ವಿಲೀನ ಎಂದರೆ ಕೊಲೆಯಲ್ಲ, ಸ್ವರ್ಗಕ್ಕೆ ಕಳುಹಿಸುವುದು” ಎಂದಂತೆ.

-ದೇವನೂರ ಮಹಾದೇವ

ಮುಚ್ಚಿ ವಿಲೀನ ಎಂದರೆ ಕೊಂದು ಸ್ವರ್ಗಕ್ಕೆ ಕಳುಹಿಸಲಾಯಿತು ಎಂದಂತೆ.
ಈಗ ಮೂರು ಸಾವಿರ ಚಿಲ್ಲರೆ ಸಕರ್ಾರಿ ಶಾಲೆಗಳನ್ನು ಮುಚ್ಚಲು ಸಕರ್ಾರ ತುದಿಗಾಲಲ್ಲಿ ನಿಂತಿದೆ. ಇದನ್ನು, ಸಕರ್ಾರ “ಮುಚ್ಚುವುದಲ್ಲ ಬದಲಿಗೆ ವಿಲೀನ” ಎಂದು ಕರೆಯುತ್ತಿದೆ. ಇದು – “ಕೊಂದದ್ದನ್ನು ಕೊಲೆಯಲ್ಲ; ಸ್ವರ್ಗಕ್ಕೆ ಕಳುಹಿಸುವುದು” ಎಂದಂತೆ.
ಈಗಾಗಲೇ ಕಳೆದ ಹತ್ತು ವರ್ಷದಿಂದ ಹತ್ತು ಸಾವಿರಕ್ಕೂ ಹೆಚ್ಚು ಸಕರ್ಾರೀ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಿ ಸ್ವರ್ಗಕ್ಕೆ ಕಳುಹಿಸಲಾಗಿದೆ. ಇದನ್ನು ಮಕ್ಕಳ ಕೊರತೆ ಕಾರಣ ಕೊಟ್ಟು ಸಕರ್ಾರ  ಸಮಥರ್ಿಸಿಕೊಳ್ಳುತ್ತಿದೆ. ಸರಾಸರಿ ಲೆಕ್ಕಕ್ಕೆ ಬಂದರೆ ಒಂದು ಸಕರ್ಾರಿ ಶಾಲೆಯಲ್ಲಿ 120 ಮಕ್ಕಳಿದ್ದರೆ ಅದೇ ಒಂದು ಖಾಸಗಿ ಶಾಲೆಯಲ್ಲಿ 229 ಮಕ್ಕಳು ಇದ್ದಾರೆ. ಇದರ ಅರ್ಥ ಏನು? ಖಾಸಗಿ ಶಾಲೆಯಲ್ಲಿ ವಿದ್ಯಾಥರ್ಿಗಳ ಕೊರತೆಯಾಗದಂತೆ ಕಾಪಾಡಲು ಖಾಸಗಿ ಹಿತಕ್ಕೆ ಬಲಿಯಾದ ಸಕರ್ಾರ ಮತ್ತು ಅಧಿಕಾರಶಾಹಿಯ ಒಳಸಂಚಲ್ಲವೇ ಇದು?
ಒಂದು ನಿಜವಾದ ಸಕರ್ಾರ ಇದ್ದಿದ್ದರೆ ಏನು ಮಾಡ್ತಾ ಇತ್ತು? ತನ್ನ ಮುಖಕ್ಕೆ ತಾನೇ ಉಗಿದುಕೊಳ್ಳುವ ಇಂಥ ಕೆಲಸ ಮಾಡ್ತಾ ಇರಲಿಲ್ಲ. ಬದಲಾಗಿ ಖಾಸಗಿ ಶಾಲೆಗಳನ್ನೆ ಮುಚ್ಚಿ ಅದನ್ನು ಸಕರ್ಾರಿ ಶಾಲೆಯೊಡನೆ ವಿಲೀನಗೊಳಿಸುತ್ತಿತ್ತು. ಅಷ್ಟೇಕೆ, ಕನ್ನಡ ಮಾಧ್ಯಮಕ್ಕೆ ಎಂದು ಅನುಮತಿ ಪಡೆದು ಗುಟ್ಟಾಗಿ ಇಂಗ್ಲೀಷ್ ಮಾಧ್ಯಮ ಬೋಧಿಸುವ ಖಾಸಗಿ ಶಾಲೆಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದ್ದರೂ ಸಕರ್ಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆಯ ಕೊರತೆ ಬರುತ್ತಿರಲಿಲ್ಲ. ಇದು ಯಾರಿಗೆ ಗೊತ್ತಿಲ್ಲ?
ಈಗಲೂ ಖಾಸಗಿ ಶಾಲೆಗಳನ್ನು ಮುಚ್ಚಿದರೆ ಓದುತ್ತಿರುವ ಮಕ್ಕಳ ಹೆಚ್ಚಳದಿಂದ ಮೂರು ಸಾವಿರ ಶಾಲೆಗಳನ್ನು ಮುಚ್ಚುವ ಮಾತಿರಲಿ, ಈಗಾಗಲೆ ಮುಚ್ಚಿರುವ ಹತ್ತು ಸಾವಿರ ಚಿಲ್ಲರೆ ಶಾಲೆಗಳನ್ನೂ ಪುನಃ ತೆಗೆಯಬೇಕಾಗಿ ಬರುತ್ತದೆ. ಬಹುಶಃ ಇದೂ ಸಾಲದೆ ಬರಬಹುದು. ಆದ್ದರಿಂದ ಸಕರ್ಾರಕ್ಕೆ ನಾವು ಈಗ ಒಕ್ಕೊರಲಿನಿಂದ ಸಕರ್ಾರಿ ಶಾಲೆಗಳ ಮೇಲೆ ಕಾಗೆ ಹಾರಿಸಬೇಡಿ ಎಂದು ಕೂಗಿ ಹೇಳಬೇಕಾಗಿದೆ. ಮೂರು ಸಾವಿರ ಶಾಲೆಗಳನ್ನು ಮುಚ್ಚಬೇಡಿ ಎಂದು ಮಾತ್ರವಲ್ಲ: ಈಗಾಗಲೆ ಮುಚ್ಚಿರುವ ಹತ್ತು ಸಾವಿರ ಶಾಲೆಗಳನ್ನು ಮತ್ತೆ ತೆಗೆಯಿರಿ ಎಂದು ಕೇಳಬೇಕಾಗಿದೆ.
ಜೊತೆಗೆ, “ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ”ಯನ್ನು ಕೇಂದ್ರ ಸಕರ್ಾರ ಜಾರಿಗೆ ತಂದು ಹೆಚ್ಚುಕಮ್ಮಿ ಎಲ್ಲಾ ರಾಜ್ಯಗಳೂ ಅಳವಡಿಸಿಕೊಂಡಿದ್ದರೂ ನಮ್ಮ ರಾಜ್ಯ ಮಾತ್ರ ಶಾಸ್ತ್ರ ಕೇಳುತ್ತ ಕೂತಿದೆ. ನ್ಯಾಯಾಲಯ ಈ ಕಾಯ್ದೆಯನ್ನು ಜಾರಿಗೊಳಿಸುವಂತೆ ಆದೇಶಿಸಿದ್ದರೂ ಸಕರ್ಾರ ನ್ಯಾಯಾಲಯಕ್ಕೂ ಬೆಲೆ ಕೊಡುತ್ತಿಲ್ಲ. ಸಕರ್ಾರದ ಉದ್ದೇಶ ಏನು, ಸಕರ್ಾರ ಯಾಕಿದೆ ಎಂಬುದು ಅರ್ಥವಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ತಾರತಮ್ಯದ ರೋಗಕ್ಕೆ ತುತ್ತಾದ ಭಾರತದಲ್ಲಿ, ಮಕ್ಕಳ ನಡುವೆಯಾದರು ಭಿನ್ನ ಭೇದವಿಲ್ಲದ ಏಕರೂಪ ಶಿಕ್ಷಣಕ್ಕಾಗಿ ಒಂದು ಜನಾಂದೋಲನಕ್ಕೆ ಈ ನೆಲ ಕಾಯುತ್ತಿದೆ. ಇದನ್ನೆಲ್ಲಾ ಸಕರ್ಾರ ಗಮನಿಸಿ ಕಾರ್ಯಪ್ರವೃತ್ತವಾಗಬೇಕು. ಇಲ್ಲದಿದ್ದರೆ “ಮಾತೃಭೂಮಿಯನ್ನೇ ಮಾರ್ಕಂಡು ತಿನ್ನುವವರಿಗೆ ಮಾತೃಭಾಷೆ ಯಾವ ಲೆಕ್ಕ” ಎಂಬ ಅಪವಾದದಿಂದ ಈ ಸಕರ್ಾರಕ್ಕೆ ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲವೇನೋ.

‍ಲೇಖಕರು avadhi

November 3, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. vijayaraghavan

    ದೇವನೂರರ ನೋವು ಸಕಾರಣವಾಗಿದೆ. ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆಯಾಗದಂತೆ ಕಾಪಾಡಲು ಖಾಸಗಿ ಹಿತಕ್ಕೆ ಬಲಿಯಾದ ಸರ್ಕಾರ ಮತ್ತು ಅಧಿಕಾರಶಾಹಿಯ ಒಳಸಂಚಲ್ಲವೇ ಇದು ಎನ್ನುವುದಕ್ಕಿಂತ ಸುಡುಗಾಡು ಕೊಂಪೆಗಳಲ್ಲೂ ಕಾನ್ವೆಂಟ್‌ ಶಾಲೆಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದ್ದರ, ಮತ್ತು ಅದೇನೋ ಕಡಿದು ಕಟ್ಟೆ ಹಾಕುವಂತೆ ನರ್ಸರಿ ಶಾಲೆಗಳನ್ನು ತೆರೆಯಲು ಅನುವು ಮಾಡಿಕೊಟ್ಟದ್ದರ ಪರಿಣಾಮ ಇದು. ಒಂದು ಹಳ್ಳಿಯಲ್ಲಿ ನಾನು ಕಂಡಿದ್ದು ಸರ್ಕಾರಿ ಶಾಲೆಯೆಂದರೆ ಕುರಿ ದೊಡ್ಡಿ ಎನ್ನುವ ಮಾತಿಗೆ ವಿರುದ್ಧವಾಗಿ ಆ ಊರಿನ ಹತ್ತಕ್ಕೂ ಹೆಚ್ಚು ಶಿಕ್ಷಕರಿರುವ ಸರ್ಕಾರಿ ಶಾಲೆಯಿರುವ ಕಡೆಯೇ ಇರುವ ಖಾಸಗಿ ಶಾಲೆಗೆ ಮುಗಿಬಿದ್ದು ಮಕ್ಕಳನ್ನು ಸೇರಿಸುವ ಜನರನ್ನು. ಹಾಗಾಗಿ ಕೇವಲ ಐದಾರು ವರ್ಷಗಳಲ್ಲಿ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗಿಂತಲೂ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸುವವರ ಸಂಖ್ಯೆ ಹತ್ತಾರು ಪಟ್ಟು ಹೆಚ್ಚಾದದ್ದು ವಿಪರೀತದ ವಿದ್ಯಮಾನವಾಗಿ ನನಗೆ ತೋರಿದೆ. ಈಗ ಈ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟು. ಇದು ಹೀಗೇ ಆದರೆ ಆ ಶಾಲೆಯನ್ನು ಸಹ ಮುಚ್ಚಿ ವಿಲೀನಗೊಳಿಸುವುದರಲ್ಲಿ ಆರ್ಥಿಕ ಬುದ್ಧಿವಂತತನವಿದೆ. ಈಗಾಗಲೆ ಮುಚ್ಚಿರುವ ಹತ್ತು ಸಾವಿರ ಶಾಲೆಗಳನ್ನು ಮತ್ತೆ ತೆಗೆಯಿರಿ ಎಂದು ಕೇಳಬೇಕಾಗಿದೆ ಎನ್ನುವ ಮಹಾದೇವರ ಮಾತುಗಳಿಗೆ ಆಡಳಿತಾತ್ಮಕವೂ, ಅದಕ್ಕಿಂತ ಹೆಚ್ಚಿನ ಕಾರಣಗಳನ್ನು ಸರ್ಕಾರ ಕೊಡಬಹುದು. ಆದರೆ ಈ ವಿಚಾರ ಒಳಗೊಳ್ಳುವ ಚಾರಿತ್ರಿಕ ವಿಚಾರಗಳನ್ನು ವಿಚಾರಮಾಡುವ ಅಗತ್ಯವಿದೆ. “ಮಾತೃಭೂಮಿಯನ್ನೇ ಮಾರ್ಕಂಡು ತಿನ್ನುವವರಿಗೆ ಮಾತೃಭಾಷೆ ಯಾವ ಲೆಕ್ಕ” ಎಂಬ ಅಪವಾದದಿಂದ ಯಾವ ಸರ್ಕಾರಕ್ಕು ತಪ್ಪಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲವೆನ್ನುವ ಸಂದರ್ಭಗಳನ್ನು ಸರ್ಕಾರಗಳೇ ಸೃಷ್ಟಿಸುತ್ತವೆ ಎನಿಸುತ್ತದೆ ನನಗೆ.
    ಆರ್. ವಿಜಯರಾಘವನ್‌

    ಪ್ರತಿಕ್ರಿಯೆ
  2. raju hegade

    ಭಾರತಿಯ ಸಂಸ್ಕ್ರತಿ, ಮಾತ್ರಭೂಮಿ ಎನ್ನುವವರ ತಲೆಯಲ್ಲಿ ಇರುವುದು ಪಾಕಿಸ್ತಾನ ಮತ್ತು ಪಾಶ್ಚಾತ್ಯವೇ.ಏನು ಮಾಡುವುದು ಈ ನನ್ ಮಕ್ಕಳಿಗೆ ಎಂದು ಗೊತ್ತಾಗುತ್ತಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: