ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶುಕುಮಾರ್ ಕಂಡಂತೆ 'ಮದುಮಗಳು' ಮೊದಲ ಪ್ರಯೋಗ

ಎನ್.ಆರ್. ವಿಶುಕುಮಾರ್,

ನಿರ್ದೇಶಕರು, ವಾರ್ತಾ ಇಲಾಖೆ

ರಂಗಮಂಚವೇರಿದ ಮದುಮಗಳು

ಗುರುವಾರ ರಾತ್ರಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ ಮಹಾಕವಿ ಕುವೆಂಪುರವರ ಮೇರುಕೃತಿ ಮಲೆಗಳಲ್ಲಿ ಮದುಮಗಳು ರಂಗಮಂಚಕ್ಕೇರಿದ ಸಂಭ್ರಮ-ಸಡಗರ. ಸುತ್ತಿ ಸುತ್ತಿ ಸುಳಿದಾಡುತ್ತಿತ್ತು ಗುತ್ತಿ ಮತ್ತು ಅವನ ಸಾಕು ನಾಯಿ ಹುಲಿಯಾ ಕಲಾಗ್ರಾಮದ ನಾಲ್ಕು ರಂಗ ವೇದಿಕೆಗಳಾದ ಕೆರೆಯುಗಣರಂಗ, ಬಯಲುರಂಗ, ಬಿದಿರುಮೇಳರಂಗ ಮತ್ತು ಹೊಂಗೆರಂಗದಲ್ಲಿ ತಾವೇ ತಾವಾಗಿ ವಿಜೃಂಬಿಸುತ್ತಿದ್ದರು. ಹುಲಿಕಲ್ ನೆತ್ತಿಯ ಮೇಲೆ ಸುಬ್ಬಣ್ಣ ಹೆಗಡೆಯವರ ಹೃದಹ ವಿದ್ರಾವಕವಾದ ಸೋಲಿನ ಘಟನೆಗಳು ಪ್ರೇಕ್ಷಕರ ಕಣ್ಣಂಚನ್ನು ತೇವಗೊಳಿಸುತ್ತಿದ್ದವು. ಇದೇ ರಾತ್ರಿ ರಂಗಸಕ್ತರ ಕಣ್ಣುಗಲಿಗೆ ದಣಿವರಿಯದ ಆನಂದ.
ಕಳೆದ ಎರಡು ತಿಂಗಳುಗಳಿಂದ ಮಲೆಗಳಲ್ಲಿ ಮದುಮಗಳು ರಂಗರೂಪದ ಪ್ರದರ್ಶನ ಬೆಂಗಳೂರಿನಲ್ಲಿ ನಡೆಯುತ್ತದೆ ಎನ್ನುವ ಸುದ್ದಿಯೆ ನಗರದ ರಂಗಾಸಕ್ತರಿಗೆ ಕೂತೂಹಲದ ಕೇಂದ್ರವಾಗಿತ್ತು. ಹೆಚ್ಚಿನ ಆಡಂಬರದ ಔಪಚಾರಿಕ ಉದ್ಘಾಟನೆಯಿಲ್ಲದ ಸರಳವಾಗಿ ರಂಗಮಂಚಕ್ಕೇರಿದ ಮದುಮಗಳು ನಾಟಕದ ಪ್ರಥಮ ಪ್ರದರ್ಶನಕ್ಕೆ ಸುಮಾರು 500 ಮಂದಿ ಆಗಮಿಸಿದ್ದರು. ಏಪ್ರಿಲ್ 18 ರ ಗುರುವಾರ ರಾತ್ರಿ 8-30 ಕ್ಕೆ ಆರಂಭವಾದ ನಾಟಕ ಶುಕ್ರವಾರ ಬೆಳಗಿನ ಜಾವ 5-30 ಕ್ಕೆ ಯಶಸ್ವಿಯಾಗಿ ಪೂರ್ಣಗೊಂಡಾಗ ಸಂಘಟಕರಿಗೆ ಎಲ್ಲಿಲ್ಲದ ಆನಂದ. ಕಳೆದ ಒಂದುವರೆ ತಿಂಗಳಿನಿಂದ ರಂಗ ತಾಲೀಮಿನಲ್ಲಿ ತೊಡಗಿದ್ದ ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಕಲಾವಿದರಲ್ಲಿ ರಂಗ ಪ್ರಸವದ ನಿರಾಳತೆ ತುಂಬಿ ತುಳುಕುತ್ತಿತ್ತು.
ಜೋಗಿ ಜಂಗಮರ ಪ್ರವೇಶದೊಂದಿಗೆ ಕೆರೆಯಂಗಳದಲ್ಲಿ ರಾತ್ರಿ 8-30 ಕ್ಕೆ ಆರಂಭವಾದ ನಾಟಕ ಸುಮಾರು ಎರಡುವರೆ ತಾಸುಗಳ ಕಾಲ ಮಲೆನಾಡಿನ ಜನಜೀವನವನ್ನು ಬಿಂಬಿಸುವ ಹಾಗೂ ನಾಟಕ ಪಾತ್ರಗಳನ್ನು ಪರಿಚಯಿಸುವ ವಿಸ್ತಾರವಾದ ಕ್ಯಾನ್ವಾಸ್ ಆಗಿತ್ತು. ಹದಿನೈದು ಇಪ್ಪತ್ತು ನಿಮಿಷಗಳ ಬಿಡುವಿನ ನಂತರ ಬಯಲು ರಂಗಮಂದಿರದಲ್ಲಿ ನಾಟಕದ ಪಾತ್ರಗಳ ಪೋಷಣೆ ಮತ್ತು ಕಥೆ ಸಾಗುವ ದಿಕ್ಕಿಗೆ ಹೆಚ್ಚು ಒತ್ತು ನೀಡಲಾಗಿತ್ತು. ನಾಯಿಗುತ್ತಿ ತನ್ನ ಪ್ರೇಯಸಿ ತಿಮ್ಮಿಯನ್ನು ಅಪಹರಿಸಿಕೊಂಡು ಹೋಗುವ ದೃಶ್ಯದಿಂದ ಆರಂಭಗೊಂಡ ಈ ರಂಗಪ್ರಸಂಗದಲ್ಲಿ ಕರಿಮೀನು ಸಾರು ಹೊನ್ನವಳ್ಳಿಯ ಹೊಡೆತ, ನಾಗಕ್ಕ ವೆಂಕಣನಾಯ್ಕರ ಕೂಡಿಕೆ ಸಂಬಂಧಗಳು ಬಿಂಬಿತವಾಗಿ ನಡುರಾತ್ರಿ ಮುಗಿಯುವ ವೇಳೆಗೆ ಬಿದಿರು ರಂಗಕ್ಕೆ ತನ್ನ ಮುಂದಿನ ಪಯಣ ಬೆಳೆಸಿತು.
ಸುಬ್ಬಣ್ಣ ಹೆಗಡೆಯವರು ಹುಲಿಕಲ್ ಘಾಟಿಯೇರುತ್ತಾ ಕಾಣಿಯಾದ ತನ್ನ ಮಗನನ್ನು ಹುಡುಕುತ್ತಾ ಬದುಕಿನ ನೋವಿನ ಘಟನೆಗಳನ್ನೆಲ್ಲಾ ನೆನೆಸಿಕೊಂಡು ದು:ಖ ತೋಡಿಕೊಳ್ಳುವ ಪ್ರಸಂಗ ಹಾಗೂ ಅಂತಕ್ಕ ಶೆಟ್ಟಿಯ ಮಗಳು ಕಾವೇರಿಯ ಸಾಮ ಹೀಗೆ ದುರಂತಗಳ ನೋಟವನ್ನು ನೀಡುತ್ತಲೇ ಕ್ರೈಸ್ತಪಾದ್ರಿ ಜೀವರತ್ನಯ್ಯ ಹೊಸದಾಗಿ ಶಾಲಾ ಕಟ್ಟಡವನ್ನು ನಿಮರ್ಿಸುವ ದೃಶ್ಯಗಳಿಗೆ ಬಿದಿರುರಂಗದಲ್ಲಿ ಪ್ರಧಾನವಾಗಿವೆ.
ಅಂತಿಮವಾಗಿ ಹೊಂಗೆ ರಂಗದಲ್ಲಿ ಮದುವೆ ಹುಡುಗಿ ಹೂವಮ್ಮನ ಅಪಹರಣ, ಮುಕುಂದಯ್ಯ ಹೂವಮ್ಮನ ಮದುವೆಯ ದೃಶ್ಯಗಳು ವಿಜೃಂಬಿಸುತ್ತವೆ. ನಾಟದಕ ಉದ್ದಕ್ಕೂ ರಂಗದ ತುಂಬೆಲ್ಲಾ ಲವಲವಿಕೆಯಿಂದ ಜಿಗಿದಾಡುತ್ತಿದ್ದ ಗುತ್ತಿಯ ನಾಯಿ ಹುಲಿಯಾ ನದಿಯ ನೆರೆಯಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯದೊಂದಿಗೆ ನಾಟಕಕ್ಕೆ ತೆರೆಬೀಳುತ್ತದೆ.


 
 

‍ಲೇಖಕರು G

20 April, 2013

5 Comments

  1. Basavaraj

    I want see that. Can i get its
    video in internet? if yes please give me the link.

  2. vidya.kundargi.

    ಸರ್, ನಮಸ್ಕಾರಗಳು.
    ನಾವು ಬಯಲುಸೀಮೆಯವರು ‘…..ಈ ಮದುಮಗಳ’ನ್ನ ನೋಡಬಾರದೆ? ದಯವಿಟ್ಟು ಈ ರಂಗರಸಪಾಕದ ಸವಿ ನಮಗೂ ಹಂಚಿ..
    ದಯವಿಟ್ಟು ಧಾರವಾಡದಲ್ಲಿಯೂ ಈ ಈ ಪ್ರಯೋಗ ಹಮ್ಮಿಕೊಳ್ಳಿ.
    ಧನ್ಯವಾದಗಳೊಂದಿಗೆ

  3. jagadishkoppa

    ವಿಶು, ಮಲೆಗಳಲ್ಲಿ ಮದುಮಗಳು ನಾಟಕದ ವರದಿ ಓದುತ್ತಿದ್ದರೆ, ನಾವು ಧಾರವಾಡದ ಮಂದಿ ವಾರ್ತಾ ಇಲಾಖೆಯ ಮುಂದೆ ಧರಣಿ ಕೂತು, ಧಾರವಾಡಕ್ಕೂ ಈ ಪ್ರಯೋಗವನ್ನು ತರಲು ಒತ್ತಾಯಿಸಬೇಕೆನಿಸಿದೆ. ದಯವಿಟ್ಟು ಈ ಕುರಿತು ಯೋಚಿಸಿ.
    ಜಗದೀಶ್ ಕೊಪ್ಪ, ಧಾರವಾಡ.

  4. Vishu Kumar

    Nimma aase eederali endu haarysutteve.

  5. Gopaal Wajapeyi

    Hohoho… Chennaagide nimma ‘uttara’ Vishu Kumar avare… ! 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading