ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯನಗರ ಬಿಂಬದ 'ಚಿತ್ರ ಕಥನ'

ವಿಜಯನಗರ ಬಿಂಬ ಮಕ್ಕಳ ವಿಭಾಗ ಅರ್ಪಿಸುವ
ಚಿತ್ರಕಥನ – 2019
ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ
ಚಿತ್ರಕಥನ ಲಲಿತ ಕಲೆ ಮತ್ತು ಪ್ರದಶ೯ನ ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ವಿಶಿಷ್ಟ ಕಾಯ೯ಕ್ರಮವಾಗಿದೆ. ಕಲೆಯ ಬಗೆಗಿನ ಅಭಿರುಚಿ,  ಕಲ್ಪನೆ, ಮುಂತಾದ ಸಾಂಸ್ಕೃತಿಕವಾಗಿ ಸಕಾರಾತ್ಮಕವಾಗಿರುವ ಅಂಶಗಳನ್ನು ಒಳಗೊಂಡ ಕಾಯ೯ಕ್ರಮ . ವಿಜಯನಗರ ಬಿಂಬದ 100 ಕ್ಕೂ ಹೆಚ್ಚು ಚಿಣ್ಣರು “ಚಿತ್ರಕಥನ – ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ” ಎಂಬ ವಿಶಿಷ್ಟ  ರಂಗ ಕಥನ ಪ್ರದಶ೯ನಗಳನ್ನು ನೀಡಲಿದ್ದಾರೆ. ವಿಜಯನಗರ ಬಿಂಬದ ಚಿಣ್ಣರು ಮಿಶ್ರ ಮಾಧ್ಯಮದ ದೊಡ್ಡ ಕಲಾಕೃತಿಗಳನ್ನು ಸಾಂಘಿಕವಾಗಿ ರಚಿಸಿದ್ದರು. ಮತ್ತೊಂದು ತಂಡದ ಮಕ್ಕಳು ಆ ಕಲಾಕೃತಿಯನ್ನಿಟ್ಟುಕೊಂಡು ಕಥೆಗಳನ್ನು ಕಟ್ಟಿದರು. ಮಕ್ಕಳು ಮುಗ್ಧ ಸೃಜನಶೀಲತೆಯಿಂದ ಅಂದದ 10 ಕಥೆಗಳನ್ನು ಕಟ್ಟಿದ್ದಾರೆ. ಈ ಬಾರಿ 10 ಕಲಾಕೃತಿಗಳು ಮತ್ತು 10 ಕಥೆಗಳು ಪ್ರದಶಿ೯ತವಾಗಲಿವೆ.
ಮಕ್ಕಳು ತಮ್ಮ ಭಾವನೆಗಳನ್ನು ಎರಡು ಮಾಧ್ಯಮಗಳ ಮೂಲಕ ಅಂದರೆ ಚಿತ್ರಕಲೆ ಮತ್ತು ರಂಗಭೂಮಿ ಈ ಎರಡೂ ಮಾಧ್ಯಮಗಳ  ಮೂಲಕ ಅಭಿವ್ಯಕ್ತಿಸಿದ್ದಾರೆ.

ಬೆಳಿಗ್ಗೆ – 11:30
ಪ್ರದರ್ಶನವಾಗುವ ಕತೆಗಳು

ಧಂ ಧಂ ಧಂ ಧಮಾಕ – ಅವನ್ಹೇಳಿದ್ ಬಿಟ್ಟಾಕ
ತಂಡ : ಪಂಜೆಮಂಗೇಶರಾವ್ ರಾವ್
ಕಳ್ಹುಲಿ  ಲೆಕ್ಕ
ತಂಡ: ಕುವೆಂಪು
ಚಂದಮಾಮ ಮಾಯಾ
ತಂಡ: ಮಾಸ್ತಿ
ಏತಂಬಾತ
ತಂಡ : ರನ್ನ
ಪೊಟರೇ ರಾಜ
ತಂಡ : ಬೇಂದ್ರೆ.
ಮಧ್ಯಾಹ್ನ  3:30
ಪ್ರದರ್ಶನವಾಗುವ ಕತೆಗಳು
ರಂಗುರಂಗಿನ ಬಿಲ್ಲು ಎಸೆಯಿತು ಬುದ್ಧಿಯ ಕಲ್ಲು
ತಂಡ:  ಗಿರೀಶ್ ಕಾರ್ನಾಡ್
ಜೇಡಿಲಿ  ಒಪ್ಪಂದ
ತಂಡ : ಶಿವರಾಂ ಕಾರಾಂತ್
ಚಿಂಟು ಎಲ್ಲ್ಹೋದೆ
ತಂಡ : ಪಂಪ
ಮೊಬೈಲ್ ಆಟ ಪುರಾಣ
ತಂಡ : ಗೋವಿಂದ ಪೈ
ಪಕ್ಷಿ ನೋಟ
ತಂಡ : ಎ.ಎಸ್.ಎಂ.

‍ಲೇಖಕರು avadhi

14 August, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading