ಗೌರಿ ದತ್ತು
ನಾನಾಗ ಗಾಂಧಿ ಬಜಾರ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದೆ. ಒಂದು ದಿನ ಮಧ್ಯಾನ್ಹದ ಊಟಕ್ಕೆ ಏನೂ ತಂದಿರಲಿಲ್ಲ. ಹೊಟ್ಟೆ ಹಸಿಯುತ್ತಿತ್ತು. ಗಾಂಧಿಬಜಾರ್ ನಲ್ಲಿದ್ದ ನಮ್ಮ ತಾತನ ಡ್ರಾಯಿಂಗ್ ಸ್ಕೂಲ್ ಗೆ ಹೋಗಿ ತಾತನ ಹತ್ತಿರ ದುಡ್ಡು ತೊಗೊಂಡು ತಿನ್ನೋಣ ಅಂತ ಹೋದರೆ ತಾತಾ ಎಲ್ಲೊ ಹೋಗಿದಾರೆ ! ಹಸಿವು ಪ್ರಾಣ ಹೋಗ್ತಿತ್ತು. ಏನು ಮಾಡೋದು ಅಂತ ಗೊತ್ತಾಗ್ದೇ, ಹಣ್ಣು ಮಾರುತ್ತಾ ಇದ್ದ ಗಾಡಿಯ ಹತ್ತಿರ ಆಸೆ ಕಣ್ಣುಗಳಿಂದ ನೋಡ್ತಿದ್ದೆ.

ಅಪ್ಪನ ಸ್ನೇಹಿತ ಲಂಕೇಶ್ ಬಂದ್ರು.”ಏನೇ ಹುಡುಗಿ, ಸೀತಾಫಲ ತಿಂತಿಯೇನೇ ?” ಅಂತ ಹೇಳಿ ಕೊಡಿಸಿ ಹೊರಟರು. ಅವರು ಹೋದ ದಿಕ್ಕನ್ನೇ ನೋಡುತ್ತಾ ಖು಼ಷಿಯಿಂದ ತಿನ್ನಲು ಹೋದೆ. ಎಲ್ಲಿತ್ತೋ ಕೋತಿ ! ಬಂದು ನನ್ನ ಸೀತಾಫಲವನ್ನು ಕಿತ್ತುಕೊಂಡು ಹೋಯಿತು. ನಾನು ಸಪ್ಪೆ ಮೋರೆ ಹಾಕಿಕೊಂಡು ಅಲ್ಲೇ ನಿಂತಿದ್ದೆ. ಮತ್ತೆ ಲಂಕೇಶ್ ಬಂದರು. ” ಏನೇ ಹುಡುಗಿ ತಿಂದೆಯೇನೇ ಹಣ್ಣು?” ಎಂದರು. “ಇಲ್ಲ ಕೋತಿ ಕಿತ್ತುಕೊಂಡು ಹೋಯಿತು” ಎಂದೆ ಅಳುತ್ತಾ. ಅವರು ನಗುತ್ತಾ ” ನೋಡು… ನಾನು ಲಂಕೇಶ, ಕೊಡಿಸಿದ್ದು ಸೀತಾಫಲ, ಕೋತಿ ಹತ್ರ ಹುಶಾರಾಗಿರಬೇಕು” ಅಂತ ಹೇಳಿ ಮತ್ತೊಂದು ಕೊಡಿಸಿ ನಾನು ತಿಂದ ಮೇಲೆ ಹೊರಟರು !






lankeshdu pen power thumba chennagitu annuthiddaru,mathina power chennagithu.
Brilliant punning! Lankesharige Raavanene saati!!