ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಚ್ ಎಲ್ ಪುಷ್ಪ ಆಯ್ಕೆ

ಕನಾ೯ಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಎಚ್ ಎಲ್ ಪುಷ್ಪ ಆಯ್ಕೆ

ಅವಧಿಯ ಅಭಿನಂದನೆಗಳು

ರಾಜ್ಯದ ಎಲ್ಲೆಡೆಯಿಂದ 699 ಮತಗಳು ಚಲಾವಣೆ ಆದವು. ಈ ಪೈಕಿ 44 ಮತಗಳು ತಿರಸ್ಕೃತಗೊಂಡಿವೆ. ಉಳಿದ ಮತಗಳ ಪೈಕಿ ಎಚ್ ಎಲ್ ಪುಷ್ಪ 342 ಮತಗಳನ್ನು ಪಡೆದು 62 ಮತಗಳ ಅಂತರದಿಂದ ಹಾಲಿ ಅಧ್ಯಕ್ಷೆ ವನಮಾಲ ಸಂಪನ್ನಕುಮಾರ್ ಅವರನ್ನು ಸೋಲಿಸಿದರು. ವನಮಾಲ ಅವರು 280 ಮತಗಳನ್ನು ಪಡೆದಿದ್ದರು. ಶೈಲಜಾ ಸುರೇಶ್ ಅವರು 33 ಮತಗಳಿಂದ ಮಾತ್ರವೇ ತೃಪ್ತಿ ಪಡೆದುಕೊಳ್ಳಬೇಕಾಯಿತು.

ವಿಜೇತರನ್ನು ಘೋಷಿಸಿದ ನಂತರ ಅವಧಿಯೊಂದಿಗೆ ಮಾತನಾಡಿದ ಎಚ್ ಎಲ್ ಪುಷ್ಪ ಅವರು, ಎಲ್ಲ ಲೇಖಕಿಯರನ್ನು ಈ ಸಂಘದ ಚೌಕಟ್ಟಿನೊಳಗೆ ತರುವ ಪ್ರಯತ್ನವನ್ನು ಮಾಡುತ್ತೇನೆ. ಲೇಖಕಿಯರ ಕೃತಿಗಳಿಗೆ ಸಿಗಬೇಕಾದ ಮನ್ನಣೆ ದೊರಕಿಸಿಕೊಡುವುದು ನನ್ನ ಮುಖ್ಯ ಆದ್ಯತೆಗಳೆಲ್ಲೊಂದು ಎಂದು ತಿಳಿಸಿದರು.

ನನ್ನನ್ನು ಚುನಾಯಿಸಿದ ಹಾಗೂ ಈ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಎಲ್ಲರಿಗೂ ನನ್ನ ಮನದಾಳದ ವಂದನೆಗಳು ಎಂದು ತಿಳಿಸಿದರು

ಎಚ್ ಎಲ್ ಪುಷ್ಪ ಹಾಗೂ ಸಂಘದ ಹಾಲಿ ಅಧ್ಯಕ್ಷರಾಗಿದ್ದ ವನಮಾಲ ಸಂಪನ್ನಕುಮಾರ್‌ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟು ಅಂತಿಮವಾಗಿ ಗೆಲುವು ಪುಷ್ಪ ಅವರ ಪಾಲಾಯಿತು.

ಬಿ ಎಂ ಶ್ರೀ ಪ್ರತಿಷ್ಠಾನದ ಕಚೇರಿಯಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಮತದಾರರಿಗೆ ಮತದಾನದ ಅವಕಾಶಾಶ ಕಲ್ಪಿಸಲಾಗಿತ್ತು. ರಾಜ್ಯದ ಇತರೆ ಜಿಲ್ಲೆಗಳ ಮತದಾರರು ಮುಂಚಿತವಾಗಿಯೇ ಅಂಚೆಯ ಮೂಲಕ ಮತದಾನ ಮಾಡಿದರು.

‍ಲೇಖಕರು Admin

18 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading