ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಂಧರಾ ಭೂಪತಿ ಅವರಿಗೆ ‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿ


‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿಗೆ ಖ್ಯಾತ ಆಯುರ್ವೇದ ವೈದ್ಯರು ಮತ್ತು ಸಾಹಿತಿಯಾದ ಡಾ.ವಸುಂಧರಾ ಭೂಪತಿ ಅವರು ಆಯ್ಕೆಯಾಗಿದ್ದಾರೆಂ

ಕರ್ನಾಟಕ ಸಮುದಾಯ ಆರೋಗ್ಯ ಸಂಸ್ಥೆ ನೀಡುವ ಈ ಪ್ರಶಸ್ತಿಯನ್ನು ಪ್ರತಿವರ್ಷ ವೈದ್ಯ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬರನ್ನು ಗುರುತಿಸಿ ನೀಡಲಾಗುತ್ತಿದ್ದು, ಈ ಬಾರಿ ಡಾ. ವಸುಂಧರಾ ಭೂಪತಿಯನ್ನು ಆಯ್ಕೆಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ತಿಂಗಳ 11 ರಂದು ಕೆಂಪೇಗೌಡ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ನಡೆಯಲಿದೆ ಎಂದು ಅಧ್ಯಕ್ಷರಾದ ಡಾ. ದಯಾನಂದ್ ಅವರು ತಿಳಿಸಿದ್ದಾರೆ.

ಡಾ. ವಸುಂಧರಾ ಭೂಪತಿಯವರು ಸಾಹಿತ್ಯ ಕ್ಷೇತ್ರದಲ್ಲಿಯೂ ಹೆಸರು ಮಾಡಿದ್ದು ವ್ಯದ್ಯಕೀಯಕ್ಕೆ ಸಂಬಂಧಿಸಿದಂತೆ 70ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೆ ವೈದ್ಯಕೀಯಕ್ಕೆ ಸಂಬಂಧಿಸಿದಂತೆ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಇವರ ಅಂಕಣಗಳು ಹೆಚ್ಚು ಜನಪ್ರಿಯವಾಗಿವೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

‍ಲೇಖಕರು avadhi

8 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading