ಟಿ ಎನ್ ಸೀತಾರಾಂ
ಜಾಣ್ಮೆಯನ್ನು ಒಳಗೊಂಡಿದ್ದ ತತ್ವದ ಪದಗಳು, ವಿಷಾದ ಮತ್ತು ಅಧ್ಯಾತ್ಮದ ಕಾವ್ಯವಾಗಿದ್ದು ಅವರ ಮೋಹದ ಹೆಂಡತಿ ತೀರಿದ ಬಳಿಕ….

ತಾತ್ವಿಕ ಭಿನ್ನಾಭಿಪ್ರಾಯವನ್ನು ಕೆಲವು ಬಾರಿ ನನ್ನ ಗುರುಗಳಾದ ಲಂಕೇಶರೂ ಮತ್ತು ನನ್ನ ಅತ್ಯಂತ ಪ್ರೀತಿಯ ಮಿತ್ರನಾದ ಸಿ . ಅಶ್ವಥ್ ಪರಸ್ಪರ ವೈಯಕ್ತಿಕ ದ್ವೇಷದ ಮಟ್ಟಕ್ಕೆ
ಇಳಿಸಿಕೊಂಡಿದ್ದ ದಿನಗಳು ಇದ್ದವು…ಲಂಕೇಶರು ಸಮಾಜವಾದಿ ಮತ್ತು ಅಶ್ವಥ್ ಸ್ವಲ್ಪ R S S… ಅವರ ಮಧ್ಯದ ಈ ದ್ವೇಷ ಅವರಿಬ್ಬರ ತಿಕ್ಕಲುತನಗಳಿಂದಾಗಿ ನೋವಿನ ಜತೆಗೆ ತಮಾಷೆಯ ಘಟನೆಗಳಾಗಿ ನಮಗೆಲ್ಲಾ ಕಂಡಿದ್ದೂ ಇತ್ತು.

ಆದರೆ ಅಶ್ವಥ್ ಶಿಶುನಾಳ ಶರೀಫ್ ಅವರ ತತ್ವಪದಗಳಿಗೆ ಸಂಗೀತ ಸಂಯೋಜಿಸಿ , ಅನುಭಾವದ ಹುಚ್ಚಿನಿಂದ ಹಾಡಿ ಕ್ಯಾಸೆಟ್ ಮಾಡಿದಾಗ ಅದು ತೀವ್ರವಾಗಿ ತಟ್ಟಿದ್ದು ಲಂಕೇಶರಿಗೆ… ಆಗ ಲಂಕೇಶ್ ಪತ್ರಿಕೆ ಎಲ್ಲರ ಬುದ್ಧಿ ಮತ್ತು ಮನಸುಗಳನ್ನು ರೂಪಿಸುತ್ತಿದ್ದ ಅತ್ಯಂತ ಜನಪ್ರಿಯ ವಾರಪತ್ರಿಕೆ… ಲಂಕೇಶರಿಗೆ ಅಶ್ವಥ್ ರ ಕ್ಯಾಸೆಟ್ ಎಷ್ಟು ಇಷ್ಟವಾಯಿತೆಂದರೆ ತಮ್ಮ ದ್ವೇಷವನ್ನು ಮೀರಿ ಅಶ್ವಥ್ ರ ಚಿತ್ರವನ್ನು ತಮ್ಮ ಪತ್ರಿಕೆಯ coverpage ಮಾಡಿ ಶರೀಫ್ ರ ಜ್ಞಾನವನ್ನು ಗಾನದ ಮೋಡಿ ಯಾಗಿ ಎಲ್ಲರಿಗೆ ತಂದುಕೊಟ್ಟ ಗಾನಯೋಗಿ ಎಂದು ಅಶ್ವಥ್ ಬಗ್ಗೆ ಹೇಳಿದ್ದರು… ಮೋಹದ ಹೆಂಡತಿ ತೀರಿದ ಬಳಿಕ ಒಮ್ಮೆ ಅನೇಕ ಸಾರಿ ಪದೇ ಪದೇ ಕೇಳಿ ಭಾವುಕರಾಗುತ್ತಿದ್ದುದು ನನಗೆ ನೆನಪಿದೆ.
ಅಶ್ವಥ್ ಗೆ ಅತಿ ಹೆಚ್ಚು ಜನಪ್ರಿಯತೆ ಬಂದಿದ್ದು ಆ ದಿನಗಳ ನಂತರ…
ಇಷ್ಟಾದ ಮೇಲೂ ಅವರಿಬ್ಬರ ಮಧ್ಯದ ಭಾಂಧವ್ಯ ಸುಮಧುರವಾಗಲಿಲ್ಲ.. !!
ಈಗಲೂ ನನ್ನ ಅತಿ ಇಷ್ಟದ CD ಗಳಲ್ಲಿ ಅದೂ ಕೂಡ ಒಂದು…
ಜುಲೈ ೩ ಶರೀಫ್ ಅವರು ತೀರಿಕೊಂಡ ದಿನವೆಂದು ನೆನಪು… ಇಸ್ವಿ ನೆನಪಿಲ್ಲ… ಹಾಗಾಗಿ ಇದೆಲ್ಲಾ ನೆನಪು ಬಂತು… ಆ ಮೂರು ಜನವೂ ಈಗ ಇಲ್ಲ….
ನೆನಪುಗಳು ಕೊಂಚ ಭಾವುಕತೆಯನ್ನೂ ಹೊತ್ತು ತರುತ್ತದೆ






ಶರೀಫ ರಂಥಹ ಮಹಾತ್ಮರ ಹಾಡುಗಳನ್ನು ಬಳಸಿಕೊಂಡು ಹೆಸರು, ಹಣ ಎಲ್ಲವನ್ನು ಮಾಡಿಕೊಂಡರು. ಆದರೆ ಬದುಕಿನಲ್ಲಿ ಮಾತ್ರ ಅಶ್ವಥ್, ಲಕ್ಷ್ಮಿನಾರಾಯಣ ಭಟ್ಟರಿಗೆ ಸಂತ ಶರೀಫ ರ ಮೌಲ್ಯಗಳು ಬೇಡವಾಗಿತ್ತು. ಬದಲಿಗೆ ಅರೆಸ್ಸೆಸ್ ನ ದ್ವೇಷ ರಾಜಕಾರಣ, ಜಾತೀಯತೆಯನ್ನು ಇಬ್ಬರು ಒಳಗೊಳಗೇ ಮೆಚ್ಚಿಕೊಳ್ಳುತ್ತಿದ್ದರು. ಇದು ಲಂಕೇಶ್ ಸಿಟ್ಟಿಗೆ ಕಾರಣವಾಗಿತ್ತು. ಅಶ್ವಥ್, ಭಟ್ಟರ ಈ ಆಷಾಢ ಭೂತಿತನದ ಬಗ್ಗೆ ಪತ್ರಿಕೆಯಲ್ಲಿ ಬರೆದೂ ಇದ್ದರು
Very nice article.