ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೇಶ್ಯೆ ಚಂದಿರ ಆಕಾಶದಲ್ಲಿ..

ನಿಲಿಂನ ಕಾಡುವ ಇನ್ನೆರಡು ಪದ್ಯಗಳು

ಭಾವಾನುವಾದ
ಆರತಿ.ಎಚ್.ಎನ್.

 

1.
ರೂಮ್

ನನ್ನ ಒಂದು ಕೋಣೆಯಲ್ಲವನು
ಕೂರುತ್ತಾನೆ, ಓದುತ್ತಾನೆ.
ಇನ್ನೊಂದರಲ್ಲಿ

ಊಟ ಮಾಡುತ್ತಾನೆ.
ಒಂದರಲ್ಲಿ ಹಾಡುತ್ತಾನೆ
ಮಲಗುತ್ತಾನೆ ಮತ್ತೊಂದರಲ್ಲಿ.

ನನ್ನ ಹೃದಯದ
ನಾಲ್ಕೂ ಕೋಣೆಗಳನ್ನವನು
ಬಾಡಿಗೆಗೆ ಕೊಟ್ಟಿದ್ದಾನೆ.

ಅವನು ಬೇರೆ ಯಾರೂ
ಅಲ್ಲ, ದುಃಖ!

2.
ವೇಶ್ಯೆ ಚಂದಿರ

ನಿದ್ದೆ ಮಾಡಲಾಗುತ್ತಿಲ್ಲ
ನನಗೆ,
ವೇಶ್ಯೆ ಚಂದಿರ
ಆಕಾಶದಲ್ಲಿ ಕುಳಿತಿದ್ದಾಳೆ.

ಮೋಡ ಕುಟೀರದ
ಕಿಟಕಿ ಬಾಗಿಲುಗಳನ್ನು
ತೆರೆದಿಟ್ಟು, ಸೂಳೆ ಚಂದಿರ ಕೂತಿದ್ದಾಳೆ.
ಕೊಳದಲ್ಲಿ ಕಾಲುಚಾಚಿ
ಮಲಗಿದ್ದವಳ ಬಳಿಗೆ
ಯಾರೂ ಹೋಗಿಲ್ಲ,
ತನ್ನ ಬಟ್ಟೆ ಕಳಚಿ
ವಿವಸ್ತ್ರಳಾಗುತ್ತಿದ್ದಾಳೆ.

ಹಾವಿನ ತರ
ಬಾಗಿ ಬಳುಕಿಸಿ
ಮೈಯನ್ನು.

ನೀರಲ್ಲಿ ಅದೇ ವಾಸನೆ
ಮನಸೋಲುತ್ತಿದ್ದೇನೆ

ನಿದ್ರೆ ಮಾಡಲಾಗುತ್ತಿಲ್ಲ,
ಈ ವೇಶ್ಯೆ ಚಂದಿರನಿಂದ…

 

‍ಲೇಖಕರು avadhi

8 March, 2017

1 Comment

  1. Nada shetty

    ಒಪ್ಪಲೇ ವೇಶ್ಯೆ ಚಂದಿರನನ್ನು! ಒಪ್ಪದಿರಲೇ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading