ವಸುಧೇಂದ್ರ, ಅಪಾರ ಬರೆದ ಖಡಕ್ ವಿಮರ್ಶೆ..

ಎಂ ಎಸ್ ಸತ್ಯು ಹಲವು ವರ್ಷಗಳ ನಂತರ ನಿರ್ದೇಶಿಸಿದ ‘ಇಜ್ಜೋಡು’ ತೆರೆ ಕಂಡಿದೆ. ನೋಡಿ ಅಂತ ಅವಧಿ ಹೇಳಿತ್ತು.
ವಸುಧೇಂದ್ರ ಮತ್ತು ಅಪಾರ ಈ ಸಿನೆಮಾ ನೋಡಿ ಬಂದಿದ್ದಾರೆ. ಅವರಿಬ್ಬರ ಅನಿಸಿಕೆ ಇಲ್ಲಿದೆ. ನೀವೂ ಸಿನೆಮಾ ನೋಡಿದ್ದೀರಾ?? ಹಾಗಾದರೆ ನಿಮ್ಮ ಅಭಿಪ್ರಾಯ, ಭಿನ್ನಾಭಿಪ್ರಾಯವನ್ನ ದಾಖಲಿಸಿ.
ಈ ಬಾರಿ ‘ಇಜ್ಜೋಡು’ ಸಿನೆಮಾವನ್ನು ನಮ್ಮ ಚರ್ಚಾ ವೇದಿಕೆ ‘ಜುಗಾರಿ ಕ್ರಾಸ್’ ನಲ್ಲಿ ನಿಲ್ಲಿಸುತ್ತಿದ್ದೇವೆ

ಹೋಗಿ ನೋಡಿದೆ.
ಡಬ್ಬ ಅಂದ್ರೆ ಡಬ್ಬಾ. ನೋಡೋಕ್ ಹೋಗಬೇಡಿ..
-ಅಪಾರ
++
ಪ್ರಿಯರೆ,
ನಾನೂ ಸಿನಿಮಾ ನೋಡಿದೆ. ಭಾಸ್ಕರ್ ರವರ ಛಾಯಾಗ್ರಹಣ ಚೆನ್ನಾಗಿದೆ. ಎರಡು ಹಾಡು, ಸಂಗೀತ ಚೆನ್ನಾಗಿದೆ. ಮೀರಾ ಜಾಸ್ಮನ್ ಕಣ್ಣಿನ ಭಾಷೆ ಮೋಡಿ ಮಾಡುವಂತಿದೆ. ಇವಿಷ್ಟನ್ನು ಹೊರ ಪಡಿಸಿದರೆ ಸಿನಿಮಾ ತುಂಬಾ ಕಳಪೆಯಾಗಿದೆ.
ಚಿತ್ರಕತೆ ಎಷ್ಟು ಬಾಲಿಶವಾಗಿದೆಯೆಂದರೆ, ನಿರ್ದೇಶನದ ವಿದ್ಯಾರ್ಥಿಯಾಗಿದ್ದರೆ ಅವನನ್ನು ಖಂಡಿತಾ ಫೇಲ್ ಮಾಡಬಹುದು. ಆದರೆ ಚಿತ್ರ ಮಾಡಿರುವುದು ಖ್ಯಾತ ನಿರ್ದೇಶಕ ಎಂ.ಎಸ್. ಸತ್ಯು ಅವರು.
200 ರೂಪಾಯಿ ಹಣ ತೆತ್ತು ಸಿನಿಮಾ ನೋಡಿ ಮೋಸ ಹೋದಂತಾಗುತ್ತದೆ. ಸಿನಿಮಾಗಳಿಗೂ ಗ್ರಾಹಕ ವೇದಿಕೆ ಬೇಕೆನ್ನಿಸುತ್ತದೆ.
-ವಸುಧೇಂದ್ರ

‍ಲೇಖಕರು avadhi

May 2, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. H. Anandarama Shastry

    ಸತ್ಯು ಅವರಲ್ಲಿ ಪ್ರತಿಭೆ ಮತ್ತು ಪ್ರತಿಷ್ಠೆ (ಅಹಂಕಾರ) ಇಜ್ಜೋಡಾದಂತಿದೆ!

    ಪ್ರತಿಕ್ರಿಯೆ
  2. ರಾಜಕುಮಾರ

    ಪ್ರೀತಿಯ ವಸುಧೇಂದ್ರರಿಗೆ,
    ನೀವು ನಿಮ್ಮ ಎರಡು ನೂರು ರೂಪಾಯಿಯನ್ನು ಅವಧಿಯಿಂದ ವಸೂಲು ಮಾಡಿಕೊಳ್ಳಿ!

    ಪ್ರತಿಕ್ರಿಯೆ
  3. Niranjan K N

    I agree. Disappointing movie indeed. There are several incongruities from beginning to end that remains unanswered. The film should have been shot in any of the villages of North Karnataka rather than in Hassan where there is no reference to Devadasi system in any part of the history.
    For a modern day viewer or current generation, though the movie is about Devadasi system, Ijjodu fails to explain the nuances of the evil and concludes by just whisking over the surface. Further, it is surprising to see a devadasi practising such an age old evil for decades being reformed overnight in just one lecture. There should have been confrontation between the character debating over the traits of modernity and tradition.

    ಪ್ರತಿಕ್ರಿಯೆ
  4. Praveen

    ನಾನೂ ‘ಇಜ್ಜೋಡು’ ನೋಡಿದೆ ಸರ್… ಚಿತ್ರದ ಮೊದಲು ಮತ್ತು ಅಲ್ಲಲ್ಲಿ ಸಿಗುವ abstract image ಗಳು ಖುಷಿ ಕೊಡುವಂತಿವೆ… ಮೀರಾ ಜಾಸ್ಮಿನ್ ಕಣ್ಣು ಮಾತಾಡಿದೆ… ಬಾಯಿ ತೊದಲಿದೆ…! ಹತ್ತು ಹನ್ನೆರಡು ವರ್ಷಗಳ ಗಟ್ಟಿ ನಂಬಿಕೆ ಅಷ್ಟೇನೂ ತಾಕತ್ತಿದ್ದಂತೆ ಅನ್ನಿಸದ ಒಂದೆರಡು ಸಂಭಾಷಣೆಗಳಲ್ಲೇ ಮುರಿದುಬೀಳುವುದು ದೊಡ್ಡ ಪ್ರಶ್ನೆಯನ್ನುಳಿಸುತ್ತದೆ. ಇಜ್ಜೋಡು ಅಮೆಚೂರ್ ಪ್ರತಿಭಾಶಾಲಿಯೊಬ್ಬನ ಶಾರ್ಟ್ ಫಿಲಂ ನಂತೆ ತೋರುತ್ತದೆ.
    – ಪ್ರವೀಣ್ ಬಣಗಿ

    ಪ್ರತಿಕ್ರಿಯೆ
  5. jayadev

    ನಾನು ಸಿನೆಮಾ ನೋಡಿಲ್ಲ.ಈ ರಿಯಾಕ್ಷನ್ಸ್ ಓದಿದ ಮೇಲೆ ನೋಡೋದೂ ಇಲ್ಲ.
    ವಸುದೇಂದ್ರ ಅವರೆ,ನೀವು ತುಂಬಾ ಜನರಿಗೆ ದುಡ್ಡು ಉಳಿಸಿದ್ರಿ. ಎಲ್ರಿಂದ್ಲೂ ಹತ್ತತ್ತು ರುಪಾಯಿ ಇಸ್ಕೊಳ್ಳಿ.
    ಜಯದೇವ

    ಪ್ರತಿಕ್ರಿಯೆ
  6. ಹರಿ

    ಬಹಳ ಆಸೆ ಇಟ್ಕೊಂಡಿದ್ದೆ. ಈ ವಾರ ನೋಡಲೇಬೇಕು ಅಂತ ಬಹಳ ಉತ್ಸುಕನಾಗಿದ್ದೆ.
    ಈಗ ತುಂಬಾ ನಿರಾಶೆ ಆಯ್ತು. ಆದರು, ಹೋಗಿ ನೋಡಿ ನಿರಾಶೆಯಾಗೋದಕ್ಕಿಂತ ಮೇಲು ಅನ್ನುಸ್ತು.

    ಪ್ರತಿಕ್ರಿಯೆ
  7. vishwanath B

    I wanted see this movie.
    But Vasu’s comment made me to withdraw my decision.paying for ticket is not really a big issue , but worthiness & time is most important.
    May be i will watch when it was shown in SUSHITRA or SHRUSTI ( Definately not for free!)sometime in future.

    ಪ್ರತಿಕ್ರಿಯೆ
  8. balu mandarthi

    Thanks apara for that bold comment,
    First of all if the same funding by bigpictures would have given to some student he would have made a better attempt than this. To tell about a devadasi system do we need to make such bad film.
    And anirudh claims its one of his best work in DNA. Cant withstand jasmin’s malayaali accent in kannda movie.
    Dont understand what was the need of those abstract dance sequences for a devadasi subject
    Total scrap.
    better dont waste your time n money
    – balu mandarthi

    ಪ್ರತಿಕ್ರಿಯೆ
  9. balu

    Vasudendra , you have saved time and money, I will go and and buy your new title ! with CD (namamma andreee…..) RS.200 how is it please buy all so … bye

    ಪ್ರತಿಕ್ರಿಯೆ
  10. Tina

    ಧನ್ಯವಾದ ಅಪಾರ
    ನೀವು ಹೋಗಿ ನೋಡಿದಿರಿ. ನಾವು ನೋಡಲು ಹೋಗುವುದಿಲ್ಲ!೧
    ಮತ್ತು ವಸುಧೇಂದ್ರ ನಿಮಗೂ ಧನ್ಯವಾದ, ಯಾಕೆ ಅಂತ ಕೊಂಚ ವಿವರಿಸಿದ್ದಕ್ಕೆ.
    ಅವಧಿ, ಇದನ್ನ ’ವಿಮರ್ಶೆ’ ಅನ್ನೋದಕ್ಕಿಂತ ಅಭಿಪ್ರಾಯವಾಗಿ ತೆಗೆದುಕೊಳ್ಳುವೆ.
    ಆಗಾಗ ಇಂತಹ ಅಭಿಪ್ರಾಯಗಳನ್ನ ಪ್ರಕಟಿಸಿ.

    ಪ್ರತಿಕ್ರಿಯೆ
  11. arundhathi ramesh

    ನೋಡಬೇಕಂದಿತ್ತು..
    ಬೇಡ ಎಂದು ನಿರ್ಧಾರವಾಯಿತು !
    ಧನ್ಯವಾದಗಳು.. ಸಮಯ ಹಣ ಮತ್ತು
    ಮನದ ನೆಮ್ಮದಿ ಉಳಿಸಿದ್ದಕ್ಕೆ…

    ಪ್ರತಿಕ್ರಿಯೆ
  12. ಡಿ.ಎಸ್.ರಾಮಸ್ವಾಮಿ

    ಎಪ್ಪತ್ತರ ದಶಕದಲ್ಲಿ ಏನೆಲ್ಲ ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕಿದ್ದ ಕನ್ನಡ ಸಿನಿಮಾ ಈವತ್ತು ಇರುವ ರೀತಿಗೆ ಬೇಸರ ಬರುತ್ತೆ. ಅದೂ ಕೂಡ ಒಂದು ಉದ್ಯಮ. ಕುಟುಂಬದ ಜೊತೆ ಕೂತು ನೋಡಲಾಗದ ಲಾಂಗು,ಮಚ್ಚು,ಹೊಡೆದಾಟಗಳ ಚಿತ್ರಗಳ ಜೊತೆಗೆ ತಮ್ಮ ತಿಕ್ಕಲುತನವನ್ನು ಪ್ರೇಕ್ಷಕರ ಮೇಲೆ ಹೇರುವ ಇಂಥ ಚಿತ್ರಗಳು. ರಮೇಶ್ ಅರವಿಂದರ ಪ್ರಯತ್ನಗಳೂ ಸೋತಿರುವುದು, ಅಪರೂಪಕ್ಕೆ ಕಬಡ್ಡಿ, ಜುಗಾರಿಯಂಥ ಚಿತ್ರಗಳು-ಖಾಲಿ ಖಾಲಿ ಇರುವ ಚಿತ್ರಮಂದಿರಗಳಲ್ಲಿ ವಾರಕ್ಕೆರಡು ಹೊಸ ಚಿತ್ರಗಳು! -ಸಿಕ್ಕದ್ದನ್ನೆಲ್ಲ ರೀಮೇಕ್ ಮಾಡುವವರಿಗೆ ಥ್ರೀ ಈಡಿಯಟ್ಸ್, ತಾರೆ ಜಮೀನ್ ಪರ್-ಥರದ ಚಿತ್ರಗಳೇಕೆ ಹಿಡಿಸುವುದಿಲ್ಲವೋ ಅರ್ಥವಾಗುಲ್ಲ.
    ಸತ್ಯು ಅವರ ಗರಂ ಹವಾ, ಬರ ಇಜ್ಜೋಡಿನ ಬಗ್ಗೆ ಕುತೂಹಲ ಹುಟ್ಟಿಸಿತ್ತು. ಅದೂ ಈಗ ಮುಸ್ಸಂಜೆಯ ಥರವೇ ಟುಸ್ಸೆಂದಿತು!

    ಪ್ರತಿಕ್ರಿಯೆ
  13. Nagendra Shah

    ನಾವು ಹಿಂದೆ ಕೆಟ್ಟ ಸಿನಿಮಾ ನೋಡಿದಾಗ ನಾವಷ್ಟೆ ಯಾಕೆ ಶಿಕ್ಷೆ ಯಾಕೆ ಅನುಭವಿಸಬೇಕು ಅಂತ ನಮ್ಮ ಸ್ನೆಹಿತರನ್ನು ಚಿತ್ರ ಚೆನ್ನಾಗಿದೆ ಎಂದು ಹೇಳಿ ಕಳುಸುತ್ತಿದ್ದೆವು. ಅವರುಗಳು ನೋಡಿ ಬಂದ ಮೇಲೆ ಹೆಂಗ್ ಉಗೀತಿದ್ರೂ ಅಂದ್ರೆ…. ಅಪಾರ ಅವರೆ ನೀವು ಬಚಾವಾದ್ರಿ.

    ಪ್ರತಿಕ್ರಿಯೆ
  14. ಶರಶ್ಚಂದ್ರ ಕಲ್ಮನೆ

    ಇಲ್ಲಿ ಮೇಲೆ ಕಾಮೆಂಟ್ ಮಾಡಿದ ಎಲ್ಲರಿಗೂ, ನಾನು ಇಜ್ಜೋಡು ನೋಡಿದ್ದು ತೀರ ಇತ್ತೀಚಿಗೆ. ನನಗೆ ಚಿತ್ರ ಇಷ್ಟವಾಯಿತು.
    @ಬಾಲು ಮಂದಾರ್ತಿ,
    ಮೀರಾ ಜಾಸ್ಮಿನ್ ಅವ್ರು ಎಲ್ಲೂ ಮಲೆಯಾಳಿ ಶೈಲಿಯಲ್ಲಿ ಮಾತನಾಡಿಲ್ಲ. ಆದರೆ ಪಾತ್ರಕ್ಕೆ ತಕ್ಕಂತೆ ಭಾಷೆಯ ನೇಟಿವಿಟಿ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವೆ, ಇದನ್ನು ಸತ್ಯೂ ಅವರೂ ಒಪ್ಪಿಕೊಂಡಿದ್ದಾರೆ. ಇನ್ನೊಂದು ವಿಷಯವನ್ನು ಇಲ್ಲಿ ಹೇಳಲು ಇಚ್ಚಿಸುತ್ತೇನೆ, ಆ ಪಾತ್ರಕ್ಕೆ ದ್ವನಿಯನ್ನು ಮೀರಾ ಜಾಸ್ಮಿನ್ ಅವರೇ ಕೊಟ್ಟಿದ್ದಾರೆ, ಆದ್ದರಿಂದ ಅವರಿಂದ ಹಳ್ಳಿ ಭಾಷೆ ಹೇಳಿಸಲು ಕಷ್ಟವಾಗಿರಬಹುದು.
    abstract dance sequence ಗೆ ಒಂದು ನಿಮಿತ್ತವಿದೆ ಅಲ್ಲಿ. ಅವು ಹಳೆಯ ಹಾಗು ಹೊಸ ವಿಷಯಗಳ ವೈರುಧ್ಯದ ತರ ತೋರಿಸಲಾಗಿದೆ.
    @ವಿಶ್ವನಾಥ್,
    ಬೇರೆ ಮಚ್ಚು ಲಾಂಗ್ ಚಿತ್ರಗಳನ್ನು ನೋಡುವಷ್ಟು ಸಮಯ ಇಲ್ಲಿ ವ್ಯರ್ಥವಾಗುವುದಿಲ್ಲ ಬಿಡಿ. ಕೊನೆಗೆ ಏನೂ ಇಲ್ಲದಿದ್ದರೂ ಭಾಸ್ಕರ್ ಅವರ ವಿಡಿಯೋಗ್ರಫಿ ಹಾಗು ಸುಮಧುರ ಸಂಗೀತವನ್ನಾದರೂ ಕೇಳಬಹುದು.
    @ಹರಿ,
    ಸಿನೆಮಾವನ್ನು ನೋಡದೆ ಈ ಮಾತು ನೀವು ಹೇಳಬಾರದಾಗಿತ್ತು.
    @ಜಯದೇವ,
    ನೋಡೋದೂ ಇಲ್ಲ ಅಂತ ಶಪಥ ಮಾಡಿದ ಹಾಗಿದೆ ನಿಮ್ಮ ಮಾತು.
    @ಬಾಲು,
    ನೀವೇನು ವಸುಧೇಂದ್ರ ಅವರನ್ನು ಸಂತೋಷ ಪಡಿಸಲು ಇಲ್ಲಿ ಕಾಮೆಂಟು ಹಾಕಿದ ಹಾಗಿದೆ.
    ಕೊನೆಯದಾಗಿ,
    ಸಿನೆಮ ಅನ್ನುವುದು ಪ್ರತಿಯೊಬ್ಬರಲ್ಲೂ ಪ್ರತ್ಯೇಕವಾದ, ವಿಭಿನ್ನವಾದ ಭಾವನೆಗಳನ್ನು ಹುಟ್ಟು ಹಾಕುತ್ತವೆ ಹಾಗು ಆರ್ಟ್ ಸಿನೆಮಾಗಳು ಇಷ್ಟವಾಗುವುದು ಅದಕ್ಕೆ… ಆರ್ಟ್ ಸಿನೆಮಾಗಳಲ್ಲಿ ಯೋಚಿಸಲು, ಕಲ್ಪಿಸಿಕೊಳ್ಳಲು ವಿಪುಲ ಅವಕಾಶಗಳಿರುತ್ತವೆ. ಸಿನೆಮಾವನ್ನು ಒಂದು ಕಲೆಯನ್ನಾಗಿ ನೋಡಬೇಕು ಎಂಬುದು ನನ್ನ ಅಭಿಪ್ರಾಯ. ಇಲ್ಲಿ ಕಾಮೆಂಟಿಸಿದ ಮುಕ್ಕಾಲು ಪಾಲು ಜನ ಒಂದೋ ವಸುಧೇಂದ್ರ ಅಥವಾ ಅಪಾರ ಅವರನ್ನು ಮೆಚ್ಚಿಸಲೋ ಅಥವಾ ಅವರು ಹೇಳಿದ್ದೆ ವೇದವಾಕ್ಯ ಎಂದು ಪರಿಪಾಲಿಸಲೋ ಹೊರಟಂತೆ ಕಾಣುತ್ತದೆ. ಅಪಾರ ಅವರು ತಮ್ಮ ಅಭಿಪ್ರಾಯ ಹಾಕಿದ್ದರೆ ಸಾಕಿತ್ತು, ಅದನ್ನು ಬಿಟ್ಟು ನೋಡಕ್ ಹೋಗಬೇಡಿ ಅಂತ ಹಾಕಿದ್ದು ಅವರ ಅಭಿಮಾನಿಯಾದ ನನಗೆ ಬೇಸರ ತಂದಿತು. ವಸುಧೇಂದ್ರ ಅವರ ಕಥೆಗಳ ಅಭಿಮಾನಿಯಾಗಿ ಅವರ ಅಭಿಪ್ರಾಯವೂ ನನಗೆ ಬೇಸರ ತರಿಸಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: