ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಧೇಂದ್ರ ಮತ್ತು ಪ್ರತಿಭಾ ಮ್ಯಾಡಮ್ ಅವರೆ,

ವಸುಧೇಂದ್ರ ಮತ್ತು ಪ್ರತಿಭಾ ಮ್ಯಾಡಮ್ ಅವರೆ,

question mark

ನೀತಾ ರಾವ್ 

ಕಾರ್ನಾಡರು ಹಾಗೆ ಹೇಳಲು ಕಾರಣ ಬಹುಷಃ ಅವರು ಬಯಸಿದ ಲೇಖಕರು ನಗರ ಜೀವನದ ಬಗ್ಗೆ ಬರೆದಿಲ್ಲ. ಉಳಿದವರು ಬರೆದದ್ದನ್ನು ಅವರು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. Of course ಎಲ್ಲರೂ ಎಲ್ಲವನ್ನೂ ಓದುವುದು ಸಾಧ್ಯವಾಗುವುದಿಲ್ಲ.

ಆದರೆ ಅದೆಷ್ಟೊ ವರ್ಷಗಳ ಹಿಂದೆಯೇ ಎಸ್. ಎಲ್. ಭೈರಪ್ಪನವರು ತಮ್ಮ ’ತಂತು’ ಕಾದಂಬರಿಯಲ್ಲಿ ನಗರೀಕರಣ ಮತ್ತು ಬದಲಾಗುತ್ತಿರುವ ಮೌಲ್ಯಗಳ ಬಗ್ಗೆ ಸಾಕಷ್ಟು ವಿಸ್ತಾರವಾಗಿಯೇ ಬರೆದಿದ್ದಾರೆ. ಇಂದಿನ ಯುವ ಜನಾಂಗ ಹೇಗಿರಬಹುದೆಂಬುದನ್ನು ಆಗಲೇ ಅವರು ಸರಿಯಾಗಿ ಪ್ರೆಡಿಕ್ಟ ಮಾಡಿದ್ದರು ಅನಿಸುತ್ತೆ, ಅಷ್ಟೇ ಅಲ್ಲ, ಜನಸಾಮಾನ್ಯರೂ ಕೂಡಾ ಹೆಚ್ಚಿನದನ್ನು ಸಾಧಿಸಲು ಹೇಗೆ ನೈತಿಕತೆಯನ್ನು ನಿಧಾನವಾಗಿ ಅತ್ಯಂತ ಸಹಜ ಕ್ರಿಯೆಯಂತೆ ಬಿಡುತ್ತಾ ಹೋಗುತ್ತಾರೆಂದು ನೈಜವಾಗಿ ದಾಖಲಿಸಿದ್ದಾರೆ. ಆದರೆ ಅವರು ಕನ್ನಡದ ಸೊಕಾಲ್ಡ್ ವಿಮರ್ಶಕರ ದೃಷ್ಟಿಗೆ ಯಾವತ್ತೂ ಬೀಳಲಿಲ್ಲ.

ಇನ್ನು ಹೊಸ ಲೇಖಕರಲ್ಲಿ ವಸುಧೇಂದ್ರ ಅವರನ್ನೇ ತೆಗೆದುಕೊಳ್ಳಿ, ಸರ್, ನೀವು ಬಳ್ಳಾರಿಯ ಜೀವನದ ಬಗ್ಗೆ ಎಷ್ಟು ಬರೆದಿದ್ದೀರೋ ಅಷ್ಟೇ ಪ್ರಮಾಣದಲ್ಲಿ ಬೆಂಗಳೂರಿನ ಜೀವನದ ಬಗ್ಗೆ, ಅಪಾರ್ಟಮೆಂಟ್ ಸಂಸ್ಕೃತಿಯ ಬಗ್ಗೆ, ಸಾಫ್ಟವೇರ್ ಜಗತ್ತಿನ ಬಗ್ಗೆ, ಅಲ್ಲಿ ಕೆಲಸ ಉಳಿಸಿಕೊಳ್ಳುವ ಒತ್ತಡಗಳ ಬಗ್ಗೆ ಸಹಜ, ಸುಂದರ ಶೈಲಿಯಲ್ಲಿ ಮನಮುಟ್ಟುವ ಕಥೆಗಳನ್ನು, ಪ್ರಬಂಧಗಳನ್ನೂ ಬರೆದಿದ್ದೀರಿ. ನಿಮ್ಮ ’ಕ್ಷಮೆಯಿಲ್ಲದೂರಿನಲಿ’ ಅದಕ್ಕೊಂದು ಒಳ್ಳೆಯ ಉದಾಹರಣೆ. ಬೆಂಗಳೂರಿನ ಅಪಾರ್ಟಮೆಂಟ್ ಸಂಸ್ಕೃತಿಯ ಬಗ್ಗೆ, ಡ್ರೈವರ್ ಬಗ್ಗೆ, ಮನೆಕೆಲಸದವಳ ಬಗ್ಗೆ ನೀವು ಬರೆದ ಪ್ರಬಂಧಗಳೂ ಬೆಂಗಳೂರಿನಂಥ ಊರಿನಲ್ಲೂ ಮಾನವೀಯ ತುಡಿತಗಳಿರುವುದನ್ನೂ ಸಹಜ ಸುಂದರತೆಯಿಂದ ತೆರೆದಿಡುತ್ತವೆ.

ಆದರೆ ಕಾರ್ನಾಡರಂಥ ಶ್ರೇಷ್ಠರು ಅವನ್ನೆಲ್ಲ ಓದುವುದಿಲ್ಲವೇನೋ! ಇನ್ನೂ ಎಷ್ಟೋ ಲೇಖಕರು ಪ್ರಸ್ತುತ ಒತ್ತಡಗಳು, ತಲ್ಲಣಗಳ ಬಗ್ಗೆ ಬರೆಯುತ್ತಲೇ ಇರುತ್ತಾರೆ. ಇನ್ನು ಪ್ರತಿಭಾ ಮ್ಯಾಡಮ್ ಅವರ ಅನುದಿನದ ಅಂತರಗಂಗೆ ಮಾತ್ರ ನಾನು ಓದಿದ್ದೇನೆ, ಮತ್ತೆ ಕೆಲವು ಕವನಗಳು. ಹಾಗಾಗಿ ಪ್ರಸ್ತುತ ವಿಷಯದಲ್ಲಿ ಅವರ ಬರಹಗಳು ಹೇಗಿವೆ ಎಂದು ಹೇಳಲಾರೆ. ಅವರ ಕವನಗಳು ಮಾತ್ರ ಸುಂದರವಾಗಿರುತ್ತವಷ್ಟೇ ಅಲ್ಲ, ಬಿಟ್ಟ ಬಾಣ ಸರಿಯಾಗಿ ನೆಟ್ಟಂತಿರುತ್ತದೆ.

ಇನ್ನು ಗುಂಪುಗಾರಿಕೆಯಂತೂ ಕನ್ನಡಕ್ಕೆ ಹೊಸದಲ್ಲವಾದರೂ ನನ್ನಂಥ ಮೂರ್ಖರಿಗೆ ಇತ್ತೀಚೆಗಷ್ಟೇ ತಿಳಿಯುತ್ತಿದೆ. ಮಜಾ ಎಂದರೆ ಇದು ಫೇಸಬುಕ್ಕಿನಲ್ಲಿ ಕೂಡ ಇದೆ. ಬಹಳಷ್ಟು ಕಾಮನ್ ಫ್ರೆಂಡ್ಸ್ ಇರುತ್ತಾರಾದರೂ ಕೆಲವರು ಕೆಲವರ ಬರಹಗಳನ್ನು ಮಾತ್ರ ಓದುತ್ತಾರೆ, ಮತ್ತು ಕಮೆಂಟ್ ಬರೆಯುತ್ತಾರೆ, ಇಲ್ಲವೇ ಲೈಕ್ ಕೊಡುತ್ತಾರೆ. ಇದು ಯಾವ ಮಟ್ಟಕ್ಕಿರುತ್ತದೆಂದರೆ ತಮಗೆ ಬೇಕಾದವರು ಬ್ಲ್ಯಾಂಕ್ ಫೋಟೊ ಕಳಿಸಿ ಇದು ನನ್ನ ಹೊಸ ಪ್ರೊಫೈಲ್ ಫೋಟೊ ಎಂದರೆ ೩೦೦-೪೦೦ ಲೈಕಗಳು ಅನಾಮತ್ತಾಗಿ ಬಂದಿರುತ್ತವೆ. ಅದೇ ಒಳ್ಳೆಯ ಒಂದು ಲೇಖನವನ್ನು ಓದುವ ಸಹನೆ ಬಹಳಷ್ಟು ಮಂದಿಗಿರುವುದಿಲ್ಲ.

ಸಾಹಿತ್ಯದಲ್ಲಿ, ಫೇಸಬುಕ್ಕಿನಲ್ಲಿ ಅಷ್ಟಿಷ್ಟು ಹೆಸರು ಮಾಡಿದ್ದರಂತೂ ಮುಗಿದೇ ಹೋಯಿತು, ಅವರು ಫ್ರೆಂಡ್ಸ್ ಮಾಡಿಕೊಳ್ಳುವುದು ಕೇವಲ ಬೇರೆಯವರು ತಮ್ಮ ಸ್ಟೇಟಸ್ ಓದಲಿ ಎಂದು, ಹೊರತು ತಾವು ಇನ್ನೊಬ್ಬರ ಸ್ಟೇಟಸ್ ನೋಡುವ, ಓದುವ ಅವಶ್ಯಕತೆಯೇ ಇಲ್ಲ ಎನ್ನುವ ಭಾವನೆ ಅವರದು. ಇರಲಿ, ಇದನ್ನೇಕೆ ಬರೆದೆನೆಂದರೆ, ಸಾಹಿತ್ಯದಲ್ಲಿ ಈಗ ಸಾಮಾಜಿಕ ತಾಣಗಳು, e magazineಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ ಅಲ್ಲವೇ? ಅಲ್ಲಿಂದ ಕೂಡ ಅನೇಕ ಬರಹಗಾರರು ಹುಟ್ಟಿ ಬರುತ್ತಿದ್ದಾರೆ, ಮತ್ತು ನನ್ನ ವಾಲು ನನ್ನದು, ನಾನು ಬರೆದದ್ದನ್ನು ಅಲ್ಲಿ ಅಂಟಿಸುತ್ತೇನೆ, ನೀನು ಓದದಿದ್ದರೆ ಬಿಡು ಎಂದು ಸವಾಲು ಹಾಕುತ್ತಿದ್ದಾರೆ.

ಇಂಥ ಬರಹಗಾರರೂ, ಹೊಸಬರೂ ಕೂಡ ಸಂವೇದನಶೀಲರಾಗಿರುವದನ್ನು ಕಾರ್ನಾಡರಂಥ ಹಳೆಯ ತಲೆಮಾರಿನವರು ಅರಗಿಸಿಕೊಳ್ಳಲು ಇನ್ನೂ ಬಹಳ ನೀರು ಕುಡಿಯಬೇಕೇನೋ!

‍ಲೇಖಕರು Admin

23 January, 2016

4 Comments

  1. ಶಮ, ನಂದಿಬೆಟ್ಟ

    “ಸಾಹಿತ್ಯದಲ್ಲಿ, ಫೇಸಬುಕ್ಕಿನಲ್ಲಿ ಅಷ್ಟಿಷ್ಟು ಹೆಸರು ಮಾಡಿದ್ದರಂತೂ ಮುಗಿದೇ ಹೋಯಿತು, ಅವರು ಫ್ರೆಂಡ್ಸ್ ಮಾಡಿಕೊಳ್ಳುವುದು ಕೇವಲ ಬೇರೆಯವರು ತಮ್ಮ ಸ್ಟೇಟಸ್ ಓದಲಿ ಎಂದು, ಹೊರತು ತಾವು ಇನ್ನೊಬ್ಬರ ಸ್ಟೇಟಸ್ ನೋಡುವ, ಓದುವ ಅವಶ್ಯಕತೆಯೇ ಇಲ್ಲ ಎನ್ನುವ ಭಾವನೆ ”

    “ಇಂಥ ಬರಹಗಾರರೂ, ಹೊಸಬರೂ ಕೂಡ ಸಂವೇದನಶೀಲರಾಗಿರುವದನ್ನು ಕಾರ್ನಾಡರಂಥ ಹಳೆಯ ತಲೆಮಾರಿನವರು ಅರಗಿಸಿಕೊಳ್ಳಲು ಇನ್ನೂ ಬಹಳ ನೀರು ಕುಡಿಯಬೇಕೇನೋ!”

    ವಾಹ್ ನೀತಾ.. ಪ್ರತಿಭಾ ಅವರ ಬಾಣಕ್ಕಿಂತ ಕಮ್ಮಿಯೇನಿಲ್ಲ ನಿಮ್ಮ ಬಾಣ.. ಸಲಾಂ ನಿಮ್ಮ ಬರಹದ ನವಿರಿಗೆ, ಮೊನಚಿಗೆ, ಶೈಲಿಗೆ… ನಿಮಗೆ

    • Neeta S Rao

      Thanks for your feedback madam.

  2. Dr. Prabhakar M. Nimbargi

    What about Bhairappa’s ‘Kavalu’? In ‘Mandra’ he has amalgamated Indian urban & city lives as well as US city life too, but restricted himself to music in this novel. And Nagaraj Vastare?

    • Neeta S Rao

      Yes sir, even Bhairappa’s Kavalu unfolds many stark realities of modern life. I have read some stories of Nagaraj Vastare. Yes, city life and psychological conflicts of modern people are depicted in a very special style.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading