ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯನಗರ ’ಬಿಂಬ’ ದಿಂದ ಎ ಎಸ್ ಎಂ ನೆನಪಿನಲ್ಲಿ…


ಕನ್ನಡ ರಂಗಭೂಮಿ ಕಂಡ ಮಹತ್ವದ ನಟ, ನಾಟಕಕಾರ, ನಿರ್ದೇಶಕ ರಂಗಸಂಘಟಕ ಎ.ಎಸ್.ಮೂರ್ತಿ. ರಂಗಭೂಮಿಯೇ ಅಲ್ಲದೆ ಆಕಾಶವಾಣಿ, ದೂರದರ್ಶನಗಳಲ್ಲೂ ಪ್ರಖ್ಯಾತಿ ಪಡೆದವರು. ಆಕಾಶವಾಣಿ ಈರಣ್ಣನಾಗಿ ಶ್ರೀಸಾಮಾನ್ಯರ ನೋವು ನಲಿವುಗಳಿಗೆ ದನಿಯಾದವರು. ಕರ್ನಾಟಕದಲ್ಲಿ ಬೀದಿನಾಟಕಗಳನ್ನು ಮೊದಲ ಬಾರಿಗೆ ಪ್ರದರ್ಶಿಸಿದವರು. ಪತ್ರಿಕೋದ್ಯಮದಲ್ಲೂ ದುಡಿದು ರಂಗಭೂಮಿ ಕುರಿತಾದ ಪತ್ರಿಕೆಯನ್ನು ನಡೆಸಿದವರಲ್ಲದೆ, ನಂತರದ ದಿನಗಳಲ್ಲಿ ಚಲನಚಿತ್ರಗಳ ವಿಮರ್ಶಕರಾಗಿದ್ದವರು. ತಮ್ಮ ‘ ಪಪೆಟ್ ಲ್ಯಾಂಡ್ ‘ ಮೂಲಕ ಬೊಂಬೆಯಾಟಗಳನ್ನು ಮಾಡುತ್ತಾ ಅನೇಕ ಪ್ರಯೋಗಗಳಿಗೆ ಕಾರಣರಾದವರು. ಮಕ್ಕಳ ರಂಗಭೂಮಿಗೆ ‘ವಿಜಯನಗರ ಬಿಂಬ’ದ ಮೂಲಕ ಇಂಬು ನೀಡಿದವರು.
ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ
ಎ.ಎಸ್.ಮೂರ್ತಿಯವರು ಸ್ಥಾಪಿಸಿದ ‘ ವಿಜಯನಗರ ಬಿಂಬ ‘ ಮೊದಲು ಮಕ್ಕಳ ರಂಗ ಶಾಲೆಯಾಗಿ ಆರಂಭವಾಗಿ, ಅನೇಕ ಕಲಾಭಿಮಾನಿಗಳು, ರಂಗಾಸಕ್ತರು, ಸಾಹಿತಿಗಳು, ಕಲಾವಿದರು, ಮಾಧ್ಯಮ ಮಿತ್ರರು – ಇವರೆಲ್ಲರ ಸಹಯೋಗದೊಂದಿಗೆ19 ವರ್ಷಗಳಲ್ಲಿ ಅನೇಕ ರಂಗಪ್ರಯೋಗಗಳು, ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸಾರ್ಥಕ ರಂಗ ಅಸ್ತಿತ್ವವನ್ನು ಪಡೆದಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸಕ್ತರಿಗೆ ಒಂದು ವರ್ಷದ ರಂಗಭೂಮಿ ಡಿಪ್ಲೊಮಾವನ್ನು ಸಹ ಆರಂಭಿಸಿದೆ. ಮಕ್ಕಳ ವಿಭಾಗ ಮತ್ತು ಹಿರಿಯರ ವಿಭಾಗಗಳೆಂಬ ಎರಡು ವಿಭಾಗಗಳು ಇದ್ದು ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿವೆ.
ಇಂತಹ ಪ್ರಯೋಗಶೀಲ ಹಿರಿಯ ಚೇತನದ ಸ್ಮರಣೆಯಲ್ಲಿ ನಮ್ಮ ವಿಜಯನಗರ ಬಿಂಬ (ರಿ) ರಂಗ ಶಿಕ್ಷಣ ಕೇಂದ್ರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಈ ಟಿ.ವಿ ಕನ್ನಡ ನ್ಯೂಸ್ ಚಾನೆಲ್ ಸಹಯೋಗದಲ್ಲಿ ಆಗಸ್ಟ್ 21 (ಗುರುವಾರ), 22 ( ಶುಕ್ರವಾರ) ಎರಡು ದಿನಗಳ ನಾಟಕೋತ್ಸವವನ್ನು ಕೆ.ಎಚ್. ಕಲಾಸೌಧದಲ್ಲಿ ಹಮ್ಮಿ ಕೊಂಡಿದ್ದೇವೆ.
21(ಗುರುವಾರ) – ಉದ್ಘಾಟನಾ ಸಮಾರಂಭ


ಉದ್ಘಾಟನೆ – ಶ್ರೀನಿವಾಸ್ ಕಪ್ಪಣ್ಣ, ಡಾ|| ಬಿ.ವಿ.ರಾಜಾರಾಮ್.
ನಂತರ
ಶೂದ್ರಕ ಕವಿಯ ಮೃಚ್ಛಕಟಿಕ ನಾಟಕದ ಕನ್ನಡ ಅನುವಾದ’ಮಣ್ಣಿನ ಬಂಡಿ’
ಅನುವಾದ – ಪ್ರೊ.ಬಿ.ಚಂದ್ರಶೇಖರ್ , ನಿರ್ದೇಶನ – ಡಾ||ಎಸ್.ವಿ.ಕಶ್ಯಪ್

 
 
22 ( ಶುಕ್ರವಾರ) – ಶೇಕ್ಸ್ ಪಿಯರ್ ನ ‘ಕಿಂಗ್ ಲಿಯರ್’ ನಾಟಕದ ಪ್ರೇರಣೆಯಿಂದ ಗೋಪಾಲ ವಾಜಪೇಯಿ ಅವರು ಬರೆದಿರುವ ಜಾನಪದ ಶೈಲಿಯ ನಾಟಕ ‘ನಂದಭೂಪತಿ’
ರಚನೆ – ಗೋಪಾಲ್ ವಾಜಪೇಯಿ, ನಿರ್ದೇಶನ – ಎಸ್.ವಿ.ಸುಷ್ಮಾ
ಅತಿಥಿಗಳು – ಮಂಡ್ಯ ರಮೇಶ್
ನಾಟಕೋತ್ಸವದಲ್ಲಿ ಬೆಂಗಳೂರಿನ ಹಲವಾರು ಪ್ರತಿಶ್ಟಿತ ರಂಗತಂಡಗಳು, ಮತ್ತು ಅದರ ಪ್ರಮುಖರು ಭಾಗವಹಿಸಲಿದ್ದಾರೆ.
 

‍ಲೇಖಕರು G

20 August, 2014

1 Comment

  1. shobhavenkatesh

    vandanegalu avadhi thandakke.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading