ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಾರ್ಡ್ ರೋಬ್ ತೆರೆದರೆ ಸಾಲಾಗಿ ಹೆಣಗಳು ನೇತುಕೊಂಡಿದ್ದವು

ಕಿರಣ್ ಕುಮಾರ್ 

hanging skull shirt
ವಾರ್ಡ್ ರೋಬ್ ತೆರೆದರೆ ಸಾಲಾಗಿ ಹೆಣಗಳು ನೇತುಕೊಂಡಿದ್ದವು. ಎಲ್ಲವೂ ನನ್ನವೇ. ಹೆಣವೋ, ತೊಗಲುಗೊಂಬೆಗಳೋ, ಏನೋ ಒಂದು. ಇವತ್ತಿನ ದಿನಕ್ಕೆ ಯಾವ ತೊಗಲನ್ನು ಧರಿಸುವುದೆಂದು ಯೋಚಿಸಿದೆ. ಒಂದರ ಕಪಾಳಕ್ಕೆ ಹೊಡೆದೆ. ಹೊಡೆಸಿಕೊಂಡು ಕೃತಕ ನಗೆ ನಕ್ಕ ಹೆಣ, ‘We will get back to you ASAP.’, ಎಂದಿತು. ಪಕ್ಕದಲ್ಲಿದ್ದ ಹೆಣ ಎಚ್ಚತ್ತು ಮತ್ತೊಂದು ರೀತಿಯ ಕೃತಕ ನಗೆ ಎಸೆದು, ‘ಹೇಗಿದ್ದೀರಿ? ಮನೆಯಲ್ಲೆಲ್ಲ ಆರಾಮಾ?’, ಎಂದಿತು.

ಈ ದಿನದ ಕೆಲಸಕ್ಕೆ ಸೂಕ್ತವಾದ ಹೆಣವನ್ನು ಆರಿಸಿಕೊಂಡು ಕೆಲಸಕ್ಕೆ ಹೊರಟೆ. ಹೆಣದ ತೊಗಲನ್ನು ಧರಿಸಿದ ನಾನು ಜೀವವೇ ಇರದ, ಶತಮಾನಗಳ ಹಿಂದೆಯೇ ಸತ್ತು ಸತ್ವ ಕಳೆದುಕೊಂಡ ಪದಗಳನ್ನು ಸೊಗಸಾಗಿ ಪೋಣಿಸಿ ಮುಂದಿದ್ದ ಉಳಿದವರ ಹೆಣಗಳಿಗೆ ಮಾಲೆಯಂತೆ ಅಲಂಕರಿಸಿದೆ. ಆ ಹೆಣಗಳು ಪ್ಲಾಸ್ಟಿಕ್ ನಗೆ ನಕ್ಕು, ‘Pleasure meeting you.’, ಎಂದವು.

‍ಲೇಖಕರು Admin

6 May, 2016

1 Comment

  1. ಸಂತೋಷ ತಾಮ್ರಪರ್ಣಿ

    Good piece of writing!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading