ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲಿಂಗಾಯತ ಮತ್ತು ವೀರಶೈವ: ಏನಿದು?

ಬಸವಣ್ಣನವರ ಲಿಂಗಾಯತ ಮತ್ತು ಪಂಚಾಚಾರ್ಯರ ವೀರಶೈವ

ರಂಜಾನ್ ದರ್ಗಾ

1) ಇತಿಹಾಸ ಪುರುಷ ಬಸವಣ್ಣನವರೇ ಲಿಂಗಾಯತಕ್ಕೆ ಧರ್ಮಗುರು. ಸ್ಥಾವರಲಿಂಗೋದ್ಭವರು ಎನ್ನಲಾದ ರೇಣುಕಾಚಾರ್ಯರೇ ವೀರಶೈವಕ್ಕೆ ಧರ್ಮಗುರು.
2) ಲಿಂಗಾಯತರಲ್ಲಿ 770 ಅಮರಗಣಂಗಳೆಲ್ಲ ನಾಯಕರು. ವೀರಶೈವರು 770 ಅಮರಗಣಂಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
3) ಲಿಂಗಾಯತರುಏಕದೇವೋಪಾಸಕರು. ಇಷ್ಟಲಿಂಗಯೋಗ ಅವರ ಪೂಜಾ ವಿಧಾನ. ಇಷ್ಟಲಿಂಗವು ಅಗಮ್ಯ, ಅಗೋಚರ, ಅಪ್ರತಿಮ ಮತ್ತು ಅಪ್ರಮಾಣ ಚೈತನ್ಯದ ಕುರುಹು. ಬಹುದೇವೋಪಾಸಕ ವೀರಶೈವರು ಮೂರ್ತಿ ಪೂಜಕರು.
4) ಲಿಂಗಾಯತ ಧರ್ಮದಲ್ಲಿ ಹೋಮ, ಹವನ ಮತ್ತು ವೇದಘೋಷಗಳಿಲ್ಲ.ವೀರಶೈವರಲ್ಲಿ ಇವೆಲ್ಲ ಇವೆ.
5) ಮೂಢನಂಬಿಕೆಯ ಆಗರಗಳಾದ ಜ್ಯೋತಿಷ ಮತ್ತು ಪಂಚಾಂಗವನ್ನು ಲಿಂಗಾಯತರು ನಂಬುವುದಿಲ್ಲ. ವೀರಶೈವರು ನಂಬುತ್ತಾರೆ.
6) ಲಿಂಗಾಯತರಿಗೆ ಆಚಾರವೇ ಸ್ವರ್ಗ, ಅನಾಚಾರವೇ ನರಕ. ವೀರಶೈವರು ಸ್ವರ್ಗ, ನರಕಗಳನ್ನು ನಂಬುತ್ತಾರೆ.
7) ಲಿಂಗಾಯತರದು ಅನುಭವಮಂಟಪ. ವೀರಶೈವರಿಗೆ ದೇವಾಲಯಗಳು ಬೇಕು.
8) ಲಿಂಗಾಯತರದು ಕಾಯಕ ಸಿದ್ಧಾಂತ. ವೀರಶೈವರದು ಕರ್ಮ ಸಿದ್ಧಾಂತ.

9) ಲಿಂಗಾಯತರ ಧರ್ಮಗ್ರಂಥ ವಚನ ಸಂಪುಟ. ವೀರಶೈವರ ಧರ್ಮಗ್ರಂಥ ಸಿದ್ಧಾಂತ ಶಿಖಾಮಣಿ.
10) ಅವೈದಿಕ ಲಿಂಗಾಯತರಿಗೆ ವಚನವೇ ಸರ್ವಸ್ವ. ವೇದಾಗಮಗಳನ್ನು ನಂಬುವ ವೀರಶೈವರು ವೈದಿಕ ಸಂಪ್ರದಾಯದವರು.
11) ಲಿಂಗಾಯತರಿಗೆ ಅರಿವೇ ಗುರು. ವೀರಶೈವರಲ್ಲಿ ಭಕ್ತರು ಗುರುವಿನ (ಆಚಾರ್ಯರ) ಗುಲಾಮರು.
12) ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ’ಎಂದು ಹೇಳಿದವರು. ವೀರಶೈವ ಪಂಚಾಚಾರ್ಯರಿಗೆ ಪಲ್ಲಕ್ಕಿ ಬೇಕು.
13) ಲಿಂಗಾಯತರದು ನಿರ್ಜಾತಿ ವ್ಯವಸ್ಥೆ. ಬಸವ ತತ್ತ್ವವನ್ನು ಜನ ಮನದಲ್ಲಿ ಮೂಡಿಸುವ ಲಿಂಗವಂತರು ಶರಣ ಜಂಗಮರಾಗಬಹುದು. ವೀರಶೈವರದು ಜಾತಿ ವ್ಯವಸ್ಥೆ. ಅವರ ಪ್ರಕಾರ ಜಾತಿ ಜಂಗಮರೇ ಗುರುಗಳಾಗಬೇಕು.
14) ಲಿಂಗಾಯತರಿಗೆ ಪಂಚಸೂತಕಗಳಿಲ್ಲ. ವೀರಶೈವರಿಗೆ ಪಂಚಸೂತಕಗಳಿವೆ.
15) ಲಿಂಗಾಯತ ಬಸವಾದ್ವೈತ. ಶಿವ, ಗಂಗೆ, ಪಾರ್ವತಿ, ಮತ್ತು ಕೈಲಾಸ ನಂಬುವ ವೀರಶೈವ ದ್ವೈತ.
16) ವೀರಶೈವರು ಪಂಚಾಚಾರ್ಯ ಸಂಪ್ರದಾಯವನ್ನು ಬಿಟ್ಟು ಬಸವಣ್ಣನವರೇ ಧರ್ಮಗುರು ಮತ್ತು ವಚನಗಳೇ ಧರ್ಮಗ್ರಂಥ ಎಂದು ಒಪ್ಪಿಕೊಂಡಾಗ ಮಾತ್ರ ಲಿಂಗಾಯತ ಸಮಾಜ ಒಂದಾಗಬಲ್ಲುದು. ಅವೈದಿಕ ಲಿಂಗಾಯತ ಮತ್ತು ವೈದಿಕ ವೀರಶೈವತದ್ವಿರುದ್ಧ ಸಿದ್ಧಾಂತಗಳ ಮೇಲೆ ನಿಂತಿರುವುದರಿಂದ ಒಂದಾಗಲು ಬೇರೆ ಮಾರ್ಗವೇ ಇಲ್ಲ. ಇರುವುದೊಂದೇ ಮಾರ್ಗ; ಬಸವಮಾರ್ಗ.

‍ಲೇಖಕರು G

17 October, 2013

13 Comments

  1. Prabhakar Nimbargi

    The lingayats should INTROSPECT themselves as to whether they could called as REAL LINGAYATS IN EVERY SENSE. Instead, they behave and live like crabs in a basket. It’s a pity they can never be one group!

  2. dhanaraj patre

    danyavada darga sir gondal nivarane madidakke

  3. Umesh

    ದರ್ಗರವರೆ,
    ೧. ಮಹಾತ್ಮರಾದ ಬಸವಾದಿ ಶರಣರು ವೇದ,ಆಗಮ,ಶಾಸ್ತ್ರಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ಶ್ರದ್ದೆ ಹೊಂದಿದ್ದರು.
    ೨. ಕೆಳಗಿನ ಉರಿಲಿಂಗಿಪೆದ್ದಿಯವರ ವಚನ ಇದನ್ನು ಸ್ಪಷ್ಟಪಡಿಸುತ್ತದೆ;
    “ಓಂಕಾರವೆಂಬ ವೃಕ್ಷದಲ್ಲಿ ಋಗ್ವೇದ ಯಜುರ್ವೇದ ಸಾಮವೇದ ಅಥರ್ವಣ ವೇದಗಳೆಂಬ ನಾಲ್ಕು ಶಾಖೆಗಳು.
    ಅನಂತಾ ವೈ ವೇದಾ ಉಪವೇದಗಳೆಂಬ ಉಪಶಾಖೆಗಳು, ಶಾಸ್ತ್ರಗಳೆಂಬ ಅಂಕುರ ಪಲ್ಲವ, ಪುರಾಣಗಳೆಂಬ ಪುಷ್ಪ
    ಅಗಮಂಗಲೆಂಬ ಕಾಯಿ ಬಲಿದು ಶ್ರೀ ಪಂಚಾಕ್ಷರಿ ಎಂಬ ಮಧುರ ಹಣ್ಣುಗಳು ಅಗಣಿತ ಫಲವನು ಅನಂತ ಕಾಲ ಭೋಗಿಸಲು
    ಮತ್ತಂ ಜಿಹ್ನೆಯೊಳಗೆ ಬಂದಿರಲು ಭೋಗಿಸಿ ಸುಖಿಯಹುದಲ್ಲದೆ ಇದಿರ ವಿದ್ಯೆಗಳೆಂಬ ಸಸಿಯ ಸಾಕಿ ಸಲಹಲುನ್ತೆ
    ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ?”
    ೩. ಬಸವಾದಿ ಶರಣರು ತಮ್ಮ ವಚನಗಳಲ್ಲಿ ವೇದ ಮಂತ್ರ ಗಳನ್ನು ಉದಾಹರಿಸಿ ನೂರಾರು ವಚನಗಳನ್ನು ಬರೆದಿದ್ದಾರೆ.
    ೪. ಶರಣರ ಮೂಲ ಮಂತ್ರ “ಓಂ ನಮಃ ಶಿವಾಯ”. ಇದನ್ನು ಯಜುರ್ವೇದದಿಂದ ಅಣ್ಣ ಬಸವಣ್ಣನವರು ಶರಣರಿಗೆ ದೀಕ್ಷೆ ಕೊಟ್ಟರು. ಇದೊಂದೇ ಸಾಕು ಶರಣರಿಗೆ ವೇದಗಳ ಮೇಲಿದ್ದ ಅಪಾರವಾದ ಭಕ್ತಿ ಮತ್ತು ಶ್ರದ್ದೆಯನ್ನು ತೋರಿಸಲು.
    ೫. ಅಲ್ಲಮಪ್ರಭುದೇವರ ವಚನಗಳನ್ನು ಓದಿದರೆ ಉಪನಿಷತ ಸಾರಸರ್ವಸ್ವವೇ ಅಲ್ಲಿದೆ.
    ೬. ಆಯಾ ಕಾಲಘಟ್ಟಗಳಲ್ಲಿ ಸಂಪ್ರದಾಯಗಳನ್ನೂ ಬದಲಾವಣೆ ಮಾಡಿಕೊಂಡಿರಬಹುದು ಅಷ್ಟೇ. ಮೂಲ ತತ್ವ ಶಿವ ತತ್ವ, ಶಿವ ಪಂಚಾಕ್ಷರಿ ಮಂತ್ರ ಎನ್ನುವುದನ್ನು ಮರೆಯಬಾರದು.

    • ರಮ್ಮಿಗ

      ನೀವು ಹೇಳುವುದು ಸತ್ಯ. ಅಲ್ಲಮನ ವಚನಗಳು ಉಪನಿಷತ್ ಹೇಳುವ ಸತ್ಯಗಳನ್ನೇ ಹೇಳಿವೆ. ಅಷ್ಟೇ ಅಲ್ಲ, ವೇದಗಳ ಸಾರ ಸತ್ವವನ್ನು ವಚನಗಳು ಒಪ್ಪಿಕೊಂಡಿವೆ.

    • sudha

      haagadare, vedakke vareya kattuve,
      shaastrakke nigalavanikkuve,
      aagamada muga koiyuve,
      tarkada benna baaranettuve,
      yendeke basavanna heluttane..??
      veda nadanadugittu,
      shaastra vagali kelekke saaridittayya,
      tarka tarkisalariyade moogu vattidittayya,
      kudala sangama devanu namma maadara chennayyana maneyelli unda kaarana …

    • veda says

      ಉರಿಲಿಂಗ ಪೆದ್ದಿಗಳ ವಚನ ಒಂದು ಹೀಗಿದೆ
      1354
      ಓಂ ನಮಃ ಶಿವಾಯ ಎಂಬುದೆ ವೇದ,
      ಓಂ ನಮಃ ಶಿವಾಯ ಎಂಬುದೆ ಶಾಸ್ತ್ರ,
      ಓಂ ನಮಃ ಶಿವಾಯ ಎಂಬುದೆ ಪುರಾಣ,
      ಓಂ ನಮಃ ಶಿವಾಯ ಎಂಬುದೆ ಆಗಮ,
      ಓಂ ನಮಃ ಶಿವಾಯ ಎಂಬುದೆ ಸಕಲ ಕಲೆ.
      ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದೆನಲು ಸರ್ವಜ್ಞ,
      ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
      ಇದಕ್ಕೇನೇಳುತ್ತೀರಿ?

  4. Mahesh

    ಅವೈದಿಕ ಲಿಂಗಾಯತ ಮತ್ತು ವೈದಿಕ ವೀರಶೈವ ಮತಗಳು ಒಂದಾಗಲು ಸಾಧ್ಯವಿಲ್ಲ. ಆದರೆ ಅವೈದಿಕ ಲಿಂಗಾಯತ ಮತ್ತು ಅಬ್ರಾಹಂ ಮತವಾದ ಇಸ್ಸಾಂ ನಡುವೆ ಹೋಲಿಕೆಯಿರುವಂತೆ ನೀವು ಬರೆದಿರುವ ಲೇಖನದಿಂದ ತೋರುತ್ತದೆ. ಹಾಗಾಗಿ ಲಿಂಗಾಯತ ಮತ್ತು ಇಸ್ಸಾಂ ಒಂದಾಗಬಹುದು ಅಲ್ಲವೇ?

    • sudha

      haage nodidare trimatastaralliyu aneka saamya galive.avarella vandaagutilla yeke..??

  5. umesh

    can u tell me mr.ramzan darga, when it is veerashiva And lingayt born? i feel both ara same .

  6. Ratam

    ಯಾರು ಲಿಂಗಾಯತರು ಅಥವಾ ಯಾರು ವೀರಶೈವರು ಎನ್ನುವದನ್ನು ಇನ್ನು ಸರಿಯಾಗಿ ನಿರ್ಧರಿತವಾಗಿಲ್ಲ. ಲಿಂಗಾಯತರು ತಮ್ಮ ನಿತ್ಯಕಾಯಕದಲ್ಲಿ ವೇದಗಳನ್ನು ಅಳವಡಿಸಿಕೊಳ್ಳದಿರಬಹುದು. ಆದರೆ ದೇವಸ್ಥಾನಗಳಿಗೆ ಹೋಗುವ ಸಾಕಷ್ಟು ಲಿಂಗಾಯತರನ್ನು ನಾನು ನೋಡಿದ್ದೇನೆ. ಇನ್ನುವರೆಗೆ ಲಿಂಗಾಯತ ಮತ್ತು ವೀರಶ್ಶೆವ ಯಾರು ಬೇರೆಯವರಾ ಅಥವಾ ಒಂದೇನಾ ಎಂಬುವದನ್ನು ಕೇವಲ ಕೆವವು ಆಚಾರ ವಿಚಾರಗಳನ್ನು ನೋಡಿ ನಿರ್ಣಯಕ್ಕೆ ಬರಬಹುದಾದರೆ ಅವರೇ ಬರೊವಲ್ಲ ಯಾಕೆ? ಅವರಲ್ಲಿಯೂ ಕೂಡ ಅನೇಕ ಪಂಗಡಗಲೂ ಜಾತಿಗಳು ಹುಟ್ತಿಕೊಂಡಿವೆಯಲ್ಲ? ಅವರು ಯಾವುದಕ್ಕೆ ಸೇರಿದವರು?
    ಮಹೇಶ ಅವರು ಹೇಳಿರುವ “ಲಿಂಗಾಯತ ಮತ್ತು ಅಬ್ರಾಹಂ ಮತವಾದ ಇಸ್ಸಾಂ ನಡುವೆ ಹೋಲಿಕೆಯಿರುವಂತೆ ನೀವು ಬರೆದಿರುವ ಲೇಖನದಿಂದ ತೋರುತ್ತದೆ. ಹಾಗಾಗಿ ಲಿಂಗಾಯತ ಮತ್ತು ಇಸ್ಸಾಂ ಒಂದಾಗಬಹುದು” ಎಂಬುವದನ್ನು ಒಪ್ಪಲಾರೆ. ಏಕೆಂದರೆ ಇಸ್ಲಾಂದಲ್ಲಿ “ಕುರ್ಬಾನಿ” ಹೆಸರಿನಲ್ಲಿ ಪಶುವಧೆ ಅಧವಾ ಬಲಿ ಪಧ್ಧತಿ ಇದೆ. ಅದನ್ನು ಲಿಂಗಾಯತ ಅಥವಾ ವೀರಶ್ಶೆವ ಯಾರೂ ಒಪ್ಪಿಕೊಂಡಿದ್ದು ನಾನು ಕಂಡಿಲ್ಲ. ಬಸವಣ್ಣನವರಾಗಲಿ ಅಥವಾ ರೇಣುಕಾಚಾರ್ಯರೇ ಆಗಲಿ ಪ್ರಾಣಿಬಲಿಯನ್ನು ಉಪದೇಶಿಸಿಲ್ಲ.

  7. Sharmila

    Darga Dir,please don’t introduce artificial divisions among followers of Basavanna. Lingayata and Veerashaiva are one and the same.The differences you have identified are practically not there.

  8. channaveerappa s

    veerasaiva bere alla lingayata berealla eradu onde`sabaru bere muslims bere hegaguttare

  9. paramesh

    basavannanavaru helida haage ivanarava ivanarava ivanaravanendenisayya yennuva haage naavu nammalle e tharaha binna bava mudidare innaru ulisaballaru dharmavanu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading