ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ

`ರೊಟ್ಟಿ ಮತ್ತು ಗುಲಾಬಿ’ ಘೋಷಣೆಯ ವಿಶ್ವ ಮಹಿಳಾ ದಿನಾಚರಣೆಗೆ ನೂರರ ಸಂಭ್ರಮ ಪುಸ್ತಕಪ್ರೀತಿ ರೊಟ್ಟಿ – ತುಂಬಿದ ಹೊಟ್ಟೆಯ ಹಾಗೂ ಗುಲಾಬಿ – ಗೌರವಾನ್ವಿತ ಬದುಕಿನ ಸಂಕೇತ. ಕೆಲವು ಮಹಿಳೆಯರು ಮಹಿಳೆ ಎನ್ನುವ ಕಾರಣದಿಂದಲೇ ಹಸಿವಿನಿಂದ ಬಳಲುತ್ತಿದ್ದರೆ ಇನ್ನೊಂದು ಭಾಗ ಹಸಿವಿನಿಂದಲ್ಲದಿದ್ದರೂ ತನ್ನೆಲ್ಲಾ ಕೊಡುಗೆಯಿದ್ದರೂ ನಿರ್ಧಾರದಲ್ಲಿ ಹೆಣ್ಣು ಎನ್ನುವ ಕಾರಣಕ್ಕೆ `ಎರಡನೇ ದರ್ಜೆ’ಗೆ ತಳ್ಳಲ್ಪಡುವ ಅವಮಾನದಿಂದ ಬಳಲುತ್ತಿದ್ದಾಳೆ. ಮಹಿಳೆಯ ಕುರಿತಾದ ಜೀವವಿರೋಧಿ ತಾರತಮ್ಯದ ವಿರುದ್ಧ ಹೋರಾಡಿದ, ಹೋರಾಡುತ್ತಿರುವ ಕೋಟಿ ಮಹಿಳೆಯರಿಗೆ ನಮ್ಮ ಧನ್ಯವಾದಗಳು. ಇಂತಹ ಸಮರಧೀರ ಮಹಿಳೆಯರಿಂದಾಗಿಯೇ (ನಿರಂತರ ಹೋರಾಟದ ನೂರು ವರ್ಷಗಳ ನಂತರವೂ) ಮಹಿಳೆಯರಿಗೆ ಕೆ(ಹ)ಲವು ಕೊರತೆಗಳಿದ್ದರೂ ಇಷ್ಟಾದರೂ ಒಳ್ಳೆಯ ಸ್ಥಾನ ಮಾನ ಸಿಕ್ಕಿದೆ. ಈ ಕೊರತೆಗಳ ನಿರ್ಮೂಲನೆಗಾಗಿ ನಾವು `ವಿಶ್ವ ಮಹಿಳಾ ದಿನ’ದ ಹೋರಾಟದ ಪರಂಪರೆಯನ್ನು ಮುಂದುವರಿಸಬೇಕಾಗಿದೆ. ಮಹಿಳೆಯ ಗುಣಗಾನ ಮಾಡುವ ನೆಪದಲ್ಲಿ ಮಹಿಳೆಯ ಮೇಲೆ `ಕ್ಷಮೆ’ ಎನ್ನುವ ಗುಣವನ್ನು ಹೊರಿಸಿ ತಾನು ಅನುಭವಿಸುವ ಹಸಿವು ಅಪಮಾನ ಗಳನ್ನು ಸಹಿಸಿಕೊಂಡಿರು ಎನ್ನುವ `ಕ್ಷಮಯಾ ಧರಿತ್ರೀ’ ಎನ್ನುವ ಧರ್ಮವಾಕ್ಯ ಮಹಿಳೆಯರನ್ನು ಹೋರಾಟದ ಹಾದಿಯಿಂದ ವಿಮುಖಳಾಗಿಸು ಒಂದು ಹುನ್ನಾರ ಎನ್ನುವುದು ಮಹಿಳೆ ಅರಿತಿರಬೇಕು. ಸಮ್ಮಾನ, ಗೌರವಗಳಿಲ್ಲದ ಬರಿಯ ಹೊಗಳಿಕೆ ಇನ್ನು ಸಾಕು. ದುಡಿಮೆಯ ಮೂಲಕ ಹಸಿವನ್ನು ನೀಗಿಸಿಕೊಳ್ಳುವ ಹಾಗೂ ಗೌರವಾನ್ವಿತ ಬದುಕನ್ನು ನಡೆಸುವುದೇ ಎಲ್ಲಾ ಮಹಿಳೆಯರ ಗುರಿಯಾಗಿರಲಿ. ಯಾವುದೇ ರೀತಿಯ ದುಡಿಮೆಯಿರಲಿ ಅದು ಮಹಿಳೆಯ ಹಸಿವನ್ನು ನೀಗುವುದು ಮಾತ್ರವಲ್ಲದೇ ಅವಳು ಗೌರವ ಪಡೆಯಲು ಅನುಕೂಲವಾಗುವಂತಿರಬೇಕು. ಅಂತಹ ದುಡಿಮೆಯ ಹಕ್ಕು ಮಹಿಳೆಯರದಾಗಬೇಕು. ಆಗಲಷ್ಟೇ ನೂರು ವರ್ಷಗಳಿಂದ ವಿವಿಧ ಬೇಡಿಕೆಗಳನ್ನಿಟ್ಟು ಹೋರಾಡಿದ ಮಹಿಳೆಯರ ಹೋರಾಟದ ಯಶಸ್ವಿಯಾಗಿದೆ ಎನ್ನಬಹುದು. `ವಿಶ್ವ ಮಹಿಳಾ ದಿನ’ ನೂರು ವರ್ಷಗಳನ್ನು ದಾಟಿದ ಈ ಸಂದರ್ಭದಲ್ಲಿ `ಚಿಂತನ ಪುಸ್ತಕ’ ಹೊರ ತಂದಿರುವ `ಅಂತರ ರಾಷ್ಟ್ರೀಯ ಮಹಿಳಾ ದಿನ ಶತಮಾನೋತ್ಸವ ಮಾಲಿಕೆ’ ಯಲ್ಲಿ ಯೋಜಿಸಿದ 12 ಪುಸ್ತಕಗಳಲ್ಲಿ ಈಗಾಗಲೇ ಹೊರಬಂದ 4 ಪುಸ್ತಕಗಳ ಪರಿಚಯ ಇಲ್ಲಿದೆ ಶೀರ್ಷಿಕೆ: ಮಹಿಳಾ ವಿಮೋಚನೆಯ ಹೋರಾಟಗಳ ನೂರು ವರ್ಷಗಳು ಪ್ರಕಾಶಕರು: ಚಿಂತನ ಪುಸ್ತಕ ಲೇಖಕರು:ಎಸ್.ಕೆ.ಗೀತಾ ಪುಟ:88+4 ಬೆಲೆ:ರೂ.70/- ಶೀರ್ಷಿಕೆ: ನೀನುಂಟು ನಿನ್ನ ರೆಕ್ಕೆಯುಂಟು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು: ಮಾಧವಿ ಭಂಡಾರಿ ಕೆರೆಕೋಣ ಪುಟ:136+4 ಬೆಲೆ:ರೂ.95/- ಶೀರ್ಷಿಕೆ: ವಿಶ್ವ ಮಹಿಳಾ ದಿನದ ರೂವಾರಿ ಕ್ಲಾರಾ ಜೆಟ್ಕಿನ್ ಪ್ರಕಾಶಕರು:ಚಿಂತನ ಪುಸ್ತಕ ಲೇಖಕರು: ಡಾ.ಎನ್.ಗಾಯತ್ರಿ ಪುಟ: 118+4 ಬೆಲೆ:ರೂ.80/ ಶೀರ್ಷಿಕೆ: ದಶಕದ ಮಹಿಳಾ ಸಾಹಿತ್ಯದಲ್ಲಿ ಪ್ರತಿರೋಧದ ನೆಲೆಗಳು ಪ್ರಕಾಶಕರು:ಚಿಂತನ ಪುಸ್ತಕ ಸಂಪಾದಕರು:ಡಾ.ಸಬಿಹಾ ಭೂಮಿಗೌಡ ಪುಟ:96+4 ಬೆಲೆ:ರೂ.70]]>

‍ಲೇಖಕರು G

9 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading