ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವೂರ್ಟ್ಸ್ ಬರ್ಗ್ ರೈಲ್ವೇ ನಿಲ್ದಾಣದಲ್ಲಿ ಕಂಡ ಲಗೇಜು!..

ಈ ವೂರ್ಟ್ಸ್ ಬರ್ಗ್ ರೈಲ್ವೇ ನಿಲ್ದಾಣದಲ್ಲಿ ಇಳಿದು ಹೊರಗೆ ಬಂದಾಗ ಕಂಡಿದ್ದು ಸೂಟ್ ಕೇಸ್ , ಟ್ರಂಕು , ಹಾಸಿಗೆ ಇತ್ಯಾದಿಗಳನ್ನು ಯಾರೋ ಸಾಲಾಗಿ ಜೋಡಿಸಿರುವುದು. ಅದರ ಮೇಲೆ ಯಹೂದಿಗಳ ಹೆಸರು. ಇವನ್ನೆಲ್ಲ ನಿಜವಾದವು ಎಂದೇ ತಿಳಿದಿದ್ದೆ. ಮುಟ್ಟಿ ನೋಡಿದಾಗ ಮಾತ್ರ ಅವು ಕಲ್ಲಿನಿಂದ ಮಾಡಿರುವುದು ಎಂದು ತಿಳಿಯಿತು.

ಯಹೂದಿಗಳನ್ನು ಈ ಪಟ್ಟಣದಿಂದ ಹೊರದಬ್ಬಿದ ಅಂದಿನ ದಿನವನ್ನು ನೆನಪಿಸುವಂತೆ ಇವನ್ನಿಲ್ಲಿ ಜೋಡಿಸಿದ್ದಾರೆ. Denkort Depotationen 1941 – 44ಎಂದು ಪಕ್ಕದ ಬೋರ್ಡ್ ನಲ್ಲಿ ವಿವರಗಳನ್ನು ಬರೆಯಲಾಗಿದೆ. ಇಲ್ಲಿಂದಲೇ ಯಹೂದಿಗಳನ್ನು ಆಚೆಗಟ್ಟಲು ಬಹುಶಃ ಶುರು ಮಾಡಿದ್ದು.

ಯುರೋಪಿನ ಯಹೂದಿಗಳ ಸಾಮೂಹಿಕ ಹತ್ಯೆಯನ್ನು ಇವು ನೆನಪಿಸಿ ನಿಮ್ಮ ಮನಸ್ಸನ್ನು ಕಲಕಿಬಿಡುತ್ತದೆ. ಅವರನ್ನೆಲ್ಲ ಜರ್ಮನ್ transit camps ಗಳಾದ ರೀಗ, ಲುಬ್ಲಿನ್ ಜೆಕ್ ರಿಪಬ್ಲಿಕ್ ಮತ್ತು ಪೋಲೆಂಡ್ ನ ಆಶ್ವಿಟ್ಸ್ ಕ್ಯಾಂಪುಗಳಿಗೆ ಮೊದಲು ಕಳಿಸಲಾಯಿತು. ಈ ಕ್ಯಾಂಪುಗಳಲ್ಲಿ ಸಾಯದೆ ಬದುಕಿದವರನ್ನು ಗುಂಡಿಟ್ಟು ಕೊಲ್ಲಲಾಯಿತು.

ಸಾಮೂಹಿಕ ಹತ್ಯೆ ಮಾಡಲಾಯಿತು, ಗ್ಯಾಸ್ ಚೇಂಬರ್ ಗೆ ತಳ್ಳಲಾಯಿತು. ಅವರೆಲ್ಲರನ್ನು ಮರೆಸದ ಹಾಗೆ ಈ ಸ್ಟೇಷನ್ ನಲ್ಲಿ ಅವರ ಗುಂಪು ಚಿತ್ರಗಳಿವೆ. ಲಗೇಜಿನ ಮಾಡೆಲ್ ಇದೆ. ನವೆಂಬರ್ 1941 ರಿಂದ ಡಿಸೆಂಬರ್ 44 ರವರೆಗೆ ೨೦೬೯ ಹೆಂಗಸರು ಮತ್ತು ಮಕ್ಕಳನ್ನು ಹೊರದಬ್ಬಲಾಯಿತು. ಅವರ ಆಸ್ತಿ ಪಾಸ್ತಿಗಳನ್ನು ಕಿತ್ತುಕೊಳ್ಳಲಾಯಿತು.

ಜರ್ಮನಿ ಆಕ್ರಮಣಮಾಡಿಕೊಂಡಿದ್ದ ಪೂರ್ವ ಯುರೋಪಿನ ದೇಶಗಳಿಗೆ ಅವರನ್ನು ಕಳುಹಿಸಿ ಹತ್ಯೆ ಮಾಡಲಾಯಿತು. ಉಳಿದುಕೊಂಡವರು ಅರವತ್ಮೂರು ಜನ ಮಾತ್ರ. ಫ್ರಾಂಕೋನಿಯಾದ ಕೆಳಭಾಗದಲ್ಲಿದ್ದ ಅನೇಕರು ಶಿಕ್ಷೆಯಿಂದ, ರೋಗದಿಂದ, ಸತ್ತರೆ ಹಲವರು ಆತ್ಮಹತ್ಯೆ ಮಾಡಿಕೊಂಡರು. ಸರಿಯಾದ ಸಮಯಕ್ಕೆ ದೇಶ ಬಿಟ್ಟವರು ಉಳಿದುಕೊಂಡರು. ಇಲ್ಲಿರುವ ಲಗೇಜು ಯಾರಿಗೆ ಸೇರಿತ್ತೋ ಅವರಾರು ಬದುಕಿಲ್ಲ.

ಸಿದ್ಧಾಂತಗಳು, ರಾಜಕಾರಣಿಗಳು, ಸ್ಥಳೀಯ ಆಡಳಿತಗಾರರು, ಪೋಲಿಸು, ಮಿಲಿಟರಿ ಆಡಳಿತ ಮತ್ತು ಇಲ್ಲಿನ ಅನೇಕ ಜನ ಸಾಮಾನ್ಯರ ಪಾತ್ರವು ಈ ಅಪರಾಧಿ ಕೃತ್ಯದಲ್ಲಿದೆ. ಇದನ್ನು ನೆನಪಿಸಿಕೊಳ್ಳಲು ಸಾಂಕೇತಿಕವಾಗಿ ಈ ಸ್ಮಾರಕ ನಿರ್ಮಿಸಲಾಗಿದೆ. ನೋಡಿದವರ ಕಣ್ಣು ಹನಿಗೂಡದೆ ಇರಲು ಸಾಧ್ಯವೇ ಇಲ್ಲ.

‍ಲೇಖಕರು Admin

5 September, 2025

1 Comment

  1. rakeshbandol

    not able to open the link

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading