ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿದಾಯ ‘ಗೆಲಿಲಿಯೊ’ ಮೇಷ್ಟ್ರೆ..

ಎಲ್ ಸಿ ನಾಗರಾಜ್ 

ಪ್ರಸಿದ್ಧ ರಂಗ ನಿರ್ದೇಶಕ , ಪ್ರಾಧ್ಯಾಪಕ ಸಿ.ಜಿ.ಕೃಷ್ಣಸ್ವಾಮಿ ( CGK ) ಮೇಷ್ಟರು ಒಂದು ದಿನ‌ ಫೋನ್ ಮಾಡಿ ” ಬಂದು ಸಂಸ ಬಯಲು ರಂಗಮಂದಿರದ ಹತ್ತಿರ ಶರಣಾಗು ” ಅಂತಾ ತಮ್ಮ ಮಾಮೂಲಿ ವರಸೆಯಲ್ಲಿ ಧಮಕಿ ಹಾಕಿದರು.

ಆಗ CGK ಮೇಷ್ಟರು ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ದಿನಗಳು, ಸರಿ ಸಂಸ ಬಯಲು ರಂಗಮಂದಿರದ ಜಗುಲಿ ಮೇಲೆ ಕುಳಿತಿದ್ದ ಅವರ ಮುಂದೆ ಶರಣಾದೆ .

‘ಒಂದಿನ ಏನಾಯ್ತು ಗೊತ್ತೇನೊ, ಮೈಸೂರಿಗೆ ಹೋಗ್ತಾ ಇದ್ದೆ , ಕಾವೇರಿ ನದಿ ಸಿಕ್ತಲ್ಲ , ನನ್ನ ಪರ್ಸಿಗೆ ಕೈ ಹಾಕಿ ರೂಪಾಯಿ ನಾಣ್ಯಗಳನ್ನ ತೆಗೆದು ಕಾವೇರಿ ನದಿಗೆ ಎಸೆದೆ !’

‘ಹಂಗ್ಯಾಕ್ ಮಾಡಿದ್ದು , ತಪ್ಪಲ್ವಾ !’

‘ನಮ್ಮಮ್ಮ ಹಂಗೆ ಮಾಡ್ತಿದ್ಳಪ್ಪ , ನಾನೂ ಹಂಗೇ ಮಾಡಿದೆ ; ಅಂತಃಕರಣ ಅದು , ನಿಂಗೆ ಅವೆಲ್ಲ ಗೊತ್ತಾಗಲ್ಲ ‘

‘ಸರಿ ಮೇಷ್ಟ್ರೆ , ಮುಂದಕ್ಕೆ ಹೇಳಿ ‘

‘ಸಮುದಾಯದವರು ಗೆಲಿಲಿಯೊ ನಾಟಕ ಮಾಡ್ತಿದ್ವಿ , ಪ್ರದರ್ಶನದ ದಿನ ಗೆಲಿಲಿಯೊ ಪಾತ್ರ ಮಾಡಿದ್ದ ಲೋಕನಾಥ್ , “ತೆಂಗಿನ ಕಾಯಿ ಒಡೆದು ಪೂಜೆ ಮಾಡಬೇಕು” ಅಂತಾ ಹಟ ಹಿಡಿದು ಕುಂತು ಬಿಟ್ರಲ್ಲ ‘

‘ತಪ್ಪಲ್ವಾ , ಗೆಲಿಲಿಯೊ ನಾಟಕದ ಸೈಂಟಿಫಿಕ್ ಟೆಂಪರಮೆಂಟನ್ನ ಕಾಂಟ್ರಡಿಕ್ಟ್ ಮಾಡಲ್ವ ಅದು !’

‘ಸುಮ್ನೆ ಕೇಳುಸ್ಕೊ !”

‘ಹೂ ಸರಿ ‘

ಗೆಲಿಲಿಯೊ ನಿರ್ದೇಶನ ಮಾಡಿದ್ದು ಪ್ರಸನ್ನ , ಲೋಕನಾಥ್ ತೆಂಗಿನ ಕಾಯಿ ಒಡೆದು ಪೂಜೆ ಮಾಡೊ ವಿಷಯ ಕೇಳಿ ನಿಗಿ ನಿಗಿ ಉರೀತಾ ….’

‘ಮತ್ತೆ ನಗಬೇಕಾಗಿತ್ತ ‘

‘ಹಂಗಲ್ಲ ಕಣೊ , ಲೋಕನಾಥ್ ಒಬ್ಬ ಕಲಾವಿದ , ವಿಶ್ವಾಸಿ ಕಲಾವಿದ , ಪೂಜೆ ಮಾಡದೇ ….

ನಿಮ್ ತರಾನೇ ತಗಳಿ , ನದಿಗೆ ಕಾಸು ಎಸೆದಂಗೆ !’

‘ಅವೆಲ್ಲ ಮನುಷರ ಅಂತಃಕರಣ ಕಣ್ ಟೀ ಕುಡ್ಯೋ, ನೀನು ಏನು ಬೇಕಾದ್ರೂ ಆಗು , ಆದ್ರೆ ನಿನ್ನೊಳಗೆ ನಿನ್ನ ತಾಯಿ ಇರದಿದ್ರೆ ಎಂಥದೋ ಅದು !

CGK ಮೇಷ್ಟರ ‘ ಕತ್ತಾಲು ಬೆಳದಿಂಗಳೊಳಗಾ …’ ಜೀವನ ಕಥಾನಕದಲ್ಲೂ ಲೋಕನಾಥ್ ಅವರೊಳಗಿನ ಮತ್ತು ತಮ್ಮೊಳಗಿನ ನದಿಗೆ ಹಂಬಲಿಸುವ ಈ ಪ್ರಸಂಗ ಇದೆ.

ಉಪ್ಪಿನ ಕಾಯಿಯ ಖಾಲಿ ಜಾಡಿಯನ್ನ ಭೂತಯ್ಯನ ಮಗ ಅಯ್ಯುವಿಗೆ ಹಿಂತಿರುಗಿಸು , ಮಿಂಚಿನ ಓಟದಲ್ಲಿ ರಂಜಿಸಿದ ಕಲಾವಿದ ಲೋಕನಾಥ್ ಸಿನಿಮಾಗಳಿಗಿಂತ ರಂಗಭೂಮಿಗೆ ಮೊದಲ ಆಧ್ಯತೆ ಕೊಡುತ್ತಿದ್ದ ಕಲಾವಿದರು

ಈ ಚಳಿಗಾಲ ಫ್ರೀಜರಿಗಿಂತ ಕೊಂಚ ಮಾತ್ರ ಬೆಚ್ಚಗಿದೆ ಅಷ್ಟೇ

ವಿದಾಯಗಳು ಗೆಲಿಲಿಯೊ ಮೇಷ್ಟ್ರೆ

‍ಲೇಖಕರು avadhi

31 December, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading