ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ವಿಕಿಪೀಡಿಯಾ' ಹಬ್ಬ

ದಟ್ಸ್ ಕನ್ನಡ ಬೆಂಗಳೂರು, ಜ. 13: ಮುಕ್ತ ವಿಶ್ವಕೋಶ ವಿಕಿಪೀಡಿಯದ ಹತ್ತನೇ ವಾರ್ಷಿಕೋತ್ಸವ ಸಂಭ್ರಮವನ್ನು ಆಚರಿಸಲು ಬೆಂಗಳೂರು ವಿಕಿಪೀಡಿಯ ಎಲ್ಲ ಬಗೆಯ ಸಿದ್ಧತೆಯನ್ನು ನಡೆಸಿದೆ. ಜ. 15 ರಂದು ವಿಕಿಪೀಡಿಯ ಬಳಕೆದಾರರು ಹತ್ತನೆಯ ವಾರ್ಷಿಕೋತ್ಸವವನ್ನು ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಭ್ರಮದಿಂದ ಆಚರಿಸಲು ತಯಾರಿ ನಡೆಸಿದ್ದಾರೆ. ಭಾರತದಲ್ಲಿ ವಿಕಿಪೀಡಿಯದ ಕ್ರಿಯಾಶೀಲ ಕೇಂದ್ರ ಎನಿಸಿರುವ ಬೆಂಗಳೂರು ವಿಕಿ ತಂಡ, ಜ.15ರಂದು ಸಂಪೂರ್ಣವಾಗಿ ವಿಕಿ 10ರ ಸಂಭ್ರಮಕ್ಕೆ ಮೀಸಲಿರಿಸಿದೆ. ಸುಮಾರು 250ಕ್ಕೂ ಅಧಿಕ ಉತ್ಸಾಹಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಈ ಕಾರ್ಯಕ್ರಮ ಸಾರ್ವಜನಿಕರಿಗೆ ಮುಕ್ತವಾಗಿದೆ. ವಿಕಿ ಫೌಂಡೇಷನ್ ನ ಅಧಿಕಾರಿಗಳು, ಅತಿಥಿ ವಾಚಕರು ಸೇರಿದಂತೆ ಹಲವರಿಂದ ಉಪಯುಕ್ತ ಮಾಹಿತಿ ಸಿಗಲಿದೆ. ವಿಕಿಮೀಡಿಯಾದ ಮುಂದಿನ ಯೋಜನೆಗಳು, ಜ್ಞಾನ ಸೃಷ್ಟಿ ಹಾಗೂ ಹಂಚಿಕೆಯಲ್ಲಿನ ತೊಡಕುಗಳು, ಲಾಭಗಳು ಮುಂತಾದವುಗಳ ವಿವರ ಕೂಡಾ ಸಿಗುತ್ತದೆ. ಸ್ಥಳ: ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು 560012. ಬೆಳಗ್ಗೆ 9 ರಿಂದ 4.30ರ ವರೆಗಿನ ಸಮಯವನ್ನು ವಿಕಿಪೀಡಿಯನ್ ಗಳಿಗೆ ಮೀಸಲಿಡಲಾಗಿದ್ದು, 5 ಗಂಟೆ ನಂತರ ಸಾರ್ವಜನಿಕರಿಗೆ ಕಾರ್ಯಕ್ರಮವಿರುತ್ತದೆ 2010ರ ವಿಕಿಪೀಡಿಯ ವಿಶ್ವಕೋಶದಲ್ಲಿ ವಿವಿಧ ಭಾಷೆಗಳ ಮಾಹಿತಿ ಕಣಜದಲ್ಲಿರುವ ಲೇಖನಗಳ ಸಂಖ್ಯೆಗಳು ಇಂತಿವೆ: * ಗುಜರಾತ್ : 15,000 ಲೇಖನಗಳು * ಮರಾಠಿ : 30,000 ಲೇಖನಗಳು * ಉರ್ದು : 15,000 ಲೇಖನಗಳು * ಮಲೆಯಾಳಂ : 15,000 ಲೇಖನಗಳು * ಮಲೆಯಾಳಂ ವಿಕ್ಷನರಿ: 60,000 ಪದಗಳು * ತಮಿಳು : 25,000 ಲೇಖನಗಳು * ತಮಿಳು ವಿಕ್ಷನರಿ : 1,90,000+ ಪದಗಳು ಈ ಪಟ್ಟಿಯಲ್ಲಿ ಕನ್ನಡ ಏಕೆ ಸೇರಿಲ್ಲ? ಕಾರಣ ಇಷ್ಟೇ ವಿಕಿಪೀಡಿಯದಲ್ಲಿ ಕನ್ನಡ ಲೇಖನಗಳ ಸಂಖ್ಯೆ ಇನ್ನೂ 10,000 ಕೂಡಾ ದಾಟಿಲ್ಲ. ಐಟಿ ಉದ್ಯಮದಲ್ಲಿರುವ ಕನ್ನಡಿಗರಿಗೆ ಇನ್ನೂ ವಿಕಿಪೀಡಿಯ ಬಳಕೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಇನ್ನು ಉತ್ಸಾಹಿ ಸಾರ್ವಜನಿಕರಿಗೆ ಈ ಬಗ್ಗೆ ಮಾಹಿತಿ ಸಿಗುವುದೇ ಕಷ್ಟ. ವಿಕಿಪೀಡಿಯ ಸಾರ್ವಜನಿಕರಿಗಾಗಿ ಇರುವ ಮುಕ್ತ ವಿಶ್ವಕೋಶವಾಗಿದ್ದು, ಹೆಚ್ಚೆಚ್ಚು ಲೇಖನಗಳನ್ನು ತುಂಬಿಸುವ ಮೂಲಕ ಕನ್ನಡ ಸೇವೆ ಮಾಡುವ ಅವಕಾಶವುಂಟು. ವಿಕಿಪೀಡಿಯಾಗೆ ಲೇಖನ ಸೇರಿಸುವುದು ಹೇಗೆ ಹಾಗೂ ಏಕೆ? ಎಂಬ ಪ್ರಶ್ನೆಗಳಿದ್ದರೆ ಜ.15ರ ವಿಕಿಪೀಡಿಯ 10 ರ ಸಂಭ್ರಮದಲ್ಲಿ ಪಾಲ್ಗೊಂಡು ಚರ್ಚಿಸಿ. ವಿಕಿಪೀಡಿಯ ಬಗ್ಗೆ :ವಿಕಿಮೀಡಿಯಾ ಫೌಂಡೇಶನ್‌ನ ಸಹಾಯದಿಂದ ನಡೆಯುತ್ತಿರುವ ವಿಕಿಪೀಡಿಯ ಒಂದು ಮುಕ್ತ ಸಹಯೋಗಿ ಬಹುಭಾಷಾ ವಿಶ್ವಕೋಶ. ಸುಮಾರು 17 ಮಿಲಿಯ ಲೇಖನಗಳು ಇದರಲ್ಲಿವೆ. ಇಂಗ್ಲಿಶ್ ಭಾಷೆ ಒಂದರಲ್ಲೇ ಸುಮಾರು 3.5 ಮಿಲಿಯ ಲೇಖನಗಳಿವೆ. ಈ ಎಲ್ಲ ಲೇಖನಗಳನ್ನು ಪ್ರಪಂಚಾದ್ಯಂತ ಚೆದುರಿಹೋಗಿರುವ ಸ್ವಯಂಸೇವಕರು ಬರೆದಿರುವುದು ಮಾತ್ರವಲ್ಲ ಈ ಲೇಖನಗಳನ್ನು ಯಾರು ಬೇಕಾದರು ತಿದ್ದಬಹುದು ಮತ್ತು ನವೀಕರಿಸಬಹುದು. ವಿಕಿಪೀಡಿಯವನ್ನು ಜಿಮ್ಮಿ ವೇಲ್ಸ್ ಮತ್ತು ಲ್ಯಾರಿ ಸಾಂಗರ್ ಅವರುಗಳು 2001 ರಲ್ಲಿ ಪ್ರಾರಂಭಿಸಿದರು. ಈಗ ಇದು ಅಂತರಜಾಲದ ಎಲ್ಲ ತಾಣಗಳಲ್ಲಿ ಜನಬಳಕೆಯಲ್ಲಿ ಎಂಟನೆಯ ಸ್ಥಾನದಲ್ಲಿದೆ. ಅಂತರಜಾಲದಲ್ಲಿರುವ ಮಾಹಿತಿ ಆಕರವಾಗಿ ಇದು ಪ್ರಥಮ ಸ್ಥಾನದಲ್ಲಿದೆ  ]]>

‍ಲೇಖಕರು G

14 January, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading