ಎರಡು ಮಹಾನ್ ಕೊಡುಗೆಗಳು
ಒಂದು ದಿನ ಮುಲ್ಲಾ ನಸ್ರುದ್ದೀನ್ ಊರಿನ ಮಧ್ಯದ ಚೌಕದಲ್ಲಿ ಫಲಕವೊಂದನ್ನು ತೂಗು ಹಾಕಿದ. ಅದರಲ್ಲಿ ಈ ರೀತಿ ಬರೆದಿತ್ತು: ‘ನನ್ನ ಕತ್ತೆಯನ್ನು ಕದ್ದಿರುವವರು ದಯವಿಟ್ಟು ನನಗೆ ಹಿಂದಿರುಗಿಸಿ. ನಾನು ಅದನ್ನೇ ನಿಮಗೆ ಉಡುಗೊರೆಯಾಗಿ ಕೊಡುತ್ತೇನೆ’.
ಅದನ್ನು ಓದಿದ ಊರಿನ ಜನರೆಲ್ಲಾ, ‘ಇದೇನು ನಸ್ರುದ್ದೀನ್! ಇದೆಂತಹ ಹುಚ್ಚು ಹೇಳಿಕೆಯ ಫಲಕ! ಕದ್ದದ್ದನ್ನು ವಾಪಸ್ಸು ಅವರಿಗೇ ಕೊಡುವುದಾದರೆ ಈ ಫಲಕ ಏಕೆ ಬೇಕು?’ ಎಂದು ಆಶ್ಚರ್ಯದಿಂದ ಕೇಳಿದರು.
ಆ ರೀತಿ ಕೇಳಿದ ಜನರಿಗೆ ಮುಲ್ಲಾ, ‘ಬದುಕಿನಲ್ಲಿ ಎರಡು ಮಹಾನ್ ಕೊಡುಗೆಗಳಿವೆ. ಮೊದಲನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತು ಕಳೆದುಹೋಗಿದ್ದು, ಅದು ಪುನಃ ನಿಮಗೆ ದೊರಕಿದಾಗ ಸಿಗುವ ಸಂತೋಷ. ಎರಡನೆಯದು, ನೀವು ಅತ್ಯಂತ ಪ್ರೀತಿಸುವ ವಸ್ತುವನ್ನು ಇತರರಿಗೆ ಕೊಡುಗೆಯಾಗಿ ನೀಡುವಾಗ ಸಿಗುವ ಸಂತೋಷ’ ಎಂದ..
]]>






ವಾಹ್, …
philosophic thought realy meaningful