ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಮಾನ ಪ್ರಸಂಗವು…

ಅಲ್ಲಮ ಪ್ರಭು ಬೆಟ್ಟದೂರು

ಮಾನ್ವಿ ತಾಲೂಕಿನ ಮಾಡಗಿರಿಯಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಓದುವಾಗ ಒಂದು ದಿನ ವಿಮಾನ ಕೆಳಗೆ ಬಂತು. ಆಗ ಯಾರನ್ನು ಹೇಳದೆ ಕೇಳದೆ ಶಾಲೆಯಿಂದ ಹೊರಬಿದ್ದು ವಿಮಾನ ಬಿದ್ದಿರಬಹುದು ಎಂದು ಅದು ಹೋದ ದಿಕ್ಕಿನತ್ತ ಶಾಲೆಯ ಹುಡುಗರೆಲ್ಲ ಓಡಿದೆವು. ಹರವಿ ಎಂಬ ಊರು ತಲುಪಿದೆವು. ವಿಮಾನ ಬಿದ್ದಿರಲಿಲ್ಲ. ಹರವಿ ಬಸವಣ್ಣನ ಗುಡಿ ನೋಡಿಕೊಂಡು ನಿರಾಸೆಯಿಂದ ಶಾಲೆಗೆ ವಾಪಾಸು ಬಂದೆವು. ಮಾಸ್ಟರ್ ಈಚಲ ಜಬ್ರೆ ತರಲು ಹೇಳಿದರು. ತಂದುಕೊಟ್ಟೆವು. ಕೈ ಚಾಚಲು ಹೇಳಿದರು. ಕೈ ಚಾಚಿದೆವು. ಮಾಸ್ಟರ್ ಕಾಲೆತ್ತಿ ಕೈಗೆ ಹೊಡೆದರು. ಹೊಡೆಸಿಕೊಂಡು ಸುಮ್ಮನಾದೆವು.

ಜಾಗತೀಕರಣಕ್ಕೆ ಕಾರಣವಾದ ಗ್ಯಾಟ್ ಒಪ್ಪಂದ ವಿರೋಧಿಸಲು ಯೂರೋಪಕ್ಕೆ ಹೋಗಲು ಪ್ರೊ. ಎಂ. ಡಿ. ನಂಜುಂಡಸ್ವಾಮಿ ಕರೆದರು. ಪಾಸ್ಪೋರ್ಟ್ ತಡವಾಗಿ ಸಿಕ್ಕಿತು. ಎಂಟು ದಿನ ಮೊದಲೇ ಹೋಗಲು ಸಿದ್ಧಾವಾದರೆ ತಕ್ಷಣ ಪಾಸ್ಪೋರ್ಟ್ ಕೊಡಿಸುವದಾಗಿ ಹೇಳಿದರು. ನಾನು ಮುಂಚಿತವಾಗಿ ಹೋಗಲು ಧೈರ್ಯ ಮಾಡಲಿಲ್ಲ. ೨೫000 ಹಣ ವಾಪಾಸು ಕೊಟ್ಟರು.

ಆಗಲೂ ವಿಮಾನ ಏರಲಾಗಲಿಲ್ಲ. ಚೈನಾಕ್ಕೋ. ಅಮೇರಿಕೊಕ್ಕೋ ಹೋಗಲು ಹಣ ತುಂಬಿದ್ದೆ ಪಾಸ್ಪೋರ್ಟ್ನವೀಕರಿಸುವದು ಸಾಧ್ಯವಾಗಲಿಲ್ಲ. ಆಗಲೂ ವಿಮಾನ ಏರುವದು ತಪ್ಪಿ ಹೋಗಿತ್ತು. ಆಮೇಲೆ ಗುಜರಾತಿಗೆ ಹೋಗಲು ಅಣ್ಣ ಕರೆದ. ಮಾನ್ವಿಯಿಂದ ಹೈದರಾಬಾದಿಗೆ ಬಸ್ಸಿನಲ್ಲಿ ಹೋಗಿ ಅಹಮದಾಬಾದಿಗೆ ಹೋಗಲು ವಿಮಾನ ಏರಿದೆವು. ಕಿಡಕಿ ಪಕ್ಕದಲ್ಲಿ ಸೀಟು ಸಿಕ್ಕಿತು. ಕೆಳಗೆ ನೋಡಲು ಭಯ. ಬೆಲ್ಟ್ ಕಟ್ಟಿಕೊಳ್ಳಲು ಗಗನ ಸಖಿಯರು ಸೂಚಿಸಿದರು. ವಿಮಾನ ಓಡುತ್ತ ಓಡುತ್ತ ಆಕಾಶಕ್ಕೆ ಹಾರಿತು. ಮೋಡಗಳು ಕೆಳಗೆ ನಾವು ಮೇಲೆ. ವಿಮಾನ ಸಾಗುವಾಗ ಸ್ಥಗಿತಗೊಂಡಂತೆ ಕಾಣುತ್ತದೆ. ಹಕ್ಕಿ ನೋಡಿ ಆಸೆಪಟ್ಟು ಮನುಷ್ಯ ವಿಮಾನ ಕಂಡುಹಿಡಿದ. ರೈಟ್ ಸೋದರರಿಗೆ ವಂದನೆಗಳು. ವಿಮಾನದ ಬಗ್ಗೆ ಬಾಲ್ಯದಿಂದ ಕುತೂಹಲವಿತ್ತು.

‍ಲೇಖಕರು Admin

18 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading