ಗೆಳೆಯನೊಬ್ಬ ರಾತ್ರೋರಾತ್ರಿ ಮಾಡಿದ ಮೆಸೇಜ್ ನನ್ನನ್ನೀಗ ಎದ್ದು ಕೂರುವಂತೆ ಮಾಡಿದೆ…
ಲಿಂಗದೇವರು ಹಳೆಮನೆ ಸರ್ ಇನ್ನಿಲ್ಲ….
ನವಸಾಕ್ಷರರಿಗಾಗಿ ಸರಿಸುಮಾರು 22 ಪುಸ್ತಕಗಳನ್ನು ಕೆಲವೇ ದಿನದಲ್ಲಿ ಅವರ ಮನೆಯಲ್ಲೇ ಕೂತು ಮಾಡಿ ಮುಗಿಸಿದ್ದು, ಬೆಳಗಿನ ಜಾವ 4 ,5 ರವರೆಗೂ ಸಾಗುತ್ತಿದ್ದ ಕೆಲಸಕ್ಕೆ ಅವರೂ ನಿದ್ದೆಗೆಟ್ಟು ಕೂರುತ್ತಿದ್ದುದು, ಎಂತಹ ಒತ್ತಡದಲ್ಲೂ ತಲೆ ಕೆಡಿಸಿಕೊಳ್ಳದೆ, ಕಾಲ ಮೇಲೆ ಕಾಲು ಹಾಕಿ ಸಿಗರೇಟು ಸೇದುತ್ತಿದ್ದ ಅವರ ಟಿಪಿಕಲ್ ಶೈಲಿ, ಅವರ ಟಿಪ್ಪುಸುಲ್ತಾನ್ (ನಾಟಕ), ನಿಲುವು (ಅಂಕಣ ಬರಹಗಳು) ಇತ್ಯಾದಿ ಪುಸ್ತಕಗಳನ್ನು ಅವರಿಂದಲೇ ಸಂಪಾದಿಸಿದ್ದು…ಹೀಗೆ ಅವರ ಮತ್ತು ಅವರ ‘ಹಳೆಮನೆ’ ಯಲ್ಲಿನ ನೆನಪುಗಳು ಈಗ ಮತ್ತಷ್ಟು ಗಾಢವಾಗಿದೆ. ಸುರು ಸುರುಳಿಯಾಗಿ ನೆನಪಾಗಿ ಬೇಸರ ಹುಟ್ಟಿಸುತ್ತಿವೆ……
ಕರ್ಮಠ ನಾಸ್ತಿಕರಾಗಿದ್ದ ಅವರ ವಿಷಯದಲ್ಲಿ ಆತ್ಮ, ಚಿರಶಾಂತಿ ಇತ್ಯಾದಿ ಮಾತುಗಳು ಅರ್ಥ ಕಳೆದುಕೊಳ್ಳುತ್ತವಾದ್ದರಿಂದ ತತ್ಸಂಬಂಧೀ ಹಾರೈಕೆಗಳಿಗಿಂತ, ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದೇ ನನಗೆ ಹೆಚ್ಚು ಸಹಜವೆನ್ನಿಸುತ್ತಿದೆ..
-ಪ್ರವೀಣ್ ಹೆಗ್ದೆ
facebook ನಿಂದ
+
Early Morning got a shocking news that Lingadevaru Halemane is no more. There was a lot to discuss with him, know from him. But suddenly he left us.
-Tharakeshwar Vb
+
ಲಿಂಗದೇವರು ಹಳೆಮನೆ ಅವರು ಗತಿಸಿದ್ದು ಅತ್ಯಂತ ಬೇಸರವಾಯ್ತು. ನಾಟಕದಲ್ಲಿ ನನಗೆ ಇರುವ ಆಸಕ್ತಿಯಿಂದಲೂ ಅಂತೂ ಮಧ್ಯ ರಾತ್ರಿ 1.45 ಕ್ಕೆ `ಕನ್ನಡಪ್ರಭ’ ದ ಹಿರಿಯ ಸಹೋದ್ಯೋಗಿಗಳಾದ ನಟರಾಜ್ ಅವರು ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ನನಗಿಂತ ತುಂಬಾ ಹಿರಿಯರು. ಆದರೆ ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದರು. ಮೂಲತಃ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಹಾಲುಗೊಣ ಗ್ರಾಮದವರಾದ ಹಳೇಮನೆ ಅವರು ನಾಡಿದ್ದು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಹಳೇಮನೆ ಅವರ ಭಾಷಣ ಕೇಳಲು, ಸಮಯ ಸಿಕ್ಕರೆ ಒಂದಷ್ಟು ಗಳಿಗೆ ಹರಟಲು ನಾವು ಒಂದಷ್ಟು ಗೆಳೆಯರು ಸಮ್ಮೇಳನಕ್ಕೆ ಹೋಗುವ ಸಿದ್ಧತೆ ನಡೆಸಿದ್ದರು. ಆದರೆ ಬರಸಿಡಿಲಿನಂತೆ ಅವರ ಸಾವಿನ ಸುದ್ದಿ ಬಂದಿದೆ.
ಉಗಮ ಶ್ರೀನಿವಾಸ್







Hiriya Geleyaraagidda Lingadevaru Halemaneyavaru, nera manassina, bicchu nudiyavaraagiddaru. Avarillavaadaddu naataaka rangakke aste alla saahityarangavannu olagondante, idi samskritige ondu korate.
ಲಿಂಗದೇವರು ಹಳೆಮನೆ ಅವರು ಗತಿಸಿದ್ದು ಅತ್ಯಂತ ಬೇಸರವಾಯ್ತು. ನಾಟಕದಲ್ಲಿ ನನಗೆ ಇರುವ ಆಸಕ್ತಿಯಿಂದಲೂ ಅಂತೂ ಮಧ್ಯ ರಾತ್ರಿ 1.45 ಕ್ಕೆ `ಕನ್ನಡಪ್ರಭ’ ದ ಹಿರಿಯ ಸಹೋದ್ಯೋಗಿಗಳಾದ ನಟರಾಜ್ ಅವರು ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದರು. ನನಗಿಂತ ತುಂಬಾ ಹಿರಿಯರು. ಆದರೆ ತುಂಬಾ ಆತ್ಮೀಯವಾಗಿ ಮಾತನಾಡುತ್ತಿದ್ದರು. ಮೂಲತಃ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಹಾಲುಗೊಣ ಗ್ರಾಮದವರಾದ ಹಳೇಮನೆ ಅವರು ನಾಡಿದ್ದು ಚಿಕ್ಕನಾಯಕನಹಳ್ಳಿಯಲ್ಲಿ ನಡೆಯುತ್ತಿರುವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. ಹಳೇಮನೆ ಅವರ ಭಾಷಣ ಕೇಳಲು, ಸಮಯ ಸಿಕ್ಕರೆ ಒಂದಷ್ಟು ಗಳಿಗೆ ಹರಟಲು ನಾವು ಒಂದಷ್ಟು ಗೆಳೆಯರು ಸಮ್ಮೇಳನಕ್ಕೆ ಹೋಗುವ ಸಿದ್ಧತೆ ನಡೆಸಿದ್ದರು. ಆದರೆ ಬರಸಿಡಿಲಿನಂತೆ ಅವರ ಸಾವಿನ ಸುದ್ದಿ ಬಂದಿದೆ.
ಉಗಮ ಶ್ರೀನಿವಾಸ್
Ligadevaru Rangaayanada nirdeshakaraguva suddi bandaaga avra mele “naxal” hinnetavremdu goobe koorisuva prayatna nadedittu- aaga naavu kelavaru avrige phono maadi “naavella nimma jotegiddeve- alukabedi” endiddevu. nantara rangaayanadlli ittichege bhetiyaadaga adannu krutajateyinda smarisikondiddaru. avrinnoo irbekittu…
ಬ್ರೆಕ್ಟ್ ನಾಟಕಗಳ ಅನುವಾದಕರಾದ ಲಿಂಗದೇವರು ಹಳೆಮನೆ ಇಂದು ನಮ್ಮೊಂದಿಗೆ ಇಲ್ಲವಾದ್ದು ತುಂಬಾ ನೋವಿನ ವಿಷಯ, ಅಧುನಿಕ ಕನ್ನಡ ನಾಟಕ ರಂಗಕ್ಕೆ ಮಹತ್ವವಾದ ಒಂದು ಕೊಂಡಿ ಇನ್ನಿಲವಾಗಿದೆ..
besaravaayitu. kannada bhashe, saahity, sanskrutiya bagge yaavagaloo sookshmavvagi maatadutiddaru.
It is very sad. Halemane sir was so enthusiastic. On Sunday he was the one who asked lot of questions to H S Shivaprakash in a interactive session organized by the Rangayana. He seemed so healthy and showed no sign of any symptoms. It was really shocking.
May his soul rest in peace.
ಭಾಷೆ , ಸಾಹಿತ್ಯ ಮತ್ತು ಕಲೆಗಳಿಗೆ ಸಂಬಂಧಪಟ್ಟ ಎಲ್ಲ ವಿಚಾರಗಳನ್ನು ಸಾಮಾಜಿಕ , ಧಾರ್ಮಿಕ , ಆರ್ಥಿಕ ಹಾಗೂ ಶ್ಯೆಕ್ಷಣಿಕ ನೆಲೆಗಳಲ್ಲಿ ಬಹಳ ಸರಳವಾಗಿ ಮತ್ತು ಖಚಿತವಾದ ನಿಲುವುಗಳಿಂದ ವಿಶ್ಲೇಷಣೆ ಮಾಡುತ್ತಿದ್ದ ಪ್ರತಿಭಾವಂತ ವ್ಯಕ್ತಿ ಶ್ರೀ ಲಿಂಗದೇವರು ಹಳೆಮನೆ . ಎಲ್ಲರೊಡನೆ ತುಂಬಾ ಪ್ರೀತಿ ಗೌರವಗಳಿಂದ ನಡೆದುಕೊಳ್ಳುತ್ತಿದ್ದ ಹಳೆಮನೆಯವರು ಸದಾಕಾಲ ಒಂದಲ್ಲ ಒಂದು ಬಗೆಯ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು , ತಮ್ಮ ಸುತ್ತಮುತ್ತಲಿದ್ದವರನ್ನು ಕ್ರಿಯಾಶೀಲರನ್ನಾಗಿ ಮಾಡುತ್ತಿದ್ದರು . ಹಳೆಮನೆಯವರ ಸಾವಿನ ಈ ಸಮಯದಲ್ಲಿ ಏಕೋ ಏನೋ ಕೆ. ರಾಮದಾಸ್ ಅವರು ನೆನಪಾಗುತ್ತಿದ್ದಾರೆ . ಮೈಸೂರಿನಲ್ಲಿ ನಡೆಯುತ್ತಿದ್ದ ಎಲ್ಲಾ ಬಗೆಯ ವೈಚಾರಿಕ ಚಟುವಟಿಕೆಗಳಲ್ಲಿ ಇವರಿಬ್ಬರ ಪಾತ್ರ ಬಹು ದೊಡ್ಡದಾಗಿತ್ತು .
belegge 5.15kke walk hogalikke eddaga sangaati ck gundanna kalisidda msg shock niditu. nammatavarige mysorena pro.ramdas avarannu kaledukonda balika,neera,nistura adare aste sowmyada halemaniyavaru avara stana tumbi nammantavarigella soortiyagiddaru.halemaneyavara agaluvike nadina pragatipararigantu tumba dukha tandide
yaavaagalu janateya bagege aalavaada preetiyinda yochisutidda halemane innilla annuva suddi keli aaghaatavayitu. namm surapurada hallige bandu natakaada bagge matanadiddaru. lankesh, tejasvi, ramdas,kirum eega halemane…… ee swarthvillada barahagaararu illavada balika innenide taudu kuttuvavara nadu?. che!
ಕನ್ನಡದ ವಿಶಿಷ್ಟ ವ್ಯಕ್ತಿಗಳಲ್ಲೊಬ್ಬರು ಅಸ್ತಂಗತರಾಗಿರುವುದು ನಿಜಕ್ಕೂ ದುರದೃಷ್ಟಕರ.ಲಿಂಗದೇವರು ಗಂಭೀರ ಚಿಂತಕರು. ಎಡಪಂಥೀಯ ವಿಚಾರಧಾರೆಯನ್ನು ತಮ್ಮ ಮಾತು ಕೃತಿಗಳಲ್ಲಿ ವ್ಯಕ್ತಪಡಿಸುತ್ತಿದ್ದ ಲಿಂಗದೇವರು ಅಷ್ಟೇ ಸ್ನೇಹಜೀವಿಯೂ ಹೌದು. ನನ್ನ ಕೃತಿ ಒಳದನಿ ಬಿಡುಗಡೆ ಮಾಡಿದ ಸಂದರ್ಭದಲ್ಲಿ ಅವರಾಡಿದ ಮೆಚ್ಚುಗೆಯ ಮಾತುಗಳು ಮನದಲ್ಲಿ ಇನ್ನೂ ರಿಂಗಣಿಸುತ್ತವೆ.ಅವರ ವಿಮರ್ಶಾತ್ಮಕ ಟೀಕೆಗಳೂ ಸಹ ನೆನಪಾಗುತ್ತದೆ. 565 ಪುಟಗಳ ನನ್ನ ಕೃತಿಯನ್ನು ಎರಡು ದಿನಗಳಲ್ಲಿ ಸಂಪೂರ್ಣವಾಗಿ ಓದಿ ಬಿಡುಗಡೆಗೆ ಸಿದ್ಧರಾಗಿ ಬಂದಿದ್ದ ಲಿಂಗದೇವರು ಅವರ ಶ್ರದ್ಧೆ ನಿಜಕ್ಕೂ ಅನುಕರಣೀಯ. ರಂಗಾಯಣಕ್ಕೆ ಹೊಸ ಆಯಾಮ ನೀಡುವುದರಲ್ಲಿದ್ದ ಹಿರಿಯ ಚಿಂತಕ ಹಠಾತ್ತನೆ ಇನ್ನಿಲ್ಲವಾಗಿರುವುದು ಕರ್ನಾಟಕದ ಸಾರಸ್ವತ ಲೋಕಕ್ಕೆ ಉಂಟಾಗಿರುವ ನಷ್ಟ ಮಾತ್ರವಲ್ಲ, ರಾಜ್ಯದ ಪ್ರಗತಿಪರ ಚಳುವಳಿಗೂ ಅಪಾರ ನಷ್ಟವಾಗಿದೆ. ಲಿಂಗದೇವರು ಅವರ ವಿಚಾರಧಾರೆ, ಧೋರಣೆ ಮತ್ತು ಅವರು ಹಾಕಿಕೊಟ್ಟ ಮಾರ್ಗಗಳೇ ಮುಂಬರುವ ಪೀಳಿಗೆಗೆ ದಾರಿದೀಪವಾಗಲಿ ಎಂಬ ಇಚ್ಚೆಯೊಂದಿಗೆ ಅಗಲಿದ ಚೇತನಕ್ಕೆ ನಮನಗಳನ್ನು ಸಲ್ಲಿಸುತ್ತೇನೆ.
ನಾ ದಿವಾಕರ.
ಮೈಸೂರು