(ಭಾಗ ಒಂದು ಇಲ್ಲಿದೆ)
ಅನುಭವ ಮಂಟಪವೆಂಬುದು ಯುವಕರ, ಮಹಿಳೆಯರ ಮತು ದುಡಿಯುವ ಜನರ ವಾಕ್ ಸ್ವಾತಂತ್ರ್ಯದ ತಾಣವಾಯಿತು. ತಮ್ಮ ಭಾಷೆಯಲ್ಲಿ ಅವರು ಮಾತನಾಡುವ ವಾತಾವರಣ ಸೃಷ್ಟಿಯಾದಾಗ ಸಹಸ್ರಾರು ವರ್ಷಗಳಿಂದ ತುಂಬಿಕೊಂಡಿದ್ದ ನೋವು ಒಮ್ಮೆಲೆ ಹೊರಚಿಮ್ಮಿತು. ಹೀಗೆ ಬಸವಣ್ಣವರು ವ್ಯಷ್ಟಿ ಮತ್ತು ಸಮಷ್ಟಿ ಪ್ರಜ್ಞೆಯೊಂದಿಗೆ ಶೋಷಣೆ ಇಲ್ಲದ ನವಸಮಾಜದ ನಿರ್ಮಾಪಕರಾದರು. ಪವಾಡಗಳೆಲ್ಲ ಸುಳ್ಳು. ಆದರೆ ಬಸವಣ್ಣನವರ ಮಾರ್ಗದರ್ಶನದಲ್ಲಿ ಒಂದೇ ತಲೆಮಾರಿನ ದುಡಿಯುವ ವರ್ಗ ಇಷ್ಟೆಲ್ಲ ಸಾಧಿಸಿದ್ದು ಪವಾಡಸದೃಶವಾಗಿದೆ.
ನವ ಸಮಾಜದ ನಿರ್ಮಾಣದಲ್ಲಿ ಕಾಯಕದ ಪಾತ್ರ ಮಹತ್ವದ್ದಾಗಿದೆ. ದಯವೇ ಧರ್ಮದ ಮೂಲ ಎಂದು ಹೇಳಿದ ಬಸವಣ್ಣನವರಿಗೆ ಆ ದಯೆಯ ಮೂಲ ಕಾಯಕದಲ್ಲಿದೆ ಎಂಬದು ಗೊತ್ತಿತ್ತು. ಬರಿ ಮಾತಿನ ದಯೆಯಲ್ಲಿ ಅವರಿಗೆ ನಂಬಿಕೆ ಇರಲಿಲ್ಲ. ದಯೆಯು ವಾಸ್ತವಕ್ಕೆ ಇಳಿಯಬೇಕಾದರೆ ಕಾಯಕದಿಂದ ಮಾತ್ರ ಸಾಧ್ಯ. ‘ಆನುಪರಸೇವೆಯಮಾಡುವೆನಯ್ಯಾ ಜಂಗಮ ದಾಸೋಹಕ್ಕೆಂದು’ಬಸವಣ್ಣನವರು ತಿಳಿಸಿದ್ದಾರೆ. ಬಸವಣ್ಣವರ ಧಾರ್ಮಿಕ ಪರಿಭಾಷೆಯಲ್ಲಿ’ದಯೆ’ ಎಂಬುದು ಸಮಾಜ ಸೇವೆ (ಜಂಗಮ ದಾಸೋಹ) ಆಗಿದೆ. ಆದ್ದರಿಂದ ಕಾಯಕಮಾಡದೆಸಮಾಜ ಸೇವೆಮಾಡಲುಸಾಧ್ಯವಿಲ್ಲ. ಸಮಾಜಸೇವೆಮಾಡದೆ ಧರ್ಮವಂತರಾಗಲು ಸಾಧ್ಯವಿಲ್ಲ. ಆದ್ದರಿಂದ ದುಡಿಯವ ವರ್ಗವೇ ನಿಜವಾದ ಧರ್ಮವಂತ ವರ್ಗವಾಗಿದೆ. ಇದನ್ನೇ ಕಾರ್ಲ್ ಮಾರ್ಕ್ಸ್ ‘ದುಡಿಯುವ ವರ್ಗದ ಸಂಸ್ಕೃತಿ’ ಎಂದು ಕರೆದಿದ್ದಾರೆ. ದುಡಿಯುವವರ ಸಂಸ್ಕೃತಿಗೆ ವಿರುದ್ಧವಾಗಿದ್ದ ವೈದಿಕರ ಕುರಿತು ಕಾರ್ಲ್ ಮಾರ್ಕ್ಸ್ಕ್ಸರ್್ 150 ವರ್ಷಗಳ ಹಿಂದೆ ಬರೆದ ‘ಫಸ್ಟ್ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್’ ಗ್ರಂಥದಲ್ಲಿ ‘ಕ್ರೈಸ್ತರು ಯುರೋಪಿನಲ್ಲಿ ಸೃಷ್ಟಿಸಿದ್ದಕ್ಕಿಂತಲೂ ಭಯಂಕರವಾದ ನರಕವನ್ನುಬ್ರಾಹ್ಮಣರು ಭಾರತದಲ್ಲಿಸೃಷ್ಟಿಸಿದ್ದಾರೆ’ ಎಂದು ತಿಳಿಸಿದ್ದಾರೆ.
‘ಒಂದು ಬಗೆಯ ಸ್ವಾಮಿಗಳು, ಸನ್ಯಾಸಿಗಳು ಮತ್ತು ಬ್ರಾಹ್ಮಣರು ದೇಶವನ್ನು ಅಧೋಗತಿಗೆ ತಳ್ಳಿದ್ದಾರೆ. ಕಳ್ಳತನ ಮತ್ತು ಧೂರ್ತತನದ ಬಗ್ಗೆ ಸದಾ ಯೋಚಿಸುವ ಇವರು ಇಂಥ ತಮ್ಮ ಚಿಂತನೆಗಳು ಧರ್ಮೋಪದೇಶಗಳೆಂದು ನಾಟಕವಾಡುತ್ತಾರೆ. ಜನರಿಂದ ಕಾಣಿಕೆಗಳನ್ನು ಪಡೆಯುತ್ತಾರೆ; ಕೂಡಲೇ ‘ಮುಟ್ಟಬೇಡ’ ಎಂದು ಬೊಬ್ಬೆ ಹಾಕುತ್ತಾರೆ’ ಎಂದು ಸ್ವಾಮಿ ವಿವೇಕಾನಂದ ಅವರು ಟೀಕಿಸಿದ್ದಾರೆ. (ಸಂಪುಟ 6, ಪುಟ 318)
ಕಾಯಕ, ಪ್ರಸಾದ ಮತ್ತು ದಾಸೋಹ ಪದಗಳು ಧರ್ಮಶಾಸ್ತ್ರದ ಪದಗಳಷ್ಟೇ ಅಲ್ಲದೆಬಸವಣ್ಣನವರ ಅರ್ಥಶಾಸ್ತ್ರದಪದಗಳೂ ಆಗಿವೆ. ಕಾಯಕ ಎಂಬುದು ಯೋಗ್ಯ ಉತ್ಪಾದನೆ, ಪ್ರಸಾದ ಎಂಬುದು ಸದ್ಬಳಕೆ ಹಾಗೂ ದಾಸೋಹ ಎಂಬುದು ಸಮಾಜದಲ್ಲಿ ಯೋಗ್ಯ ವಿತರಣೆ. ‘ಕಾಯಕವೇ ಕೈಲಾಸ’ ಎಂಬುದು ಕಾಯಕಜೀವಿಗಳ ಈ ಧರ್ಮದ ಮಹಾವಾಕ್ಯಗಳಲ್ಲಿ ಒಂದಾಗಿದೆ. ಕಾಯಕದಲ್ಲಿ ತೊಡಗುವುದರ ಮೂಲಕ ವ್ಯಕ್ತಿಯೊಬ್ಬ ತನ್ನ ಅರಿವಿನ ವಿಸ್ತಾರದೊಂದಿಗೆ ಉತ್ಪಾದನಾ ವ್ಯವಸ್ಥೆಯ ಭಾಗವಾಗುತ್ತಾನೆ. ತಾನು ಉತ್ಪಾದಿಸಿದ್ದನ್ನು ಪ್ರಸಾದ ಪ್ರಜ್ಞೆಯಿಂದ ಸದ್ಬಳಕೆಮಾಡುವುದರ ಮೂಲಕ ಜನಸಮುದಾಯಕ್ಕೆ ವಸ್ತುವಿನ ಮಹತ್ವವನ್ನು ಅರಹುತ್ತಾನೆ. ದಾಸೋಹಂಭಾವದ ಮೂಲಕ ತನ್ನ ಬಳಿಯಲ್ಲಿದ್ದ ಮಿಗುತಾಯವನ್ನು ಸಾಮಾಜಿಕ ವಿತರಣೆಗೆ ಬಳಸುತ್ತಾನೆ.

ಆಧುನಿಕ ಜಗತ್ತಿನ ಅರ್ಥವ್ಯವಸ್ಥೆ ಹದಗೆಡುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಸವಣ್ಣನವರ ಅರ್ಥಶಾಸ್ತ್ರ ಹೊಸ ರೀತಿಯಲ್ಲಿ ಸರ್ವಸಮತ್ವಭಾವದೊಂದಿಗೆ ಬದುಕುವುದನ್ನು ಕಲಿಸುತ್ತದೆ. ಶರಣರು ವೈಯಕ್ತಿಕ ಸಂಪತ್ತನ್ನು ದಾಸೋಹ ಪ್ರಜ್ಞೆಯೊಂದಿಗೆ ಬಳಸುತ್ತ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳುತ್ತಿದ್ದರು. ಹೀಗೆ ಸಾಮಾಜಿಕ ಪ್ರಜ್ಞೆಯೊಂದಿಗೆ ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ, ಜಾತ್ಯತೀತ ಮನೋಭಾವ, ಲಿಂಗಭೇದ, ವರ್ಣಭೇದ ಮತ್ತು ವರ್ಗಭೇದಗಳನ್ನು ಅಲ್ಲಗಳೆಯುವ ಕ್ರಮ, ಕಾಯಕಜೀವಿಗಳ ಸಂಘಟನೆ, ಕಾಯಕಜೀವಿಗಳಿಗೆ ವಯಸ್ಕರ ಶಿಕ್ಷಣ, ದಲಿತ ಮತ್ತು ಮಹಿಳಾ ಶಿಕ್ಷಣ, ಮಂದಿರ ಮತ್ತು ಮೂರ್ತಿಗಳ ನಿರಾಕರಣೆ, ಶರಣ ಸಂಕುಲದ ಆರ್ಥಿಕ ಸಮಸ್ಯೆಯ ಪರಿಹಾರಕ್ಕಾಗಿ ವ್ಯವಸ್ಥೆಗೊಳಿಸಿದ ‘ಶಿವನಿಧಿ’ ಅಥವಾ ‘ಶಿವನಸೊಮ್ಮು’ ಎಂಬ ಸಾಮಾಜಿಕ ನಿಧಿ ಸ್ಥಾಪನೆ, ಕಾಯಕ ಜೀವಿಗಳ ಕೇಂದ್ರಿತ ಸಮಾಜ ವ್ಯವಸ್ಥೆ, ವಿವಿಧ ಸಾಮಾಜಿಕ ಮೂಲಗಳಿಂದ ಬಂದವರಿಗೆ ಅನುಭವ ಮಂಟಪದಲ್ಲಿ ಲಿಂಗಭೇದವಿಲ್ಲದ ಪ್ರಾತಿನಿಧ್ಯ, ಸಾಮೂಹಿಕ ಚಿಂತನೆ, ಕಾಯಕ, ಪ್ರಸಾದ ಮತ್ತು ದಾಸೋಹದ ಕುರಿತ ಸಮಾಜಮುಖಿ ಕ್ರಾಂತಿಕಾರಿ ಪರಿಕಲ್ಪನೆ ಮತ್ತು ಸಮೂಹ ನಾಯಕತ್ವ ಮುಂತಾದವು ಶರಣರ ಕೊಡುಗೆಗಳಾಗಿವೆ.
‘ಚನ್ನಬಸವಣ್ಣನೆಂಬ ಪ್ರಸಾದಿಯ ಪಡೆದು ಅನುಭವಮಂಟಪವನನುವುಮಾಡಿ ಅನುಭವಮೂರ್ತಿಯಾದ ನಮ್ಮ ಬಸವಯ್ಯನು.’ ಎಂದು ಬಸವಣ್ಣನವರ ಮಡದಿ ನೀಲಮ್ಮನವರು ವಚನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಬಸವಣ್ಣನವರು ಆ ಅನುಭವ ಮಂಟಪದ ಶೂನ್ಯಸಿಂಹಾಸನದ ಮೇಲೆ ಹಿಂದುಳಿದ ನಟುವರ ಜನಾಂಗದ ಜ್ಞಾನಿ ಅಲ್ಲಮಪ್ರಭುಗಳನ್ನು ಕೂಡಿಸಿದರು. ಈ ಪ್ರಸಂಗದಿಂದಾಗಿ ಮನುಧರ್ಮ ಸಿಂಹಾಸನದ ಪ್ರತಿಪಾದಕರು ದಿಗಿಲುಗೊಂಡರು. ಈ ಸನಾತನಿಗಳ ಪ್ರತಿನಿದಿಗಳು ಬಿಜ್ಜಳ ರಾಜನ ಸಲಹೆಗಾರರೂ ಆಗಿದ್ದರು.’ವರ್ಣಾಶ್ರಮ ವ್ಯವಸ್ಥೆಯನ್ನು ಕಾಪಾಡುವುದು ರಾಜಧರ್ಮ’ ಎಂದು ಪ್ರತಿಪಾದಿಸುತ್ತ ರಾಜನ ತಲೆ ಕೆಡಿಸುವಲ್ಲಿ ಯಶಸ್ಸನ್ನು ಸಾಧಿಸಿದರು. ಶೂನ್ಯಸಿಂಹಾಸನವನ್ನು ಶೂದ್ರ ಏರಿದ ಕಾರಣದಿಂದಾಗಿ ಕಾಯಕಜೀವಿ ಶೂದ್ರರು ಮತ್ತು ಅತಿಶೂದ್ರರು ಒಂದಾಗಿ ಒಂದಿಲ್ಲೊಂದು ದಿನ ಸನಾತನಧರ್ಮ ಸಿಂಹಾಸನಕ್ಕೂ ಕಲ್ಯಾಣರಾಜ್ಯದ ರಾಜಸಿಂಹಾಸನಕ್ಕೂ ಗಂಡಾಂತರದ ವಾತಾವರಣ ಸೃಷ್ಟಿಸುವರು ಎಂಬುದನ್ನು ಬಿಜ್ಜಳನಿಗೆ ಮನದಟ್ಟು ಮಾಡಿದರು.
ಬಸವಣ್ಣನವರ ಕ್ರಾಂತಿಕಾರಿ ಚಟುವಟಿಕೆಗಳು ಮುಂದುವರಿಯುತ್ತಲೇ ಇದ್ದವು. ಅವರು ಅಸ್ಪೃಶ್ಯರನ್ನು ‘ಹಿರಿಯಮಾಹೇಶ್ವರರು’ ಎಂದು ಕರೆಯುತ್ತಿದ್ದರು. ಒಂದು ದಿನ ಬಸವಣ್ಣನವರು ಹೊಲಗೇರಿಯಲ್ಲಿನ ಸಂಬೋಳಿ ನಾಗಿದೇವನ ಮನೆಗೆ ಹೋಗಿ ಪ್ರಸಾದ ಸ್ವೀಕರಿಸಿದರು. ಮೈಲಿಗೆಗೊಂಡ ಬಸವಣ್ಣನವರು ಅಲ್ಲಿಂದ ನೇರವಾಗಿ ಅರಮನೆಗೆ ಬರುತ್ತಿದ್ದಾರೆ ಎಂದು ಮಂತ್ರಿಮಂಡಳದ ನಾರಣಕ್ರಮಿತ, ಕೃಷ್ಣಪೆದ್ದಿ, ವಿಷ್ಣುಭಟ್ಟ ಮತ್ತು ಕೇಶವಭಟ್ಟ ಮುಂತಾದವರು ಬಿಜ್ಜಳನ ಕಿವಿಯೂದಿದರು. ಅರಮನೆಯ ಅಂಗಳದಲ್ಲಿ ಒಡ್ಡೋಲಗದ ವ್ಯವಸ್ಥೆ ಮಾಡಿ ‘ಮೈಲಿಗೆಗೊಂಡ’ ಬಸವಣ್ಣನವರ ವಿಚಾರಣೆ ನಡೆಸಿದರು! ಹೀಗೆ ತುಳಿತಕ್ಕೊಳಗಾದವರ ಪರವಾಗಿ ನಿಂತು ಬಹಿರಂಗ ವಿಚಾರಣೆಗೊಳಗಾದ ಇನ್ನೊಬ್ಬ ಪ್ರಧಾನಿ ಎಲ್ಲಿಯೂ ಕಾಣ ಸಿಗುವುದಿಲ್ಲ. (13ನೇ ಶತಮಾನದಲ್ಲೇ ಹರಿಹರ ಹೀಗೆ ಬರೆದದ್ದನ್ನು ‘ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ?’ಎಂದುಪ್ರಶ್ನಿಸುವವರು ಹೇಗೆ ಅರ್ಥೈಸುತ್ತಾರೆ? ಆಗ ಇನ್ನು ಹುಟ್ಟದ ವಸಾಹತುಶಾಹಿಯ ಚಿಂತನಾ ಕ್ರಮವಿದು ಎನ್ನುತ್ತಾರೆಯೆ?)
ವೈದಿಕ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಕಾಯಕಸಿದ್ಧಾಂತದ ಆಧಾರದ ಮೇಲೆ ರಚಿತವಾದ ಶರಣಸಂಕುಲದಲ್ಲಿ ಜಾತಿಗಳು ನಾಶವಾಗಿ ಕೇವಲ ಬಸವಣ್ಣನವರ ನವಮಾನವಧರ್ಮ ಮಾತ್ರ ಬದುಕುವ ಮಾರ್ಗವಾಗಿತ್ತು. ಮನುಧರ್ಮದಲ್ಲಿನ ಶ್ರೇಣೀಕೃತ ಸಮಾಜದಲ್ಲಿ ಸಮಗಾರ ಜಾತಿಯವರಾಗಿದ್ದ ಹರಳಯ್ಯನವರು ಇಷ್ಟಲಿಂಗ ದೀಕ್ಷೆಯ ನಂತರ ಲಿಂಗವಂತರಾದರು. ಆಗ’ಸಮಗಾರ’ ಎಂಬುದು ಜಾತಿಯ ಸಂಕೇತವಾಗಿ ಉಳಿಯದೆ ಕೇವಲ ಕಾಯಕದ ಸಂಕೇತವಾಗಿ ಉಳಿಯಿತು. ಬಿಜ್ಜಳನ ಆಸ್ಥಾನದಲ್ಲಿದ್ದ ಮಧುವರಸರು ಬ್ರಾಹ್ಮಣರಾಗಿದ್ದರು. ಆದರೆ ಲಿಂಗದೀಕ್ಷೆಯ ನಂತರ ಲಿಂಗವಂತರಾದರು. ಈ ಇಬ್ಬರೂ ಬಸವಣ್ಣನವರ ಶರಣಸಂಕುಲದ ಸದಸ್ಯರಾದರು. ಹೀಗೆ ಸಮಗಾರ ಮೂಲದ ಶರಣ ಹರಳಯ್ಯನವರು ಮತ್ತು ಬ್ರಾಹ್ಮಣ ಮೂಲದ ಮಧುವರಸರು ತಮ್ಮ ಜಾತಿಗಳ ಕುರುಹನ್ನು ಕಳೆದುಕೊಂಡು ಬಸವಧರ್ಮದಲ್ಲಿ ಒಂದಾಗಿದ್ದರು. ಅಂತೆಯೆ ಅವರ ಮಕ್ಕಳ ಮದುವೆಯ ನಿಶ್ಚಯ ಮಾಡಲಾಯಿತು. ಮಾನವ ಹಕ್ಕುಗಳ ಪ್ರತಿಪಾದನೆಗೋಸ್ಕರ ಮತ್ತು ಜಾತಿ ವಿನಾಶಕ್ಕಾಗಿ ಹರಳಯ್ಯ ಮತ್ತು ಮಧುವರಸರ ಮಕ್ಕಳ ಮದುವೆಯನ್ನು ಏರ್ಪಡಿಸಿದಾಗ ಪಟ್ಟಭದ್ರ ಹಿತಾಸಕ್ತಿಗಳು ಗದ್ದಲ ಮತ್ತು ಗೊಂದಲ ಸೃಷ್ಟಿಸುವುದರ ಮೂಲಕ ಶರಣರ ಕಗ್ಗೊಲೆ ಮಾಡಿ ವಚನಕಟ್ಟುಗಳನ್ನು ಸುಟ್ಟವು. ಸಹಸ್ರಾರು ಶರಣರು ನಿರಾಶ್ರಿತರಾಗಿ ಕಲ್ಯಾಣ ಬಿಟ್ಟು ಹೋಗಬೇಕಾಯಿತು.
1939ರಿಂದ 1945ರ ವರೆಗೆ ನಡೆದ ಎರಡನೇ ಮಹಾಯುದ್ಧದ ನಂತರ ಜಗತ್ತಿನ ಜನಸಮುದಾಯಗಳಲ್ಲಿ ಮಾನವಹಕ್ಕುಗಳ ಕುರಿತು ವಿಶ್ವಾಸ ಮೂಡಿಸುವ ಮತ್ತು ದೇಶಗಳಿಗೆ ಭದ್ರತೆ ಒದಗಿಸುವ ದೃಷ್ಟಿಯಿಂದ ವಿಶ್ವಸಂಸ್ಥೆಯ ಉದಯವಾಯಿತು. ಆದರೆ 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ತಮ್ಮ ಪರಿಸರದಲ್ಲಿ ಇಂಥ ವಿಶ್ವಸಂಸ್ಥೆಯ ಆಶಯಗಳನ್ನೊಳಗೊಂಡ ಕಾರ್ಯ ನಿರ್ವಹಿಸಿದರು. ಶರಣರು ಮಾನವ ಹಕ್ಕುಗಳ ಕುರಿತು ಚಳವಳಿ ಹೂಡಿದ್ದಕ್ಕೆ ಅವರ ಹತ್ಯಾಕಾಂಡವಾಯಿತು! ಎರಡನೇ ಮಹಾಯುದ್ಧದಲ್ಲಿ 5 ಕೋಟಿ ಜನ ಸತ್ತ ಮೇಲೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ಘೋಷಣೆ ಮಾಡಿತು! ಬದುಕಿನ ಈ ವೈರುಧ್ಯವನ್ನು ಹೋಗಲಾಡಿಸುವುದೇ ಬಸವ ದರ್ಶನದ ಉದ್ದೇಶವಾಗಿದೆ.
ಕುಲಗೋತ್ರಗಳಿಲ್ಲದ, ಜಾತಿ ಉಪಜಾತಿಗಳಿಲ್ಲದ, ಅಸ್ಪೃಶ್ಯತೆ ಇಲ್ಲದ, ವರ್ಗ, ವರ್ಣ ಮತ್ತು ಲಿಂಗಭೇದಗಳಿಲ್ಲದ, ಖಾಸಗಿ ಆಸ್ತಿ ಇಲ್ಲದ ಆದರೆ ಸಾಮೂಹಿಕ ಸಂಪತ್ತಾದ ಶಿವನಿಧಿಯನ್ನು ಹೊಂದಿದ್ದ ಶರಣಸಂಕುಲವು ಪರಿಪೂರ್ಣ ಸಮಾನತೆಯ ಸಮಾಜವಾಗಿದೆ. ‘ಖಾಸಗಿ ಆಸ್ತಿಯು ಮನುಷ್ಯತ್ವದ ವಿರುದ್ಧವಾಗಿರುತ್ತದೆ. ಮನುಷ್ಯತ್ವವು ಖಾಸಗಿ ಆಸ್ತಿಯ ವಿರುದ್ಧವಾಗಿರುತ್ತದೆ’ ಎಂಬುದನ್ನು ತೋರಿಸಿಕೊಟ್ಟವರು ಬಸವಣ್ಣನವರು. ಪ್ರಸಾದ ಪ್ರಜ್ಞೆಯಿಂದ ಬರುವ ದಾಸೋಹಂ ಭಾವದ ಮೂಲಕ ಖಾಸಗಿ ಆಸ್ತಿಯನ್ನು ಸಾಮಾಜಿಕ ಆಸ್ತಿಯಾಗಿಸಿ ಮಾನವೀಯತೆ ಪ್ರಧಾನವಾದ ಶರಣಸಂಕುಲವೆಂಬ ಸರ್ವಸಮತ್ವದ ಸಮಾಜವನ್ನು ನಿರ್ಮಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ.
ಹರಳಯ್ಯ ಮಧುವರಸರು ಲಿಂಗವಂತರಾಗುವ ಮೂಲಕ, ಮನುಧರ್ಮದಿಂದಾಗಿ ಅಂಟಿಕೊಂಡಿದ್ದ ಕೃತ್ರಿಮ ಜಾತಿ ಮತ್ತು ಮೇಲು ಕೀಳುಗಳೆಂಬ ಅಂತಸ್ತುಗಳನ್ನು ಕಳೆದುಕೊಂಡು ನಿಜಮಾನವರಾದರು. ಹರಳಯ್ಯನವರ ಮಗ ಶೀಲವಂತ ಮತ್ತು ಮಧುವರಸರ ಮಗಳು ಲಾವಣ್ಯ ಕೂಡ ಲಿಂಗವಂತರಾದ ಕಾರಣ ಅವರ ಮದುವೆ ಸಹಜವಾಗಿಯೇ ಆಗಬೇಕಿತ್ತು. ಆದರೆ ಬಿಜ್ಜಳನ ಆಸ್ಥಾನದಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳು ಆ ಮದುವೆ ‘ಧರ್ಮಬಾಹಿರ’ ಎಂದುಹುಯಿಲೆಬ್ಬಿಸಿದವು.ಮನುಧರ್ಮದಪ್ರಕಾರ ಆ ಮದುವೆ ಧರ್ಮಬಾಹಿರ ಆಗಿತ್ತು.ಆದರೆಲಿಂಗವಂತ ಧರ್ಮದಪ್ರಕಾರ ಧರ್ಮಸಮ್ಮತವಾಗಿತ್ತು.ಮನುವಾದಿಗಳಿಗೆ ಅದು ಬ್ರಾಹ್ಮಣ ಕನ್ಯಾ ಮತ್ತು ಸಮಗಾರ ವರನ ಮಧ್ಯೆ ನಡೆಯುವ ಮದುವೆಯಾಗಿತ್ತು. ಶರಣ ಸಂಕುಲದ ಪ್ರಕಾರ ಅದು ಲಿಂಗವಂತರ ಮದುವೆಯಾಗಿತ್ತು.
ಲಿಂಗವಂತ ಧರ್ಮವು ಸನಾತನವಾದಿಗಳ ಚೌಕಟ್ಟಿನ ಧರ್ಮವಲ್ಲ. ಇದು ಚೌಕಟ್ಟಿಲ್ಲದ ಬಯಲಧರ್ಮ. ‘ಶೂನ್ಯ’ ಎಂಬದು ಬಯಲೇ ಆಗಿದೆ. ಇದು ಸಕಲ ಚರಾಚರಗಳ ಸಮೇತ ಎಲ್ಲವನ್ನೂ ಒಳಗೊಂಡಿದೆ.’ಎಲ್ಲರೂ ನಮ್ಮವರು. ಯಾರೂ ಹೊರಗಿನವರಲ್ಲ’ ಎಂಬುದು ಲಿಂಗವಂತ ಧರ್ಮವಾದ ಬಸವಧರ್ಮದ ಘೋಷಣೆಯಾದರೆ, ವರ್ಣ, ಜಾತಿ, ಉಪಜಾತಿ, ವರ್ಗ ಮತ್ತು ಲಿಂಗಭೇದ ಸೃಷ್ಟಿಸಿ ನಿರಂತರ ಶೋಷಣೆಯ ಸಮಾಜವನ್ನು ಮುಂದುವರಿಸುವುದೇ ಮನುಧರ್ಮದ ಉದ್ದೇಶವಾಗಿದೆ.
ಮಾನವ ಘನತೆ ಮತ್ತು ಮಾನವ ಹಕ್ಕುಗಳಿಗಾಗಿ ಮನುಧರ್ಮದ ಕ್ರೌರ್ಯದ ವಿರುದ್ಧ ಹೋರಾಡಿದ ಶರಣರು, ತತ್ತ್ವದ ಅನುಷ್ಠಾನಕ್ಕಾಗಿ ತಮ್ಮ ಭೌತಿಕ ಸಂಪತ್ತನ್ನು ಕಳೆದುಕೊಳ್ಳಲು ಸಿದ್ಧರಾದರು. ಹರಳಯ್ಯ ಮಧುವರಸರ ಮಕ್ಕಳ ಮದುವೆಗೆ ಮನುವಾದಿಗಳ ಮತ್ತು ದೊರೆ ಬಿಜ್ಜಳನ ವಿರೋಧವಿದ್ದಾಗ್ಯೂ ಶರಣರು ಆ ಮದುವೆಯನ್ನು ಸಾವಿಗಂಜದೆ ನೆರವೇರಿಸಿದರು. ಆಗ ಮನುವಾದಿಗಳಿಂದಾಗಿ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲವಾಯಿತು. ತಮ್ಮ ನಿಜ ಸಂಪತ್ತಾಗಿದ್ದ ವಚನಕಟ್ಟುಗಳ ರಕ್ಷಣೆಗಾಗಿ ಅವರು ಯಾವುದನ್ನೂ ಲೆಕ್ಕಿಸದೆ ಕಲ್ಯಾಣವನ್ನು ತೊರೆದರು. ಒಂದು ಜಾತ್ಯತೀತ ಮದುವೆಗಾಗಿ ಶರಣರು ಎಲ್ಲವನ್ನೂ ಕಳೆದುಕೊಂಡು ಮಾನವ ಘನತೆಯ ರಕ್ಷಣೆ ಮಾಡಿದರು.’ನಡೆನುಡಿ ಸಿದ್ಧಾಂತ’ದಿಂದ ಕೂಡಿದ ತತ್ತ್ವಕ್ಕಾಗಿ ಅನೇಕ ಸಾತ್ವಿಕರು ಹುತಾತ್ಮರಾಗಲು ಕಾರಣವಾದ ‘ಕಲ್ಯಾಣಕ್ರಾಂತಿ’ ಎಂಬ ಇಂಥ ಘನಘೋರ ಘಟನೆಮಾನವ ಚರಿತ್ರೆಯಲ್ಲಿ ಇನ್ನೊಂದಿಲ್ಲ! ನಿಜವಾದ ಅರ್ಥದಲ್ಲಿ ಆ ಘಟನೆ ಕಲ್ಯಾಣಕ್ರಾಂತಿ ಅಲ್ಲ. ಕಲ್ಯಾಣದಲ್ಲಿ ಬಸವಾದಿ ಶರಣರಿಂದ ನಡೆಯಬೇಕಿದ್ದ ಕ್ರಾಂತಿಯನ್ನು ತಡೆದಂಥ ಮನುವಾದಿಗಳ ಕ್ಷಿಪ್ರಕ್ರಾಂತಿ. ಶರಣರ ಜನಾಂಗಹತ್ಯೆ ನಡೆದ ಈ ದುರ್ಘಟನೆ ಮಾನವೀಯತೆಯ ಮೇಲೆ ನಡೆದ ಅತ್ಯಾಚಾರವಾಗಿದೆ. ಬಿಜ್ಜಳನ ಕಲ್ಯಾಣದೊಳಗೆ ಬಸವಣ್ಣನವರ ಕಲ್ಯಾಣ ಸೃಷ್ಟಿಯಾಗಿತ್ತು. ಬಸವಣ್ಣನವರ ಕಲ್ಯಾಣದಲ್ಲಿ ಪ್ರತಿಕ್ಷಣ ಕ್ರಾಂತಿ ನಡೆಯುತ್ತಿದ್ದರೆ. ಬಿಜ್ಜಳನ ಕಲ್ಯಾಣದ ವೈದಿಕರು ಪ್ರತಿಕ್ಷಣ ಕ್ಷಿಪ್ರಕ್ರಾಂತಿಯ ಲೆಕ್ಕ ಹಾಕುತ್ತಿದ್ದರು. ಕೊನೆಗೆ ಅವರು ಕ್ಷಿಪ್ರಕ್ರಾಂತಿ ಮಾಡಿಬಿಟ್ಟರು!

ನೋಡು ನೋಡು ನೋಡು ನೋಡು ನೋಡು ಲಿಂಗವೆ
ನೋಡು ಬಸವಯ್ಯನವರು ಮಾಡಿದಾಟವ //ಪ//
ಹರಳಯ್ಯ ಮಧುವಯ್ಯನವರಿಗೆ ಎಳೆಹೂಟೆ
ದುರುಳ ಬಿಜ್ಜಳನು ಕಟ್ಟಿದನೆಂದರೆ
ಇರಬಾರದಲ್ಲೀಗ ಶರಣರಿಗರುಹಿರೆಂ
ದರಸು ಬಸವರಾಜ ಪೇಳ್ದರಂತೆ.
ನುಡಿಯ ಲಾಲಿಸು ಬೇಗ ಕೆಡುವುದೀ ಕಲ್ಯಾಣ
ಒಡೆಯ ಸಂಗಮನೊಳು ಬೆರೆವರಂತೆ.
ತಡ ಮಾಡಬೇಡಿರಿ ಮಡದಿಯರಿಗರುಹಿರೆಂದು
ಒಡೆಯ ಬಸವರಾಜ ನುಡಿದರಂತೆ.
ಅಲ್ಲಿಗೆ ಎಮ್ಮನು ಬರಲು ಹೇಳಿದರಂತೆ
ಅಲ್ಲಿದ್ದ ಸಂಗಮನಿಲ್ಲಿಲ್ಲವೆ?
ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವು
ಬಲ್ಲ ಮಹಾತ್ಮರಿಗಿದು ಗುಣವೆ?
ಅಪ್ಪ ಅಣ್ಣಯ್ಯಗಳೆನ್ನ ಕರೆಯ ಬಂದಿಹರು
ಕಪ್ಪಡಿ ಸಂಗಮನಾಥ ಕೇಳೋ
ಪುಷ್ಪಕ್ಕೆ ಪರಿಮಳವ ಬೆರೆದಂತೆ ಎನ್ನ
ನಪ್ಪಿದ ಲಿಂಗವೆ ಮಾತನಾಡೋ.
ಸಂಗನಬಸವನ ನಿರೂಪವ ತಾಳುತೆ
ಹಿಂಗದೆ ಕರವೆತ್ತಿ ನಮಿಸುತಲಿ
ಸಂಗಮನಾಥನೆ ಈತನೆಂದು ಎ
ನ್ನಂಗಯ್ಯ ಲಿಂಗವೆ ಮಾತನಾಡೋ.
-ನೀಲಮ್ಮ
ದೃಢನಿರ್ಧಾರದಿಂದ ಕೂಡಿದ ನೀಲಮ್ಮನ ಈ ಹೃದಯಸ್ಪರ್ಶಿ ಸ್ವರವಚನ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಎಳೆಹೂಟೆ ಶಿಕ್ಷೆ ವಿಧಿಸಿದ ನಂತರ ಕಲ್ಯಾಣದ ಘಟನೆಗಳನ್ನು ಈ ಸ್ವರವಚನ ಸೂಕ್ಷ್ಮವಾಗಿ ವಿವರಿಸುತ್ತದೆ. ಬಸವಣ್ಣನವರು ಮಾಡಿದ ಆಟ (ಆಡಿದ ಆಟ ಅಲ್ಲ) ಯಾವುದು ಎಂಬುದನ್ನು ನೀಲಮ್ಮ ಸೂಚ್ಯವಾಗಿ ತಿಳಿಸಿದ್ದಾರೆ. ಮನುಷ್ಯರನ್ನು ಬೇರ್ಪಡಿಸುವ ಸಮಾಜದಿಂದ ಮನುಷ್ಯರನ್ನು ಒಂದಾಗಿಸುವ ಸಮಾಜದ ಕಡೆಗೆ ಜನಸಮುದಾಯವನ್ನು ಒಯ್ಯುವ ಯೋಜನೆಯನ್ನು ಬಸವಣ್ಣನವರು ರೂಪಿಸಿದ್ದರು. ಯಥಾಸ್ಥಿತಿವಾದಿಗಳು ಆ ಯೋಜನೆಯನ್ನು ನುಚ್ಚುನೂರು ಮಾಡಿದರು.
(ಮುಂದುವರೆಯುತ್ತದೆ…)






ಮಾನ್ಯರೇ ರಂಜಾನ ದರ್ಗಾ ಅವರ ಲೇಖನ ಸರಣಿಗಳು ಹಲವಾರು ವಚನಗಳ ಪ್ರಮುಖ ಆದರ್ಶಗಳನ್ನು ಒಳಗೊಂಡಿವೆ. ಸ್ವಾತಂತ್ರ್ಯ ಸಮಾನತೆ ಮತ್ತು ಸ್ವಾಭಿಮಾನ ಇವುಗಳೆ ಬಸವಣ್ಣನ ತತ್ವಗಳಾಗಿವೆ. ಶಿವ ಬಕ್ತರನ್ನೆಲ್ಲ ಒಂದೇ ಎಂಬೆ ಇದುವೇ ಅವರ ನಿಲುವು. ಭಕ್ತಿ ಮಾರ್ಗದಿಂದ ಕಾಯಕದಲ್ಲಿ ಶಿವನನ್ನು ಕಾಣು. ಇದು ಅವರ ಸಿದ್ಧಾಂತ. ಎಲ್ಲ ವರ್ಣದವರನ್ನು ಒಗ್ಗೂಡಿಸುವುದೇ ಸರಿಸಮಾನತೆ ತರುವುದೇ ಅವರ ಆದರ್ಶ ಸಮಾಜದ ಪರಿಕಲ್ಪನೆಯಾಗಿತ್ತು. ಶೂದ್ರರನ್ನೂ ಮತ್ತು ಅತಿ ಶೂದ್ರರನ್ನೂ ಒಗ್ಗೂಡಿಸುವುದು ಕೂಡಾ ಅವರ ಏಜೆಂಡಾವಾಗಿತ್ತು. ಜಪಾನಿನಲ್ಲಿಯೂ ಅಸ್ಪ್ರಶ್ಯತೆ ಇದೆ. ಎಂದು ಮರಾಠಿ ದಲಿತ ಕಾದಂಬರಿಕಾರರೊಬ್ಬರು ಬರೆದಿದ್ದಾರೆ. ಅದು ಅಲ್ಲಿ ಹೇಗೆ ಬಂತು? ನಮ್ಮ ದೇಶದಲ್ಲಿ ಹೇಗೆ ಪ್ರಾರಂಭಗೊಂಡಿತು? ಎಲ್ಲ ವರ್ಣದವರನ್ನು ಒಗ್ಗೂಡಿಸುವುದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ ಅಲ್ಲವೇ?
ರಂಜಾನ್ ದರ್ಗಾರ ಈ ಲೇಖನ ಪ್ರಕಟವಾಗಿದ್ದಾಗ ಫೇಸ್ಬುಕ್ ನಲ್ಲಿ ಒಬ್ಬರು ಈ ರೀತಿ ಪ್ರತಿಕ್ರಿಯಿಸಿದ್ದರು:
ನೀವು ಕೊಟ್ಟ ರಂಜಾನ ದರ್ಗಾ ಲೇಖನದ ಕೊಂಡಿ ನನ್ನ ಕಣ್ಣನ್ನು ತೆರೆಸಿ ಬಿಟ್ಟಿತು!..ಹೊಸ ಹೊಸ ವಿಷಯ, ಹೊಸ ಹೊಸ ಶಬ್ದಗಳನ್ನು ತಿಳಿಸಿಕೊಟ್ಟಿತು. ನನಗೆ ಗೊತ್ತೆ ಇರಲಿಲ್ಲ, ಈ ಬ್ರಾಹ್ಮಣರು ಶೂದ್ರ ದೇವತೆಗಳನ್ನು ಕೂಡ ಶೋಷಿಸಿದ್ದಾರೆಂದು. ಮಾನವ ಹಕ್ಕುಗಳ ಚಳವಳಿ, ಕಾಯಕಜೀವಿಗಳ ಸಂಘಟನೆಯ ಮಾರ್ಕ್ಸಗೆ, ವಿಶ್ವ ಸಂಸ್ಥೆಯ ಸ್ಥಾಪನೆಗೆ ವಚನ ಚಳವಳಿಯೇ ಪರೋಕ್ಷವಾಗಿ ಪ್ರೇರಕವಾಗಿತ್ತು ಎಂಬದನ್ನು ಕೇಳಿ ತುಂಬಾ ಸಂತೋಷವಾಯಿತು. ವಿಶ್ವಬ್ಯಾಂಕ್ ಸ್ಥಾಪನೆಗೆ ವೈದಿಕರ ಪರೋಕ್ಷ ಹುನ್ನಾರ ಕಾರಣವಾಗಿರಬಹುದು ಎಂಬ ಬಲವಾದ ಅನುಮಾನ ನನಗಿದೆ. ಬಲ್ಲವರಾದ ರಂಜಾನ ದರ್ಗಾರವರು ಈ ವಿಷಯದ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲಬೇಕು. ‘ಮನುಧರ್ಮ ಸಿಂಹಾಸನದ ಪ್ರತಿಪಾದಕರು’ ಎಂಬ ಹೊಸ ಶಬ್ದ ಪ್ರಯೋಗವನ್ನು ನೋಡಿ ಹಾಲು ಕುಡಿದಷ್ಟು ಸಂತೋಷವಾಗಿತು. ಅಕಸ್ಮಾತ ಆ ಮನುವೇ ಬಂದು ತಪ್ಪಾಯಿತು ನಂದು, ತಪ್ಪರ್ಥ ಮಾಡಿಕೊಂಡಿದ್ದೀರಿ ಅಂದರೂ ಈ ವೈದಿಕರನ್ನು ಹಾಗೇಯೇ ಬಿಡಬಾರದು, ಹೀಗೇಯೇ ಹೊಸ ಹೊಸ ಶಬ್ದಗಳನ್ನು ಹುಡುಕಿ ಈ ಜನರನ್ನು ತೆಗಳಬೇಕು. ಏಕದೇವ ಪ್ರಜ್ಞೆ, ಏಕದೇವೋಪಾಸನೆಯ ಸಿದ್ಧಾಂತಗಳು ರಂಜಾನ ದರ್ಗಾರಿಗೆ ಸಂತೋಷಕೊಟ್ಟಿದ್ದು ಸಹಜವೆ. ಅವರ ಧರ್ಮ ಮತ್ತು ಶರಣ ಧರ್ಮದಲ್ಲಿ ಸಾಕಷ್ಟು ಸಾಮ್ಯತೆ ಇರುವುದರಿಂದ, ಅವರು ತಮ್ಮ ಅನುಯಾಯಿಗಳೊಂದಿಗೆ ಶರಣ ಧರ್ಮ ಸ್ವೀಕಾರ ಮಾಡಿ ನಮ್ಮೆಲ್ಲರಿಗೆ ತಮ್ಮ ಪ್ರಭಾವಶಾಲಿ ವಿಚಾರಗಳಿಂದ ಬೆಳಕು ತೋರಬೇಕೆಂದು ನನ್ನ ಕಳ ಕಳಿಯ, ಅರ್ತತೆ ತುಂಬಿದ ಪ್ರಾರ್ಥನೆ.
ಹೌದು..ಸುನಾಮಿ, ಭೂಕಂಪ, ಕಾಶ್ಮೀರ ಸಮಸ್ಯೆ, ದೇಶದಾದ್ಯಂತ ನಡೆಯುವ ಕೋಮುಗಲಭೆ, ಬ್ಷಷ್ಟಾಚಾರ, ರಸ್ತೆ ಅಪಘಾತ, ವಿಮಾನ ಅಪಘಾತ ಮುಂತಾದ ಸಮಸ್ಯೆಗಳಿಂದ ಹಿಡಿದು ಯಡಿಯೂರಪ್ಪನವರನ್ನು ಅನ್ಯಾಯವಾಗಿ ಇಳಿಸಿದ್ದು, ಈ ಯಾವುದೇ ಸಮಸ್ಯೆ ತೆಗೆದುಕೊಂಡರೂ, ಈ ಎಲ್ಲ ಘಟನೆಗಳ ಹಿಂದೆ ವೈದಿಕ ಕುತಂತ್ರತನ, ಹುನ್ನಾರ, ಗುಪ್ತಕಾರ್ಯಸೂಚಿ ತುಂಬಿದೆಯೆಂದರೆ ಸುಳ್ಳಾಗಲಾರದು. ಇವೆಲ್ಲವನ್ನು ತಿಳಿಯಲು ನಿಮಗೆ ಸೂಕ್ಷ್ಮ ಮನಸ್ಸಿರಬೇಕು..ಆಗ ಮಾತ್ರ ಈ ಹುನ್ನಾರಗಳು ಅರ್ಥ ಆಗುತ್ತವೆ. ನಿಮಗೆ ಒಂದೆರಡು ಉದಾಹರಣೆಯಗಳನ್ನು ವಿವರಿಸಿ ಹೇಳ್ತೆನೆ :
ರಸ್ತೆ ಅಪಘಾತ – ಕೆಳ ವರ್ಗದ ಶೂದ್ರರು, ಕಾಯಕ ಜೀವಿಗಳೆಲ್ಲ ಊರು ಬಿಟ್ಟು ಹೋಗಬೇಕು, ಊರನ್ನು ತಾವು ಆಳಬೇಕು ಎಂಬ ವೈದಿಕರ ಹುನ್ನಾರದ ಭಾಗವಾಗಿಯೇ ಪ್ರಾರಂಭವಾದದ್ದು ಈ ರಸ್ತೆ ನಿರ್ಮಾಣ.. (ವರ್ತಮಾನದಲ್ಲಿ ಈ ತಂತ್ರಗಾರಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಬಿಹಾರದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಲಾಲೂಪ್ರಸಾದ ಯಾದವರವರು, ಅವರ ಕಾಲದಲ್ಲಿ ಬಿಹಾರದ ಹಳ್ಳಿಗಳಿಗೆ ರಸ್ತೆಯಾಗಲೂ ಬಿಡಲೇ ಇಲ್ಲ)..ಹೀಗೇ ರಸ್ತೆ ನೋಡಿ ಮರುಳಾಗಿ ಕಾಯಕ ಜೀವಿಗಳು ಊರು ಬಿಟ್ಟು ಹೊರಟಾಗ ಸಂಭವಿಸಿದ ಅಪಘಾತಗಳು ಹೆಚ್ಚಿನ ಬಲಿ ತೆಗೆದುಕೊಂಡದ್ದು ಯಾರನ್ನು ಅಂತೀರಿ?. ಇನ್ನು ಈ ರಸ್ತೆ ಮಾಡುವ ಇಂಜಿನೀಯರುಗಳಲ್ಲಿ ವೈದಿಕ ಕುಲಕ್ಕೆ ಸೇರಿದವರು ಕೆಲವರಾದರೂ ಇದ್ದಿದ್ದರು. ಇವರು ರಸ್ತೆ ನಿರ್ಮಾಣದಲ್ಲಿ, ಸಮತಟ್ಟಿನಲ್ಲಿ ಬೇಕೆಂದೆ, ಕಣ್ಣಿಗೆ ಕಾಣದಂತಹ ವ್ಯತ್ಯಾಸ ಮಾಡಿ ಅಪಘಾತಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿರಬಾರದೇಕೆ?
ಇನ್ನು ಯಡಿಯೂರಪ್ಪನವರ ಕಥೆ – ಸುವ್ಯವಸ್ಥಿತವಾಗಿ ತಂತ್ತ ಮಾಡಿ ಯಡಿಯೂರಪ್ಪನವರು ಆಕ್ರಮ ಆಸ್ಥಿ, ಗಳಿಕೆ ಮಾಡುವಂತೆ ಮಾಡಿದ್ದು ಕೇಶವಶಿಲ್ಪದಲ್ಲಿ ಕುಳಿತ ವೈದಿಕರು. ಮುಗ್ಧರಾದ ಯಡಿಯೂರಪ್ಪನವರಿಗೆ ಈ ತಂತ್ರಗಾರಿಕೆ ಅರ್ಥವಾಗಲೇ ಇಲ್ಲ..ಅವರು ಖುಷಿಯಿಂದ ಆಸ್ತಿ ಬೆಳೆಸುತ್ತಲೇ ಉಳಿದರು. ಕೊನೆಗೆ ಅಧಿಕಾರದಿಂದ ಇಳಿದರು.
ಸುನಾಮಿ ಹೊತ್ತಿಗೆ ಸರಿಯಾದ ಮಾಹಿತಿ ಕೊಡದೆ, ಕೆಳವರ್ಗದ ಬಡ ಮೀನುಗಾರರ ಸಾವು, ಆಸ್ತಿ ಪಾಸ್ತಿಗೆ ಹಾನಿಯಾಗುವಂತೆ ಮಾಡಿದ್ದು ಅಲ್ಲಿನ ಹವಾಮಾನ ಇಲಾಖೆಯಲ್ಲಿ ಕುಳಿತ ಒಬ್ಬ ವೈದಿಕ ಕುಲದವನ ಹುನ್ನಾರ ಇರಬಹುದೆ ಎಂಬುದು ನನಗೆ ಇನ್ನೂ ಕಾಡುತ್ತಿದೆ. ಹೀಗೆ ಈ ವೈದಿಕರ ಗುಪ್ತಕಾರ್ಯಸೂಚಿಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ನಾನು ಕೊಟ್ಟ ಎಲ್ಲ ಉದಾಹರಣೆಗಳ ಹಿಂದಿರುವ ವೈದಿಕ ಹುನ್ನಾರ, ಗುಪ್ತ ಕಾರ್ಯಸೂಚಿಯನ್ನು ನಾನು ವಿವರಿಸಿ ಹೇಳಬಲ್ಲೆ..ಆದರೆ ಈಗ ಸಮಯದ ಅಭಾವ..ಕ್ಷಮೆಯಿರಲಿ.
ಈ ವೈದಿಕರ ವಿರುದ್ದದ ಚಳುವಳಿ ಉಗ್ರವಾಗಿ ನಡೆಯಬೇಕು. ಇದರ ನೇತ್ರತ್ವವನ್ನು ಶರಣರಾದ, ಕಾಯಕಯೋಗಿಗಳಾದ ಶ್ರೀಯುತ ರಾಜೇಂದ್ರ ಚೆನ್ನಿಯವರು ವಹಿಸಬೇಕು ಎಂದು ನನ್ನ ಕೋರಿಕೆ. ನನಗೆ ಗೊತ್ತು ಕುವೆಂಪು ವಿ.ವಿಯಲ್ಲಿ ರಾಜೇಂದ್ರ ಚೆನ್ನಿಯವರೆಲ್ಲಿ ಎಂದು ಕೇಳಿದರೆ ..ಒ ಅಲ್ಲಿ ಬೋರ್ಡಲ್ಲಿದ್ದಾರೆ ನೋಡಿ ಎಂದು ಆಫೀಸ್ ಮುಂದಿನ ನೇಮ್ ಪ್ಲೇಟ್ ತೋರಿಸಿ ವ್ಯಂಗ ಮಾಡುವ ವೈದಿಕಶಾಹಿ ಮನಸ್ಸಿನವರಿದ್ದಾರೆ. ಈ ಮೂಢರಿಗೇನು ಗೊತ್ತು..ನಮ್ಮ ಚೆನ್ನಿಯವರು ಬಸವಣ್ಣನವರ ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎಂಬ ತತ್ವದಲ್ಲಿ ನಂಬಿಕೆ ಇಟ್ಟವರೆಂದು..ಅವರು ಜಂಗು ಹಿಡಿಯಬಾರದೆಂದು ಸುತ್ತಾಡುತ್ತಲೇ ಇರುತ್ತಾರೆ..ಶರಣ ತತ್ವವನ್ನು ಪ್ರಚಾರ ಮಾಡುತ್ತಲೇ ಇರುತ್ತಾರೆ, ಬೆಳಿಗ್ಗೆ/ರಾತ್ರಿ ಎಂದು ಭೇದವೆಣಿಸದೇ ಕಾಯಕ ಮಾಡುತ್ತಲೇ ಇರುತ್ತಾರೆಂದು.. ಈಗ ಶರಣಧರ್ಮದ ನಿಜವಾದ ಅನುಯಾಯಿಗಳು ಅಂತ ಯಾರಾದರೂ ಇದ್ದಲ್ಲಿ ಅದು ಶ್ರೀಯುತ ರಾಜೇಂದ್ರ ಚೆನ್ನಿಯವರು..ಶರಣ ಬಾಂಧವರೆಂದು ಯಾರನ್ನಾದರೂ ಕರೆಯಬಹುದೆಂದರೆ ಅದು ಶ್ರೀಯುತ ರಂಜಾನ ದರ್ಗಾರವರನ್ನು. ಮತ್ತೊಮ್ಮೆ ವೈದಿಕಶಾಹಿಗಳಿಗೆ ಧಿಕ್ಕಾರ.. ಅವರ ಕೈಯಲ್ಲಿ ಆಗ ಮನುಧರ್ಮದ ಅಸ್ತ್ರವಿದ್ದರೆ, ಈಗ ಅವರನ್ನು ತುಳಿಯಲು ನಮ್ಮ ಹತ್ತಿರ ಸಂವಿಧಾನ ಧರ್ಮದ ಅಸ್ತ್ರವಿದೆ..ಜಯವಾಗಲಿ ನಮಗೆ!
ರಂಜಾನ್ ದರ್ಗಾ ರವರ ಲೇಖನದಲ್ಲಿ ಏನೂ ಹೊಸತಿಲ್ಲ, ಅದೇ ಮಾರ್ಕ್ಸ್ ಮತ್ತು ವಚನ ಸೇರಿಸಿ ಒಂದು ಕಾಕ್ಟೈಲ್ ಮಾಡಿದ್ದಾರೆ ಅಷ್ಟೇ. ಇತ್ತೀಚೆಗಿನ ಕೂಗುಮಾರಿ “ಬುದ್ಧಿಜೀವಿ” ಸಂಪ್ರದಾಯದ ಬ್ರಾಹ್ಮಣರನ್ನು ತೆಗಳುವ ಆಧಾರಹೀನ ಚರ್ವಿಥಚರ್ವನ ಲೇಖನವಾಗಿದೆ. ಇದನ್ನು ಓದಿದಾಗ ಒಂದು ವಚನ ಮತ್ತೆ ಮತ್ತೆ ನೆನಪಿಗೆ ಬರುತ್ತಿದೆ…” ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ಮನವ ಸಂತಹಿಸಿ ಕೊಳ್ಳಿ ..”
ಲೋಕದ ಡೊಂಕ ನೀವೂ ಏಕೆ ತಿದ್ದುವಿರಿ? ಹಾಗೂ ಹೀಗೂ ನಿಮ್ಮ ಮನವನ್ನು ಸಂತೈಸಿಕೊಳ್ಳಿ.
ಸಂಪಾದಕರ ಗಮನಕ್ಕೆ..
ಲೇಖನದ ಜೊತೆಗಿರುವ ಚಿತ್ರದಲ್ಲಿರುವ ಹಾವು ಹಸಿರು ಬಣ್ಣದ್ದಾಗಿದೆ..ಅಪಾರ್ಥ ಉಂಟುಮಾಡುವಂತಿದೆ. ಅದು ಕೇಸರಿ ಬಣ್ಣದ್ದಾಗಬೇಕು. ಈ ಪ್ರಮಾದ ಕಲಾವಿದರ ಕಣ್ತಪ್ಪಿನಿಂದ ಅಥವಾ ವಿಷಯ ತಿಳುವಳಿಕೆಯ ಕೊರತೆಯಿಂದ ಆಗಿರಬಹುದೆಂದು ಭಾವಿಸುತ್ತೇನೆ. ಈ ಪ್ರಮಾದವನ್ನು ಕೂಡಲೇ ಸರಿಪಡಿಸಬೇಕೆಂದು ಕೋರಿಕೆ.
ಬಣ್ಣದ ಬಗ್ಗೆ ಭ್ರಮೆ ಬೇಡ. ನನ್ನ ಮನೆತನದವರು ನಂಬಿದ ಸೂಫಿ ಸಂತ ಖ್ವಾಜಾ ಅಮೀನುದ್ದೀನ್ ಪರಂಪರೆಯ ಸಜ್ಜಾದಾ ನಶೀನ್ ಗಳು ಈಗಲೂ ಕೇಸರಿ ಬಣ್ಣದ ರುಮಾಲನ್ನು ಸುತ್ತುತ್ತಾರೆ. ಕೊಡೆಕಲ್ ಬಸವಣ್ಣನವರ ಸಂಪ್ರದಾಯದ ಸ್ವಾಮಿಗಳು ಇಂದಿಗೂ ಹಸಿರು ರಮಾಲನ್ನೇ ಸುತ್ತುತ್ತಾರೆ. ಅಮೀನುದ್ದೀನರ ಶಿಷ್ಯ ಶಿರಹಟ್ಟಿ ಫಕೀರಸ್ವಾಮಿಯ ಪರಂಪರೆಯವರೂ ಹಸಿರು ರುಮಾಲನ್ನೇ ಸುತ್ತುತ್ತಾರೆ. ಅಮೀನುದ್ದೀನರ ಉರಸು ಶಿರಹಟ್ಟಿಯ ಸ್ವಾಮಿಗಳಿಲ್ಲದೆ ನಡೆಯುವುದಿಲ್ಲ. ಶಿರಹಟ್ಟಿ ಜಾತ್ರೆ ಅಮೀನುದ್ದೀನ ದರ್ಗಾದ ಸಜ್ಜಾದಾ ನಶೀನರಿಲ್ಲದೆ ನಡೆಯುವುದಿಲ್ಲ. ಭಾರತ ಅದ್ಬುತವಾಗಿದೆ. ಅದು ಯಾವ ಧರ್ಮೀಯರ ಸೊತ್ತೂ ಅಲ್ಲ. ಭಾರತೀಯರ ಸೊತ್ತು.
ಗಾಣದ ಕಣ್ಣಪ್ಪ ಎಂಬ ಶಿವಭಕ್ತನೊಬ್ಬನಿದ್ದನು. ಬೆಸ್ತರವನಾದ ಆತನದು ಮೀನು ಹಿಡಿಯುವ ಕಾಯಕ. ಬಂದ ಹಣದಲ್ಲಿ ದಾಸೋಹ ನಡೆಸುವ ಶಿವಭಕ್ತ. ಒಮ್ಮೆ ಗಣಪರ್ವ ನಡೆಸಿದಾಗ, ದಾಸೋಹಕ್ಕೆಂದು ಬಂದ ಜಂಗಮರು, ಆತ ಬೆಸ್ತರವನೆಂದು ತಿಳಿದು, ಆತನ ಲಿಂಗವನ್ನು ಕಿತ್ತುಕೊಂಡು ಹೋಗುತ್ತಾರೆ. ಸಂಜೆ, ಅವರೆಲ್ಲಾ ಇಷ್ಟಲಿಂಗಪೂಜೆಗೆ ಕುಳಿತಾಗ ಅವರ ಕರಡಿಗೆಗಳಲ್ಲಿ ಲಿಂಗವೇ ಇರುವುದಿಲ್ಲ. ಬಸವಣ್ಣನಿಗೆ ವಿಷಯ ತಿಳಿದು, ಕಣ್ಣಪ್ಪನಿಗೆ ಅವಮಾನ ಮಾಡಿದ್ದು ತಪ್ಪು. ಆತನ ಕ್ಷಮೆ ಕೇಳಲೇಬೇಕು ಎನ್ನುತ್ತಾನೆ. ಜಂಗಮರು ಹಾಗೇ ಮಾಡುತ್ತಾರೆ. ಅವರ ಲಿಂಗಗಳು, ಕಣ್ಣಪ್ಪ ಮೀನು ಹಿಡಿಯುವ ಹೊಳೆಯ ದಡದಲ್ಲಿ ಮತ್ತೆ ಸಿಗುತ್ತವೆ.
ಮೇದರ ಕೇತಯ್ಯನದು ಕಾಡಿನಿಂದ ಬಿದಿರು ತಂದು ಬುಟ್ಟಿ, ಮೊರ, ತೊಟ್ಟಿಲು ಹೆಣೆಯುವ ಕಾಯಕ. ಬಸವಣ್ಣ ಮೊದಲಾದವರ ಸಂಪರ್ಕಕ್ಕೆ ಬಂದು ಶಿವಶರಣನಾಗುತ್ತಾನೆ.
ಕುರಿಯ ಹಿಕ್ಕೆಯನ್ನೇ ಶಿವಲಿಂಗವೆಂದು ಭಾವಿಸಿ ಪೂಜೆ ಮಾಡಿದ ಕುರುಬರ ವೀರಗೊಲ್ಲಾಳ.
ಹಲವಾರು ಜನಸಾಮಾನ್ಯ ವಚನಕಾರರ ಹೆಸರುಗಳನ್ನೊಮ್ಮೆ ಗಮನಿಸಿ.
ಅಂಬಿಗರ ಚೌಡಯ್ಯ
ಮಡಿವಾಳ ಮಾಚಯ್ಯ
ಮಾದಾರ ಚೆನ್ನಯ್ಯ
ಮೂಲದಲ್ಲಿ ಅಕ್ಕಸಾಲಿಗನಾಗಿದ್ದ ಕಿನ್ನರಿ ಬೊಮ್ಮಯ್ಯ
ಹೆಂಡದ ಮಾರಯ್ಯ
ನುಲಿಯ ಚಂದಯ್ಯ
ಬಹುರೂಪಿ ಚೌಡಯ್ಯ
ಮಾದಾರ ಧೂಳಯ್ಯ
ಹೆಸರುಗಳ ಜೊತೆಯಲ್ಲಿ ಜಾತಿ ಸೂಚಕ ಪದಗಳಿವೆಯಲ್ಲವೆ?
ಬಸವಣ್ಣನ ಈ ವಚನವನ್ನು ಸ್ವಲ್ಪ ಗಮನಿಸಿ
ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ,
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿಂ ಭೋ! ಕುಲದಿಂದ ಮುನ್ನೇನಾದಿರಿಂ ಭೋ?
ಸಾಕ್ಷ್ಯಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ,
ಕೌಂಡಿನ್ಯನೆಂಬ ಋಷಿ ಮೂರು ಭುವನರಿಯದೆ ನಾವಿದ ಕಾಣಿ ಭೋ!
ಮಾದಾರ ಚನ್ನಯ್ಯನ ಒಂದು ವಚನ ಹೀಗಿದೆ.
ಸಾಂಖ್ಯ ಶ್ವಪಚ, ಅಗಸ್ತ್ಯ ಕಬ್ಬಿಲ
ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ
ಕಶ್ಯಪ ಕಮ್ಮಾರ, ರೋಮಜ ಕಂಚುಗಾರ
ಕೌಂಡಿಲ್ಯ ನಾವಿದನೆಂಬುದನರಿದು,
ಮತ್ತೆ ಕುಲವುಂಟೆಂದು ಛಲಕ್ಕೆ ಹೊರಲೇತಕ್ಕೆ?
ಇಂತೀ ಸಪ್ತಋಷಿಯರುಗಳೆಲ್ಲರೂ
ಸತ್ಯದಿಂದ ಮುಕ್ತರಾದುದನರಿಯದೆ
ಅಸತ್ಯದಲ್ಲಿ ನಡೆದು, ವಿಪ್ರರು ನಾವು ಘನವೆಂದು
ಹೋರುವ ಹೊತ್ತು ಹೋಕರ ಮಾತೇಕೆ?
ಕೈಯುಳಿ ಕತ್ತಿ ಅಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮರಾಮ ರಾಮನ!
ಸ್ವತಃ ತನ್ನ ಮಗಳನ್ನು ಅಂತ್ಯಜನೊಬ್ಬನಿಗೆ ಮದುವೆ ಮಾಡಿಕೊಡುವುದರ ಮೂಲಕ ಸಮಾಜಿಕ ವರ್ಗೀಕರಣವನ್ನು ತಿರಸ್ಕರಿಸಿದ ಬ್ರಾಹ್ಮಣ ಮಧುವಯ್ಯ ತನ್ನೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ.
ಊರೊಳಗಣ ದೇವಾಲಯದಲ್ಲಿ
ಐವರು ಹೊಲೆಯರು ಹೊಕ್ಕು
ದೇವರ ಪೂಜಿಸುತ್ತೈದಾರೆ
ಹೊಲೆಯರು ಮುಟ್ಟಿ ದೇವಾಲಯ ಹೊರಗಾಯಿತ್ತು
ದೇವರೊಳಗದೆ
ಕುಲಜರು ಹೊಲಬುದಪ್ಪಿ ಹೊಲೆ ಒಳಗಾಯಿತ್ತು
ಅರ್ಕೇಶ್ವರಲಿಂಗವನರಿಯದ ಕಾರಣ.
ಹಡಪದ ಲಿಂಗಮ್ಮ ಎಂಬ ವಚನಕಾರ್ತಿಯ ಕನಿಷ್ಟದಲ್ಲಿ ಹುಟ್ಟಿದೆ, ಉತ್ತಮದಲ್ಲಿ ಬೆಳೆದೆ ಎಂದು ಒಂದು ವಚನದಲ್ಲಿ ಹೀಗೆ ಹಾಡಿದ್ದಾಳೆ.
ಸೆಟ್ಟಿಯೆಂದೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದಡೆ ಕೂಡಲಸಂಗಯ್ಯ ನಗುವನಯ್ಯ.
ಇದು ಬಸವನ ವಚನ. ’ಹಾರುವರೆಲ್ಲರೂ ನೆರೆದು ಶೂದ್ರನ ಹಾರುವನ ಮಾಡುವಲ್ಲಿ’ ಎಂಬ ವಚನವೂ ಬಸವಣ್ಣನದೆ. ’ಬಂದು ಬಲ್ಲಹ ಬಿಡಲು ಹೊಲಗೇರಿ ಎಂಬ ಹೆಸರೊಳವೆ ಅಯ್ಯಾ?’ ಎಂಬ ವಚನವೇ ಆಗಲೂ ಹೊಲಗೇರಿಗಳಿದ್ದವು ಎಂಬುದರ ಕುರುಹು.
ಅಶ್ವಮೇಧಯಾಗವಂತಿರಲಿ,
ಅಜಪೆ ಉಪದೇಶ ಸಮಾಧಿಯಂತಿರಲಿ, ಹೋ!
ಗಾಯತ್ರಿಯ ಜಪವಂತಿರಲಿ, ಹೋ!
ಜನಮೋಹನ ಮಂತ್ರವಂತಿರಲಿ, ಹೋ!
ಕೂಡಲಸಂಗನ ಶರಣರ ನುಡಿಗಡಣ
ಎಲ್ಲಕ್ಕಧಿಕ ನೋಡಾ.
ನೀವು ಹಿರಿಯರೆಂಬಿರಿ, ಕರ್ಮಿಗಳು, ನೀವು ಕೇಳಿರಿ,
ನಿಮ್ಮ ವೇದಶಾಸ್ತ್ರಂಗಳು ಆರ ಹೊಗಳುತ್ತಿದ್ದಾವು?
’ಓ ದ್ಯಾವಾ ಭೂಮೀ ಜನಯನ್ ದೇವ ಏಕಃ’
ಎಂದು ಶ್ರುತಿ ಸ್ಮೃತಿಗಳು ಸಾರುತ್ತಿದ್ದಾವು.
’ವರ್ಣಾನಾಂ ಬ್ರಾಹ್ಮಣೋ ಗುರುಃ’ ಎಂಬುದು ಹುಸಿ,
’ವರ್ಣಾನಾಂ ಗುರುಃ’ ನಮ್ಮ ಕೂಡಲ ಸಂಗನ ಶರಣರು
ಜಾತಿವಿಡಿದು ಸೂತಕವನರಸುವೆ
ಜ್ಯೋತಿವಿಡಿದು ಕತ್ತಲೆಯನರಸುವೆ!
ಇದೇಕೊ ಮರುಳು ಮಾನವಾ?
ಜಾತಿಯಲ್ಲಿ ಅಧಿಕನೆಂಬೆ!
ವಿಪ್ರ ಶತಕೋಟಿಗಳಿದ್ದಲ್ಲಿ ಫಲವೇನೊ?
’ಭಕ್ತನೆ ಶಿಖಾಮಣಿ’ ಎಂದುದು ವಚನ.
ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!
’ಭರ್ಗೋ ದೇವಸ್ಯ ಧೀಮಹೀ’ ಎಂಬರು,
ಒಬ್ಬರಿಗಾಗಿ ವಿಚಾರವಿಲ್ಲ, ನೋಡಿರೇ
ಕುಲದಲ್ಲಿ ಹಾರುವನು ಬ್ರಹ್ಮೇತಿಗೆ ಸಾರುವನು
ಆರೊ ಮಾಡಿದ ಪಾಪಕ್ಕೆ ತಾನೆ ಕೈಯಾನುವನು
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು
ಹೊನ್ನ ಕಪಿಲೆಯ ರವಣಶಾಖದ ಉಚ್ಛಷ್ಟದ ಹಾಲಿನಿಂದ
ಕೂಳನಟ್ಟುಂಬರವರನೇನೆಂಬೆ
ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ?
ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ!
ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ
ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ.
ಇದು ಬಸವಣ್ಣನು ಆಚಾರವ್ಯಸನಿಗಳಾಗಿದ್ದ ವೈದಿಕರಿಗೆ, ಜಾತಿಗರ್ವಾಂಧರಿಗೆ, ಸಂಪ್ರದಾಯಮೂಢರಿಗೆ ತೋರಿದ ವಿರೋಧವಲ್ಲೆವೆ? ’ಅಷ್ಟಮಿ ನವಮಿ ಎಂಬ ಕಲ್ಪಿತವೇಕೋ ಶರಣಂಗೆ?’, ’ನೀರಕಂಡಲ್ಲಿ ಮುಳುಗುವರಯ್ಯಾ’, ಎಂಬ ವಚನವೂ ಅದನ್ನೇ ಹೇಳುತ್ತಿದೆ ಅಲ್ಲವೆ?
ಅರಳೆಯ ಮರನು ವಿಷ್ಣುಕಾಂತಿ ಬನ್ನಿ ಮುತ್ತಕ ತೊಳಚಿ
ಹರಿ ಹರಿಯೆಂದು ಹೊಡವಡುವಿರಇ.
ಎಲ್ಲಿ ಭೋ! ಎಲ್ಲಿ ಭೋ!
ನಿಮ್ಮ ನಿಮ್ಮ ಹೊಡವಡುವ ದೈವಗಳೆಲ್ಲಾ ಗಿಡುಮರನಾಗಿ ಹೋದವಲ್ಲಾ!
ನಿಮ್ಮ ನಡೆಯೆಲ್ಲಾ ಅನಾಚಾರ, ನುಡಿಯೆಲ್ಲಾ ಶಿವದ್ರೋಹ
ಎಂದು ಅಂಬಿಗರ ಚೌಡಯ್ಯ ಏಕೆ ಮತ್ತು ಯಾರಿಗೆ ಹೇಳಿದ್ದಾನೆ. ಅರಿವಿನ ಮಾರಿತಂದೆಗಳ ಒಂದು ವಚನವನ್ನು ಗಮನಿಸಿ.
ಊರ ಹೊರಗಣ ಹೊಲತಿಯ ಹಾರುವ ನೆರೆದು
ತನ್ನಯ ಸೂತಕ ಹೋಯಿತ್ತು.
ಹೊಲತಿಯ ಕುಲ ಹರಿದು ಹಾರುವ ಹೊಲೆಯನಾಗಿ,
ಆ ಹಾರುವ ಹಾರದೆ ಸದಾಶಿವಮೂರ್ತಿಲಿಂಗಕ್ಕೆ ಒಳಗಾದ.
ಆಗಲೂ ಹೊಲೆಯ ಹೊಲತಿಯರಿದ್ದರು. ಅವರಿಗೆ ಪ್ರತ್ಯೇಖ ಹೊಲಗೇರಿಗಳೂ ಇದ್ದವು, ಅದೂ ಊರ ಹೊರಗೆ!
ತಾ ನೇಮವ ಮಾಡಿಕೊಂಡು
ಕೃಷಿ ಬೇಸಾಯವಿಲ್ಲದೆ ಒಡೆಯರ ಕಟ್ಟಳೆ ಇಷ್ಟು ಅವಧಿಗೊಡಲೆಂದು,
ಹೀಗಲ್ಲದೆ ಎನ್ನ ಒಡಲ ಹೊರೆಯೆನೆಂದು.
ಹೋದ ಹೋದ ಠಾವಿನಲ್ಲಿ ಓಗರವನಿಕ್ಕಿಸುವ
ಲಾಗಿನ ಶೀಲವಂತರ ಮನದ ಭೇದವ
ನೀವೇ ಬಲ್ಲಿರಿ ಏಲೇಶ್ವರಲಿಂಗವೆ
ಎಂದು ಏಲೇಶ್ವರ ಕೇತಯ್ಯಗಳು ಹೇಳುತ್ತಿರುವುದು ಅನುತ್ಪಾದಕ ವರ್ಗದವರಿಗಲ್ಲವೆ?
ಈ ಬಗೆ ನೂರಾರು ಉಲ್ಲೇಖಗಳು (ಕೆಲವರು ಕೇಳುವ ಸಾಕ್ಷಿಗಳು!) ವಚನಗಳನ್ನು ಓದುವವರಿಗೆ ಸಿಗುತ್ತವೆ. ಜಾತಿ ಮತ್ತು ಜಾತಿ ಕಾರಣದ ಶೋಷಣೆ ವಚನಕಾಲದಿಂದಲೂ ವಚನಪೂರ್ವಕಾಲದಿಂದಲೂ (ಮಾದಾರ ಚನ್ನಯ್ಯನ ಮತ್ತು ಬಸವನ ‘ವ್ಯಾಸ ಬೋವಿತಿಯ ಮಗ’ ವಚನವನ್ನು ಇನ್ನೊಮ್ಮೆ ಓದಿಕೊಳ್ಳಿ) ಇತ್ತು ಎಂಬುದಕ್ಕೆ ಇಷ್ಟೇ ಸಾಕಲ್ಲವೆ?
ಜಾತಿಗಳೇ ಇರಲಿಲ್ಲ, ವಚನಗಳು ಜಾತಿಪದ್ಧತಿಗೆ ವಿರೋಧ ವ್ಯಕ್ತಪಡಿಸಿಲ್ಲ, ಈ ಬಗೆಯ ಜಾತಿ ಚಿಂತನೆ ವಸಹಾತುಶಾಹಿಯ ಚಿಂತನಾಕ್ರಮ ಎಂದು ಹೇಳುವುದು ಎಷ್ಟು ಸರಿ? ಬಸವಣ್ಣನ ಕಾಲದಲ್ಲಿ ಯಾವ ವಸಹಾತುಶಾಹಿ ಇತ್ತು? ಬೇರೆಯವರ ಮೂಗಿನ ನೇರಕ್ಕೆ ಕಂಡಿದ್ದನ್ನು ನಿಮ್ಮ ಮೂಗಿನ ನೇರಕ್ಕೆ ಎಂದು ನೀವೇಕೆ ಅಂದುಕೊಳ್ಳಿವಿರಿ. ನಿಮ್ಮ ನಿಮ್ಮ ಮೂಗಿನ ನೇರಕ್ಕೇ ನೋಡಿಕೊಳ್ಳಿರಿ. ಸತ್ಯವನ್ನು ಅರಗಿಸಿಕೊಳ್ಳಲಾಗದಿದ್ದವರು ವ್ಯಂಗ್ಯವಾಗಿ ಕಾಮೆಂಟ್ ಹಾಕಬಹುದು ಅಷ್ಟೆ! ಆದರೆ ಸತ್ಯವನ್ನು ಮುಚ್ಚಲಾಗುವುದಿಲ್ಲ ಎಂಬುದನ್ನು ಅರಿಯಬೇಕು.
ಹಿಂದೆ ಬ್ರಿಟಿಷರು ನಮ್ಮ ಮೇಲೆ ದಬ್ಬಾಳಿಕೆ/ಷೋಷಣೆ ಮಾಡಿದರು ಎಂದು ಇಂದಿನ ಬ್ರಿಟಿಷರನ್ನು ದ್ವೇಷಿಸಿ ಎಂದರೆ ಒಪ್ಪುವಿರ ? ಹಿಂದೆ ಬ್ರಾಹ್ಮಣರು ಯಾರನ್ನೋ ಶೋಷಿಸಿದರು ಎಂದು ಇಂದಿಗೂ ಬೊಬ್ಬೆ ಹಾಕುವುದು ಎಷ್ಟು ಸರಿ, ಜಾತಿ /ಉಪ ಜಾತಿ ಯಾವುದು ಬೇಡ ಎಂದ ಬಸವಣ್ಣ , ಮೂಲ ತತ್ವಕ್ಕೆ ಬೆಂಕಿ ಇಟ್ಟು ಮತ್ತೆ ಅದೇ ಹೊಲಸು ಕೂಗಾಟ , ನಾವೆಲ್ಲ ಮನುಜರು ಅಷ್ಟು ಸಾಲದೇ ?
ಹೌದು. ನಾವೆಲ್ಲ ಮನುಜರು ಎಂದೇ ನಾನು ಬೊಬ್ಬೆ ಹಾಕುತ್ತಿರುವುದು. ಬ್ರಾಹ್ಮಣರನ್ನು ದ್ವೇಷಿಸಿ ಎಂದು ನಾನು ಎಂದೂ ಬೊಬ್ಬೆ ಹಾಕಿಲ್ಲ. ಲೇಖನವನ್ನು ಸರಿಯಾಗಿ ಓದದೆ ಬೊಬ್ಬೆ ಹಾಕುವುದು ಸರಿ ಅಲ್ಲ.
ಲೇಖನ ತರ್ಕಬದ್ಧವಾಗಿಯೂ, ಆಧಾರಬದ್ಧವಾಗಿಯೂ ಇದೆ. ವಸಾಹತುಶಾಹೀ ಚಿಂತನೆ ಎಂಬ ಪದ ಬಳಸಿ ವೈಜ್ಞಾನಿಕ ಮನೋಭಾವದ ಬೆಳವಣಿಗೆಯನ್ನು ಹತ್ತಿಕ್ಕುವ ಪ್ರತಿಗಾಮಿ ಚಿಂತಕರ ಚಿಂತನೆ ಚಿಂತಿಸಲಾರದ ಜನತೆಯ ದಾರಿ ತಪ್ಪಿಸುವ ಪ್ರಯತ್ನವೇ ಹೊರತು ಮತ್ತೇನಲ್ಲ. ಅವರು ಇದಕ್ಕೆ ವೈಜ್ಞಾನಿಕ ಆವಿಷ್ಕಾರವಾದ ಅಂತರ್ಜಾಲವನ್ನು ಬಳಸುತ್ತಿರುವುದು ವಿರೋಧಾಭಾಸವಲ್ಲವೇ? ಅಂತರ್ಜಾಲವನ್ನೂ ಒಳಗೊಂಡು ಇಂದು ನಾವು ಬಳಸುತ್ತಿರುವ ರೇಡಿಯೋ, ಟಿವಿ, ಮೊಬೈಲ್ ಫೋನ್, ಎಟಿಎಂ, ಕಾರು, ಬಸ್ಸು, ರೈಲು, ಹಡಗು, ವಿಮಾನ ಮೊದಲಾದವೆಲ್ಲವೂ ವಸಾಹತುಶಾಹೀ ಉತ್ಪನ್ನಗಳೇ ಆಗಿವೆ. ಇವು ಭಾರತೀಯ ಅಲ್ಲ ಹಾಗಾಗಿ ಇವನ್ನು ನಾವು ಉಪಯೋಗಿಸುವುದಿಲ್ಲ ಎಂದು ಪ್ರತಿಗಾಮಿಗಳು ಹೇಳಲು ಸಿದ್ಧ ಇದ್ದಾರೆಯೇ ಎಂದರೆ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ ಬದಲಿಗೆ ಪ್ರತಿಗಾಮಿಗಳು ವಿಜ್ಞಾನದ ಆವಿಷ್ಕಾರಗಳನ್ನು ತಮ್ಮ ಪ್ರತಿಗಾಮಿ ಚಿಂತನೆಗಳನ್ನು ಹರಡಲು, ತಮ್ಮ ಸಿದ್ಧಾಂತಗಳನ್ನು ಪ್ರಚಾರಪಡಿಸಲು, ತಮ್ಮ ರಾಜಕೀಯ ಉತ್ಕರ್ಷದ ಸಾಧನೆಗಾಗಿ ಎಲ್ಲರಿಗಿಂತ ಮುಂಚೂಣಿಯಲ್ಲಿ ನಿಂತು ಉಪಯೋಗಿಸುತ್ತಿದ್ದಾರೆ. ಆಗ ಇವರಿಗೆ ಇದು ವಸಾಹತುಶಾಹಿ, ಹಾಗಾಗಿ ಇದು ನಮಗೆ ಅಸ್ಪ್ರಶ್ಯ ಎಂದು ಏಕೆ ಅನಿಸುವುದಿಲ್ಲ? ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದು ಭಾರತಕ್ಕೆ ಅತೀ ಅಗತ್ಯವಾಗಿ ಬೇಕಾಗಿದೆ ಆದರೆ ಅದನ್ನು ಹತ್ತಿಕ್ಕುವ ಪ್ರಯತ್ನ ಪ್ರತಿಗಾಮಿ ಚಿಂತಕರಿಂದ ವಸಾಹತುಶಾಹಿ ಚಿಂತನೆ ಎಂಬ ಗುಮ್ಮನನ್ನು ತೋರಿಸಿ ನಡೆಯುತ್ತಿದೆ. ಇದನ್ನು ಪ್ರಜ್ಞಾವಂತರು ವಿರೋಧಿಸಬೇಕಾದ ಅಗತ್ಯ ಇದೆ.
ಈ ಲೇಖನದಲ್ಲಿ ಅದೆಂತ ವೈಜ್ಞಾನಿಕ ಮನೋಭಾವ ಕಂಡು ಬಂತೊ ಆ ದೇವರೇ ಬಲ್ಲ..ತೋರಿಸಿ ಕೊಟ್ಟಿದ್ದರೆ ಧನ್ಯವಾದಗಳನ್ನು ಹೇಳಬಹುದಿತ್ತು !
ನಮ್ಮ ಮಾನ್ಯ ಆನಂದ ಪ್ರಸಾದರವರಿಗೆ ವಾಯರ್ ಲೆಸ್ ಕಮ್ಯುನಿಕೇಶನ್ ಗೆ ಮುನ್ನುಡಿ ಬರೆದದ್ದು ಜಗದೀಶ ಬೋಸ್ ಮತ್ತು ಜಗತ್ತಿನ ಶೇಕಡಾ ೮೦ ಕ್ಕಿಂತ ಹೆಚ್ಚು ಕಂಪ್ಯೂಟರ್ ಗಳು ನಡೆಯುವುದು ಭಾರತೀಯ ವಿನೋದ ಧಾಮ್ ತಯಾರಿಸಿದ ಚಿಪ್ ನಿಂದ ಎಂಬುದು ಮರೆತು ಹೋದಂತೆ ಕಾಣಿಸುತ್ತದೆ.
ಸ್ವಾಮಿ..ವಸ್ತುಗಳ ಅವಿಷ್ಕಾರ ನಡೆಯುವುದೆ ಬಳಸಲು, ತಯಾರಿಸಿ ಮಾರಾಟ ಮಾಡಿ ದುಡ್ಡು ಮಾಡಲು.. ಸಂಶೋಧಿಸಿ ಮ್ಯುಸಿಯಮ್ ನಲ್ಲಿ ಇಡಲು ಅಲ್ಲ. ವಿಜ್ಞಾನವನ್ನು ಗುತ್ತಿಗೆ ತೆಗೆದುಕೊಂಡವರಂತೆ ನೀವು ಆಡುತ್ತಿರುವುದನ್ನು ನೋಡಿದರೆ ನಗು ಬರುತ್ತದೆ. ನಾಳೆ ಅಕಸ್ಮಾತ ನೀವೇನಾದರೂ ಸಂಶೋಧನೆ ಮಾಡಿದರೆ, ನನ್ನ ವಸ್ತುಗಳನ್ನು ಪ್ರಗತಿಪರರು, ಪ್ರಜ್ಞಾವಂತರು ಮಾತ್ರ ಬಳಸಬೇಕು ಎಂಬ ಕರಾರು ಇಡಿ..ಪರವಾಗಿಲ್ಲ. ವಿಜ್ಞಾನವೆಂಬುದು ಧುತ್ತೆಂದು ಆಕಾಶದಿಂದ ಇಳಿದು ಬಂದದಲ್ಲ..ಇವತ್ತಿನೊಳಗೆ ನಿನ್ನೆಯೂ ಇದೆ. ನಮ್ಮಲ್ಲೂ ಆರ್ಯಭಟ, ಸುಶ್ರುತ, ಭಾಸ್ಕರ ಇದ್ದರು ಎಂಬ ಕಲ್ಪನೆ ನಿಮಗಿದ್ದರೆ ಈ ಗುಲಾಮಿ ಮನಸ್ಥಿತಿ ಸ್ವಲ್ಪ ಕಡಿಮೆ ಆಗುತ್ತದೆ ಮತ್ತು ಇವತ್ತು ತಾವು ಅನ್ನ ಊಟ ಮಾಡುತ್ತಿರುವುದೇ ಪಾಶ್ಚಾತ್ಯರ ಕೃಪೆಯಿಂದ ಎಂಬ ಬಾಲಿಶ ಭ್ರಮೆ ಹೋಗುತ್ತದೆ.. ಮಾತು ಮಾತಿಗೆ ಪ್ರಗತಿಪರ, ಪ್ರಜ್ಞಾವಂತ, ವೈಜ್ಞಾನಿಕತೆ ಅನ್ನುವ ಚಟವೂ ಕಡಿಮೆಯಾಗುತ್ತೆ!
ಆನಂದ ಪ್ರಸಾದ ಅವರ ಮೇಲೆ ವಿಜಯ್ ಅವರು ಅದೇಕೆ ಹರಿಹಾಯ್ದಿದ್ದಾರೊ ಗೊತ್ತಾಗುತ್ತಿಲ್ಲ. ಜಗತ್ತಿನಲ್ಲಿ ಅನೇಕ ವಿಜ್ಞಾನಿಗಳಿಗೆ ವೈಜ್ಞಾನಕ ಮನೋಭಾವ ಇಲ್ಲ. ವಿಜ್ಞಾನಿಗಳಲ್ಲದ ಅನೇಕರು ವೈಜ್ಞಾನಿಕ ಮನೋಭಾವವನ್ನು ಹೊಂದಿದ್ದಾರೆ. ಉಪಗ್ರಹಗಳ ಉಡಾವಣೆಗಾಗಿ ತಿರುಪತಿಯಿಂದ ತೆಂಗಿನಕಾಯಿ ತರಿಸುವ ವಿಜ್ಞಾನಿಗಳೂ ನಮ್ಮಲ್ಲಿದ್ದಾರೆ. ಅವರು ವಿಜ್ಞಾನಿಗಳು. ಆದರೆ ಅವರು ವೈಜ್ಞಾನಿಕ ಮನೋಭಾವದವರು ಎಂದು ಹೇಳಲಿಕ್ಕಾಗುತ್ತದೆಯೆ?
ರಂಜಾನ್ ದರ್ಗಾ ಅವರಿಗೆ ಧನ್ಯವಾಗಳು. ಜತೆಗೆ ಅವಧಿಗೆ ಅಭಿನಂದನೆಗಳು. ವಚನ ಚಳವಳಿಯ ಬಗ್ಗೆ ನಿಜಕ್ಕೂ ಸುಧೀರ್ಘ ಚೆರ್ಚೆ ನಡೆಸಬೇಕಾದ ಅಗತ್ಯವಿದೆ. ವಚನಕಾರರು ಎಂದಾಕ್ಷಣ ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರು ಎನ್ನುವ ತಪ್ಪು ಕಲ್ಪನೆ ಸಾಕಷ್ಟು ಜನಸಾಮಾನ್ಯರಲ್ಲಿದೆ. ಇನ್ನು ಕೆಲವರು ಅವರೆಲ್ಲ ಒಂದೇ ಸಮುದಾಯಕ್ಕೆ ಸೇರಿದವರು ಎನ್ನುವುದನ್ನು ಮರುಸೃಷ್ಟಿ ಮಾಡಲು ಕೂಡ ಕೆಲವರು ಹುನ್ನಾರ ನಡೆಸುತ್ತಿರುವುದನ್ನೂ ಬಿಡಿಸಿ ಹೇಳಬೇಕಾಗಿಲ್ಲ. ಯಾವ ವಚನಕಾರರು ಜಾತಿ, ಧರ್ಮಗಳನ್ನು ದೂರ ಮಾಡಿ ಜಾತ್ಯತೀತ ಸಮಾಜ ಕಟ್ಟಲು ನಡೆಸಿದರೋ ಅವರದೇ ಹೆಸರಿನಲ್ಲಿ ಈಗ ಒಂದು ಜಾತಿಯನ್ನೇ ಸೃಷ್ಟಿ ಮಾಡಿಕೊಂಡು ಬಸವಾದಿಯಾಗಿ ಶರಣರನೆಲ್ಲರನ್ನೂ ಒಂದು ಕಡೆ ದೇವರೆಂದು ಆರಾಧಿಸುತ್ತಲೇ ಮತ್ತೊಂದು ಕಡೆ ಅವರ ಆಚಾರ, ಆಶಯಗಳನ್ನು ಗಾಳಿಗೆ ತೂರುತ್ತಿರುವುದು ನಿಜಕ್ಕೂ ವಿಪರ್ಯಾಸ. ೧೨ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದಿದ್ದು ರಂಜಾನ್ ದರ್ಗಾ ಅವರು ಹೇಳಿದ ಹಾಗೆ ಮನುವಾದಿಗಳ ಕ್ಷಿಪ್ರಕ್ರಾಂತಿಯೆ. ಆದರೆ ಚೌಕಟ್ಟಿಲ್ಲದ ಆ ಬಯಲಧರ್ಮಕ್ಕೆ ಈಗ ಬಲವಾದ ಚೌಕಟ್ಟು ಬೀಳುತ್ತಿದೆ! ವಚನ ಚಳವಳಿಯಲ್ಲಿ ಭಾಗಿಯಾದ ವಚನಕಾರರನ್ನು ಅವತ್ತಿನ ಸಮಾಜ ‘ಇವತ್ತಿನ ನಕ್ಸಲರ ರೀತಿ’ ಪರಿಗಣಿಸುತ್ತಿದ್ದರು. ಅಲ್ಲಲ್ಲಿ ಅವರ ಉದ್ದೇಶಗಳಿಗೆ ಬೆಂಬಲವಿತ್ತೇ ಹೊರತು ಮತ್ತೆ ಕೆಲವೆಡೆ ಅವರನ್ನು ನಕ್ಸಲರಂತೆ ಕಾಣುತ್ತಿದ್ದುದು ಕೂಡ ನಿಜ. ಅದರ ಪರಿಣಾಮವಾಗಿಯೇ ರಾಶಿ ರಾಶಿ ವಚನ ಕಟ್ಟುಗಳನ್ನು ಅಂದು ಸುಟ್ಟು ಭಸ್ಮ ಮಾಡಿದ್ದೂ ಸುಳ್ಳಲ್ಲ. ಜತೆಗೆ ಇನ್ನು ಕೆಲವು ಕಾಲಾನಂತರ ನಾಶವಾಗಿದ್ದೂ ಸತ್ಯ. ಹೀಗಾಗಿ ಕೆಲವೇ ಕೆಲವು ವಚನಕಾರರ ವಚನಗಳು ಮಾತ್ರ ನಮಗೆ ಲಭ್ಯವೇ ಹೊರತು ಎಲ್ಲವೂ ಸಿಕ್ಕಿಲ್ಲ, ಅವುಗಳಿಗಾಗಿ ಆ ನಂತರ ಬಂದ ಗ್ರಂಥಗಳನ್ನು ಹುಡುಬೇಕಿದೆ. ಬಸವಣ್ಣಜ ಜತೆಗೆ ಕಾಯಕ ಕ್ರಾಂತಿಯಲ್ಲಿ ಭಾಗಿಯಾದ ಅಕ್ಕಮಹಾದೇವಿ, ಅಲ್ಲಮ ಪ್ರಭು ಮುಂತಾದ ಬೆರಳೆಣಿಕೆಯ ವಚನಕಾರರ ವಚನಗಳು ನಮಗೆ ದೊರೆತಿವೆ ಹೊರತು, ಸತ್ಯಕ್ಕ, ಮುಕ್ತಾಯಕ್ಕ, ಮೂಕ ಮಲ್ಲವ್ವ, ದೋಸೆ ಪಿಟ್ಟವ್ವ ಮುಂತಾದವರ ವಚನಗಳು ಇಂದಿಗೂ ಸಿಕ್ಕಿಲ್ಲ!
ಬ್ರಾಹ್ಮಣರು ಹಿಂದೆ ಶೋಷಿಸಿದ್ದು ನಿಜ. ಅದು ಮನುವಿನಿಂದ ಬಂದ ಕೊಡುಗೆ ಆದರೆ ಇಂದು ಆ ಮನು ಸಂಸ್ಕೃತಿ ಕೇವಲ ಬ್ರಾಹ್ಮಣರಲ್ಲಿ ಮಾತ್ರವಲ್ಲ ದಲಿತರಲ್ಲೂ ಹಾಸು ಹೊಕ್ಕಾಗಿದೆ! ಬ್ರಾಹ್ಮಣ್ಯ ಎನ್ನುವುದು ಕೇವಲ ಜಾತಿಗೆ ಮಾತ್ರ ಸೀಮಿತವಾಗಿಲ್ಲ ಅದು ಎಲ್ಲ ಜಾತಿಗಳಲ್ಲೂ ಒಳ ನುಸುಳಿ ಸದ್ದಿಲ್ಲದೆ ಅನಾಚಾರ, ಕಂದಾಚಾರಗಳ ಸೃಷ್ಟಿಗೆ ಕಾರಣವಾಗುತ್ತಿರುವುದೂ ಕೂಡ ನಿಜ. ಹಾಗಂತ ಇಂದು ಜಾತಿ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ ಎಂದಲ್ಲ, ಬದಲಿಗೆ ಅಲ್ಲಲ್ಲಿ ಬಲವಾಗಿಯೇ ಬೇರೂರಿದೆ. ಹಲವೆಡೆ ಇಂದಿಗೂ ದಲಿತರಿಗೆ ದೇವರ ಗುಡಿಗೆ ಪ್ರವೇಶ ದೊರೆಯಿತ್ತಿಲ್ಲ. ಮನೆ ಎದುರು ಬಾಯಾರಿ ಬಂದವರಿಗೆ ನೀರು ಕೂಡ ಕೊಡುವುದಿಲ್ಲ. ಕೊಟ್ಟರೂ ಅವರು ಕುಡಿದು ಬಿಟ್ಟ ಲೋಟ, ತಿಂದು ಬಿಟ್ಟ ತಟ್ಟೆಯನ್ನು ಸೂರಿಗೆ ಸಿಕ್ಕಿಸಿ ಅವರು ಮತ್ತೆ ಬಂದಾಗ ಅದರಲ್ಲಿಯೇ ನೀಡುವ ಸಂಸ್ಕೃತಿ ಇನ್ನೂ ಜೀವಂತವಾಗಿರುವುದು ಮಾತ್ರ ದುರಂತ…
ಈ ವ್ಯವಸ್ಥೆಯನ್ನು ಒಂದು ರೀತಿ ಕೆಲವು ಮಠಗಳು ಇಂದಿಗೂ ಪೋಷಿಸುತ್ತಿವೆ, ನೀರೆರೆದು ಬೆಳೆಸುತ್ತಿವೆ ಎನ್ನುವುದು ಜಗಜ್ಜಾಹೀರಾದ ಸತ್ಯ. ‘ವೈದಿಕರಿಗೆ ಮಾತ್ರ ಪ್ರವೇಶ’ ಎನ್ನುವ ನಾಮ ಫಲಕವನ್ನು ರಾಜಾರೋಶವಾಗಿ ಹಾಕಿ ದಲಿತರಲ್ಲಿ ಕೀಳರಿಮೆ, ಬ್ರಾಹ್ಮಣರಲ್ಲಿ ಅಹಂ ಅನ್ನು ಹುಟ್ಟು ಹಾಕಲಾಗುತ್ತಿದೆ. ಇದು ಬೇಕಾ? ಇಂಥವುಗಳಿಂದ ಸಮಾಜದಲ್ಲಿ ಸಮಾನತೆ ಸೃಷ್ಟಿಯಾಗಲು ಸಾಧ್ಯಾನಾ? ವಚನಕಾರರು ನಡೆಸಿ ಆ ಕಾಯಕ ಕ್ರಾಂತಿಗೆ ಫಲ ಸಿಕ್ಕಿದೆ ಎನಿಸುತ್ತದೆಯೇ ?
ಬಟ್ಟೆಯಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೇ ಎನ್ನ ನರಕದಲ್ಲಿ ಅದ್ದಿ
ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ… (ಸತ್ಯಕ್ಕನ ವಚನ) ಎನ್ನುವ ಅವತ್ತಿನ ಕಾಲದ ಶರಣರೆಲ್ಲಿ ಕಾಸು ಕಂಡದೆ ಸೆಗಣಿಯಲ್ಲೂ ಕೈ ಹಾಕುವ ಇವತ್ತಿನ ಜನರೆಲ್ಲಿ ?
Ridiculous,still discussion on cast and religion even in this scientific era!Sahanaji wants to take revenge on present brahmins for their past,thats too with the help of constitutin!!!great even Basavanna would not have approved this.i request all so called intellectul writers and respondents exercise some restrain.just because my grandfather has done some mistake,u can not punish me.How is itjutified?As sri ramesh rightly pointout that D great basavanna fought against castism,unfortunately efforts are on to tie Basavanna into one community.Sahanaji stop blaming brahmins for Yediyurappa`s corruption,lallu`s criminality.Some one blames Matts of encouraging castism,boss why we should go to such swamiji`s and temples.People should know That god is universal ………
ವಿಜೇಂದ್ರ ಅವರು ಹೇಳುವುದಕ್ಕೆ ನನ್ನ ಸಹಮತವಿದೆ. ಒಬ್ಬ ವ್ಯಕ್ತಿ ಒಂದು ಧರ್ಮದಲ್ಲಿ ಅಥವಾ ಒಂದು ಜಾತಿಯಲ್ಲಿ ಹುಟ್ಟಿದ ಕಾರಣದಿಂದಲೇ ಅವನನ್ನು ಮೇಲು ಮತ್ತು ಕೀಳು ಎಂದು ವರ್ಗೀಕರಿಸುವುದೇ ವರ್ಣವಾದ. ಈ ವರ್ಣವಾದ ನಮ್ಮನ್ನು ಫ್ಯಾಸಿಸಂ ಕಡೆಗೆ ಒಯ್ಯುತ್ತದೆ. ಈ ವರ್ಣವಾದದ ನೆಲೆಯಲ್ಲೇ ಹಿಟ್ಲರ್ 5 ಕೋಟಿ ಜನರ ಕೊಲೆಗೆ ಕಾರಣನಾದ. ನನ್ನ ಲೇಖನದಲ್ಲಿ ಈ ಮಾತನ್ನು ಸ್ಪಷ್ಟಪಡಿಸಿದ್ದೇನೆ. ನಾನು ಹೇಳುತ್ತಿರುವುದು ಜಾತಿ,ಕುಲ,ವರ್ಣ ಮತ್ತು ಅಸ್ಪೃಶ್ಯತೆಯ ಕ್ರೌರ್ಯವನ್ನು. ಸ್ವಾಮಿ ವಿವೇಕಾನಂದರು ಹತ್ತಾರು ಕಡೆ ಬ್ರಾಹ್ಮಣರ ಕ್ರೌರ್ಯವನ್ನು ಟೀಕಿಸಿದ್ದಾರೆ.
A country where millions of people live on flowers of the Mohua plant, and a million or two of Sadhus and a hundred million or so of Brahmans suck the blood out of these poor people, without even the least effort for their amelioration – is that a country of hell? Is that a religion, or a devil’s dance? (vol. VI. 254)
– Swami Vivekananda
Monks and Sannyasins and Brahamns of a certain type have thrown the country into ruin. Intent all the while on theft and wickedness, these pose as preachers of religion! They will take gifts from the people and at the same time cry, ‘Don’t touch me!’ (Vol.VI. 318)
– Swami Vivekananda
I am no metaphysician, no philosopher, nay, no saint. But I am poor, I love the poor. (Volume V. 58)
– Swami Vivekananda
The only hope of India is from the masses. The upper classes are physically and morally dead. (V. 106)
– Swami Vivekananda
I am a socialist not because I think it is a perfect system, but half a loaf is better than no bread. (VI. 381)
-Swami Vivekananda
It is the heart, the heart that conquers, not the brain. Books and learning, Yoga and meditation and illumination – all are but dust compared with love. It is love that gives you the supernatural powers, love that gives you Bhakti, love that gives illumination, and love, again, that leads to emancipation. (VI. 400)
– Swami Vivekananda