ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ವೀರಲೋಕ’ದಿಂದ ಉತ್ತರಪರ್ವ

ಸಾಮಾನ್ಯವಾಗಿ ಸಾಹಿತ್ಯಲೋಕದಲ್ಲಿ ಕೇಳಿಬರುವ ಮಾತು… ಎಲ್ಲಾ ಪ್ರಶಸ್ತಿಗಳು, ವೇದಿಕೆಗಳು, ಅಧಿಕಾರ, ಅವಕಾಶಗಳು ಒಂದು ಭಾಗದ ಜನರಿಗೇ ದಕ್ಕುತ್ತವೆ. ನಾವೇನು ತಪ್ಪು ಮಾಡಿದ್ದೇವೆ? ಇದು ಕರ್ನಾಟಕದ ವಿವಿಧ ಭಾಗದ ಜನರ ಸಾಮಾನ್ಯ ಆಕ್ರೋಶ! ಈ ಭಾವನೆಯನ್ನು ಸಂಪೂರ್ಣವಾಗಿ ಹೋಗಲಾಡಿಸುವ ಶಕ್ತಿ ನಮಗಿಲ್ಲವಾದರೂ, ನಾವು ಮಾಡುವ ಕೆಲಸದಲ್ಲಿಯೇ ಆ ನಿಟ್ಟಿನಲ್ಲಿ ಒಂದೆರಡು ಹೆಜ್ಜೆ ಇಡಬಹುದಾ ಅಂತ ಭಾವಿಸಿ ಕೈಗೊಂಡ ಯೋಜನೆಯೇ ಈ ಉತ್ತರಪರ್ವ.

ಈ ಯೋಜನೆ ಅಡಿಯಲ್ಲಿ ಉತ್ತರ ಕರ್ನಾಟಕದ ಲೇಖಕರ ಹತ್ತು ಕೃತಿಗಳನ್ನು ಪ್ರಕಟಿಸುತ್ತಿದ್ದೇವೆ. ಅಷ್ಟು ಮಾತ್ರವಲ್ಲದೆ, ಉತ್ತರ ಕರ್ನಾಟಕದ ಲೇಖಕರನ್ನು ಬೆಂಗಳೂರಿಗೆ ಆಹ್ವಾನಿಸಿ, ಆ ಕೃತಿಗಳ ಬಿಡುಗಡೆ ಸಮಾರಂಭವನ್ನು ಬೆಂಗಳೂರಿಗರ ಸಮ್ಮುಖದಲ್ಲಿ ಬಿಡುಗಡೆಗೊಳಿಸುತ್ತಿದ್ದೇವೆ. ಕರ್ನಾಟಕದ ಆ ಭಾಗದವರನ್ನು ಈ ಭಾಗದವರ ಜೊತೆ ಮುಖಾಮುಖಿಯನ್ನಾಗಿಸುತ್ತಿದ್ದೇವೆ ಎನ್ನುತ್ತಾರೆ ವೀರಲೋಕದ ಮುಂದಾಳು ವೀರಕಾಪುತ್ರ ಶ್ರೀನಿವಾಸ್.

ರಾಜಧಾನಿಯಲ್ಲಿರುವವರು ಮಾತ್ರ ಮುಖ್ಯರಲ್ಲ, ಪ್ರತಿಭಾವಂತರಲ್ಲ ಎಂಬುದನ್ನು ಸೂಚ್ಯವಾಗಿ ಹೇಳಲು ಹೊರಟಿದ್ದೇವೆ. ಇದೊಂದು ರೀತಿ ಉಳಿದ ಭಾಗದ ಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸ.

ಈ ಮಹತ್ತರ ಯೋಜನೆಗೆ ಉತ್ತರ ಕರ್ನಾಟಕ ಮತ್ತು ದಕ್ಷಿಣದ ನಡುವೆ ಸೇತುವೆಯಂತೆ ಬದುಕುತ್ತಿರುವ ಮತ್ತು ಬರೆಯುತ್ತಿರುವ ರಾಗಂ ಅವರನ್ನು ಸಂಪಾದಕರನ್ನಾಗಿಸಿದ್ದೆವು. ಈ ಯೋಜನೆಗೆ ಸುಮಾರು ನೂರು ಕೃತಿಗಳು ಬಂದಿದ್ದವು. ಓದುಗರಿಗೆ ಒಳ್ಳೆಯದನ್ನೇ ನೀಡಬೇಕೆಂಬ ಉದ್ದೇಶದಿಂದ ಮೂರು ಹಂತದ ಆಯ್ಕೆ ಪ್ರಕ್ರಿಯೆ ನಡೆಸಿ, ನೂರರಲ್ಲಿ ಹತ್ತು ಕೃತಿಗಳನ್ನು ಆಯ್ದು ಪ್ರಕಟಿಸುತ್ತಿದ್ದೇವೆ. ಅವು ಯಾವುವೆಂದರೆ…

  1. ಶೇಕ್ಷಾವಲಿ ಮಣಿಗಾರ – ಆ ವದನ
  2. ಮರ್ತುಜಾಬೇಗಂ ಕೊಡಗಲಿ – ಪರಸ್ಪರ ಮತ್ತಿತರ ಕೃತಿಗಳು
  3. ಡಾ.ಸದಾಶಿವ ದೊಡಮನಿ – ಇರುಳ ಬಾಗಿಲಿಗೆ ಕಣ್ಣ ದೀಪ
  4. ರವೀಂದ್ರ ಮುದ್ದಿ – ವರದಾ ತೀರದ ಕಥೆಗಳು
  5. ಸಿ.ವಿ.ವೀರುಪಾಕ್ಷ – ಖದೀಜಾ
  6. ಶ್ರೀಧರ ಗಸ್ತಿ – ಚಂದ್ರಾ ಲೇಔಟ್
  7. ಪ್ರಕಾಶ ಗಿರಿಮಲ್ಲನವರ – ಜನನಾಯಕ
  8. ಬಿಜೆ ಪಾರ್ವತಿ ವಿ. ಸೋನಾರೆ – ಓಡಿ ಹೋದಾಕಿ
  9. ಕವಿತಾ ಹೆಗಡೆ ಅಭಯಂ – ಇತ್ತ ಹಾಯಲಿ ಚಿತ್ತ
  10. ನವ್ಯ ಆರ್ ಕತ್ತಿ – ಮಾಯಾ ಗುಹೆ

ಆಯ್ಕೆಯಾದ ಈ ಎಲ್ಲ ಲೇಖಕರ ಕೃತಿಗಳು ದಿ: 04-08-2024 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ, ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಲೋಕಾರ್ಪಣೆಗೊಳ್ಳಲಿವೆ. ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಸುರೇಶ, ಲೇಖಕರಾದ ರಾಗಂ, ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್ ಅವರು ಇರಲಿದ್ದಾರೆ.

‍ಲೇಖಕರು avadhi

3 August, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading