ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರ೦ಗಾಯಣದಲಿ ಚಿಣ್ಣರ ಮೇಳ

ರಂಗಾಯಣ, ಮೈಸೂರು

ಚಿಣ್ಣರ ಮೇಳ – 2012

ಕೈ ಕೈ ಹಿಡಿರಿ, ಕಥೆ ಕೇಳೋಣ ನಡಿರಿ

ಚಿಣ್ಣರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ

ರಂಗಾಯಣವು ಕಳೆದ ಹದಿನೈದು ವರ್ಷಗಳಿಂದ ಮಕ್ಕಳು ಬೇಸಿಗೆಯ ರಜಾ ದಿನಗಳಲ್ಲಿ ಮುಕ್ತ ಮನಸ್ಸಿನಿಂದ ಕ್ರಿಯಾಶೀಲವಾಗಿ ಕಳೆಯಲು, ಮಕ್ಕಳ ಮನೋವಿಕಾಸಕ್ಕೆ ಇಂಬು ಕೊಡಲು, ಕಲೆಗಳನ್ನು ಪ್ರೀತಿಸಲು ಅನುವಾಗುವಂತಹ ಚಿಣ್ಣರ ಶಿಬಿರವನ್ನು ಏರ್ಪಡಿಸುತ್ತಾ ಬಂದಿದೆ. ಇದು ಹದಿನಾರನೆಯ ಶಿಬಿರ. ಈ ಬಾರಿ ವಿಶೇಷವಾಗಿ ದಿನಾಂಕ 24-4-2012 (ಮಂಗಳವಾರ) ರಂದು ಸಂಜೆ 4.30 ಗಂಟೆಗೆ ರಂಗಾಯಣದ ವನರಂಗದಲ್ಲಿ ಚಿಣ್ಣರ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾನ್ಯ ಮೈಸೂರು ಜಿಲ್ಲಾಧಿಕಾರಿಗಳಾದ ಶ್ರೀ ಪಿ. ಎಸ್ ವಸ್ತ್ರದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತದ ಬಾಲ ಪ್ರತಿಭೆಯಾದ ಕುಮಾರ ಎಸ್.ಎ.ವಿನಾಯಕ್, ಮುಖ್ಯ ಅತಿಥಿಯಾಗಿ ಆಗಮಿಸಿ, ಸಂಗೀತ ಕಾರ್ಯಕ್ರಮ ನಡೆಸಲಿದ್ದಾರೆ. ನಂತರ ಚಿಣ್ಣರ ಮೇಳದ ವಿವಿಧ ಮಕ್ಕಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದೆ. ಉಪ ನಿರ್ದೇಶಕರು ರಂಗಾಯಣ, ಮೈಸೂರು]]>

‍ಲೇಖಕರು G

24 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading