ಎಲ್ ಸಿ ನಾಗರಾಜ್
ಪ್ರಸಿದ್ಧ ರಂಗ ನಿರ್ದೇಶಕ , ಪ್ರಾಧ್ಯಾಪಕ ಸಿ.ಜಿ.ಕೃಷ್ಣಸ್ವಾಮಿ ( CGK ) ಮೇಷ್ಟರು ಒಂದು ದಿನ ಫೋನ್ ಮಾಡಿ ” ಬಂದು ಸಂಸ ಬಯಲು ರಂಗಮಂದಿರದ ಹತ್ತಿರ ಶರಣಾಗು ” ಅಂತಾ ತಮ್ಮ ಮಾಮೂಲಿ ವರಸೆಯಲ್ಲಿ ಧಮಕಿ ಹಾಕಿದರು.
ಆಗ CGK ಮೇಷ್ಟರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ದಿನಗಳು, ಸರಿ ಸಂಸ ಬಯಲು ರಂಗಮಂದಿರದ ಜಗುಲಿ ಮೇಲೆ ಕುಳಿತಿದ್ದ ಅವರ ಮುಂದೆ ಶರಣಾದೆ .
‘ಒಂದಿನ ಏನಾಯ್ತು ಗೊತ್ತೇನೊ, ಮೈಸೂರಿಗೆ ಹೋಗ್ತಾ ಇದ್ದೆ , ಕಾವೇರಿ ನದಿ ಸಿಕ್ತಲ್ಲ , ನನ್ನ ಪರ್ಸಿಗೆ ಕೈ ಹಾಕಿ ರೂಪಾಯಿ ನಾಣ್ಯಗಳನ್ನ ತೆಗೆದು ಕಾವೇರಿ ನದಿಗೆ ಎಸೆದೆ !’
‘ಹಂಗ್ಯಾಕ್ ಮಾಡಿದ್ದು , ತಪ್ಪಲ್ವಾ !’
‘ನಮ್ಮಮ್ಮ ಹಂಗೆ ಮಾಡ್ತಿದ್ಳಪ್ಪ , ನಾನೂ ಹಂಗೇ ಮಾಡಿದೆ ; ಅಂತಃಕರಣ ಅದು , ನಿಂಗೆ ಅವೆಲ್ಲ ಗೊತ್ತಾಗಲ್ಲ ‘
‘ಸರಿ ಮೇಷ್ಟ್ರೆ , ಮುಂದಕ್ಕೆ ಹೇಳಿ ‘
‘ಸಮುದಾಯದವರು ಗೆಲಿಲಿಯೊ ನಾಟಕ ಮಾಡ್ತಿದ್ವಿ , ಪ್ರದರ್ಶನದ ದಿನ ಗೆಲಿಲಿಯೊ ಪಾತ್ರ ಮಾಡಿದ್ದ ಲೋಕನಾಥ್ , “ತೆಂಗಿನ ಕಾಯಿ ಒಡೆದು ಪೂಜೆ ಮಾಡಬೇಕು” ಅಂತಾ ಹಟ ಹಿಡಿದು ಕುಂತು ಬಿಟ್ರಲ್ಲ ‘
‘ತಪ್ಪಲ್ವಾ , ಗೆಲಿಲಿಯೊ ನಾಟಕದ ಸೈಂಟಿಫಿಕ್ ಟೆಂಪರಮೆಂಟನ್ನ ಕಾಂಟ್ರಡಿಕ್ಟ್ ಮಾಡಲ್ವ ಅದು !’
‘ಸುಮ್ನೆ ಕೇಳುಸ್ಕೊ !”
‘ಹೂ ಸರಿ ‘
ಗೆಲಿಲಿಯೊ ನಿರ್ದೇಶನ ಮಾಡಿದ್ದು ಪ್ರಸನ್ನ , ಲೋಕನಾಥ್ ತೆಂಗಿನ ಕಾಯಿ ಒಡೆದು ಪೂಜೆ ಮಾಡೊ ವಿಷಯ ಕೇಳಿ ನಿಗಿ ನಿಗಿ ಉರೀತಾ ….’
‘ಮತ್ತೆ ನಗಬೇಕಾಗಿತ್ತ ‘
‘ಹಂಗಲ್ಲ ಕಣೊ , ಲೋಕನಾಥ್ ಒಬ್ಬ ಕಲಾವಿದ , ವಿಶ್ವಾಸಿ ಕಲಾವಿದ , ಪೂಜೆ ಮಾಡದೇ ….
ನಿಮ್ ತರಾನೇ ತಗಳಿ , ನದಿಗೆ ಕಾಸು ಎಸೆದಂಗೆ !’
‘ಅವೆಲ್ಲ ಮನುಷರ ಅಂತಃಕರಣ ಕಣ್ ಟೀ ಕುಡ್ಯೋ, ನೀನು ಏನು ಬೇಕಾದ್ರೂ ಆಗು , ಆದ್ರೆ ನಿನ್ನೊಳಗೆ ನಿನ್ನ ತಾಯಿ ಇರದಿದ್ರೆ ಎಂಥದೋ ಅದು !
CGK ಮೇಷ್ಟರ ‘ ಕತ್ತಾಲು ಬೆಳದಿಂಗಳೊಳಗಾ …’ ಜೀವನ ಕಥಾನಕದಲ್ಲೂ ಲೋಕನಾಥ್ ಅವರೊಳಗಿನ ಮತ್ತು ತಮ್ಮೊಳಗಿನ ನದಿಗೆ ಹಂಬಲಿಸುವ ಈ ಪ್ರಸಂಗ ಇದೆ.
ಉಪ್ಪಿನ ಕಾಯಿಯ ಖಾಲಿ ಜಾಡಿಯನ್ನ ಭೂತಯ್ಯನ ಮಗ ಅಯ್ಯುವಿಗೆ ಹಿಂತಿರುಗಿಸು , ಮಿಂಚಿನ ಓಟದಲ್ಲಿ ರಂಜಿಸಿದ ಕಲಾವಿದ ಲೋಕನಾಥ್ ಸಿನಿಮಾಗಳಿಗಿಂತ ರಂಗಭೂಮಿಗೆ ಮೊದಲ ಆಧ್ಯತೆ ಕೊಡುತ್ತಿದ್ದ ಕಲಾವಿದರು
ಈ ಚಳಿಗಾಲ ಫ್ರೀಜರಿಗಿಂತ ಕೊಂಚ ಮಾತ್ರ ಬೆಚ್ಚಗಿದೆ ಅಷ್ಟೇ
ವಿದಾಯಗಳು ಗೆಲಿಲಿಯೊ ಮೇಷ್ಟ್ರೆ
ವಿದಾಯ 'ಗೆಲಿಲಿಯೊ' ಮೇಷ್ಟ್ರೆ..
ನಿಮಗೆ ಇವೂ ಇಷ್ಟವಾಗಬಹುದು…





0 Comments