ವಿನ್ಯಾಸ
ತುಂಬಾ
ಬದಲಾಗಿದೆ
ಗುರುತು ಸಿಗದಷ್ಟು.
ಕಣ್ಣೆದುರೇ ಕುಡಿಮೂಡಿದ್ದು
ಮುಟ್ಟಿ ತೀಡಿ ಆಡಿ ಬೆಳೆಸಿದ್ದು
ಕನ್ನಡಿಗೇ ಕಣ್ಣು
ಹೊಡೆದು ಬಣ್ಣದ
ನೊರೆ ಪೂಸಿದ್ದು
ಅಲಗು ತಾಗಿ
ಸಿಂಗರಿಸಿದ್ದು
ಹಿಡಿದೆಳೆದು
ತುಟಿತಾಗಿಸಿದ್ದು
ಕಾಲ ಸರಿದಿದೆ
ಎಲ್ಲಾ ಮರೆಯುವಷ್ಟು
ನೆರಿಗೆ ತೋರಿದೆ
ನಗುವೇ
ಮರೆಮಾಚುವಷ್ಟು
ತುಂಬಾ ನೆರೆತಿದೆ
ಮುಖವೇ
ಬದಲಾಗುವಷ್ಟು!
0 ಪ್ರತಿಕ್ರಿಯೆಗಳು