ಹೆಬ್ರಿ ಸಮೀಪದ ವರಂಗ ಕೆರೆ ಬಸದಿಯ ಎಡ ದಂಡೆಯ ಮೇಲೆ
“ದಾರಿ ತಪ್ಪಿಸು ದೇವರೇ!” ಪುಸ್ತಕ ಬಿಡುಗಡೆಯಾಗಲಿದೆ.

ಭಾನುವಾರ 18 ಫೆ. 2018
ಬಿಡುಗಡೆ : ಮಿಂಜಿರ
ಸಮಯ : ಮಿಂಜಿರ ಹಲ್ಲು ತೊಳೆಯಲು ಕೆರೆಗೆ ಬರುವ ಹೊತ್ತು. ಅಂದಾಜು, ಬೆಳಿಗ್ಗೆ 6. 30.
ವಿಶೇಷ ಆಕರ್ಷಣೆ :
1. ನಿರೂಪಣೆ, ಸ್ವಾಗತ, ಭಾಷಣ, ಧನ್ಯವಾದ. ಇವು ಯಾವುದೂ ಇರುವುದಿಲ್ಲ.
2. ಬೆಳ್ಳಕ್ಕಿ ಹಾಗೂ ನೀರು ಕಾಗೆಗಳ ಚೀರು ಕಾರ್ಯಕ್ರಮದ ಪ್ರಾರ್ಥನೆ.
2. ಹತ್ತಿರವೇ ಇರೋ ಗುಡ್ಡದ ಹಿಂಗಡೆಯಿಂದ ಬೆಳಗುವ ಸೂರ್ಯನೇ ದೀಪ. ಅದೇ ಉದ್ಘಾಟನೆ.
3. ಹಲ್ಲುಜ್ಜಿ ಮರಳಿದ ಮೇಲೆ ಮಿಂಜಿರನಿಂದ ಪುಸ್ತಕ ಬಿಡುಗಡೆ.
4. ಒಪ್ಪಿದರೆ ಮಿಂಜಿರನಿಂದ ಹಾಡು.
5. ಮಿಂಜಿರ ಒಂದು ವೇಳೆ ಬರಲಿಲ್ಲವೆಂದಾದರೇ ಅಂದು ಉದಯಿಸುವ ಸೂರ್ಯನೇ ಪುಸ್ತಕ ಬಿಡುಗಡೆ ಮಾಡ್ತಾನೆ. ಜೊತೆಗೆ ನೀವೂ ನಾನೂ.
ದಯವಿಟ್ಟು ಬನ್ನಿ….
ಮುಂಚಿತವಾಗಿಯೇ ತಿಳಿಸಿದರೆ ಕೊಟ್ಟೆ ಕಡುಬು, ದಾಳಿತೋವೆ. ಕುಚ್ಚಲಕ್ಕಿ ಸೇಮಿಗೆ, ಅದಕ್ಕೆ ತೆಂಗಿನ ಹಾಲು. ಅವಲಕ್ಕಿ ಮೊಸರು. ಬೆಳ್ಳಂಬೆಳಿಗ್ಗೆ ಸಿಹಿ ತಿನ್ನುತ್ತೀರಾದರೆ ಹೋಳಿಗೆ ಅದರ ಮೇಲೆ ತುಪ್ಪ. ಇವಾವುದೂ ಇಷ್ಟವಿಲ್ಲವೆಂದಾದರೆ ನೀವು ಸೂಚಿಸುವ ಯಾವುದಾದರೊಂದು ಗ್ರಾಮೀಣ ಆಹಾರ ಬೆಳಗ್ಗಿನ ಉಪಹಾರಕ್ಕೆ ತಯಾರಿಸಲಾಗುವುದು.
ಒಂದು ವೇಳೆ ನಿರೀಕ್ಷೆಗೆ ಮೀರಿ ಜನ ಬಂದರೆ ಪುಸ್ತಕ ಬಿಡುಗಡೆಯ ಬಳಿಕ ಹೆಬ್ರಿಯ ಬಡ್ಕಿಲ್ಲಾಯರ ಹೊಟೇಲಿಗೆ ಹೋಗಿ ತಿಂಡಿ ತಿಂದು ಬರುವುದು.
ಬದಲಾವಣೆ ಏನಾದರೂ ಇದ್ದರೆ ಮುಂದೆ ತಿಳಿಸುತ್ತೇನೆ. ಅದಕ್ಕೂ ಮುಂಚೆ ದುಬೈ ಹಾಗೂ ಒಮಾನಿನಲ್ಲಿ ದಾರಿ ತಪ್ಪಿಸು ದೇವರೇ! ಬಿಡುಗಡೆಯಾಗಲಿದೆ. ದೆಹಲಿ, ಮುಂಬೈಯಲ್ಲೂ ಕಾರ್ಯಕ್ರಮ ಏರ್ಪಾಡಾಗುವ ಸೂಚನೆ ಇದೆ. ಏನೇ ಇದ್ದರೂ ತಿಳಿಸುತ್ತೇನೆ
ಎಲ್ಲೇ ಆದರೂ, ಹೇಗೇ ಆದರೂ ನೀವು ನನ್ನೊಂದಿಗಿರುತ್ತೀರಿ ಎಂಬ ನಂಬಿಕೆಯಿಂದ…..
ಮಂಜುನಾಥ್ ಕಾಮತ್






0 Comments