ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೈದೇಹಿಗೊಂದು ಸೀರೆ..

                                ‘ವ್ಯಾನಿಟಿ ಬ್ಯಾಗ್’ ಕೇಳಿದ್ದೀರಲ್ಲಾ? ವೈದೇಹಿಯವರ ಕಾಡುವ ಕವಿತೆ ಇದು. ಇತ್ತೀಚಿಗೆ ತಾನೇ ‘ಸಂಚಾರಿ ಥಿಯೇಟರ್’ ವೈದೇಹಿ ಅವರ ಕವಿತೆಗಳನ್ನು ಆಯ್ದು ಅದನ್ನು ಪೋಣಿಸಿ ವ್ಯಾನಿಟಿ ಬ್ಯಾಗ್ ಎನ್ನುವ ಕಾಡುವ ನಾಟಕವನ್ನು ರಂಗಕ್ಕೇರಿಸಿತ್ತು. ಆ ನಾಟಕದ ಪ್ರತೀ ಸಾಲಿನಲ್ಲೂ ವೈದೇಹಿ ಇದ್ದರು, ವೈದೇಹಿ ಕವಿತೆಗಳು ಇನ್ನಿಲ್ಲದಂತೆ ಕಾಡುತ್ತಿದ್ದವು. ಆ ನಾಟಕದಲ್ಲಿ ಇನ್ನಿಲ್ಲದಂತೆ ಕಾಡಿದ್ದು ಅಮ್ಮನ ಸೀರೆ. ಕಲ್ಪನಾ ನಾಗನಾಥ್ ಆ ಸೀರೆಯನ್ನು ಒಂದು ಕಾಡುವ ರೂಪಕವಾಗಿ ಮಾಡಿಬಿಟ್ಟರು. ಅಂತಹ ಸೀರೆಯ ಸಾಲುಗಳನ್ನು ನೀಡಿದ ವೈದೇಹಿ ಸಂಚಾರಿ ಥಿಯೇಟರ್ನ  ಅಂಗಳಕ್ಕೆ ಬಂದರು. ಕಾಡುವ ಸೀರೆಯ ನೆನಪುಗಳನ್ನು ಕೊಟ್ಟ ವೈದೇಹಿ ಅವರನ್ನು ಸಂಚಾರಿ ಸ್ವಾಗತಿಸಿದ್ದು ಸೀರೆಯ ಮೂಲಕವೇ. ಎನ್ ಮಂಗಳಾ ವೈದೇಹಿ ಮಡಿಲಿಗೊಂದು ಸೀರೆ ಇಟ್ಟು, ಎದುರು ‘ವ್ಯಾನಿಟಿ ಬ್ಯಾಗ್’ ನಾಟಕ ಬಿಚ್ಚಿಟ್ಟು ಮನಸ್ಸು ತುಂಬುವಂತೆ ಮಾಡಿದರು. ವೈದೇಹಿ ಆ ಸೀರೆ, ಆ ನಾಟಕ ಎಲ್ಲವೂ ಇಲ್ಲಿವೆ. ನಿಮಗಾಗಿ.. ಫೋಟೋಗಳನ್ನು ದೊಡ್ಡದಾಗಿ ನೋಡಲು ಫೋಟೋಗಳ ಮೇಲೆ ಕ್ಲಿಕ್ ಮಾಡಿ [gallery order="DESC" columns="4" orderby="ID"]]]>

‍ಲೇಖಕರು G

6 August, 2012

ನಿಮಗೆ ಇವೂ ಇಷ್ಟವಾಗಬಹುದು…

3 Comments

  1. savitri

    Nice photos. Thanks to Avadhi…

  2. VG

    ಓಹ್, ಕಾಡಿಯೇ ಕಾಡಿತು!
    just joked. ಚನ್ನಾಗಿದೆ.

  3. Manjula.N.

    tumba chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading