ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶಿಷ್ಟ ಅನುಭವದ ನಾಟಕ ‘ಲೀಡರ್’

ನಾದ ಮಣಿನಾಲ್ಕೂರು 

“ಮೊತ್ತ ಮೊದಲ ಬಾರಿಗೆ ಈ ದ್ವೀಪದಲ್ಲಿ ಕೈಬೀಸಿ ನಡೆದೆ” ಅನ್ನುತ್ತಾ ಅವನು ಸ್ವಾತಂತ್ರ್ಯದ ಅಮಲು ಏರಿಸಿಕೊಳ್ಳುತ್ತಾನೆ; ಜೊತೆಗಾರ ಒಂಟಿಯಾಗುತ್ತಾನೆ. ರಾತ್ರಿಗಳ ನಿದ್ದೆ ಕಳೆದುಕೊಂಡು ಕರುಳಾಳದಲ್ಲಿ ದಿನಗಳ ಲೆಕ್ಕ ಹಾಕುತ್ತಾನೆ, ಜೊತೆಗಾರ ನಿದ್ದೆ ಕಳ್ಕೋತಾನೆ.

ನಿನ್ನೆ ಮಂಗಳೂರು ಪಾದುವಾ ಕಾಲೇಜು ಸಭಾಂಗಣದಲ್ಲಿ ನಡೆದ KP ಲಕ್ಷ್ಮಣ್ ನಿರ್ದೇಶನದ ‘ದ್ವೀಪ’ ನಾಟಕ ಕಟ್ಟಿಕೊಟ್ಟ ಚಿತ್ರವಿದು.

ಇತ್ತೀಚೆಗಿನ ಮಂಗಳೂರು, ಕರಾವಳಿಯ ರಂಗಭೂಮಿಗೆ ಹೊಸ ಪರಿಭಾಷೆಯ ನಾಟಕವಿದು.

ಹಿರಿಯ ನಟರಾದ ಚಂದ್ರಹಾಸ್ ಉಳ್ಳಾಲ ಮತ್ತು ಪ್ರಭಾಕರ ಕಾಪಿಕಾಡ್ ಅವರುಗಳ ಸಹಜ ಮತ್ತು ಅನುಭವಾತ್ಮಕ ಪ್ರಬುದ್ಧ ನಟನೆ, ಪ್ರಸ್ತುತ ರಾಜಕೀಯ ತಲ್ಲಣಗಳ ಚಿತ್ರಣ ಸೇರಿದಂತೆ ಒಟ್ಟು ನಾಟಕ ಒಂದು ವಿಶಿಷ್ಟ ಅನುಭವ ಕಟ್ಟಿಕೊಟ್ಟಿದೆ. ‘ಅಯನ’ ನಾಟಕ ಮನೆ ಬಳಗ ಆಯೋಜಿಸಿತ್ತು.

ಇವತ್ತು ಅಯನ ಪೂರ್ಣ ಬಳಗದ ಮತ್ತು ಇದೇ ನಿರ್ದೇಶಕರ ನಾಟಕ #ಲೀಡರ್ ಇದೆ.

‍ಲೇಖಕರು avadhi

31 August, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading