ಇದೀಗ ತಾನೆ ಪುಸ್ತಕ (ನಾಗೇಶ ಹೆಗಡೆ ಅವರ ‘ಹಳ್ಳೀ ಮುಕ್ಕ’) ಓದಿ ಮುಗಿಸಿದೆ. ತುಂಬಾ ಸಂತೋಷಪಟ್ಟೆ. ಎಷ್ಟೊಂದು ಪ್ರೀತಿಯಿಂದ ಬರೆದ ಲೇಖನಗಳಿವು! ಪರಿಸರದ ಕಾಳಜಿ, ಅದ್ಭುತ ಜ್ಙಾನ, ನವಿರಾದ ಹಾಸ್ಯ ಪ್ರಜ್ಞೆ, ಸೊಗಸಾಗಿ ಪನ್ ಮಾಡುವ ಜಾಣ್ಮೆ, ಸಾಹಿತ್ಯಕ್ಕೂ ಹೆಣಿಕೆ ಹಾಕುವ ಉತ್ಸಾಹ, ಹೊಸ ಪದಗಳ ಸೃಷ್ಟಿ, ಹಳೆಯದರ ಬಗ್ಗೆ ಮೌಢ್ಯ ಹಳಹಳಿಕೆಯಿಲ್ಲದೆ ಮತ್ತು ಹೊಸದೆಲ್ಲವನ್ನೂ ನಿರಾಕರಿಸುವ ಸಿನಿಕತೆಯಿಲ್ಲದೆ ಬರೆದ ಈ ಬರವಣಿಗೆಗಳು ನನ್ನನ್ನು ಮೋಡಿ ಮಾಡಿವೆ. ನಿಸ್ಸಂಶಯವಾಗಿ ನಾನು ಇತ್ತೀಚಿನ ದಿನಗಳಲ್ಲಿ ಓದಿದ ಅತ್ಯುತ್ತಮ ಪುಸ್ತಕವಿದು. ಸಾಹಿತ್ಯಾಸಕ್ತರೆಲ್ಲರೂ ಓದಲೇ ಬೇಕಾದ ಪುಸ್ತಕವಿದು.
ನಾಗೇಶ ಹೆಗಡೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ವಸುಧೇಂದ್ರ
]]>
ವಸುಧೇಂದ್ರ recommends..
ನಿಮಗೆ ಇವೂ ಇಷ್ಟವಾಗಬಹುದು…





ನಾಗೇಶ ಹೆಗಡೆಯವರ “ಹಳ್ಳೀಮುಕ್ಕ ಎಲ್ಲೆಲ್ ಹೊಕ್ಕ” ಪುಸ್ತಕ ಅದ್ಭುತವಾಗಿದೆ. ನಾಗೇಶ ಹೆಗಡೆಯವರು ಗಂಭೀರ ವಿಜ್ಞಾನ ಲೇಖನಗಳಿಗೆ ಪ್ರಖ್ಯಾತರು. ಇಲ್ಲಿ ಅವರ ಬರೆವಣಿಗೆ ಲಲಿತ ಪ್ರಬಂಧಗಳಂತಿವೆ. ವಿಜ್ಞಾನ, ಪರಿಸರ, ಇತ್ಯಾದಿಗಳು ನಿಮಗೆ ಅರಿವೇ ಇಲ್ಲದಂತೆ ಲೇಖನಗಳೊಳಗೆ ನುಸುಳಿವೆ. ಆದರೆ ಅದ್ಭುತ ಶೈಲಿಯಿಂದಾಗಿ ಅವೆಲ್ಲ ಲಲಿತ ಪ್ರಬಂಧಗಳಾಗಿವೆ. ಎಲ್ಲರೂ ಓಲೇಬೇಕಾದ ಪುಸ್ತಕ
-ಪವನಜ