ಖರ ನಾಮ ಸಂವತ್ಸರದ ಆದ್ಯತೆಗಳು
–ನಾ ದಿವಾಕರ
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಈ ಸಾಲುಗಳನ್ನು ನೆನೆಯದ ಕನ್ನಡಿಗರೇ ಇರಲಾರರು. ನವ ಉದಾರವಾದ ಮತ್ತು ಜಾಗತೀಕರಣ, ಭ್ರಷ್ಟಾಚಾರ, ಕೋಮುವಾದ, ಜಾತೀಯತೆ ಹೀಗೆ ಎಲ್ಲ ರೀತಿಯ ಸಮಸ್ಯೆಗಳಿಂದ ಜರ್ಝರಿತವಾಗಿರುವ ಭಾರತದ ಜನಸಾಮಾನ್ಯರ ದೃಷ್ಟಿಯಲ್ಲಿ ಒಂದೊಂದು ಕ್ಷಣವೂ ಒಂದು ಯುಗದಂತಾಗಿರುವಾಗ ಮತ್ತೊಂದು ಯುಗಾದಿ ಬರುವಷ್ಟರಲ್ಲಿ ಹಲವಾರು ಯುಗಗಳೇ ಕಳೆದಿರುತ್ತವೆ. ವಿಕೃತಿ ನಾಮ ಸಂವತ್ಸರ ಕಳೆದು ಖರ ನಾಮ ಸಂವತ್ಸರಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ನೆನಪಿನಲ್ಲುಳಿಯುವುದು ವಿಕೃತಿಗಳೇ ಹೆಚ್ಚು. ಸಂವತ್ಸರದ ಕೊನೆಯಲ್ಲಿ ಭಾರತದ ಕ್ರಿಕೆಟ್ ಕಲಿಗಳು ವಿಶ್ವ ಕಪ್ ಗೆಲ್ಲುವ ಮೂಲಕ ಭಾರತದ ಜನತೆಗೆ ಯುಗಾದಿಯ ಕೊಡುಗೆ ನೀಡಿರುವುದು ಸಂತಸ-ಹೆಮ್ಮೆಯ ವಿಚಾರವೇ ಆದರೂ ಮತ್ತೊಂದೆಡೆ ಅಲಗೂಡಿನ ದಲಿತ ಕುಟುಂಬಗಳ ಮೇಲೆ ಪ್ರಬಲ ಮೇಲ್ವರ್ಗಗಳು ನಡೆಸಿರುವ ಅಮಾನವೀಯ ಆಕ್ರಮಣ ವಿಕೃತಿನಾಮ ಸಂವತ್ಸರವನ್ನು ಸಾರ್ಥಕಗೊಳಿಸುತ್ತದೆ.
ಜಪಾನ್ ದೇಶದಲ್ಲಿ ಸಂಭವಿಸಿದ ಪ್ರಳಯಾಂತಕ ಸುನಾಮಿ ಮತ್ತು ಭೂಕಂಪಗಳು ಆ ದೇಶದ ಬುನಾದಿಯನ್ನೇ ಅಲುಗಾಡಿಸಿವೆ. ಇದು ನೈಸಗರ್ಿಕ ವಿಕೋಪದ ಪರಿಣಾಮ. ಮಾನವನ ನಿಯಂತ್ರಣದಲ್ಲಿರದ ವಿದ್ಯಮಾನ. ಆದರೆ ಭಾರತೀಯ ಸಮಾಜದಲ್ಲಿ ಸಂಭವಿಸಿರುವ ಸುನಾಮಿಗಳು ಸಂಪೂರ್ಣ ಮಾನವ ನಿಮರ್ಿತ. ಒಂದು ರೀತಿಯಲ್ಲಿ ಸ್ವಯಂಕೃತ ಅಪರಾಧ. ಸಂವತ್ಸರದ ಹೆಸರನ್ನು ಸಾರ್ಥಕಪಡಿಸಲು ಪಣತೊಟ್ಟವರಂತೆ ಭಾರತದ ರಾಜಕಾರಣಿಗಳು ಸೃಷ್ಟಿಸಿದ ಭ್ರಷ್ಟಾಚಾರದ ಅಲೆಗಳು ಸುನಾಮಿಯನ್ನೂ ನಾಚಿಸುವಂತಹುದು. 2ಜಿ ಹಗರಣ, ಕಾಮನ್ವೆಲ್ತ್ ಹಗರಣ, ಆದರ್ಶ ಹಗರಣ ಇವು ತ್ರಿವಳಿ ಸೋದರರಂತೆ ಭಾರತದ ಆಡಳಿತ ವ್ಯವಸ್ಥೆಯನ್ನೇ ಅಲುಗಾಡಿಸಿವೆ. ಇತ್ತ ಕನರ್ಾಟಕದಲ್ಲಿ ಭ್ರಷ್ಟಾಚಾರದ ರಿಲೇ ರನ್ನಿಂಗ್ ರೇಸ್ ನಡೆಯುತ್ತಿದೆ. ಜನಪ್ರತಿನಿಧಿಗಳು ಪೈಪೋಟಿಯ ಮೇಲೆ ತಮ್ಮ ಭ್ರಷ್ಟತೆಯನ್ನು ಹೊರಗೆಡಹುತ್ತಿದ್ದಾರೆ. ಭೂ ಹಗರಣ ಎನ್ನುವುದು ಆಡಳಿತ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವೇನೋ ಎನ್ನುವ ಮಟ್ಟಿಗೆ ಕನರ್ಾಟಕದ ರಾಜಕೀಯ ನಿರೂಪಿಸಿಬಿಟ್ಟಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದಕ್ಕಿಂತಲೂ ವಿಕೃತಿ ಊಹಿಸಿಕೊಳ್ಳುವುದೂ ಅಸಾಧ್ಯ.
ಮತ್ತೊಂದೆಡೆ ಭಾರತದಲ್ಲಿ ದೇಶವ್ಯಾಪಿಯಾಗಿ, ಸವರ್ಾಂತಯರ್ಾಮಿಯಾಗಿ, ದೇಶ ಭಾಷೆ ಎಲ್ಲೆಗಳನ್ನು ಮೀರಿ ವ್ಯಕ್ತವಾಗುತ್ತಿರುವ ವಿದ್ಯಮಾನವೆಂದರೆ ಜಾತಿ ಪ್ರಜ್ಞೆ ಮತ್ತು ಜಾತೀಯತೆಯ ಹಿಂಸಾತ್ಮಕ ರೂಪ. ಹರಿಯಾಣಾದ ಖಾಪ್ ಪಂಚಾಯತಿಗಳಿಂದ ಹಿಡಿದು ಕನರ್ಾಟಕದ ಅಲಗೂಡಿನವರೆಗೆ ಜಾತಿ ಪ್ರಜ್ಞೆಯ ಕರಾಳ ಸ್ವರೂಪ ವಿಶ್ವರೂಪ ದರ್ಶನವನ್ನು ನೀಡಿರುವುದು ವಿಕೃತಿ ನಾಮ ಸಂವತ್ಸರದ ಮತ್ತೊಂದು ಕೊಡುಗೆ. ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರುವುದು ನಿಯತಕಾಲಿಕ ವಿದ್ಯಮಾನವಾಗಿದ್ದು, ಬಹಿಷ್ಕಾರ ಹೇರುವವರ ಸಾಮಾಜಿಕ-ಆಥರ್ಿಕ ಪ್ರಾಬಲ್ಯ ಸಂವಿಧಾನದ ನಿಯಂತ್ರಣ ಶಕ್ತಿಯನ್ನೂ ಮೀರಿ ಮುನ್ನಡೆದಿದೆ. ಭಾರತದ ಸಾಮಾಜಿಕ ಚೌಕಟ್ಟಿನ ಒಡಲಲ್ಲಿ ಅಂತರ್ಗತವಾಗಿರುವ ಈ ವಿಕೃತಿಯನ್ನು ಸವಣೂರಿನ ಭಂಗಿಗಳು ತಮ್ಮ ಪ್ರತಿರೋಧದ ಮೂಲಕ ಹೊರಗೆಡಹಿದ್ದಾರೆ. ಆದರೂ ಅಲಗೂಡುಗಳು ನಡೆಯುತ್ತಲೇ ಇರುವುದು ಪ್ರಜ್ಞಾವಂತ ಸಮಾಜದ ನಿಷ್ಕ್ರಿಯತೆ ಮತ್ತು ಪ್ರಜ್ಞಾಪೂರ್ವಕ ಜಾತಿವಾದಿ ಶಕ್ತಿಗಳ ಪ್ರಾಬಲ್ಯವನ್ನು ತೋರುತ್ತದೆ.
ಕಾಪರ್ೋರೇಟ್ ಉದ್ಯಮಿಗಳ ಭೂದಾಹ ಮಿತಿಮೀರುತ್ತಿರುವ ಸಂದರ್ಭದಲ್ಲಿ ಭಾರತದ ಕೃಷಿಕರು ಮತ್ತು ಆದಿವಾಸಿಗಳು ತಮ್ಮ ಮೂಲ ನೆಲೆ ಮತ್ತು ಸೆಲೆ ಎರಡನ್ನೂ ಕಳೆದುಕೊಳ್ಳುತ್ತಿರುವುದಕ್ಕೆ ವಿಕೃತಿ ನಾಮ ಸಂವತ್ಸರ ಸಾಕ್ಷೀಭೂತವಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲ ನೈಸಗರ್ಿಕ ಸಂಪತ್ತಿನ ಲೂಟಿಯನ್ನು ತಡೆಗಟ್ಟುವ ಶ್ರಮಿಕ ವರ್ಗಗಳ ಪ್ರತಿರೋಧದ ದನಿಗಳನ್ನು ಶಾಶ್ವತವಾಗಿ ಹತ್ತಿಕ್ಕುವ ನಿರಂಕುಶ ಧೋರಣೆಯೂ ಕಳೆದ ಸಂವತ್ಸರದಲ್ಲಿ ಸ್ಪಷ್ಟವಾಗಿ ತಲೆದೋರಿದೆ. ಈ ಧೋರಣೆಗಳ ವಿರುದ್ಧ ಸಂಘಟಿತವಾಗಿ ಹೋರಾಡುವ ಮನೋಸ್ಥೈರ್ಯವನ್ನೂ ಭಾರತೀಯ ಸಮಾಜ ಕಳೆದುಕೊಂಡಿದೆಯೇನೋ ಎಂಬ ಅನುಮಾನ ಮೂಡುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಅವ್ಯಾಹತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಆಳುವ ವರ್ಗಗಳ ಮನೋ ವಿಕೃತಿಯೂ ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದೆ. ಬಿನಾಯಕ್ ಸೆನ್ ಈ ವಿಕೃತಿಗೆ ಬಲಿಯಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಸಂಕೇತವಾಗಿ ನಿಲ್ಲುತ್ತಾರೆ.
ಈಗ ಖರ ನಾಮ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಖರ ಎಂದರೆ ರಾಮಾಯಣದಲ್ಲಿ ರಾಮನಿಂದ ಹತನಾದ ರಾಕ್ಷಸನೊಬ್ಬನ ಹೆಸರು. ಹೇಸರಗತ್ತೆಗೂ ಖರ ಎಂದು ಕರೆಯಲಾಗುತ್ತದೆ. ಮತ್ತೊಂದು ಅರ್ಥದಲ್ಲಿ ಒರಟಾದ, ಹರಿತವಾದ ಎಂಬ ಅರ್ಥ ಮೂಡುತ್ತದೆ. ಬಹುಶಃ ಭಾರತದ ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ಈ ಸಂವತ್ಸರದ ಆಗಮನವಾಗಿದೆಯೇನೋ ಎನಿಸುತ್ತದೆ. ಆರು ದಶಕಗಳ ಸಾಂವಿಧಾನಾತ್ಮಕ ಪ್ರಜಾತಂತ್ರವನ್ನು ನಿಷ್ಕ್ರಿಯಗೊಳಿಸುತ್ತಿರುವ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕೋಮುವಾದ, ಫ್ಯಾಸಿಸಂ, ಜಾತೀಯತೆ, ಜಾತಿ ಪ್ರಜ್ಞೆ ಈ ಎಲ್ಲ ರಾಕ್ಷಸರನ್ನು ಕೊನೆಗೊಳಿಸಲು ಇದು ಸಕಾಲ. ಜನಸಾಮಾನ್ಯರ ಬವಣೆಯನ್ನು, ವಂಚಿತ ಜನಸಮುದಾಯಗಳ ಆಕ್ರಂದನವನ್ನು ಕಿಂಚಿತ್ತೂ ಅರಿಯದ ಹೇಸರಗತ್ತೆಗಳನ್ನು ಪಳಗಿಸಲು ಇದು ಸುಸಂದರ್ಭ. ಪ್ರಬಲ ವರ್ಗಗಳಿಂದ ದಮನಕ್ಕೊಳಗಾಗುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜೆಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಹೋರಾಟದ ದನಿಯನ್ನು ಹರಿತಗೊಳಿಸಲೂ ಇದು ಸೂಕ್ತ ಸಮಯ. ಈ ದೃಷ್ಟಿಯಿಂದಲೇ ಖರನಾಮ ಸಂವತ್ಸರವನ್ನು ಸ್ವಾಗತಿಸೋಣ.





0 Comments