಸಿದ್ದಾನೆ. ರಂಜಾನ್ ಅವರು ಪುರುಸೊತ್ತು ಸಿಕ್ಕಾಗ ಅಂತಹ ವಚನಗಳ ಕಡೆ ಗಮನ ಹರಿಸಬಹುದು.

          • Ramjan Darga

            ‘ಉಂಬ ಜಂಗಮ ಬಂದರೆ ನಡೆ ಎಂಬರು; ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ’ ಎಂದು ಹೇಳುವ ಬಸವಣ್ಣನವರು ನಾಸ್ತಿಕರೆ ಸಹನಾ ಅವರೆ?

          • ಸಹನಾ

            sarvajna never prayed any of the god in his vacanas but basavanna always do pray dear mr darga sir!!

          • Amaresh

            ಪ್ರಿಯ ರಂಜಾನ್ ದರ್ಗಾ, ಸರ್ವಜ್ಞನ ವಚನಗಳ ಕೆಲವು ಸಾಲುಗಳನ್ನು ನಿಮ್ಮ ವಾದಕ್ಕೆ ಫಿಟ್ ಮಾಡಲು ಹೊರಟಿದ್ದೀರಿ. ಕೀಬೋರ್ಡ್ ಕುಟ್ಟಿಯಾದ ಮೇಲೆ ಒಮ್ಮೆ ಹೋಗಿ ಸರ್ವಜ್ಞನ ವಚನ ಸಂಗ್ರಹವನ್ನು ಗಮನದಿಂದ ನೋಡಿ. ಸರ್ವಜ್ಞ ಒಂದು ಕಡೆ ಅವನು ಬ್ರಾಹ್ಮಣರು ಸಮರ್ಥರಾಗಿಬಿಟ್ಟರೆ ಸಮಾಜಕ್ಕೆ ಅಪಾಯವೆನ್ನುತ್ತಾನೆ, ಇನ್ನೊಂದು ಕಡೆ ಅವರನ್ನು ಮೆಚ್ಚಿ ಹೊಗಳುತ್ತಾನೆ. ಒಂದು ಕಡೆ ತುರುಕರು ನೆರೆಹೊರೆಯಲ್ಲಿದ್ದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಎನ್ನುತ್ತಾನೆ, ಇನ್ನೊಂದು ಕಡೆ ಶೂದ್ರರನ್ನು ತೆಗಳುತ್ತಾನೆ. ಒಂದು ಕಡೆ ಶ್ರವಣರನ್ನು ದೂಷಿಸುತ್ತಾನೆ ಮತ್ತೊಂದು ಕಡೆ ಅಕ್ಕಸಾಲಿಗರನ್ನು. ಜಾತಿಯಲ್ಲಿ ಹುಟ್ಟಿ ಶಿವನಿಗೆ ಶರಣೆನ್ನದವನು ಮಾದಿಗ ಎಂದೂ ಹೇಳುತ್ತಾನೆ.

          • Ramjan Darga

            ತುರುಕರನ್ನು ಟೀಕಿಸಿದ್ದು ಎಲ್ಲಿದೆ ತೋರಿಸಿ. ಏಕೆ ಸುಳ್ಳು ಹೇಳುವಿರಿ?

          • Amaresh

            Open any comprehensive collection of Sarvajna’s vachanas and study them. You will find the vachana which says “ತುರುಕರು ನೆರೆಹೊರೆಯಲ್ಲಿದ್ದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್”.

          • ವಿಶ್ವಾರಾಧ್ಯ ಸತ್ಯಂಪೇಟೆ

            ಒಬ್ಬ ವಿಚಾರವಾದಿ ವಚನಕಾರನನ್ನು ಹೇಗೆಲ್ಲ ಹದಗೆಡಿಸಬಹುದು ಎಂಬುದಕ್ಕೆ ತಾವು ನಂಬಿರುವ ವಚನದ ಸಾಲುಗಳೇ ಸಾಕ್ಷಿಯಾಗಿವೆ. ಬಹುಶಃ ಈ ವಚನವನ್ನು ಕವಿಯ ಹೆಸರಿನ ಮೇಲೆ ಮತೀಯವಾದಿಗಳು ತುರುಕಿದ್ದಾರೆ. ಇಂಥವುಗಳನ್ನು ವಿವೇಚನೆ ಉಳ್ಳ ಯಾರೇ ಆದರೂ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ಅನರ್ಥವಾಗುತ್ತದೆ.

          • Ramjan Darga

            ಆ ತ್ರಿಪದಿಯನ್ನು ಪೂರ್ಣವಾಗಿ ಕೊಡಿ ನೋಡುವಾ. ಏಕೆ ಸುಳ್ಳು ಹೇಳುವಿರಿ?
            ಯಾರು ಆ ತ್ರಿಪದಿಯನ್ನು ಸಂಗ್ರಹಿಸಿದ್ದಾರೆ. ಆ ತ್ರಿಪದಿಯ ಸಂಖ್ಯೆಯೊಂದಿಗೆ ಕೊಡಿ. ರೆವರೆಂಡ್ ಉತ್ತಂಗಿ ಚೆನ್ನಪ್ಪನವರ ಸಂಪಾದನೆಯಲ್ಲಿ ಇದೆಯೆ?

          • Amaresh

            ದರ್ಗಾ ಸರ್, ಸುಳ್ಳು ಹೇಳುತ್ತಿರುವುದು ಯಾರು ಅಂತ ಅವಧಿಯ ಪ್ರಾಜ್ಞ ಓದುಗರಿಗೆ ಈಗಾಗಲೇ ಗೊತ್ತಾಗಿದೆ. ನನ್ನನ್ನು ಸುಳ್ಳ ಎಂದು ಪಡೆ ಪಡೆ ಕರೆದು ನನ್ನನ್ನು ಅಧೀರನಾಗಿಸುವ ಯತ್ನ ಬಿಡಿ. ನಿಮಗೆ ಆ ತ್ರಿಪದಿ ಬೇಕಿದ್ದರೆ ಯಾವುದಾದರೂ ಸಂಕಲನದಲ್ಲಿ ಹುಡುಕಿ ಖಂಡಿತ ಸಿಗುತ್ತದೆ. ನಾನು ಅದನ್ನು ನೋಡಿದ್ದು ರೂಪಾಯಿ ೧೦ ಬೆಲೆಯ ಸರ್ವಜ್ಞನ ವಚನಗಳು ಎಂಬ ಕಿರುಹೊತ್ತಗೆಯಲ್ಲಿ. ನನ್ನ ಪುಸ್ತಕಸಂಗ್ರಹದಲ್ಲಿ ಆ ಹೊತ್ತಗೆ ಸಿಕ್ಕರೆ, ಖಂಡಿತ ನಿಮಗೆ ಪೋಸ್ಟ್ ಮಾಡುತ್ತೇನೆ.

          • jayateerth joshi

            Sarvajna also criticised brahmins in his vachanas. According ur great logic? that must also be true

          • Amaresh

            ವಿಶ್ವಾರಾಧ್ಯ ಸರ್, ವಿಚಾರವಾದಿ ವಚನಕಾರರನು ಹೇಗೆಲ್ಲ ಹದಗೆಡಿಸಬಹುದು ಎಂಬುದಕ್ಕೆ ದರ್ಗಾಜಿ ಅವರ ಲೇಖನ ಮಾಲೆಯೂ ಒಂದು ನಿದರ್ಶನ. ಸೆಮೆಟಿಕ್ ಐಡಿಯಾಲಜಿಯನ್ನು ವಚನದರ್ಶನದ ಮೇಲೆ ದರ್ಗಾಜಿ ಹೇರಿದ್ದನ್ನು ವಿವೇಚನೆ ಉಳ್ಳ ಯಾರೇ ಆದರೂ ಅರ್ಥ ಮಾಡಿಕೊಳ್ಳಬಲ್ಲರು.

          • ವಿಶ್ವಾರಾಧ್ಯ ಸತ್ಯಂಪೇಟೆ

            ಅಮರೇಶ ಅವರೆ, ಒಂದು ಕಡೆ ತಾವು ಬಸವಾದಿ ಶರಣರನ್ನು ವಿಚಾರವಾದಿಗಳೆಂದು ಕರೆಯುತ್ತೀರಿ. ಆದರೆ ಅದೇ ದರ್ಗಾ ಅವರು ವಚನಕಾರರ ಮೂಲ ವಿಚಾರಗಳನ್ನು ಸರಳೀಕರಿಹೇಳಿದರೆ ತಮಗೆ ಮಾತ್ರ ಅದ್ಯಾವುದೋ ಐಡಿಯಾಲಜಿಯಾಗಿ ಕಾಣಿಸುತ್ತದೆ. ಇದನ್ನೂ ಸ್ವಂತ ವಿಚಾರ ಮಾಡುವ ಶಕ್ತಿಯುಳ್ಳ ಯಾರಾದರೂ ಅರಿಯುವ ಮಾತೆ ಆಗಿದೆ.

          • santosh anand

            Vishwaradhy sir these people are prejudiced towards Darga sir. Thats why they see semetic and this and that in his writings. If anybody would have written the same article they would hv shut their mouth. It shows how their mind polluted. they too have semetic origin and religion

      • santosh anand

        It is your illusion and ignorance. Nothing more than that. Its ur individual opinion

        • ಸಹನಾ

          Why not your’s be so? what makes your claims so scientific and mine is not. You simply making statements without any logical derivations but still you claim my observations are illusions and ignorrance!!! Actually your statements are your self experiance. Instead you better try to prove your case with logical arguements. Betterluck next time.

        • Ramjan Darga

          ಅಮರೇಶ್ ಅವರೆ ‘ತುರುಕರು ನೆರೆಹೊರೆಯಲ್ಲಿದ್ದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ’ ಎಂದು ಸರ್ವಜ್ಞ ಯಾವ ತ್ರಿಪದಿಯಲ್ಲಿ ಹೇಳಿದ್ದಾನೆ. ನೀವು ಯಾವ ಪುಸ್ತಕದಲ್ಲಿ ಓದಿದ್ದೀರಿ? ನೀವು ತೋರಿಸಿಕೊಟ್ಟರೆ ನಾನು ತಪ್ಪಾಯಿತೆಂದು ನಿಮ್ಮಲ್ಲಿ ಕ್ಷಮೆ ಕೇಳುವೆ. ಸರ್ವಜ್ಞನ ಆ ತ್ರಿಪದಿಯನ್ನು ಇದ್ದಕ್ಕಿದ್ದ ಹಾಗೆ ಈ ಕಾಮೆಂಟ್ ಕಾಲಂನಲ್ಲಿ ಬರೆಯುವ ತಾಕತ್ ಇದೆಯೆ? ಸರ್ವಜ್ಞನಂಥ ಮಹಾಪುರಷನನ್ನು ಹೀಗೆ ಕೀಳುಮಟ್ಟಕ್ಕೆ ಇಳಿಸುವುದು ಸರಿಯೆ? ದುಷ್ಟ ಬ್ರಾಹ್ಮಣರು ಮತ್ತು ದುಷ್ಟ ತುರುಕರು ನನ್ನ ದೃಷ್ಟಿಯಲ್ಲಿ ಸಮಾನರು. ಒಳ್ಳೆಯ ಬ್ರಾಹ್ಮಣರು ಮತ್ತು ಒಳ್ಳೆಯ ತುರುಕರು ಕೂಡ ಸಮಾನರೆ.
          ಹೊಲಗೇರಿಯಲಿ ಹುಟ್ಟಿ/ ಎಲುವಿನ ಗೃಹವಾಸ/
          ಸಲೆ ಧರ್ಮಿ ದಾರಿಯನಿಸದೆ ಹಾರುವನು/
          ಕುಲಕೆ ಹೋರಿಹನು ಸರ್ವಜ್ಞ//
          ಕೊಂದು ತಿನುವವ ಹೊಲೆಯ/ ನೆಂದು ನೀನೆನಬೇಡ/
          ನೊಂದ ಜೀವವನು ತಾನರಿದ ಹಾರುವನು/
          ಕೊಂದಾದ ಹೊಲೆಯ ಸರ್ವಜ್ಞ//

          • skpbnt

            people know who creates communal violence for their selfish needs. If such people are our neighbours nobody can live in peace

        • Ramjan Darga

          ಒಬ್ಬನಲ್ಲದೆ ಜಗಕೆ/ ಇಬ್ಬರುಂಟೆ ಮತ್ತೆ/
          ಒಬ್ಬ ಸರ್ವಜ್ಞಕರ್ತನೀ ಜಗಕ್ಕೆಲ್ಲ/
          ಒಬ್ಬನೇ ದೈವ ಸರ್ವಜ್ಞ//
          ಲಿಂಗಕ್ಕೆ ಕಡೆಯೆಲ್ಲಿ? ಲಿಂಗಿಲ್ಲದೆಡೆಯೆಲ್ಲಿ?
          ಲಿಂಗದೊಳು ಜಗವು ಅಡಗಿಹುದು, ಲಿಂಗವನು/
          ಹಿಂಗಿದವರುಂಟೆ? ಸರ್ವಜ್ಞ//

          • Amaresh

            ಎನಗೆ ದೇವರ ಒಲವರವುಂಟಮ್ಮ.
            ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?
            ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
            ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
            ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
            ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
            ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
            ವರವೆಯಮ್ಮ.

      • Ramjan Darga

        ಕೊಲುವನೆ ಮಾದಿಗ, ಹೊಲಸು ತಿಂಬುವನೆ ಹೊಲೆಯ
        ಕುಲವೇನೊ, ಅವದಿರ ಕುಲವೇನೊ?
        ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
        ನಮ್ಮ ಕೂಡಲಸಂಗನ ಶರಣರೆ ಕುಲಜರು.
        ಮಾದಿಗರು ಕೊಲ್ಲುವುದಿಲ್ಲ. ಅವರು ಸತ್ತ ಪ್ರಾಣಿಯನ್ನು ಒಯ್ದು, ಚರ್ಮ ಸುಲಿದು, ವ್ಯವಸಾಯಕ್ಕೆ ಸಂಬಂಧಿಸಿದ ಚರ್ಮದ ಉಪಕರಣಗಳನ್ನು ಮತ್ತು ಚಪ್ಪಲಿಗಳನ್ನು ತಯಾರಿಸಿ ಸಂಬಂಧಪಟ್ಟ ರೈತರಿಗೆ ಕೊಡುತ್ತಾರೆ. ರಾಶಿಯ ಸಂದರ್ಭದಲ್ಲಿ ಆಯ ಪಡೆಯುವ ಬಾರಾ ಬಲೂತಿದಾರರಲ್ಲಿ ಅವರೂ ಒಬ್ಬರಾಗಿದ್ದಾರೆ. ಆದ್ದರಿಂದ ಯಜ್ಞದಲ್ಲಿ ಕೊಲ್ಲುವವರೇ ಮಾದಿಗರು. ಹೊಲೆಯರು ದುಡಿದು ತಿನ್ನುವುದರಿಂದ ಅದು ಹೊಲಸಲ್ಲ. ಶರಣರ ಪರಿಭಾಷೆಯ ಹಿನ್ನೆಲೆಯಲ್ಲಿ ಹೊಲಸು ತಿನ್ನುವುದೆಂದರೆ ದುಡಿಯದೆ ತಿನ್ನುವುದು. ಯಜ್ಜದಲ್ಲಿ ದುಡಿಯದೆ ತಿನ್ನುವವರೆ ಹೊಲೆಯರು. ಹೀಗೆ ಕೊಲ್ಲುವವರ ಮತ್ತು ತಿನ್ನುವವರ ಕುಲವೇನೊ ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಯಜ್ಞಹಿಂಸೆ ಮಾಡದ ಮತ್ತು ದುಡಿದು ತಿನ್ನುವ ಕೂಡಲಸಂಗನ ಶರಣರೇ ನಿಜವಾದ ಕುಲಜರು ಎಂದು ಬಸವವಣ್ಣನವರು ಸಾರಿ ಹೇಳಿದ್ದಾರೆ.
        ಉಜ್ಜಯನಿಯ ರಾಜ ರಂತಿದೇವ ದೀರ್ಘಕಾಲದ ಯಜ್ಞ ಮಾಡುತ್ತ ಭಾರಿ ಪ್ರಮಾಣದಲ್ಲಿ ಪ್ರಾಣಿ ವಧೆ ಮಾಡಿದ ಕಾರಣ ಅವುಗಳಿಂದ ಹರಿದ ರಕ್ತದಿಂದ ಚರ್ಮಣ್ವತಿ ನದಿಯಾಯಿತೆಂದು ಮಹಾಕವಿ ಕಾಳಿದಾಸ ತನ್ನ ಮೇಘದೂತ ಖಂಡಕಾವ್ಯದಲ್ಲಿ ತಿಳಿಸಿದ್ದಾನೆ. ದೀರ್ಘ ಯಜ್ಞದ ಕೊನೆಯ ದಿನದ ಕೊನೆಯ ಗಳಿಗೆಯಲ್ಲಿ ಬಂದ ಬ್ರಾಹಣರಿಗೆ ಸೂಪ್ (ಸೂಪ್ ಇದು ಸಂಸ್ಕೃತ ಶಬ್ದ. ಕಾಳಿದಾಸ ಇದೇ ಶಬ್ದವನ್ನು ಬಳಸಿದ್ದಾನೆ.)ನಲ್ಲಿ ಮಾಂಸದ ತುಂಡುಗಳು ಸಿಗದೆ ಇದ್ದಾಗ ಅವರು ರಂತಿದೇವನಿಗೆ ಶಪಿಸಲು ಮುಂದಾಗುತ್ತಾರೆ. ಆಗ ರಂತಿದೇವನು ಚರ್ಮದಿಂದ ಹರಿದ ರಕ್ತದಿಂದ ಆದ ಚರ್ಮಣ್ವತಿ ನದಿಯನ್ನು ತೋರಿಸುತ್ತ. ತಾನು ಎಲ್ಲರ ಯೋಗಕ್ಷೇಮವನ್ನು ಸರಿಯಾಗಿಯೆ ನೋಡಿಕೊಂಡಿರುವುದಾಗಿಯೂ ತಡಮಾಡಿ ಬಂದ ಕಾರಣ ತಮಗೆ ಸರಿಯಾದ ವ್ಯವಸ್ಥೆಯಾಗಲಿಲ್ಲ ಹೊರತಾಗಿ ಯಾವುದೇ ರೀತಿಯ ಅಸಡ್ಡೆ ಮಾಡಿಲ್ಲವೆಂದು ಮನವಿ ಮಾಡುತ್ತಾನೆ.
        ಕೆಳಜಾತಿ ಕೆಳವರ್ಗದ ಬಹುಪಾಲು ಜನರು ಮತ್ತು ಮೇಲ್ವರ್ಗದ ಪ್ರಜ್ಞಾವಂತರು ಲಿಂಗವಂತ ಧರ್ಮವನ್ನು ಸ್ವೀಕರಿಸಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ ಬದುಕಿದರು.
        “ಯಾರಾದರೂ ಕಳ್ಳರು ಬಂದು ನಿನಗೆ ‘ಕಳ್ಳ’ ಎಂದು ಕರೆದರೆ, ‘ಕಳ್ಳ ಅಲ್ಲ’ ಎಂದು ಸಾಧಿಸಲು ಹೋಗಬೇಡ; ಬದಲಿಗೆ ನೀವೇ ಕಳ್ಳರು ಎಂದು ಹೇಳು; ಆಗ ಆ ಕಳ್ಳರು ಓಡಿ ಹೋಗುವರು” ಎಂಬ ಮಾತಿನಂತೆ ಬಸವಣ್ಣನವರು ಹೊಲೆ, ಮಾದಿಗ ಎಂದು ಬೇರೆಯವರಿಗೆ ಕರೆಯುವವರಿಗೇ ಹೊಲೆ ಮಾದಿಗರು ಎಂದು ಕರೆದಿದ್ದಾರೆ.
        ಅನ್ನಪೂರ್ಣ ಮೇಡಂ ಅವರೆ ಶರಣರು ಜಾತಿ ಹೋಗಬೇಕು ಅಂತ ಎಲ್ಲಿಯೂ ಹೇಳಿಲ್ಲ ಎಂದು ವಾದಿಸಿ ಪ್ರಯೋಜನವಿಲ್ಲ.

        • Amaresh

          “ಯಜ್ಞದಲ್ಲಿ ಕೊಲ್ಲುವವರೇ ಮಾದಿಗರು”
          This is your interpretation. There is no evidence that the Vachanakars believed in what you have interpreted. And there is no evidence that animals for being sacrificed in yajna during the times of Vachanakaras. However, many Shoodra castes and Dalits used to kill animals in sacrifices although they didn’t do any yajna. Even today, animal sacrifice is vogue in Shoodra and Dalit rituals.
          “ಹೊಲಸು ತಿನ್ನುವುದೆಂದರೆ ದುಡಿಯದೆ ತಿನ್ನುವುದು”
          This is also your interpretation and there is no evidence that the Vachanakaras believed in your interpretation. Akka Mahadevi has said hasidare bhikshaanagaluntu. It clearly says bhikshanna was how many Vachanakaras found their daily food. If we agree with your interpretation, then it follows as a logical consequence that the Vachanakaras were themselves eating holasu! Is it what you want to conclude?
          Vachanakaras were vegetarians. This vachana expresses Vachanakaras disgust at meat eaters.

          • Ramjan Darga

            ‘ಹಸಿವಾದಡೆ ಭಿಕ್ಷಾನ್ನಗಳುಂಟು’ ಎಂದು ಅಕ್ಕ ಹೇಳುವುದು ಸೌಜನ್ಯದ ಮಾತು. ಉಡುತಡಿಯಿಂದ ಕಲ್ಯಾಣಕ್ಕೆ ಬರುವಾಗಿನ ಸಂದರ್ಭದಲ್ಲಿ ಬರೆದ ವಚನವದು. ಕೇಶಾಂಬರಿಯಾಗಿ ಅಷ್ಟೊಂದು ದೂರದ ವರೆಗೆ ನಡೆದುಕೊಂಡು ಬರುವ ವಿರಾಗಿಣಿಯೊಬ್ಬಳು ಕಾಯಕ ಮಾಡುತ್ತ ಬರಲಿಕ್ಕಾಗುತ್ತದೆಯೆ? ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಯಾವರೀತಿ ಕಾಯಕ ಮಾಡಲು ಆಗುವುದಿಲ್ಲವೊ ಅದೇರೀತಿ ಇಂಥ ಸ್ಥಿತಿಯಲ್ಲಿರುವ ಹೆಣ್ಣುಮಕ್ಕಳಿಗೂ ಆಗುವುದಿಲ್ಲ. ಅಕ್ಕ ಕಲ್ಯಾಣಕ್ಕೆ ಬರುವ ವೇಳೆಯಲ್ಲಿ, ಮಧ್ಯೆ ಸಿಗುವ ಊರುಗಳಲ್ಲಿನ ಜನ ಎಷ್ಟೊಂದು ಅಭಿಮಾನದಿಂದ ಕಂಡರು ಎಂಬುವುದಕ್ಕೆ ಕಲ್ಯಾಣಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ಮಹಾಗಾವಗೆ ಹೋಗಿ ನೋಡಿ. ಆ ಕಾಲದಲ್ಲಿ ಅಲ್ಲಿನ ಜನ ಯಾವರೀತಿ ಅವರನ್ನು ನೋಡಿಕೊಂಡರು ಎಂಬುದಕ್ಕೆ ಪುರಾವೆಗಳಿವೆ. ಅಕ್ಕ ಬಳಿಸಿದ ಕೊಡವನ್ನು ಅವರು ಸ್ಮಾರಕ ಮಾಡಿ ಇಟ್ಟುಕೊಂಡಿದ್ದಾರೆ. ಜನರು ಆ ಸ್ಮಾರಕಕ್ಕೆ ಅಕ್ಕನ ಗುಡಿ ಎಂದೇ ಕರೆಯುವರು. ಅಕ್ಕನನ್ನು ಅವರು ಮಗಳಂತೆ ಕಂಡರು. ಎಲ್ಲ ಪ್ರೀತಿಯನ್ನು ಧಾರೆ ಎರೆದರು. ಇಂದಿಗೂ ಅಕ್ಕನ ಬಿಂದಿಗೆ ಸ್ಮಾರಕಕ್ಕೆ ಹೋದ ನಂತರವೆ ಶುಭಕಾರ್ಯಗಳನ್ನು ಆರಂಭಿಸುವರು. ಆ ಜನ ಅಕ್ಕನಿಗೆ ನೀಡಿದ ಗೌರವ ಮತ್ತು ನೋಡಿಕೊಂಡ ಕ್ರಮದಲ್ಲಿ ಭಿಕ್ಷಾನ್ನಗಳಿವೆಯೆ? ಅದು ಪ್ರೀತಿ ಮತ್ತು ಗೌರವದ ದ್ಯೋತಕವಲ್ಲವೆ? ಸೌಜನ್ಯದ ಮಾತುಗಳು ಕೂಡ ಅರ್ಥವಾಗುವುದಿಲ್ಲವೆ? ‘ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ’ ಎಂದು ಸ್ವಾಭಿಮಾನಿ ಸತ್ಯಕ್ಕ ಹೇಳುವುದಕ್ಕೆ ಯಾವ ಅರ್ಥ ಹಚ್ಚುವಿರಿ?
            ಎಡದ ಕೈಯಲ್ಲಿ ಕತ್ತಿ, ಬಲದ ಕೈಯಲಿ ಮಾಂಸ,
            ಬಾಯಲಿ ಸುರೆಯ ಗಡಿಗೆ, ಕೊರಳಲ್ಲಿ ದೇವರಿರಲು
            ಅವರ ಲಿಂಗನೆಂಬೆ, ಸಂಗನೆಂಬೆ
            ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
            ಎಂದು ಬಸವಣ್ಣನವರು ಹೇಳಿದ್ದಾರೆ. ನಾನು ಮೇಲೆ ತಿಳಿಸಿದ
            ಕೊಲುವನೆ ಮಾದಿಗ, ಹೊಲಸು ತಿಂಬುವನೆ ಹೊಲೆಯ
            ಕುಲವೇನೊ, ಅವದಿರ ಕುಲವೇನೊ?
            ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
            ನಮ್ಮ ಕೂಡಲಸಂಗನ ಶರಣರೆ ಕುಲಜರು.
            ವಚನದ ವಿವರಣೆಯನ್ನು ಅಲ್ಲಗಳೆಯುತ್ತ ‘This vachana expresses Vachanakaras disgust at meat eaters.’ ಎಂದು ನೀವು ಬರೆದುದನ್ನು ಬಸವಣ್ಣನವರ ವಚನ ‘ಎಡದ ಕೈಯಲ್ಲಿ…’ ಅಲ್ಲಗಳೆಯುವುದಿಲ್ಲವೆ?
            ಸಕಲಜೀವಾತ್ಮರಿಗೆ ಲೇಸನೆ ಬಯಸುವ ಶರಣ ಸಂಕುಲದಲ್ಲಿ ಯಾರಿದ್ದಾರೆ? ಎಲ್ಲ ವಚನಕಾರರ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಿ.
            ‘ಕುಲವೇನೊ, ಅವದಿರ ಕುಲವೇನೊ’ ಎಂದು ಬಸವಣ್ಣನವರು ಯಾರನ್ನು ಸ್ವಾತ್ವಿಕ ತಾಪದಿಂದ ಪ್ರಶ್ನಿಸುತ್ತಿದ್ದಾರೆ ಎಂಬುದನ್ನು ಗಮನಿಸಿ.

          • Amaresh

            There is another Vachana that makes it clear that Ranjan Darga is wrong in saying that “ಯಜ್ಞದಲ್ಲಿ ಕೊಲ್ಲುವವರೇ ಮಾದಿಗರು”:
            “ಕುರಿ ಕೋಳಿ ಕಿರಿಮೀನು ತಿಂಬುವರಿಗೆ ಕುಲಜ ಕುಲಜರೆಂದೆಂಬರು.”
            Clearly, the Vachanakaras were targeting meat eaters and not those who did yajnas. May be Darga believes that meat was eaten only in yajnas in the times of Vachanakaras but that is both silly and false.

          • jayateerth joshi

            It is ur misinterpretation and prejudiced opinion. How did u say this vachana is targeting meat eaters. There is no logic in ur argument. You are simply trying fit ur semetic ideology into this vachana.
            In this vachana so called upper caste people are criticised. Because they boast to be upper caste but eat meat. Even now some castes in Brahmins eat fish.

          • Shivappa Nayak

            ee vachana braahmanara bagge alla iruvudu. ee vachana maansaahaarigala teeke maadide. Basavannanavara anuyaayigalaada lingaayataru shaakhaahaarigalu.

    • Ramjan Darga

      ಸಹನಾ ಅವರೇ 11ನೇ ಶತಮಾನದ ಕಾಶ್ಮೀರದ ದೊರೆ ಹರ್ಷನ ಆಸ್ಥಾನ ಕವಿ ಕಲ್ಹಣನ ‘ರಾಜತರಂಗಿಣಿ’ಯನ್ನು ಓದಿ ನೋಡಿ. ಹರ್ಷನ ಸಚಿವ ಸಂಪುಟದಲ್ಲಿ ಮೂರ್ತಿ ಮೂಲೋತ್ಪಾಟನ ಸಚಿವನೂ ಇದ್ದ. ಆತನ ಪಡೆಯ ಕೆಲಸವೆಂದರೆ ಪ್ರಖ್ಯಾತ ಮಂದಿರಗಳಲ್ಲಿ ಅಡಗಿಸಿಟ್ಟಿದ್ದ ಸಂಪತ್ತನ್ನು ತಂದು ರಾಜ್ಯದ ಖಜಾನೆಯನ್ನು ತುಂಬುವುದು. ಆದರೆ ಇದು ಅಷ್ಟು ಸರಳವಾದ ಕೆಲಸವಿರಲಿಲ್ಲ. ಮೂರ್ತಿ ಮೂಲೋತ್ಪಾಟನ ಸಚಿವನೇ ಮುಂದೆ ನಿಂತು ಮೂರ್ತಿಯನ್ನು ಕಿತ್ತುವ ಕಾರ್ಯವನ್ನು ವೀಕ್ಷಿಸುತ್ತಿದ್ದ. ನಂತರ ಆತನ ಪಡೆ ಆ ಮೂರ್ತಿಯನ್ನು ನಡುಬೀದಿಗೆ ತಂದು ಎಸೆಯುತ್ತಿತ್ತು. ಆ ಮೂರ್ತಿಯನ್ನು ಕುಷ್ಠರೋಗಿಗಳು ಮುಟ್ಟುತ್ತಿದ್ದರು. ಬೀದಿಯಲ್ಲಿ ಬಿದ್ದ ಆ ಅನಾಥ ಮೂರ್ತಿಯ ಮೇಲೆ ನಾಯಿಗಳು ಉಚ್ಚೆ ಹೊಯ್ಯುತ್ತಿದ್ದವು. ಹೀಗೆ ಜನಸಮುದಾಯದಲ್ಲಿ ಆ ಮೂರ್ತಿಯ ಬಗ್ಗೆ ಇರುವ ಭಾವನಾ ಸಂಬಂಧಗಳು ಕಳಚಿಕೊಂಡ ಮೇಲೆ ದೇವಾಲಯದ ಸಂಪತ್ತು ರಾಜನ ಭಂಡಾರವನ್ನು ಸೇರುತ್ತಿತ್ತು.
      ಕಲ್ಹಣನ ‘ರಾಜತರಂಗಿಣಿ’ಯ ಇಂಗ್ಲಿಷ್ ಅನುವಾದ ಕೃತಿಗೆ ಜವಾಹರಲಾಲ್ ನೆಹರೂ ಅವರು ಮುನ್ನುಡಿ ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿದೆ. ಓದಿ ನೋಡಿ. ನಾನು ಮೇಲೆ ದಾಖಲಿಸಿದ ಮಾತುಗಳಿಗಿಂತಲೂ ಹೆಚ್ಚು ಭಯಂಕರವಾದ ವಿಚಾರಗಳು ಅದರಲ್ಲಿವೆ.
      ಈಗ ಹೇಳಿ ಹರ್ಷ ಮುಸ್ಲಿಮನಾಗಿದ್ದನೆ? ಮುಸ್ಲಿಮರೊ ಹಿಂದುಗಳೊ ರಾಜರು ರಾಜರೆ. ಸುಲಿಗೆಯು ಅವರ ‘ಕರ್ತವ್ಯ’ವಾಗಿತ್ತು. ಲೂಟಿಕೋರರು ಲೂಟಿಕೋರರೆ. ಅಪರಾಧಿಗಳನ್ನು ಹಿಂದೂ ಮುಸ್ಲಿಂ ಎನ್ನಲಾಗುತ್ತಿದೆಯೆ? ನಾನೆಲ್ಲಿಯೂ ಮುಸ್ಲಿಂ ವಿಚಾರ ತಂದಿಲ್ಲ. ಹೀಗೆ ಕೋಮುವಾದವನ್ನು ಎಳೆದು ತರುವುದು ನಿಮ್ಮ ಸಣ್ಣತನವಲ್ಲವೆ? ನಾನು ಮಾತನಾಡುತ್ತಿರುವುದು ಬಸವಾದಿ ಪ್ರಮಥರ ಬಗ್ಗೆ. ಮುಸ್ಲಿಮರ ಬಗ್ಗೆ ಅಲ್ಲ. ಸಣ್ಣವರಾಗಲು ಪ್ರಯತ್ನಿಸಬೇಡಿ.
      ಕ್ರಿಸ್ತ ಶಕ 711ರಲ್ಲಿ ಮೊಹಮ್ಮದ್ ಬಿನ್ ಕಾಸಿಂ ಎಂಬ 21 ವರ್ಷದ ದಾಳಿಕೋರ ಕೇವಲ ಆರೇಳು ಸಾವಿರದಷ್ಟು ಸೈನ್ಯದೊಂದಿಗೆ ಈಗ ಪಾಕಿಸ್ತಾನದ ಭಾಗವಾಗಿರುವ ಮುಲ್ತಾನ ಮೇಲೆ ದಂಡೆತ್ತಿ ಬಂದ. ದಾಳಿ ನಡೆದ ಸಂದರ್ಭದಲ್ಲಿ ‘ಬಡ’ ಬ್ರಾಹ್ಮಣನೊಬ್ಬ ಮೊಹಮ್ಮದ್ ಬಿನ್ ಕಾಸಿಂ ಬಳಿ ಬಂದ. ಅಲ್ಲಿನ ನಗರ ದೇವತೆಯ ಪೂಜಾರಿ ಎಂದು ಪರಿಚಯಿಸಿಕೊಂಡ. ಮಂದಿರದಲ್ಲಿ ಭಾರಿ ಸಂಪತ್ತು ಇದೆ ಎಂಬುದರ ಸೂಚನೆ ಕೊಟ್ಟ. ಅಲ್ಲಿನ ಸೈನಿಕರನ್ನು ಸೋಲಿಸುವ ತಂತ್ರವನ್ನೂ ಹೇಳಿಕೊಟ್ಟ. ಆ ಬ್ರಾಹ್ಮಣನ ಮಾರ್ಗದರ್ಶನದ ಪ್ರಕಾರ ದಾಳಿಕೋರನ ಸೈನಿಕರು ಗೋಪುರದ ಧ್ವಜವನ್ನು ಉರುಳಿಸಿದರು. ಆಗ ಸ್ಥಳೀಯ ಸೈನಿಕರು ದಿಕ್ಕಾಪಾಲಾಗಿ ಓಡಿದರು. ದಾಳಿಕೋರ ವಿಜಯ ಸಾಧಿಸಿದ. ಆದರೆ ಆಶ್ಚರ್ಯದಿಂದ ಸಹಾಯ ಮಾಡಿದ್ದರ ಕಾರಣ ಕೇಳಿದ. ಆಗ ಆ ಬ್ರಾಹ್ಮಣ ಹೇಳಿದ, ಲೂಟಿ ಮಾಡಿದ ಸಂಪತ್ತಿನಲ್ಲಿ ತನಗೊಂದಿಷ್ಟು ಪಾಲು ಸಿಗಬಹುದೆಂದು. ತನ್ನ ಜನರನ್ನೇ ಮೋಸಗೊಳಿಸಿದ ಆ ಬ್ರಾಹ್ಮಣನ ರುಂಡವನ್ನು ಮೊಹಮ್ಮದ್ ಬಿನ್ ಕಾಸಿಂ ಚೆಂಡಾಡಿದ ಎಂದು ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಅವರು ಬರೆದದ್ದನ್ನು ಖ್ಯಾತ ರಾಜ್ಯಶಾಸ್ತ್ರಜ್ಞರಾಗಿದ್ದ ಡಾ. ಗ.ಸ. ಹಾಲಪ್ಪ ಅವರು ಸಂಪಾದಿಸಿದ್ದಾರೆ. ಸಹನಾ ಅವರೇ ಇದಕ್ಕೇನನ್ನುತ್ತೀರಿ? ಯಾವುದೇ ಧರ್ಮದವರಾಗಿರಲಿ ಒಳ್ಳೆಯವರು ಒಳ್ಳೆಯವರೆ, ದುಷ್ಟರು ದುಷ್ಟರೆ ಅಲ್ಲವೆ?

      • ಸಹನಾ

        ಅವರುಗಳೂ ಏನಾದರೂ ಮಾಡಿರಲಿ, ಅದಕ್ಕೂ ನಾನು ಇಲ್ಲಿ ಪ್ರಸ್ತಾಪಿಸಿದ ವಿಚಾರಕ್ಕೂ ಸಂಬಂದವಿಲ್ಲ. ದೇವಾಲಯ ಸಂಸ್ಕೃತಿಗಳನ್ನು “ಶೋಷಣೆಯ ಸಂಸ್ಕೃತಿ” ಎಂದು ತಾವು ವಚನಕಾರರ ಹೆಸರಿನ್ನಲ್ಲಿ ಹೇಳಿದ್ದರ ಕುರಿತ ತಕರಾರು ನನ್ನದು “ನಾನು ಬಡವ ನನಗೆ ದೇವಾಲಯ ಕಟ್ಟಿಸುವ ಶಕ್ತಿ ಇಲ್ಲ ಆಗಾಗಿ ನನ್ನ ದೇಹವೇ ದೇಗುಲ ಎಂದುಕೊಂಡು ನನ್ನೊಳಗೆ ನಿನ್ನನ್ನು ಪೂಜಿಸುವೆ” ಎನ್ನುವಂತಹ ವಚನಕಾರರ ವಾಕ್ಯಗಳಲ್ಲೆ ದೇವಾಲಯಗಳು ‘ಶೋಷಕ ಸಂಸ್ಕೃತಿ’ ಎನ್ನುವ ಧೋರಣೆ ಎಲ್ಲಿದೆ? ಆದರೆ ಅದನ್ನು ನೀವು ಹಾಗೆ ನಿರೂಪಿಸಲು ಕಾರಣವೇನು? ಸೆಮಿಟಿಕ್ ರಿಲಿಜನ್ ಗಳು ತಾನು ಸತ್ಯ ಮತ್ತು ಇತರೇ ಸಂಪ್ರದಾಯಗಳು ಸುಳ್ಳು ಮತ್ತು ಮೋಸದ (ಸೈತಾನನ ಪ್ರಚೋಧನೆಯಿಂದಾಗಿ) ದಾರಿಗಳು ಎನ್ನುವ ‘ಐಡಿಯಾಲಜಿ’ಯ ಚೌಕಟ್ಟನ್ನು ಬಳಸಿದರೆ ಮಾತ್ರವೇ ಈ ರೀತಿಯ ನಿರೂಪಣೆ ಮಾಡಲು ಸಾಧ್ಯ!! ಇಲ್ಲದಿದ್ದರೆ ವಚನಗಳಲ್ಲಿ ಇಲ್ಲದ ಅರ್ಥವನ್ನು ನೀವೆಲ್ಲಿಂದ ಹುಡುಕಿಕೊಂಡಿರಿ?

        • Ramjan Darga

          ಮೋಸದ ಐಡಿಯಾಲಾಜಿ ಎನ್ನುವುದು ಭ್ರಮಾತ್ಮಕವಾದುದು. “ಗುಹೇಶ್ವರಲಿಂಗದಾಣತಿವಿಡಿದು, ತನುಗುಣಮತ್ತರಾಗಿದ್ದ ಐಶ್ವರ್ಯಾಂಧಕರ ಮತವನೇನ ಮಾಡ ಬಂದೆಯೈ ಸಂಗನಬಸವಣ್ಣ” ಎಂದು ಅಲ್ಲಮಪ್ರಭುಗಳು ಹೇಳುವುದರ ಅರ್ಥವೇನು? “ಸ್ಥಾವರ ಪ್ರತಿಷ್ಠೆ ನಾಯಕ ನರಕ” ಎಂದು ಬಸವಣ್ನನವರು ಹೇಳುವುದರ ಅರ್ಥವೇನು? ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಯಾವುದರಿಂದ ಹೊಡೆ ಎಂದಿದ್ದಾರೆ ಅಂಬಿಗರ ಚೌಡಯ್ಯನವರು? “ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ” ಎಂದು ಅಲ್ಲಮಪ್ರಭುಗಳು ಏಕೆ ಹೇಳಿದ್ದಾರೆ? “ಲಿಂಗಾರ್ಚನೆ ಮಾಡುವ ಮಹಿಮರೆಲ್ಲರೂ ಸಲಿಗೆವಂತರಾಗಿ ಒಳಗೈದಾರೆ. ಆನೆ ದೇವಾ ಹೊರಗಣವನು” ಎಂದು ಬಸವಣ್ಣನವರು ಹೇಳಿದ ಕಾರಣವೇನು? ರಾಜನ ಬೊಕ್ಕಸಕ್ಕೆ ಹಣದ ಕೊರತೆಯಾದಾಗ ಆತ ದೇವಾಲಯಗಳ ಸಂಪತ್ತನ್ನು ಒಯ್ಯುವ ಅಧಿಕಾರ ಹೊಂದಿದ್ದಾನೆ ಎಂದು ಕೌಟಿಲ್ಯ ಏಕೆ ಹೇಳಿದ್ದಾನೆ?

          • ಸಹನಾ

            ಇವೆಲ್ಲ ವಚನಕಾರರ ನುಡಿಗಡಿಗಳೂ ಗುಡಿಯಲ್ಲಿನ ದೇವರ ಮೂರ್ತಿಯ ಆರಾಧನೆಗಿಂತ ಉತ್ತಮವಾದ ಭಕ್ತಿಯ ಸಾಧ್ಯತೆಯನ್ನು ಒತ್ತಿ ಹೇಳುತ್ತಿವೆ. ಇದರಲ್ಲಿ ಅಸಂಭದ್ದವಾದದ್ದೇನೂ ಇಲ್ಲ. ಇಲ್ಲಿರುವ ಎಲ್ಲಾ ಸಂಪ್ರದಾಯಗಳೂ ತನ್ನ ಶ್ರೇಷ್ಟತೆಯನ್ನು ಹೀಗೆಯೇ ಪ್ರತಿಪಾದಿಸಿಕೊಳ್ಳುತ್ತವೆ. ಇದು ಸಹಜ ಕೂಡ. ಆದರೆ ತಮ್ಮ ನಿರೂಪಣೆಯ ಈ ಸಾಲುಗಳು ಮೇಲಿನ ಯಾವ ವಚನಕಾರರು ಎಲ್ಲಿ ಹೇಳಿದ್ದಾರೆ: “ಪುರೋಹಿತಶಾಹಿಗಳು, ಅಧಿಕಾರಶಾಹಿಗಳು ಮತ್ತು ಕುಲೀನರು ಎನ್ನಿಸಿಕೊಳ್ಳುವವರು ಯಥಾಸ್ಥಿತಿವಾದಿಗಳಾಗಿ ಬದುಕುವುವಂಥ ಈ ಸಮಾಜವನ್ನು ಕಳೆದ ಐದುಸಾವಿರ ವರ್ಷಗಳಿಂದ ಪೋಷಿಸಿಕೊಂಡು ಬರಲಾಗಿತ್ತು. ಇಂಥವರ ಸುಖಲೋಲುಪತೆಗೆ ತಕ್ಕಂತೆ ಲೈಂಗಿಕಶಿಲ್ಪಗಳಿಂದ ಕೂಡಿದ ಬೃಹತ್ ದೇವಾಲಯಗಳನ್ನು ನಿರ್ಮಿಸುವುದು ಮತ್ತು ಆ ದೇವಾಲಯಗಳನ್ನು ದೇವದಾಸಿಯರಿಂದ ಕೂಡಿದ ಸುಖದ ತಾಣಗಳನ್ನಾಗಿಸುವುದು ಜಗಜ್ಜಾಹೀರವಾಗಿತ್ತು. ಮೃಷ್ಟಾನ್ನಭೋಜನ, ಹಾಡು, ಕುಣಿತ, ರಸಿಕತೆಯೊಂದಿಗೆ ಧನಕನಕ ಸಂಪತ್ತಿನ ರಕ್ಷಣಾ ತಾಣವನ್ನಾಗಿಯೂ ದೇವಾಲಯಗಳನ್ನು ಬೆಳೆಸುತ್ತ ಪಟ್ಟಭದ್ರರು ರಾಜ್ಯಸತ್ತೆಯನ್ನು ಕೂಡ ತಮ್ಮ ಅಂಕಿತದಲ್ಲಿಟ್ಟುಕೊಳ್ಳುವಂಥ ಸಾಮಥ್ರ್ಯ ಪಡೆದದ್ದನ್ನು ಬಸವಣ್ಣನವರು ಗಮನಿಸಿದರು. ರಾಜರಸ್ಥಾನದಿಂದ ಅಷ್ಟೇ ಅಲ್ಲದೆ ದೇವಸ್ಥಾನಗಳಿಂದಲೂ ಕಾಯಕಜೀವಿಗಳ ನಿರಂತರ ಶೋಷಣೆನಡೆಯುತ್ತಿರುವುದನ್ನು ಕೊನೆಗೊಳಿಸಿದರು. ದೇಗುಲಸಂಸ್ಕೃತಿಗೆ ತಿಲಾಂಜಲಿಯನ್ನಿಟ್ಟು ಭಕ್ತಿ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟರು.”-
            ಇದು ಪಕ್ಕಾ ಸೆಮೆಟಿಕ್ ರಿಲಿಜನ್ನುಗಳಲ್ಲಿ ಮಾತ್ರವೇ ಇರುವ ಇತರ ಮತಗಳ ಬಗ್ಗೆ ಇರುವ ಧೋರಣೆ. ಈ ಐಡಿಯಾಲಜಿಯನ್ನೇ ನೀವು ವಚನಕಾರರ ಮೇಲೆ ಹೇರಿ ಅವರೆಲ್ಲರ ಧ್ವನಿಗಳ್ನು ವಿಕೃತಗೊಳಿಸುತ್ತಿದ್ದೀರಿ. ಶರಣರೆಂದೂ ಇತರೇ ಸಂಪ್ರದಾಯಗಳನ್ನು ದ್ವೇಶಕಾರಿದವರಲ್ಲ, ತಮ್ಮ ಹಾದಿಯ ಶ್ರೇಷ್ಟತೆಯನ್ನು ಮೆರೆದವರು. ಪ್ರಾಜ್ಙರುಗಳಿಗೆ ವಚನಕಾರರನ್ನು ಹೀಗೆ ಸೆಮಿಟಿಕ್ ಮತದ್ವೇಷಿಗಳ ಂತೆ ಚಿತ್ರಿಸುತ್ತಿರುವವರ ಹುನ್ನಾರ ಅರ್ಥವಾಗದಷ್ಟು ಮೂಢರಲ್ಲ ಎಂದು ದಯವಿಟ್ಟು ತಿಳಿಯಬೇಕು.

          • Ramjan Darga

            ಅಲ್ಲಮಪ್ರಭುಗಳ ವಚನ 12ನೇ ಶತಮಾನದ್ದೇ ಅಲ್ಲವೆ? ಅದರ ಬಗ್ಗೆ ಮಾತನಾಡಿ. ನನ್ನ ವಿಚಾರಗಳಿಗೆ ಅಲ್ಲಪ್ರಭುಗಳ ವಚನವೇ ಆಧಾರವಾಗಿದೆಯಲ್ಲ!

          • Amaresh

            Dear Darga, Allama’s dictat applies only to those who do linga pooja. Why do u forget that in India there are chores of people who don’t do linga pooja. “ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋಗುವವರಿಗೆ ಯಾವುದರಿಂದ ಹೊಡೆ” makes it clear who the vachanakaras were addressing. But u still misinterpret it to fit your ideology.

          • Ramjan Darga

            ಕಟ್ಟಿದ ಲಿಂಗವ ಕಿರಿದು ಮಾಡಿ
            ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡಾ
            ಇಂತಪ್ಪ ಲೊಟ್ಟೆಮೂಳರ ಕಂಡರೆ
            ಗಟ್ಟಿಯುಳ್ಳ ಪಾದರಕ್ಷೆಯ ತೆಗೆದುಕೊಂಡು
            ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗ ಚೌಡಯ್ಯ. (ಅಂಬಿಗರ ಚೌಡಯ್ಯ)
            ಉಡಿಯ ಲಿಂಗವ ಬಿಟ್ಟು ಗುಡಿಯ ಲಿಂಗಕ್ಕೆ ಶರಣೆಂಬ
            ಸಲೆಭ್ರಷ್ಟರನೇನೆಂಬೆನಯ್ಯಾ ಕಲಿದೇವರದೇವ. (ಮಡಿವಾಳ ಮಾಚಿದೇವ)
            ಅನ್ಯದೈವವ ಬಿಟ್ಟುದಕ್ಕಾವುದು ಕ್ರಮವೆಂದಡೆ
            ಅನ್ಯದೈವದ ಮಾತನಾಡಲಾಗದು
            ಅನ್ಯದೈವದ ಪೂಜೆಯ ನೋಡಲಾಗದು
            ಸ್ಥಾವರಲಿಂಗಕ್ಕೆರಗಲಾಗದು
            ಆ ಲಿಂಗದ ಪ್ರಸಾದವ ಕೊಳಲಾಗದು.
            ಇಷ್ಟು ನಾಸ್ತಿಯಾದಡೆ, ಅನ್ಯದೈವವ ಬಿಟ್ಟು ಭಕ್ತನೆನಿಸುವನು.
            ಇವರೊಳಗನುಸರಣೆಯ ಮಾಡಿದನಾದಡೆ
            ಕುಂಭೀಪಾಕ ನಾಯಕನರಕದಲ್ಲಿಕ್ಕುವ
            ನಮ್ಮ ಕೂಡಲಸಂಗಮದೇವರು. (ಬಸವಣ್ಣನವರು)

          • Aravind

            Amaresh, You really need to read these vacahanas again and understand them for their meaning. You dont seem to be right in your interpretation of Vacahanas.

          • ಸಹನಾ

            ಅಲ್ಲಮಪ್ರಭಿಗಳ ವಚನಗಳಲ್ಲಿ ನೀವು ನಿರೂಪಣೆಯಲ್ಲಿ ಹೇಳುವ ಯಾವ ಸಾಲುಗಳೂ ಇಲ್ಲ. “ಲಿಂಗ ಪ್ರತಿಷ್ಟೆ ಮಾಡಿದವಂಗೆ ನಾಯಿಕ ನರಕ” ಅದು ಅವನಿಗೇ ನರಕ. ಆದರೆ ಹೀಗೆ ಲಿಂಗ ಪ್ರತಿಷ್ಟೆ ಮಾಡಿ ದೇವಾಲಯಗಳನ್ನು ಕಟ್ಟಿಸುವುದು ಸಮಾಜದ ಇತರರನ್ನು ಶೋಷಿಸುವ ಸಂಸ್ಕೃತಿ ಎನ್ನುವ ಇಂಗಿತ ಮತ್ತು ಅರ್ಥ ಈ ಸಾಲಿನಲ್ಲಿ ಎಲ್ಲಿದೆ? ಈ ರೀತಿಯ ಸಾಲುಗಳನ್ನು ಉಲ್ಲೇಖಿಸಿ ತಾವು ತಮ್ಮ ಐಡಿಯಾಲಜಿಗಳನ್ನು ಹೇಳುತ್ತಿರುವಿರಿ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ???

          • Ramjan Darga

            ಕಲ್ಲ ಮನೆಯ ಮಾಡಿ, ಕಲ್ಲ ದೇವರ ಮಾಡಿ
            ಆ ಕಲ್ಲ ಮೇಲೆ ಕಲ್ಲ ಕೆಡೆದಡೆ ದೇವರೆತ್ತ ಹೋದರೊ?
            ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ. (ಅಲ್ಲಮಪ್ರಭು)
            ಗುಹೇಶ್ವರಲಿಂಗದಾಣತಿವಿಡಿದು, ತನುಗುಣಮತ್ತರಾಗಿದ್ದ
            ಐಶ್ವರ್ಯಾಂಧಕರ ಮತವನೇನ ಮಾಡಿ ಬಂದೆಯೈ ಸಂಗನಬಸವಣ್ಣ. (ಅಲ್ಲಮಪ್ರಭು)
            ಗುಡಿಸಂಸ್ಕೃತಿಯವರು ತನುಗುಣಮತ್ತರಾಗಿ ಐಶ್ವರ್ಯಾಂಧಕರಾಗಿದ್ದರು. ಅಂಥವರ ಮತವನೇನ ಮಾಡಿ ಬಂದೆ ಬಸವಣ್ಣ ಎಂದು ಅಲ್ಲಮಪ್ರಭುಗಳು ಆಶ್ಚರ್ಯಾನಂದವನ್ನು ವ್ಯಕ್ತಿಪಡಿಸಿದ್ದು ಸಹನಾ ಅವರಿಗೆ ಅರ್ಥವಾಗದಿದ್ದರೆ ನಾನೇನು ಮಾಡಲಿ?

          • ಸಹನಾ

            ಶ್ರ್ೀ ಮಂತಿಕೆಯ ಮದದವರು ಎಂದಾಗುತ್ತದಷ್ಟೆ. ಗುಡಿಸಂಸ್ಕ್ೃತಿ ಶೋಷಕ ಸಂಸ್ಕ್ೃತಿ ಎನ್ನುವ ಅರ್ಥ ಎಲ್ಲಿದೆ. ಅಹಂಕಾರಿಗಳು ಎಂದರೆ ಶೋಷಕರು ಎನ್ನುವ ಅರ್ಥಎಲ್ಲಿಯ ಶಭ್ಧಕೋಶದಲ್ಲಿದೆ?

          • Ramjan Darga

            ಗುಹೇಶ್ವರಲಿಂಗದಾಣತಿವಿಡಿದು, ತನುಗುಣಮತ್ತರಾಗಿದ್ದ
            ಐಶ್ವರ್ಯಾಂಧಕರ ಮತವನೇನ ಮಾಡಿ ಬಂದೆಯೈ ಸಂಗನಬಸವಣ್ಣ. (ಅಲ್ಲಮಪ್ರಭು)
            ಈ ಸಾಲುಗಳಲ್ಲಿನ ‘ಗುಹೇಶ್ವರಲಿಂಗದ ಆಣತಿ’ ಎಂದರೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಿ ಆಗ ನಿಮಗೆ ಸತ್ಯ ಹೊಳೆಯುವ ಸಾಧ್ಯತೆ ಇದೆ.
            ಸತ್ಯಶುದ್ಧ ದೇವರ ನಂಬಲರಿಯದೆ
            ಮಿಥ್ಯ ದೈವಂಗಳನೆ ನಂಬಿ
            ಸತ್ತು ಹೋದರು ನಿತ್ಯವನರಿಯದೆ
            ಎತ್ತಲೆಂದರಿಯರು ಗುಹೇಶ್ವರ ಲಿಂಗವನು. (ಅಲ್ಲಮಪ್ರಭುಗಳು)
            “… ಪರ್ವತ ಮಲ್ಲಯ್ಯನ
            ಶಿಖರವ ಕಂಡಾಕ್ಷಣದಲ್ಲಿ ಮೋಕ್ಷವಾಹುದೆಂದು ಶ್ರುತಿ ಪುರಾಣ
            ವಾಕ್ಯಂಗಳ ಕೇಳಬಲ್ಲಂಥ
            ಭಕ್ತಜನಂಗಳು, ಉಳಿದಂಥ ಕೆಲವು ಗಣಂಗಳು
            ಇಂತೀ ಸರ್ವರೂ ಕೂಡಿ ಸಾಲ ಕಡ ಮಾಡಿ
            ಹೊನ್ನ ತಂದು ಒಂದೊತ್ತು ಬರಿಗಾಲಲೆ ನಡೆಯುತ್ತ
            ಆಸತ್ತು, ಬೇಸತ್ತು, ಅಳಲಿ, ಬಳಲಿ
            ಶಿವ ಶಿವಾ ಹರ ಹರಾ ಎಂದು ಮಲ್ಲಯ್ಯನ ನೆನೆಯುತ್ತ
            ಎಡವುತ್ತ, ಮುಗ್ಗುತ್ತ..” ಎಂದು ಕಾಡಸಿದ್ಧೇಶ್ವರರು ಹೇಳುವ ಪರಿಸ್ಥಿತಿ ಇಂದಿಗೂ ಮುಂದುವರಿದಿದೆ. ಗುಡಿ ಸಂಸ್ಕೃತಿಯಿಂದ ಪಂಡಾಗಳು ಶ್ರೀಮಂತರಾಗುತ್ತಾರೆ. ಬಡವರು ಸಾಲ ಕಡ ಮಾಡಿ ಹೋಗಿ ಅವರಿಗೆ ದಕ್ಷಿಣೆ ಕೊಡುತ್ತಾರೆ.
            ಗುಡಿ ಸಂಸ್ಕೃತಿಯಲ್ಲಿ ದೇವದಾಸಿಯರು ಏಕೆ ಇದ್ದರು? ತಾಪಿ ಧರ್ಮರಾವ ಅವರ ‘ದೇವಾಲಯಗಳಲ್ಲಿ ಲೈಂಗಿಕ ಶಿಲ್ಪ’ ಕೃತಿಯನ್ನು ಓದಿನೋಡಿ. ಅವು ಯಾವರೀತಿಯಲ್ಲಿ ಗುಡಿಗಳು ಶೋಷಣೆಯ ತಾಣಗಳಾಗಿದ್ದವು ಎಂಬುದು ತಿಳಿದುಬರುತ್ತದೆ.

          • skpbnt

            Darga sir they know how great vachana literature is. Thats why they hv decided to misinterpret the vachanas. They have been doing this conspiracy since thousands of years. They are continuing their forefathers work. No need to worry. Even if u give all evidences they will not accept. They have not come on the scene with humble intention to know. They have come with conspiracy. Such conspirators were in Basava s time also. In future also such parasites will be there. They cant survive without sucking the blood of others. There is no use arguing with those who hide behind the screens and throw stones and grin. Better ignore them. Barking dog never bites. They dont have any better work to do. It is their business. Why do u worry about such people. If they dont find anything in vachanas it means they are blind. They can see only blurred images. so nobody can help it.Defect is there in their cornea. They dont hv the courage come on the open field to discuss.

          • ವಿಶ್ವಾರಾಧ್ಯ ಸತ್ಯಂಪೇಟೆ

            ಸಹನಾ ಅವರೆ ಸಹನೆಯಿಂದ ವಚನ ಸಾಹಿತ್ಯವನ್ನು ಓದಿ.ಇಂಥ ಚಿಕ್ಕ ಚಿಕ್ಕ ಪ್ರಶ್ನೆಗಳಿಗೆ ಎಷ್ಟಂತ ಉತ್ತರ ಕೊಡುವುದು ?

          • ವಿಶ್ವಾರಾಧ್ಯ ಸತ್ಯಂಪೇಟೆ

            ಸಹೋದರಿ ಸಹನಾ ಅವರೆ,
            ಪುರೋಹಿತಶಾಹಿಗಳು ನಮ್ಮ ಭರತಖಂಡದ ಜನತೆಗೆ ಮಾಡಿದ ದ್ರೋಹ- ವಂಚನೆ- ಕುಟೀಲ ನೀತಿ ಮುಂತಾದವುಗಳ ಮೂಲ ಆಶ್ರಯ ತಾಣವೇ ಗುಡಿ ಗುಂಡಾರಗಳು. ಚರ್ಚು ಮಸೀದಿಗಳು. ಹೀಗಾಗಿಯೇ ವಿವೇಕಾನಂದರು ‘ ಮುಲ್ಲಾ ಪಾದ್ರಿ ಪೂಜಾರಿಗಳು ಪ್ರಗತಿಯ ವಿರೋಧಿಗಳು. ತಮ್ಮನ್ನು ತಾವು ಎಂದೂ ತಿದ್ದಿಕೊಳ್ಳುವವರಲ್ಲ. ಇವರನ್ನು ಈ ದೇಶದಿಂದಲೇ ಒದ್ದೊಡಿಸಿ. ಎಂದು ಹೇಳದ್ದಾರೆ, ಇವರೇ ಯಥಾಸ್ಥಿತಿವಾದಿಗಳು. ಇವರು ದೇಶದ ವ್ಯವಸ್ಥೆ ಹದಗೆಡಲಿಕ್ಕೆ ಹೇಗೆಲ್ಲ ಕಾರಣರು ಎಂದು ಬಸವಣ್ಣನವರು ಅರಿತಿದ್ದರು. ಈ ಸಂಗತಿಗಳನ್ನೇ ದರ್ಗಾ ಹೇಳಿದ್ದಾರೆ ಹೊರತು ವಿಕೃತಗೊಳಿಸಿಲ್ಲ .ತಾವು ದಯವಿಟ್ಟು ವಚನಗಳನ್ನು ಓದಿ, ಅಲ್ಲಲ್ಲ ವಚನಗಳನ್ನು ಪಚನ ಮಾಡಿಕೊಳ್ಳಿರಿ. ಆಗ ಮಾತ್ರ ದರ್ಗಾರ ಆಶಯ ಅರ್ಥವಾಗುತ್ತದೆ.

          • ಸಹನಾ

            nimma salahege dhanyavaadagalu. ee ritiya bhashnagalannu kaleda 150 varshagalinda keliyaagide. swalpa hosa tiluvalikegalannu mukta manassininda keluva soujanya torisi. bhaashana beda.

          • Amaresh

            ದರ್ಗಾ ಅವರ ಐಡಿಯಾಲಜಿ ನನಗೆ ಚೆನ್ನಾಗಿಯೇ ಅರ್ಥವಾಗಿದೆ. ಅವರ ಅನೇಕ ಬರಹಗಳನ್ನು ನಾನು ಬಹಳ ಕೇರ್ಫುಲ್ ಆಗಿ ಓದಿದ್ದೇನೆ.

          • ಕಟ್ಟಿಮನಿ

            ಆರಾಧ್ಯ, ಬಸವಣ್ಣನವರು ದೇಶದ ವ್ಯವಸ್ಥೆ ಹದಗೆಡಲಿಕ್ಕೆ ಪುರೋಹಿತಶಾಹಿಗಳು ಹೇಗೆಲ್ಲ ಕಾರಣರು ಎಂದು ಅರಿತಿದ್ದರೋ ಇಲ್ಲವೋ ನಾನರಿಯೆ. ಆದರೆ ಅವರು ತನ್ನ ಮನಸ್ಸು ಹದಗೆಡಲು ಏನು ಕಾರಣ ಅನ್ನುವುದನ್ನು ಚೆನ್ನಾಗಿ ಅರಿತಿದ್ದರು. ಈ ಕೆಳಗಿನ ವಚನಗಳು ಅವರ ಕಷ್ಟವನ್ನು ಹೇಳಿಕೊಳ್ಳುತ್ತಿದೆ:
            ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನವು,
            ಎಂತಯ್ಯ ?
            ಎನಗಿನ್ನಾವುದು ಗತಿ ಎಂತಯ್ಯ ?
            ಎನಗಿನ್ನಾವುದು ಮತಿ ಎಂತಯ್ಯ ?
            ಹರಹರ ಕೂಡಲಸಂಗಮದೇವ.
            ಮನವ ಸಂತೈಸೆನ್ನ.
            ಊರ ಸೀರೆಗೆ ಅಸಗ ಬಡಿವಡೆದಂತೆ
            ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,
            ಎಂದು ಮರುಳಾದೆ.
            ನಿಮ್ಮನರಿಯದ ಕಾರಣ,
            ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.
            ಇಲ್ಲಿ ಪುರೋಹಿತಶಾಹಿಯ ಪ್ರಸ್ತಾಪವೇ ಇಲ್ಲ.

          • ವಿಶ್ವಾರಾಧ್ಯ ಸತ್ಯಂಪೇಟೆ

            ಒಂದೆರಡು ವಚನಗಳ ಉದಾಹರಣೆ ಕೊಟ್ಟು ಬಸವಣ್ಣನವರು ಪುರೋಗಾಮಿ ವಿರೋಧಿಯಾಗಿರಲಿಲ್ಲವೆಂದರೆಹೇಗೆ ? ‘ಏನಯ್ಯ ವಿಪ್ರರು ತಮಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ ‘ , ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯ ಎಂದು ಹೇಳಿದ್ದು ಯಾರು ?

          • ಕಟ್ಟಿಮನಿ

            ಆರಾಧ್ಯ, ನನಗೆ ಯಾವ ಅಜೆಂಡಾ ಇಲ್ಲ! ಬಸವಣ್ಣನವರು ನನಗೆ ದೇವಸಮಾನರು. ಅವರ ವಚನಾಮೃತದ ಸವಿಯಿಂದ ಬದುಕನ್ನು ಸಿಹಿಯಾಗಿಸಿದ ಜನಸಾಮಾನ್ಯರಲ್ಲಿ ನಾನೂ ಒಬ್ಬನು.
            ಬಸವಣ್ಣ ಎಂತಹ ಅಸಾಧಾರಣ ಮನುಷ್ಯನಾಗಿದ್ದ ಎಂದರೆ ಆತ ಆಧ್ಯಾತ್ಮಸಾಧಕನಾಗಿದ್ದಾಗ ತಾನು ಅನುಭವಿಸಿದ ಕಷ್ಟಗಳ ನೋವುಗಳ ಬಗ್ಗೆ ಅತ್ಯಂತ ಪ್ರಾಮಾಣಿಕತೆಯಿಂದ ಬರೆದಿದ್ದಾರೆ. ಮನುಷ್ಯನಾದವನಿಗೆ ಹೊನ್ನು ಹೆಣ್ಣು ಮಣ್ಣು ಆಸೆ ಸಹಜ. ಅದನ್ನು ಒಂದು ಮಟ್ಟದಲ್ಲಿ ಈಡೇರಿಸಲು ಸಾಂಸಾರಿಕ ಲೌಕಿಕ ಜೀವನವಿದೆ. ಬಸವಣ್ಣನವರು ತಾವು ಹೊನ್ನು ಹೆಣ್ಣು ಮಣ್ಣು ಹಿಂದೆ ಬಿದ್ದದ್ದನ್ನು ಪ್ರಾಮಾಣಿಕವಾಗಿ ಒಪ್ಪಿದ್ದಾರೆ. ತನ್ಮೂಲಕ ನಿಮಗೂ ನನಗೂ ಆದರ್ಶವಾಗಿದ್ದಾರೆ. ಹೊನ್ನು ಹೆಣ್ಣು ಮಣ್ಣು ಹಿಂದೆ ಬೀಳುವುದು ಅಸಹಜವೇನಲ್ಲ; ಆದರೆ ಹಾಗೆ ಬಿದ್ದುದ್ದನ್ನು ಒಪ್ಪಿಕೊಳ್ಳುವ ಸ್ಥೈರ್ಯ ನಮಗಿರಬೇಕು; ಅಷ್ಟೇ ಅಲ್ಲ ಹೊನ್ನು ಹೆಣ್ಣು ಮಣ್ಣು ಹಿಂದೆ ಬಿದ್ದಿರುವೆ ಎಂದು ಅರಿವಾದ ಮೇಲೆ ಸುಚಿತ್ತದಿಂದ ಕೂಡಲಸಂಗಮರನ್ನು ನೆನೆಯಬೇಕು. ಇದನ್ನಲ್ಲವೇ ಈ ವಚನದ ಮೂಲಕ ಬಸವಣ್ಣ ನಮಗೆ ಹೇಳಿರುವುದು?
            “ಆನು ಹಾರುವನೆಂದರೆ ಕೂಡಲ ಸಂಗಮ ನಗುವನ” ಎಂಬ ಸಾಲಿನ ಭಾವವನ್ನು ಮೇಲಿನ ಎರಡು ವಚನಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಹೊನ್ನು ಹೆಣ್ಣು ಮಣ್ಣು ಹಿಂದೆ ಬಿದ್ದು ಸುಚಿತ್ತದಿಂದ ಕೂಡಲಸಂಗಮರನ್ನು ನೆನೆಯಲಾರದವ ತನ್ನನ್ನು ತಾನೇ ಹಾರುವ ಎಂದು ಕರೆದುಕೊಂಡರೆ ಅದು ಹಾಸ್ಯಾಸ್ಪದ ಅಲ್ಲವೇ?

          • Kanna

            ಕಟ್ಟಿಮನಿಯವರೇ,
            “ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯ” ಈ ಸಾಲನ್ನು ನಮ್ಮ ಪ್ರಗತಿಪರರು ಅವರ ಅಜೆಂಡಾಗೆ ಹೊಂದುವಂತೆ ಅರ್ಥೈಸಿದ್ದರು. ಆದುದರಿಂದ ಆ ಸಾಲು ಬ್ರಾಹ್ಮಣನಿಂದನೆ ಇರಬಹುದು ಅಂತ ಅನ್ನಿಸಿತ್ತು. ಬಸವಣ್ಣನವರು ನಿಜಕ್ಕೂ ದೊಡ್ಡವರು. ಅವರೇಕೆ ಬ್ರಾಹ್ಮಣನಿಂದನೆ ಮಾಡುತ್ತಾರೆ? ಈ ಪ್ರಶ್ನೆ ಬಹಳ ಸಮಯದಿಂದ ಕಾಡುತ್ತಿತ್ತು. ಈಗ ತಾವು ಆ ಸಾಲಿನ ನಿಜವಾದ ಅರ್ಥವನ್ನು ಇಲ್ಲಿ ಹೇಳಿ ಬಹಳ ದೊಡ್ಡ ಉಪಕಾರ ಮಾಡಿದಿರಿ. ಪ್ರಗತಿಪರರ ಕೈಯಿಂದ ವಚನದ ಈ ಸಾಲನ್ನು ವಿಮುಕ್ತಗೊಳಿಸಿದಿರಿ!

          • ಕಟ್ಟಿಮನಿ

            ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,
            ವಿಚಾರಿಸಿದರೇನು ಹುರುಳಿಲ್ಲವಯ್ಯ.
            ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
            ನೀವಿರಿಸಿದಿರಯ್ಯ ಕೂಡಲಸಂಗಮದೇವ.

            ವಿಕಳನಾದೆನು ಪಂಚೇಂದ್ರಿಯಧಾತುವಿಂದ!
            ಮತಿಗೆಟ್ಟನು ಮನದ ವಿಕಾರದಿಂದ!
            ಧೃತಿಗೆಟ್ಟೆನು ಕಾಯವಿಕಾರದಿಂದ!
            ಶರಣುವೊಕ್ಕೆನು ಕೂಡಲಸಂಗಮದೇವಯ್ಯ
            ಎನ್ನುವನು ಕಾಯಯ್ಯ.

            ಕಾಯವಿಕಾರ ಕಾಡಿಹುದಯ್ಯ!
            ಮನೋವಿಕಾರ ಕೂಡಿಹುದಯ್ಯ!
            ಇಂದ್ರಿಯವಿಕಾರ ಸುಳಿದಿಹುದಯ್ಯ!
            ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!
            ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!
            ಅನುಪಮಸುಖ ಸಾರಾಯ ಶರಣರಲ್ಲಿ,
            ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?

            ಆನು ಒಬ್ಬನು; ಸುಡುವರೈವರು.
            ಮೇಲೆ ಕಿಚ್ಚು ಘನ, ನಿಲಲು ಬಾರದು.
            ಕಾಡುಬಸವನ ಹುಲಿ ಕೊಂಡೊಯ್ದರೆ
            ಆರೈಯಲಾಗದೆ ಕೂಡಲಸಂಗಮದೇವ ?

          • jayateerth joshi

            Whatever Darga sir says it looks semetic to u. It means there is something wrong with you. U r suffering from semetic mania. Great thoughts are always relevant to all the times and all the countries. Regarding humanitarian values all religions and philosophies hv similarities.

        • ವಿಜಯ್

          ಅಕಸ್ಮಾತ ನಾಳೆ ಯಾರದರೂ ಅಮೇರಿಕೆಗೆ ಹೋಗುವ ಆಸೆ ಕೈಗೂಡದೇ..
          ಉಳ್ಳವರು ಅಮೇರಿಕೆಗೆ ಹೋಗುವರಯ್ಯ
          ನಾನೇನು ಮಾಡಲಿ ಬಡವನಯ್ಯ
          ನಾ ನಿಂತಲ್ಲೆ ನ್ಯೂಯಾರ್ಕ್
          ಕುಳಿತಲ್ಲೇ ಕನ್ಸಾಸ್ ಎಂದು ತಿಳಿಯುವೆನಯ್ಯ..
          ಎಂದೇನಾದರೂ ಸಹಜವಾಗಿ ಬರೆದರೆ, .. ಅಮೇರಿಕದ ಬಂಡವಾಳಶಾಹಿನೀತಿ, ವರ್ಣಬೇಧನೀತಿ, ಇರಾಕ ಯುದ್ಧ, ಮುಸ್ಲಿಂ ವಿರೋಧಿ ನೀತಿ ಇವನ್ನೆಲ್ಲ ಉಗ್ರವಾಗಿ ವಿರೋಧಿಸಿ ಆ ಮಹಾನುಭಾವರು ಅಮೇರಿಕೆಗೆ ಹೋಗಲಿಲ್ಲ ಎಂಬ ಇಂಟರಪ್ರಿಟೇಶನ್ ಕೇಳಬೇಕಾಗಿ ಬಂದರೂ ಆಶ್ಚರ್ಯವಿಲ್ಲ! 🙂

          • Ramjan Darga

            ಹೀಗೆ ವ್ಯಂಗವಾಡುವುದರ ಮೂಲಕ ನೀವು ಬಸವಣ್ಣನವರಿಗೆ ಅವಮಾನ ಮಾಡುತ್ತಿರುವಿರಿ.

          • Amaresh

            I like Ranjan’s tactic. He directs all criticism of his misinterpretation and inaccuracies to Basavanna! Several of our so called progressive thinkers of Kannada literary world have been using this tactic to hide from any constructive criticism of their fallacious claims about Indian traditions and India’s past. Ranjan is following this ‘great’ tradition.

          • Ramjan Darga

            ನನ್ನ ಲೇಖನದ ಸಾಲುಗಳನ್ನು ಉದ್ದರಿಸಿ ಪ್ರಶ್ನಿಸದೆ ಇರುವುದು ನಿಮ್ಮ ಜಾಣತನ. ನಾನು ಉತ್ತರಿಸುತ್ತ ಬಂದಿರುವುದನ್ನು ಗಮನಕ್ಕೆ ತಂದುಕೊಳ್ಳದೆ ವಿತಂಡವಾದ ಮಾಡುತ್ತಿರುವುದು ನಿಮ್ಮ ಅತಿಜಾಣತನ.

          • ಸಹನಾ

            ತಮ್ಮ ಇಂಟರ್ ಪ್ರಿಟಿಶನ್ ಗಳ ತಾರ್ಕಿಕ ಪರಿಣಾಮಗಳನ್ನು ತೋರಿಸಿದರೆ ಬಸವಣ್ಣನವರಿಗೆ ಏಕೆ ಅವಮಾನವಾಗುತ್ತದೆ? ತಾವು ಬೌದ್ದಿಕ ಚರ್ಚೆಯಲ್ಲಿ ತೊಡಗಿರುವವರು ಅಂದುಕೊಂಡಿದ್ದೇವೆ. ಮತಪ್ರಚಾರಕರಲ್ಲ. ಬಸವಣ್ಣನವರು ಮತ್ತು ಇತರ ವಚನಕಾರರ ಭಾರತೀಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಮಾಡಿದ ಆಧ್ಯಾತ್ಮಿಕ ಅನುಭಾವಿ ಜ್ಞಾನಗಳನ್ನು 19-20 ಶತಮಾನದ ಭ್ರಿಟೀಷ್ ಭೌತಿಕ ಮೌಲ್ಯಗಳ ಪ್ರತಿಕರಂತೆ ಬಿಂಬಿಸುತ್ತಿರುವ ನೀವು ನಮ್ಮ ಪ್ರಕಾರ ಬಸವಣ್ಣನವರು ಮತ್ತು ಇತರ ಅನುಭಾವಿ ಸಾಧಕರ ತೇಜೋವಧೆ ಮಾಡುತ್ತಿರುವಿರಿ ಎನ್ನುವುದು ನನ್ನ ವಿನಮ್ರ ಭಾವನೆ. ಪಾಶ್ಚಿಮಾತ್ಯ ಮೌಲ್ಯಗಳ ಮಾನವಹಕ್ಕು, ಉದಾರವಾದ, (ಕೊನೆಗೆ ಪರಿಸರವಾದದ ಚಳುವಳಿಯ ರೀತಿಯಲ್ಲಿ) ಮಟ್ಟಕ್ಕೂ ಬಸವಣ್ಣನವರ ಅನುಭಾವಿ ಚಳುವಳಿಯನ್ನು ಇಳಿಸಿ ಚೋದ್ಯ ಮಾಡುತ್ತಿರುವ ನೀವು ಸಾಧ್ಯವಾದಕಡೆಗಳಲ್ಲೆ ಸೆಮಿಟಿಕ್ ರಿಲಿಜನ್ನುಗಳ ಐಡಿಯಾಲಜಿಯನ್ನು ಬಿತ್ತಲಿಕ್ಕೆ ವಚನಕಾರರನ್ನು ದುರುಪಯೋಗಪಡಿಸಿಕೊಂಡಿರುವಿರಿ ಎಂದು ನಾವೂ ಆರೋಪ ಮಾಡಬಹದು. ಹಾಗಾಗಿ ದಯವಿಟ್ಟು ತಮ್ಮ ವಾದ ಮತ್ತು ನಿರೂಪಣೆಗಳ ಬಗೆಗಿನ ಪ್ರಶ್ನೆ, ವಿಮರ್ಶೆ ಮತ್ತು ತಾರ್ಕಿಕ ಪರಿಣಾಮಗಳನ್ನು ಹೇಳಿದರೆ ಅದಕ್ಕೆ ನಿಮ್ಮ ವಾದದ ಮೂಲಕ ಉತ್ತರಿಸಬೇಕೆ ಹೊರತು ಅವೆಲ್ಲವೂ ಬಸವಣ್ಣನವರಿಗೆ ಅವಮಾನ ಮಾಡುವಂತಹವು ಎಂದು ಓದುಗರಿಗೆ ಬಿಂಬಿಸಬಾರದೆಂದು ವಿನಂತಿ. ಸಮುದಾಯಗಳನ್ನು ಎತ್ತಿಕಟ್ಟುವಂತಹ ಹೇಳಿಕೆಗಳು Racism ಆಗುತ್ತದೆ ಎನ್ನುವುದನ್ನು ದಯವಿಟ್ಟು ಮನಗಾಣಬೇಕು.

          • Ramjan Darga

            ಮಾನವಹಕ್ಕು, ಉದಾರಭಾವನೆ, ಪರಿಸರವಾದಗಳನ್ನು ಬಿಟ್ಟು ಅನುಭಾವಿ ಚಳವಳಿ ಇಲ್ಲ. ‘ಈ ಭೂಮಿ ಸತ್ತರೆ ಹುಗಿಯುವುದೆಲ್ಲಿ?’ ಎಂಬ ಅನುಭಾವಿಗಳ ಪ್ರಶ್ನೆ ಪರಿಸರವಾದಕ್ಕೆ ಸಂಬಂಧಿಸಿದುದು ಅಲ್ಲವೆ?
            ಚೆನ್ನಯ್ಯನ ಮನೆಯ ದಾಸನ ಮಗನು
            ಕಕ್ಕಯ್ಯನ ಮನೆಯ ದಾಸಿಯ ಮಗಳು
            ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ
            ಸಂಗವ ಮಾಡಿದರು.
            ಇವರಿಬ್ಬರಿಗೆ ಹುಟ್ಟಿದ ಮಗ ನಾನು
            ಕೂಡಲಸಂಗಮದೇವ ಸಾಕ್ಷಿಯಾಗಿ.
            ಎಂದು ಬಸವಣ್ಣನವರು ಅನೈತಿಕ ಸಂಬಂಧದಿಂದ ಜನಿಸಿದ ಕೂಸಿನ ಪರವಾಗಿ ನಿಲ್ಲುವುದು ಮಾನವಹಕ್ಕು ಅಲ್ಲವೆ?
            ದಾಸೀ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಬೇಕು ಎಂದು ಹೇಳುವ ಮೂಲಕ ಸಮಾನೆ ಸಾಧಿಸುವುದು ಮಾನವಹಕ್ಕು ಅಲ್ಲವೆ?
            ಜಾತಿ, ವರ್ಗ, ವರ್ಣ ಮತ್ತು ಲಿಂಗಭೇದ ಮಾಡದೆ ಇರುವುದು ಮಾನವಹಕ್ಕುಗಳಿಗೆ ಸಂಬಂಧಿಸಿದ ವಿಚಾರವಲ್ಲವೆ?
            ಶರಣರು 12ನೇ ಶತಮಾನದಲ್ಲೇ ಹೇಳಿದ್ದಕ್ಕೂ ಮತ್ತು ವಿಶ್ವಸಂಸ್ಥೆ 1948ನೇ ಡಿಸೆಂಬರ್ 10ರಂದು ಘೋಷಿಸಿದ 30 ಅಂಶಗಳ ಮಾನವಹಕ್ಕುಗಳಿಗೂ ಸಾಮ್ಯ ಇಲ್ಲವೆ?
            ದಯೆಯೆ ಧರ್ಮದ ಮೂಲ ಎಂದು ಹೇಳುವುದು ಉದಾರ ಭಾವವಲ್ಲವೆ?
            ಇದಕ್ಕೆಲ್ಲ ನಮ್ಮನ್ನು ಗುಲಾಮರಾಗಿಸಿದ್ದ ಬ್ರಿಟಿಷರು ಬೇಕೆ? ಸೆಮಿಟಿಕ್ ಧರ್ಮಗಳೇ ಬೇಕೆ?

          • ವಿಜಯ್

            ವಾಲ್ಮಿಕಿ ಮಹರ್ಷಿಗಳು ಸೀತಾಮಾತೆಗೆ ರಕ್ಷಣೆ ಕೊಟ್ಟರು..ಅದು ಸ್ತ್ರೀ ಹಕ್ಕು ರಕ್ಷಣೆಯಲ್ಲವೆ?
            ವಾಲ್ಮಿಕಿ ಮಹರ್ಷಿಗಳು ಲವ-ಕುಶರನ್ನು ಸೀತಾಮಾತೆಯ ಕೋರಿಕೆಯ ಮೇರೆಗೆ ತನ್ನ ಶಿಷ್ಯರನ್ನಾಗಿ ಮಾಡಿಕೊಂಡರು..ಇದು ಮಕ್ಕಳ ಹಕ್ಕು ರಕ್ಷಣೆಯಲ್ಲವೆ?
            ದುರ್ಯೋದನ ಕರ್ಣನನ್ನು ತನ್ನವನನ್ನಾಗಿ ಮಾಡಿಕೊಂಡ..ಇದು ಮಾನವ ಹಕ್ಕು ಚಳವಳಿಯಲ್ಲಿ ಬರುತ್ತದೆಯೆ?
            ಬೇಸ್ತರ ಮಹಿಳೆಯಾದ ಸತ್ಯವತಿಯಲ್ಲಿ ಹುಟ್ಟಿದ ವ್ಯಾಸರನ್ನು ವೇದವ್ಯಾಸರನ್ನಾಗಿ ಅತ್ಯುನ್ನತ ಸ್ಥಾನಕ್ಕೇರಿಸಿದ್ದು ಯಾವ ಚಳವಳಿಯಲ್ಲಿ ಬರುತ್ತದೆ? ದಾಸಿಪುತ್ರ ವಿದುರರಿಗೆ ಸಿಕ್ಕ ಗೌರವ, ಸಪ್ತರ್ಷಿಗಳಿಗೆ ಸಿಕ್ಕ ಗೌರವ ಯಾವ ಚಳವಳಿಯ ಅಂಗವಾಗಿಸಬಹುದು?
            ಅಗಸರವನ ಮಾತಿಗೆ ಬೆಲೆ ಕೊಟ್ಟು ಜಗದ ಕಣ್ಣಲ್ಲಿ ಕೆಟ್ಟ ಶ್ರೀರಾಮನನ್ನು ಯಾವ ಹಕ್ಕಿನ ಪ್ರತಿಪಾದಕ ಎನ್ನಬಹುದು?
            ಕೃಷ್ಣ-ಕುಚೇಲ ಸಂಬಂಧವನ್ನು ಎಲ್ಲಿ ಹೊಂದಿಸಬಹುದು?
            ರಂಜಾನ ದರ್ಗಾ ಸರ್.. ವಚನಗಳನ್ನು ಆ ಕಾಲದ ಹಿನ್ನಲೆಯಲ್ಲಿಯೇ, ವಾಸ್ತವಿಕತೆಯಲ್ಲಿಯೇ ನೋಡಿ , ನಿಮ್ಮ ಮಾರ್ಕ್ಸ,ಎಂಗೆಲ್ಸ್ಗಳನ್ನು ಅವುಗಳಲ್ಲಿ ತುರುಕದೇ ವಾಖ್ಯಾನ ಮಾಡಿದರೆ ಇವೆಲ್ಲ ಅಭಾಸಗಳು ತಪ್ಪುತ್ತವೆ. ಇಲ್ಲದಿದ್ದರೆ ಒಂದು ವಚನ ತೋರಿಸಿ ಮಾನವಹಕ್ಕು, ಇನ್ನೊಂದು ವಚನ ತೋರಿಸಿ ವಿಶ್ವಸಂಸ್ಥೆ, ಮಗದೊಂದು ತೋರಿಸಿ ಮಹಿಳಾ ಹಕ್ಕು ಅಂತ ವಿಶ್ಲೇಶಿಸಿ ನಗೆಪಾಟಲಿಗಿಡಾಗಬೇಕಾಗುತ್ತದೆ. ಬಸವಣ್ಣನವರು ಹಿಂದಿನ ಪರಂಪರೆಯಿಂದ ಒಳ್ಳೆಯದನ್ನಷ್ಟೇ ಉಳಿಸಿಕೊಂಡು ಒಂದು ಬೇರೆ ಸಮಾಜದ ಕನಸು ಕಂಡರು ಎಂದರೆ ಎಲ್ಲರೂ ಒಪ್ಪುವಂತದ್ದೆ..ಅಂತಹ ಪ್ರಯತ್ನಗಳು ಈ ದೇಶದಲ್ಲಿ ಎಷ್ಟೊ ನಡೆದಿವೆ..ಅದು ಬಿಟ್ಟು ಶೂನ್ಯದಿಂದಲೇ ಎಲ್ಲವನ್ನು ಪ್ರಾರಂಭ ಮಾಡಿದರು, ತಯಾರಿಸಿದರು ಎಂದು ಹೇಳುವುದು ಎಷ್ಟು ಸಮಂಜಸವಾಗುತ್ತದೆ ಎಂದು ನೀವೇ ವಿಚಾರಮಾಡಿ.
            ಎಲ್ಲ ಹೋಗಲಿ..ಬಸವಣ್ಣನವರ ದೇವರು ಕೂಡ ನಿಮ್ಮ ಪ್ರಕಾರ ಬೇರೆಯಾಗಿದ್ದಾನೆ!..ಅವರು ಉಲ್ಲೇಖಿಸಿದ ರುದ್ರನಿಗೂ ಅವರ ಶಿವನಿಗೂ ಸಂಬಂಧವೆ ಇಲ್ಲ ಎನ್ನುತ್ತಿದ್ದೀರಿ ನೀವು..ಋಗ್ವೇದದಲ್ಲಿಯ ರುದ್ರ ಮತ್ತು ಮುಂದಿನ ಶಿವ ಇಬ್ಬರೂ ಒಂದೆ ಅನ್ನುವುದು ಬಹುಸಂಖ್ಯಾತ ಲಿಂಗಾಯತರು (ಸಂವೇದನಾಶೀಲ ಸಂಶೋಧಕರನ್ನು ಬಿಟ್ಟು!) ಒಪ್ಪುತ್ತಾರೆಂಬುದು ನನ್ನ ಅನಿಸಿಕೆ.. ಅದಲ್ಲವಾದರೆ ಅವರೀಗ ಪೂಜಿಸುವುದು ಯಾರನ್ನು ಎಂದು ದಯವಿಟ್ಟು ತಿಳಿಸಿ.
            ನಿಮಗೆ ನಾನು ರುದ್ರ ಮತ್ತು ರುದ್ರರು ಒಂದೆನಾ ಅಂತ ಪ್ರಶ್ನೆ ಮಾಡಿದ್ದೆ. ಅಷ್ಟಾದರೂ ಮತ್ತೆ [ ಆದರೆ ರುದ್ರ ಹೆಸರಿನವರು ಲೆಕ್ಕವಿಲ್ಲದಷ್ಟು ಇದ್ದಾರೆ. ರುದ್ರರು ಶಾಶ್ವತರಲ್ಲ. ‘ಗಂಗೆವಾಳುಕಸಮ ರುದ್ರರಿಗೂ ಲಯವುಂಟು’ ಎಂದು ಬಸವಣ್ಣನವರು ತಿಳಿಸಿದ್ದಾರೆ.] ಎಂದಿರಿ ನೀವು. ಪುರಾಣಗಳ ಪ್ರಕಾರ
            ರುದ್ರ= ಶಿವ, ರುದ್ರರ ನಾಯಕ
            ರುದ್ರರು= ಶಿವನ ಗಣ,ಶಿವನ ಅನುಯಾಯಿಗಳು, ಒಟ್ಟು ಹನ್ನೊಂದು ಕಪಾಲಿ, ಪಿಂಗಾಲಾ, ಭೀಮ, ವಿರೂಪಾಕ್ಷ, ವಿಲೋಹಿತಾ, ಅಜೇಶಾ, ಶಾಸನಾ,ಶಾಸ್ತಾ, ಶಂಭು, ಚಂದಾ, ದ್ರುವಾ. ಪುರಾಣದ ಪ್ರಕಾರ ಇವರು ಕಶ್ಯಪ ಮತ್ತು ಆದಿತಿ ಗೆ ಹುಟ್ಟಿದವರು.
            [‘ಅಹಂ ವಿಶ್ವಕರ್ತಾ, ಮಮಕರ್ತಾ ಮಹೇಶ್ವರಃ’ (ನಾನು ವಿಶ್ವವನ್ನು ಸೃಷ್ಟಿಸಿದ್ದೇನೆ, ಆದರೆ ಮಹೇಶ್ವರನು ನನ್ನನ್ನು ಸೃಷ್ಟಿಸಿದ್ದಾನೆ) ಎಂದು ವೈದಿಕರು ವಿಷ್ಣುವಿನಿಂದ ಹೇಳಿಸಿದ್ದನ್ನೂ ಬಸವಣ್ಣನವರು ತಿಳಿಸಿದ್ದಾರೆ.]
            “ವೈದಿಕರು ವಿಷ್ಣುವಿನಿಂದ ಹೇಳಿಸಿದ್ದನ್ನೂ ಬಸವಣ್ಣನವರು ತಿಳಿಸಿದ್ದಾರೆ” ಇದನ್ನು ಬಸವಣ್ಣನವರು ಎಲ್ಲಿ ತಿಳಿಸಿದರು ಎಂದು ಹೇಳುತ್ತೀರ ಸ್ವಲ್ಪ?

          • ಸಹನಾ

            ಲಿಂಗಾಯತ ಜನಪದರು ಅಷ್ಟು ಪ್ರೀತಿ ಅಸ್ತೆಯಿಂದ ಆಡುತ್ತ ಬರುತ್ತಿರುವ ವೀರಗಾಸೆಗೂ ಅದರಲ್ಲಿ ಬರುವ ಕಥೆಗೂ ಲಿಂಗಾಯಿತರಿಗೂ ಸಂಬಂದವಿಲ್ಲವೇ??

          • ಸಹನಾ

            ತಿದ್ದುಪಡಿ: ವೀರಗಾಸೆಯಲ್ಲಿನ ವೀರಭಧ್ರ ದೇವರ ಕಥೆಗೂ ಶರಣ ಸಂಪ್ರದಾಯ/ಧರ್ಮಕ್ಕೂ ಸಂಬಂದವಿಲ್ಲವೇ????

          • Ramjan Darga

            ಸಹನಾ ಅವರೇ ಲಿಂಗಾಯತ ಜನಿಸಿದ್ದು 12ನೇ ಶತಮಾನದಲ್ಲಿ. ವೀರಭದ್ರ ಸಂಪ್ರದಾಯ ಶೈವಕ್ಕೆ ಸಂಬಂಧಿಸಿದ್ದು. ಆದರೆ ವೀರಭದ್ರ ಸಂಪ್ರದಾಯ ಹಾಗೂ ಲಿಂಗಾಯತ ಪರಂಪರೆಗಳು ಯಜ್ಞವನ್ನು ವಿರೋಧಿಸುವುದರಿಂದ ಲಿಂಗಾಯತರು ವೀರಭದ್ರ ಸಂಪ್ರದಾಯವನ್ನು ಗೌರವಿಸುತ್ತಾರೆ. ದಕ್ಷನ ಯಜ್ಞ ನಾಶ ಮಾಡಲು ಶಿವನು ವೀರಭದ್ರನನ್ನು ಕಳುಹಿಸುತ್ತಾನೆ. ಅಂತೆಯೆ ಆದಿ ಶಂಕರಾಚಾರ್ಯರು ‘ಲಿಂಗಾಷ್ಟಕ’ದಲ್ಲಿ “ದಕ್ಷ ಸುಯಜ್ಞ ವಿನಾಶಕ ಲಿಂಗಂ’ ಎಂದು ಬರೆದಿದ್ದಾರೆ. ಆ ಲಿಂಗವು “ಬ್ರಹ್ಮ, ಮುರಾರಿ ಸುರಾರ್ಚಿತ ಲಿಂಗಂ’ ಎಂದು ಹಾಡಿದ್ದಾರೆ.

          • ಸಹನಾ

            “ವೀರಭದ್ರ ಸಂಪ್ರದಾಯ ಹಾಗೂ ಲಿಂಗಾಯತ ಪರಂಪರೆಗಳು ಯಜ್ಞವನ್ನು ವಿರೋಧಿಸುವುದರಿಂದ ಲಿಂಗಾಯತರು ವೀರಭದ್ರ ಸಂಪ್ರದಾಯವನ್ನು ಗೌರವಿಸುತ್ತಾರೆ.”
            ‘ಧಕ್ಷಯಜ್ಞ’ ಕಥೆ ಗೊತ್ತಿರುವವರೆಲ್ಲರಿಗೂ ಗೊತ್ತು ವೀರಭದ್ರನೇಕೆ ಯಜ್ಞನಾಶ ಮಾಡುತ್ತಾನೆಂದು ಮಾನ್ಯ ದರ್ಗಾರವರೇ, ಶಿವನಿಗೆ ಅವಮಾನ ಮಾಡಿದ್ದಲ್ಲದೆ ಪಾರ್ವತಿಯ ಯಜ್ಞಅಗ್ನಿಗಾಹುತಿಗೆ ಈಡಾದ ಕ್ರೋಧದಲ್ಲಿ ಧಕ್ಷನ ಯಜ್ಞವನ್ನು ನಾಶಮಾಡಲು ವೀರಭದ್ರನನ್ನು ಶಿವ ಕಳುಹಿಸಸುತ್ತಾನೆ.ತಾವು ಬಹಳ ಜಾಣ್ಮೆಯಿಂದ ಅದನ್ನು “ಯಜ್ಞವನ್ನೇ ವಿರೋಧಿಸುವ ಸಂಪ್ರದಾಯ” ಎಂದು ವಾಖ್ಯಾನಿಸುತ್ತಿದ್ದೀರಿ. ಈಗ ಆಕ್ಸಿಡೆಂಟ್ ಆದ ಕೂಡಲೇ ಮೃತನ ಬಂದುಗಳು ಮತ್ತು ಜನರು ಆಕ್ಸಿಡೆಂಟ್ ಮಾಡಿದ ಚಾಲಕನ್ನು ಥಳಿಸಿ ವಾಹನವನ್ನು ಸುಟ್ಟು ನಾಶ ಮಾಡುತ್ತಾರೆ ಎಂದಿಟ್ಟುಕೊಳ್ಳಿ ಅಂದರೆ ಅವರೆಲ್ಲರೂ ವಾಹನಗಳ ವಿರೋಧಿಗಳಾಗಿದ್ದರರು ಹಾಗಾಗಿ ಅದನ್ನು ನಾಶಮಾಡಿದರು ಎಂದರ್ಥವೇ ದರ್ಗಾ ಸರ್?

          • Ramjan Darga

            ಕೇಶವನಲ್ಲದೆ ಅತಃ ಪರದೈವವಿಲ್ಲೆಂದು
            ವೇದವ್ಯಾಸ ಮುನಿ ಭಂಗಬಟ್ಟುದನರಿಯಿರೆ
            ಅಹಂ ಸರ್ವ ಜಗತ್ ಕರ್ತಾ ಮಮಕರ್ತಾ ಮಹೇಶ್ವರಃ
            ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ.
            ಕೂಡಲಸಂಗಮದೇವನು
            ದಕ್ಷನ ಯಜ್ಞವ ಕೆಡೆಸಿದುದ ಮರೆದಿರಲ್ಲಾ. (ಬಸವಣ್ಣನವರು)

          • Ramjan Darga

            ಸಹನಾ ಅವರೇ,
            ವೀರಭದ್ರ, ನಂದಿ, ಮಲ್ಲಿಕಾರ್ಜುನನೆಂಬ ದೈವಂಗಳಿಗೆ
            ನಮ್ಮ ಕುಲದೈವಂಗಳೆಂದು ಹೇಳುವವರಿಗೆ
            ಗುರುವಿಲ್ಲ, ಲಿಂಗವಿಲ್ಲ, ಪಾದೋದಕ ಪ್ರಸಾದವಿಲ್ಲ
            ಕೂಡಲಚನ್ನಸಂಗಮದೇವಾ. (ಚನ್ನಬಸವಣ್ಣ)
            ಎಂದು ಚನ್ನಬಸವಣ್ಣನವರು ಹೇಳಿದ್ದರ ಅರ್ಥವೇನು. ಲಿಂಗಾಯತ ಧರ್ಮದಲ್ಲಿ ಇಷ್ಡಲಿಂಗ ಮಾತ್ರ ಮುಖ್ಯವಾದುದು. ದೇವನೊಬ್ಬ ನಾಮ ಹಲವು. ಹೀಗೆಂದು ನೂರೆಂಟು ರೀತಿಯ ಮೂರ್ತಿಗಳಿಗೆ ಸ್ಥಾನವಿಲ್ಲ. ಇಲ್ಲಿ ಮೂರ್ತಿಗಳೇ ಇಲ್ಲ. ಅಂದಮೇಲೆ ವೀರಭದ್ರನಿಗೆಲ್ಲಿ ಸ್ಥಾನ?
            ಅಂದ ಹಾಗೆ ನೀವೆಲ್ಲ ಸೇರಿ ಪದೆ ಪದೆ ಸೆಮಿಟಿಕ್ ರಿಲಿಜನ್‍ಗಳ ಬಗ್ಗೆ ಬರೆಯುತ್ತಿದ್ದೀರಲ್ಲಾ. ನೀವು ಯಾರೊಬ್ಬರೂ ಅವುಗಳ ಬಗ್ಗೆ ವಿವರಣೆ ಕೊಡಲಿಲ್ಲ. ನಿಮ್ಮ ಪರಿಕಲ್ಪನೆಯಲ್ಲಿ ಅವುಗಳು ಮಾಡಿದ ತಪ್ಪುಗಳಾದರೂ ಏನು? ನಿಮಗೆ ಯಾವ ಧಾರ್ಮಿಕ ವ್ಯವಸ್ಥೆಯಲ್ಲಿ ನಂಬಿಕೆ ಇದೆ? ನಿಮ್ಮಿಂದ ಗಂಭೀರ ಹಾಗೂ ಪ್ರಾಮಾಣಿಕ ವಿವರಣೆಯನ್ನು ಬಯಸುವೆ.

          • ಸಹನಾ

            Each and every Semitic religions say that they are the true will of god and others are false and devils deceptions. it has become a framework of modern intellectuals. they believe their ideology is the truth and rest are false as well as the cosperecy to decieve human kind. you do embody this semitic framework towards Indian traditions. temple culture is not just Vedic. each and every traditional community in india have their own temples including lingayat community. but you simply buy the colonial semetic idea about indian culture and acuse all of them are vedic and therefore deserve to be eradicated. our traditional guru like Basava never preech such hatred. they do criticise others practices as ignorance and justify why his/her path is better. (like how scientists prove their theory is better than others) but they do not persucute others for their ignorance whereas semetic religions do. your interpretetions of vacanas exibits the same semetic intolerance and persucution of Indian traditions as false/ supertitious practices as semetic religions do. This is not the attitude of any of our traditional gurus and sharanas. Do they? I am not a Brahmin, but that doesn’t motivate me to persicute brahmins.
            before 20th century no indian writers knew how to write history. Rajavali Kathe (1905) is an exaple for that. Britishers wrote history for us(? for them I believe) . Their Protestant christian theology played crucial role as their framework in writing indian history. This history believed to be the truth of Indian past. But the tragedy is there was no objective evidence for any of the incedents or phenomenons happened in our past. it was/is because of the lack historical sense among indian writers. This weakness (but not really!!!!) become an advantage to write semetic story as indian history by western historians. the epics, Puranas, and stories become history in their hands. we believe it is true today. but tragedy is none of us can say actually what really happened in India before 19th century.
            In such a situation with the blurr and unauthentic evidence about anything that happened in our past you people are so much sure that your story is the ultimate truth that happened in Indian past. how come? what makes you to believes so? that is the belief in your semetic ideology!!! yes the semetic ideological framework makes you to believe that this is what the truth is. otherwise do you have eyewitness or hotlines to our ancestors to believe and speak so authentacally that this is THE TRUTH .

          • Ramjan Darga

            ದಾನ ಮಾಡಿದ ಬಲಿಯನ್ನು ವಾಮನ ಪಾತಾಳಕ್ಕೆ ಮೆಟ್ಟಿದ್ದು ಮಾನವ ಹಕ್ಕೆ?
            ಶ್ರೀರಾಮ ಸೀತೆಯನ್ನು ಅಗ್ನಿಪರೀಕ್ಷೆಗೆ ಒಳಪಡಿಸಿದ್ದು ಮಾನವ ಹಕ್ಕೆ?
            ಶಂಬುಕನ ವಧೆ ಮಾಡಿದ್ದು ಮಾನವ ಹಕ್ಕೆ?
            ಪರಶುರಾಮ 21 ಸಲ ಕ್ಷತ್ರಿಯರ ಕೊಲೆ ಮಾಡಿದ್ದು ಮಾನವ ಹಕ್ಕೆ?
            ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದದ್ದು ಮಾನವ ಹಕ್ಕೆ?
            ಬ್ರಾಹ್ಮಣ ವೇಷದಿಂದ ಬಂದ ಇಂದ್ರ ಕರ್ಣನ ಕವಚಕುಂಡಲ ಪಡೆದದ್ದು ಮಾನವ ಹಕ್ಕೆ?

          • ವಿಜಯ್

            – ನಾನು ನನ್ನ ಈ ಮೊದಲಿನ ಪ್ರತಿಕ್ರಿಯೆಯಲ್ಲಿ ಇದನ್ನೇ ಹೇಳಿದ್ದು..ವಿಡಂಬನಾತ್ಮಕವಾಗಿ..ಸಾವಿರಾರು ವರುಷಗಳ ಆಚಿನ ಪುರಾಣಗಳಲ್ಲಿ ಈಗ ಪ್ರಸ್ತುತವಿರುವ ಮಾನವ ಹಕ್ಕು, ಮಹಿಳಾ ಹಕ್ಕು, ವಿಶ್ವಸಂಸ್ಥೆ , ಮಾರ್ಕ್ಸನ್ನು ಹುಡುಕುವ ಸಾಹಸವನ್ನು!
            – ಸರ್.. [ಅಹಂ ಸರ್ವ ಜಗತ್ ಕರ್ತಾ ಮಮಕರ್ತಾ ಮಹೇಶ್ವರಃ ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ.] ಇದರ ಅರ್ಥ ಏನು? ವೈದಿಕರು ವಿಷ್ಣುವಿನಿಂದ ಹೇಳಿಸಿದರೆಂದೆ?

          • ಸಹನಾ

            i feel you do need to be educated the basics of both Rights and Human Rights in western political discourse and their Christian theological base. better you read social contractualists and their foundation in chritian theology. then speak of wheather the vacanakara’s couldbe placed in those framework. it would be completly distortin of both vacanas as wel as human rights if you speak so. if you still claim your thesis hold, I am sorry, that would show only your hallownwss and ignorance about both sharanas vacanas and western political discourse!!!!

          • Ramjan Darga

            ಎಷ್ಟೊಂದು ಸಲ ಇದೇ ರಾಗ ಎಳೆಯುವಿರಿ? ಸೆಮಿಟಿಕ್ ಧರ್ಮಗಳ ಬಗ್ಗೆ ನಿಮ್ಮ ತಕರಾರುಗಳೇನು ಪಟ್ಟಿ ಮಾಡಿ. ನನಗೆ ಸಂಬಂಧಿಸದ ವಿಷಯವನ್ನೇಕೆ ತಂದು ತುರುಕುತ್ತೀರಿ? ನಾನು ಮಾತನಾಡುತ್ತಿರುವುದು ಬಸವಧರ್ಮದ ಬಗ್ಗೆ. ಯಾವುದನ್ನು ಆಧುನಿಕ ಜಗತ್ತು ಸಾಧಿಸುತ್ತಿದೆಯೋ ಅವುಗಳ ಮುನ್ಸೂಚನೆಗಳು ಬಸವಧರ್ಮದಲ್ಲಿ ಇದ್ದವು ಎಂದು ಹೇಳುವುದು ಸುಳ್ಳೆ? ಮಾನವಹಕ್ಕು, ಮಹಿಳಾ ಸ್ವಾತಂತ್ರ್ಯ, ದಲಿತ ಶಿಕ್ಷಣ, ಮಹಿಳಾ ಶಿಕ್ಷಣ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮೂಹ ನಾಯಕತ್ವ, ಸಮಾಜೋ ಧಾರ್ಮಿಕ ಸಂಸತ್ತಿನ ಪರಿಕಲ್ಪನೆಯ ಅನುಭವ ಮಂಟಪ, ಸಂವಿಧಾನಕ್ಕೆ ಪೂರಕವಾಗುವಂಥ ವಚನಗಳ ರಚನೆ, ಇವೆಲ್ಲ ಶರಣರ ಸಾಧನೆಗಳು ಅಲ್ಲವೆ? ನಾನು ಬಸವಧರ್ಮದ ಕುರಿತು ಹೇಳುವಾಗಲೆಲ್ಲ ನೀವೇಕೆ ಸೆಮಿಟಿಕ್ ರಿಲಿಜನ್ ಎಂದು ಗೊಣಗುವಿರಿ?

          • Ramjan Darga

            ನನಗೆ ಮಾನವಹಕ್ಕುಗಳ ಬಗ್ಗೆ ಮೂಲ ಪಾಠಗಳನ್ನು ಹೇಳಿಕೊಡುವ ನಿಮ್ಮ ಬಯಕೆಯಲ್ಲಿ ಮೈ ಪರಚಿಕೊಳ್ಳುವ ಗುಣವಿದೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಿಮಗಷ್ಟೇ ಅಲ್ಲ ನನಗೂ ವ್ಯಂಗ ಮಾಡಲು ಬರುತ್ತದೆ.

          • ಸಹನಾ

            you read todays HS SHIVAPRAKASHs artcle in todays PRAJAVANI you will get to know major flaws of these so called slogans of civilising mission of the west to rest of the world. the above mentioned your so called high values are mask of of those western superiority over Indian Traditions. the sharanas vacanas do not need to be having these western values to their credibility.
            . Vacanas have their own significance to human kind ( not just for lingayats) in its anubhavi experiments for real happiness. it does not need human rights or any other semetic notions to prove their credentials. I see ANUBHAAVA as an scientific experiments of sharanas to reflect on their sociel experience to find scientific solutins for human crisis in the existing life.

          • Ramjan Darga

            ಸಹನಾ ಅವರೇ
            Each and every Semitic religions say that they are the true will of god and others are false and devils deceptions. it has become a framework of modern intellectuals. they believe their ideology is the truth and rest are false as well as the cosperecy to decieve human kind. you do embody this semitic framework towards Indian traditions. temple culture is not just Vedic. each and every traditional community in india have their own temples including lingayat community.
            ಎಂದು ಹೇಳಿರುವಿರಿ.
            ಸೆಮಿಟಿಕ್ ಧರ್ಮಗಳ ಬಗ್ಗೆ ನೀವು ಹೇಳುವ ಎಲ್ಲ ಲಕ್ಷಣಗಳೂ ಲಿಂಗಾಯತಧರ್ಮದಲ್ಲಿ ಇವೆಯಲ್ಲ.
            1)ಮಡಕೆ ದೈವ, ಮೊರ ದೈವ ಬೀದಿಯ ಕಲ್ಲು ದೈವ
            ಹಣಿಗೆ ದೈವ ಬಿಲ್ಲನಾರಿ ದೈವ ಕಾಣಿರೋ
            ಕೊಳಗ ದೈವ ಗಿಣ್ಣಿ ದೈವ ಕಾಣಿರೋ
            ದೈವ ದೈವವೆಂದು ಕಾಲಿಡಲಿಂಬಿಲ್ಲ
            ದೇವನೊಬ್ಬನೇ ಕೂಡಲಸಂಗಮದೇವ. (ಬಸವಣ್ಣಣವರು)
            ……
            ಹರಶಕ್ತಿಗಳಲ್ಲಿ ಹುಟ್ಟಿದ ಬೆನಕ ಭೈರವ ಷಣ್ಮುಖರ
            ಮಹಾಹರನ ಮಕ್ಕಳೆಂಬ ಪಾತಕಿ ನೀ ಕೇಳೋ;
            ಹರಿಹರನು ಒಂದೆಂಬ ಶಿವದ್ರೋಹಿ ನೀ ಕೇಳೋ
            ಹರಿಹರಸಹಿತರಿಂದತ್ತತ್ತ ಅಜಾತನಚರಿತ್ರ ಅಪ್ರತಿಮ
            ಕೂಡಲಸಂಗಮದೇವನೊಬ್ಬನೇ ಕಾಣಿಭೋ. (ಬಸವಣ್ಣನವರು)
            2)it has become a framework of modern intellectuals ಎಂದು ಹೇಳುವಿರಿ. ನಿಮ್ಮ ಪ್ರಕಾರ ಕೂಡ ಬಸವಣ್ಣನವರು modern intellectual ಆದರಲ್ಲವೆ?
            3) ನಾರಾಯಣನೆಂಬವನ ಕಾಣೆ, ಗೀರಾಯಣನೆಂಬವನ ಕಾಣೆ
            ಬೊಮ್ಮನೆಂಬವನ ಕಾಣೆ ಬೊಮ್ಮುಗನೆಂಬವನ ಕಾಣೆ
            ವಿಷವಟ್ಟಿ ಸುಡುವಲ್ಲಿ ವೀರಭದ್ರ ಕೊಲುವಲ್ಲಿ
            ಕೂಡಲಸಂಗಯ್ಯನಿಗೆ ಶರಣೆಂದು ಮೊರೆಯಿಟ್ಟರೆಲ್ಲರು. (ಬಸವಣ್ಣನವರು)
            they believe their ideology is the truth and rest are false as well as the cosperecy to decieve human kind. ಎಂದು ನೀವು ಹೇಳುವ ಮಾತು ಬಸವಣ್ಣನವರಿಗೂ ಅನ್ವಯಿಸುವುದೆಂಬುದಕ್ಕೆ ಮೇಲಿನ ವಚನಗಳೇ ಸಾಕ್ಷಿ. ಹಾಗಾದರೆ ‘ಸಕಲಜೀವಾತ್ಮರಿಗೆ ಲೇಸನೇ ಬಯಸುವ ನಮ್ಮ ಕೂಡಲಸಂಗನ ಶರಣರೇ ಕುಲಜರು’ ಎಂದು ಹೇಳಿದ ಬಸವಣ್ಣನವರು ನಿಮ್ಮ ಪ್ರಕಾರ ಮಾನವಕುಲಕ್ಕೆ ಮೋಸ ಮಾಡುವ ಪಿತೂರಿ ಮಾಡಿದರೆ?
            4)’ದೇಹವೇ ದೇಗುಲ’ ಎಂದು ಹೇಳುವ ಲಿಂಗಾಯತ ಧರ್ಮದಲ್ಲಿ ದೇಗುಲಗಳಿವೆಯೆ? ಸುಳ್ಳು ಹೇಳಲು ಒಂದು ಮಿತಿಯಾದರೂ ಬೇಡವೆ?
            5) ಈಗ ಹೇಳಿ ಬಸವಧರ್ಮದಲ್ಲಿ ಮತ್ತು ನೀವು ಹೇಳುವ ಸೆಮಿಟಿಕ್ ಧರ್ಮಗಳಲ್ಲಿ ಯಾವ ವ್ಯತ್ಯಾಸಗಳಿವೆ? ಚರ್ಚೆಯ ಗಂಭೀರತೆ ಈಗ ಶುರುವಾಗಿದೆ. ಗಾಂಭೀರ್ಯವನ್ನು ಕಾಯ್ದುಕೊಂಡು ನಿಜದ ನೆಲೆಯಲ್ಲಿ ಉತ್ತರಿಸಲು ಪ್ರಯತ್ನಿಸಿ.

          • ಸಹನಾ

            so according to your arguement lingayata tradition is also a semetic religion!! this is what exactly I am saying, your interpretations always asumes this truth. OK, currently I am travelling now, I will comeback to your questions very soon. I hope and believe that you don’t shift your opinion on this issue till then.

          • ಸಹನಾ

            {ಸೆಮಿಟಿಕ್ ಧರ್ಮಗಳ ಬಗ್ಗೆ ನೀವು ಹೇಳುವ ಎಲ್ಲ ಲಕ್ಷಣಗಳೂ ಲಿಂಗಾಯತಧರ್ಮದಲ್ಲಿ ಇವೆಯಲ್ಲ.}
            ಹೌದೇ?
            1. ಶಿವನೋರ್ವನೇ ದೇವನೆನ್ನುವಾಗ ಅಲ್ಲಿರುವುದು ಶಿವವೆನ್ನುವ “ಚೈತನ್ಯ” ಒಂದೇ ಎನ್ನುವ ( ಇದುವರೆಗೂ ಇದ್ದ ಈಗಿರುವು ಮತ್ತು ಮುಂದೆ ಇರುವ ಎಲ್ಲದರಲ್ಲೂ ಚರಾಚರವಸ್ತುಗಳು, ಜೀವಿಗಳು, ಕಾಲ ದೇಶ ಎಲ್ಲದರಲ್ಲೂ ಇರುವು ಚೈತನ್ಯ ಒಂದೇ. ಅದು ವ್ಯಕ್ತಿ ಅಲ್ಲ, ಗುಣ ಅಲ್ಲ, ಆಕಾರವಲ್ಲ ಹಾಗೂ ಅದೇ ದೈವ ಕೂಡ) ಅದನ್ನರಿಯದ ಈ ಮೂಢಮತಿಗಳು ಆ ದೇವರು ಈ ದೇವರುಗಳೆಂಬ ಹೆಸರುಗಳನ್ನು ಇಟ್ಟುಕೊಂಡು ಅಜ್ಙಾನದಲ್ಲಿದ್ದಾರಲ್ಲಾ ಎನ್ನುವಂಹ ವಿಡಂಬನೆಯನ್ನು ನಮ್ಮ ವಚನಕಾರರು ಇಲ್ಲಿ ಮಾಡುತ್ತಿದ್ದಾರೆ. ಅಲ್ಲವೇ?
            ಇನ್ನು ಸೆಮೆಟಿಕ್ ರಿಲಿಜನ್ನುಗಳು ಈ ರೀತಿಯಲ್ಲಿ ದೇವ/ಚೈತನ್ಯ ಒಂದೇ ಎನ್ನುವ ಅರ್ಥದಲ್ಲಿ ಏಕದೇವನ್ನು ಲಕ್ಷಣೀರಿಸುತ್ತವೆಯೇ? ಖಂಡಿತಾ ಇಲ್ಲ. ಸೆಮೆಟಿಕ್ ರಿಲಿಜನ್ನುಗಳ ಗಾಡ್ ಓರ್ವ ವ್ಯಕ್ತಿ, ಚೈತನ್ಯ ಸ್ವರೂಪಿ ಅಲ್ಲ. ಅವನು ಈ ಜಗತ್ತಿನಲ್ಲಿರುವ ಚರಾಚರಗಳನ್ನು ನಿರ್ಧಿಷ್ಟ ಉದ್ದೇಶಕ್ಕಾಗಿ (ಕಾಸ್ಮೋಸ್) ಸೃಷ್ಟಿಸಿದ್ದಾನೆ. ಆತ ಈ ಜಗತ್ತಿನ ಒಳಗಿಲ್ಲ (ಅಂದರೆ ಸೃಷ್ಟಿಯೊಳಗೆ ಸೃಷ್ಟಿ ಕರ್ತ ಇಲ್ಲ; ಇರಲು ಸಾಧ್ಯವಿಲ್ಲ) ಹೊರಗಿದ್ದಾನೆ; ಅವನು ಇಡೀ ಕಾಸ್ಮೋಸನ್ನು ತನ್ನ ಉದ್ದೇಶ ಮತ್ತು ಇಚ್ಚೆಗನುಗುಣವಾಗಿ ನಿಯಂತ್ರಿಸುತ್ತಿರುವವನು; ಆ ನಿರ್ಧಿಷ್ಟು ಉದ್ದೇಶಗಳು ಮತ್ತು ಇಚ್ಚೆಗಳು ಅವನ ದೈವವಾಣಿಯಲ್ಲಿ ವ್ಯಕ್ತವಾಗಿದೆ. ಆ ದೈವವಾಣಿಯ ನಿಕ್ಷೇಪವೇ ಆಯಾ ಸೆಮೆಟಿಕ್ ರಿಲಜನ್ ಗಳ ಡಾಕ್ಟ್ರಿನ್ ಅಥವಾ ‘ಪವಿತ್ರಗ್ರಂಥ’ ಗಳು. ಅವುಗಳ ಪ್ರಕಾರ ನಡೆಯುವುದೇ ಪ್ರತಿಯೊಬ್ಬ ಸೆಮೆಟಿಕ್ ಮತಾನುಯಾಯಿಯ ದೈವಿಕ ಕರ್ತವ್ಯ. ಹಾಗಾಗಿ ಈ ಜಗತ್ತಿನೊಳಗಿರುವ ಚೈತನ್ಯವೇ ಸೆಮೆಟಿಕ್ ರಿಲಿಜನ್ನುಗಳು ಹೇಳುವ ಏಕದೇವನೂ ಕೂಡ ಹಾಗಾಗಿ ವಚನಧರ್ಮವೂ ಸೆಮೆಟಿಕ್ ತತ್ವವೇ ಎನ್ನುವುದು ಹಾಸ್ಯಾಸ್ಪದವಲ್ಲವೇ???
            ಸಮಯಾಭವವಿರುವುದರಿಂದ ಮುಂದಿನ ಪ್ರಶ್ನೆಗಳಿಗೆ ನಂತರ ಉತ್ತರಿಸುವೆನು. ಮುಖ್ಯವಾಗಿ ಲಿಂಗಾಯತ ಧರ್ಮವು ಸೆಮೆಟಿಕ್ ಧರ್ಮವೇ ಆಗಿದ್ದ ಪಕ್ಷದಲ್ಲಿ ಸೆಮೆಟಿಕ್ ರಿಲಿಜನ್ನುಗಳ ಅವಿಭಾಜ್ಯ ಅಂಗವಾಗಿರುವ ‘ಕನ್ವರ್ಷನ್’ ಏಕೆ ಲಿಂಗಾಯತ ಸಂಪ್ರದಾಯಗಳಲ್ಲಿಲ್ಲ ಎನ್ನುವ ಪ್ರಶ್ನೆಯನ್ನಿಟ್ಟು ಅದರ ಪ್ರತಿಕ್ರಿಯೆಯನ್ನಾದರಿಸಿ ನನ್ನ ವಾದವನ್ನು ಮುಂದುವರಿಸುತ್ತೇನೆ.

          • ಸಹನಾ

            {’ದೇಹವೇ ದೇಗುಲ’ ಎಂದು ಹೇಳುವ ಲಿಂಗಾಯತ ಧರ್ಮದಲ್ಲಿ ದೇಗುಲಗಳಿವೆಯೆ? ಸುಳ್ಳು ಹೇಳಲು ಒಂದು ಮಿತಿಯಾದರೂ ಬೇಡವೆ?}
            ಸುಳ್ಳು ಯಾರು ಹೇಳುತ್ತಿದ್ದಾರೆ? ದರ್ಗಾ ಸರ್.. ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸದ ಒಂದೇ ಒಂದು ಲಿಂಗಾಯತ ಸಮುದಾಯವನ್ನು ತಾವು ತೋರಿಸಲಿಕ್ಕೆ ಸಾಧ್ಯವಿದೆಯೇ? (ಅಲ್ಲೊಬ್ಬರು ಇಲ್ಲಬ್ಬರು ಹೋಗದಿರಬಹುದು. ಆ ರೀತಿ ದೇವಾಲಯಗಳಿಗೆ ಹೋಗದಿರುವ ಕೆಲವರು ಎಲ್ಲಾ ಸಮುದಾಯಗಲ್ಲೂ ಇರುತ್ತಾರೆ). ಲಿಂಗಾಯತ ಸಮುದಾಲಯಗಳಿಗೇ ದೇಗುಲಗಳಿಲ್ಲ ಎನ್ನುವುದು ಸತ್ಯವೇ? ಹಾಗೆ ದೇಗುಲಗಳಿಗೆ (ಮತ್ತು ಮಠಗಳಿಗೆ) ಹೋಗುವ/ನಡೆದುಕೊಳ್ಳುವವರು ಲಿಂಗಾಯತ ಧರ್ಮ/ಸಂಪ್ರದಾಯಿಗಳಲ್ಲದಿದ್ದರೆ ಅವರು ಇನ್ನೆಲ್ಲಿ ಅಸ್ತಿತ್ವದಲ್ಲಿದ್ದಾರೆ? ಅವರನ್ನು ಲಿಂಗಾಯತ ಧರ್ಮದವಲ್ಲದೆ ನಿಮ್ಮ ಐಡಿಯಾಲಜಿಯ ಪ್ರಚಾರಕ್ಕಾಗಿ ಲಿಂಗಾಯತ ಧರ್ಮವನ್ನು ಬಳಸಿಕೊಳ್ಳುತ್ತಿರುವ ನೀವು ಇಷ್ಟಲಿಂಗ ಧೀಕ್ಷೆ ಮಾಡಿಕೊಂಡು ಲಿಂಗಾಯತ ಧರ್ಮವನ್ನು ಪಾಲಿಸುತ್ತಿರುವ ಶರಣರೇ?
            ಹಾಗಾಗಿ ನನ್ನ ನೇರವಾದ ಸವಾಲು ದರ್ಗಾ ಸರ್ ಅವರಿಗೆ, ಇಂದು ದೇವಾಲಯಗಳಿಗೆ/ಮಠಗಳಿಗೆ ನಡೆದು ಕೊಳ್ಳದ ಒಂದೇ ಒಂದು ಲಿಂಗಾಯತ ಸಮುದಾಯವನ್ನು ಇವರು ಎಂಪಿರಿಕಲ್ ಆಗಿ ನೀವು ತೋರಿಸಬೇಕು. ಇಲ್ಲವೇ ಅವರಾರೂ ಲಿಂಗಾಯತ ಧರ್ಮವದರಲ್ಲವೆಂದು ತೋರಿಸಿ ತಾನು (ಮಾತ್ರ) ಲಿಂಗಾಯತ ಧರ್ಮದವರೆಂದು ಸಾಭೀತು ಮಾಡಬೇಕು. ದರ್ಗಾರವರ ಈ ರೀತಿಯ ವಾದಗಳು ಇಂದು ನಮ್ಮ ನಡುವೆ ಇರುವ ಲಿಂಗಾಯತ ಸಮುದಾಯಗಳ ಮೇಲೆ ಹೇಗೆ ತಾರ್ಕಿಕ ಪರಿಣಾಮಗಳನ್ನು ಭೀರುತ್ತವೆ ಮತ್ತು ಇದನ್ನು ನಿಜವಾದ ಬಸವಾನುಯಾಯಿಗಳಾದ ಲಿಂಗಾಯತ ಸಮುದಾಯಗಳು ಸ್ವೀಕರಸುತ್ತವೆಯೇ? ಎಂಬುದನ್ನು ನಾನು ವೈಜ್ಞಾನಿಕವಾಗಿಯೇ ನಿರೂಪಿಸುತ್ತೇನೆ.

          • jayateerth joshi

            Ms. Sahana u hv been analysing from Semetic point of view. Thats why nothing worth is seen by u. Because ur analysis shows ur semetic background. Humanitarian thoughts hv relevance for all ages nd countries. If you dont find human rights in the thoughts of saints like Basavanna means u hv still blinking ur eyes towards vachanas.

          • ಸಹನಾ

            Mr. Joshi I think you need to be tought the basics of political philosophical discouse which finds roots of Human Rights (and the very notion of rights as well) and their foundations in the Christian theology. First you do read contractualists notion of Natural Rights and and its origin Christian Theological framework. If you and people like Darga speaks about Vacanas linking with human rights it clearly shows you people neither know the western philosophy of Human Rights nor Sharanas ‘ANUBHAAVA’. Pls don’t throw your ignorance as my framework.

          • Ramjan Darga

            ಅಷ್ಟೂ ತಿಳಿಯುವುದಿಲ್ಲವೆ ವಿಜಯ್?
            ಕೇಶವನಲ್ಲದೆ ಅತಃ ಪರದೈವವಿಲ್ಲೆಂದು
            ವೇದವ್ಯಾಸ ಮುನಿ ಭಂಗಬಟ್ಟುದನರಿಯಿರೆ
            ಅಹಂ ಸರ್ವ ಜಗತ್ ಕರ್ತಾ ಮಮಕರ್ತಾ ಮಹೇಶ್ವರಃ
            ಎಂದು ವಿಷ್ಣು ಹೇಳಿದ ವಚನವ ಮರೆದಿರಲ್ಲಾ.
            ಕೂಡಲಸಂಗಮದೇವನು
            ದಕ್ಷನ ಯಜ್ಞವ ಕೆಡೆಸಿದುದ ಮರೆದಿರಲ್ಲಾ. (ಬಸವಣ್ಣನವರು)
            ಎಂದು ಬಸವಣ್ಣನವರು ಬ್ರಾಹ್ಮಣರಿಗೆ ಹೇಳದೆ ಶೂದ್ರರಿಗೆ ಹೇಳುತ್ತಾರೇನು?

          • jayateerth joshi

            Ms Sahana secular human rights are universal and they can be found in all relgious philosophy. Essence of the teachings of all saints and prophets is the same. Those points are called human rights. Sakala jeevatmarige lesanne bayasuvadu Human rights allave? Your bookish knowledge has made u practically challenged person

          • ವಿಜಯ್

            ನಿಮ್ಮ ವಚನ ವಾಖ್ಯಾನದ ರೀತಿಯನ್ನು, ನಿಮ್ಮ ತಪ್ಪನ್ನು ಎತ್ತಿ ತೋರಿಸಿದರೆ ಬಸವಣ್ಣನವರಿಗೆ ಅಪಮಾನವಾಗುವುದೆ? ವೈದಿಕರು ದೇವರ ಹೆದರಿಕೆ ತೋರಿಸಿ ಜನರನ್ನು ಶೋಷಿಸುತ್ತಿದ್ದರು ಎನ್ನುವವರು, ಈಗ ಬಸವಣ್ಣನವರನರಿಗೆ ಅಪಮಾನ ಎಂದು ನಮ್ಮನ್ನು ಹೆದರಿಸಿ, ನಿಮ್ಮ ತಪ್ಪನ್ನು ಮುಚ್ಚಿಕೊಳ್ಳುವುದು ಸರಿಯೆ? ಇದು ಆಧುನಿಕ ಪುರೋಹಿತಶಾಹಿಯೆ?
            ದಯವಿಟ್ಟು ನೀವು ಬಸವಣ್ಣನರ ಹಿಂದೆ ನಿಂತು, ನಿಮ್ಮ ಸ್ವಂತ ಅಜೆಂಡಾ ಪ್ರೇರಿತ ಬಾಣಗಳನ್ನು ಬಿಡುವುದನ್ನು ನಿಲ್ಲಿಸಿ. ಇದು ನೀವು ಇಲ್ಲವೆಂದರೂ, ಒಪ್ಪಿಕೊಳ್ಳದಿದ್ದರೂ ನಿಮ್ಮ ಲೇಖನದಲ್ಲಿ, ಉತ್ತರಗಳಲ್ಲಿ ಢಾಳಾಗಿ ಗೊಚರಿಸುತ್ತಿದೆ. ವಚನಗಳು ಸಾಮಾನ್ಯ ಮನುಷ್ಯ ಓದಿಕೊಳ್ಳುವುದಕ್ಕಾಗಿ, ಅರ್ಥ ಮಾಡಿಕೊಳ್ಳುವುದಕ್ಕಾಗಿ, ಅಳವಡಿಸಿಕೊಳ್ಳುವುದಕ್ಕಾಗಿ ರಚಿಸಿದವು ಎಂಬುದು ಸತ್ಯವೆಂದು ನೀವು ನಂಬುತ್ತೀರಾದರೆ, ನಿಮ್ಮ ಮಸಾಲೆ ಸಹಿತವಾದ ವಾಖ್ಯಾನ ವಚನಗಳಿಗೆ ಬೇಕಾಗಿಲ್ಲ. ಆಮೇಲೆ ತಪ್ಪನ್ನು ಎತ್ತಿ ತೋರಿಸಿದಾಗ ಇದು ಬಸವಣ್ಣನವರಿಗೆ ಅಪಮಾನ ಎಂದು ನಮ್ಮ ಮೇಲೆ ಗೂಬೆ ಕೂರಿಸುವುದು ತಪ್ಪುತ್ತದೆ.

          • skpbnt

            Whatever u r accusing u r doing it. if u dont find anything in Dargas articles then u leave it. people know his worth.

          • Amaresh

            Does he need trolls like you to assist him? What is your contribution to this debate?

          • jayateerth joshi

            No he needs Janus like u people to teach a lesson

          • santosh anand

            No. He needs Janus like u to teach a lesson

          • Amaresh

            There you are! One person many identities! omme Santosh mattomme jayateerth joshi magadomme skpbnt.

          • jayateerth joshi

            you are also one person posting comments in different names. Your ideology shows it. Jayateerth santosh and skpbnt we are all friends and discuss and post comments. you concentrate on our ideas. Why do you beat around the bush. It is escapism. Dont think all believe ur id s are true.

          • ವಿಜಯ್

            @skpbnt
            Dear skpbnt aka ‘the anonymous who is keen on open debate!’
            You haven’t contributed anything to this debate rather than being a spit and run case, who appears once in ten days. I know, you may attribute it to your busy schedule and we being on net all the time!..it’s ok:). Secondly, please go through the discussion before commenting..otherwise you will end up exhibiting your ‘smartness’ unnecessarily. Here is the example..
            http://avadhimag.online/2013/06/29/ಶರಣರ-ಮೇಲೆ-ದಂಡೆತ್ತಿ-ಬಂದವರ-5/#comment-44749
            [Whether Basavanna came in ur dream and said that he didnt do intercaste marriage. you read Bhima kavi Basava Purana. Without reading dont exhibit ur ignorance]
            Read Sri Darga’s comment here
            http://avadhimag.online/2013/06/29/ಶರಣರ-ಮೇಲೆ-ದಂಡೆತ್ತಿ-ಬಂದವರ-5/#comment-44689
            [ಎಷ್ಟು ಸಲ ಹೇಳಲಿ? ಶರಣರು ಮಾಡಿದ್ದು ಅಂರ್ಜಾತಿ ವಿಹಾಹವಲ್ಲ. ನಿರ್ಜಾತಿ ವಿವಾಹ. ಶರಣ ಸಂಕುಲದಲ್ಲಿ ಜಾತಿಗಳಿಲ್ಲ.]
            Pls, atleast follow your guru’s arguments.. later you can get busy with spitting.
            Regarding open debate, it seems you are still lingering in pre-internet era and hence inviting us for a open debate!. Get updated soon..
            @ರಂಜಾನ ದುರ್ಗಾ
            ಸರ್..ಇಲ್ಲಿ ‘skpbnt’ ಎನ್ನುವವರು ನಾವು ಚರ್ಚೆ ಮಾಡುವುದು ಅವಶ್ಯವಿಲ್ಲ ಎನ್ನುತ್ತಿದ್ದಾರೆ. ನೀವು ಗಮನಿಸಿದ ಹಾಗೆ ಇಲ್ಲಿ ನಮ್ಮೆಲ್ಲರ ಮಧ್ಯೆ ವೈಯುಕ್ತಿಕವಾದದ್ದು ಏನು ಇಲ್ಲ. ನಿಮ್ಮ ವಿಷಯ ಮಂಡನೆಯ ಬಗ್ಗೆ ನಮಗಿದ್ದ ತಕರಾರುಗಳನ್ನು ಬರೆದಿದ್ದೆವೆ..ನೀವು ಕೂಡ ಸಾಕಷ್ಟು ತಾಳ್ಮಯಿಂದಲೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡಲು ನೋಡಿದ್ದೀರಿ..ಅವು ಸಮಾಧಾನಕರ ಉತ್ತರಗಳು ಹೌದೊ,ಅಲ್ಲವೊ ಎಂಬುದು ಬೇರೆ ವಿಷಯ.. ಅವಧಿಯ ಓದುಗರು ಅದನ್ನು ನಿರ್ಧರಿಸತ್ತಾರೆ. ನಿಮ್ಮ ಹುಡುಕಾಡುವಿಕೆ ಸತ್ಯದ ಪರವಾಗಿ ಎಂದಾದಲ್ಲಿ ನೀವು ಉತ್ತರಿಸುವಲ್ಲಿ ಬೇಸರಪಡುವುದಿಲ್ಲ ಎಂದೇ ಭಾವಿಸುತ್ತೇನೆ. ಅಷ್ಡಕ್ಕೂ ಈ ಚರ್ಚೆ ನಿಮಗೇನಾದರೂ ಮುಜುಗರ ಉಂಟು ಮಾಡುತ್ತಿದ್ದಲ್ಲಿ ದಯವಿಟ್ಟು ತಿಳಿಸಿ.

          • Ramjan Darga

            ನಾನಂತೂ 14 ದೇಶಗಳನ್ನು ಸುತ್ತಿ ಅಮೆರಿಕ,ಕನಡಾ ಮುಂತಾದ ದೇಶಗಳಲ್ಲಿ ಬಸವ ತತ್ತ್ವ ಪ್ರಚಾರ ಮಾಡಿದ್ದೇನೆ. ನನ್ನ ವಿಚಾರದಲ್ಲಿ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ.

          • ವಿಜಯ್

            ಧನ್ಯವಾದಗಳು..:)

          • Amaresh

            “ನಾನಂತೂ 14 ದೇಶಗಳನ್ನು ಸುತ್ತಿ ಅಮೆರಿಕ,ಕನಡಾ ಮುಂತಾದ ದೇಶಗಳಲ್ಲಿ ಬಸವ ತತ್ತ್ವ ಪ್ರಚಾರ ಮಾಡಿದ್ದೇನೆ” idarindalE tiLidubaruttade vidEshi haNada baalaMgOchi yaaru aMtaa! 😛

          • Ramjan Darga

            Do you feel that foreign goers are based on foreign money of Balangochi group? My friends are everywhere in the World. They invite me and spend their hard earn money. Why are you becoming cheap?

          • Amaresh

            ಬಸವತತ್ವಪ್ರಚಾರಕ್ಕೆಂದು ತಮಗೆ ಬರುವ funds, ಅವುಗಳ ಮೂಲ, ಅವುಗಳನ್ನು ತಾವು ಉಪಯೋಗಿಸಿದ ರೀತಿ, ಇವೇ ಮೊದಲಾದವುಗಳ ಬಗ್ಗೆ ಯಾರಿಗೂ ಅನುಮಾನ ಬಾರದಿರಲು ಒಂದು ಶ್ವೇತಪತ್ರವನ್ನೇಕೆ ತಾವು ಪ್ರಕಟಿಸಬಾರದು? please do it instead of accusing people of being cheap.

          • Ramjan Darga

            you ask Veera Shaiva Samaja of North America Organisation people; Austaria, New Zealand and Singadpore Basava Samiti People; Pipal Tree people; And Indo Soviet Cultural Society People. These are the people who took care of my Inter National Tours. If you want more information, you can inquire in the concern departments of India. I wonder why your are becoming so cheap?

          • Amaresh

            What is cheap in asking you to come clean on your funding sources, expenditures, profits? Am I asking you to disclose your personal finances? I am asking only about the finances of your religious activities.

          • Ramjan Darga

            ಇದು ಧಾರ್ಮಿಕ ಅಲ್ಲ. ವಿವಿಧ ದೇಶಗಳಿಗೆ ನನ್ನದು ಸಾಂಸ್ಕೃತಿಕ ಪ್ರವಾಸವಾಗಿತ್ತು. ಗುಡ್ ವಿಲ್ ಡೆಲಿಗೇಷನ್‍ನಲ್ಲೂ ಹೊಗಿರುವೆ.ನನ್ನಿಂದ ಒಂದು ಪೈಸೆಯೂ ಖರ್ಚಾಗಿಲ್ಲ. ನನಗೆ ಆಮಂತ್ರಣ ನೀಡಿದ ದೇಶಗಳು ಮತ್ತು ಸಂಘ ಸಂಸ್ಥೆಗಳು ಖರ್ಚುವೆಚ್ಚವನ್ನು ನೋಡಿಕೊಂಡಿವೆ.

          • Amaresh

            “ನನ್ನಿಂದ ಒಂದು ಪೈಸೆಯೂ ಖರ್ಚಾಗಿಲ್ಲ.” ಅದಕ್ಕೆ ಸಾರ್ ನಾನು ತಮ್ಮನ್ನು ಕೇಳಿದ್ದು ನಿಮ್ಮ ಫಂಡ್ಸ್ ಬಗ್ಗೆ ಶ್ವೇತಪತ್ರ ಹೊರತನ್ನಿ ಅಂತ! ನಿಮ್ಮ ವೈಯಕ್ತಿಕ ಖರ್ಚಿನಲ್ಲಿ ನೀವು ಹೋಗಿದ್ದರೆ ನಾನೇಕೆ ತಮ್ಮನ್ನು ಕೇಳುತ್ತಿದ್ದೆ?!!

          • ವಿಶ್ವಾರಾಧ್ಯ ಸತ್ಯಂಪೇಟೆ

            ಛೇ ! ಬಸವಣ್ಣನವರ ವಚನವನ್ನು ಹೀಗೆ ಹದಗೆಡಿಸಿ (ವ್ಯಂಗ್ಯ)ಹೇಳುವ ಧೈರ್ಯ ನಿಮಗೆ ಹೇಗೆ ಬಂತೋ !? ಇದು ಖಂಡಿತ ಸ್ವಾತಂತ್ರ್ಯವಲ್ಲ ಸ್ವೇಚಾಚಾರ !! ಇದನ್ನು ನಾನಂತೂ ಖಂಡಿಸಲೇಬೇಕಾಗುತ್ತದೆ.

      • ವಿಜಯ್

        [ ಕಲ್ಹಣನ ‘ರಾಜತರಂಗಿಣಿ’ಯ ಇಂಗ್ಲಿಷ್ ಅನುವಾದ ಕೃತಿಗೆ ಜವಾಹರಲಾಲ್ ನೆಹರೂ ಅವರು ಮುನ್ನುಡಿ ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿದೆ. ಓದಿ ನೋಡಿ. ನಾನು ಮೇಲೆ ದಾಖಲಿಸಿದ ಮಾತುಗಳಿಗಿಂತಲೂ ಹೆಚ್ಚು ಭಯಂಕರವಾದ ವಿಚಾರಗಳು ಅದರಲ್ಲಿವೆ.]
        ನೀವು ಇಲ್ಲಿ ವರ್ಣಿಸಿ ಸಂತೋಷಪಟ್ಟಿರುವದಕ್ಕಿಂತ ‘ಭಯಂಕರ’ ವಿಚಾರಗಳು ಇರುವ ಸಾಧ್ಯತೆ ಕಡಿಮೆ ಬಿಡಿ. ಕುತೂಹಲದಿಂದ ಎಂ.ಎ,ಸ್ಟೇನ್ ರ ಸಂಪಾದಿತ ರಾಜತರಂಗಿಣಿ ಇಡಿಯಾಗಿ ತಿರುಗಿಸಿ ಹಾಕಿದರು ನೀವು ಇಲ್ಲಿ ಮೇಲೆ ಕೊಟ್ಟಂತಹ ‘ಸುಂದರ’ ವರ್ಣನೆ ನೋಡಲಾಗಲಿಲ್ಲ. ದೇವೊತ್ಪಾಟನಾ ನಾಯಕ ಅನ್ನುವವ ಇರುತ್ತಿದ್ದ. ರಾಜನ ದುಂದುವೆಚ್ಚದ ಬದುಕಿನಿಂದ ಹಣ ತೀರಿದಾಗ ದೇವಸ್ಥಾನಗಳಿಂದ ಹಣ ದೋಚುವುದು ಆತನ ಕಾರ್ಯವಾಗಿತ್ತು ಎಂಬುದಿದೆ. ಅಂದ ಹಾಗೆ ಕಲ್ಹಣ ಹರ್ಷನ ಆಸ್ಥಾನ ಕವಿಯಲ್ಲ..ಆತನ ತಂದೆ ಹರ್ಷನ ಆಸ್ಥಾನದಲ್ಲಿ ಮಂತ್ರಿಯಾಗಿದ್ದನು.
        ಎರಡನೆಯದಾಗಿ ಮೊಹಮ್ಮದ ಕಾಸಿಂ ಸತ್ತಿದ್ದು ತನ್ನ ಇಪ್ಪತ್ತನೆ ವರ್ಷದಲ್ಲಿ. ತನ್ನನ್ನು ಕಳಿಸಿದ ಖಲಿಪಾನಿಂದಲೇ ಸೆರೆಮನೆಯಲ್ಲಿ ಕೊಳೆಯುವ ಶಿಕ್ಷೆಗೆ ಒಳಗಾಗಿ. ಗ.ಸ ಹಾಲಪ್ಪ ಸಂಪಾದಿಸಿದ ಪುಸ್ತಕದ ಹೆಸರನ್ನು ದಯವಿಟ್ಟು ಕೊಡಿ. ನಿಮ್ಮ ಈ ಇನ್ನೊಂದು ಸುಂದರವಾದ ಕತೆಯನ್ನು ಪೂರ್ತಿ ಓದಬೇಕಾಗಿದೆ.

        • Ramjan Darga

          ‘ರಾಷ್ಟ್ರಧರ್ಮ ದ್ರಷ್ಟಾರ ಹರ್ಡೇಕರ ಮಂಜಪ್ಪ’ ಮಂಜಪ್ಪನವರ ಸಮಗ್ರ ಕೃತಿಗಳ ಸಂಗ್ರಹ, ವರ್ಗೀಕರಣ ಮತ್ತು ವಿಮರ್ಶೆ:
          ಗ. ಸ. ಹಾಲಪ್ಪ
          “ಮೊದಲನೆಯ ಆಕ್ರಮಣ: ಮಹಮ್ಮದ ಕಾಸಿಮನೆಂಬ 20 ವರ್ಷಗಳ ಶೂರ ಮುಸಲ್ಮಾನ ತರುಣನು 6 ಸಾವಿರ ಸೈನ್ಯದೊಂದಿಗೆ ಕ್ರಿ.ಶ. 772ರಲ್ಲಿ ಸಿಂಧುಪ್ರಾಂತದ ಮೇಲೆ ದಾಳಿ ಮಾಡಿದನು. ಆಗ ಅಲ್ಲಿ ದಾಹರನೆಂಬ ಹಿಂದು ರಾಜನು ರಾಜ್ಯವಾಳುತ್ತಿದ್ದನು. ಸರದಾರ ಮಹಮ್ಮದ ವಾರಿಸ ಅಲಾಫೆ ಎಂಬಾತನು ದಾಹರನ ಸೇನಾಪತಿಗೂ ನಾರಾಯಣ ಕೋಟೆಯ ಕಿಲ್ಲೆದಾರನಿಗೂ ಲಂಚ ಕೊಟ್ಟು ತನ್ನ ಕಡೆಗೆ ಮಾಡಿಕೊಂಡಿದ್ದನು. ದಾಹರನು 10 ಸಾವಿರ ಕುದುರೆ ಸವಾರರನ್ನು ಮತ್ತು 20 ಸಾವಿರ ಕಾಲುದಳವನ್ನು ತೆಗೆದುಕೊಂಡು ಕಾಸಿಮನ ಸಂಗಡ 8 ದಿನ ಭಯಂಕರವಾದ ಯುದ್ಧ ಮಾಡಿದನು. ಕಾಸಿಮನು ಓಡಿಹೋಗುವ ಸಮಯ ಬಂದಿದ್ದಿತು. ಅಷ್ಟರಲ್ಲಿ ಒಬ್ಬ ಬ್ರಾಹ್ಮಣನು ಈ ದೇವಾಲಯದ ಮೇಲಿರುವ ಧ್ವಜವನ್ನು ಕೆಡವಿದರೆ ಹಿಂದು ಸೈನ್ಯವು ತನಗೆ ಅಪಜಯವಾಗುತ್ತದೆಂದು ಒಡಿಹೋಗುವುದಾಗಿ ಕಾಸಿಮನಿಗೆ ತಿಳಿಸಿದನು. ಆಗ ಕಾಸಿಮನು ಅ ಧ್ವಜವನ್ನು ಕೆಡವಿದನು. ಹಿಂದು ಸೈನ್ಯ ಓಡಲಾರಂಭಿಸಿತು. ದಾಹರನಿಗೆ ಗುರಿ ತಾಗಿ ಆತನು ನೆಲದ ಮೇಲೆ ಬಿದ್ದನು. ಆಗ ಆತನ ಶಿರಚ್ಛೇದ ಮಾಡಿ ಅದನ್ನು ಭಾಲೆಗೆ ಹಚ್ಚಿ ಮೆರೆಸಲಾಯಿತು. ಸೈನಿಕರು ಸುಲಿಗೆ ಮಾಡಿದರು. ಆ ಬ್ರಾಹ್ಮಣನು ದಕ್ಷಿಣೆಯ ಆಸೆಗಾಗಿ ಗುಪ್ತವಾಗಿದ್ದ ದೇವಾಲಯದ ಭಂಡಾರವನ್ನು ತೋರಿಸಿದನು. ಅದರಲ್ಲಿ 40 ಕೊಪ್ಪರಿಗೆಗಳಿದ್ದವು. ಅವುಗಳಲ್ಲಿ 17200 ಮಣ ಬಂಗಾರವಿದ್ದಿತು. ಇದರ ವಿನಾ 9 ಸಾವಿರ ಚಿನ್ನದ ಪ್ರತಿಮೆಗಳಿದ್ದವು. ಅವುಗಳಲ್ಲಿ ದೊಡ್ಡದಾದ ಮೂರ್ತಿಯು 30 ಮಣ ಭಾರವಾದುದಾಗಿದ್ದಿತು. ಇವುಗಳ ವಿನಾ ಮುತ್ತು, ರತ್ನ, ಮಾಣಿಕ್ಯ ಮೊದಲಾದವುಗಳೂ ವಿಶೇಷವಾಗಿದ್ದವು. ಕಾಸಿಮನು ಅವೆಲ್ಲವುಗಳನ್ನು ಒಂಟೆಯ ಮೇಲೆ ಹೇರಿಕೊಂಡು ಹೋದನು. ಹೋಗುವಾಗ ಆ ಬ್ರಾಹ್ಮಣನನ್ನು ಅಲ್ಲಿಯೆ ಕೊಂದನು. ಮತ್ತು ದಾಹರ ರಾಜನ ವಿಶ್ವಾಸಘಾತ ಮಾಡಿದ ಸೇನಾಪತಿಯನ್ನೂ ಸಂಹರಿಸಿದನು.”
          ಹೀಗೆ ಒಬ್ಬ ಬ್ರಾಹ್ಮಣ ಮೋಸ ಮಾಡಿದ್ದರಿಂದಾಗಿ ನಮ್ಮ ದೇಶ ಲೂಟಿಗೆ ಒಳಗಾಯಿತು. ದೇವದಾಸಿಯರಿಂದ ಕೂಡಿದ್ದ ದೇವಾಲಯಗಳಲ್ಲಿ ಸಂಪತ್ತು ಕೂಡ ಅಗಾಧ ಪ್ರಮಾಣದಲ್ಲಿ ತುಂಬಿದ್ದರಿಂದಲೇ ಬಸವಣ್ಣನವರು ದೇವಾಲಯ ಸಂಸ್ಕೃತಿಯನ್ನು ತಿರಸ್ಕರಿಸಿದರು. ಬಸವಣ್ಣನವರು ಕೊಟ್ಟ ಇಷ್ಟಲಿಂಗಕ್ಕೆ ಯಾರಾದರೂ ದೇವಾಲಯ ಕಟ್ಟಲು ಸಾಧ್ಯವೆ?

          • ಸಹನಾ

            8ನೇ ಶತಮಾನದಲ್ಲಿ ನಡೆದ ಘಟನೆಗೆ 20ನೇ ಶತಮಾನದಲ್ಲಿ ವಸಾಹತು ದೊರೆಗಳು ತಮ್ಮ ಸಾಂಸ್ಕೃತಿಕ ಚೌಕಟ್ಟಿನ ಹಿನ್ನೆಲೆಯಲ್ಲಿ ಕಟ್ಟಿಕೊಟ್ಟ ಚರಿತ್ರೆಯನ್ನು ಯಥಾವತ್ತಾಗಿ ನಮ್ಮ ಮಹನೀಯರೆನಿಸಿಕೊಂಡವರು ಯಥವಾತ್ತಾಗಿ ವೈಜ್ಞಾನಿಕ ಚರಿತ್ರೆ ವೈಚಾರಿಕ ವಿವರಣೆಗಳೆಂಬಂತೆಯೇ ಒಪ್ಪಿಕೊಂಡಿದ್ದರು. ಅಂದಿನ ರಾಜಾರಾಮಮೋಹನರಾಯರು ದಯಾನಂದ ಸರಸ್ವತಿಯಿಂದ ಹಿಡಿದು ಮಂಜಪ್ಪನವರಾಧಿಯಾಗಿ ಇಂದಿನ ಈ ವಚನವಿದ್ವಾಂಸರುಗಳು ಅದೆ ತೌಡನ್ನು ಕುಟ್ಟುತ್ತಿದ್ದಾರೆ. ಆಶಿಷ್ ನಂದಿ, ಪಾರ್ಥಚಟರ್ಜಿ, ನೇಲಗಾಂಧಿ, ಟಿ.ಎನ್.ಮದನ್ ಮುಂತಾದವರು ಭಾರತದ ಕುರಿತು ವಸಾಹತುಶಾಹಿ ಕಟ್ಟಿದ ಚರಿತ್ರೆ ಮತ್ತು ಚಿಂತನೆಗಳಲ್ಲಿರುವ ಸಮಸ್ಯೆ ಮತ್ತು ಅವುಗಲ ಕುರಿತ ವಿಮರ್ಶೆಯ ವಸಾಹತ್ತೋತ್ತರ ಚಿಂತನಾಯುಗಕ್ಕೆ ಇವರಿನ್ನೂ ಪ್ರವೇಶಿಸಿಯೇ ಇಲ್ಲ ಎನ್ನುವುದು ವಿಷಾಧದ ಸಂಗತಿ. ರೊನಾಲ್ಡ್ ಇಂಡೆನ್ ಮುಂತಾದವರು ಈರೀತಿಯ ವಸಾಹತು ಚರಿತ್ರೆಯ ಕಥೆಗಳ ಬಗ್ಗೆಯೇ ಮೂಲಭೂತ ಪ್ರಶ್ನೆಗಳೆನ್ನೆತ್ತಿ ಎರಡು ದಶಕಗಳೇ ಸಂದಿದೆ. ಈ ಮೆಕಾಲೆ ಭಾರತವನ್ನು ಮತ್ತು ಜೇಮ್ಸ್ ಮಿಲ್ಲನ ಭಾರತದ ಚರಿತ್ರೆಯನ್ನು ಇಂದಿನ ಯಾವುದೇ ಸ್ನಾತಕ್ಕೋತ್ರ ಪದವಿ ಮಟ್ಟದ ವಿದ್ಯಾರ್ಥಿಯೂ ಚರಿತ್ರೆ ಎಂದು ಒಪ್ಪಿಕೊಳ್ಳುವುದಿಲ್ಲ. ಹಿಸ್ಟರಿಯೋಗ್ರಫಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಈ ಓರಿಯಂಟಲಿಸ್ಟ್ ಚರಿತ್ರೆಯನ್ನು ಈಗಾಗಲೇ ಕಸದಬುಟ್ಟಿಗೆ ಸೇರಿಸಲಾಗಿದೆ. ಆದರೆ ಹಳೆಯ ತಲೆಮಾರಿನ ಕೆಲವು ಚರಿತ್ರೆಯ ಮೇಷ್ಟ್ರುಗಳು ತಮ್ಮ ನಿವೃತ್ತಜೀವನದಲ್ಲಿ ತಾವು ಪಾಠಮಾಡಿದ ಅದೇ ಹಳಸಲು ಓರಿಯಂಟಲ್ ಹಿಸ್ಟ್ರಿಯನ್ನು ಕನ್ನಡದಲ್ಲಿ ಪಠ್ಯಗಳ ರೂಪದಲ್ಲಿ ಬರೆದು ಕನ್ನಡ ಮಾಧ್ಯಮದ ಡಿಗ್ರಿ ವಿಧ್ಯಾರ್ಥಿಗಳು ಅದನ್ನೇ ಭಾರತದ ಚರಿತ್ರೆ ಎಂಬಂತೆ ಓದುವಂತೆ ಮಾಡುತ್ತಿದ್ದಾರೆ. ಆದರೆ ರಂಜಾನ್ ದರ್ಗಾರಂತಹ ಸಂಶೋಧಕರೂ ಅದೇ ಹಳಸಲು ಓರಿಯಂಟಲ್ ಹಿಸ್ಟರಿಯೋಗ್ರಫಿಯನ್ನು ಒಗೆಯುತ್ತಿರುವುದು ವಿಷಾಧದ ಸಂಗತಿ. ಅವರು ದಯವಿಟ್ಟು ತಮ್ಮ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗಕ್ಕೆ ಹೋಗಿ ಹಿಸ್ಟರಿಯೋಗ್ರಫಿಯಲ್ಲಿ ಕಳೆದ ಮೂವತ್ತು ವರ್ಷಗಳಲ್ಲಿ(ಎಡ್ವರ್ಡ್ ಸೈದ್ ನ ನಂತರದಲ್ಲಿ) ಆದ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಪರಿಚಯಿಸಿಕೊಳ್ಳುವುದು ಒಳ್ಳೆಯದು. ಆಗ ನಾವು ಇಲ್ಲಿ ಕೇಳುತ್ತಿರುವ ಪ್ರಶ್ನೆಗಳ ಪ್ರಸ್ತುತತೆ ಅವರಿಗೆ ಅರಿವಾಗುತ್ತದೆ ಎನ್ನುವುದು ನನ್ನ ವಿನಮ್ರ ಕೋರಿಕೆ.

    • shivaganga rumma

      kalhanana rajataranginiyalli devotpatana mantriyobba baruttane, avana kelasa rajanige bekadag devalayagalannu luti madi sampattannu tandukoduvadagittu.

      • Ramjan Darga

        12ನೇ ಶತಮಾನದ ಕಾಶ್ಮೀರಿ ಶೈವ ಬ್ರಾಹ್ಮಣ ಕಲ್ಹಣನು ಬರೆದ ರಾಜತರಂಗಿಯನ್ನು ನೀರ್ಪಾಜೆ ಭೀಮಭಟ್ಟರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅದರೊಳಗಿನ ಒಂದು ಪ್ಯಾರಾ ಇದು:
        “[ಹರ್ಷನು] ದೇವಳಗಳಲ್ಲಿ ಉಳಿದಿದ್ದ ದೇವರ ಪ್ರತಿಮೆಗಳನ್ನು ತರುವ ಬಗ್ಗೆ ಉದಯರಾಜನನ್ನು ದೇವೋತ್ಪಾಟನಾ ನಾಯಕನನ್ನಾಗಿ ನೇಮಿಸಿದನು. ಅವನು ದೇವಮಂದಿರಕ್ಕೆ ಹೋಗುವಾಗ ಮೂಗು, ಕಾಲು,ಕೈ ಇಲ್ಲದ ನಗ್ನ ಭಿಕ್ಷುಕರಿಂದ ಮಲ ಮೂತ್ರ ಮೊದಲಾದವುಗಳನ್ನು ಮೂರ್ತಿಗಳಿಗೆ ಚೆಲ್ಲಿಸಿ ಆ ಮೇಲೆ ಪ್ರತಿಮೆಗಳನ್ನು ಕೀಳುತ್ತಿದ್ದನು. ಚಿನ್ನ, ಬೆಳ್ಳಿ ಮೊದಲಾದವುಗಳಿಂದ ನಿರ್ಮಿಸಿದ ದೇವ ಪ್ರತಿಮೆಗಳು ಕಟ್ಟಿಗೆಯ ತುಂಡುಗಳಂತೆ ರಸ್ತೆಗಳಲ್ಲಿ ಹೊರಳಾಡುತ್ತಿದ್ದವು. ಹೂಗಳ ಬದಲಿಗೆ ಪ್ರತಿಮೆ ಮೇಲೆ ನಗ್ನ ಭಿಕ್ಷುಕರು ಉಗುಳುತ್ತಿದ್ದರು ಮತ್ತು ರಸ್ತೆಗಳಲ್ಲಿ ಹಗ್ಗಗಳಿಂದ ಅವುಗಳನ್ನು ಎತ್ತಿಕೊಂಡು ಹೋಗುತ್ತಿದ್ದರು.”

        • jayateerth joshi

          Well said Darga sir. They hv been doing this conspiracy since thousands of years like their ancestors did. They are continuing the same conspiracy now also.

        • santosh anand

          Well said Darga sir. They hv been doing this conspiracies since thousands of years and continuing the same now also

        • Amaresh

          There is no need to take Rajatarangini seriously as a history which it is not. Indian culture and many Asian cultures are characterized by the absence of historiography. I’m not the first person to say this, many Indologists have been saying this since 19th century. No wonder Rajatarangini reads like a horror story when treated as history. Noted historian Dr. Rajaram Hegde describes a more recent work by a Jain who was asked to write history as recently as 19th century. That work of history also reads funny. Dr. Hegde has discussed the work in detail in one of his books whose name I am not able to recollect. The point is simple. Histiriography is a western tradition that was completely unknown and incongruous with the Indian culture. Kalhana wasn’t trained in historiography and his work is not history. Ranjan Darga should spend a few minutes thinking whether the incident he described from Rajatarangini makes any logical sense as a true record of a real incident. How could have beggars who didn’t have any legs or arms enter the garbhagudi of temples and that too in the presence of temple priests and bhaktas? Would the notorious caste system have allowed these beggars into the garbhagudi? :-p Even if they managed to enter somehow, say with the help of the King’s army, how could they have thrown filth at the idols when they didn’t have arms?!! Who is Ranjan Darga trying to fool here?

          • Ramjan Darga

            ಭೀಮಭಟ್ಟರು ಕುಷ್ಠರೋಗಿ ಪದವನ್ನು ಅನುವಾದ ಮಾಡಿದ ರೀತಿ ಅದು. ಅಷ್ಟೂ ತಿಳಿಯುವುದಿಲ್ಲವೆ?

          • Amaresh

            This is no response to the points I have raised. It was you who cited the translation and not me! if you are now saying that the translation is flawed, it is your problem and not mine. We can discuss the original if you are serious. If your goal is to throw muck, then you will have to continue jumping from one thing to another.

          • Amaresh

            Here is another incident from Rajatarangini (English translation by J. C. Dutt):
            “It is narrated of this king that one day, when he was going to the temple of Vijayeshvara, he met a woman on the way who asked him for some food, and when he promised her whatever food she wanted, she changed herself into some deformed shape and asked for human flesh. Unwilling to kill any one to satisfy her unnatural appetite, he promised her to take off what she liked from his own body.”
            Doesn’t this incident read like an episode from the Jataka tales or Kathasaristsagara or a fantasy? How in a world governed by physical laws a woman transform into a deformed shape?! How can some one as scientific in temper like Ranjan Darga believe that such things can happen in the real world?! Rajatarangini is full of such stories. Ranjan Darga cherry picks some of them and presents it as authentic history!

          • Ramjan Darga

            Then what you are going to take seriously?

        • ವಿಜಯ್

          ಈ ನಿರ್ಪಾಜೆ ಭೀಮ ಭಟ್ಟರ ಅನುವಾದಿತ ಪುಸ್ತಕ ನನಗೆ ಸಿಗಲಿಲ್ಲ..ಸಿಕ್ಕಾಗ ಖಂಡಿತ ಓದುತ್ತೇನೆ. ಸ್ಟೇನ ಪುಸ್ತಕದಲ್ಲಿ ನೀವು ಹೇಳಿದ ವಿಷಯ ಕಾಣಲಿಲ್ಲ. ನೀವು ಮೊದಲನೆಯ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ ಕಲ್ಹಣನ ‘ರಾಜತರಂಗಿಣಿ’ಯ ಇಂಗ್ಲಿಷ್ ಅನುವಾದ ಕೃತಿಯ (ಜವಾಹರಲಾಲ್ ನೆಹರೂ ಅವರು ಮುನ್ನುಡಿ ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಈ ಪುಸ್ತಕವನ್ನು ಪ್ರಕಟಿಸಿದೆ ಎಂದಿದ್ದು) ಹೆಸರೇನು?
          ಅಂದಹಾಗೆ ನೀವು ಮೊದಲು ಬರೆದ
          [ಆ ಮೂರ್ತಿಯನ್ನು ಕುಷ್ಠರೋಗಿಗಳು ಮುಟ್ಟುತ್ತಿದ್ದರು. ಬೀದಿಯಲ್ಲಿ ಬಿದ್ದ ಆ ಅನಾಥ ಮೂರ್ತಿಯ ಮೇಲೆ ನಾಯಿಗಳು ಉಚ್ಚೆ ಹೊಯ್ಯುತ್ತಿದ್ದವು.]
          ಮತ್ತು ಈಗ ಭಟ್ಟರ ಗ್ರಂಥದಿಂದ ಎಂದು ಹೇಳಿದ…
          [ ಅವನು ದೇವಮಂದಿರಕ್ಕೆ ಹೋಗುವಾಗ ಮೂಗು, ಕಾಲು,ಕೈ ಇಲ್ಲದ ನಗ್ನ ಭಿಕ್ಷುಕರಿಂದ ಮಲ ಮೂತ್ರ ಮೊದಲಾದವುಗಳನ್ನು ಮೂರ್ತಿಗಳಿಗೆ ಚೆಲ್ಲಿಸಿ ಆ ಮೇಲೆ ಪ್ರತಿಮೆಗಳನ್ನು ಕೀಳುತ್ತಿದ್ದನು. ಚಿನ್ನ, ಬೆಳ್ಳಿ ಮೊದಲಾದವುಗಳಿಂದ ನಿರ್ಮಿಸಿದ ದೇವ ಪ್ರತಿಮೆಗಳು ಕಟ್ಟಿಗೆಯ ತುಂಡುಗಳಂತೆ ರಸ್ತೆಗಳಲ್ಲಿ ಹೊರಳಾಡುತ್ತಿದ್ದವು. ಹೂಗಳ ಬದಲಿಗೆ ಪ್ರತಿಮೆ ಮೇಲೆ ನಗ್ನ ಭಿಕ್ಷುಕರು ಉಗುಳುತ್ತಿದ್ದರು ಮತ್ತು ರಸ್ತೆಗಳಲ್ಲಿ ಹಗ್ಗಗಳಿಂದ ಅವುಗಳನ್ನು ಎತ್ತಿಕೊಂಡು ಹೋಗುತ್ತಿದ್ದರು.”]
          ಒಂದೇ ಅನಿಸುತ್ತಿದೆಯಾ ನಿಮಗೆ?

          • Ramjan Darga

            ನಿಮಗೆ ಬೇರೆ ಅನಿಸುತ್ತಿದೆಯಾ? ನಾನು ಹೇಳಿದ್ದಕ್ಕಿಂತಲೂ ಭೀಮ ಭಟ್ಟರ ಅನುವಾದ ಭಯಂಕರವಾಗಿಲ್ಲವೆ? ಮೊಸರಲ್ಲಿ ಕಲ್ಲು ಹುಡುಕಬೇಡಿ.
            ಕಲ್ಹಣನ ರಾಜತರಂಗಿಣಿಯನ್ನು ಆರ್.ಎಸ್. ಪಂಡಿತ ಅವರು ಅನುವಾದ ಮಾಡಿದ್ದಾರೆ. ಜವಾಹರಲಾಲ್ ನೆಹರೂ ಅವರು ಮುನ್ನಡಿ ಬರೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಅವರು ಪ್ರಕಟಿಸಿದ್ದಾರೆ. ಅಕಾಡೆಮೆ ಕಚೇರಿ ಬೆಂಗಳೂರು ಸೆಂಟ್ರಲ್ ಕಾಲೇಜಿನ ಆವರಣದಲ್ಲಿದೆ. ಆ ಬೃಹತ್ ಗ್ರಂಥದ ಬೆಲೆ ಕೇವಲ 180 ರೂಪಾಯಿ.

          • Amaresh

            See my response above.

          • Amaresh

            There is no need to take Rajatarangini seriously as a history which it is not. Indian culture and many Asian cultures are characterized by the absence of historiography. I’m not the first person to say this, many Indologists have been saying this since 19th century. No wonder Rajatarangini reads like a horror story when treated as history. Noted historian Dr. Rajaram Hegde describes a more recent work by a Jain who was asked to write history as recently as 19th century. That work of history also reads funny. Dr. Hegde has discussed the work in detail in one of his books whose name I am not able to recollect. The point is simple. Histiriography is a western tradition that was completely unknown and incongruous with the Indian culture. Kalhana wasn’t trained in historiography and his work is not history.

          • ವಿಜಯ್

            ರಂಜಾನ ದರ್ಗಾರವರೆ..
            ನೀವು ಮೊದಲು ಬರೆದ ನಾಯಿ ಉಚ್ಛೆ ಹೊಯ್ಯುವುದು ಮತ್ತು ಈಗ ಬರೆದ ಬಟ್ಟರ ಜನರ ಹತ್ತಿರ ಉಚ್ಛೆ ಹೊಯ್ಯಿಸುವ ಕತೆ ಒಂದೇನಾ? ಒಬ್ಬೊಬ್ಬ ಲೇಖಕನೂ ತನಗೆ ತಿಳಿದಂತೆ ಅನುವಾದ ಮಾಡಿದನೆ? ನೀವು [ನಾನು ಹೇಳಿದ್ದಕ್ಕಿಂತಲೂ ಭೀಮ ಭಟ್ಟರ ಅನುವಾದ ಭಯಂಕರವಾಗಿಲ್ಲವೆ? ] ಮಾತನ್ನು ಓದಿದರೆ ಹಾಗೇ ಅನಿಸುತ್ತದೆ. ಅಕಸ್ಮಾತ ನಾಳೆ ಮತ್ತೊಬ್ಬ ಶ್ರೀಯುತರು ಅನುವಾದ ಮಾಡಿದರೆ ಸತ್ಯ ಇನ್ನೂ ‘ಭಯಂಕರ’ವಾಗಿರುತ್ತದೆ ಎಂದಾಯ್ತು!..ಅಥವಾ ಕಲ್ಹಣ ರಾಜತರಂಗಣಿಯ ತುಂಬ ದೇವೋತ್ಪಾಟನಾ ಕಾರ್ಯವನ್ನೇ ಬರೆದಿದ್ದಾನೆಯೆ? ಅಂದರೆ ಒಂದರಲ್ಲಿ ನಾಯಿ, ಇನ್ನೊಂದರಲ್ಲಿ ಕುಷ್ಟರೋಗಿ, ಮಗದೊಂದರಲ್ಲಿ ಕೈಕಾಲಲ್ಲಿಲ್ಲದವರು(!)….ಏನು ಕಾಳಜಿ ಮಾಡಬೇಡಿ..ಇದ್ದಿದ್ದು ಹೇಳಿ..ನಿಮ್ಮ ಸತ್ಯಗಳಿಗೆ ಅಡ್ಜಸ್ಟ ಆಗಿದ್ದೇವೆ.

          • Ramjan Darga

            If you got doubt read the original work. I do not feel much difference in translation. It is a common problem in translation. Try to understand the essence.

          • Amaresh

            You talk about essence. But when I raised a very important issue, you went silent. Is that your essence? Here is what I wrote again for your reference:
            There is no need to take Rajatarangini seriously as a history which it is not. Indian culture and many Asian cultures are characterized by the absence of historiography. I’m not the first person to say this, many Indologists have been saying this since 19th century. No wonder Rajatarangini reads like a horror story when treated as history. Noted historian Dr. Rajaram Hegde describes a more recent work by a Jain who was asked to write history as recently as 19th century. That work of history also reads funny. Dr. Hegde has discussed the work in detail in one of his books whose name I am not able to recollect. The point is simple. Histiriography is a western tradition that was completely unknown and incongruous with the Indian culture. Kalhana wasn’t trained in historiography and his work is not history.
            Here is another incident from Rajatarangini (English translation by J. C. Dutt):
            “It is narrated of this king that one day, when he was going to the temple of Vijayeshvara, he met a woman on the way who asked him for some food, and when he promised her whatever food she wanted, she changed herself into some deformed shape and asked for human flesh. Unwilling to kill any one to satisfy her unnatural appetite, he promised her to take off what she liked from his own body.”
            Doesn’t this incident read like an episode from the Jataka tales or Kathasaristsagara or a fantasy? How in a world governed by physical laws a woman transform into a deformed shape?! How can some one as scientific in temper like Ranjan Darga believe that such things can happen in the real world?! Rajatarangini is full of such stories. Ranjan Darga cherry picks some of them and presents it as authentic history!

          • Ramjan Darga

            ನಿಮ್ಮ ವಾದಕ್ಕೆ ಸರಿ ಹೋಗದೆ ಇರುವುದು ಇತಿಹಾಸವಲ್ಲವೆ? ದೇವಸ್ಥಾನದ ಸಂಪತ್ತನ್ನು ರಾಜ ತನ್ನ ಭಂಡಾರಕ್ಕೆ ಸೇರಿಸುವುದರ ಬಗ್ಗೆ ಕೌಟಿಲ್ಯ ಏನು ಹೇಳುತ್ತಾನೆ? ಕೌಟಿಲ್ಯ ಹೇಳುವುದಕ್ಕೂ ಕಲ್ಹಣ ಬರೆಯುವುದಕ್ಕೂ ಸಾಮ್ಯ ಇಲ್ಲವೆ?

          • Amaresh

            ಮತ್ತೆ ವಿಷಯಾಂತರ ಮಾಡುತ್ತಿದ್ದೀರಿ. ರಾಜತರಂಗಿಣಿಯ ಪ್ರಸ್ತಾಪ ಮಾಡಿದ್ದು ನೀವು, ಅದು ಚರ್ಚೆಗೆ ಅನಿವಾರ್ಯವೇನೋ ಎಂಬಂತೆ ಬಿಂಬಿಸಿದ್ದು ನೀವು. ಈಗ ರಾಜತರಂಗಿಣಿಯ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ಕೌಟಿಲ್ಯನ ಪ್ರಸ್ತಾಪ ಮಾಡುತ್ತಿದ್ದೀರಿ! ಹೀಗೆ ಒಂದರಿಂದ ಇನ್ನೊಂದಕ್ಕೆ ಹಾರುತ್ತಿರುವ ನಿಮ್ಮ ಬಗ್ಗೆ ಇರುವ ಗೌರವವೂ ಹೋಗುತ್ತಿದೆ.

          • ವಿಜಯ್

            ಮೊಹಮ್ಮದ್ ಬಿನ್ ಕಾಸಿಮ್ ನ ದಂಡಯಾತ್ರೆ ಸುರುವಾಗುವ ಮೊದಲೇ ಸಿಂಧನ ದೆಬಾಲ್ ಪ್ರಾಂತದ ರಾಜನನ್ನು ಆಮೀಷಕ್ಕೊಳಪಡಿಸಿ ಇಸ್ಲಾಂ ಗೆ ಮತಾಂತರಿಸಲಾಗಿತ್ತು. ಕಾಸಿಂನ ಸೈನ್ಯ ಮಿಹ್ರಾನ ದ ನದಿ ತಟದಲ್ಲಿ ಬೀಡು ಬಿಟ್ಟಾಗ ಒಬ್ಬ ರಾಯಭಾರಿಯನ್ನು ದೆಬಾಲ್ ದ ಮಾಲ್ವಿಯೊಬ್ಬನ ಜೊತೆ ಮಾಡಿ ಜಾಟ್ ರು ಮತ್ತು ದೋಣಿ ನಡೆಸುವವರ ಜೊತೆ ಮಾತುಕತೆ ನಡೆಸಲು ಕಳಿಸಲಾಯಿತು. ದೇಬಾಲ ರಾಜನ ಪರವಾಗಿ ಪರಸ್ಪರ ಸಹಕಾರದ ಆಮೀಷ ಒಡ್ಡಿ ಅವರನ್ನು ಒಲಿಸಿಕೊಂಡ ನಂತರ, ಅಲ್ಲಿಯ ಪ್ರಾಂತ ಮುಖಂಡನಾದ ಮೊಕಾ ಬಸಯಾ ಸಹಕಾರದಿಂದ ಕಾಸಿಂನ ಸೈನ್ಯ ಪಶ್ಚಿಮ ದಂಡೆಯಿಂದ ಪೂರ್ವ ದಂಡೆಗೆ ಬಂದಿತು.ಇಲ್ಲಿ ಠಾಕೂರರು ಅವರ ಜೊತೆ ಸೇರಿದರು..ಇಲ್ಲಿದೆ ಪೂರ್ತಿ ಇತಿಹಾಸ ಓದಿ..
            Al-hind: The Making of the Indo-islamic World, Volume 1
            ಗೂಗಲಿನಲ್ಲಿ ಕೊಡಿ..ಗೂಗಲ್ ಬುಕ್ಸ ನಲ್ಲಿ ಪುಸ್ತಕ ಓದಲು ಸಿಗುತ್ತದೆ. ‘mokah basayah’ ಹುಡುಕಿದರೆ ದಹಿರ ಯುದ್ಧದ ಭಾಗ ಬರುತ್ತದೆ. [ಹೀಗೆ ಒಬ್ಬ ಬ್ರಾಹ್ಮಣ ಮೋಸ ಮಾಡಿದ್ದರಿಂದಾಗಿ ನಮ್ಮ ದೇಶ ಲೂಟಿಗೆ ಒಳಗಾಯಿತು.] ಎಂಬ ಬ್ರಾಹ್ಮಣನ ಕಾಗೆ ಗುಬ್ಬಿ ಕಥೆ ಅಲ್ಲಿ ಎಲ್ಲಿ ಫಿಟ್ ಆಯಿತೊ ಗೊತ್ತಾಗಲಿಲ್ಲ..
            ಇನ್ನೊಂದು ರೆಫರೆನ್ಸ್ ಬೇಕಾದರೂ ಇಲ್ಲಿದೆ ..ಸೈಫುದ್ಧೀನ ಕುಂಜ್ ಬರೆದಿದ್ದು :
            ಕನ್ನಡದ ಶಬ್ದಗಳನ್ನು ಡಿಲಿಟ ಮಾಡಿ,ಕೊಂಡಿ ಪೇಸ್ಟ ಮಾಡಿಕೊಳ್ಳಿacademia.edu/673100/MUHAMMAD_BIN_QASIM_LIFE_AND_MESSAGE
            >ಅಂದ ಹಾಗೆ ಇನ್ನೊಮ್ಮೆ ಗಮನಿಸಿ, ಮೊಹಮ್ಮದ್ ಕಾಸಿಂ ಇಲ್ಲಿಗೆ ಬಂದದ್ದು ೧೭ ವಯಸ್ಸಿನಲ್ಲಿ..ತನ್ನ ೨೦ನೆಯ ವಯಸ್ಸಿಗೆ ಶಿಕ್ಷೆಗೊಳಪಟ್ಟು ತೀರಿಕೊಂಡ ಮತ್ತು ಅವನಿಲ್ಲಿ ಕೇವಲ ೬೦೦೦ ಸೈನ್ಯದೊಂದಿಗೆ ಬಂದು ದಹಿರ್ ಹತ್ತಿರ ಯುದ್ದ ಮಾಡಲಿಲ್ಲ.

          • Ramjan Darga

            I referred the great man Hardekar Manjappa (Karnataka Gandhi) Do you feel he was lair? Any how thanks I will go through the references.

          • Amaresh

            Why are you making Hardekar Manjappa as your pawn Mr. Darga? Isn’t that cheap?

          • Ramjan Darga

            ಎಂಥ ವಿತಂಡವಾದ! ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಅವರಂಥ ಜ್ಞಾನಿಗಳ ಬರವಣಿಗೆಯನ್ನೂ ನಾನು ನಂಬಬಾರದೆ? ಮಾನವತಾವಾದಿಗಳಾಗಿದ್ದ ಅವರು ಬ್ರಾಹ್ಮಣರ ಮೇಲಿನ ದ್ವೇಷದಿಂದ ಬರೆದಿದ್ದಾರೆ ಎಂದು ಭಾವಿಸಿರುವಿರಾ ಅಮರೇಶ್ ಅವರೆ? ನಿಮ್ಮ ವಾದಕ್ಕೆ ಸರಿಹೋಗದ್ದೆಲ್ಲವೂ ತಪ್ಪೆ?

          • Amaresh

            ವಿತಂಡವಾದ ತಮ್ಮದು ಸಾರ್. ಹರ್ದೆಕರ್ ಮಂಜಪ್ಪನವರ ಹೆಸರನ್ನು ಅನಗತ್ಯವಾಗಿ ಚರ್ಚೆಗೆ ಎಳೆದದ್ದು ನೀವು ಅನ್ನುವುದನ್ನು ಮರೆಯಬೇಡಿ.

          • jayateerth joshi

            Hardekar Manjappa is very relevant here. Why are scared of him? Vachanakaras
            Darga and everybody is relevant here.

          • Ramjan Darga

            Okay, I might not have used the word dog. It may in other context. I am not having that book now with me. I will inform you later. Are you okay with points?

          • ವಿಜಯ್

            ದರ್ಗಾ ಸರ್..
            ಹರ್ಡೆಕರ ಮಂಜಪ್ಪನವರು ಆ ಘಟನೆಯ ಪ್ರತ್ಯಕ್ಷದರ್ಶಿ ಆಗಿಲ್ಲವಾದದ್ದರಿಂದ..ಇಲ್ಲಿ ಅವರು ಸುಳ್ಲು ಹೇಳಿದರೊ ಅಥವಾ ಇನ್ನೇನೊ ಅನ್ನುವ ಪ್ರಶ್ನೆ ಯೇ ಬರುವುದಿಲ್ಲ. ಅವರ ಕಾಲಕ್ಕೆ ಸಿಗುವ ಆಕರ ಗೃಂಥಗಳ ಪ್ರಮಾಣ,ಪರಿಮಿತಿ ಮತ್ತು ಇತಿಹಾಸವನ್ನು ಅಧ್ಯಯನ ಮಾಡುವ ರೀತಿಯೇ ಬೇರೆಯಾಗಿತ್ತು. ಒಂದು ವಿಷಯದ ಬಗ್ಗೆ ಹೇಳಬೇಕಾದರೆ ಅದೇ ವಿಷಯದ ಮೇಲೆ ಇರುವ ಹಲವು ಗೃಂಥಗಳನ್ನು ಗಣನೆಗೆ ತೆಗೆದುಕೊಂಡು ಸರಿ/ತಪ್ಪನ್ನು ವಿಮರ್ಶಿಸಿ ಬರೆಯಬೇಕಾದ್ದದ್ದು ನಮ್ಮ ಕರ್ತವ್ಯವಲ್ಲವೆ?. ಮೂಲ ರಾಜತರಂಗಿಣಿಯಲ್ಲಿ ದೇವೊತ್ಪಾಟನಾ ನಾಯಕ ಎನ್ನುವವ ಇರುತ್ತಿದ್ದ ಎನ್ನುವ ವಿಷಯವಿದೆ..ಅದನ್ನು ನಾನು ಒಪ್ಪುತ್ತೇನೆ. ಮೊಹಮ್ಮದ್ ಕಾಸಿಂ ನ ಬಗ್ಗೆ ರೆಫೆರನ್ಸ್ ಗಳನ್ನು ನಿಮಗೆ ಕೊಟ್ಟಿದ್ದೇನೆ.
            ಇನ್ನು ಅವಶ್ಯಕತೆಯಿದ್ದಾಗ ದೇವಾಲಯಗಳ ಹಣ ತೆಗೆದುಕೊಳ್ಳಬೇಕೆಂಬ ಕೌಟಿಲ್ಯನ ನೀತಿಯನ್ನು ಈಗಿನ ಸರ್ಕಾರಗಳು ಕೂಡ ಚಾಚು-ತಪ್ಪದೇ ಪಾಲಿಸುತ್ತಿವೆ. ವಿಪರ್ಯಾಸವೆಂದರೆ ಈ ‘ಶೋಷಕ ಸಂಸ್ಕೃತಿ’ ಯ ಹಣವನ್ನು ಉಳಿದವರು ಸಂತೋಷದಿಂದ ತುಟಿ ಪಿಟಿಕ್ಕೆನ್ನದೇ, ಯಾವುದೇ ತಕರಾರಿಲ್ಲದೇ ಅನುಭವಿಸುತ್ತಿದ್ದಾರೆ!.

          • Ramjan Darga

            ವಿಜಯ್ ಅವರೆ, ನಾನೊಂದು ದಾಖಲೆಯನ್ನು ಒದಗಿಸಿದ್ದೇನೆ. ಅದನ್ನು ಒಪ್ಪದ ವಿಚಾರಗಳು ಕೂಡ ಇರಬಹುದು. ಅದರೆ ಒಂದು ಮಾತು. ಇತಿಹಾಸಕಾರರು ಎಲ್ಲದಕ್ಕೂ ಸಾಕ್ಷಿಯಾಗಿ ಇರುತ್ತಾರೆಯೆ? “ಹರ್ಡೆಕರ ಮಂಜಪ್ಪನವರು ಆ ಘಟನೆಯ ಪ್ರತ್ಯಕ್ಷದರ್ಶಿ ಆಗಿಲ್ಲವಾದದ್ದರಿಂದ…” ಎಂದು ಬರೆದಿರುವಿರಿ. ಎಲ್ಲ ಇತಿಹಾಸಕಾರರು ಪ್ರತ್ಯಕ್ಷದರ್ಶಿಗಳೇ? ದಾಳಿಕೋರ ಮೊಹಮ್ಮದ್ ಬಿನ್ ಕಾಸೀಮನಿಗೆ ಆ ಬ್ರಾಹ್ಮಣ ಸಹಾಯ ಮಾಡಿಲ್ಲ ಎಂದಾದರೆ ನನಗೂ ಸಮಾಧಾನದವಾಗುವುದು.

          • ವಿಜಯ್

            [“ಹರ್ಡೆಕರ ಮಂಜಪ್ಪನವರು ಆ ಘಟನೆಯ ಪ್ರತ್ಯಕ್ಷದರ್ಶಿ ಆಗಿಲ್ಲವಾದದ್ದರಿಂದ…” ಎಂದು ಬರೆದಿರುವಿರಿ. ಎಲ್ಲ ಇತಿಹಾಸಕಾರರು ಪ್ರತ್ಯಕ್ಷದರ್ಶಿಗಳೇ?]
            ದರ್ಗಾ ಸರ್..ನಾನು ಅದರ ಮುಂದೆ ಬರೆದಿದ್ದನ್ನು ಓದಲಿಲ್ಲವೆ ನೀವು? ಹರ್ಡೆಕರ್ ಮಂಜಪ್ಪನವರು ಯಾವ ಗೃಂಥವನ್ನು ಆಧಾರವಾಗಿಟ್ಟುಕೊಂಡು ಈ ಘಟನೆ ಬರೆದರು ನಮಗೆ ಗೊತ್ತಿಲ್ಲ..ಆದ್ದರಿಂದ [ಪ್ರತ್ಯಕ್ಷದರ್ಶಿ ಆಗಿಲ್ಲವಾದದ್ದರಿಂದ…ಇಲ್ಲಿ ಅವರು ಸುಳ್ಲು ಹೇಳಿದರೊ ಅಥವಾ ಇನ್ನೇನೊ ಅನ್ನುವ ಪ್ರಶ್ನೆ ಯೇ ಬರುವುದಿಲ್ಲ] ಎಂದು ನಾನು ಬರೆದಿದ್ದೇನೆ.
            ಸಹಸ್ರ ವರ್ಷಗಳ ಹಿಂದೆ ನಡೆದದ್ದು ಮೌಖಿಕವಾಗಿ. ಒಬ್ಬರ ಬರಹಗಳಿಗೆ ಹಲವರು ಭಾಷ್ಯ ಬರೆದು ಮುಂದೆ ಹರಿದು ಬಂದಿರುತ್ತದೆ. ಉದಾಹರಣೆಗೆ ಒಂದು ಘಟನೆಯಲ್ಲಿ ಬರುವ ಹುಲಿಯನ್ನು, ಮೂವರು ಹುಲಿಯೆಂದು, ಇನ್ನೊಬ್ಬರು ದೊಡ್ಡ ಬೆಕ್ಕು ಎಂದು ಗುರುತಿಸಿದರೆ..ಒದುಗರಾದ ನಾವು, ಅನುಮಾನ ಬಂದಾಗ, ಮತ್ತೊಂದು ರೆಫರೆನ್ಸ್ ನೋಡಿ, ವಿಮರ್ಷಿಸಿ, ಯಾವುದು ಸರಿಯೆಂದು ತಿಳಿದುಕೊಳ್ಳುವ ಪ್ರಜ್ಞೆ ಇದ್ದರೆ ಸಾಕಲ್ಲವೆ?
            [ದಾಳಿಕೋರ ಮೊಹಮ್ಮದ್ ಬಿನ್ ಕಾಸೀಮನಿಗೆ ಆ ಬ್ರಾಹ್ಮಣ ಸಹಾಯ ಮಾಡಿಲ್ಲ ಎಂದಾದರೆ ನನಗೂ ಸಮಾಧಾನದವಾಗುವುದು.]
            ಧನ್ಯವಾದಗಳು..ಆದರೆ ಇಲ್ಲಿ ಪ್ರಶ್ನೆ ಬ್ರಾಹ್ಮಣನದಲ್ಲ..ಇತಿಹಾಸ ತಿರುಚುವಿಕೆಯದು..ನಾವು ಪ್ರಶ್ನೆ ಮಾಡಿದ್ದರಿಂದ ನೀವೀಗ ಈ ಉತ್ತರವನ್ನು ಕೊಡುತ್ತಿದ್ದೀರಿ. ಪ್ರಶ್ನಿಸುವವರಿಲ್ಲ ಎಂದಾದರೆ ನೀವು ಹೇಳಿದ್ದೇ ಸತ್ಯವಾಗಿರುತ್ತಿತ್ತು..ನಿಮ್ಮ ಸಿದ್ಧಾಂತಗಳಿಗೆ ಹೊಂದುವಂತೆ ಆ ಘಟನೆಯನ್ನು ನೀವು ಬಳಸಿದಿರಿ..ಅಷ್ಟೆ.

          • Ramjan Darga

            ಹರ್ಡೇಕರ್ ಮಂಜಪ್ಪನವರು ಇತಿಹಾಸ ತಿರುಚಿದ್ದಾರೆಂದು ನಿಮಗೆ ಯಾವ ಇತಿಹಾಸ ತಜ್ಞ ಹೇಳಿದರು? ಅವರು ಬರೆದದ್ದನ್ನು ನಾನು ಬಳಸಿದ್ದರಿಂದ ಅವರು ಇತಿಹಾಸ ತಿರುಚಿದ್ದಾರೆ ಎನ್ನಲು ನಿಮ್ಮ ಬಳಿ ಯಾವ ಆಧಾರವಿದೆ.

          • ಕಟ್ಟಿಮನಿ

            ಪ್ರಿಯ ದರ್ಗಾ, ವಿತ್ತಂಡ ವಾದವನ್ನು ಬಿಡಿ. ಹರ್ಡೇಕರ್ ಮಂಜಪ್ಪನವರು ಇತಿಹಾಸ ತಿರುಚಿದ್ದಾರೆಂದು ಯಾರೂ ಹೇಳಿಲ್ಲ. ತಮಗೆ ಅಷ್ಟೂ ಅರ್ಥವಾಗದಿದ್ದರೆ ಏನು ಮಾಡುವುದು?
            ೧) ಹರ್ಡೇಕರ್ ಮಂಜಪ್ಪನವರು ಆ ಘಟನೆಯ ಪ್ರತ್ಯಕ್ಷದರ್ಶಿ ಆಗಿಲ್ಲ.
            ೨) ಅವರು ಆ ಘಟನೆಯ ಬಗ್ಗೆ ಯಾವುದೋ ಆಕರದಿಂದ ಓದಿ/ಕೇಳಿ ಅದರ ಬಗ್ಗೆ ಬರೆದರು.
            ೩) ಅವರು ಆ ಘಟನೆಯ ಸತ್ಯಾಸತ್ಯತೆ ಬಗ್ಗೆ ಸಂಶೋಧನೆ ಮಾಡಲಿಲ್ಲ. ಬಹುಶಃ ಆಕರದಲ್ಲಿದ್ದುದ್ದನ್ನು ಸತ್ಯ ಎಂದು ತಿಳಿದು ಅದರ ಬಗ್ಗೆ ಬರೆದರು.
            ೪) ಅವರು ಯಾವ ಆಕರಗಳನ್ನು ಆಧಾರವಾಗಿಟ್ಟುಕೊಂಡು ಬರೆದರೋ ಅದು ಅವರೇ ಬಲ್ಲರು. (ತಮಗೆ ಗೊತ್ತಿದ್ದರೆ ದಯವಿಟ್ಟು ಮುಂದೆ ಬಂದು ಇಲ್ಲಿ ಹೇಳಿ.)
            ೫) ಸತ್ಯನಿಷ್ಠರಾಗಿದ್ದ ಹರ್ಡೇಕರ್ ಮಂಜಪ್ಪನವರು ಬರೆದರು ಎಂಬ ಏಕೈಕ ಕಾರಣಕ್ಕೆ ಅವರು ಬರೆದದ್ದು ಎಲ್ಲವೂ ಸತ್ಯವಾಗಿರಲೇ ಬೇಕು ಅಂತೇನಿಲ್ಲ, ಅವರ ಆಕರಗಳು ಯಾವುವು, ಅವುಗಳ reliability ಎಷ್ಟು ಅಂತ ಗೊತ್ತಿಲ್ಲದೇ ಇರುವಾಗ.

          • ಕಟ್ಟಿಮನಿ

            ಪ್ರಿಯ ರಂಜಾನ್ ದರ್ಗಾ, ವಿತ್ತಂಡ ವಾದವನ್ನು ಬಿಡಿ. ಹರ್ಡೇಕರ್ ಮಂಜಪ್ಪನವರು ಇತಿಹಾಸ ತಿರುಚಿದ್ದಾರೆಂದು ಯಾರೂ ಹೇಳಿಲ್ಲ. ತಮಗೆ ಅಷ್ಟೂ ಅರ್ಥವಾಗದಿದ್ದರೆ ಏನು ಮಾಡುವುದು?
            ೧) ಹರ್ಡೇಕರ್ ಮಂಜಪ್ಪನವರು ಆ ಘಟನೆಯ ಪ್ರತ್ಯಕ್ಷದರ್ಶಿ ಆಗಿಲ್ಲ.
            ೨) ಅವರು ಆ ಘಟನೆಯ ಬಗ್ಗೆ ಯಾವುದೋ ಆಕರದಿಂದ ಓದಿ/ಕೇಳಿ ಅದರ ಬಗ್ಗೆ ಬರೆದರು.
            ೩) ಅವರು ಆ ಘಟನೆಯ ಸತ್ಯಾಸತ್ಯತೆ ಬಗ್ಗೆ ಸಂಶೋಧನೆ ಮಾಡಲಿಲ್ಲ. ಬಹುಶಃ ಆಕರದಲ್ಲಿದ್ದುದ್ದನ್ನು ಸತ್ಯ ಎಂದು ತಿಳಿದು ಅದರ ಬಗ್ಗೆ ಬರೆದರು.
            ೪) ಅವರು ಯಾವ ಆಕರಗಳನ್ನು ಆಧಾರವಾಗಿಟ್ಟುಕೊಂಡು ಬರೆದರೋ ಅದು ಅವರೇ ಬಲ್ಲರು. (ತಮಗೆ ಗೊತ್ತಿದ್ದರೆ ದಯವಿಟ್ಟು ಮುಂದೆ ಬಂದು ಇಲ್ಲಿ ಹೇಳಿ.)
            ೫) ಸತ್ಯನಿಷ್ಠರಾಗಿದ್ದ ಹರ್ಡೇಕರ್ ಮಂಜಪ್ಪನವರು ಬರೆದರು ಎಂಬ ಏಕೈಕ ಕಾರಣಕ್ಕೆ ಅವರು ಬರೆದದ್ದು ಎಲ್ಲವೂ ಸತ್ಯವಾಗಿರಲೇ ಬೇಕು ಅಂತೇನಿಲ್ಲ, ಅವರ ಆಕರಗಳು ಯಾವುವು, ಅವುಗಳ reliability ಎಷ್ಟು ಅಂತ ಗೊತ್ತಿಲ್ಲದೇ ಇರುವಾಗ.

          • ಸಹನಾ

            ತಮ್ಮ ವಾದಗಳ ಬಗ್ಗೆ ಎತ್ತುವ ಟೀಕೆ ಮತ್ತು ವಿರೋಧಗಳನ್ನು ಇತರಮಹಾಪುರಷರ ಮೇಲಿನ ದಾಳಿ/ಟೀಕೆಗಳೆಂಬಂತೆ ಅದರ ಗುರಾಣಿಯಲ್ಲಿ ತಮ್ಮ ವಾದದ ತಪ್ಪುಗಳನ್ನು ಸರಿಮಾಡುವ ತಂತ್ರವನ್ನು ರಂಜಾನ್ ದರ್ಗಾರವರು ಬಿಡದಿದ್ದ ಪಕ್ಷದಲ್ಲಿ ಅವರೊಂದಿಗೆ ತರ್ಕಬದ್ದವಾದ ಚರ್ಚೆ ಮುಂದುವರಿಸಲು ಸಾಧ್ಯವಿಲ್ಲವೆನಿಸುತ್ತದೆ. (ಸೆಮೆಟಿಕ್ ರಿಲಿಜನ್ನಿನವರು ಹೇಳುವಂತೆ ಪ್ರವಾದಿಗಳು ಹೇಳಿಬಿಟ್ಟಿದ್ದಾರೆ, ಹಾಗಾಗಿ ಅದು ಸತ್ಯವೇ ಇರಬೇಕು; ಅದು ದೈವವಾಣಿಯಿಂದಲೇ ಬಂದಿರುವುದು, ಹಾಗಾಗಿ ಅದು ಸತ್ಯವೇ ಎನ್ನುವಂತೆ ಮಂಜಪ್ಪನವರು ಹೇಳಿದ್ದ ಮೇಲೆ ಅದು ಸತ್ಯವೇ ಇರಬೇಕು ಎನ್ನುವ ರೀತಿಯಲ್ಲಿ ಮಾತನಾಡುವುದು ಬೌದ್ದಿಕ ಚರ್ಚೆಯನ್ನು ಮುಂದುವರಿಸುವ ಲಕ್ಷಣವೇ? ಒಂದು ರೀತಿಯ ಸೆಮೆಟಿಕ್ ಥಿಯಾಲಜಿಯೊಳಗಿನ ಚರ್ಚೆಗಳಲ್ಲಿ ಈ ರೀತಿಯ ನಿಲುವುಗಳು ಸರಿ ಇರಬಹುದು; ಆದರೆ ವೈಜ್ಞಾನಿಕ ಚರ್ಚೆಯಲ್ಲಿ ಎಲ್ಲವೂ ಪರೀಕ್ಷೆಗೆ ಒಳಪಡಬೇಕಾದ ವಾದಗಳೇ ಆಗುತ್ತವೆ. ಹಾಗಾಗಿ ಓರ್ವರ ವಾದಗಳನ್ನು ಪರೀಕ್ಷೆಗೆ ಒಳಪಡಿಸಿದಾಕ್ಷಣ ಅವರಿಗೆ ಅವಮಾನ ಮಾಡಿದಂತೆ ಅಥವಾ ಅಗೌರವ ತೋರಿಸಿದಂತೆ ಎನ್ನುವಂತಹ ಮಾತುಗಳು ಬೌದ್ದಿಕ ಚರ್ಚೆಗಳಲ್ಲಿ ಅಸಮ್ಮತ ಮಾತ್ರವಲ್ಲ ಅದು ಚರ್ಚೆಯನ್ನೇ ಅಬೌದ್ದಿಕ ಮತ್ತು ಅವೈಜ್ಞಾನಿಕಗೊಳಿಸಿಬಿಡುವ ಅಪಾಯವಿದೆ. ಜೊತೆಗೆ ತಮ್ಮ ಆಧಾರರಹಿತ ಅವೈಜ್ಙಾನಿಕ ನಿಲುವುಗಳಿಗೆ ಈ ತಂತ್ರವನ್ನು ಬಹುಸುಲಭವಾಗಿ ಬಳಸಲಾರಂಭಿಸುಬಿಡುತ್ತಾರೆ, ದರ್ಗಾ ಸರ್ ರೀತಿಯಲ್ಲಿ…)

          • ವಿಜಯ್

            ರಂಜಾನ ದರ್ಗಾ ಸರ್..
            ನೀವು=ಬಸವಣ್ಣನವರು , ನೀವು= ಹರ್ಡೇಕರ್ ಮಂಜಪ್ಪನವರು ಆಗಿದ್ದಿದ್ದರೆ ಕ್ಷಮಿಸಿ..ನನ್ನ ವಾದ/ಹೇಳಿಕೆಗಳು ತಪ್ಪು. ಅದಾಗಿಲ್ಲದ ಪಕ್ಷದಲ್ಲಿ, ನನ್ನ ಮೇಲಿನ ಪ್ರತಿಕ್ರಿಯೆಗಳಲ್ಲಿ ನಾನು ಏನು ಹೇಳಲು ಬಯಸಿದ್ದೇನೆ ಎಂಬುದು ನಿಮಗೆ ಖಂಡಿತ ಗೊತ್ತಾಗಿರುತ್ತದೆ. ಧನ್ಯವಾದಗಳು.

  2. Satyanarayana BR

    ಮೊಸರನ್ನು ತಿಂದು ಕೈಯನ್ನು ಬೇರೆಯವರ ಬಾಯಿಗೆ ಒರೆಸುವ ಕಾರ್ಯವನ್ನು ಈಗಾದರೂ ನಿಲ್ಲಿಸಬಹುದಲ್ಲವೆ?, ಹೌದು. ಈ ಕೆಲಸವನ್ನು ಪುರೋಹಿತಾಶಹಿಯ ಮೂಲಪ್ರಭೃತಿಗಳು ಮೊದಲು ಮಾಡಿದ್ದರು, ಈಗಲೂ ಮಾಡುತ್ತಿದ್ದಾರೆ. ಅದನ್ನು ಉಳಿದವರು ಅನುಸರಿಸುತ್ತಿದ್ದಾರೆ ಅಷ್ಟೆ (ಹಾಗೆಂದು ಅವರು ಕ್ಷಮಾರ್ಹರೇನು ಅಲ್ಲ). ಆ ಕೆಲಸವನ್ನು ಎಲ್ಲರೂ ನಿಲ್ಲಿಸಬೇಕೆಂದು ಆಶಿಸುವುದು, ಅದಕ್ಕಾಗಿ ಸದಾಶಯದ ವಚನಗಳಂತಹ ಸಾಹಿತ್ಯದ, ಇತಿಹಾಸದ ಬೆಳಕನ್ನು ಆಶ್ರಯಿಸುವುದು ಸಹಜವಾಗಿಯೇ ಇದೆ.
    ಆಗಿನ ಸಮಾಜದ ಉಳಿದ ವರ್ಗದವರೇನಾದರೂ ಸುಮ್ಮನುಳಿದು ಕತ್ತೆ ಕಾಯುತ್ತಿದ್ದರೆ? – ಸ್ವಾಮಿ, ಈ ಮಾತು ಹೇಳುವ ಮೊದಲು ನೀವು ಸ್ವಲ್ಪ ಯೋಚನೆ ಮಾಡಬೇಕಿತ್ತು. ಇದೆ ಪ್ರಶ್ನೆಯನ್ನು ಇನ್ನೊಂದು ರೀತಿಯಲ್ಲಿ ಕೇಳಿಕೊಳ್ಳೋಣ. ಘಜ್ನಿಮಹಮ್ಮದನು ಹದಿನೇಳು ಬಾರಿ ಭಾರತದ ಮೇಲೆ ದಂಡಯಾತ್ರೆ ಮಾಡಿ ಇಲ್ಲಿದ್ದ ಐಶ್ವರ್ಯವನ್ನೆಲ್ಲಾ ಹೊತ್ತೊಯ್ದ, ದೇವಾಲಯಗಳನ್ನು ನಾಶಮಾಡಿದ, ಯುರೋಪಿಯನ್ನರು ನಮ್ಮನ್ನು ಆಕ್ರಮಿಸಿ ಭಾರತವನ್ನು ಕೊಳ್ಳೆ ಹೊಡೆದುಬಿಟ್ಟರು ಎಂದು ಈಗ ಬೊಬ್ಬೆ ಹಾಕುತ್ತಿದ್ದೇವೆ. ಅದರ ಬದಲು, ಘಜ್ನಿ ಹದಿನೇಳು ಬಾರಿ ದಂಡೆತ್ತಿ ಬಂದಾಗಲೆಲ್ಲಾ, ಯುರೋಪಿಯನ್ನರು ಕೊಳ್ಳೆ ಹೊಡೆಯುವಾಗಲೆಲ್ಲಾ ಇಲ್ಲಿನವರೇನು ಕತ್ತೆ ಕಾಯುತ್ತಿದ್ದರೆ? ಮೊದಲೇ ಇದ್ದ ರಾಮಮಂದಿರವನ್ನು ಕೆಡವಿ ಮಸೀದಿ ಕಟ್ಟಲಾಯಿತು ಎಂದರೆ, ರಾಮಂದಿರ ಕೆಡವುವಾಗ ಅಲ್ಲಿದ್ದವರೇನು ಕತ್ತೆ ಕಾಯುತ್ತಿದ್ದರೆ? ಅಥವಾ ಮ್ಲೇಚ್ಛರ ಸಂಹಾರಕ್ಕಾಗಿ ದ್ರಾಂ ದ್ರೀಂ ಧ್ರೂಂ ಮಂತ್ರವನ್ನು ಕಂಡುಹಿಡಿಯುತ್ತಿದ್ದರೆ? ಎಂದೆಲ್ಲಾ ಕೇಳಿದರೆ ಎಷ್ಟೊಂದು ಆಭಾಸವಾಗತ್ತದೆ ಅಲ್ಲವೆ? ಇಡೀ ಒಂದು ದೊಡ್ಡ ಸಮುದಾಯವನ್ನೇ ಅಸ್ಪೃಷ್ಯರನ್ನಾಗಿಸಿ, ಅಕ್ಷರವಂಚಿತರನ್ನಾಗಿಸಿ ಅಂಧಕಾರದಲ್ಲಿ ಇಟ್ಟಿದ್ದ ಮನಸ್ಥಿತಿಯೇ ಈಗ ‘ಉಳಿದವರೇನು ಕತ್ತೆ ಕಾಯುತ್ತಿದ್ದರೆ?’ ಎಂದು ಕೇಳುತ್ತಿದೆಯೇನೊ ಅನ್ನಿಸುತ್ತಿದೆ.
    ಬ್ರಾಹ್ಮಣರಲ್ಲದ ರಾಜರೇನು ಮಾಡುತ್ತಿದ್ದರು? ಎಂಬ ಪ್ರಶ್ನೆಯೂ ಇದಕ್ಕೆ ಹೊರತಲ್ಲ. ದೇವರುಗಳನ್ನೇ ರೌಡಿಗಳನ್ನಾಗಿಸಿ ಸಮುದಾಯಗಳ ವಿಕಾಸವನ್ನೇ ತಡೆಹಿಡಿದ, ದೇವರ, ಧರ್ಮದ ಹೆಸರಿನಲ್ಲಿ ಮೌಢ್ಯವ ಬಿತ್ತಿ, ಧರ್ಮವನ್ನೇ ಅಪರಾಧಿ ಸ್ಥಾನದಲ್ಲಿ ತಂದು ನಿಲ್ಲಿಸಿಕೊಂಡಿರುವ ದೇಶ ನಮ್ಮದು. ಆಗ ಅವರೆಲ್ಲಾ ಕತ್ತೆ ಕಾಯುತ್ತಿದ್ದರು ಎಂದೇ ಇಟ್ಟುಕೊಳ್ಳೋಣ. ಅದಕ್ಕೆ ಈಗಲೂ ಹಾಗೇ ಇರಬೇಕು ಎಂದು ಆಶಿಸುವುದು ಆತ್ಮದ್ರೋಹವಲ್ಲದೆ ಮತ್ತೇನಲ್ಲ. ಬ್ರಾಹ್ಮಣರಲ್ಲದ ರಾಜರು ಬ್ರಾಹ್ಮಣರ ಚಿತಾವಣೆಗೆ ಒಳಗಾಗಿದ್ದರು, ಅವರ ಬುದ್ಧಿವಂತಿಕೆಗೆ ಮರುಳಾಗಿದ್ದರು. ಏಕೆಂದರೆ, ಬ್ರಾಹ್ಮಣರ ಹಿಂದೆ ದೇವರಿದ್ದನು. ಧರ್ಮವಿತ್ತು. ಸ್ವತಃ ಅವರೇ ಮಹಾಜನರಾಗಿದ್ದರು, ಭೂಸುರರಾಗಿದ್ದರು. ದೇವರು ಧರ್ಮ ಎಂದರೆ ಏನೆಂದು ಹೇಳಬೇಕಾದವರು ಅದನ್ನು ಬಿಟ್ಟು, ಭಯವನ್ನು ಬಿತ್ತಿದರು. ಈ ಕೊಲೆಪಾತಕತನದಲ್ಲಿ ಬ್ರಾಹ್ಮಣರಷ್ಟೇ ಅಧಿಕಾರದಂಡವನ್ನು ಹಿಡಿದಿದ್ದ ರಾಜರೂ ಅಪರಾಧಿಗಳು. ಅದಕ್ಕೆ, ಕೊನೆಯ ಪುರೋಹಿತನ ಕರುಳು ಕೊನೆಯ ದೊರೆಯ ಕೊರಳಿಗೆ ಉರುಳಾಗುವ ತನಕ ಪರೋಹಿತಶಾಹಿಗೆ ಅಳಿವಿಲ್ಲ ಎಂದಿರುವುದು. ಮಹಾಭಾರತದ ಒಂದು ಕಥೆಯಲ್ಲಿ, ಒಂದೇ ತೆರನಾದ ತಪ್ಪು ಮಾಡಿದ್ದ ಸಾಮಾನ್ಯನಿಗೆ ಸಣ್ಣಪ್ರಮಾದ ಶಿಕ್ಷೆಯನ್ನು, ಪುರೋಹಿತನಿಗೆ ದೊಡ್ಡಪ್ರಮಾಣದ ಶಿಕ್ಷೆಯನ್ನು ಧರ್ಮರಾಯ ವಿಧಿಸುತ್ತಾನೆ. ಉದ್ದೇಶಪೂರ್ವಕವಾಗಿ ಅನುದ್ದೇಶಪೂರ್ವಾಗಿ ಮಾಡುವ ತಪ್ಪುಗಳಲ್ಲಿ ವ್ಯತ್ಯಾಸವಿದೆ. (ಇಂದಿಗೂ ನ್ಯಾಯಾಲಯಗಳಲ್ಲಿ ಉದ್ದೇಶಪೂರ್ವಕವಲ್ಲದ ತಪ್ಪುಗಳ ವಿಷಯದಲ್ಲಿ, ಉದ್ದೇಶಪೂರ್ವಕ ತಪ್ಪುಗಳ ಬಗ್ಗೆ ತೋರಿಸುವಷ್ಟು ಕಠಿಣ ನಿಲುವನ್ನು ತೋರುವುದಿಲ್ಲ ಎಂಬುದನ್ನು ಗಮನಿಸಬೇಕು.) ಇದು ಶಿಕ್ಷೆಯ ವಿಷಯವಲ್ಲ; ಜವಾಬ್ದಾರಿಯ ವಿಷಯ ಅಷ್ಟೆ. ಜವಾಬ್ದಾರಿ ಸ್ಥಾನದಲ್ಲಿರುವವರು, ಆಚಾರ್ಯರ ಸ್ಥಾನದಲ್ಲಿರುವವರು ಹೆಚ್ಚು ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ಹಳ್ಳಿಯ ಕಡೆ ಇದಕ್ಕೆ ಅನ್ವಯವಾಗುವಂತೆ ಒಂದು ಗಾದಯೇ ಇದೆ. ‘ಮೇಷ್ಟ್ರು ನಿಂತುಕೊಂಡು ಮಾಡಿದರೆ, ಮಕ್ಕಳು ಕುಣಿದಾಡಿಕೊಂಡು ಮಾಡ್ತವೆ’ ಅಂತ. ಇತಿಹಾಸದಲ್ಲಿ ಆ ಜವಾಬ್ದಾರಿತನ ದುರುಪಯೋಗವಾಗಿದೆ. ಹಾಗೆಂದು ಅದಕ್ಕೆ ಈಗ ಯಾರನ್ನೊ ತಪ್ಪಿತಸ್ಥರನ್ನಾಗಿಸುವುದಲ್ಲ, ದೂಷಿಸುವುದಲ್ಲ. ಆದರೆ ಅಂತಹ ತಪ್ಪುಗಳು ಮತ್ತೆ ಆಗದಂತೆ, ಇತಿಹಾಸದ ಬೆಳಕಲ್ಲಿ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇತಿಹಾಸದ ಅಧ್ಯಯನವೆಂದರೆ, ಅದನ್ನೇ ಮತ್ತೆ ಪುನರಾವರ್ತಿಸುವುದಲ್ಲ, ಅದನ್ನೇ ಮತ್ತೆ ಜೀವಿಸುವುದಲ್ಲ; ಅದರ ಬೆಳಕಿನಲ್ಲಿ ನಮ್ಮ ಕತ್ತಲನ್ನು ಹೋಗಲಾಡಿಸಿಕೊಳ್ಳುವುದು. ಇತಿಹಾಸದ ಅಧ್ಯಯನವೆಂದರೆ ಅದರ ‘ಫಲ’ ವನ್ನು ಇನ್ನೊಂದೆರಡು ಶತಮಾನ ತಿನ್ನೋಣ ಎನ್ನುವ ಆಶೆಯದ್ದಲ್ಲ; ಮತ್ತೆ ತಪ್ಪುಗಳಾಗದಂತೆ ನೋಡಿಕೊಳ್ಳುವ ನಮ್ಮನ್ನು ನಾವು ತಿದ್ದಿಕೊಳ್ಳುವ ಪ್ರಕ್ರಿಯೆ. ಅಲ್ಲಮನ ಮಾತಿನಂತೆ, ಕಲ್ಯಾಣವೆಂಬ ಹಣತೆಯಲ್ಲಿ, ಬಸವನೆಂಬ ಜ್ಯೋತಿ ಇದೆ. ಅದರಿಂದ ಮನೆ-ಮನ ಬೆಳಗುವ ದೀಪವನ್ನು ಹಚ್ಚಿಕೊಳ್ಳಬೇಕಲ್ಲದೆ, ಮನೆ ಸುಡುವ ಕಿಚ್ಚು ಹಚ್ಚಿಕೊಳ್ಳಬೇಕಿಲ್ಲ. ಈ ಹಾದಿಯಲ್ಲೆ ಚರ್ಚೆ ವೈಚಾರಿಕ ಸಂಘರ್ಷ ನಡೆದರೆ ತಪ್ಪೇನು ಇಲ್ಲವಲ್ಲ.
    ಬ್ರಾಹ್ಮಣರನ್ನು ತಿದ್ದುವ ಕೆಲಸ ಮಾಡುವುದಕ್ಕಿಂತ ‘ಶೋಷಿತ’ ರನ್ನು ತಿದ್ದಿ. ಎಂಬ ಮಾತಿನಲ್ಲೇ ನಾನು ಶ್ರೇಷ್ಠ, ಪರಿಪೂರ್ಣ, ನಾನು ಬದಲಾಗುವ ಅವಶ್ಯಕತೆಯಿಲ್ಲ, ಎಂದು ಮನೆಯ ಮನದ ಕಿಟಕಿಗಳನ್ನು ಮುಚ್ಚಿಕೊಳ್ಳುವ ಮನಸ್ಥಿತಿಯಿದೆ. ಇಲ್ಲಿ ಯಾರು ಯಾರನ್ನೂ ತಿದ್ದಬೇಕಾಗಿಲ್ಲ. ನಮ್ಮನ್ನೇ ನಾವು ತಿದ್ದಿಕೊಳ್ಳಬೇಕಾಗಿದೆ. ಅದಕ್ಕಾಗಿ ವಚನಗಳ ರೀತಿಯಲ್ಲಿ ಬೇರೆ ಯಾವುದೇ ಮಾದ್ಯಮ ಸಹಕರಿಸುವುದಾದರೆ, ಅದನ್ನು ಮುಕ್ತವಾಗಿ ಸ್ವೀಕರಿಸಬಹುದಲ್ಲ. ಅದು ಇತಿಹಾಸದ್ದಾಗಲಿ ಅಥವಾ ವರ್ತಮಾನದ್ದಾಗಲಿ ಒಳ್ಳೆಯದನ್ನು ಗೌರವಿಸುವ ಮಸ್ಸಿದ್ದರೆ ಸಾಕಲ್ಲವೆ?
    ಪೇಜಾವರ ಶ್ರೀಗಳ ಬಗ್ಗೆ ಗೌರವವಿಲ್ಲವೆಂದವರು ಯಾರು? ಅವರ ಪೀಠವನ್ನು ಅತಿಕ್ರಮಿಸುವ ಆಶೆ ಯಾರಿಗೂ ಇದ್ದಂತಿಲ್ಲ. ಅವರು ಮೊದಲಬಾರಿಗೆ ಹೊಲಗೇರಿಗೆ ಹೋದಾಗ ಅದೊಂದು ದೊಡ್ಡ ಕ್ರಾಂತಿಯೆಂದು ಜನರೆಲ್ಲಾ ಸ್ವಾಗತಿಸಿದ್ದಾರೆ. ಆದರೆ, ಅವರು ಅಲ್ಲಿಂದ ಬಂದು, ಅನಿವಾರ್ಯಸ್ಥಿತಿಯಿಂದ ಶುದ್ಧೀಕರಣಕ್ಕೆ ಒಳಗಾಗಿದ್ದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಂಡಿದ್ದಾರೆ. ಏಕೆಂದರೆ ಯಾವುದು ಒಂದೇ ಭಾರಿಗೆ ಬದಲಾಗುವುದಿಲ್ಲ. ಆದರೆ ಆ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟ ಪೇಜಾವರರು ಅಭಿನಂದಾರ್ಹರು. ಅದಕ್ಕೆ ಜನತೆ ಅವರ ಕಡೆಗೆ ನೋಡುತ್ತಾರೆ. ಬದಲಾವಣೆ ಬಯಸುತ್ತಾರೆ. ಅಸ್ಪೃಷ್ಯತೆ, ಪಂಕ್ತಿಭೇದ, ಜಾತಿ ಮತ ಯಾವುವೂ ಶಾಶ್ವತವಲ್ಲ. ಪೇಜಾವರ ಶ್ರೀಗಳಂತಹವರು ಮನಸ್ಸು ಮಾಡಿದರೆ ಅದರಲ್ಲಿ ಖಂಡಿತ ನಿಧಾನವಾಗಿಯಾದರೂ ಬದಲಾವಣೆ ತರಬಹುದು. ಅದಕ್ಕಾಗಿಯೇ ಜನ ಅವರಕಡೆಗೆ ನೋಡುತ್ತಾರೆ, ಅವರ ಒಂದೊಂದು ನಡೆಯನ್ನೂ ವಿಮರ್ಶಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಅಗೌರವ ತೋರಿಸುತ್ತಿದ್ದಾರೆ ಎಂದಾಗಲೀ, ಅವರ ಪೀಠಕ್ಕೆ ಆಸೆ ಪಡುತ್ತಿದ್ದಾರೆಂದಾಗಲಿ ನಿರ್ಧರಿಸುವುದು ಎಷ್ಟು ಸರಿ.
    ಮುಟ್ಟುವಿಕೆ ಮುಟ್ಟಿಸಿಕೊಳ್ಳುವಿಕೆಯ ಬಗ್ಗೆ ವಿವೇಕಾನಂದರ ನುಡಿಗಳಿವು. There is no harm in touching the nonbrahimn classes where it seves one’s purpose, and when you have done with it you bathe, for the nonbrahmins are as a class unholy and must never be touched on other occasions monks, and sanyasins and brahminas of a certain type have thrown the country into ruin. Intent at the while on theft and wickedeness, these pose as preachers of religion. They will take gifts from the people and at the same time cry ‘Don’t touch me’. And what great things have they been doing’ . ಬಸವ ಮುಖ್ಯನಾಗುವುದು ಈ ಕಾರಣಕ್ಕೆ, ‘ಅವನಾರವ ಅವನಾರವನೆನ್ನದೆ, ಇವ ನಮ್ಮವ ಇವ ನಮ್ಮವ’ ಎಂದು, ‘ಆನುದೇವಾ ಹೊರಗಣದವನು’ ಎಂದು ಹೊರಗೆ ನಿಂತು ಹೊರಗಿನ-ಒಳಗಿನ ಒತ್ತಡವನ್ನೂ ಮೀರಿದವನಾಗಿ ಕಾಣುತ್ತಾನೆ. ಬಸವನ ಮುಟ್ಟುವಿಕೆ ಕೇವಲ ಬಹಿರಂಗಕ್ಕೆ ಮಾತ್ರ ಸಂಬಂಧಿಸಿದ್ದಾಗಿರದೆ, ಅಂತರಂಗಕ್ಕೂ ಸಂಬಂಧಿಸಿದ್ದಾಗಿದೆ.
    ಸಮಾನತೆಯಿಲ್ಲದಿದ್ದರೆ, ಮಾನವಕುಲ ಅಶಾಂತಿಯಿಂದ ಬಳಲುತ್ತದೆ ಎಂದು ಬುದ್ಧ ಕಂಡಿದ್ದ. ’ಕುಲಂ ಕುಲಮಲ್ತು ಚಲಂ ಕುಲಂ ಗುಣಂ ಕುಲಂ ಅಭಿಮಾನಮೊಂದೆ ಕುಲಂ ಅಣ್ಮು ಕುಲಂ’ ಎಂದು ಪಂಪ ಕರ್ಣನ ಬಾಯಲ್ಲಿ ಹೇಳಿಸಿದ. ಅಸ್ಪೃಷ್ಯತಾ ನಿರ್ಮೂಲನೆಯಾಗದಿದ್ದರೆ ಆತ್ಮೋದ್ಧಾರ ಸಾಧ್ಯವಿಲಲ್ಲವೆಂದು ‘ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ ಜಲವೊಂದೆ ಶೌಚಾಚಮನಕ್ಕೆ ಕುಲವೊಂದೆ ತನ್ನ ತಾನಱಿದವಂಗೆ’ ಎಂಬುದನ್ನು ಬಸವ ಮನಗಂಡಿದ್ದ. ‘ನಡೆವುದೊಂದೆ ಭೂಮಿ, ಕುಡಿವುದೊಂದೆ ನೀರು, ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ ನಡುವೆ ಎತ್ತಣದು?’ ಎಂದ ಸರ್ವಜ್ಞ ಪ್ರಶ್ನಿಸಿದ. ‘ಕುಲ ಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಬಲ್ಲಿರಾ’ ಎಂದು ಕನಕದಾಸರು ಪ್ರಶ್ನಿಸಿದರು.
    ಹತ್ತನೆಯ ಶತಮಾನದಲ್ಲಿ, ‘ಪಂಪ ಮಾನವಜಾತಿ ತಾನೊಂದೆ ವಲಂ’ ಎಂದು ಸಾರಿದ್ದರೂ, ಮತ್ತೆ ಆಧುನಿಕ ಯುಗದಲ್ಲಿ, The present religion of the Hindus is neither the path of knowledge nor that of reason – it is ‘Don’t touchism’ – Don’t touch me!’ that exhausts its description. See that you do not lose. Your lives in this dire irreligion of Don’t touchism. ಎಂದು ವಿವೇಕಾನಂದರು ಎಚ್ಚರಿಸಬೇಕಾಯಿತು. ‘ಅಸ್ಪೃಷ್ಯತೆಯೊಂದು ಶಾಪ, ಅದು ತೊಲಗಲೇ ಬೇಕು’ ಎಂದು ಕಾಯಾ ವಾಚಾ ಮನಸಾ ಗಾಂಧಿ ಪ್ರಯತ್ನಿಸಿದರು. ಈ ಅಸ್ಪೃಷ್ಯತೆಯ ಕಾರಣದಿಂದಲೇ ‘ನಾನು ಹಿಂದೂ ಆಗಿ ಸಾಯಲಾರೆ’ ಎಂದು ಅಂಬೇಡ್ಕರ್ ನಿರ್ಧರಿಸಿ, ಅದರಂತೆಯೇ ನಡೆದರು.
    ಇಷ್ಟಾಗಿಯೂ ಈ ದೇಶದಲ್ಲಿ ಜಾತಿಭೇದ ಇರಲಿಲ್ಲ. ಅಸ್ಪೃಷ್ಯತೆ ಇರಲಿಲ್ಲ. ಜಾತಿಕಾರಣದ ಶೋಷಣೆ ಇರಲಿಲ್ಲ. ಈ ಜಾತಿಭೇದದ ಪರಿಕಲ್ಪನೆ ವಸಹಾತುಶಾಹಿಯ ಕೂಸು ಎಂದು ಹೇಳುವವರು ಮೊದಲು ತಮ್ಮ ತಮ್ಮ ಮನದ ಕಿಟಕಿಗಳನ್ನು ತೆರೆದುಕೊಳ್ಳಬೇಕಾಗಿದೆ. ದೇವನೂರರು ಹೇಳುವಂತೆ ನಮ್ಮ ತಲೆಯಲ್ಲಿ ಇರಬೇಕಾದದು ಜಾತಿಮತ ಮೇಲು ಕೀಳು ಎಂಬ ಮಲವಲ್ಲ; ಮೆದುಳು ಎಂಬುದನ್ನು ಅರಿಯಬೇಕಾಗಿದೆ.
    ಹೊಸ ಸಹಸ್ರಮಾನದ, ಆಧುನಿಕ, ವೈಜ್ಞಾನಿಕ ಯುಗದ ಹೊಸ ಬೆಳಕಿನಲ್ಲಿಯಾದರೂ ಅಳಿದುಳಿದಿರುವ ಅಸ್ಪೃಷ್ಯತೆ, ಪಂಕ್ತಿಭೇದ, ಮೇಲುಕೀಳು ಎಂಬ ಭಾವನೆ ತೊಲಗಲಿ ಎಂದು, ಮಹಾತ್ಮರು ಹಿರಿಯರು ತೋರಿದ ಬೆಳಕಿನಲ್ಲಿ ಮುನ್ನೆಡೆಯಬೇಕಾಗಿದೆ. ಆರೋಗ್ಯವಂತ ಸಮಾಜದ ಕನಸು ಕಾಣಬೇಕಾಗಿದೆ.
    (ಸದ್ಯಕ್ಕೆ ಈಗ, ರಂಜಾನ್ ದರ್ಗಾ ಅವರ, ವಚನಸಾಹಿತ್ಯ ಕುರಿತಾದ ಲೇಖನಗಳನ್ನು ಪೂರ್ತಿಯಾಗಿ ಇಡಿಯಾಗಿ ಪುಸ್ತಕರೂಪದಲ್ಲಿ ಓದಬೇಕೆನ್ನಿಸಿದೆ.)

    • Annapoorna

      ಕೇಳಿದ ಪ್ರಶ್ನೆಗಳನ್ನು ನೇರವಾಗಿ ಎದುರಿಸುವ ಬದಲು ರಾಜಕಾರಣಿಗಳ ಹಾಗೆ ಆಶು ಭಾಷಣ ಕೊಡುವ ಅಭ್ಯಾಸ ಸತ್ಯನಾರಾಯಣರಿಗಿದೆ ಅಂತ ಅವರ ಪ್ರತಿಕ್ರಿಯೆಗಳಿಂದ ಕಾಣುತ್ತದೆ. ಆದರೆ ಆಶು ಭಾಷಣದಿಂದ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಏನನ್ನೋ ಹೇಳಲು ಮತ್ತೇನನ್ನೋ ಬಳಸಿಕೊಳ್ಳುವ ಚಪಲ ಸತ್ಯನಾರಾಯಣ ಅವರಂತಹವರ ವಾದವನ್ನು ಪೊಳ್ಳು ಆಗಿಸುತ್ತದೆ. ಉದಾಹರಣೆಗೆ “ಮಾನವಜಾತಿ ತಾನೊಂದೆ ವಲಂ” ಎಂಬ ಪಂಪವಾಕ್ಯವನ್ನು ಅವರು ಉಲ್ಲೇಖಿಸೀದ್ದಾರೆ. ಕನ್ನಡ ಸಾಹಿತ್ಯದ ವಿದ್ಯಾರ್ಥಿಯೂ ಆದ ಸತ್ಯನಾರಾಯಣ ಅವರು ಪಂಪನನ್ನು ಓದಿಕೊಂಡವರೇ ಆಗಿದ್ದಾರೆ. ಆದರು ಪಂಪ “ಮಾನವಜಾತಿ ತಾನೊಂದೆ ವಲಂ” ಎಂಬ ವಾಕ್ಯವನ್ನು ಯಾವ ಸಂದರ್ಭದಲ್ಲಿ ಬಳಸಿದ್ದಾನೆ ಎಂಬುದನ್ನು ಮರೆತುಬಿಟ್ಟಿದ್ದಾರೆ (ಅಥವಾ ಮರೆಮಾಚಿದ್ದಾರೆ!). ಸತ್ಯನಾರಾಯಣ ಅವರು ಮತ್ತೊಮ್ಮೆ ಪಂಪನ ಕೃತಿಯನ್ನು ಓದಲಿ. ಆಗ ಅವರಿಗೆ ಅರ್ಥವಾಗುತ್ತದೆ. ಮಿಕ್ಕ ಓದುಗರು ದೇಶಕಾಲದಲ್ಲಿ ಕೆ. ವಿ. ಅಕ್ಷರ ಅವರು “ಮಾನವಜಾತಿ ತಾನೊಂದೆ ವಲಂ” ಎಂಬ ಪಂಪವಾಕ್ಯದ ಸತ್ಯದ ಅನಾವರಣ ಮಾಡಿದ್ದನ್ನು ನೆನಸಿಕೊಳ್ಳಬಹುದು.

      • Ramjan Darga

        ಅನ್ನಪೂರ್ಣ ಅವರೆ ‘ಮನುಷ್ಯ ಜಾತಿ ತಾನೊಂದೆ ವಲಂ’ ಮೂಲ ಪೂರ್ವಪುರಾಣದಲ್ಲಿದೆ. ಅದಿರಲಿ, ಕೆ.ವಿ. ಅಕ್ಷರ ಅವರಿಗೆ ಕೇಳಿ ನೋಡಿ ‘ಪಂಪನ ಪೂರ್ವಜ ಮಾಧವಸೋಮಯಾಜಿ ಬ್ರಾಹ್ಮಣ್ಯವನ್ನು ತೊರೆದು ಜೈನಧರ್ಮವನ್ನು ಏಕೆ ಸ್ವೀಕರಿಸಿದ’ ಎಂಬುದನ್ನು. ಪಂಪನ ಮನೆತನದ ಕೀರ್ತಿ ಯಜ್ಞದ ಹೊಗೆಯಿಂದ ಹೇಗೆ ಕಪ್ಪಾಯಿತು ಎಂಬುದನ್ನು. ಮಾಧವಸೋಮಯಾಜಿ ಜಿನ ದೀಪವನ್ನು ಏಕೆ ಬೆಳಗಿಸಿದ ಎಂಬುದನ್ನು.

        • Annapoorna

          ಬ್ರಾಹ್ಮಣ್ಯವನ್ನು ಯಾರು ಯಾವ ಕಾರಣಕ್ಕೆ ತ್ಯಜಿಸಿದರು ಎಂಬುದು ಇಲ್ಲಿ ಅಪ್ರಸ್ತುತ. ಅದೆಷ್ಟೋ ಬ್ರಾಹ್ಮಣರು ಬೌದ್ಧ ದೀಕ್ಷೆ ಪಡೆದು ನಂತರ ಬ್ರಾಹ್ಮಣ್ಯಕ್ಕೆ ಹಿಂತುರಿಗಿದ ಅನೇಕ ನಿದರ್ಶನಗಳಿವೆ. ಬಸವಣ್ಣ ಹಾಗೂ ಪಂಪರ ನೆಪದಲ್ಲಿ ಬ್ರಹ್ಮ ದ್ವೇಷ ಕಾರುವುದು ತಮ್ಮ ಉದ್ದೇಶ ಅಂತ ತಮ್ಮ ವಾದದ ದಿಕ್ಕು ನೋಡಿದರೆ ಅರ್ಥವಾಗುತ್ತದೆ. ಪಂಪ ಯಾವ ಸಂದರ್ಭದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಅಂತ ಹೇಳಿದ್ದಾನೆ ಅಂತ ತಮಗೆ ಗೊತ್ತಿಲ್ಲದೇ ಇಲ್ಲ. ಅದನ್ನು ತಾವು ಎಷ್ಟೇ ಯತ್ನಿಸಿದರೂ ಮರೆಮಾಚಲು ಆಗುವುದಿಲ್ಲ.

        • Ramjan Darga

          “ಆರುಂ ವೃತ್ತಿಗಳನಿವಂ
          ಮೀರಿದರಲ್ಲರ್ ದ್ವಿಜನರೀ ವೃತ್ತಿಗಳಿಂ
          ಬೇರಾದರ್ ದ್ವಿಜರುಂತೇಂ
          ಬೇರುಂಟೆ? ಮನುಷ್ಯಜಾತಿ ತಾನೊಂದೆ ವಲಂ.”
          ಪಂಪನ ಈ ಕಂದದ ಅರ್ಥ ಏನು ಅನ್ನಪೂರ್ಣ ಅವರೆ?
          ನಾನು ತಮ್ಮೆಲ್ಲರ ಜೊತೆ ಜ್ಞಾನಾಸಕ್ತಿಯಿಂದ ಚರ್ಚೆಗೆ ಇಳಿದಿರುವೆ. ನಿಮ್ಮೆಲ್ಲರ ಪ್ರಶ್ನೆಗಳನ್ನು ನಾನು ಗಂಭೀರವಾಗಿ ಪರಿಗಣಿಸಿರುವೆ.

    • mmshaik

      sir..nice nimgondu SALAM..!!!

    • ವಿಜಯ್

      ನಿಮ್ಮ ಉಲ್ಲೇಖದಂತೆ ಧರ್ಮರಾಯನೇ ಪುರೋಹಿತನನ್ನು ಹೆಚ್ಚಿನ ಶಿಕ್ಷೆಗೆ ಗುರಿಪಡಿಸಿದ ಎಂದ ಮೇಲೆ ಬ್ರಾಹ್ಮಣನೂ ಶಿಕ್ಷಾರ್ಹನಾಗಿದ್ದ , ಆತನಿಗೆ ಶಿಕ್ಷೆ ಕೊಡುವುದು ಸಾಮಾಜಿಕವಾಗಿ ದೊಡ್ಡ ಮಾತಾಗಿರಲಿಲ್ಲ ಎಂದಾಯಿತು. ಹೀಗಿದ್ದಾಗೂ ಜನಸಂಖ್ಯೆಯಲ್ಲಿ ನಗಣ್ಯರಾದ ಬ್ರಾಹ್ಮಣರು ದೇವರೆಂಬ ಗುಮ್ಮನನ್ನೆ ತೋರಿಸಿ ಶತ-ಶತಮಾನಗಳಿಂದ ಆಳಿದ್ದು, ಕಿರೀಟವಿಲ್ಲದ ಭೂಸುರ ಪಟ್ಟ ಕಟ್ಟಿಕೊಂಡಿದ್ದು, ತಾನೊಬ್ಬನೇ ಅಥವಾ ತನ್ನ ತಂತ್ರಗಳಿಂಧ ಸುತ್ತಮುತ್ತಲಿನ ಸಮಾಜ ಶೋಷಿಸಿದ್ದು ಇತಿಹಾಸದ ಅದ್ಭುತವಾದರೆ.. ಈಗಲೂ ಬ್ರಾಹ್ಮಣನಾಗಿ ಹುಟ್ಟುವುದೇ ಬೈ ಡಿಫಾಲ್ಟ ಶ್ರೀಮಂತಿಕೆಯೆಂದಾಗಿರುವುದು (ಹೆಸರು ಕ್ಷಿರಸಾಗರ ಭಟ್ಟ..ಮನೆಯಲ್ಲಿ ಹಾಲಿಗೆ ತತ್ವಾರ ಎಂದಾದರೂ ಸರಿಯೆ) ಮತ್ತು ನಮ್ಮ ಘನತೆವೆತ್ತ ಸಮಾಜ ಸುಧಾರಕ, ಪ್ರಗತಿಪರ, ಪ್ರಜ್ಞಾವಂತ, ಸಾಕ್ಷಿಪ್ರಜ್ಞೆ’ಗಳ ಉರಿಗೆ ಕಾರಣವಾಗಿರುವುದು ವರ್ತಮಾನದ ಅದ್ಭುತ..
      ಬ್ರಾಹ್ಮಣರು ಜನರ ದೇವರ ಮೇಲಿನ ನಂಬಿಕೆಯನ್ನು ಬಳಸಿ ಅನ್ನದ ದಾರಿ ಕಂಡುಕೊಂಡರು ಅಂದರೆ ನಂಬುವಂತದ್ದೆ..ಪ್ರತಿಯೊಂದು ಜನಾಂಗ ಅನ್ನಕ್ಕೆ, ಬದುಕಿಗೆ ಏನಾದರೂ ಉಪಾಯವನ್ನು ಹುಡುಕಿಕೊಳ್ಳದೇ ಇರದು. ತೀರಾ ಭೂಸುರರಾಗಿ ಮೆರೆದರು.ಸುತ್ತಮುತ್ತಲಿನ ತಿಪ್ಪೆಗುಂಡಿಯನ್ನು ಅವರೇ ಸೃಷ್ಟಿಸಿದರು ಎನ್ನುವುದು, ಉಳಿದ ಜನ ಇವರ ಹುನ್ನಾರಗಳಿಗೆ ಬಲಿಯಾಗುವಷ್ಟು ಮುಗ್ದರು, ಮೂರ್ಖರು ಆಗಿದ್ದರೆಬುದು ಎಷ್ಟು ಸತ್ಯವೆಂದು ನೀವೇ ವಿಚಾರ ಮಾಡಿನೋಡಿ. ನಾನು ಈ ಅರ್ಥದಲ್ಲಿ ಕೇಳಿದ್ದು ಉಳಿದವರು ಕತ್ತೆ ಕಾಯುತ್ತಿದ್ದರೆ ಎಂದು. ನೀವು ಘೋರಿ,ಘಜ್ನಿ,ಬ್ರಿಟೀಶರ ಧಾಳಿ ಪ್ರಸ್ತಾಪಿಸಿದ್ದೀರಿ..ಆಗಿನ ಬ್ರಾಹ್ಮಣರೇನು ಇವರಂತೆ ತೋಳ್ಬಲ, ಸಶಸ್ತ್ರ ಬಲ ಹೊಂದಿದವರಾಗಿದ್ದರೆ? ಇನ್ನೊಂದೆಂದರೆ ಸಶಸ್ತ್ರ ದಾಳಿಗಳ ಮೇಲೆ ಇಲ್ಲಿಯವರು ತಮಗಾದ ಮಟ್ಟಿಗೆ ಪ್ರತಿರೋಧ ತೋರಿಯೇ ತೋರಿದ್ದಾರೆ..ಅಂದಾಗ ನಿಶ್ಯಸ್ತ್ರ ಬ್ರಾಹ್ಮಣರು ಯಾವ ಲೆಕ್ಕಕ್ಕೆ? ಮತ್ತೊಂದೇನೆಂದರೆ ಶೋಷಕ ಬ್ರಾಹ್ಮಣರಿಂದ ಉಳಿದವರಿಗೆ ಮುಕ್ತಿ ಕೊಡಿಸ ಹೊರಟ ಬಸವಣ್ಣನವರು ಕೂಡ ಈ ದೇವರ ಬಿಡಲಿಲ್ಲ. ಇಷ್ಟಲಿಂಗ ಪೂಜೆಯನ್ನು, ಕೂಡಲ ಸಂಗಯ್ಯನನ್ನು ಹಿಡಿದುಕೊಂಡರು. ದೇವರೆಂಬುದು ಶೋಷಕರ ಕಲ್ಪಿಸಿದ ಗುಮ್ಮವಾಗಿದ್ದಲ್ಲಿ ಶರಣರು ಅದಕ್ಕೆ ಮುಕ್ತಿ ಕೊಡಿಸಬಹುದಿತ್ತಲ್ಲವೆ? ಹಾಗೇಕೆ ಮಾಡಲಿಲ್ಲ?
      [‘ಮೇಷ್ಟ್ರು ನಿಂತುಕೊಂಡು ಮಾಡಿದರೆ, ಮಕ್ಕಳು ಕುಣಿದಾಡಿಕೊಂಡು ಮಾಡ್ತವೆ’ ]
      ಇದು ಈಗಾಗಲೇ ಮೇಲೆ ಬಂದವರಿಗೆ ಅನ್ವಯಿಸುತ್ತದೆಯೊ ಇಲ್ಲವೊ? ಕೆಳಗಿದ್ದವರನ್ನು ತಿಳುವಳಿಕೆ ಕೊಟ್ಟು ಮೇಲೆತ್ತುವುದು ಅವರ ಜವಾಬ್ದಾರಿಯೊ ಅಥವಾ ಸೂಟು-ಬೂಟಿಗೆ ಮುಟ್ಟಿದ ಮೇಲೂ ಕೆನೆ ಪದರ ಮೀಸಲಾತಿ ಬೇಕು ಎನ್ನುವುದೊ? ಸುಪರ್ ಥರ್ಟಿ ಎಂಬ ಕೋಚಿಂಗ ಕ್ಲಾಸ ನಡೆಸಿ ವರ್ಷಕ್ಕೆ ೨೫ಕ್ಕೂ ಹೆಚ್ಚಿನ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಐ.ಐ.ಟಿ ಗೆ ಕಳಿಸುವ ಬಿಹಾರದ ಶ್ರೀ ಆನಂದಕುಮಾರ ಎನ್ನುವವರ ಬಗ್ಗೆ ನೀವು ಕೇಳಿರಬಹುದು..ನಮಗೆ ಬೇಕಾಗಿರುವವರು ಅಂತವರು. (ನಾನು ಕರ್ನಾಟಕದಲ್ಲಿ ಅಂತಹ ಒಬ್ಬರ ಬಗ್ಗೆ ಮಾತ್ರ ಕೇಳಿದ್ದೇನೆ..ಬೆಂಗಳೂರಿನಲ್ಲಿ ಹಿಂದುಳಿದ ವರ್ಗದ ಮಕ್ಕಳಿಗಾಗಿ ಕೋಚಿಂಗ ಕ್ಲಾಸ ನಡೆಸುತ್ತಿದ್ದಾರವರು.). ತಮ್ಮದೇ ಅಜೆಂಡಾಗಳನ್ನಿಟ್ಟುಕೊಂಡು, ಲೇಖನ ಬರೆದು ವಿಷವುಳುಗಿ ಕಂದಕ ದೊಡ್ಡದು ಮಾಡುವವರನ್ನೇ ನಂಬಿದರೆ ಇನ್ನೆರಡು ಶತಮಾನ ಕಳೆದರೂ ಸರಕಾರದ ಹತ್ತಿರ ಬಿಕ್ಷಾಪಾತ್ರೆ ಹಿಡಿದಿರಬೇಕಾಗುತ್ತದೆ ಮತ್ತು ಅದನ್ನು ಹಕ್ಕು ಎಂದು ಪ್ರತಿಪಾದಿಸುತ್ತಿರಬೇಕಾಗುತ್ತದೆ.
      [ಪೇಜಾವರ ಶ್ರೀಗಳ ಬಗ್ಗೆ ಗೌರವವಿಲ್ಲವೆಂದವರು ಯಾರು? ಅವರ ಪೀಠವನ್ನು ಅತಿಕ್ರಮಿಸುವ ಆಶೆ ಯಾರಿಗೂ ಇದ್ದಂತಿಲ್ಲ.]
      ದಲಿತಕೇರಿಗೆ ಹೋಗುವ ಗಿಮಿಕ್ ಎಲ್ಲ ಬೇಡ..ಅಷ್ಟು ಮನಸ್ಸಿದ್ದರೆ ದಲಿತನೊಬ್ಬನನ್ನು ಪೀಠದ ಮೇಲೆ ಕೂಡಿಸಲಿ ಎನ್ನುವವರ ಬಗ್ಗೆ ನೀವು ಕೇಳಿಲ್ಲ ಎಂದು ನಂಬುವುದು ಹೇಗೆ?.
      ಒಬ್ಬ ವಿಧ್ವಾಂಸರು ಪ್ರಜಾವಾಣಿಯಲ್ಲಿ ಬರೆದಿದ್ದರು..ಜಾತಿಯಿರಲಿಲ್ಲ ಎಂದು ಸಾಧಿಸಿ, ಬಡವರಿಗೆ ಮೀಸಲಾತಿ ಕೊಡಿಸಿ ಹಿಂದುಳಿದ ಜಾತಿಯವರಿಗೆ ಮೀಸಲಾತಿ ತಪ್ಪಿಸುವ ಹುನ್ನಾರ ನಡೆದಿದೆ ಅಂತ..ನೀವೇ ಇಲ್ಲಿ ಬರೆದಂತೆ ದೇವನೂರರು ಹೇಳೋದು ‘ ನಮ್ಮ ತಲೆಯಲ್ಲಿ ಇರಬೇಕಾದದು ಜಾತಿಮತ ಮೇಲು ಕೀಳು ಎಂಬ ಮಲವಲ್ಲ; ಮೆದುಳು ಎಂಬುದನ್ನು ಅರಿಯಬೇಕಾಗಿದೆ.’ ಎಂದು. ಇಬ್ಬರ ಹೇಳಿಕೆ ಓದಿದ ಮೇಲೆ ಯಾರ ತಲೆಯಲ್ಲಿ ಜಾತಿ ಇರಬೇಕೊ, ಯಾರ ತಲೆಯಲ್ಲಿ ಇರಬಾರದೊ ಗೊತ್ತಾಗಲಿಲ್ಲ..ವಿರೋದಾಭಾಸ..ಆದರೂ ಸತ್ಯ !. ಅದಕ್ಕೆ ನಾನು ಬರೆದಿದ್ದು ‘ಬ್ರಾಹ್ಮಣರನ್ನು ತಿದ್ದುವ ಕೆಲಸ ಮಾಡುವುದಕ್ಕಿಂತ ‘ಶೋಷಿತ’ ರನ್ನು ತಿದ್ದಿ’ ಎಂದು. ಇದರಲ್ಲಿ ನೀವು ಬರೆದಂತೆ ‘ ನಾನು ಶ್ರೇಷ್ಠ, ಪರಿಪೂರ್ಣ, ನಾನು ಬದಲಾಗುವ ಅವಶ್ಯಕತೆಯಿಲ್ಲ, ಎಂದು ಮನೆಯ ಮನದ ಕಿಟಕಿಗಳನ್ನು ಮುಚ್ಚಿಕೊಳ್ಳುವ ಮನಸ್ಥಿತಿ’ ಎಂಬುದಿಲ್ಲ. ಬದಲಾಗಿ ‘ಸ್ವಾಮಿ ಬ್ರಾಹ್ಮಣರನ್ನು ಅವರ ಪಾಡಿಗೆ ಬಿಟ್ಟು ಬಿಡಿ..ಅಸ್ಪ್ರಶ್ಯರಾಗಿಯೇ ಇರಲಿ ಅವರು..ನೀವಾದರೂ ಒಂದಾಗಿ ಸುಖ-ಸಮೃದ್ಧಿ ಕಾಣಿ’ ಎಂಬ ಕೋರಿಕೆಯಿದೆ.
      [ಹೊಸ ಸಹಸ್ರಮಾನದ, ಆಧುನಿಕ, ವೈಜ್ಞಾನಿಕ ಯುಗದ ಹೊಸ ಬೆಳಕಿನಲ್ಲಿಯಾದರೂ ಅಳಿದುಳಿದಿರುವ ಅಸ್ಪೃಷ್ಯತೆ, ಪಂಕ್ತಿಭೇದ, ಮೇಲುಕೀಳು ಎಂಬ ಭಾವನೆ ತೊಲಗಲಿ ಎಂದು, ಮಹಾತ್ಮರು ಹಿರಿಯರು ತೋರಿದ ಬೆಳಕಿನಲ್ಲಿ ಮುನ್ನೆಡೆಯಬೇಕಾಗಿದೆ. ಆರೋಗ್ಯವಂತ ಸಮಾಜದ ಕನಸು ಕಾಣಬೇಕಾಗಿದೆ.]
      [ (ಸದ್ಯಕ್ಕೆ ಈಗ, ರಂಜಾನ್ ದರ್ಗಾ ಅವರ, ವಚನಸಾಹಿತ್ಯ ಕುರಿತಾದ ಲೇಖನಗಳನ್ನು ಪೂರ್ತಿಯಾಗಿ ಇಡಿಯಾಗಿ ಪುಸ್ತಕರೂಪದಲ್ಲಿ ಓದಬೇಕೆನ್ನಿಸಿದೆ.) ]
      ನನ್ನಸಿಕೆಯಲ್ಲಿ ಎರಡೂ ತದ್ವಿರುದ್ದ ಕಾರ್ಯಗಳೆ! ಎರಡನೆಯದನ್ನು ಮಾಡಿದರೆ ಮೊದಲನೆಯದನ್ನು ಮರೆಯಬೇಕಾಗುತ್ತದೆ. ಆರೋಗ್ಯವಂತ ಸಮಾಜದ ಕನಸು ಕಾಣುತ್ತಲೇ ಇರಬೇಕಾಗುತ್ತದೆ!

    • Ramjan Darga

      ಸತ್ಯನಾರಾಯಣ ಅವರೆ, ‘ಅವಧಿ’ಯಲ್ಲಿನ ಈ ಲೇಖನವನ್ನೊಳಗೊಂಡ ನನ್ನ ಪುಸ್ತಕ ‘ಜಾತಿವ್ಯವಸ್ಥೆಗೆ ಸವಾಲಾದ ಶರಣರು’ ಮೊನ್ನೆ ಜುಲೈ 10ರಂದು ಸಂಜೆ ಧಾರವಾಡದಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಬಿಡುಗಡೆಯಾಯಿತು. 24 ಗಂಟೆಗಳೊಳಗೆ ಮೂರು ಸಾವಿರ ಪುಸ್ತಕಗಳು ಮಾರಾಟವಾಗಿವೆ ಎಂದು ಪುಸ್ತಕವನ್ನು ಪ್ರಕಟಿಸಿದ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣನವರು ತಿಳಿಸಿದ್ದಾರೆ. ಅವರ ಮೊಬೈಲ್ ನಂಬರ್ 9900750549
      ನಿಮ್ಮ ಗಂಭೀರ ಚಿಂತನೆಗಳನ್ನು ಉಡಾಫೆಯಿಂದ ನೋಡುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿರಿ. ಇಂಥವರು ವಿತಂಡವಾದದ ಮೂಲಕ ಸಾವಿರಾರು ವರ್ಷಗಳಿಂದ ದುಡಿಯುವ ವರ್ಗಕ್ಕೆ ಮೋಸ ಮಾಡುತ್ತ ಬಂದರು. ಈಗ ತಮ್ಮ ವಿತಂಡವಾದದಿಂದ ತಾವೇ ಮೋಸ ಹೋಗುತ್ತಿದ್ದಾರೆ. ಜನ ಎಚ್ಚತ್ತಿದ್ದಾರೆ. ಅಕ್ಷರಗಳ ಮೂಲಕ ಅನ್ಯಾಯದ ಪಥವನ್ನು ಗುರುತಿಸುತ್ತಿದ್ದಾರೆ. ನ್ಯಾಯದ ದಾರಿಯಲ್ಲಿ ಮುನ್ನುಗ್ಗುತ್ತಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಈ ಪುಸ್ತಕ ಮರುಮುದ್ರಣ ಕಾಣಲಿದೆ. ‘ಅವಧಿ’ಯಲ್ಲಿ ನಡೆದ ಈ ಪ್ರಶ್ನೋತ್ರರಗಳನ್ನು ಅದರಲ್ಲಿ ದಾಖಲಿಸುವೆ.

  3. Annapoorna

    ರಂಜಾನ್ ಸರ್, ಇದುವರೆಗೆ ನಾನು ಹಾಗೂ ಇತರ ಓದುಗರು ಎತ್ತಿದ ಒಂದೂ ಪ್ರಶ್ನೆಗೂ ತಮ್ಮಿಂದ ಉತ್ತರ ಬಂದಿಲ್ಲ. ಬಹುಶಃ ತಾವು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದೂ ಇಲ್ಲ ಅಂತ ಅನ್ನಿಸತೊಡಗಿದೆ. ಇದು ನಿಜಕ್ಕೂ ವಿಷಾದನೀಯ. “ವಚನಗಳಿಗೆ ಅವರಿಗೇನು ಗೊತ್ತು?” ಎಂದು ಕೇಳಿದ ತಾವು ತಮ್ಮ ಬರಹಗಳ ಬಗ್ಗೆ ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡುವ ಕನಿಷ್ಠ ಸೌಜನ್ಯ ಕೂಡ ಇಟ್ಟುಕೊಳ್ಳದಿದ್ದದ್ದು ಬೇಸರದ ಸಂಗತಿ. ತಮ್ಮ ಬಗ್ಗೆ ನನಗಿರುವ ಅಭಿಮಾನ ಇದರಿಂದ ಕುಂದದಿರಲಿ ಎಂದು ಕೂಡಲಸಂಗಮದೇವರನ್ನು ಪ್ರಾರ್ಥಿಸುತ್ತೇನೆ.

    • santosh anand

      i hv answered all your questions and dont repeat your foolish opinions. Instead read vachanas thoroughly and with clear mind.

      • Amaresh

        Hello Santosh Anand, Who are to order Annapurna what she should do and what she shouldn’t ?!! Annapurna has asked many pertinent questions, identified flaws in Ranjan Darga’s arguments, and given examples of Vachanas that speak in a different voice than what Ranjan Darga would like us to believe. But what is your contribution to the debate? What makes you think you can bark orders and Annapurna will listen to you?!!

        • skpbnt

          hello amaresh those questions are not pertinent they are arrogant hollow questions. u and she are barking in the web. not me. I came on the scene after hearing ur barking sound. But barking dogs never bite. I know it. if u feel ur arguments are meaningful come to the open debate instead throwing stones at others from hiding behind screen

    • Ramjan Darga

      ಅನ್ನಪೂರ್ಣ ಅವರೆ, ನಾನು ತಮ್ಮ ಎಲ್ಲ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿ ಉತ್ತರಿಸಿದ್ದೇನೆ. ನೀವೇ ಹೇಳಿ ನಾನು ನಿಮ್ಮ ಯಾವ ಪ್ರಶ್ನೆಗೆ ಉತ್ತರ ಕೊಟ್ಟಿಲ್ಲ? ನೀವು ಸಾವಿರಾರು ಪ್ರಶ್ನೆಗಳನ್ನು ಕೇಳಿದರೂ ನಾನು ಉತ್ತರಿಸಲು ಸಿದ್ಧನಿದ್ದೇನೆ. ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬುದೇ ನನ್ನ ಆಶಯವಾಗಿದೆ.
      “ವಚನಗಳ ಬಗ್ಗೆ ಅವರಿಗೇನು ಗೊತ್ತು?” ಎಂಬ ಶೀರ್ಷಿಕೆ ನನ್ನದಲ್ಲ. ಅದು ಸಂಪಾದಕರ ಹಕ್ಕು.

      • Annapoorna

        ಸಾರ್, ತಮ್ಮ ‘ಉತ್ತರ’ಗಳಿಗೆ ನಾನು ಋಣಿ. ಇಂತಹ ಬೋಗಸ್ ಉತ್ತರಗಳನ್ನು ಕೊಡದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಸ್ವಲ್ಪವಾದರೂ ಮಾನ ಉಳಿಯುತ್ತಿರುತ್ತಿತ್ತು. ನಾನು ಕೇಳಿದ್ದು ಏನೋ ತಾವು ಕೊಟ್ಟ ಉತ್ತರ ಮತ್ತೇನೋ! ತಮ್ಮ ತರ್ಕ ಲಹರಿಯ ಮೂಲಕ ಓದುಗರಿಗೆ ಸಿಕ್ಕಾಪಟ್ಟೆ ರಂಜನೆ ಕೊಟ್ಟಿದ್ದೇ ತಮ್ಮ ಸಾಧನೆ.
        ತಮಗೆ ಶುಭವಾಗಲಿ.

  4. Ananda Prasad

    ಇಂದು ಮುಖ್ಯವಾಗಿ ಬೇಕಾಗಿರುವುದು ವೈಜ್ಞಾನಿಕ ಮನೋಭಾವವನ್ನು ನಮ್ಮ ದೇಶದಲ್ಲಿ ಬೆಳೆಸಬೇಕಾಗಿರುವುದು. ಇದನ್ನು ಬೆಳೆಸುವುದು ಮಾಧ್ಯಮಗಳ ಮೂಲಭೂತ ಕರ್ತವ್ಯವಾಗಿದೆ. ಇದನ್ನು ಮುಖ್ಯ ವಾಹಿನಿಯ ಮಾಧ್ಯಮಗಳು ಮಾಡುತ್ತಿಲ್ಲ. ವೈಜ್ಞಾನಿಕ ಮನೋಭಾವ ಎಂದರೆ ವಸಾಹತುಶಾಹಿ ಚಿಂತನೆ ಎಂದು ತಿಳಿದುಕೊಳ್ಳಬೇಕಾಗಿಲ್ಲ. ವೈಜ್ಞಾನಿಕ ಚಿಂತನೆಯ ಮೂಲಭೂತ ವಿಧಾನಗಳು ಪಾಶ್ಚಾತ್ಯ ಅಥವಾ ಪೌರಾತ್ಯ ಎಂಬ ಭೇದವಿಲ್ಲದೆ ಎಲ್ಲೆಡೆಯೂ ಸಲ್ಲುವಂಥದ್ದಾಗಿವೆ. ಹಾಗಾಗಿ ಇದನ್ನೇ ಎಲ್ಲಾ ವಿಷಯಗಳ ನಿರ್ಣಯಕ್ಕೆ ಮೂಲಭೂತ ಅಳತೆಗೋಲು ಆಗಿ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯ. ಭಾರತವು ಪುರೋಹಿತಶಾಹೀ ಚಿಂತನಾಕ್ರಮದಿಂದ ಬಿಡುಗಡೆ ಹೊಂದದ ಹೊರತು ಪ್ರಜಾಪ್ರಭುತ್ವ ವ್ಯವಸ್ಥೆ ಬೆಳೆಯುವುದು ಕಷ್ಟ. ಪುರೊಹಿತಶಾಹೀ ಚಿಂತನಾಕ್ರಮದಿಂದ ಭಾರತಕ್ಕೆ ಅಪಾರ ಹಾನಿಯಾಗಿದೆ. ಇನ್ನಾದರೂ ಇದರಿಂದ ಬಿಡುಗಡೆ ಹೊಂದುವ ಕುರಿತು ದೇಶದ ಎಲ್ಲಾ ವಿದ್ಯಾವಂತ ಜನ ಮುಂದೆ ಬರಬೇಕಾಗಿದೆ.

  5. nagshetty

    so called “touch me not” rituals of Hindu culture are being rejected, and developed “leave not anybody” is being the achievement of the sharna’s and guru Basava. in the above narration it is explained in very lucid words from Ramjandarga

  6. Umesh

    If one carefully analyse and separate out what Vachanakaara said and what the author is doing by putting his own words and explanations into their mouth, there is very little of any worth left in these series of articles. It could have been finished in one part itself. Or he could have written another series called “ಪುರಾತನ ಸಂಸ್ಕೃತಿಯ ಮೇಲೆ ದಂಡೆತ್ತಿ ಹೋಗಿ” without misusing Sharanas or Vachanakaars.

    • Ramjan Darga

      ಉಮೇಶ ಅವರೇ ವೇದಸಂಸ್ಕೃತಿ ಪುರಾತನವಲ್ಲ. ರೈತಾಪಿ ಸಂಸ್ಕೃತಿ, ಅಂದರೆ ಶೂದ್ರಸಂಸ್ಕೃತಿ, ಅಂದರೆ ದುಡಿಯುವ ವರ್ಗದ ಸಂಸ್ಕೃತಿ ಜಗತ್ತಿನ ಅತ್ಯಂತ ಪುರಾತನ ಸಂಸ್ಕೃತಿಯಾಗಿದೆ. ಋಗ್ವೇದದ ಅತ್ಯಂತ ಹಳೆಯ ಪ್ರತಿಯು ಇರಾಕ್ ದೇಶದ ಯೂಪ್ರಿಟಸ್ ಮತ್ತು ಸೈಪ್ರಸ್ ನದಿಗಳ ಮಧ್ಯದ ಪ್ರದೇಶದಲ್ಲಿ ದೊರಕಿದೆ. ವೇದ ಸಂಸ್ಕೃತಿಗೆ ಬಹಳವೆಂದರೆ 7 ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನ ಯಾವ ನಾಗರೀಕತೆಗೂ 10 ಸಾವಿರ ವರ್ಷಗಳ ಇತಿಹಾಸವಿಲ್ಲ. ಆದರೆ ಕೃಷಿಗೆ ಹತ್ತು ಸಾವಿರ ವರ್ಷಗಳ ಇತಿಹಾಸವಿದೆ ಎಂಬುದನ್ನು ಶ್ರೇಷ್ಠ ಕೃಷಿತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್ ಮತ್ತು ಕೃಷಿ ಇತಿಹಾಸಕಾರ ರಾಂಧವಾ ಮುಂತಾದವರು ತಿಳಿಸಿದ್ದಾರೆ. ಶರಣ ಸಂಸ್ಕೃತಿಗೆ ಈ ಕೃಷಿ ಸಂಸ್ಕೃತಿ ಮೂಲವಾಗಿದೆ. ‘ಕಾಯಕ, ಪ್ರಸಾದ ಮತ್ತು ದಾಸೋಹ’ ತತ್ತ್ವದ ಮೂಲವನ್ನು ಕಾಯಕಜೀವಿಗಳಾದ ಶರಣರು ಕೃಷಿ ಸಂಸ್ಕೃತಿಯಿಂದ ಪಡೆದವರಾಗಿದ್ದಾರೆ. ಬಸವಣ್ಣನವರ ಚಿಂತನಾಕ್ರಮ 10 ಸಾವಿರ ವರ್ಷಗಳ ಮಾನವರ ಸಂಸ್ಕೃತಿ ಮತ್ತು ನಾಗರೀಕತೆಯ ಇತಿಹಾಸದ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ಈ ಹಿನ್ನೆಲೆಯಲ್ಲಿ ಬಸವ ಸಂಸ್ಕೃತಿಯು 12ನೇ ಶತಮಾನದಲ್ಲಿ ರೂಪುಗೊಂಡಿದ್ದರೂ ಅದರ ಬೇರುಗಳು 10 ಸಾವಿರ ವರ್ಷಗಳಷ್ಟು ಆಳಕ್ಕಿಳಿದಿವೆ.

    • skpbnt

      If he is putting in the mouth of vachanakaras leave it. Anyway he is not putting in ur mouth. U too dont try to put ur mean thoughts in the mouth of vachanakaras

  7. ರಮೇಶ್ ಹಿರೇಜಂಬೂರು

    ಅನ್ನಪೂರ್ಣ ಅವರಲ್ಲಿ ಒಂದು ವಿನಂತಿ. ವಚನಕಾರರು ಜಾತಿ, ಹೊಲೆ, ಗೋತ್ರ, ಆಚಾರಗಳು ಹೋಗಬೇಕು ಎಂದು ಎಲ್ಲೂಹೇಳಿಲ್ಲ ಎನ್ನುವ ವಾದವೇ ಸರಿ ಇಲ್ಲ. ವಚನಕಾರರ ಕ್ರಾಂತಿಯ ಮೂಲ ಉದ್ದೇಶವೇ ಜಾತಿ ವಿನಾಶ, ಗೊಡ್ಡು ಸಂಪ್ರದಾಯಗಳ ಸರ್ವನಾಶ. ಅರಿವಿಗೆ ಬುನಾದಿ ಹಾಕುವ ದೇಯ. ಆ ಕಾರಣಕ್ಕೇ ವಚನಕಾರರನ್ನು ಅಂದಿನ ಕಾಲದ ಅರಸರು ಇಂದಿನ ನಕ್ಸಲರಂತೆ ಅವರನ್ನು ಕಂಡದ್ದು! ಬಸವಣ್ಣ ದಲಿತ ಹಾಗು ಮೇಲ್ಜಾತಿಯ ಯುವಕ ಯುವತಿಯನ್ನು ಮದುವೆ ಮಾಡಿಸಿದ್ದರ ಅರ್ಥ ಏನು? ಅದು ಜಾತಿಯ ವಿನಾಶದ ಸಂಕೇತ ಅಲ್ಲವೇ? ಅಂಬಿಗರಚೌಡಯ್ಯ ಒಂದು ಕಡೆ “ಕಲ್ಲ ದೇವರ ಪೂಜೆಯ ಮಾಡಿ ಕಲಿಯುಗದಿ ಕತ್ತೆಗಳಾಗಿ ಹುಟ್ಟಿದರು, ಮಣ್ಣ ದೇವರ ಪೂಜಿಸಿ ಮಾನ ಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೇ ಹೋದರು” ಎನ್ನುತ್ತಾನೆ. ಮತ್ತೊಂದೆಡೆ “ಊರೊಳಗೊಬ್ಬ ದೇವ, ಮಡುವಿನಲೊಬ್ಬ ದೇವ, ಅಡವಿಯಲೊಬ್ಬ ದೇವ ಮಡಿಲಲೊಬ್ಬ ದೇವ. ನೀರ ನೀರ ಕೂಡಿ, ಬಯಲು ಬಯಲ ಕೂಡಿ ನರನೆಂಬ ದೇ ತಾ ನಿರಾಳವೋ” ಎಂದು ಗೇಲಿ ಮಾಡುತ್ತಾನೆ. ಹಾಗೇ “ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬುವ ವ್ರತಗೇಡಿ ವಿಷ್ಣುವೆಂಬವ ಸತ್ತುಬಿದ್ದ; ರುದ್ರನೆಂಬವ ಅಬದ್ಧ ಅವಿಚಾರಿ” ಎನ್ನುತ್ತಾನೆ. ಹೇಳುತ್ತಾ ಹೋದರೆ ಇಂಥವುಗಳ ಪಟ್ಟಿ ವಚನ ಕಟ್ಟುಗಳಲ್ಲಿ ಲೆಕ್ಕವಿಲ್ಲದಷ್ಟು ಸಿಗುತ್ತವೆ. ಹಾಗಾದರೆ ಅವುಗಳ ನಿಜವಾದ ಅರ್ಥ ಏನು? ಪೊಳ್ಳು ದೇವರುಗಳನ್ನು ದೂರ ಇರಿಸಿ ಎಲ್ಲ ಮತದ ಹೊಟ್ಟ ತೂರಿ ಸಮಾನತೆ ಸಾರುವುದೇ ಅಲ್ಲವೆ? ವಚನಕಾರರು ಯಾರೂ ಜಾತಿ, ಮತ, ಧರ್ಮಗಳು ಬೇಡ ಎಂದಿಲ್ಲ ಎನ್ನುವ ನಿಮ್ಮ ವಾದದಲ್ಲಿ ಅವಿನ್ನೂ ಜೀವಂತವಾಗಿರಬೇಕು ಎನ್ನುವುದಾ? ಗೊಡ್ಡು ಸಂಪ್ರದಾಯಗಳು, ಕಂದಾಚಾರಗಳು, ಜಾತಿಯ ವಿಷ ಬೀಜ ತೊಲಗಿಸುಲು ನಡೆಸಿದ ಹೋರಾಟಕ್ಕೆ ತಾನೆ ಅವರ ಮೇಲೆ ದಾಳಿಗಳು ನಡೆದಿದ್ದು, ವಚನ ಕಟ್ಟುಗಳನ್ನು ಹುಡುಕಿ ಪುರೋತಶಾಹಿಗಳು ಸುಟ್ಟು ಹಾಕಿದ್ದು. ಇದೆಲ್ಲದ ಅರ್ಥವೇನು ಹಾಗಾದರೆ? ಜತೆಗೆ ಇನ್ನೂ ಒಂದು ಇಲ್ಲಿ ಗಮನಿಸಬೇಕಾದ ಅಂಶವೆಂದರೆ ವಚನ ಚಳವಳಿಯಲ್ಲಿ ಆ ಮಹಾ ಕ್ರಾಂತಿಯಲ್ಲಿ ಭಾಗಿಯಾದವರಲ್ಲಿ ಕೆಲವೇ ಕೆಲವರು ಮೇಲ್ಜಾತಿಯವರು ಎನ್ನುವುದನ್ನು ಬಿಟ್ಟರೆ ಉಳಿದವರೆಲ್ಲಾ ಕೆಳ ವರ್ಗದಿಂದ ಬಂದವರೇ ಎಂಬುದು ಗಮನಾರ್ಹ. ಆದರೆ ದುರಾದೃಷ್ಟವೋ ಏನೋ ದೇವರು, ಧರ್ಮವನ್ನು ವಿರೋಧಿಸಿದವೇ ಇಂದು ದೇವರಾಗುತ್ತಿದ್ದಾರೆ! ಇದಕ್ಕೆ ಏನಂತೀರಿ…?

    • ಸಹನಾ

      ಅಂತರ ಜಾತಿ/ಅಂತರ ಧರ್ಮೀಯ (ಹಾಗೆಯೇ, ಬೇರೆಬೇರೆ ಭಾಷೆಯ, ಪ್ರದೇಶದ, ಶ್ರೀಮಂತ ಮತ್ತು ಬಡತನದ ಹಿನ್ನೆಲೆಯ) ಮಧುವೆಗಳು ಅಂದು ಇಂದು ನಡೆಯುತ್ತಲೇ ಇವೆ. ಜಾತಿಗಳನ್ನು ಬಿಟ್ಟು ಬೇರೆ ಜಾತಿಗಳಲ್ಲಿ ಮಧುವೆಗಳಾದಾಗ ಪ್ರತಿರೋಧಗಳು ಬರುತ್ತವೆ. ಆಗ ಆ ಪ್ರತಿರೋಧದ ವಿರುದ್ದ ಕೆಲವರು ಸಹಾಯ ಮಾಡಿ ಈ ಮಧುವೆಗಳನ್ನು ಮಾಡುತ್ತಿರುವುದನ್ನು ಅಂದಿಗೂ-ಇಂದಿಗೂ ನೋಡಬಹುದು. ಆದರೆ ಹಾಗೆ ಸಹಾಯ ಮಾಡುವವರು ಜಾತಿವಿನಾಶಕ್ಕಾಗಿ ಮಾಡುವರೋ? ಇಲ್ಲವೇ ಮಧುವೆ ಮಾಡಿಕೊಳ್ಳಲು ಇಚ್ಚಿಸುವವರಿಗೆ ಸಹಾಯ ಮಾಡಲು ಮಾಡುವರೋ? ಯಾವುದು ವಾಸ್ತವ? ಹಾಗೆ ನೋಡಿದರೆ ಈ ರೀತಿಯ ಅತಂರ ಜಾತೀಯ/ಧರ್ಮೀಯ ಮಧುವೆಗಳು ಇತಿಹಾಸದಲ್ಲಿ ಮತ್ತು ಇಂದು ಸಹಸ್ರಾರು ಸಂಖ್ಯೆಯಲ್ಲಿ ನಡೆದಿವೆ ಮತ್ತು ನಡೆಯುತ್ತಲೇ ಇವೆ. ಅವೆಲ್ಲಾ ಜಾತಿವಿನಾಶಕ್ಕೇ ಎಂದು ನಿಮ್ಮಿಂದ ನಿರೂಪಿಸಲು ಸಾಧ್ಯವೇ? ಸಾಮಾನ್ಯವಾಗಿ ನಮ್ಮ ಸುತ್ತಲು ನಡೆಯುವ ಈ ರೀತಿಯ ಘಟನೆಗಳನ್ನು ಗಮನಿಸಿದರೆ ಅದು ಸಹಜಜ್ಞಾನಕ್ಕೆ ವಿರುದ್ದವಾಗಿದೆ. ಹಾಗಿದ್ದಲ್ಲಿ ವಚನಕಾರರ ಸಂದರ್ಭದಲ್ಲಿ ಮಧುವೆಯನ್ನು ಜಾತಿವಿರೋಧ/ಜಾತಿವಿನಾಶಕ್ಕೇ ಎಂದು ವಾದಿಸಲು ಹೇಗೆ ಸಾಧ್ಯ?

      • santosh anand

        The intercaste marriage done by Basava was with intention to rebel against the caste system. That marriage didnt happen by ITSELF. It was done.

        • ಸಹನಾ

          ಮಧುವೆ ಮಾಡಿಸಿದರು ನಿಜ ಆದರೆ ನೀವು ಹೇಳಿದ ಕಾರಣಕ್ಕೇ ಎನ್ನಲು ಆಧಾರವೇನು? ಅದನ್ನು ಹೇಗೆ ಸಾಭೀತು ಮಾಡುವಿರಿ? ಬಸವಣ್ಣನವರು ನಿಮ್ಮ ಕನಸಿನಲ್ಲಿ ಬಂದು ಅವರ Intention ಅನ್ನು ಉಲಿದರೆ? ಒಬ್ಬರ intentin ಅನ್ನು ನಿರೂಪಿಸಲು ಯಾವುದಾದರೂ ವೈಜ್ಞಾನಿಕ ಸಲಕರಣೆ ಇದೆಯೇ? ತರ್ಕಬದ್ದವಾದ ಚರ್ಚೆ ಮಾಡಿ. ತೋಚಿದ್ದೆಲ್ಲಾ ಹೇಳಿದರೆ ನಗೆಪಾಟಿಲಷ್ಟೇ!!!

          • skpbnt

            Whether Basavanna came in ur dream and said that he didnt do intercaste marriage. you read Bhima kavi Basava Purana. Without reading dont exhibit ur ignorance

      • Ramjan Darga

        ಮದುವೆ ಎಂಬುದು ಎರಡು ಜೀವಗಳಿಗೆ ಸಂಬಂಧಿಸಿದ್ದು. ಅವರು ಪರಸ್ಪರ ಪ್ರೀತಿಸಿದಾಗ ಅವರ ಜಾತಿ ಮತ್ತು ಧರ್ಮದ ಹಿನ್ನೆಲೆ ನೋಡದೆ ವಿವಾಹ ಮಾಡುವುದು ಮನುಷ್ಯಧರ್ಮ. ಜಾತಿ ಹೋಗುವುದಕ್ಕಾಗಿ ಮದುವೆ ಮಾಡಬೇಕಿಲ್ಲ. ಇಂಥ ಮದುವೆಗಳಾಗುವುದರಿಂದ ಜಾತಿ ವಿನಾಶವಾಗುವುದರಲ್ಲಿ ಸಂಶಯವಿಲ್ಲ.

    • Annapoorna

      “ವಚನಕಾರರು ಜಾತಿ, ಹೊಲೆ, ಗೋತ್ರ, ಆಚಾರಗಳು ಹೋಗಬೇಕು ಎಂದು ಎಲ್ಲೂಹೇಳಿಲ್ಲ ಎನ್ನುವ ವಾದವೇ ಸರಿ ಇಲ್ಲ.” ಸ್ವಾಮಿ, ಸುಮ್ಮನೆ ಮಾತು ಬೆಳೆಸುವುದು ಯಾತಕ್ಕೆ. ವಚನಕಾರರು ಜಾತಿ ಹೋಗಲೇ ಬೇಕು, ಜಾತಿ ತ್ಯಜಿಸಿದ ಹೊರತು ಶರಣನಾಗಲು ಸಾಧ್ಯವಿಲ್ಲ, ಜಾತಿನಾಶವೇ ತಮ್ಮ ಗುರಿ ಅಂತ ಹೇಳಿದ್ದನ್ನು ದಯವಿಟ್ಟು ನಮಗೂ ತೋರಿಸಿ. ಹೊಲೆಯೇ ಇಲ್ಲ, ಹೊಲೆ ಎಂಬ ಪರಿಕಲ್ಪನೆ ಹೋಗಲೇ ಬೇಕು ಅಂತ ವಚನಕಾರರು ಹೇಳಿಲ್ಲ. “ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
      ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?” ಎಂಬ ಸಾಲುಗಳನ್ನೇ ತೆಗೆದುಕೊಳ್ಳಿ. ಲಿಂಗವಿದ್ದಲ್ಲಿ ಹೊಲೆ ಇಲ್ಲ ಅಂತ ಹೇಳಿದ್ದಾರೆ, ಇದರರ್ಥ ಏನು?
      “ಕಲ್ಲ ದೇವರ ಪೂಜೆಯ ಮಾಡಿ ಕಲಿಯುಗದಿ ಕತ್ತೆಗಳಾಗಿ ಹುಟ್ಟಿದರು, ಮಣ್ಣ ದೇವರ ಪೂಜಿಸಿ ಮಾನ ಹೀನರಾದರು. ಮರನ ದೇವರೆಂದು ಪೂಜಿಸಿ ಮಣ್ಣ ಕೂಡಿದರು. ದೇವರ ಪೂಜಿಸಿ ಸ್ವರ್ಗಕ್ಕೇರದೇ ಹೋದರು” ಇಲ್ಲಿ ಜಾತಿ ಅಥವಾ ಹೊಲೆಗೆ ಸಂಬಂಧಿಸಿದ ವಿಚಾರವೇ ಇಲ್ಲ. ಅಧ್ಯಾತ್ಮಿಕ ಸಾಧನೆಗೆ ಹಲವು ಮಾರ್ಗಗಳಿವೆ. ಶರಣರದ್ದು ಒಂದು ಮಾರ್ಗ. ಆ ಮಾರ್ಗದ ಅನುಯಾಯಿಗಳಿಗೆ ಮೂರ್ತಿ ಪೂಜೆಯ ಬಗ್ಗೆ ಒಲವಿಲ್ಲ. ಮೂರ್ತಿ ಪೂಜಕರ (ಅಂದರೆ ಮಿಕ್ಕ ಕೆಲವು ಅಧ್ಯಾತ್ಮಿಕ ಪಂಥಗಳ ಅನುಯಾಯಿಗಳು) ಬಗ್ಗೆ ಗೌರವವಿಲ್ಲ. ಅದನ್ನು ಅಂಬಿಗರ ಚೌಡಯ್ಯ (ಆಹಾ ಹೆಸರಿನಲ್ಲೇ ಅವನ ಜಾತಿ ಇದೆ ನೋಡಿ, ಅವನು ಜಾತಿ ವಿರೋಧಿಯೇ?!!) ಈ ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾನೆ. ಅಷ್ಟೇ! ಮಿಕ್ಕದ್ದೆಲ್ಲ ತಮ್ಮ ಮಿಸ್ ಇಂಟರ್ಪ್ರಿಟೆಷನ್.
      “ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬುವ ವ್ರತಗೇಡಿ ವಿಷ್ಣುವೆಂಬವ ಸತ್ತುಬಿದ್ದ; ರುದ್ರನೆಂಬವ ಅಬದ್ಧ ಅವಿಚಾರಿ” ದೇವರುಗಳನ್ನು ಲೇವಡಿ ಮಾಡುವುದನ್ನು ಶರಣರಲ್ಲಷ್ಟೇ ಅಲ್ಲ ಅನೇಕ ಅಧ್ಯಾತ್ಮಿಕ ಪಂಥಗಳಲ್ಲಿ ಕಂಡಿದ್ದೇವೆ. ಇದೇನು ಹೊಸತಲ್ಲ! ನಿಂದಾಸ್ತುತಿ ಎಂಬುದರ ಬಗ್ಗೆ ತಮಗೆ ಗೊತ್ತಿಲ್ಲವೇನೋ! ಗಮನಿಸಬೇಕಾದ ವಿಷಯ ಇಲ್ಲಿ ಏನೆಂದರೆ ಶಿವನನ್ನು ಅಬದ್ಧ ಅವಿಚಾರಿ ಎಂದು ಕರೆದಿರುವುದು. ಹೀಗೆ ಹೇಳಿದ್ದಾನೆ ಎಂದ ಮಾತ್ರಕ್ಕೆ ವಚನಕಾರ ಹಾಗೂ ಮಿಕ್ಕ ಶರಣರು ಶಿವನನ್ನೇ ತಿರಸ್ಕರಿಸಿದರು ಎಂದರ್ಥವೇನು?!!
      ” ವಚನಕಾರರು ಯಾರೂ ಜಾತಿ, ಮತ, ಧರ್ಮಗಳು ಬೇಡ ಎಂದಿಲ್ಲ ಎನ್ನುವ ನಿಮ್ಮ ವಾದದಲ್ಲಿ ಅವಿನ್ನೂ ಜೀವಂತವಾಗಿರಬೇಕು ಎನ್ನುವುದಾ?” ಇಲ್ಲ, ನಾನು ಈ ರೀತಿಯ ಅಥವಾ ಅದರ ವಿರುದ್ಧವಾದ ಯಾವ ವಾದವನ್ನೂ ಮಂಡಿಸುತ್ತಿಲ್ಲ. ನನ್ನ ಉದ್ದೇಶವಿಷ್ಟೇ – ವಚನಕಾರರ ಬಗ್ಗೆ ನಿಮಗೇನು ಗೊತ್ತು ಅಂತ ರಂಜಾನ್ ದರ್ಗಾ ಕೇಳಿದ್ದಾರಲ್ಲ, ಸರಿ ಅವರಿಗೆ ಗೊತ್ತಿರುವುದರಿಂದ ಒಂದಿಷ್ಟು ಕಲಿತುಕೊಂಡು ಸ್ವಲ್ಪ ಅರಿವು ಹೆಚ್ಚಿಸಿಕೊಳ್ಳುವ ಎಂಬುದು. ಆದರೆ ಇಲ್ಲಿ ನೋಡಿದರೆ ರಂಜಾನ್ ದರ್ಗಾ ವಚನಗಳ ನೆಪದಲ್ಲಿ ತಮ್ಮದೇ ಐಡಿಯಾಲಾಜಿ ಹರಿಸುತ್ತಿದ್ದಾರೆ! ವಚನಗಳ ಅರ್ಥಕ್ಕೆ ಧಕ್ಕೆ ಬರುವ ಹಾಗೆ ವಿರೂಪಗೊಳಿಸಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ! ಇದು ವಿಕೃತಿಯಲ್ಲದೆ ಮತ್ತೇನು? ಕೇಳಿದ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರ ಕೊಟ್ಟಿಲ್ಲ!

      • santosh anand

        Hello Ambiga is not caste its a profession Kayaka. Thats why it is used. If it would hv suggested caste Basava would not have allowed to use it. Pl understand

        • Amaresh

          Do u have a hotline to Basavanna?

          • skpbnt

            u r screaming as if u hv hotline

      • Ramjan Darga

        ಅನ್ನಪೂರ್ಣ ಅವರೆ, ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನಿಮಗೆ ನನ್ನ ಉತ್ತರಗಳ ಕಡೆಗೆ ಗಮನ ಹರಿಸುವ ಮನಸಿಲ್ಲ. ರುದ್ರನನ್ನು ‘ಶಿವ’ ಎಂದು ತಪ್ಪಾಗಿ ಭಾವಿಸಿರುವಿರಿ. ‘ಸ್ವಾಮಿ ನೀನು, ಶಾಶ್ವತ ನೀನು’ ಎಂದು ಬಸವಣ್ಣನವರು ಶಿವನನ್ನು ಕೊಂಡಾಡಿದ್ದಾರೆ. ‘ಅಹಂ ವಿಶ್ವಕರ್ತಾ, ಮಮಕರ್ತಾ ಮಹೇಶ್ವರಃ’ (ನಾನು ವಿಶ್ವವನ್ನು ಸೃಷ್ಟಿಸಿದ್ದೇನೆ, ಆದರೆ ಮಹೇಶ್ವರನು ನನ್ನನ್ನು ಸೃಷ್ಟಿಸಿದ್ದಾನೆ) ಎಂದು ವೈದಿಕರು ವಿಷ್ಣುವಿನಿಂದ ಹೇಳಿಸಿದ್ದನ್ನೂ ಬಸವಣ್ಣನವರು ತಿಳಿಸಿದ್ದಾರೆ. ಶಿವನೊಬ್ಬನೇ ದೇವರಾಗಿದ್ದಾನೆ. (ದೇವನೊಬ್ಬ ನಾಮ ಹಲವು). ಆದರೆ ರುದ್ರ ಹೆಸರಿನವರು ಲೆಕ್ಕವಿಲ್ಲದಷ್ಟು ಇದ್ದಾರೆ. ರುದ್ರರು ಶಾಶ್ವತರಲ್ಲ. ‘ಗಂಗೆವಾಳುಕಸಮ ರುದ್ರರಿಗೂ ಲಯವುಂಟು’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಗಂಗಾನದಿಯ ದಡದಲ್ಲಿ ಎಷ್ಟೊಂದು ಮಳಲಕಣಗಳಿವೆಯೋ ಅಷ್ಟೊಂದು ರುದ್ರರಿದ್ದು ಅವರೆಲ್ಲರಿಗೂ ಸಾವುಂಟು ಎಂಬುದು ಇದರರ್ಥ. ಹೀಗೆ ಪೌರಾಣಿಕವಾಗಿ ಪ್ರಶ್ನೆ ಕೇಳುವವರಿಗೆ ಬಸವಣ್ಣನವರು ಪೌರಾಣಿಕವಾಗಿಯೂ ಉತ್ತರಿಸಿದ್ದಾರೆ.
        ವಿಕೃತಿ ನಿಮ್ಮ ಪ್ರಶ್ನೆಗಳಲ್ಲಿ ಇದೆಯೊ ಅಥವಾ ನನ್ನ ಉತ್ತರಗಳಲ್ಲಿ ಇದೆಯೊ ಎಂಬುದನ್ನು ಒದುಗರೇ ನಿರ್ಧರಿಸುತ್ತಾರೆ.

        • Somalinga Kharge

          ಸಾರ್, ತಮ್ಮ ‘ಉತ್ತರ’ಗಳಿಗೆ ನಾನು ಋಣಿ. ಇಂತಹ ಬೋಗಸ್ ಉತ್ತರಗಳನ್ನು ಕೊಡದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಸ್ವಲ್ಪವಾದರೂ ಮಾನ ಉಳಿಯುತ್ತಿರುತ್ತಿತ್ತು. ನಾನು ಕೇಳಿದ್ದು ಏನೋ ತಾವು ಕೊಟ್ಟ ಉತ್ತರ ಮತ್ತೇನೋ! ತಮ್ಮ ತರ್ಕ ಲಹರಿಯ ಮೂಲಕ ಓದುಗರಿಗೆ ಸಿಕ್ಕಾಪಟ್ಟೆ ರಂಜನೆ ಕೊಟ್ಟಿದ್ದೇ ತಮ್ಮ ಸಾಧನೆ.
          ತಮಗೆ ಶುಭವಾಗಲಿ.

        • ವಿಜಯ್

          [ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬುವ ವ್ರತಗೇಡಿ ವಿಷ್ಣುವೆಂಬವ ಸತ್ತುಬಿದ್ದ; ರುದ್ರನೆಂಬವ ಅಬದ್ಧ ಅವಿಚಾರಿ]
          ಹಿಂದು ಪುರಾಣಗಳಲ್ಲಿ, ನಂಬಿಕೆಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಬರುತ್ತಾರೆ. ಅದರ ಪ್ರಕಾರ ಇಲ್ಲಿ ಮೊದಲೆರಡು ಜನ ಬ್ರಹ್ಮ ಮತ್ತು ವಿಷ್ಣು ಆದ ಮೇಲೆ..ಮೂರನೆಯದು ಮಹೇಶ್ವರ ಆಗಬೇಕಾದ್ದದ್ದು ಸಾಮಾನ್ಯತರ್ಕ. ಬೇರೆ ಬೇರೆಯೆ? ಗುಡುಗು-ಮಿಂಚು-ಮಳೆ ಎಂದರೆ ಸರಿ ಅನ್ನಬಹುದು..ಗುಡುಗು-ಮಿಂಚು-ನಳ ಎಂದರೆ ವಿಚಾರ ಮಾಡಬೇಕಾಗುತ್ತದೆ..ಇವನ್ನು ಹೇಗೆ ಜೋಡಿಸಬೇಕೆಂದು!.
          [ರುದ್ರನನ್ನು ‘ಶಿವ’ ಎಂದು ತಪ್ಪಾಗಿ ಭಾವಿಸಿರುವಿರಿ]
          ಹಾಗಾದರೆ ರುದ್ರ ಎಂದರೆ ಯಾರು? ಋಗ್ವೇದ ಮತ್ತು ಶಿವ ಸಹಸ್ರನಾಮಗಳಲ್ಲಿ ಬರುವ ರುದ್ರ ಯಾರು?
          [‘ಅಹಂ ವಿಶ್ವಕರ್ತಾ, ಮಮಕರ್ತಾ ಮಹೇಶ್ವರಃ’ (ನಾನು ವಿಶ್ವವನ್ನು ಸೃಷ್ಟಿಸಿದ್ದೇನೆ, ಆದರೆ ಮಹೇಶ್ವರನು ನನ್ನನ್ನು ಸೃಷ್ಟಿಸಿದ್ದಾನೆ) ಎಂದು ವೈದಿಕರು ವಿಷ್ಣುವಿನಿಂದ ಹೇಳಿಸಿದ್ದನ್ನೂ ಬಸವಣ್ಣನವರು ತಿಳಿಸಿದ್ದಾರೆ.]
          ಇದರಲ್ಲಿಯೂ ವೈದಿಕರ ‘ಗುಪ್ತ ಕಾರ್ಯಸೂಚಿ’ಯನ್ನು ಹುಡುಕಿದರೆ ಬಸವಣ್ಣನವರು?
          [ಆದರೆ ರುದ್ರ ಹೆಸರಿನವರು ಲೆಕ್ಕವಿಲ್ಲದಷ್ಟು ಇದ್ದಾರೆ. ರುದ್ರರು ಶಾಶ್ವತರಲ್ಲ. ‘ಗಂಗೆವಾಳುಕಸಮ ರುದ್ರರಿಗೂ ಲಯವುಂಟು’ ಎಂದು ಬಸವಣ್ಣನವರು ತಿಳಿಸಿದ್ದಾರೆ.]
          ರುದ್ರ ಮತ್ತು ರುದ್ರರು ..ಇವುಗಳಲ್ಲಿ ವ್ಯತ್ಯಾಸವಿದೆಯೊ ಇಲ್ಲವೊ?

          • ವಿಜಯ್

            ಬಿಟ್ಟು ಹೋಗಿದ್ದು >>
            [ಕಾಮಿಸುವ ಕಲ್ಪಿಸುವ ಬ್ರಹ್ಮನೆಂಬುವ ವ್ರತಗೇಡಿ ವಿಷ್ಣುವೆಂಬವ ಸತ್ತುಬಿದ್ದ; ರುದ್ರನೆಂಬವ ಅಬದ್ಧ ಅವಿಚಾರಿ]
            ಹಿಂದು ಪುರಾಣಗಳಲ್ಲಿ, ನಂಬಿಕೆಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಬರುತ್ತಾರೆ. ಅದರ ಪ್ರಕಾರ ಇಲ್ಲಿ ಮೊದಲೆರಡು ಜನ ಬ್ರಹ್ಮ ಮತ್ತು ವಿಷ್ಣು ಆದ ಮೇಲೆ..ಮೂರನೆಯದು ಮಹೇಶ್ವರ ಆಗಬೇಕಾದ್ದದ್ದು ಸಾಮಾನ್ಯತರ್ಕ. ಅಂದ ಹಾಗೆ ಶಿವ ಮತ್ತು ಮಹೇಶ್ವರ ಏನಾದರೂ ಬೇರೆ ಬೇರೆಯೆ? ಗುಡುಗು-ಮಿಂಚು-ಮಳೆ ಎಂದರೆ ಸರಿ ಅನ್ನಬಹುದು..ಗುಡುಗು-ಮಿಂಚು-ನಳ ಎಂದರೆ ವಿಚಾರ ಮಾಡಬೇಕಾಗುತ್ತದೆ..ಇವನ್ನು ಹೇಗೆ ಜೋಡಿಸಬೇಕೆಂದು!

          • Amaresh

            Dear Vijay, there is no logic in Ranjan Darga’s responses to the questions asked by you and other readers. He will fit in anything to suit his misinterpretation of the Vachanas and the Vachanakaras. He is not at all interested in addressing any of your questions. there is no intellectual integrity in his approach. not surprisingly, his approach is that of our politicians. Like a seasoned politician, he mixes hatred for certain traditions with praise for the Sharana tradition to play his cards. Really disappointing, but this episode shows how hollow is the integrity of the so called progressive Kannada intellectuals.

          • Ramjan Darga

            ನಿಮ್ಮ ಬಗ್ಗೆ ನನಗೂ ಹಾಗೆ ಅನಿಸುತ್ತಿದೆ.

          • Amaresh

            Again he is using the good old tactic. Instead of addressing the flaws in his arguments, he is making ad hominem attacks!!

          • skpbnt

            What u and ur gang is also using hatred as main tool to create communal violence by splitting the good milk. Whatever arguments u and ur gang is doing are also equally cunning and criminal and conspirating.

          • Amaresh

            You need some psychiatric assistance. Only fanatics get perturbed when asked questions.

          • santosh anand

            But u and ur gang need lunatic asylum badly. Thats why without doing any honest work u r conspirating against the vachanas. I think u dont have any better work to do other than misinterpreting.

          • jayateerth joshi

            Dear Darga sir these people are simply trying to victimize you without revealing their true identity. Thats why they hiding behind website and throwing stones at you. They are harping on the concept of logic and they dont hv the common sense that philosophy and spirituality cant be understood by logic. We too can find out more logical fallacies in their religion also. Basava and other sharanas also have done the same thing in 12th century.

          • Shivappa Nayak

            Ranjan Darga avarige ee bagge takaraarilla, tamageke sankata?!!

          • Anonymous

            ಜಯತೀರ್ಥ ಜೋಷಿ ಅವರೆ, ನಿಮ್ಮ ಕಾಳಜಿಗೆ ಕೃತಜ್ಞತೆಗಳು. ನಾನು ಈ ಜಾತಿವಾದಿಗಳಿಗೆ ಉತ್ತರ ಕೊಡುತ್ತಿಲ್ಲ. ಇವರ ಆಲೋಚನೆಗಳು ಎಷ್ಟೊಂದು ಅನಾಹುತಕಾರಿಯಾಗಿವೆ ಎಂಬುದನ್ನು ಸಮಾಜಕ್ಕೆ ತೋರಿಸಿಕೊಡುವುದೇ ನನ್ನ ಉದ್ದೇಶವಾಗಿದೆ. ಇವರ ಪ್ರಶ್ನೆಗಳು ಮತ್ತು ನಮ್ಮ ಉತ್ತರಗಳು ಪುಸ್ತಕರೂಪದಲ್ಲಿ ಹೊರಬಂದಾಗ ಸಮಾಜಕ್ಕೆ ಇವರ ಷಡ್ಯಂತ್ರದ ಅರಿವಾಗುವುದು. ಇವರ ವಿತಂಡವಾದ ಹೇಸಿಕೆ ಹುಟ್ಟಿಸುವಂಥದ್ದಾಗಿದೆ ಎಂಬುದು ಕನ್ನಡ ಲೋಕಕ್ಕೆ ಅರಿವಾಗುವ ದಿನಗಳು ದೂರವಿಲ್ಲ. ‘ಭಾರತದಲ್ಲಿ ಜಾತಿಗಳಿವೆಯೆ?’ ಎಂದು ಪ್ರಶ್ನಿಸುತ್ತ ಮತ್ತು ಜಾತಿ ವ್ಯವಸ್ಥೆಯನ್ನು ಮುಂದುವರಿಸುವುದೇ ಈ ಮನುವಾದಿ ಬಾಲಂಗೋಚಿಗಳ ಹುನ್ನಾರವಾಗಿದೆ. ಲಿಂಗಾಯತರು ಈ ವಾದ ವಿವಾದಗಳಿಂದ ಎಚ್ಚೆತ್ತುಕೊಳ್ಳುವುದು ಅವಶ್ಯವಾಗಿದೆ. ನಿಜವಾದ ಬಸವ ತತ್ತ್ವನಿಷ್ಠರು 1) ಮಂದಿರಗಳಿಗೆ ಹೋಗುವುದಿಲ್ಲ 2)ಸ್ಥಾವರಲಿಂಗಗಳನ್ನಾಗಲೀ ಮೂರ್ತಿಗಳನ್ನಾಗಲೀ ಪೂಜಿಸುವುದಿಲ್ಲ. 3) ಯಾವ ದ
            ದೇವರಿಗೂ ತೆಂಗಿನ ಕಾಯಿ ಒಡೆಯುವುದಿಲ್ಲ ಮತ್ತು ಕೈಮುಗಿಯುವುದಿಲ್ಲ 4) ಹಬ್ಬಗಳಲ್ಲಿ ಬೂದುಗುಂಬಳಗಳ ಬಲಿ ಕೊಡುವುದಿಲ್ಲ. 5)ಅಮಾವಾಸ್ಯೆ ದಿನ ವಾಹನಗಳ ಚಕ್ರಗಳಿಗೆ ಲಿಂಬೆಹಣ್ಣುಗಳ ಬಲಿ ಕೊಡುವುದಿಲ್ಲ. 6) ರಾಹುಕಾಲ ಗುಳಿಕಕಾಲಗಳನ್ನು ನೋಡುವುದಿಲ್ಲ ಮತ್ತು ಪಂಚಾಂಗವನ್ನು ಮುಟ್ಟುವುದಿಲ್ಲ. 7) ಜಾತಿ ಉಪಜಾತಿಗಳನ್ನು ನಂಬುವುದಿಲ್ಲ. 8) ‘ದೇವನೊಬ್ಬ ನಾಮ ಹಲವು’ ಎಂದು ಸಾರಿದ ಬಸವಣ್ಣನವರು ಹೇಳಿಕೊಟ್ಟ ಇಷ್ಟಲಿಂಗದೇವರ ಪೂಜೆಯನ್ನು ಮಾತ್ರ ಅವರು ಮಾಡುವರು. 9) ಈ ಇಷ್ಟಲಿಂಗ ಅರಿವಿನ ಕುರುಹು ಆಗಿದೆ. ಲಿಂಗಾಯತ ಧರ್ಮದಲ್ಲಿ ಅರಿವೇ ಗುರು, ಆ ಅರಿವೆಂಬ ಗುರುವೇ ದೇವರು. ಅಂತಃಸಾಕ್ಷಿಯೇ ಲಿಂಗಾಯತರ ದೇವರು. ಅದುವೇ ದೇಹವೆಂಬ ದೇವಾಲಯದೊಳಗಿನ ದೇವರು. ಲಿಂಗಾಯತರು ಪೂಜೆ ಮಾಡುವುದಿಲ್ಲ. ತಮ್ಮೊಳಗಿನ ದೇವರಿಗೆ ಮುಟ್ಟುವ ಹಾಗೆ ಪೂಜೆ ಮಾಡಿಕೊಳ್ಳುತ್ತಾರೆ. ಮಾನವರು ತಮ್ಮೊಳಗಿನ ದೇವರ ಜೊತೆಗೂಡುವುದೇ ಶಿವಯೋಗ. ಇದರ ಅಂತಿಮ ಘಟ್ಟವೇ ಲಿಂಗಾಂಗ ಸಾಮರಸ್ಯ. ಅದರ ಪರಿಣಾಮವೇ ಅಚ್ಚಲಿಂಗೈಕ್ಯ ಸ್ಥಿತಿ. ಇದು ಬಸವಧರ್ಮದ ತಿರುಳು.
            ಬಸವಧರ್ಮವು ಇಡೀ ಮಾನವಕುಲಕ್ಕೆ ಸಂಬಂಧಿಸಿದುದು. ಅಸ್ಪೃಶ್ಯರು ಎಂದು ಯಾರನ್ನು ವರ್ಣಾಶ್ರಮ ಪದ್ಧತಿಯ ವೈದಿಕರು ಕರೆಯುವರೋ ಅವರು ಕೂಡ ಈ ಧರ್ಮದಲ್ಲಿ ಒಂದಾಗುವ ಹಕ್ಕನ್ನು ಹೊಂದಿದ್ದಾರೆ. ಆಫ್ರಿಕಾದ ಕರಿಯರು, ಅಮೆರಿಕದ ಬಿಳಿಯರು, ಚೈನಾದ ಹಳದಿ ಬಣ್ಣದವರು ಕೂಡ ಈ ಧರ್ಮ ಸ್ವೀಕರಿಸುವ ಹಕ್ಕನ್ನು ಹೊಂದಿದ್ದಾರೆ. ಒಬ್ಬ ದಲಿತನಿಗೆ ಲಿಂಗಾಯತ ಆಗುವ ಅವಕಾಶವಿದೆ. ಆದರೆ ಅದೇ ದಲಿತನಿಗೆ ಮಾಧ್ವ ಬ್ರಾಹ್ಮಣ ಆಗುವ ಅವಕಾಶ ಇದೆಯೆ? ಲಿಂಗಾಯತಕ್ಕೆ ಇಡೀ ಜಗತ್ತೇ ತನ್ನದಾಗಿದೆ. ಆದರೆ ಪೇಜಾವರಶ್ರೀಗಳಂಥವರಿಗೆ ಹೀಗೆ ಹೇಳಲು ಸಾಧ್ಯವೆ. ಅವರು ದಲಿತರನ್ನು ಮಾಧ್ವರನ್ನಾಗಿಸುವ ಮಾತು ದೂರ ಉಳಿಯಿತು. ಸಮುದ್ರ ದಾಟುವ ಧೈರ್ಯವಾದರೂ ಇದೆಯೆ? ಇಂಥವರು ಮಾನವ ಕುಲವನ್ನು ಒಂದು ಮಾಡಲು ಸಾಧ್ಯವೆ?
            ಭಾರತದಲ್ಲಿ ಜಾತಿ ವ್ಯವಸ್ಥೆ ಎಷ್ಟೊಂದು ಕ್ರೂರವಾಗಿದೆ ಎಂಬುದಕ್ಕೆ ನನ್ನ ಬಾಲ್ಯದ ಘಟನೆಯೊಂದನ್ನು 30 ವರ್ಷಗಳ ಹಿಂದೆ ಡಾ. ಯು.ಆರ್. ಅನಂತಮೂರ್ತಿ ಅವರ ‘ರುಜುವಾತು’ನಲ್ಲಿ ದಾಖಲಿಸಿದ್ದೆ. ವಿಜಾಪುರದ ರಾಮದೇವರ ಮಂದಿರದ ಮುಂದೆ ಕುಷ್ಠರೋಗಿಗಳು ಭಿಕ್ಷೆಗಾಗಿ ಕುಳಿತಿದ್ದರು. ನನ್ನ ತಂದೆ ದಾನ ಮಾಡುವ ವೇಳೆ. ಒಬ್ಬ ಕುಷ್ಠರೋಗಿ ಹೆಣ್ಣುಮಗಳು ದೂರ ಕುಳಿತದ್ದನ್ನು ನೋಡಿ ಅವಳಿಗೂ ದಾನ ಕೊಡಲು ಹೋದರು. ನಾನೂ ಹಿಂಬಾಲಿಸಿದೆ. ಆಗ ನನ್ನ ತಂದೆಯವರು ಆಕೆ ದೂರ ಕುಳಿತದ್ದಕ್ಕೆ ಕಾರಣ ಕೇಳಿದರು. ಆಕೆ ಹೇಳಿದಳು: ನಾನು ಹೊಲತಿಯಾಗಿದ್ದರಿಂದ ಆ ಮೇಲ್ಜಾತಿ ಜನರ ಜೊತೆ ಕೂಡುವ ಹಾಗಿಲ್ಲ. ಅವರು ನನ್ನ ಮುಟ್ಟಿಸಿಕೊಳ್ಳುವುದಿಲ್ಲ. ಸಮೀಪ ಕೂಡಲೂ ಬಿಡುವುದಿಲ್ಲ. ಅದಕ್ಕೇ ದೂರ ಕುಳಿತದ್ದು.
            ಅವಳ ದುಃಖ ನನ್ನನ್ನು ಸದಾ ಕಾಡುತ್ತಿದೆ. ನಾನು ಆ ಬಾಲ್ಯದಲ್ಲೇ ಜಾತಿಯ ಕ್ರೌರ್ಯದ ಅನುಭವ ಪಡೆದುಕೊಂಡೆ. ಜಾತಿಯ ವಿರುದ್ಧ ನನ್ನ ಹೋರಾಟ ಬಾಲ್ಯದಿಂದಲೇ ಆರಂಭವಾಗಿದೆ. ‘ಭಾರತದಲ್ಲಿ ಜಾತಿಗಳಿವೆಯೆ’ ಎಂದು ಪ್ರಶ್ನಿಸುವವರು ಎಂಥ ಅಧೋಗತಿಗೆ ಇಳಿದ ಜನ ಎಂಬುದನ್ನು ನಮ್ಮ ಜನ ಅರಿತುಕೊಳ್ಳಬೇಕಿದೆ. ಸ್ವಾತಂತ್ರ್ಯಾನಂತರ ಜಾತಿಗಳು ದೈಹಿಕವಾಗಿ ಉಳಿಯದೆ ಮಾನಸಿಕವಾಗಿ ಗಟ್ಟಿಗೊಳ್ಳುವವು ಎಂದು ಗುರುದೇವ ರಾನಡೆ ಅವರು ಹೇಳಿದ್ದು ಇಂದು ನಿಜವಾಗಿದೆ.
            ಭಾರತ ಜಾತಿಯ ಭೂತದ ಹಿಡಿತದಲ್ಲಿ ಸಿಕ್ಕಿರದಿದ್ದರೆ ಬಾಬು ಜಗಜೀವನರಾಮ ಅವರು ದೇಶದ ಪ್ರಧಾನಿಯಾಗುತ್ತಿದ್ದರು ಎಂಬುದನ್ನು ಈ ದೇಶದ ಪ್ರಜ್ಞಾವಂತರು ಮರೆತಿಲ್ಲ. ಅಂಬೇಡ್ಕರ್ ಅವರಿಗೆ ಸಂಸ್ಕೃತ ಕಲಿಯಲು ಅನುಮತಿ ನೀಡದೆ ಇರುವುದನ್ನು ಮರೆತಿಲ್ಲ. ಇಂದಿರಾಗಾಂಧಿ ಅವರ ಪತಿ ಪಾರ್ಸಿ ಆಗಿದ್ದರಿಂದ ಅವರನ್ನು ಪುರಿ ಜಗನ್ನಾಥ ಮಂದಿರದೊಳಗೆ ಬಿಡಲಿಲ್ಲ ಎಂಬುದನ್ನು ಮರೆತಿಲ್ಲ. ಭಾರತದ ಒಂದಿಲ್ಲೊಂದು ಕಡೆಯಲ್ಲಿ ದಿನನಿತ್ಯ ದಲಿತರ ಕಗ್ಗೊಲೆಯಾಗುವುದನ್ನು ಮತ್ತು ಅವರನ್ನು ಅಪಮಾನಗೊಳಿಸುವುದನ್ನು ಮರೆಯಲು ಹೇಗೆ ಸಾಧ್ಯ?
            ತಮ್ಮಂಥ ಪ್ರಜ್ಞಾವಂತ ಬ್ರಾಹ್ಮಣರಿಗೂ ಬಸವಣ್ಣನವರ ತತ್ತ್ವಗಳೇ ಮಾರ್ಗದರ್ಶಿಯಾಗಿವೆ. ನಾವೆಲ್ಲ ಅರ್ಜಿ ಹಾಕಿಕೊಂಡು ವಿವಿಧ ಜಾತಿ ಮತ್ತು ಧರ್ಮಗಳಲ್ಲಿ ಹುಟ್ಟಿಲ್ಲ. ಆದರೆ ವಿವೇಚನಾಶಕ್ತಿಯಿಂದ ನಾವೆಲ್ಲ ಒಂದಾಗಿ ಸತ್ಯದ ಕಡೆಗೆ ಸಾಗುವುದೇ ಮಾನವಕುಲಕ್ಕೆ ಶ್ರೇಯಸ್ಕರವಾದುದು. ಭಾರತವನ್ನು ಜಾತಿವಾದಿಗಳಿಂದ, ಧರ್ಮಾಂಧರಿಂದ, ಧಾರ್ಮಿಕ ಫ್ಯಾಸಿಸ್ಟರಿಂದ ಮತ್ತು ಉಗ್ರಗಾಮಿಗಳಿಂದ ರಕ್ಷಿಸಬೇಕಿದೆ. ಈ ಮುಂತಾದ ಕಾರಣಗಳಿಂದ ತಮ್ಮಂಥವರು ಮುಂದೆ ಬಂದು ಬಸವಧರ್ಮವನ್ನು ರಕ್ಷಿಸಬೇಕಿದೆ. ಬಸವಧರ್ಮದ ತತ್ತ್ವಗಳು ಇಲ್ಲಿಯವರೆಗೆ ಜೀವಂತವಾಗಿರಲು ಬ್ರಾಹ್ಮಣ ಮೂಲದ ಮಧುವರಸರ ಮಗಳು ಲಾವಣ್ಯವತಿಯು ಸಮಗಾರ ಹರಳಯ್ಯನವರ ಮಗ ಶೀಲವಂತನನ್ನು ಶೀಲವಂತನನ್ನು ತತ್ತ್ವಬದ್ಧವಾಗಿ ಮದುವೆಯಾಗಿದ್ದೇ ಕಾರಣವಾಗಿದೆ.

          • ಸಹನಾ

            ವಿಜಯ್ ರವರೇ, ಆ ರೀತಿಯ ತರ್ಕಗಳು ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾತ್ರ….ಈ ವಿದ್ವಾಂಸರು ಹೇಳುವುದೇ (ಕು)ತರ್ಕ. ಅವನ್ನು ವೇದವಾಕ್ಯ… ಶಾಂತಂಪಾಪಂ!!! ವಚನವಾಕ್ಯವೆಂದೇ ತಿಳಿಯಬೇಕು!!!

          • Ramjan Darga

            ಅಸಹನೆಗೂ ಒಂದು ಮಿತಿ ಇರಬೇಕು ಸಹನಾ ಅವರೆ.

          • skpbnt

            paapaatmam vinashyati

          • Ramjan Darga

            ರುದ್ರನ ದೇವರೆಂದು ಆರಾಧಿಸಿ
            ಶಿಲೆಯೊಳಗೆ ಹೋರಟೆಗೊಂಡು ಕೆಟ್ಟರಲ್ಲಾ ಭಕ್ತಜನಂಗಳು.
            ವಿಷ್ಣುವ ದೇವರೆಂದು ಆರಾಧಿಸಿ
            ಮರನ ಸುತ್ತಿ ಕಾಲುಗೆಟ್ಟರಲ್ಲಾ ಭೂಸುರಾದಿಗಳು.
            ಬ್ರಹ್ಮನ ದೇವರೆಂದು ಆರಾಧಿಸಿ
            ಬೆಂಕಿಯಲ್ಲಿ ಬೆಂದರಲ್ಲಾ ಮರ್ತ್ಯಲೋಕದ ಮಹಾಜನಂಗಳು.
            ಇಂತೀ ಮೂವರು ಗಂಪಧಾರಿಗಳೆಂಬೆ ಧರೆಯೊಳಗೆ
            …….
            ಎನ್ನ ದೇವಂಗೆ ಇಂತಿವರಂಗ ಒಂದೂ ಇಲ್ಲ
            ……..
            ಗಂಗೆವಾಳಕಸಮಾರುದ್ರರೊಳಗಾದ ಬಂಧನವಿರಹಿತ
            ಲೀಲೆಗೆ ಹೊರಗಾದ ಸ್ವಯಂಭೂವಯ್ಯಾ ಎನ್ನ ದೇವ….. (ಮೋಳಿಗೆ ಮಾರಯ್ಯ)
            ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ?
            ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ?
            ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ?
            ಇಂತೀ ಮೂರೂ ಅಳಿವಿಂಗೊಳಗು. (ಗುಪ್ತ ಭಕ್ತಿಯ ಮಂಚಣ್ಣ)
            ಮಾಯೆಯ ಬಸುರಲ್ಲಿ ಬಂದಾತ ಮಹೇಶ
            ದೇವಕಿಯ ಬಸುರಲ್ಲಿ ಬಂದಾತ ವಿಷ್ಣು
            ಹೂವಿನ ಬಸುರಲ್ಲಿ ಬಂದಾತ ಬ್ರಹ್ಮ
            ಮರುತದೇವಿಯ ಬಸುರಲ್ಲಿ ಬಂದಾತ ಅರುಹ
            ಇವರು ದೇವರೆಂದು ನಂಬಿ ಪೂಜಿಸಿದಡೆ ಭವ ಅಳಿಯದು
            ಮುಕ್ತಿಯಾಗದೆಂದಾತನಂಬಿಗ ಚೌಡಯ್ಯ. (ಅಂಬಿಗರ ಚೌಡಯ್ಯ)
            ವಿಷ್ಣು ದ್ಯವವಾದಡೆ ಪಾಂಡವರ ಬಂಡಿಯ ಬೋವನಾದ
            ಬ್ರಹ್ಮ ದೈವವೆಂದಡೆ ಆ ಬೋವಂಗೆ ಕಂದನಾದ
            ….
            ರುದ್ರ ದೈವವೆಂದಡೆ ಅರ್ಧನಾರಿಗೆ ಸಿಕ್ಕಿದ… (ಅರಿವಿನ ಮಾರಿತಂದೆ)
            ಹಾದರದ ಮಿಂಡನ ಹತ್ತಿರ ಮಡಗಿಕೊಂಡು
            ಮನೆಯ ಗಂಡನ ಒಲಿಯೆಂದಡೆ ಒಲಿವನೆ?
            ತಾ ಶಿವಭಕ್ತನಾಗಿ ತನ್ನಂಗದ ಮೇಲೆ ಲಿಂಗವಿದ್ದು
            ಮತ್ತೆ ಭಿನ್ನಶೈವಕ್ಕೆರಗುವುದೇ ಹಾದರ.
            ಕೂಡಲಸಂಗಮದೇವರು ಅವರ ಮೂಗ ಕೊಯ್ಯದೆ ಮಾಣ್ಬನೆ? (ಬಸವಣ್ಣನವರು)
            ವಿಜಯ್ ಅವರೆ, ಶರಣರ ಶಿವ ಇಷ್ಟಲಿಂಗದ ಅರಿವೇ ಆಗಿದ್ದಾನೆ (ಅರಿವು ಹಿಡಿಯೆಂದಡೆ ಕುರುಹು ಹಿಡಿದರು ನೋಡಾ -ಅಲ್ಲಮಪ್ರಭು) ನೀವು ಹೇಳುವ ಬ್ರಹ್ಮ, ವಿಷ್ಣು, ಮಹೇಶ್ವರ ಅಥವಾ ರುದ್ರರಿಗೂ ಮತ್ತು ಏಕದೇವೋಪಾಸಕರಾದ ಶರಣರ ದೇವರಿಗೂ ಯಾವುದೇ ಸಂಬಂಧವಿಲ್ಲ.

          • Ramjan Darga

            ರುದ್ರನೆಂಬಾತ ಗಂಗೆವಾಳುಕ ಸಮ ರುದ್ರರಲ್ಲಿ ಒಬ್ಬ. ಅನಮಾನ ಬೇಡ. ಶರಣಧರ್ಮದಲ್ಲಿ ನಿರಾಕಾರನಾದ ಒಬ್ಬನೇ ದೇವರಿದ್ದಾನೆ. ಆತನ ಅರಿವಿನ ಕುರುಹು ಇಷ್ಟಲಿಂಗ. ಈ ಏಕದೇವನನ್ನು ಬಿಟ್ಟು ಇನ್ನಾವ ರುದ್ರರೂ ಇಲ್ಲ, ವಿಷ್ಣು ಮತ್ತು ಬ್ರಹ್ಮರೂ ಇಲ್ಲ. ಬಸವಣ್ಣನವರು ಸತ್ಯಸಂಧರು ಎಂಬುದರ ಕಡೆಗೆ ಗಮನವಿರಲಿ. ವಿಶ್ವವನ್ನು ತೆತ್ತೀಸಕೋಟಿ ದೇವರುಗಳು ಕೂಡಿ ಸೃಷ್ಟಿಸಿಲ್ಲ. ಒಬ್ಬನೇ ದೇವರು. ದೇವನೊಬ್ಬ ನಾಮ ಹಲವು.

          • ಸಹನಾ

            Another example of putting semetic religiuos ideologies in the name sharan’s.
            Darga sir, could you please quote a sigle vacana which speak about creator of the universe and also speaking about ‘devanobba naama halavu’?

          • Ramjan Darga

            ಸಹನಾ ಅವರೆ ಉಪನಿಷತ್ತಿನ ನಿರ್ಗುಣ, ನಿರಾಕಾರ ಬ್ರಹ್ಮ, ಸೆಮಿಟಿಕ್ ಧರ್ಮಗಳು ಹುಟ್ಟಿದ ಮಧ್ಯಪೂರ್ವ ಪ್ರದೇಶದಿಂದ ಬಂದವನೆ? ಋಗ್ವೇದ ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬ ಏಕದೇವೋಪಾಸನೆಯ ಮಂತ್ರ ಹೊರಗಿನಿಂದ ಬಂದುದೆ? ಭಾರತದಲ್ಲೇ ಜನ್ಮತಾಳಿದ ಲಿಂಗಾಯತ ಮತ್ತು ಸಿಖ್ ಧರ್ಮಗಳು ಏಕದೇವೋಪಾಸನೆಯ ಧರ್ಮಗಳು ಅಲ್ಲವೆ?

          • Ramjan Darga

            ಸ್ವಾಮಿ ನೀನು, ಶಾಶ್ವತ ನೀನು
            ಎತ್ತಿದೆ ಬಿರಿದ ಜಗವೆಲ್ಲರಿಯಲು.
            ಮಹಾದೇವ ಮಹಾದೇವ
            ಇಲ್ಲಿಂದ ಮೇಲೆ ಶಬ್ದವಿಲ್ಲ.
            ಪಶುಪತಿ ಜಗಕ್ಕೇಕೋದೇವ
            ಸ್ವರ್ಗ, ಮರ್ತ್ಯ, ಪಾತಾಳದೊಳಗೆ
            ಒಬ್ಬನೇ ದೇವ ಕೂಡಲಸಂಗಮದೇವ. (ಬಸವಣ್ಣನವರು)

          • Amaresh

            ರಂಜಾನ್ ಅವರೇ, ವಚನಕಾರರು ವೈಜ್ಞಾನಿಕ ದೃಷ್ಟಿಕೋನವಿದ್ದವರು ಅಂತ ಹೇಳ್ತೀರಲ್ಲ, ಆದರೆ ವೈಜ್ಞಾನಿಕತೆಗೆ ಪೂರ್ಣವಾಗಿ ವಿರುದ್ಧವಾಗಿದೆಯಲ್ಲ ಈ ವಚನ! ಇಲ್ಲಿ ಸ್ವರ್ಗ ಹಾಗೂ ನರಕ ಎಂಬ ಅವೈಜ್ಞಾನಿಕ ವಿಚಾರಗಳನ್ನು ಬಸವಣ್ಣನವರು ಬಳಸಿದ್ದಾರಲ್ಲ! ಅಷ್ಟೇ ಅಲ್ಲ ಭೌತಿಕ ಪ್ರಪಂಚ ಶಾಶ್ವತವೂ ಅಲ್ಲ ಅನಾದಿಯೂ ಅಲ್ಲ ಅಂತ ವಿಜ್ಞಾನ ಬಲ್ಲ ನಿಮಗೆ ಗೊತ್ತಿದೆಯಲ್ಲ! ಮಾರ್ಕ್ಸ್ ವಾದ ಭೌತಿಕ ಪ್ರಪಂಚವನ್ನಲ್ಲದೆ ಮತ್ತಿನ್ನೇನನ್ನೂ ಒಪ್ಪುವುದಿಲ್ಲವಲ್ಲ!

          • ಸಹನಾ

            please give me a single vacana which speaks about thease that’s it sir

          • Ramjan Darga

            ದೇವನೊಬ್ಬ ನಾಮ ಹಲವು;
            ಪರಮ ಪತಿವ್ರತೆಗೆ ಗಂಡನೊಬ್ಬ;
            ಮತ್ತೊಂದಕ್ಕೆರಗಿದಡೆ ಕಿವಿ ಮೂಗ ಕೊಯ್ಯುವನು.
            ಹಲವು ದೈವದ ಎಂಜಲ ತಿಂಬವರನೇನೆಂಬೆ
            ಕೂಡಲಸಂಗಮದೇವ. (ಬಸವಣ್ಣನವರು)

          • ಸಹನಾ

            Need reference and i asked vacana which speaks abou god as a creater of the universe

          • Ramjan Darga

            ‘ಸರ್ವಧರ್ಮಾನ್ ಪರಿತ್ಯಜ್ಯ, ಮಾಮೇಕಂ ಶರಣಂ ವ್ರಜ’ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ್ದೇನು? ಆ ಗೋಪಾಲನೂ ಸೆಮಿಟಿಕ್‍ಗೆ ಸಂಬಂಧಿಸಿದವನೆ?

          • ಸಹನಾ

            “ವಿಶ್ವವನ್ನು ತೆತ್ತೀಸಕೋಟಿ ದೇವರುಗಳು ಕೂಡಿ ಸೃಷ್ಟಿಸಿಲ್ಲ. ಒಬ್ಬನೇ ದೇವರು.” ಎನ್ನುವ ತಮ್ಮ ವಾದ ಶರಣರ ಯಾವ ವಚನದಲ್ಲಿ ಬಂದಿದೆ ಹೇಳಿ? ಅಂದರೆ ಸೃಷ್ಟಿಕರ್ತನಾಗಿ ಸಾವಿರಾರು/ಕೋಟ್ಯಾಂತರ ದೇವರು ಇರಲಿಕ್ಕೆ ಸಾಧ್ಯವಿಲ್ಲವಾದ್ದರಿಂದ ಸೃಷ್ಟಿಕರ್ತನೊಬ್ಬನೇ ಇರಲಿಕ್ಕೆ ಸಾಧ್ಯವೆನ್ನುವ ತರ್ಕದ ಮೇಲೆ ದೇವರೊಬ್ಬನೇ ಎನ್ನುವ ವಾದವನ್ನು ವಚನಕಾರರು ಹೇಳಿದ್ದಾರೆಯೇ?
            ಇದು ಸೆಮೆಟಿಕ್ ರಿಲಿಜನ್ನುಗಳ ವಾದವಷ್ಟೇ(ಸೃಷ್ಟಿಕರ್ತನೇ ದೇವರು. ಸೃಷ್ಟಿಗೊಂಡ ವಸ್ತುಗಳು ಸೃಷ್ಟಿಯೊಳಗಿರುವ ಯಾವುದನ್ನೇ ಆದರೂ ದೇವರ ಪ್ರತಿಮೆ (idol) ಆರಾಧಿಸುವುದು, ಭ್ರಮಿಸುವುದು ಮೂಢನಂಬಿಕೆ ಎಂದು ಈ ಸೆಮೆಟಿಕ್ ರಿಲಿಜನ್ನುಗಳು ವಾದಿಸುತ್ತವೆ. ಹೀಗೆಯೇ ರೋಮನ್ ಸಂಪ್ರದಾಯಗಳಲ್ಲಿ ಮತ್ತು ಭಾರತೀಯ ಸಂಪ್ರದಾಯಗಳಲ್ಲಿ ಏಕಕಾಲಕ್ಕ ಜನರು ಹಲವಾರು ದೇವರುಗಳನ್ನು ಪೂಜಿಸುವುದನ್ನು ಹಾಗು ಮರಮುಟ್ಟು, ಕಲ್ಲು ಮಣ್ಣು, ಆಕಾಶ ಸೂರ್ಯ ಚಂದ್ರ ಸಗಣಿ, ಪ್ರಾಣಿಗಳನ್ನು ದೇವರೆಂದು ಪೂಜಿಸುವುದನ್ನು ಅಜ್ಞಾನ ಮೂಢನಂಬಿಕೆ ಎಂದು ಕ್ರಿಶ್ಚಿಯನ್ನರು ಹೀಗೆಳೆಯುತ್ತಾರೆ . ದೇವರೆಂದು ಆರಾಧಿಸುವುದೆಂದರೆ ಸೃಷ್ಟಿಕರ್ತನನ್ನು ಆರಾಧಿಸಿ ವಿದೇಯತೆಯನ್ನು ತೋರಿಸಿದಂತೆ. ಕಲ್ಲು ಮಣ್ಣು ಮರ ಪ್ರಾಣಿಗಳನ್ನು ಆರಾಧಿಸುವುದೆಂದರೆ ಅವು ಈ ಜಗತ್ತನ್ನು ಸೃಷ್ಟಿಸಿದವೆಂದು ಭಾವಿಸಿದಂತೆ ಅಲ್ಲವೇ, ಹಾಗಾಗಿ ಇದು ದೇವರ ಕುರಿತು ಈ ಸಂಪ್ರದಾಯಗಳಲ್ಲಿರುವ ಜನರ ಅಜ್ಞಾನವೆಂದು ಛೇಡಿಸಿದ್ದರು.(ಈ ಕುರಿತು ಸುಧೀರ್ಘ ಪ್ರತಿಕ್ರಿಯೆಯನ್ನು ಇಲ್ಲಿಯೇ ಹಾಕಿದ್ದೆ. ಆದಷ್ಟು ಬೇಗ ಅವಧಿ ಅದನ್ನು ಪ್ರಕಟಿಸುತ್ತದೆ ಎಂದು ಭಾವಿಸುತ್ತೇನೆ.)
            ಅದೇ ಶರಣರ ವಚನಗಳ ಅನುಭಾವವು ಸೃಷ್ಟಿಕರ್ತ personal God ಬಗ್ಗೆ ಮಾತನಾಡುವುದಿಲ್ಲ. ಅಮೂರ್ತವಾದ ನಿರ್ಗುಣ ಚೈತನ್ಯ ಸ್ವರೂಪಿಯನ್ನು ಕಲ್ಪಿಸುತ್ತಾರೆ. ಅದಕ್ಕೂ ಸೃಷ್ಟಿಕರ್ತ ಏಕದೇವನಿಗೂ ಸಂಬಂದವೇ ಇಲ್ಲ.
            ಇದ್ದರೆ ದಯವಿಟ್ಟು ದರ್ಗಾರವರು ‘ವಿಶ್ವವನ್ನು ತೆತ್ತೀಸಕೋಟಿ ದೇವರುಗಳು ಕೂಡಿ ಸೃಷ್ಟಿಸಿಲ್ಲ. ಹಾಗಾಗಿ ಓರ್ವನೇ ದೇವರು’ ಎನ್ನುವ ಅರ್ಥವಿರುವ ಒಂದಾದರೂ ವಚನವನ್ನು ಉಲ್ಲೇಖಿಸಲಿ. ಇಲ್ಲವೇ ಅವರು ಶರಣರ ವಚನಗಳಲ್ಲಿ ಸೆಮೆಟಿಕ್ ಐಡಿಯಾಲಜಿಯನ್ನು ತುರುಕುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯಲಿ. ಆ ನಂತರ ನಿರ್ಧರಿಸಿ ವಚನಗಳನ್ನು ತಿರುಚಿತ್ತಿರುವವರು ಯಾರು ಎಂದು!!!

          • Ramjan Darga

            ದೇವನೊಬ್ಬನೆ ಜಗವ ಕಾವಾತ ಕೊಲುವಾತ
            ದೇವರು ಮುನಿದಡೆ ಮರಳಿ ಕಾಯುವರುಂಟೆ?
            ಈ ಸಾವಿನೊಳಗಾಗಿ ಹೋಹ ಸಮಸ್ತ ದೈವಂಗಳು
            ಮಹಾದೇವನ ಸರಿಯೆಂದು ಆರಾಧಿಸಿ
            ಅಚಲಿತ ಪದವಿಯ ಬೇಡುವ ಈರೇಳು ಜಾತಿಗಳಿಗೆ
            ಆವಾವ ಕಾಲದಲ್ಲಿ ನರಕ ತಪ್ಪದೆಂದ ಕಲಿದೇವಯ್ಯ. (ಮಡಿವಾಳ ಮಾಚಿದೇವರು)
            ಈರೇಳು ಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ
            ಲಿಂಗವಂತಂಗೆ ಸೂತಕವೆಂಬ ನುಡಿಯ ಕೇಳಲಾಗದು
            ಸತ್ತ ಕುರಿ, ಕೋಳಿ, ಕೋಣ ತಿಂಬ
            ಭೂತಪ್ರೇತ ದೈವದೆಂಜಲು ಭಂಜಿಸುವವಗೆ
            ಏಳೇಳು ಜನ್ಮ ನರಕ ತಪ್ಪದೆಂದ ಕಲಿದೇವರದೇವಯ್ಯ. (ಮಡಿವಾಳ ಮಾಚಿದೇವರು)
            ಸ್ವಾಮಿ ನೀನು ಶಾಶ್ವತ ನೀನು
            ಎತ್ತಿದೆ ಬಿರಿದ ಜಗವೆಲ್ಲವರಿಯಲು
            ಮಹಾದೇವ, ಮಹಾದೇವ, ಮಹಾದೇವ
            ಇಲ್ಲಿಂದ ಮುಂದೆ ಶಬ್ದವಿಲ್ಲ
            ಪಶುಪತಿ ಜಗಕ್ಕೆ ಏಕೋ ದೇವ
            ಸ್ವರ್ಗ, ಮರ್ತ್ಯ, ಪಾತಾಳದೊಳಗೆ
            ಒಬ್ಬನೇ ದೇವ, ಕೂಡಲಸಂಗಮದೇವ. (ಬಸವಣ್ಣನವರು)

          • ಸಹನಾ

            ಪರಮ ಚೈತನ್ಯ ಒಬ್ಬನೇ/ಒಂದೇ ಎನ್ನುವುದಿದೆ. ಆದರೆ “ವಿಶ್ವವನ್ನು ತೆತ್ತೀಸಕೋಟಿ ದೇವರುಗಳು ಕೂಡಿ ಸೃಷ್ಟಿಸಿಲ್ಲ” ಎನ್ನುವುದೆಲ್ಲಿದೆ? ಹಾಗೆಯೇ ಆಕರಗಳನ್ನೂ ನೀಡುವಂತೆ ಕೋರಿಕೆ.

          • ಸಹನಾ

            ಕರ್ತ ಎನ್ನುವ ಶಭ್ದ ಎಂದರೇನೇ ಸೃಷ್ಟಿಕರ್ತ ನೆಂದಾಗಿಬಿಡುವುದೇ? “ಈರೇಳು ಭುವನಕ್ಕೆ ಕರ್ತನೊಬ್ಬನೆಂಬ ಆದಿಯನರಿಯದೆ…” ಎನ್ನುವಲ್ಲಿ ಎಲ್ಲಾ ಲೊಕವನು ಮೂಲತಃ ನಡೆಸುವ ಚೈತನ್ಯ ಒಂದೇ/ಓರ್ವನೇ ಎನ್ನುವ ಮೂಲವನ್ನ ತಿಳಿಯದೇ…… ಎಂದಾಗುತ್ತದೆ. ಇದನ್ನು ಸೆಮೆಟಿಕ್ ಚೌಕಟ್ಟಿನಲ್ಲಿಟ್ಟುಕೊಂಡು ನಿಮಗೆ ಬೇಕಾದ ಅರ್ಥ ಹೊರಡಿಸುತ್ತಿದ್ದೀರಿ.. ಮತ್ತು ಇದು ಈ ಜಗದೊಳಗಿರುವ ಚೈತನ್ಯ. ಜಗವನ್ನು ಸೃಷ್ಟಿಸಿ ಜಗದ ಹೊರಗಿರುವ personal God ಅಲ್ಲ. ಆದರೆ ನೀವು ಹೀಗೆಯೇ ಅರ್ಥೈಸುತ್ತೀರಿ. ಇಲ್ಲದಿದ್ದರೆ “ವಿಶ್ವವನ್ನು ತೆತ್ತೀಸಕೋಟಿ ದೇವರುಗಳು ಕೂಡಿ ಸೃಷ್ಟಿಸಿಲ್ಲ” ಎನ್ನುತ್ತಿರಲಿಲ್ಲ.

          • santosh anand

            You dont know which vachana says about the creation of this world and you have come on this scene to argue about vachana literature. First u go and read vachanas thoroughly.
            1. Adi anaadigalilladandu ……… Allama s vachana
            2. Leeleyadadi umapathi leele nindade swayambhu ….. Allama s vachana
            3. Shivanu jagavaagalu balla jagavagadiralu balla………. Tontada Siddhalingeshwara vachnana

          • jayateerth joshi

            Yes sir. the statement u have quoted above from the Bhagavadgitha shows that that tradition also belongs semetic tradition.

          • skpbnt

            u read vachanas first instead of going on asking questions to everybody. If u dont find anything worth in vachanas leave it. who is bothered whether u got it or not? u study ur religion and phiosophy. If u blame others religion remember others can also deride ur religion.

          • ಸಹನಾ

            Sorry Mr. skbnt… I do not have any religion. I belong to a tradition like sharanas. And people like Darga are completely distorting Sharana sampradaya and depicting it as a version of Semitic religion which is a total disrespect to SHARANAs themeselves. I showing here that how they are doing it so with clear arguments. If you find any problem in my arguments pls show them with logical arguments instead if giving UPADESHA to me. If you accept what Darga is saying about Vachanas is true and I am sorry you too neither understand Mr.Dargas fallacies nor my arguments. So my humble request to you is better give logical arguments or watch the show..

          • santosh anand

            First u understand the fact that philosophy cant be understood by logic. That basic common sense u should hv. Whatever Darga sir has said and written it absolutely the mirror to the thoughts of vachanakaras. if u dont understand this then u first clear ur fallacies and ignorance. Then start arguing. Simply dont exhibit ur ignorance and get laughed at by the people. Your mind is infected with semetic mania and vedic mania.

  8. Annapoorna

    ರಂಜಾನ್ ದರ್ಗಾ ಮೊದಲಾದವರು ಓದಲೇ ಬೇಕಾದ ಬಸವಣ್ಣನವರ ವಚನ ಇದು:
    ಅಪ್ಪನು ಡೋಹರ ಕಕ್ಕಯ್ಯನಾಗಿ,
    ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ ?
    ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
    ಭಕ್ತಿಯ ಸದ್ಗುಣವ ನಾನರಿಯೆನೆ ?
    ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ,
    ಎನಗಿದು ವಿಧಿಯೇ ಕೂಡಲಸಂಗಮದೇವ ?
    ಹಾರುವ ಜಾತಿಯಲ್ಲಿ ಜನಿಸಿದ ಬಸವಣ್ಣ “ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ” ಅಂತ ಹೇಳಿದ್ದಾನೆ. ತನ್ನನ್ನು ಹಾರುವ ಜಾತಿಯಲ್ಲಿ ಹುಟ್ಟಿಸುವ ಅಗತ್ಯವೇನಿತ್ತು ತಾನು ಡೋಹರ ಕಕ್ಕಯ್ಯನ ಮಗನಾಗಿ ಹುಟ್ಟಿದ್ದರೆ ಭಕ್ತಿಯ ಮಹತ್ವವನ್ನು ತಿಳಿಯದೇ ಹೋಗುತ್ತಿದ್ದೆನೆ ಎಂದು ಕೇಳಿದ್ದಾನೆ.
    ೧) “ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ” ಎಂದೇಕೆ ಕೂಡಲಸಂಗಮದೇವರನ್ನು ಬಸವ ಕೇಳಿದ್ದಾನೆ? ಅಷ್ಟೇ ಅಲ್ಲ “ಎನಗಿದು ವಿಧಿಯೇ” ಎಂದು ಏಕೆ ಕೇಳಿದ್ದಾನೆ? ಇದರರ್ಥ ಅ) ಬಸವ ವಿಧಿ ಎಂಬ ಪರಿಕಲ್ಪನೆಯಲ್ಲಿ ನಂಬಿಕೆ ಇಟ್ಟಿದ್ದ ಎಂದ್ದಾಯಿತಲ್ಲ! ಆ) ತಾನು ಹಾರುವ ಜಾತಿಯಲ್ಲಿ ಹುಟ್ಟಿದ್ದಕ್ಕೆ ವಿಧಿ ಕಾರಣ ಎಂದು ತಿಳಿದಿದ್ದ ಎಂದಾಯಿತಲ್ಲ! ಇ) ಹಾರುವ ಜಾತಿಯಲ್ಲಿ ಹುಟ್ಟಿದ್ದು ಭಕ್ತಿ ಮಾರ್ಗದ ಮುಖೇನ ತನ್ನ ಆಧ್ಯಾತ್ಮಿಕ ಸಾಧನೆಗೆ ಅಡಚಣೆ ಆಯಿತೆಂದು ಬಸವ ಭಾವಿಸಿದ್ದ ಎಂದಾಯಿತಲ್ಲ!
    ೨) ಜಾತಿಯೇ ಬೇಡ ಎಂಬ ಧೋರಣೆ ಬಸವನಿಗೆ ಇದ್ದಿದ್ದರೆ ಇಲ್ಲಿ ಡೋಹರ ಕಕ್ಕಯ್ಯನನ್ನು ಜಾತಿ ಸೂಚಕ ಪದದ ಮೂಲಕ ಏಕೆ ಗುರುತಿಸುತ್ತಿದ್ದ? ಆಧ್ಯಾತ್ಮಿಕ ಸಾಧನೆಗೆ ಜಾತಿ ಕಂಟಕ ಎಂದು ಬಸವ ತಿಳಿದಿದ್ದರೆ, ಏಕೆ ಹಾರುವ ಜಾತಿಯ ಬದಲು ಕಕ್ಕಯ್ಯನ ಜಾತಿಯಲ್ಲಿ ಹುಟ್ಟಿಸು ಅನ್ನುತ್ತಿದ್ದ? ಗಮನಿಸಬೇಕಾದ ವಿಷಯ ಇದು: ಜಾತಿ ಇಲ್ಲದ ಸಮಾಜ ಸೃಷ್ಟಿಸು ಅಂತ ಕೂಡಲಸಂಗಮದೇವರನ್ನು ಕೇಳಿಕೊಂಡಿಲ್ಲ ಅವನು. ಹಾರುವ ಜಾತಿಯಲ್ಲಿ ಹುಟ್ಟಿದ್ದು ತನ್ನ ಆಧ್ಯಾತ್ಮಿಕ ಸಾಧನೆಗೆ ಅಡಚಣೆ ಉಂಟುಮಾಡಿದೆ, ತಾನು ಶ್ವಪಚನಾಗಿ ಹುಟ್ಟಿದಿದ್ದರೆ ತನಗೆ ಅನುಕೂಲವಿರುತ್ತಿತ್ತು ಎಂಬ ಭಾವವನ್ನು ವ್ಯಕ್ತಪಡಿಸಿದ್ದಾನೆ.

    • Annapoorna

      ನೀನೊಲಿದ ಕುಲಕ್ಕೆ
      ನೀನೊಲಿದ ಹೊಲೆಗೆ ಮೇರೆಯುಂಟೇ, ದೇವ ?
      ಶ್ವಪಚೋಪಿ ಮುನಿಶ್ರೇಷ್ಠಃ
      ಯಸ್ತು ಲಿಂಗಾರ್ಚನೇ ರತಃ |
      ಲಿಂಗಾರ್ಚನವಿಹೀನೋಪಿ
      ಬ್ರಾಹ್ಮಣಃ ಶ್ವಪಚಾಧಮಃ ||
      🙂

      • Ramjan Darga

        ‘ಬ್ರಾಹ್ಮಣ ಶ್ವಪಚಾಧಮಃ’ ತಾವು ಮೇಲೆ ತಿಳಿಸಿದ ಈ ವಚನವನ್ನು ಅರ್ಥೈಸಿಕೊಳ್ಳಿ. ಲಿಂಗಾರ್ಚನೆ ಮಾಡುವ ಶ್ವಪಚ ಮುನಿಶ್ರೇಷ್ಠನಾಗುತ್ತಾನೆ ಏಕೆಂದರೆ ಆತ ಜಾತಿ ವ್ಯವಸ್ಥೆಯಿಂದ ಹೊರಬಂದು ವಿಶ್ವಮಾನವನಾಗಿರುತ್ತಾನೆ. ಆದರೆ ಲಿಂಗಾರ್ಚನೆ ಮಾಡದ, ಅಂದರೆ ಸಕಲಜೀವಾತ್ಮರಿಗೆ ಲೇಸನೆ ಬಯಸುವ ಮನಸ್ಸನ್ನು ಹೊಂದದ (ವಿಶ್ವಮಾನವನಾಗದ) ಬ್ರಾಹ್ಮಣನೇ ಶ್ವಪಚನು ಎಂದು ಬಸವಣ್ಣನವರು ತಿಳಿಸಿದ್ದಾರೆ. ವೈದಿಕರು ಯಾವ ಶಬ್ದಗಳನ್ನು ಕಾಯಕಜೀವಿಗಳಿಗೆ ಹೀನವಾಗಿ ಬಳಸಿದ್ದಾರೆಯೋ ಅವೇ ಶಬ್ದಗಳನ್ನು ಬಸವಣ್ಣನವರು ವೈದಿಕರ ಮೇಲೆ ಬಳಸಿದ್ದಾರೆ.’ಲಿಂಗಾರ್ಚನಂ ನ ಕರ್ತವ್ಯಂ, ಕರ್ತವ್ಯಂ ಜಂಗಮಾರ್ಚನಂ’ ಎಂದು ಬಸವಣ್ಣನವರು ಇನ್ನೊಂದು ವಚನದಲ್ಲಿ ಹೇಳಿದ್ದಾರೆ. ಸಮಾಜದ ಸೇವೆಯೇ ನಿಜವಾದ ಕರ್ತವ್ಯ ಎಂದು ಸಾರಿದ್ದಾರೆ. ಆದ್ದರಿಂದ ಲಿಂಗಪೂಜೆಯ ಅಂತಿಮ ಗುರಿ ಸಮಾಜ ಸೇವೆಯೇ ಆಗಿದೆ. ಸರ್ವಸಮತ್ವದ ಸಮಾಜ ನಿರ್ಮಾಣವೇ ಶರಣರ ಅಂತಿಮ ಗುರಿಯಾಗಿತ್ತು.

        • Amaresh

          “ಲಿಂಗಾರ್ಚನೆ ಮಾಡದ, ಅಂದರೆ ಸಕಲಜೀವಾತ್ಮರಿಗೆ ಲೇಸನೆ ಬಯಸುವ ಮನಸ್ಸನ್ನು ಹೊಂದದ”
          ಇದು ಯಾವ ನಮೂನೆಯ ಸಮೀಕರಣ ಸ್ವಾಮಿ? ನಿಮ್ಮ ಮಾರ್ಕ್ಸ್ ಅಥವಾ ಎನ್ಜೆಲ್ಸ್ ಲಿಂಗಾರ್ಚನೆ ಮಾಡಿದ್ದರೇನು?

          • Ramjan Darga

            ಅಮರೇಶ್ ಅವರೆ, ನಿಮಗೆ ಲಿಂಗಾರ್ಚನೆ ಮಾಡಲು ನಾನು ತಿಳಿಸಿಲ್ಲ .ನಾನು ಹೇಳುತ್ತಿರುವುದು ಲಿಂಗಾಯತ ಧರ್ಮದ ವಿಚಾರ. ‘ಲಿಂಗಮಧ್ಯೇ ಜಗತ್ ಸರ್ವಂ’ ಇಷ್ಟಲಿಂಗವು ಇಡೀ ವಿಶ್ವದ ಪ್ರತೀಕವಾಗಿದೆ.
            ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ;
            ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ
            ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ.
            ಅಗಮ್ಯ, ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ
            ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
            ಹೀಗೆ ಕರಸ್ಥಲಕ್ಕೆ ಬಂದ ಇಷ್ಟಲಿಂಗವು ವಿಶ್ವದ ಪ್ರತೀಕವಾಗಿದೆ. ಇಷ್ಟಲಿಂಗ ಪೂಜೆ ಎಂದರೆ ವಿಶ್ವದಲ್ಲಿರುವ ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಪೂಜೆ.

          • Amaresh

            ಸದರಿ ವಚನದಲ್ಲಿ ಸಕಲ ಜೀವಾತ್ಮರಿಗೆ ಲೇಸನೆ ಬಯಸುವುದರ ಪ್ರಸ್ತಾಪವೇ ವಚನಕಾರ ಮಾಡಿಲ್ಲ. ಇಷ್ಟಲಿಂಗವು ವಿಶ್ವದ ಪ್ರತೀಕ ಎಂಬುದೂ ನಿಮ್ಮ ಅರ್ಥೈಸುವಿಕೆ. ಆದರೆ ವಚನದಲ್ಲಿ ಆ ಅರ್ಥವಿಲ್ಲ. ಇಲ್ಲಿ ಬಸವಣ್ಣನವರ ಪರಿಕಲ್ಪನೆಯಲ್ಲಿ ಕೂಡಲಸಂಗಮ ದೇವರ ಚಿತ್ರೀಕರಣವಿದೆ (ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ;ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ; ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮುಕುಟ; ಅಗಮ್ಯ, ಅಗೋಚರ ಅಪ್ರತಿಮ). ವಚನಕಾರರು ಅಷ್ಟೇ ಅಲ್ಲ ಎಲ್ಲಾ ಅಧ್ಯಾತ್ಮಿಕ ಧಾರೆಗಳೂ (ಸನಾತನ ಧರ್ಮ) ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತಿದ್ದರು. ಆದರೆ ಈ ವಚನದಲ್ಲಿ ಅದರ ಪ್ರಸ್ತಾಪ ಇಲ್ಲ.

          • skpbnt

            u r blind thats why u cant see

          • Ramjan Darga

            ಸಕಲಜೀವಾತ್ಮರಿಗೆ ಲೇಸನೆ ಬಯಸುವ ನಮ್ಮ ಕೂಡಲಸಂಗನ ಶರಣರೆ ಕುಲಜರು ಎಂದು ಬಸವಣ್ಣನವರು ಹೇಳಿದ್ದಾರೆ. ಜಾತಿ ಕುಲಗೋತ್ರಗಳಲ್ಲಿ ನಂಬಿಕ್ಕೆ ಇಟ್ಟು ಅದನ್ನು ಆಚರಣೆಯಲ್ಲಿ ತಂದವರು ಅದು ಹೇಗೆ ಸಕಲಜೀವಾತ್ಮರಿಗೆ ಲೇಸನ್ನು ಬಯಸುವರು?

          • ಸಹನಾ

            ನಾನೊಂದು ಜಾತಿಗೆ/ಸಂಪ್ರದಾಯಕ್ಕೆ ಸೇರಿದ್ದರೆ ಮತ್ತೊಂದು ಜಾತಿ/ಸಂಪ್ರದಾಯಕ್ಕೆ ಕೇಡನ್ನೇ ನೆನೆಯಬೇಕೆ ಮತ್ತು ನೆನೆಯುತ್ತಿರುತ್ತಾರೆ ಎನ್ನುವ ವೈಜ್ಞಾನಿಕ ಸಿದ್ದಾಂತವೆಲ್ಲಿಯಾದರೂ ಇದೆಯೇ? ತಾನು ಒಂದು ಸೆಮೆಟಿಕ್ ರಿಲಿಜನ್ನಿಗೆ ಸೇರಿದ್ದರೆ ತನ್ನ ರಿಲಜನ್ನೇ ‘ಸತ್ಯ’ ಇನ್ನೊಂದು ರಿಲಜನ್ನು ಸುಳ್ಳು ಹಾಗಾಗಿ ‘ಸತ್ಯ’ವನ್ನು ಉಳಿಸಿಕೊಂಡು ‘ಸುಳ್ಳ’ನ್ನು ನಾಶಮಾಡಬೇಕು ಎನ್ನುವುದು ಸೆಮೆಟಿಕ್ ಐಡಿಯಾಲಜಿ. ಶರಣರ ವಚನಗಳಿಗೆ ಈ ಐಡಿಯಾಲಜಿಯನ್ನು ಅನ್ವಯಿಸಿ ಜಾತಿಕುಲಗೋತ್ರಗಳಿಗೆ ಒಂದು ಜಾತಿಕುಲಗೋತ್ರಗಳಲ್ಲಿ ನಂಬಿಕೆ ಇಟ್ಟವರು ಇತರರಿಗೆ ಕೇಡನ್ನೇ ಬಯಸುವರು ಲೇಸನ್ನು ಬಯಸರು ಎನ್ನುವಂತೆ ಏಕೆ ಹೇಳುತ್ತೀರಿ? ಅಲ್ಲಿ ‘ಸಕಲಜೀವಾತ್ಮರಿಗೂ ಲೇಸನೇ ಬಯಸುವವರೇ ಕುಲಜರು’ ಎಂದರೆ ‘ಎಲ್ಲರಿಗೂ ಒಳ್ಳೆಯದನ್ನು ಬಯಸುವವರದ್ದು ಒಳ್ಳೆಯಕುಲದವರು’ ಎನ್ನುತ್ತಿದ್ದಾರೆ ಅಷ್ಟೇ. ವಿಭಿನ್ನ ಪರಂಪರೆ/ಸಂಪ್ರದಾಯ/ಕುಲದವರು ತಮ್ಮದರಲ್ಲಿ ನಂಬಿಕೆ ಇಟ್ಟವರು ಪರಸ್ಪರ ಕೇಡನ್ನೇ ಬಯಸುತ್ತಾರೆ ಎಂದು (ಸೆಮಿಟಿಕ್ ಐಡಿಯಾಲಜಿಯ ಚೌಕಟ್ಟನ್ನು ಬಿಟ್ಟು) ಯಾವ ವೈಜ್ಞನಿಕ ಸಿದ್ದಾಂತ ಲಭ್ಯವಿದೆ ಮಾನ್ಯ ದರ್ಗಾ ಸರ್.

          • Amaresh

            Good point Sahana. Vachanakaras never said anything close to what Ranjan Darga is claiming. He is peddling his ideology in the name of Vachanakaras. Every time I point out flaws in his thinking he starts beating around the bush.

          • jayateerth joshi

            Whatever Darga sir has said is exactly what vachanakaras said. Darga sir u hv really enlightened the ignorants

          • santosh anand

            yes Marx and Engels hv done Lingarchane in the sense of Liberating the working class from the clutches of exploiters. Basava called these working class people as Kayaka Jeevi.

    • santosh anand

      Regarding ur second point Basavanna has used the word Dohara to suggest his Kayaka not as u assumed caste. If he had believed in caste he would not have given a high position. Analysis without matured knowledge forces u to commit such mistakes

      • Annapoorna

        ಕ್ಷಮಿಸಿ, “Analysis without matured knowledge forces u to commit such mistakes” ಇದು ತುಂಬಾ ದೊಡ್ಡ ಮಾತಾಯಿತು. ಅದಕ್ಕೆ ತಕ್ಕಂತೆ ತಮ್ಮ ವಾದವಿಲ್ಲವಲ್ಲ! ನನ್ನನ್ನು condemn ಮಾಡುವ ಹಠ ಬಿಟ್ಟು ನನ್ನ ವಾದ ಏನು ಅಂದು ಸ್ವಲ್ಪ ಅರ್ಥ ಮಾಡಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಿ, ಆಮೇಲೆ ಮಾತು ಮುಂದುವರೆಸೋಣ.

        • skpbnt

          u first try to understand vachanas and philosophy instead of making hollow and bombastic arguments. Ur argument is stubborn and arrogant. But remember nothing can degrade great values.

    • Ramjan Darga

      ಅನ್ನಪೂರ್ಣ ಅವರೆ ನನ್ನ ಕೂಡ ವ್ಯವಹರಿಸುವಾಗ ಬಸವಣ್ಣನವರ ಬಗ್ಗೆ ಏಕವಚನ ಬಳಸಬೇಡಿ. ನನಗದು ಇಷ್ಟವಾಗುವುದಿಲ್ಲ. ವಿಧಿ ಎಂಬದಕ್ಕೆ ‘ಆದೇಶ’ ಎಂಬ ಅರ್ಥವೂ ಇದೆ ಎಂಬುದರ ಕಡೆಗೆ ಗಮನ ಹರಿಸಿ. ನಿಮಗೆ ಎಷ್ಟು ಸಲ ಹೇಳಬೇಕು? ಮಾದಾರ, ಸಮಗಾರ, ಡೋಹರ, ಮಡಿವಾಳ, ಅಂಬಿಗ ಎಂಬುವು ಶರಣ ಸಂಕುಲಗಳಲ್ಲಿ ಜಾತಿ ಸೂಚಕಗಳಲ್ಲ; ಅವು ಕೇವಲ ಕಾಯಕ ಸೂಚಕ ಪದಗಳೆಂದು? ಮನುವಾದಿ ಸಮಾಜದಲ್ಲಿ ಮಾತ್ರ ಅವು ಜಾತಿಸೂಚಕಗಳಾಗಿವೆ ಹೊರತಾಗಿ ಬಸವವಾದಿ ಸಮಾಜದಲ್ಲಿ ಅಲ್ಲ. ನೀವು ಯಾವ ನೆಲೆಯಲ್ಲಿ ನಿಂತು ಯೋಚಿಸುತ್ತಿರುವಿರೋ ಅದೇ ನೆಲೆಯ ಅರ್ಥಗಳನ್ನು ನಿಮ್ಮ ಮನದಲ್ಲಿ ತುಂಬಿಕೊಂಡಿರುವಿರಿ. ನಾನು ಯಾವ ನೆಲೆಯಲ್ಲಿ ನಿಂತು ನೋಡುತ್ತಿರುವೆನೊ ಆ ನೆಲೆಯ ಅರ್ಥಗಳನ್ನು ನಿಮಗೆ ತಿಳಿಸುತ್ತಿರುವೆ.
      ತಾವು ಸೂಚಿಸಿದ ವಚನ ಬಸವಣ್ಣನವರ ಅನುಭಾವದ ಆಳದ ಪ್ರತೀಕವಾಗಿದೆ. ಮನುವಾದಿಗಳು ಯಾರನ್ನು ಕೆಳಜಾತಿಗಳವರು ಎಂದು ಭಾವಿಸುವರೋ ಅವರೆಲ್ಲ ಭಕ್ತಿಪಥದಲ್ಲಿ ಮುನ್ನಡೆದು ಸರ್ವಸಮತ್ವದ ಮಾನವೀತೆಯನ್ನು ಸಂಪಾದಿಸಿದವರು. (ಸರ್ವ ಸಮತ್ವದಿಂದಿರೆ ಭಕ್ತಿ) ದುಡಿಯುವ ವರ್ಗದ ಈ ‘ರಕ್ತ ಸಂಬಂಧ’ದಿಂದ ನನಗೆ ಭಕ್ತಿಯ ಮಹತ್ವ ತಿಳಿಯಿತು ಎಂದು ಬಸವಣ್ಣನವರು ಮನದುಂಬಿ ಹೇಳಿದ್ದಾರೆ. ಯಾರನ್ನು ನೀವು ಜಾತಿಗಳಿಂದ ಗುರುತಿಸುವಿರೊ ಅವರನ್ನು ಬಸವಣ್ಣನವರು ರಕ್ತಸಂಬಂಧದ ಶಬ್ದಗಳಿಂದ ಗುರುತಿಸುತ್ತಿದ್ದಾರೆ. ‘ನೆಂಟರು ಬಂದರೆ ಸಮಯವಿಲ್ಲೆನ್ನಿ’ ಎಂದು ಹೇಳುವ ಅವರಿಗೆ ದುಡಿಯುವ ವರ್ಗದವರೇ ರಕ್ತಸಂಬಂಧಿಕರಾಗಿದ್ದಾರೆ. ಹೀಗೆ ಕೆಳಜಾತೀಕರಣಗೊಂಡಾಗ ನಾನು ಬದುಕಬಲ್ಲೆ ಮತ್ತು ಭಕ್ತಿಯ ಸದ್ಗುಣಗಳನ್ನು ಅರಿಯಬಲ್ಲೆ ಎಂದು ಬಸವಣ್ಣನವರು ಸೂಚಿಸಿದ್ದಾರೆ. ಕಷ್ಟಜಾತಿ ಎಂಬುದಕ್ಕೆ ‘ಕೆಟ್ಟಜಾತಿ’ ಎಂಬ ಅರ್ಥವೂ ಇದೆ. ಈ ಕೆಟ್ಟಜಾತಿಯನ್ನು ಸರಿಪಡಿಸು ಎಂಬುದು ನೀನು ನನಗೆ ನೀಡಿದ ಆದೇಶವೆ? ಎಂದು ಅವರು ದೇವರನ್ನು ಕೇಳುತ್ತಾರೆ.

  9. Annapoorna

    “ರಾಜರಸ್ಥಾನದಿಂದ ಅಷ್ಟೇ ಅಲ್ಲದೆ ದೇವಸ್ಥಾನಗಳಿಂದಲೂ ಕಾಯಕಜೀವಿಗಳ ನಿರಂತರ ಶೋಷಣೆನಡೆಯುತ್ತಿರುವುದನ್ನು ಕೊನೆಗೊಳಿಸಿದರು. ದೇಗುಲಸಂಸ್ಕೃತಿಗೆ ತಿಲಾಂಜಲಿಯನ್ನಿಟ್ಟು ಭಕ್ತಿ ಸಾಮ್ರಾಜ್ಯದ ಸ್ಥಾಪನೆಗೆ ಪಣತೊಟ್ಟರು.” ಇದು ಸತ್ಯವಾಗಿದ್ದರೆ ಬಸವಣ್ಣನವರು ಏಕೆ ಹೀಗೆ ಹೇಳುತ್ತಿದ್ದರು?!
    ಪರಚಿಂತೆ ಎಮಗೇಕಯ್ಯ ?
    ನಮ್ಮ ಚಿಂತೆ ಎಮಗೆ ಸಾಲದೆ ?
    ಕೂಡಲಸಂಗಯ್ಯ ಒಲಿದಾನೋ ಒಲಿಯನೋ
    ಎಂಬ ಚಿಂತೆ
    ಹಾಸಲುಂಟು ಹೊದಿಯಲುಂಟು!

    • santosh anand

      Annapoorna madam pl understand the context and spiritual background of the vachana. Your argument shows hollowness of ur reading and it shows ur superficial knowledge of the vachana. Basavanna is saying he is on the path of entlightenment and he doesnt want any obstacles. thats why he said PARARA CHINTHE EMAGEKAYYA?

      • Annapoorna

        ಸಂತೋಷ್ ಅವರೇ, ತಾವು ಮಾಡುವ ಹಾಗೆ ಬೇಕಾದಾಗ ವಚನಗಳನ್ನು ಸಾಮಾಜಿಕ ಕ್ರಾಂತಿಯ ಮಂತ್ರಗಳೆಂದೂ ಬೇಡದಿದ್ದಾಗ ಅಧ್ಯಾತ್ಮಿಕ ಉಕ್ತಿಗಳಂತೆ ಇಂಟರ್ಪ್ರೆಟ್ ಮಾಡಲು ನನಗೆ ಬರುವುದಿಲ್ಲವಲ್ಲ! ಏನು ಮಾಡುವುದು? ತಾವು ಅರ್ಥೈಸಿದ್ದೇ ಸರಿ ಎಂದು ಜಿದ್ದು ಹಿಡಿದು ‘ವಚನಗಳ ಬಗ್ಗೆ ಅವರಿಗೇನು ಗೊತ್ತು’ ಅಂತ ಕೇಳಿದ್ದು ನಾನಲ್ಲ!

        • skpbnt

          Its not my interpretation and whatever u say i too may brand it as ur misinterpretation. Of course what u and ur gang is doing the same thing.Vachanas contain both social and spiritual aspects. u dont have this basic understanding also.

    • Ramjan Darga

      ಇಹ ಪರಗಳ ಕಡೆಗೆ ನಿಮ್ಮ ಗಮನವಿರಲಿ. ‘ಇದು ಸುಮ್ಮನೆ ಅದು ನಮ್ಮನೆ’ ಎನ್ನುವುದು ವೈದಿಕರ ಅಧ್ಯಾತ್ಮ. ‘ಇದು ನಮ್ಮನೆ ಅದು ಸುಮ್ಮನೆ’ ಎನ್ನುವುದು ಶರಣರ ಅನುಭಾವ. ಈ ಬದುಕಿನ ಅನುಭವದ ಮೂಲಕವೇ ಮಾನವರು ಅನುಭಾವದ ಎತ್ತರಕ್ಕೆ ಏರಬೇಕಿದೆ. ಇದನ್ನು ಸಾಧಿಸುವುದರ ಕಡೆಗೆ ಶರಣರ ಗಮನವಿದೆವಿದೆ ಹೊರತಾಗಿ, ಇಲ್ಲದ ಸ್ವರ್ಗದ ಕಡೆಗೆ ಇಲ್ಲ. ಅಂಥ ಪರಚಿಂತೆಯವರು ಶರಣರಲ್ಲ. ಇದೇ ಅನುಭಾವಿಗಳ ಕ್ರಾಂತಿ ಎಂದು ನೆದರ್ಲ್ಯಾಂಡ್ಸ್ ನ ಶೌಟನ್ ಅವರು ಬರೆದಿದ್ದಾರೆ. ‘ಇನ್ನು ಜಂಗಮವೆ ಲಿಂಗವೆಂದು ನಂಬಿದೆ’ ಎಂದು ಬಸವಣ್ಣನವರು ಘೋಷಿಸಿದ್ದಾರೆ. ಇಲ್ಲಿ ಜಂಗಮದ ಆರ್ಥ ಸಮಾಜ ಎಂದಾಗುತ್ತದೆ. ಬಸವಣ್ಣನವರು ಸಮಾಜವನ್ನೇ ದೇವರೆಂದು ನಂಬಿದ್ದಾರೆ. ಈ ಇಹದಲ್ಲೇ ಶರಣರು ಸಾಧಿಸಬಯಸಿದ್ದಾರೆ. ವಚನ ಭಾ಼ಷೆಯನ್ನು ಅರ್ಥೈಸಿಕೊಳ್ಳದೆ ಇದ್ದರೆ ‘ವಚನಗಳ ಬಗ್ಗೆ ಅವರಿಗೇನು ಗೊತ್ತು’ ಎಂದು ಕೇಳಲೇಬೇಕಾಗುತ್ತದೆ. ಸಾಮಾಜಿಕ ಕ್ರಾಂತಿಯ ಬಗ್ಗೆ ನಿಮಗೇಕೆ ಅಷ್ಟೊಂದು ಅಸಹನೆ? ವಚನಗಳು ಸಾಮಾಜಿಕ ಕ್ರಾಂತಿಯ ಮಂತ್ರಗಳೇ ಆಗಿವೆ. ವಚನಗಳ ಬಗ್ಗೆ ನೀವು ಅಸಹನೆಯಿಂದ ಪ್ರಶ್ನಿಸುವ ಸಂದರ್ಭದಲ್ಲಿ ಕೂಡ ವೈದಿಕರ ಅಧ್ಯಾತ್ಮದ ಭ್ರಮೆಯನ್ನು ತಂದು ತುರುಕಬೇಡಿ. ‘ಅನುಭಾವ’ ಎಂದೇ ಬಳಸಿ. ಸಂತೋಷ ಆನಂದ ಅವರ ವಿವರಣೆಗೆ ನೀವು ತೋರಿದ ಅಸಹನೆ ಬೇಸರ ತರಿಸುವಂತಹುದು. ನಿಮ್ಮ ಪ್ರಶ್ನೆಗಳಿಂದ ಇತರರು ದಿಶಾಭೂಲ್ ಆಗಬಾರದು ಎಂಬ ಕಾಳಜಿಯಿಂದ ನಾನು ಉತ್ತರಿಸುತ್ತಿರುವೆ.

  10. nagshetty

    sharanu sharanarthi, DEar annapurna Mam, what is wrong with you? why you misinterpret again and again. why your jealousy with Lingayat religion. in this Universe Lingayat is the only religion which doesn’t have any worship-able structur,like Temple, mosque, church etc. Lingayat philosophy says formless GOD(creator) is to worshiped.
    least person of the society knows Guru Basava is destroyed the tyrannical baseless Hindu rituals and gave super specialist society without any discrimination of caste, creed, Gender.
    Basava honored all the living beings of the world.
    Basava turned the birth based ladder of caste in to its opposite direction, wherein working classes got first priority.
    Dear Annapurna don’t try to put Philosophies, Virtues of the Lingayat Religion in to your rigid, limited mindset. by this you may lose your dignity, masses may under estimate you.
    i give you sincere advise please don’t raise already proven doubts. your wicked mindset not at all work out. Ramjan sir may treat your baseles doubts are not to fit for answer

    • Annapoorna

      ನಾಗಶೆಟ್ಟಿ, “what is wrong with you? why you misinterpret again and again. why your jealousy with Lingayat religion” ವಸ್ತುನಿಷ್ಠವಾಗಿ ಚರ್ಚೆ ಮಾಡಲು ಸಾಧ್ಯವಿದ್ದರೆ ಕಾಮೆಂಟ್ ಮಾಡಿ. ಸುಮ್ಮನೆ ಅನ್ನಿಸಿದೆಲ್ಲವನ್ನೂ ಕಕ್ಕಿಕೊಳ್ಳುವುದಕ್ಕೆಂದು ಕಾಮೆಂಟ್ ಮಾಡಬೇಡಿ. ಮಾಡಿದರೂ ಅದರಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ತರುವುದನ್ನು ಬಿಡಿ.

      • jayateerth joshi

        madam u r spewing the venom u hv abt vachanas

  11. ರಮೇಶ್ ಹಿರೇಜಂಬೂರು

    ಒಂದು ಸಣ್ಣ ವಿಚಾರ. ಜಾತಿಯ ಬಗ್ಗೆ ಪ್ರೀತಿ ಇರುವವರು ಯಾರೂ ಬೇರೆ ಜಾತಿಯ ಯುವಕ ಅಥವಾ ಯುವತಿಯನ್ನು ಸಂಗಾತಿಯಾಗಿ ಸ್ವೀಕರಿಸಲಾರರು. ಜಾತಿ ಜಾತಿ ವ್ಯಾಮೋಹ ಉಳ್ಳವರು ಹಾಗೆ ಮದುವೆಯಾಗುವವರನ್ನು ಬೆಂಬಲಿ, ಸಹಾಯ ಮಾಡಿ ಪ್ರೋತ್ಸಾಹಿಸಲಾರರು 🙂 ಇಲ್ಲಿ ವಚನಕಾರರಲ್ಲಿ ಆದದ್ದು ಕೂಡ ಅದೇ. ಅವರೆಲ್ಲರಿಗೂ ಅದು ಬ್ರಾಹ್ಮಣ ಜಾತಿಯಾದರೂ ಸರಿ ದಲಿತ ಜಾತಿಯಾದರೂ ಸರಿ ಯಾವುವೂ ಬೇಡ ಎನ್ನುವುದೇ ಅವರೆಲ್ಲರ ಒಟ್ಟು ವಾದ. ಜಾತಿಯೇ ಇಲ್ಲದ ಸಮಾಜ ಕಟ್ಟಬೇಕು. ಮನುಷ್ಯ ಜಾತಿಯೊಂದೇ ನಿಜ ಜಾತಿ ಎನ್ನುವುದು ಅವರ ನಿಲವು ಎನ್ನುವುದು ಸಾಕಷ್ಟು ವಚನಗಳ ಮೂಲಕ ಕೂಡ ವ್ಯಕ್ತವಾಗುತ್ತದೆ. ಹೀಗಿರುವಾಗ ಅಂಗೈ ಹುಣ್ಣಿಗೆ ಕನ್ನಡಿ ಬೇಕಾ ಹೇಳಿ ?

    • Amaresh

      “ಅವರೆಲ್ಲರಿಗೂ ಅದು ಬ್ರಾಹ್ಮಣ ಜಾತಿಯಾದರೂ ಸರಿ ದಲಿತ ಜಾತಿಯಾದರೂ ಸರಿ ಯಾವುವೂ ಬೇಡ ಎನ್ನುವುದೇ ಅವರೆಲ್ಲರ ಒಟ್ಟು ವಾದ” this is your opinion. There is no evidence for it in vachanas. Show me one vachana that says the society should get rid of castes or one vachana that says inter-caste marriages are necessary for anubhaava.

      • Ramjan Darga

        ‘ಜಾತಿ ಸಂಕರವಾದ ಬಳಿಕ ಕುಲವನರಸುವರೆ?’ ಎಂದು ಬಸವಣ್ಣನವರು ಪ್ರಶ್ನಿಸಿದ್ದಾರೆ. ಶರಣರು ಅಂತರ್ಜಾತೀಯ ವಿವಾಹ ಮಾಡಿಸಿಲ್ಲ. ನಿರ್ಜಾತಿ ವಿವಾಹ ಮಾಡಿಸಿದ್ದಾರೆ. ಜಾತಿ, ಕುಲ, ವರ್ಣ ಮತ್ತು ಗೋತ್ರಗಳನ್ನು ನಾಶ ಮಾಡಿ ಕೇವಲ ಮಾನವೀಯ ಸಮಾಜದ ನಿರ್ಮಾಣ ಮಾಡುವುದೇ ಶರಣರ ಉದ್ದೇಶವಾಗಿತ್ತು. ‘ದಾಸೀ ಪುತ್ರನಾಗಲಿ, ವೇಶ್ಯಾ ಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತು ಶಿವನೆಂದು ವಂದಿಸಿ, ಪೂಜಿಸಿ, ಪಾದೋದಕ ಪ್ರಸಾದವ ಕೊಂಬುದೆ ಯೋಗ್ಯ’ ಎಂದು ಬಸವಣ್ಣನವರು ತಿಳಿಸಿದ್ದಾರೆ. ಹರಳಯ್ಯ ಮಧುವರಸರ ಮಕ್ಕಳು ಕೂಡ ಇಷ್ಟಲಿಂಗ ದೀಕ್ಷೆ ಪಡೆದ ಕಾರಣ ಅವರು ತಮ್ಮ ಪೂರ್ವಾಶ್ರಮದ ಜಾತಿ ಮತ್ತು ಧರ್ಮದ ಸಂಕೋಲೆಗಳನ್ನು ಕಳಚಿಕೊಂಡು ಲಿಂಗವಂತರಾದರು. ಆಗ ಬಸವಣ್ಣನವರ ಧರ್ಮದ ಪ್ರಕಾರ ಅದು ಲಿಂಗಭಕ್ತರ ವಿವಾಹವಾಯಿತು. ಆದರೆ ಮನುವಾದಿಗಳ ಪ್ರಕಾರ ಅದು ಧರ್ಮಬಾಹಿರವಾದ ವಿಲೋಮ ಪದ್ಧತಿಯಿಂದ ಕೂಡಿದ ಅಂತರ್ಜಾತೀಯ ವಿವಾಹವಾಯಿತು.ಹೀಗೆ ಯಾರು ಬೇಕಾದರೂ ಇಷ್ಟಲಿಂಗ ದೀಕ್ಷೆ ಪಡೆದು ಲಿಂಗವಂತರಾಗಿ ಶಿವಸ್ವರೂಪಿಗಳೆನಿಸಬಹುದು. ಆದರೆ ಮಧ್ವಾಚಾರ್ಯರು ‘ನಿತ್ಯ ನಾರಕಿಗಳು’ ಎಂದು ಕರೆದವರನ್ನು ಯಾವ ದೀಕ್ಷೆ ಕೊಟ್ಟು ಮಾಧ್ವ ಬ್ರಾಹ್ಮಣರನ್ನಾಗಿ ಮಾಡಲು ಸಾಧ್ಯ? ಲಿಂಗಾಯತ ಧರ್ಮ ಮತಾಂತರಗೊಂಡವರ ಧರ್ಮ ಅಲ್ಲ. ಜಾತಿ ಮತ್ತು ವರ್ಗಗಳನ್ನು ನಿರ್ನಾಮ ಮಾಡಿದವರ ವಿಶ್ವಮಾನ್ಯ ಧರ್ಮ.

        • Amaresh

          Show me one vachana that says the society should get rid of castes or one vachana that says inter-caste marriages are necessary for anubhaava.

      • Ramjan Darga

        ಎಷ್ಟು ಸಲ ಹೇಳಲಿ? ಶರಣರು ಮಾಡಿದ್ದು ಅಂರ್ಜಾತಿ ವಿಹಾಹವಲ್ಲ. ನಿರ್ಜಾತಿ ವಿವಾಹ. ಶರಣ ಸಂಕುಲದಲ್ಲಿ ಜಾತಿಗಳಿಲ್ಲ.
        ಹೊನ್ನು ಹೆಣ್ಣು ಮಣ್ಣೆಂಬ ಕರ್ಮದ ಬಲೆಯಲ್ಲಿ ಸಿಲುಕಿ
        ವೃಥಾಯ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
        …………………………..
        ಕೂಡಲಸಂಗಮದೇವನು ವಿಪ್ರಕರ್ಮವ ಬಿಡಿಸಿ
        ಅಶುದ್ಧನ ಶುದ್ಧನ ಮಾಡಿದನಾಗಿ. (ಬಸವಣ್ಣನವರು)
        ಹೊಕ್ಕಲ್ಲಿ ಹೊಕ್ಕು ನಿಮ್ಮೊಕ್ಕುದನುಂಬುವನ ಕುಲವೇನೊ!
        ದೇವಾ ನೀನೊಲಿದವನ, ಸ್ವಾಮಿ ನೀ ಹಿಡಿದವನ ಕುಲವೇನೊ!
        ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ,
        ನಿಮ್ಮಿಂದಧಿಕ ಕೂಡಲಸಂಗಮದೇವಾ. (ಬಸವಣ್ಣನವರು)
        ಕುಲವನರಸುವರೆ ಶರಣರಲ್ಲಿ,
        ಜಾತಿ ಸಂಕರವಾದ ಬಳಿಕ? (ಬಸವಣ್ಣ)
        ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ
        ಕುಲವೆ ಡೋಹರನ? ಕುಲವೆ ಮಾದಾರನ?
        ಕುಲವೆ ದೂರ್ವಾಸನ?, ಕುಲವೆ ವ್ಯಾಸನ? ಕುಲವೆ ವಾಲ್ಮೀಕನ?
        ಕುಲವೆ ಕೌಂಡಿಣ್ಯನ?
        ಕುಲವ ನೋಳ್ಪಡೆ ಹುರುಳಿಲ್ಲ
        ಅವರ ನಡೆಯ ನೋಳ್ಪಡೆ ನಡೆಯುವವರು ತ್ರಿಲೋಕದಲ್ಲಿಲ್ಲ ನೋಡಾ
        ಕಪಿಲಸಿದ್ಧಮಲ್ಲಿಕಾರ್ಜುನಾ. (ಸಿದ್ಧರಾಮ)
        ಬ್ರಾಹ್ಮಣ ಮೊದಲಾಗಿ ಶ್ವಪಚ ಕಡೆಯಾಗಿ ಎಲ್ಲರಿಗೆಯೂ ಜನನವೊಂದೆ (ಹಾವಿನಾಳ ಕಲ್ಲಯ್ಯ)
        ಉಂಬಲ್ಲಿ ಉಡುವಲ್ಲಿ, ಕ್ರೀಯಳಿಯಿತೆಂಬರು;
        ಕೊಂಬಲ್ಲಿ ಕೊಡುವಲ್ಲಿ ಕುಲವನರಸುವರು;
        ಎಂತಯ್ಯಾ ಅವರ ಭಕ್ತರೆಂಬೆ? (ಬಸವಣ್ಣನವರು)
        ದೇವ, ದೇವಾ ಬಿನ್ನಪ ಅವಧಾರು;
        ವಿಪ್ರ ಮೊದಲು ಅಂತ್ಯಜ ಕಡೆಯಾಗಿ
        ಭಕ್ತರಾದವರೆಲ್ಲರನೊಂದೇ ಎಂಬೆ.
        ಹಾರುವ ಮೊದಲು ಶ್ವಪಚ ಕಡೆಯಾಗಿ
        ಭವಿಯಾದವರನೆಲ್ಲ ಒಂದೆ ಎಂಬೆ. (ಬಸವಣ್ನನವರು)
        ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
        ಜಲವೊಂದೆ ಶೌಚಾಚಮನಕ್ಕೆ;
        ಕುಲವೊಂದೆ ತನ್ನ ತಾ ಅರಿದವಂಗೆ. (ಬಸವಣ್ಣನವೆರು)

  12. Amaresh

    “ಬ್ರಹ್ಮ, ವಿಷ್ಣು, ಮಹೇಶ್ವರ ಅಥವಾ ರುದ್ರರಿಗೂ ಮತ್ತು ಏಕದೇವೋಪಾಸಕರಾದ ಶರಣರ ದೇವರಿಗೂ ಯಾವುದೇ ಸಂಬಂಧವಿಲ್ಲ.”
    ಓಹೋ! ಹಾಗಿದ್ದರೆ ಅಕ್ಕ ಮಹಾದೇವಿಯ ಈ ವಚನದಲ್ಲಿ ಬರುವ ಬ್ರಹ್ಮ ವಿಷ್ಣು ರುದ್ರರು ಯಾರು ಸಾರ್?
    ಚಿಂತೆಯ ಬಿಡಿಸುವ ನಿಶ್ಚಿಂತ ಪದವಾವುದೆ ತಾಯಿ?
    ನಿನ್ನೊಡನೆ ಜನಿಸಿದ ಪಂಚಭೂತಂಗಳು ನಿನಗೆ ಸಂಗವಾಗಿ ಹಿತಶತ್ರುತನದಿ ಭವ
    ದತ್ತ ಕೆಡಹುವರಮ್ಮ, ಅವರೊಡೆಯರು ನಿನ್ನನಾಳಿಗೊಂಡು ಕಾಡುವರಮ್ಮ
    ಇದ ವಿವರಿಸಿ ಪೇಳೆ ತಾಯಿ!
    ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
    ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ. ಈಶ್ವರನಂತುರದಲ್ಲಿ ಸದಾಶಿವ ಸೈಗೆಡೆದನಮ್ಮ.
    ಒಳಹೊರಗೆ ನಿನಗೈವರ ಕಟ್ಟು-ಕಾವಲು ಘನವಮ್ಮ. ಮತ್ತೊಮ್ಮೆ ಕಾಮ
    ಕಾತರಿಸಿ, ಕ್ರೋಧವಿರೋಧಿಸಿ, ಮದವಹಂಕರಿಸಿ ಮಚ್ಚರ ಕೆಚ್ಚು ಬಲಿದು, ಹೊಯ್ದು-
    ಬಯ್ದು-ಕೊಯ್ದು-ಕೊರೆದು, ಚಿತ್ರಿಸಿ, ಚಿರಣಿಸುವರಮ್ಮ.

    • Amaresh

      ಇದನ್ನೂ ಗಮನಿಸಿ:
      ನಾದ-ಬಿಂದು-ಕಳೆ-ಆದಿಯನಾಗಿ ತತ್ವಂಗಳಾವುವುವಿಲ್ಲದಂದು, ತಂದೆ ತಾನೆ
      ತಾನಾಗಿರ್ದನಮ್ಮ. ಆತನ ಸತಿಯಾನೆಯಮ್ಮ. ತನಗೆ ಮಖ್ಖಳು ಬೇಕಾಗಿ ನೆನೆದಡೆ
      ನಾದ-ಬಿಂದು-ಕಳಾಯುಕ್ತವಾದ ಓಂಕಾರವಾಯಿತಮ್ಮ. ಆ ಓಂಕಾರವೆ ಆದಿಯ ಶರಣನಮ್ಮ.
      ಆ ಶರಣನ ಶಕ್ತಿಯ ಹೆಸರು ನೀನೆಯಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
      ಪರಸತಿಯೆಂದು ಸದಾಶಿವಂಗೆ ಕೈಗೂಡಿಸಿದನಮ್ಮಾ. ನಿನ್ನೊಡನೊಬ್ಬಳು ಹುಟ್ಟಿದಳು.
      ಆದಿಶಕ್ತಿಯೆಂದು ಈಶ್ವರಂಗೆ ಸಂಬಂಧಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
      ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
      ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
      ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ. ಇವರು ನಿನ್ನಿಂದ ಹುಟ್ಟಿದ ಪಂಚ
      ಕೃತ್ಯಂಗಳಿಗೊಳಗಾದರು. ಇದರೊಳು ಪೊಕ್ಕು ಬಳಸಿದೆಯಾಗಿ ನನ್ನ ನೀ ಮರೆದೆಯಮ್ಮ;
      ಇನ್ನಾದರೂ ಎಚ್ಚೆತ್ತು ನಡೆಯೆ.

      • Amaresh

        ಹಾಗೂ ಇದನ್ನೂ ನೋಡತಕ್ಕದ್ದು:
        ಎನಗೆ ದೇವರ ಒಲವರವುಂಟಮ್ಮ.
        ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?
        ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
        ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
        ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
        ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
        ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
        ವರವೆಯಮ್ಮ.

      • Ramjan Darga

        ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ
        ಗಂಡು ಗಂಡಾದಡೆ ಹೆಣ್ಣಿನ ಸೂತಕ
        ಮನದ ಸೂತಕ ಹಿಂಗಿದಡೆ
        ತನುವಿನ ಸೂತಕಕ್ಕೆ ತೆರಹುಂಟೆ?
        ಅಯ್ಯಾ ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ.
        ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ
        ಜಗವೆಲ್ಲ ಹೆಣ್ಣು ನೋಡಾ ಅಯ್ಯಾ. (ಅಕ್ಕ ಮಹಾದೇವಿ)
        ‘ಎನ್ನ ದೇವ’, ‘ಗರುವ’ ಮತ್ತು ‘ಜಗವೆಲ್ಲ ಹೆಣ್ಣು’ ಶಬ್ದಗಳು ಏಕದೇವನ ಶ್ರೇಷ್ಠತೆಯನ್ನು ಮತ್ತು ಏಕದೇವೋಪಾಸನೆಯನ್ನು ಸೂಚಿಸುತ್ತವೆ. ಅಲ್ಲದೆ ಆ ಏಕದೇವನನ್ನು ಮಾತ್ರ ತಾನು ನಂಬಿರುವುದಾಗಿ ಅಕ್ಕ ಸ್ಪಷ್ಟಪಡಿಸಿದ್ದಾಳೆ. ಇನ್ನು ಬ್ರಹ್ಮ ವಿಷ್ಣು ಮಹೇಶ್ವರರೆಲ್ಲ ಪುರಾಣದ ದೇವತೆಗಳು. ವಚನಗಳು ಸೃಜನಶೀಲವೂ ಆಗಿರುವುದರಿಂದ ಪುರಾಣಗಳನ್ನು, ದಂತಕಥೆಗಳನ್ನು ಮತ್ತು ವೇದಗಳನ್ನು ಕೂಡ ವಚನಕಾರರು ಸಹಜವಾಗಿಯೆ ಬಳಸಿಕೊಳ್ಳುತ್ತಾರೆ.

      • Ramjan Darga

        ಮೇಲಿನ ಉತ್ತರ ನೋಡಿ.

    • Ramjan Darga

      ಅಮರೇಶಜಿ, ಎಷ್ಟು ಸಲ ಹೇಳಲಿ? ವಚನಗಳು ಕೇವಲ ಶಾಸ್ತ್ರಗಳಾಗದೆ, ಸೃಜನಶೀಲ ಸಾಹಿತ್ಯವೂ ಆಗಿರುವುದರಿಂದ ಪುರಾಣಗಳ ಬಳಕೆ ಸಹಜವಾಗಿದೆ. ಬಸವಣ್ಣನವರು ರುದ್ರನನ್ನು ತಮ್ಮ ಪರಿಕಲ್ಪನೆಯ ಶಿವ ಎಂದು ಪರಿಗಣಿಸುವುದಿಲ್ಲ. ಆದರೆ ಪೌರಾಣಿಕ ಪ್ರಸಂಗಗಳನ್ನು ಹೇಳುವಾಗ ತಮ್ಮ ಶಿವನ ಮೂಲವನ್ನು ರುದ್ರನಲ್ಲಿ, ಮಹೇಶ್ವರನಲ್ಲಿ ಮತ್ತು ಹೆಂಡಿರುಮಕ್ಕಳುಳ್ಳ ಶಿವನಲ್ಲಿ ಕಾಣುತ್ತಾರೆ. ಜ್ಞಾನಿಗಳಾದ ತಾವು ಇದನ್ನು ಅರಿಯುವಿರೆಂದು ಭಾವಿಸುವೆ.

    • Ramjan Darga

      ಸಹನಾ ಅವರೇ,
      ಏಕದೇವೋಪಾಸನೆಯ ಇನ್ನಷ್ಟು ವಚನಗಳನ್ನು ನೋಡಿ. ಬಸವಣ್ಣನವರು ವೈದಿಕರ ದೇವತೆಗಳನ್ನು ಮಾತ್ರ ನಿರಾಕರಣೆ ಮಾಡಲಿಲ್ಲ. ಅವೈದಿಕರ ದೇವತೆಗಳನ್ನೂ ನಿರಾಕರಣೆ ಮಾಡಿದರು. ಇಡೀ ಮಾನವ ಕುಲಕ್ಕೆ ದೇವನೊಬ್ಬನೆ ಎಂದು ಸಾರಿದರು. ಒಬ್ಬನೇ ದೇವರಾಗಿರುವುದರಿಂದ ವಿವಿಧ ಜಾತಿಗಳು ಸುಳ್ಳು ಎಂದು ಹೇಳವುದರ ಮೂಲಕ ಮಾನವ ಕುಲ ಒಂದೇ ಎಂದು ಸಾರಿದರು. ಒಬ್ಬನೇ ದೇವರು, ಒಂದೇ ವಿಶ್ವ, ಒಂದೇ ಮಾನವ ಕುಲ ಎಂಬುದು ಬಸವಣ್ಣನವರ ಘೋಷಣೆಯಾಗಿದೆ. ಈ ಕಾರಣದಿಂದ ಅವರು ವಿವಿಧ ದೇವರುಗಳ ನಿರಾಕರಣೆ ಮಾಡುತ್ತಾರೆ ಹೊರತಾಗಿ ಯಾವುದೇ ದ್ವೇಷದಿಂದಲ್ಲ.
      “ಹಾಳು ಮೊರಡಿಗಳಲ್ಲಿ ಊರ ದಾರಿಗಳಲ್ಲಿ
      ಕೆರೆ ಬಾವಿ ಹೂಗಿಡು ಮರಂಗಳಲ್ಲಿ
      ಗ್ರಾಮಮಧ್ಯಂಗಳಲ್ಲಿ ಜಲಪಥ ಪಟ್ಟಣ ಪ್ರದೇಶದಲ್ಲಿ
      ಹಿರಿಯಾಲದ ಮರದಲ್ಲಿ ಮನೆಯ ಮಾಡಿ,
      ಕರೆವೆಮ್ಮೆಯ ಹಸುಗೂಸು ಬಸುರಿ ಬಾಣತಿ
      ಕುಮಾರಿ ಕೊಡಗೂಸು ಎಂಬುವರ ಹಿಡಿದುಂಬ, ತಿರಿದುಂಬ
      ಮಾರಯ್ಯ, ಬೀರಯ್ಯ, ಕೇಚರಗಾವಿಲ ಅಂತರಬೆಂತರ
      ಕಾಳಯ್ಯ, ಧೂಳಯ್ಯ, ಕೇತಯ್ಯಗಳೆಂಬ ನೂಡು ಮಡಕೆಗೆ
      ನಮ್ಮ ಕೂಡಲಸಂಗಮದೇವ ಶರಣೆಂಬುದೊಂದು ದಡಿ ಸಾಲದೆ? (ಬಸವಣ್ಣನವರು)
      “ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ;
      ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ;
      ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ;
      ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೇ ದೇವ.” (ಬಸವಣ್ಣನವರು)

      • ವಿಜಯ್

        ಈ ಪ್ರಶ್ನೆಯನ್ನು ಮೊದಲು ಕೂಡ ಕೇಳಿದ್ದೆ..ಸಂಕ್ಷಿಪ್ತವಾಗಿ ಸತ್ಯನಾರಾಯಣವರಿಗೆ..ದೇವರು ಎಂಬ ಕಾನ್ಸೆಪ್ಟನಿಂದ ಎಷ್ಟೆಲ್ಲ ತೊಂದರೆ ಇದೆ ಎಂಬುದು ಗೊತ್ತು ಮಾಡಿಕೊಂಡ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲವನ್ನೂ ನಿರಾಕರಣೆ ಮಾಡಿದ, ದೈವ ಸಂಬಂಧಿತ ಶೋಷಣೆಗಳನ್ನು ಎತ್ತಿ ತೋರಿಸಿದ ಬಸವಣ್ಣನವರು ದೇವರನ್ನೇ ಏಕೆ ದೂರ ಇಡಲಿಲ್ಲ? ಹೊಸ ದೇವರಾದ ಇಷ್ಟಲಿಂಗದ ಸೃಷ್ಟಿ ಏಕೆ? ಶಿವದಾರದ ಕಲ್ಪನೆ ಏಕೆ? ಇವೆಲ್ಲದರ ಬಗ್ಗೆ ಚಿಂತೆಯೇ ಮಾಡಬೇಡಿ, ದೇವರು-ದಿಂಡರು ಎಂಬುದು ಏನೂ ಇಲ್ಲ..ನೀವು ಮಾಡುಬ ಕಾಯಕ ಬಿಟ್ಟು ಈ ಜಗದಲ್ಲಿ ಬೇರೆನಿಲ್ಲ ಎಂದೇಕೆ ಹೇಳಲಿಲ್ಲ? ದೇವ ನಿರಾಕರಣೆಯ ಸಿದ್ದಾಂತ ಏಕೆ ಹುಟ್ಟಿಕೊಳ್ಳಲಿಲ್ಲ?

        • Ramjan Darga

          ಬಸವಣ್ಣನವರು ದೇವರನ್ನು ನಿರಾಕರಣೆ ಮಾಡಿಲ್ಲ. ಬಹುದೇವತೆಗಳನ್ನು ನಿರಾಕರಣೆ ಮಾಡಿದ್ದಾರೆ. ಅವರ ಪರಿಕಲ್ಪನೆಯ ದೇವರು ಗುಡಿಗಳಲ್ಲಿ ಇಲ್ಲ. ದೇಹ ಎಂಬ ದೇವಾಲಯದಲ್ಲಿ ಇದ್ದಾನೆ.
          ಇಷ್ಟಲಿಂಗವು ದೇವರಲ್ಲ. ಅರಿವೆಂಬ ದೇವರ ಸಂಕೇತ. “ಅರಿವು ಹಿಡಿಯಂದಡೆ ಕುರುಹು ಹಿಡಿದರು ನೋಡಾ” ಎಂದು ಅಲ್ಲಮ ಪ್ರಭುಗಳು ಹೇಳಿದ್ದಾರೆ. ಇಷ್ಟಲಿಂಗವೆಂಬುದು ಅರಿವಿನ ಕುರುಹು ಎಂಬುದೇ ಶರಣರ ವಿಚಾರವಾಗಿತ್ತು. “ಲಾಂಛನಕ್ಕೆ ಶರಣೆಂಬೆ” ಎಂದು ಬಸವಣ್ಣನವರು ತಿಳಿಸಿದ್ದಾರೆ.
          ಬ್ರಾಹ್ಮಣರು ದಲಿತರನ್ನು ಮಂದಿರಗಳೊಳಗೆ ಬಿಡುತ್ತಿರಲಿಲ್ಲ. ಮಂದಿರಗಳಲ್ಲಿ ದೇವರಿಲ್ಲ ನಿಮ್ಮ ದೇಹಗಳೊಳಗೆ ಇದ್ದಾನೆ ಎಂಬುದನ್ನು ಬಸವಣ್ಣನವರು ಸಾರಿ ಹೇಳಿದರು.ಆಗ ಕಾಯಕಜೀವಿಗಳು ಮಂದಿರಗಳಿಂದ ವಿಮುಖರಾಗಿ ತಮ್ಮೊಳಗಿನ ದೇವರನ್ನು ಅರಿಯುವಲ್ಲಿ ತಲ್ಲೀನರಾದರು. ಅವರಿಗೆಲ್ಲ ಏಕೈಕ ದೇವನಾದ ಇಷ್ಟಲಿಂಗ ದೇವನ ಸಂಕೇತವಾದ ಇಷ್ಟಲಿಂಗವನ್ನು ನೀಡಿದರು. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲ ದೇವರ ಒಟ್ಟು ಹೆಸರಾದ ಇಷ್ಟಲಿಂಗದೇವನ ಸಂಕೇತ, ಧರ್ಮ ಲಾಂಛನ ಮತ್ತು ಅರಿವಿನ ಕುರುಹು ಆಗಿ ಇಷ್ಟಲಿಂಗವು ಕಂಗೊಳಿಸಿತು. ಎಲ್ಲ ಅನಿಷ್ಟಗಳ ಬಗ್ಗೆ ಅರಿವು ಮೂಡಿಸುವಂಥ ಶಿವಯೋಗ ಧ್ಯಾನದ ಸಾಧನವೂ ಆಯಿತು.
          “ಬ್ರಹ್ಮನ ನಾವು ಬಲ್ಲೆವು, ವಿಷ್ಣುವ ನಾವು ಬಲ್ಲೆವು;
          ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು.
          ಅದೇನು ಕಾರಣವೆಂದಡೆ:
          ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ
          ಇವರ ದೇವರೆಂಬುದ ಬಲ್ಲೆನಾಗಿ
          ಒಲ್ಲೆನೆಂದಾತಂಬಿಗ ಚೌಡಯ್ಯ.” (ಅಂಬಿಗರ ಚೌಡಯ್ಯ)
          “ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
          ಸಕಲವೇದಶಾಸ್ತ್ರವೆಂಬ ನೇಣ ಕಟ್ಟಿ ಹಿಡಿದು ತೂಗಿ
          ಜೊಗುಳವಾಡುತ್ತಾ ಇದ್ದಾಳೆ ಭ್ರಾಂತಿ ಎಂಬ ತಾಯಿ.
          ತೊಟ್ಟಿಲ ಮುರಿದು, ನೇಣು ಹರಿದು, ಜೋಗುಳ ನಿಂದಲ್ಲದೆ
          ಗುಹೇಶ್ವರನೆಂಬ ಲಿಂಗವ ಕಾಣಬಾರದು.” (ಅಲ್ಲಮಪ್ರಭುದೇವರು)
          ಏಕದೇವೋಪಾಸನೆಯ ಶರಣರಿಂದ ದೇವ ನಿರಾಕರಣೆಯ ಸಿದ್ಧಾಂತವನ್ನು ಏಕೆ ಬಯಸುವಿರಿ?

          • ಕಟ್ಟಿಮನಿ

            ದೇಹ ಎಂಬ ದೇವಾಲಯದಲ್ಲಿ ದೇವನಿರುವಾಗ ಇಷ್ಟಲಿಂಗ ಬೇಕೇ? ತಮಗೆ ಇಷ್ಟೂ ಅರ್ಥವಾಗದಿದ್ದರೆ ಏನು ಮಾಡುವುದು?

          • Sohan Bhagwat

            Yes Mr. Kattimani wearing ishtalinga is necessary to sanctify and deify the body. That is the first step towards linganga yoga

          • ವಿಜಯ್

            [ಏಕದೇವೋಪಾಸನೆಯ ಶರಣರಿಂದ ದೇವ ನಿರಾಕರಣೆಯ ಸಿದ್ಧಾಂತವನ್ನು ಏಕೆ ಬಯಸುವಿರಿ?]
            – ನಿಮ್ಮ ಪ್ರಕಾರ ಶೋಷಕ ಸಮಾಜದ ರೀತಿ-ರಿವಾಜು, ಸಂಸ್ಕೃತಿ-ಆಚರಣೆಗಳು, ಗ್ರಂಥಗಳು ಎಲ್ಲವನ್ನು ನಿರಾಕರಿಸಿ ಹೊಸದಾಗಿ ಕಟ್ಟಿದ ಧರ್ಮ ಶರಣ ಧರ್ಮ ( ಜಿ ಎನ್ ನಾಗರಾಜ್ ಅವರ ಪ್ರಕಾರ ಸಾಂಖ್ಯ-ಯೋಗದಿಂದ ಕೆಲವು ಅಂಶಗಳು ತೆಗೆದುಕೊಳ್ಳಲಾಗಿದೆ/ಪ್ರಭಾವಿತವಾಗಿದೆ ಅಂತಿದೆ..ಅವರಿಗೆ ಅವರ ಲೇಖನದಲ್ಲೇ ಪ್ರಶ್ನೆ ಮಾಡುತ್ತೇನೆ). ಗಮನಿಸಿ ದೇವಾಲಯಗಳು ಹುಟ್ಟಿದ್ದೇ ದೇವರೆಂಬವನೊಬ್ಬನಿದ್ದಾನೆ ಎಂಬ ಕಾರಣಕ್ಕೆ. ಚರ್ಚ, ಮಸೀದಿಗಳು ಕೂಡ ಇದಕ್ಕೆ ಉದಾಹರಣೆ. ಹೀಗಿದ್ದಾಗ ಎಲ್ಲ ವೈದಿಕ ದೇವರುಗಳನ್ನು ನಿರಾಕರಣೆ ಮಾಡಿದ ಬಸವಣ್ಣನವರು ಹೊಸ ದೇವರನ್ನು ಏಕೆ ಸೃಷ್ಟಿಸಿದರು? ಅದರ ಅವಶ್ಯಕತೆಯೇನಿತ್ತು?
            – ಇನ್ನೊಂದು ಪ್ರಶ್ನೆಯೇನೆಂದರೆ ಕೂಡಲ ಸಂಗಯ್ಯ, ಗುಹೇಶ್ವರಾ, ಚನ್ನ ಮಲ್ಲಿಕಾರ್ಜುನಯ್ಯ ಎಂದೆಲ್ಲ ಬೇರೆ-ಬೇರೆ ಅಂಕಿತ ನಾಮಗಳೇಕೆ? ಇಷ್ಟಲಿಂಗ ಒಂದೇ ಇದ್ದಾಗ..ಏಕದೇವೋಪಾಸನೆ ಮಾಡುತ್ತಿದ್ದಾಗ? ದೇವನೊಬ್ಬ ನಾಮ ಹಲವು ಎನ್ನುವ ಉದಾಹರಣೆ ವೈದಿಕ ಧರ್ಮದಲ್ಲಿಯೂ ಇದೆ..ಆದ್ದರಿಂದ ಅದಿಲ್ಲಿ ಹೊಂದುವುದಿಲ್ಲ ಏಕದೇವೋಪಾಸನೆಯ ಇತರ ಧರ್ಮಗಳಲ್ಲಿಯೂ ಒಂದೇ ದೇವರನ್ನು ಬೇರೆ, ಬೇರೆ ಹೆಸರುಗಳಿಂದ ಕರೆಯುತ್ತಾರೆಯೆ?

      • Amaresh

        ಮತ್ತದೇ ಸೆಮೆಟಿಕ್ ರಾಗ!

        • Ramjan Darga

          ಆ ರಾಗ ಬಿಟ್ಟರೆ ನಿಮ್ಮ ವಾದದಲ್ಲೇನಿದೆ?

          • ಕಟ್ಟಿಮನಿ

            ಅಮರೇಶ್ ಅವರ ವಾದದಲ್ಲಿ ಏನಿದೆ ಅಂತ ಕೇಳಿದ್ದೀರಿ. ನಾನು ಅವರ ಅನೇಕ ಕಾಮೆಂಟುಗಳನ್ನು ನೋಡಿದ್ದೇನೆ. ಅವುಗಳಲ್ಲಿ ಬಹಳ ಮುಖ್ಯವಾದ ಹಲವು ವಿಚಾರಗಳ ಬಗ್ಗೆ ಅವರು ಚರ್ಚೆ ಮಾಡಿದ್ದಾರೆ. ಆದರೆ ತಾವು ಅವುಗಳನ್ನು ನೇರವಾಗಿ ಎದುರಿಸದೆ ವಿತ್ತಂಡ ವಾದ ಮಾಡುತ್ತಲೇ ಬಂದಿದ್ದೀರಿ.

          • jayateerth joshi

            I too have studied Ramjan Darga’s intellectual responses and i feel he has clarified everything. This argument is not liked by the website people. so they are simply raking up prejudiced issues

  13. Ramjan Darga

    ಮೂರು ದಿನ ಬಿಡುವಿಲ್ಲದ ಕಾರ್ಯಕ್ರಮಗಳಿವೆ. ಪ್ರಶ್ನೆ ಕೇಳುವುದನ್ನು ಮರೆಯಬೇಡಿ. ಎಲ್ಲ ಪ್ರಶ್ನೆಗಳಿಗೆ ಒಂದೇ ಸಲ ಉತ್ತರ ಕೊಡುವೆ.

    • Amaresh

      “ವಚನಗಳ ಮೌಲ್ಯಗಳು ಪೂರ್ಣವಾಗಿ ಸಾಕಾರಗೊಳ್ಳದಿರುವುದಕ್ಕೆ ಕಾರಣಗಳನ್ನು ವಸ್ತು ನಿಷ್ಠವಾಗಿ ಅಧ್ಯಯನಕ್ಕೊಳಪಡಿಸದೇ ವೈಭವೀಕರಿಸುವುದು, ಅದರಲ್ಲಿ 20ನೆಯ ಶತಮಾನದ ಬೆಳವಣಿಗೆಗಳನ್ನು ವಿಶ್ವ ಸಂಸ್ಥೆ, ಸಂವಿಧಾನ, ಸಂಸತ್ತು , ಮಾರ್ಕ್ಸ್ ವಾದಗಳನ್ನು ಕಾಣುವುದು ವೈಪರೀತ್ಯದ ಬೆಳವಣಿಗೆಯಾಗಿದೆ. ಇದು ಈಗ್ಗೆ ಕೆಲವು ದಶಕಗಳ ಹಿಂದೆಯೇ ಆರಂಭವಾಗಿರುವ ಪ್ರವೃತ್ತಿಯಾಗಿದೆ.”
      http://avadhimag.online/2013/07/17/%E0%B2%9C%E0%B2%BF-%E0%B2%8E%E0%B2%A8%E0%B3%8D-%E0%B2%A8%E0%B2%BE%E0%B2%97%E0%B2%B0%E0%B2%BE%E0%B2%9C%E0%B3%8D-%E0%B2%AC%E0%B2%B0%E0%B3%80%E0%B2%A4%E0%B2%BE%E0%B2%B0%E0%B3%86-%E0%B2%B5%E0%B2%9A/

      • ಸಹನಾ

        ಈ ರೀತಿಯ 20ನೇ ಶತಮಾನದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಮೌಲ್ಯಗಳನ್ನು ಬಸವಾದಿಶರಣರ ವಚನಗಳಲ್ಲಿ ಕಾಣುವುಮೂಲಕ ಅದಕ್ಕೆ ದೊಡ್ಡ ಮೌಲ್ಯ ತಂದುಕೊಡುತ್ತಿರುವುದಾಗಿ ಇವರು ಭ್ರಮಿಸಿದ್ದಾರೆ ಮಾತ್ರವಲ್ಲ ಹಲವು ಶಿಕ್ಷಿತರು ಇದನ್ನೇ ನಂಬಿಯೂ ಬಿಟ್ಟಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿಯು ಕಳೆದ ಎರಡು ಸಾವಿರ ವರ್ಷಗಳಿಂದ ಕ್ರಿಶ್ಚಿಯಾನಿಟಿಯ ಪ್ರಭಾವದಿಂದ ರೂಪಿತವಾಗುತ್ತಾ ಬಂದಿವೆ. ಆ ಕ್ರಿಶ್ಚಿಯನ್ ಮೌಲ್ಯಗಳೇ ಕಾಲಾನಂತರದಲ್ಲಿ (ಎನ್ಲೈಟನ್ ಮೆಂಟ್ ಯುಗದ ನಂತರ) ಸೆಕ್ಯುಲರೀಕೃಗೊಳ್ಳುತ್ತಾ ಜಾಗತಿಕ ವೈಚಾರಿಕ ಮೌಲ್ಯಗಳೆಂಬಂತೆ ರೂಪಾಂತರ ಗೊಳ್ಳುತ್ತಾ ಬಂದಿದೆ. ವಸಾಹತುಶಾಹಿ ಆಳ್ವಿಕೆ ಮತ್ತು ಅದರ ಶಿಕ್ಷಣ ಪದ್ದತಿ ಅದರ ಜೊತೆಗೆ ನಿಂತಿದೆ. ಆ ಮೌಲ್ಯಗಳನ್ನು ಸಾರ್ವತ್ರಿಕ ಮಾನವೀಯ ಮೌಲ್ಯವಂಬಂತೆ ಭ್ರಮೆ ಮೂಡಿಸಿಕೊಂಡಿರುವ ಈ ನಮ್ಮ ವಿದ್ವಾಂಸರು ವಚನಗಳಲ್ಲಿ ಅವುಗಳೆಲ್ಲವೂ ಇವೆ ಎಂದು ಹೇಳಿದರೇನೆ ವಚನಗಳಿಗೆ ಜಾಗತಿಕ ಮನ್ನಣೆ ಎನ್ನುವ ರೀತಿಯಲ್ಲಿ ಬಿಂಬಿಸಿ ಹೀಗೆಲ್ಲಾ ನಗೆಪಾಟೀಲಿಗೆ ಈಡಾಗುತ್ತಿದ್ದಾರೆ. ಅವರು ಮಾತ್ರವಲ್ಲ ವಚನಕಾರರನ್ನು ಅವರ ಜೊತೆ ಸಹಭಾಗಿಗಳನ್ನಾಗಿಸುತ್ತಿದ್ದಾರೆ. ‘ಪರಮೋನ್ನತ ಅನುಭಾವೀ ಪರಂಪರೆ’ಯನ್ನು ಹೀಗೆ ಪ್ರೊಟೆಸ್ಟ್ಟಂಟ್ ಲಿಬರಲ್ ಚಿಂತನೆಯಾಗಿಸಿದ್ದಾರೆ. ಆ ಮೂಲಕ ಪಶ್ಚಿಮಸಂಸ್ಕೃತಿಯ ಮೌಲ್ಯಗಳೇ ನಾಗರೀಕತೆಯನ್ನು ಅಳೆಯುವ ಪರಮೋಚ್ಚ ಮಾನದಂಡ ಆ ಮೌಲ್ಯಗಳು ಇಲ್ಲವೆಂದರೆ ಅದು ನಾಗರೀಕತೆಯೇ ಅಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ಅನುಭಾವಿ ವಚನಕಾರರು ಪ್ರಾಟೆಸ್ಟಂಟ್ ಕ್ರಿಶ್ಚಿಯನ್ನರಾಗಿದ್ದರು ಎನ್ನುವ ರೀತಿಯ ವಿವರಣೆ ಅವರಿಗೆ ಗೌರವ ತಂದುಕೊಡುತ್ತದೆಯೋ ಅವಮಾನ ಮಾಡುತ್ತದೆಯೋ? ನಿಜವಾದ ಶರಣಸಂಪ್ರದಾಯಿಗಳು ನಿರ್ಧರಿಸಲಿ. ರಂಜಾನ್ ದರ್ಗಾರಂತವರ ವಾದಗಳಿಂದಾಗಿಯೇ ಲಂಡನ್ ನಲ್ಲಿಯ ಧೇಮ್ಸ್ ನದಿಯ ದಂಡೆಯಲ್ಲಿ ಬಸವಪ್ರತಿಮೆ ನಿಲ್ಲಿಸಿ ಅದಕ್ಕೆ ಅವರು ನೀಡಿರುವ ಒಕ್ಕಣೆ “ಪ್ರೊಟೆಸ್ಟಂಟ್ ಭ್ರಿಟೀಷ್ ಮೌಲ್ಯಗಳ ಪ್ರತಿನಿಧಿ” ಎಂದು. ಬಸವಣ್ಣನವರು ಭ್ರಿಟೀಷ್ ಮೌಲ್ಯಗಳ ಪ್ರತಿನಿಧಿಯಾಗಿದ್ದರೆ? ಭ್ರಿಟೀಷರಿಗಾಗಲೀ ಅಥಾವ ಇನ್ನಾವುದೇ ಪಾಶ್ಚಾತ್ಯ ಸೆಮಿಟಿಕ್ ಪಂಥಿಗಳಿಗೆ ‘ನಮ್ಮ ಶರಣರ ಅನುಭಾವಿ ಪರಂಪರೆ’ಯ ವಿಚಾರಗಳ ಗಂಧಗಾಳಿ ಗೊತ್ತಿದೆಯೇ? ‘ಅನುಭಾವ’ದ ಅರ್ಥಗೊತ್ತಿದೆಯೇ? ‘ಶೂನ್ಯ’ದ ಪ್ರಾಥಮಿಕ ಜ್ಞಾನವಿದೆಯೇ? ಈ ಹಿನ್ನೆಲೆಯಲ್ಇ ‘ಜಂಗಮ’ ಪದಕ್ಕೆ ಸಮಾಜ (society) ಅರ್ಥವನ್ನೂ ಮೆತ್ತುತ್ತಾರಲ್ಲ!! (ಪಾಶ್ಚಾತ್ಯರಲ್ಲಿ ಬಳಕೆಯಲ್ಲಿರುವ society ಪರಿಕಲ್ಪನೆಯ ರೀತಿಯ ‘ಸಮಾಜ’ವನ್ನು 20 ನೇ ಶತಮಾನದ ಆರಂಭದವರೆಗೂ ಯಾವೊಬ್ಬ ಭಾರತೀಯ ಕೃತಿಕಾರನೂ ಬಳಸಿಯೇ ಇಲ್ಲ!!) ಇವರು ವಚನಗಳ ಬಗ್ಗೆ ಮಾತನಾಡುವ ಅಥಾರಟಿ ಎಂದು ಒಪ್ಪಿಕೊಂಡಿರುವುದೇ ಒಂದು ದೊಡ್ಡ ದುರಂತ.
        ಜಲದೊಳಗಿದ್ದ ಕಿಚ್ಚು
        ಜಲವ ಸುಡದೆ, ಜಲವು ತಾನಾಗಿದ್ದಿತು ನೋಡಾ!
        ನೆಲೆಯನಱದು ನೋಡಿಹೆನೆಂದಡೆ
        ಅದು ಜಲವು ತಾನಲ್ಲ !
        ಕುಲದೊಳಗಿದ್ದು, ಕುಲವ ಬೆರಸದೆ,
        ನೆಲೆಗೆಟ್ಟುನಿಂದುದನಾರುಬಲ್ಲರು !
        ಹೊಱಗೊಳಗೆ ತಾನಾಗಿದ್ದು ಮತ್ತೆ
        ತಲೆದೋಱದಿಪ್ಪುದು, ಗುಹೇಶ್ವರ, ನಿಮ್ಮ ನಿಲುವು ನೋಡಾ !
        ಎನ್ನ ನಾನಱಿಯದ ಮುನ್ನ
        ನೀನೇನಾಗಿದ್ದೆ ಹೇಳಾ ?
        ಮುನ್ನ ನೀ ಬಾಯಿ ಮುಚ್ಚಿಕೊಂಡಿದ್ದೆಯೆಂಬುದ
        ನಾ ನಿನ್ನ ಕಣ್ಣಿಂದ ಕಂಡೆನು !
        ಎನ್ನ ನಾನಱಿದ ಬಳಿಕ
        ಇನ್ನು ನೀ ಬಾಯ್ದೆಱೆದು ಮಾತನಾಡಿದರೆ
        ಅದನೆನ್ನ ಕಣ್ಣಿಂದ ನೀ ಕಂಡು ನಾಚಿದೆ ನೋಡಾ !
        ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
        ಸಂಚದ ನೋಟ ಒಂದೆ ನೋಡಾ !
        ಗುಹೇಶ್ವರ, ನಿನ್ನ ಬೆಡಗಿನ ಬಿನಾಣವನಱಿದೆ ನೋಡಾ !
        ಮಾಯದ ಬಲೆಯಲ್ಲಿ ಸಿಲುಕಿದ
        ಮರುಳ ನಾನೆಂದಱಿದ ಪರಿಯ ನೋಡಾ !
        ತನ್ನ ವಿನೋದಕ್ಕೆ ಬಂದು
        ನಿಶ್ಚಿಂತ ನಿರಾಳ ಗುಹೇಶ್ವರನೆಂದಱಿಯದ ಪರಿಯ ನೋಡಾ !
        ಮಾಯದ ಕೈಯಲ್ಲಿ ಓಲೆಕಂಠವ ಕೊಟ್ಟರೆ
        ಲಗುನ-ಮಿಗುನವ ಬರೆಯಿತ್ತು ನೋಡಾ !
        ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದರೆ
        ಅದು ಸಿರಿಯ ಸಿಂಗಾರವಾಯಿತ್ತು ನೋಡಾ !
        ಅಂಬರದೊಳಗಾಡುವ ಗಿಳಿ
        ಪಂಜರದೊಳಗಣ ಬೆಕ್ಕ ನುಂಗಿ
        ರಂಭೆಯ ತೋಳಿಂದಗಲಿತ್ತು ನೋಡಾ-ಗುಹೇಶ್ವರ.
        ಸಂಸಾರವೆಂಬ ಹೆಣ ಬಿದ್ದಿರೆ
        ತಿನಬಂದ ನಾಯ ಜಗಳವ ನೋಡಿರೇ !
        ನಾಯ ಜಗಳವ ನೋಡಿ
        ಹೆಣನೆದ್ದು ನಗುತ್ತಿದೆ
        ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ !
        ಕರೆಯದೇ ಬಂದುದ
        ಹೇಳದೆ ಹೋದುದ-ಆರೂ ಅಱಿಯರಲ್ಲಾ !
        ಅಂದಂದಿಗೆ ಬಂದ ಪ್ರಾಣಿಗಳು-ಆರೂ ಅಱಿಯರಲ್ಲಾ !
        ಗುಹೇಶ್ವರಲಿಂಗ ಉಣ್ಣದೇ ಹೋದುದ-ಆರೂ ಅಱಿಯರಲ್ಲ !
        ಕಾಲುಗಳೆರಡೂ ಗಾಲಿ ಕಂಡಯ್ಯ
        ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
        ಬಂಡಿಯ ಹೊಡೆವರೈವರು ಮಾನಿಸರು
        ಒಬ್ಬರಿಗೊಬ್ಬರು ಸಮವಿಲ್ಲಯ್ಯ.
        ಅದಱಿಚ್ಛೆಯನಱಿದು ಹೊಡೆಯದಿದ್ದರೆ
        ಅದುಱಚ್ಚು ಮುಱಿಯಿತ್ತು ಗುಹೇಶ್ವರ.
        ಕೃತಯುಗದಲ್ಲಿ
        ಶ್ರೀಗುರು ಶಿಷ್ಯಂಗೆ ಬಡಿದು
        ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
        ತ್ರೇತಾಯುಗದಲ್ಲಿ
        ಶ್ರೀಗುರು ಶಿಷ್ಯಂಗೆ ಬೈದು
        ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
        ದ್ವಾಪರ ಯುಗದಲ್ಲಿ
        ಶ್ರೀಗುರು ಶಿಷ್ಯಂಗೆ ಝಂಕಿಸಿ
        ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
        ಕಲಿಯುಗದಲ್ಲಿ
        ಶ್ರೀಗುರು ಶಿಷ್ಯಂಗೆ ವಂದಿಸಿ
        ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
        ಗುಹೇಶ್ವರ,
        ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.
        ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
        ಗಗನದಿಂದ ಮೇಲೆ ಅನುಭಾವ ತಾನಿಲ್ಲ
        ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
        ಹೊಱಗಣ ಹೊಱಗನು ಅಱಿಯಬಲ್ಲವರಿಲ್ಲ
        ಹಿಂದಣ ಹಿಂದನು
        ಮುಂದಣ ಮುಂದನು
        ತಂದೆ ತೋಱಿದನು ನಮ್ಮ ಗುಹೇಶ್ವರನು.
        ಲಿಂಗ ಒಳಗೋ ಹೊಱಗೋ ?
        ಬಲ್ಲಡೆ ನೀವು ಹೇಳಿರೇ !
        ಲಿಂಗ ಎಡನೋ ಬಲನೋ ?
        ಬಲ್ಲಡೆ ನೀವು ಹೇಳಿರೇ !
        ಲಿಂಗ ಮುಂದೋ ಹಿಂದೋ ?
        ಬಲ್ಲಡೆ ನೀವು ಹೇಳಿರೇ !
        ಲಿಂಗ ಸ್ಥೂಲವೋ ಸೂಕ್ಷ್ಮವೋ ?
        ಬಲ್ಲಡೆ ನೀವು ಹೇಳಿರೇ !
        ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ?
        ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ.
        ಮೂಱು ಪುರದ ಹೆಬ್ಬಾಗಿಲೊಳಗೊಂದು
        ಕೋಡಗ ಕಟ್ಟಿದುದ ಕಂಡೆ !
        ಅದು ಕಂಡಕಂಡವರನೇಡಿಸುತ್ತಿದ್ದಿತು ನೋಡಾ !
        ಪುರದರಸು ತನ್ನ ಪಾಯದಳ ಸಹಿತ ಬಂದರೆ
        ಒಂದೇ ಬಾರಿ ಮುಱಿದು ನುಂಗಿತ್ತ ಕಂಡೆ !
        ಆ ಕೋಡಗಕ್ಕೆ ಒಡಲುಂಟು, ತಲೆಯಿಲ್ಲ ;
        ಕಾಲುಂಟು, ಹೆಜ್ಜೆಯಿಲ್ಲ ;
        ಕೈಯುಂಟು, ಬೆರಳಿಲ್ಲ ;
        ಇದು ಕರಚೋದ್ಯ ನೋಡಾ !
        ತನ್ನ ಕರೆದವರ ಮುನ್ನವೇ ತಾ ಕರೆವುದು ಆ ಕೋಡಗ
        ತನ್ನ ಬಸಿಱಲ್ಲಿ ಬಂದ ಮದಗಜದ ನೆತ್ತಿಯನೇಱಿ
        ಗಾಳಿಯ ಧೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
        ವಾಯದ ಗಗನದ ಮೇಲೆ
        ತನ್ನ ಕಾಯವ ಪುಟನೆಗೆದು ತೋಱುತ್ತಿಹುದ ಕಂಡೆ !
        ಹತ್ತು ಮುಖದ ಸರ್ಪನ
        ತನ್ನ ಹೇಳಿಗೆಯೊಳಗಿಕ್ಕಿ ಆಡಿಸುತ್ತಿಹುದ ಕಂಡೆ !
        ಐವರು ಕೊಡಗೂಸುಗಳ ಕಣ್ಣಿಂಗೆ
        ಕಣ್ಣಡವ ಕಟ್ಟುತ್ತಿಹುದ ಕಂಡೆ !
        ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ
        ಹುಬ್ಬನಾಡಿಸುವುದ ಕಂಡೆ !
        ಆ ಕೋಡಗದ ಕೈಯಲ್ಲಿ ಮಾಣಿಕ್ಯವ ಕೊಟ್ಟಡೆ
        ನೋಡುತ್ತ ನೋಡುತ್ತ ಬೆಱಗಾದುದು ಕಂಡೆ !
        ಕೂಡಲಿಲ್ಲ ಕಳೆಯಲಿಲ್ಲ ! ಗುಹೇಶ್ವರನ ನಿಲುವು
        ಪ್ರಾಣಲಿಂಗ ಸಂಬಂಧವಿಲ್ಲದವರಿಗೆ ಕಾಣಬಾರದು.
        ಪಾಶ್ಚಾತ್ಯ ಸೆಮೆಟಿಕ್ ಮೌಲ್ಯಗಳು ಈ ‘ಅನುಭಾವಿ’ ಜ್ಞಾನದ ಹತ್ತಿರ ಸುಳಿಯಲು ಸಾಧ್ಯ!!! ನಮಗೆ ಆ ಮೌಲ್ಯಗಳ ಚೌಕಟ್ಟಿನಿಂದ ಈ ಅನುಭಾವಿಗಳ ಜ್ಞಾನಕ್ಕೆ ಬೆಳಕು ಬೇಕೆ?? ನಮ್ಮ ಮುಂದಿನ ಪೀಳಿಗೆಗೆ ಇರಲಿ ನಮಗೇ ಈ ಜ್ಞಾನದದಿಂದ ವಂಚಿಸಿ ಇವೆಲ್ಲವೂ ಇನ್ನವುದೋ ಭ್ರಿಟೀಷ್ ಉದಾರವಾದಿ ಮೌಲ್ಯಗಳೆಂದು ಉಣಬಡಿಸುತ್ತಿದ್ದಾರಲ್ಲಾ!!!!
        ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದರಲ್ಲಾ !
        ಅಂಗಸಂಗಿಗಳೆಲ್ಲಾ ಮಹಾಘನವನಱಿಯದೆ ನಿಂದರೊ !
        ಹುಸಿಯನೆ ಕೊಯ್ದು
        ಹುಸಿಯನೆ ಪೂಜಿಸಿ
        ಗಸಣಿಗೊಳಗಾದರು ಗುಹೇಶ್ವರ.

        • Ramjan Darga

          Amareshji and Sahanaji I can understand your frustration. Basava is the genius of very high order. You people are unable to understand what I am writing on the light of Basava Philosophy. Your designs will be exposed soon. I am observing your horrible arguments. You are trying to safeguard the dead philosophy which Basava and other Sharanas criticized on the bases of humanity. The day will come; Basava Philosophy will guide the Nation and your Philosophy will be nowhere. I am always ready to answer your questions, not because of you people but because of the people who are very eager to know about your designs. All your questions and my answers will be published with the answers of other writers.

          • ಸಹನಾ

            Always ready to debate. Let see who who is going to expose whom!!! It is not the question of winning over the debates but the power of knowledge within sharanas ANUBHAVA would expose the fallacies. let us see. I will do my kayaka. I know you are not going to accept your fallacies but our concern our the people who are mislead by misinterpretations. By the way I am very delight to know that Indian Traditions cannot erased simply misinterpreting our traditional thinkers. I wish goodluck, but sure, I can easily foreseen that your purpose would be defeated. it cannot be materialized as you wish to. SO thank god, we are not living in 1930s Europe nor Hitlers breeds exist today.

          • ಸಹನಾ

            Sir, Nonacademic criticisms invites same kind response that one throws. So being a high level intellectual writer pls don’t through mud on others. while doing so, your hands and heart become more dirty than others. So be in the zone of Academic discussion, otherwise, sorry I am not for it. GO ahead do it for your devils mind’s satisfaction, I have better work do.

          • jayateerth joshi

            Ms. Sahana What non academic matters did u find in Darga sir comments. if he calls spade a spade u cant digest anything. This intolerance shows ur semetic origin. Your hands also(Not only hands ur whole mind)is filled with filth. You too take care to be in the zone of courtesy politeness and dignity. Otherwise u too get what u deserve.

          • ಸಹನಾ

            mr Joshi, cant you undrestand Mr darga’s sir these lines: “ಸೆಮಿಟಿಕ್ ಧರ್ಮಗಳ ಬಗ್ಗೆ ನೀವು ಹೇಳುವ ಎಲ್ಲ ಲಕ್ಷಣಗಳೂ ಲಿಂಗಾಯತಧರ್ಮದಲ್ಲಿ ಇವೆಯಲ್ಲ……
            ಈಗ ಹೇಳಿ ಬಸವಧರ್ಮದಲ್ಲಿ ಮತ್ತು ನೀವು ಹೇಳುವ ಸೆಮಿಟಿಕ್ ಧರ್ಮಗಳಲ್ಲಿ ಯಾವ ವ್ಯತ್ಯಾಸಗಳಿವೆ?…..”
            when Darga sir himself admits that he sees Semitic ideologies in Basava dharma what’s wrong with you? Do you agree with this opinion of Darga sir? If you (and fellow lingayats) could properly understand and agree with his this opinion then its implication would be disastrous for the Basava tatva and lingayat tradition. if you could not wakeup now sorry its your fate. I will further show he is distorting vacanas to make it as a Semitic religion how and why it is dangerous for sharanas, wait for a while.

          • Ramjan Darga

            ಸಹನಾಜಿ ಅವರೇ,
            “ಸೆಮಿಟಿಕ್ ಧರ್ಮಗಳ ಬಗ್ಗೆ ನೀವು ಹೇಳುವ ಎಲ್ಲ ಲಕ್ಷಣಗಳೂ ಲಿಂಗಾಯತಧರ್ಮದಲ್ಲಿ ಇವೆಯಲ್ಲ…… ಈಗ ಹೇಳಿ ಬಸವಧರ್ಮದಲ್ಲಿ ಮತ್ತು ನೀವು ಹೇಳುವ ಸೆಮಿಟಿಕ್ ಧರ್ಮಗಳಲ್ಲಿ ಯಾವ ವ್ಯತ್ಯಾಸಗಳಿವೆ? ಎಂದು ನಾನು ನಿಮಗೆ ಕೇಳಿದ್ದೇನೆ.
            ಸರಿಯಾಗಿ ಓದಿ “ನೀವು ಹೇಳುವ ಲಕ್ಷಣಗಳು” ಎಂದು ಬರೆದಿರುವೆ.(ಇದರರ್ಥ ನನಗೆ ಸೆಮಿಟಿಕ್ ಧರ್ಮಗಳ ಬಗ್ಗೆ ನಿಮ್ಮ ಹಾಗೆ ಜ್ಞಾನ ಇಲ್ಲ ಎಂಬುದು)
            ನನ್ನ ಪ್ರಶ್ನೆಗೆ ಉತ್ತರ ಕೊಡುವುದನ್ನು ಬಿಟ್ಟು ಜಯತೀರ್ಥ ಜೋಶಿ ಅವರಿಗೇಕೆ ಗಂಟು ಬಿದ್ದಿರುವಿರಿ? ಅವರ ಪ್ರಾಮಾಣಿಕ ಅಭಿಪ್ರಾಯಗಳನ್ನು ಸಹಿಸಿಕೊಳ್ಳಲು ಆಗುತ್ತಿಲ್ಲವೆ? ನನ್ನ ಪ್ರಶ್ನೆಗೆ ನೇರ ಹಾಗೂ ಸ್ಷಪ್ಟ ಉತ್ತರ ಕೊಡಲು ಆಗುತ್ತಿಲ್ಲವೆ?
            ದೇವರನ್ನು ತಲುಪಲಿಕ್ಕಾಗದು, ನೋಡಲಿಕ್ಕಾಗದು, ಯಾರೊಂದಿಗೂ ಹೋಲಿಸಲಿಕ್ಕಾಗದು, ಅಳೆಯಲಿಕ್ಕಾಗದು (ದೇವರು ಅಗಮ್ಯ, ಅಗೋಚರ, ಅಪ್ರತಿಮ, ಅಪ್ರಮಾಣ)ಎಂದು ಬಸವಣ್ಣನವರು ಹೇಳುತ್ತಾರೆ ಎಂಬುದು ನಿಮಗೆ ಗೊತ್ತಿಲ್ಲವೆ?
            ನೀವು ಹೇಳುವ ಸೆಮಿಟಿಕ್ ಧರ್ಮಗಳು ಯಾವುವು? ಅವು ದೇವರ ಅಸ್ತಿತ್ವ ಕುರಿತು ಏನು ಹೇಳುತ್ತವೆ?
            ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುವುದನ್ನು ಬಿಟ್ಟು ಇನ್ನೇನನ್ನೂ ಹೇಳುತ್ತ ಎಸ್ಕೇಪ್ ಆಗುತ್ತಿದ್ದೀರಲ್ಲಾ?

          • Ramjan Darga

            ಜಯತೀರ್ಥ ಜೋಶಿಯವರೇ ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ಕಳುಹಿಸಿ. ನಿಮ್ಮ ಆಲೋಚನಾ ಕ್ರಮ ಬಹಳ ಆರೋಗ್ಯಕರವಾಗಿದೆ. ಬಸವಣ್ಣನವರು, ಮಧುವರಸರು ಮತ್ತು ಅವರ ಮಗಳು ಲಾವಣ್ಯ ಮೊದಲಾದವರು ಬ್ರಾಹ್ಮಣ್ಯದ ಮೇಲುರಿಮೆಯಿಂದ ಹೊರಬಂದು, ಕಳಜಾತೀಕರಣಕ್ಕೆ ಒಳಗಾದ ನಂತರ ನಿರ್ಜಾತಿ ಸಮಾಜ ನಿರ್ಮಾಣ ಮಾಡಿದರು. ಈ ಕಾಲದಲ್ಲಿ ತಾವು ಆ ಪಥದಲ್ಲೇ ಸಾಗುವುದರ ಮೂಲಕ ನಮ್ಮಂಥವರಿಗೆ ಹೊಸ ಭರವಸೆ ನೀಡುತ್ತಿರುವುದು ಸಂತಸ ತಂದಿದೆ.

          • Ramjan Darga

            ಸಹನಾಜಿ ಅವರೇ, ಈ ಕೆಳಗಿನ ವಚನಗಳ ಕಡೆಗೂ ಗಮನ ಹರಿಸಿ.
            ಬ್ರಾಹ್ಮಣ್ಯವನ್ನು ವಿರೋಧಿಸಿದ ಮತ್ತು ಏಕದೇವೋಪಾಸನೆಯನ್ನು ಪ್ರತಿಪಾದಿಸಿದ ವಚನಗಳಲ್ಲಿ ಕೆಲವು:
            “ನಾನು ಭಕ್ತ, ನಾನು ಪ್ರಸಾದಿ ಎಂದು
            ವಿಪ್ರ ಕರ್ಮವ ಮಾಡುವೆ, ಕರ್ಮೀ
            ಲಿಂಗದೇವನ ಮುಟ್ಟಿ ಮಜ್ಜನಕ್ಕೆರೆವ ಕೈಯಲು
            ವಿಪ್ರನ ಕಾಲ ತೊಳೆವಡೆ
            ಲಿಂಗೋದಕ ಹೃದಯದಲ್ಲಿ,
            ವಿಪ್ರನ ಕಾಲ ತೊಳೆದ ನೀರು ಮಂಡೆಯ ಮೇಲೆ
            ಇದು ಕಾರಣ, ಕೂಡಲಸಂಗಮದೇವಾ
            ಇಂತಪ್ಪ ದುರಾಚಾರಿಗಳ ಮುಖವ ನೋಡಲಾಗದು. (ಬಸವಣ್ಣನವರು)
            “ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವನ ಮನೆಯಲ್ಲಿ
            ಕಿಚ್ಚೆದ್ದು ಸುಡುವಾಗ ಬಚ್ಚಲ ನೀರ, ಬೀದಿಯ ಧೂಳ ಹೊಯ್ದು
            ಬೊಬ್ಬಿಟ್ಟೆಲ್ಲರ ಕರೆವರಯ್ಯಾ!
            ಕೂಡಲಸಂಗಮದೇವಾ ವಂದನೆಯ ಮರೆತು ನಿಂದಿಸುತ್ತಿದ್ದರು.” (ಬಸವಣ್ಣನವರು)
            “ಗ್ರಾಮಮಧ್ಯದೊಳಗೊಂದು ಹೋಮದ ಕುಳಿಯಿದ್ದಡೆ
            ನೇಮವುಳ್ಳವರೆಲ್ಲ ಆಹುತಿಯನಿಕ್ಕಿದರು.
            ಹೊಗೆ ಜಗವಾಗಿ, ಜಗ ಹೊಗೆಯಾಗಿ ನಗೆಗೆಡೆಯಾಯಿತ್ತು ನೋಡಾ.
            ನಗೆ ಹೊಗೆವರಿದಲ್ಲಿ ಹೊಗೆ ಜಗವಾದಡೆ
            ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂದ. (ಘಟ್ಟಿವಾಳಯ್ಯ)
            “ಅಶ್ವಮೇಧಯಾಗವಂತಿರಲಿ
            ಅಜಪೇಯುಪದೇಶ ಸಮಾಧಿಯಂತಿರಲಿ ಹೋ.
            ಹೋಮ ನೇಮ ಗಾಯತ್ರಿಯ ಜಪವಂತಿರಲಿ ಹೋ.
            ಜನಮೋಹನ ಮಂತ್ರವಂತಿರಲಿ ಹೋ.
            ಕೂಡಲಸಂಗಮದೇವನ ಶರಣರ ನುಡಿಗಡಣ ಎಲ್ಲಕ್ಕೂ ಅಧಿಕ್ಕೂ ನೋಡಾ. (ಬಸವಣ್ಣನವರು)
            “ಅಷ್ಟಮಿ, ನವಮಿ ಎಂಬ ಕಲ್ಪಿತವೇಕೋ ಶರಣಂಗೆ?
            ತಪ್ಪಿತ್ತು ಗಣಪದವಿ,ಲಿಂಗಕ್ಕೆ ದೂರ, ಜಂಗಮಕ್ಕೆ ದೂರ.
            ಒಬ್ಬರಿಗಾಳಾಗಿ, ಒಬ್ಬರನೋಲೈಸುವ
            ನಿರ್ಬುದ್ಧಿ ಮನುಜರನೇನೆಂಬೆ ಕೂಡಲಸಂಗಮದೇವಾ? (ಬಸವಣ್ಣನವರು)
            “ಉದಯ ಮಧ್ಯಾಹ್ಮ ಸಂಧ್ಯಾಕಾಲವ ನೋಡಿ
            ಮಾಡುವ ಕರ್ಮಿ ನೀ ಕೇಳಾ
            ಉದಯವೆಂದೇನೋ ಶರಣಂಗೆ?
            ಮಧ್ಯಾಹ್ನವೆಂದೇನೋ ಶರಣಂಗೆ?
            ಅಸ್ತಮಾನವೆಂದೇನೋ ಶರಣಂಗೆ?
            ಮಹಾಮೇರುವಿನ ಮರೆಯಲ್ಲಿರ್ದು
            ತಮ್ಮ ನೆಳಲನರಸುವ ಭಾವಭ್ರಮಿತರ ಮೆಚ್ಚ
            ನಮ್ಮ ಕೂಡಲಸಂಗಮದೇವರು. (ಬಸವಣ್ಣನವರು)
            “ಅಷ್ಟಷಷ್ಟಿಕೋಟಿ ತೀರ್ಥವ ಮಿಂದರಿಲ್ಲ ಕಾಣಿರಣ್ಣಾ
            ಲಕ್ಷ ಲಕ್ಷ ಕೋಟಿ ಕೋಟಿ ಜಪವನೆಣಿಸಿದರಿಲ್ಲ ಕಾಣಿರಣ್ಣಾ
            ಧ್ಯಾನ ಮೌನ ಹೋಮ ನೇಮ ಅನುಷ್ಟಾನವ ಮಾಡಿದರಿಲ್ಲ ಕಾಣಿರಣ್ಣಾ
            ನೂರಿಪ್ಪತ್ತು ವೇಳೆ ಭೂ ಪ್ರದಕ್ಷಿಣವ ಮಾಡಿದರಿಲ್ಲ ಕಾಣಿರಣ್ಣಾ
            ಕಾಶಿ, ಕೇದಾರ, ಶ್ರೀಶೈಲ, ಶಿವಗಂಗೆಗೈದಿದರಿಲ್ಲ ಕಾಣಿರಣ್ಣಾ
            ಇವೆಲ್ಲ ಬರಿಯ ಭ್ರಾಂತು
            ಇಷ್ಟಠಾವ ಹೇಳಿಹೆನು ಕೇಳಿರಣ್ಣಾ:
            ಶ್ರೀಗುರು ಕರುಣದಿಂದ ಬಿಜಯಂಗೈಯಿಸಿಕೊಟ್ಟ
            ಪರಮಲಿಂಗ ತನ್ನ ಕರದಲ್ಲಿ ತುಂಬಿಪ್ಪುದಯ್ಯಾ.
            ಹಲವು ಕಡೆಗೆ ಹೋಹ ಮನವ ಧ್ಯಾನವೆಂಬ ಹಸ್ತದಲ್ಲಿ ಹಿಡಿದು
            ಆ ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆಯಬಲ್ಲರೆ
            ಅಲ್ಲಿಪ್ಪನು ಶಂಭು ಪರಮೇಶ್ವರನು.
            ಇದೇ ನಿಶ್ಚಯ ಉಳಿದುವೆಲ್ಲಾ ಹುಸಿ ಕಾಣಾ
            ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ. (ತೋಂಟದ ಸಿದ್ಧಲಿಂಗೇಶ್ವರರು)
            “ತಿಥಿ ವಾರವೆಂದರಿಯೆನಯ್ಯಾ, ಲಗ್ನವಿಲಗ್ನವೆಂದರಿಯೆನಯ್ಯಾ
            ಇದನರಿತು ಹದಿನಾರು ವಾರ, ಹದಿನೆಂಟು ಕುಲವೆಂದೆಂಬರು
            ನಾವಿದನರಿಯೆವಯ್ಯಾ, ಇರುಳೊಂದು ವಾರ, ಹಗಲೊಂದು ವಾರ
            ಭುವಿಯೊಂದು ಕುಲ, ಭಕ್ತನೊಂದು ಕುಲ; ನಾವು ಬಲ್ಲುದು ಇದು ತಾನೆ
            ಬಸವಪ್ರಿಯ ಕೂಡಲಚೆನ್ನಸಂಗಮದೇವಾ. (ಸಂಗಮೇಶ್ವರದ ಅಪ್ಪಣ್ಣ)
            “ಚಂದ್ರಬಲ, ತಾರಾಬಲವೆಂಬಿರಿ ಎಲೆ ಅಣ್ಣಗಳಿರಾ,
            ಚಂದ್ರಂಗೆ ಯಾರ ಬಲ? ಇಂದ್ರಂಗೆ ಯಾರ ಬಲ?
            ಇಂದ್ರಂಗೆ, ಮುಕುಂದಂಗೆ, ಬ್ರಹ್ಮಂಗೆ,
            ಚಂದ್ರಂಗೆ ಸೊಡ್ಡಳನ ಬಲವು ಕೇಳಿರಣ್ಣಾ. (ಸೊಡ್ಡಳ ಬಾಚರಸ)
            “ಆವಾಗಲೂ ಲೋಗರ ಮನೆಯ ಬಾಗಿಲ
            ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು
            ಹೋಗೆಂದಡೆ ಹೋಗವು ಕೆಲವು ದೈವಂಗಳು
            ನಾಯಿಗಿಂತ ಕರಕಷ್ಟ ಕೆಲವು ದೈವಂಗಳು
            ಲೋಗರ ಬೇಡಿಕೊಂಡುಂಬ ದೈವಂಗಳು
            ತಾವೇನ ಕೊಡುವವು ಕೂಡಲಸಂಗಮದೇವಾ. (ಬಸವಣ್ಣನವರು)
            “ಅನ್ಯದೈವವ ಬಿಟ್ಟುದಕ್ಕಾವುದು ಕ್ರಮವೆಂದಡೆ
            ಅನ್ಯದೈವದ ಮಾತನಾಡಲಾಗದು;
            ಅನ್ಯದೈವದ ಪೂಜೆಯ ನೋಡಲಾಗದು;
            ಸ್ಥಾವರಲಿಂಗಕ್ಕೆರಗಲಾಗದು
            ಆ ಲಿಂಗದ ಪ್ರಸಾದವ ಕೊಳ್ಳಲಾಗದು.
            ಇಷ್ಟು ನಾಸ್ತಿಯಾದಡೆ, ಅನ್ಯದೈವವ ಬಿಟ್ಟು ಭಕ್ತನೆನಿಸುವನು
            ಇವರೊಳಗನುಸರಣೆಯ ಮಾಡಿದನಾದಡೆ
            ಕುಂಭೀಪಾಕ ನಾಯಕನರಕದಲ್ಲಿಕ್ಕುವ
            ನಮ್ಮ ಕೂಡಲಸಂಗಮದೇವರು.” (ಬಸವಣ್ಣನವರು)
            “ಶಿವಂಗೆ ಬ್ರಹ್ಮ ವಿಷ್ಣುಂಗಳು ಸರಿಮಿಗಿಲೆನಲಾಗಿ
            ಸುರಿಯವೆ ಬಾಯಲ್ಲಿ ಬಾಲಹುಳುಗಳು?
            ಧರೆ, ಚಂದ್ರ, ರವಿವುಳ್ಳನ್ನಬರ
            ಇರದೆ ಉರಿಯುತ್ತಿಪ್ಪರಯ್ಯಾ ನರಕದ ಕಿಚ್ಚನಲ್ಲಿ.
            ಹರಿಬ್ರಹ್ಮಾದಿ ಸುರರೆಲ್ಲರೂ
            ನಿಮ್ಮ ಡಿಂಗರಿಗರೆಂದರಿದವರಿಗೆ ಪರಮಪದವಯ್ಯಾ
            ಬಸವಪ್ರಿಯ ಕೂಡಲಚನ್ನಸಂಗಮದೇವಾ.” (ಸಂಗಮೇಶ್ವರದ ಅಪ್ಪಣ್ಣ)

          • ಸಹನಾ

            ನಾನು ಹೇಳಿದ ಯಾವ ಸೆಮೆಟಿಕ್ ಲಕ್ಷಣವೂ ಬಸವ ಧರ್ಮದಲ್ಲಿ ಇವೆ ಎಂದು ನೀವು ತೋರಿಸಿಲ್ಲ. ಸುಳ್ಳು ಏಕೆ ಹೇಳುವಿರಿ. ದೈವ/ಲಿಂಗ ಒಂದೇ ಎನ್ನುವ ರೀತಿಯ ವಚನಗಳನ್ನು ಕಾಪಿ ಪೇಸ್ಟ್ ಮಾಡಿದ ತಕ್ಷಣ ಅದು ತಮ್ಮ ವಾದವೆಂದೋ, ತಾರ್ಕಿಕ ಪ್ರಶ್ನೆಎಂದೋ ತೋರಿಸಿದಂತಾಗುತ್ತದೆಯೇ? ಮೊದಲು ವಚನಗಳನ್ನು ಕಾಪಿ ಪೇಸ್ಟ್ ಮಾಡುವುದನ್ನು ಬಿಟ್ಟು ಅವುಗಳು ಹೇಗೆ ನಾನು ಹೇಳಿದ ರೀತಿಯ ಸೆಮಿಟಿಕ್ ಲಕ್ಷಣಗಳೇ ಬಸವಧರ್ಮದಲ್ಲೂ ಇದೆ ಎಂಬುದನ್ನು ಮೊದಲು ತೋರಿಸಿ. ನಂತರ ನೋಡುವ ಅದು ನಾನು ಹೇಳಿದ ಸೆಮೆಟಿಕ್ ಲಕ್ಷಣವೇ, ಇಲ್ಲವೇ ತಮ್ಮ ಅನುಕೂಲಸಿಂಧು ಸೆಮೆಟಿಕ್ ಲಕ್ಷಣವೇ ಎಂದು….

          • santosh anand

            Darga Sir these are people are infected with two viruses. One is harping on colonialism and another is Priestly virus. So when both viruses are infected it become incurable diseases. They dont hv basic common sense that all humanitarian values are same in all the countries and all the time. It is mere waste of time and energy to talk these fools.

      • jayateerth joshi

        Finding maths astrology astronomy and other scientific aspects is equally foolishness and self glorification.

  14. Amaresh

    ರಂಜಾನ್ ಸರ್, ಹತ್ತು ದಿನ ಬಿಡುವಿಲ್ಲದೆ ಕೆಲಸವಿದೆ. ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲು ಮರೆಯಬೇಡಿ. ಎಲ್ಲ ಉತ್ತರಗಳನ್ನು ಒಂದೇ ಸಲ ಓದುವೆ.

  15. Anonymous

    ಅದೆಲ್ಲ ರಗಳೆ ಬೇಡ. ಹರ್ಡೇಕರ್ ಮಂಜಪ್ಪನವರು ಬರೆದದ್ದು ತಪ್ಪು ಎಂದು ಯಾರಾದರೂ ಇತಿಹಾಸಕಾರರು ಹೇಳಿದ್ದಾರೆಯೆ?

    • ಕಟ್ಟಿಮನಿ

      ಹರ್ಡೇಕರ್ ಮಂಜಪ್ಪನವರು ಇತಿಹಾಸ ತಿರುಚಿದ್ದಾರೆಂದು ಯಾರೂ ಹೇಳಿಲ್ಲ. ತಮಗೆ ಅಷ್ಟೂ ಅರ್ಥವಾಗದಿದ್ದರೆ ಏನು ಮಾಡುವುದು?
      ೧) ಹರ್ಡೇಕರ್ ಮಂಜಪ್ಪನವರು ಆ ಘಟನೆಯ ಪ್ರತ್ಯಕ್ಷದರ್ಶಿ ಆಗಿಲ್ಲ.
      ೨) ಅವರು ಆ ಘಟನೆಯ ಬಗ್ಗೆ ಯಾವುದೋ ಆಕರದಿಂದ ಓದಿ/ಕೇಳಿ ಅದರ ಬಗ್ಗೆ ಬರೆದರು.
      ೩) ಅವರು ಆ ಘಟನೆಯ ಸತ್ಯಾಸತ್ಯತೆ ಬಗ್ಗೆ ಸಂಶೋಧನೆ ಮಾಡಲಿಲ್ಲ. ಬಹುಶಃ ಆಕರದಲ್ಲಿದ್ದುದ್ದನ್ನು ಸತ್ಯ ಎಂದು ತಿಳಿದು ಅದರ ಬಗ್ಗೆ ಬರೆದರು.
      ೪) ಅವರು ಯಾವ ಆಕರಗಳನ್ನು ಆಧಾರವಾಗಿಟ್ಟುಕೊಂಡು ಬರೆದರೋ ಅದು ಅವರೇ ಬಲ್ಲರು. (ತಮಗೆ ಗೊತ್ತಿದ್ದರೆ ದಯವಿಟ್ಟು ಮುಂದೆ ಬಂದು ಇಲ್ಲಿ ಹೇಳಿ.)
      ೫) ಸತ್ಯನಿಷ್ಠರಾಗಿದ್ದ ಹರ್ಡೇಕರ್ ಮಂಜಪ್ಪನವರು ಬರೆದರು ಎಂಬ ಏಕೈಕ ಕಾರಣಕ್ಕೆ ಅವರು ಬರೆದದ್ದು ಎಲ್ಲವೂ ಸತ್ಯವಾಗಿರಲೇ ಬೇಕು ಅಂತೇನಿಲ್ಲ, ಅವರ ಆಕರಗಳು ಯಾವುವು, ಅವುಗಳ reliability ಎಷ್ಟು ಅಂತ ಗೊತ್ತಿಲ್ಲದೇ ಇರುವಾಗ.

    • ಕಟ್ಟಿಮನಿ

      ಅಮರೇಶ ಅವರದ್ದು ಅದೇ ಹಳೆ ರಾಗ ಅಂತ ಕರೆದ ರಂಜಾನ್ ದರ್ಗಾ ಅವರು ಏಕೆ ಅಮರೇಶ ಕೇಳಿದ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ?
      Here is another incident from Rajatarangini (English translation by J. C. Dutt):
      “It is narrated of this king that one day, when he was going to the temple of Vijayeshvara, he met a woman on the way who asked him for some food, and when he promised her whatever food she wanted, she changed herself into some deformed shape and asked for human flesh. Unwilling to kill any one to satisfy her unnatural appetite, he promised her to take off what she liked from his own body.”
      Doesn’t this incident read like an episode from the Jataka tales or Kathasaristsagara or a fantasy? How in a world governed by physical laws a woman transform into a deformed shape?! How can some one as scientific in temper like Ranjan Darga believe that such things can happen in the real world?! Rajatarangini is full of such stories. Ranjan Darga cherry picks some of them and presents it as authentic history!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading