ಆರ್. ವಿಜಯರಾಘವನ್
ಆಲ್ಬರ್ಟ್ ಕಮೂ ತನ್ನ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಅವರೊಂದಿಗೆ ಇರುವ ಒಂದು ಛಾಯಾಚಿತ್ರವಿದೆ. ಅವರಿಬ್ಬರೂ ಕಾರು ಅಪಘಾತವೊಂದರಲ್ಲಿ ಒಟ್ಟಿಗೆ ಸಾಯುವ ಸ್ವಲ್ಪ ಸಮಯದ ಮೊದಲು ತೆಗೆದ ಚಿತ್ರ ಅದು. ಅದೊಂದು ರೆಸ್ಟೋರೆಂಟ್ . ನಗುತ್ತಿರುವ ಕಮು ಗ್ಯಾಲಿಮಾರ್ಡ್‌ನ ಭುಜದ ಮೇಲೆ ಕೈ ಹಾಕಿದ್ದಾನೆ. ಅವನು ಮರುಭೂಮಿಯ ದಿರಿಸು ಧರಿಸಿರುವಂತೆ ತೋರುತ್ತದೆ. ಫ್ರಾನ್ಸ್‌ನಲ್ಲಿ ತನ್ನ ಪ್ರಸಿದ್ಧಿಯ ಉತ್ತುಂಗದಲ್ಲಿದ್ದರೂ, ಅವನು ತಾನು ಹುಟ್ಟಿ ಬೆಳೆದ ಉತ್ತರ ಆಫ್ರಿಕಾವನ್ನು ಸಂಪೂರ್ಣವಾಗಿ ತೊರೆದಿಲ್ಲ ಎಂಬಂತಿದೆ ಆ ವೇಷ.
ನೊಬೆಲ್ ಪ್ರಶಸ್ತಿ ವಿಜೇತ ಲೇಖಕ ಕಮೂ ತಾವು ಸಾಯುವ ಸಮಯದಲ್ಲಿ ದಿ ಫಸ್ಟ್ ಮ್ಯಾನ್ ಎಂಬ ಕಾದಂಬರಿಯ ರಚನೆಯಲ್ಲಿ ತೊಡಗಿದ್ದ. ಇದು ಅಲ್ಜೀರಿಯಾದಲ್ಲಿನ ಅವರ ಬಾಲ್ಯದ ಅರೆ-ಆತ್ಮಚರಿತ್ರೆಯ ವಿವರವಾಗಿದೆ. ಅದರ 144 ಪುಟಗಳು ಫಾಸೆಲ್ ವೇಗಾ ಸ್ಪೋರ್ಟ್ಸ್ ಕಾರ್‌ನಲ್ಲಿದ್ದ ಬ್ರೀಫ್‌ಕೇಸ್‌ನಲ್ಲಿ ದೊರೆತವು. 1960 ರ ಜನವರಿ 4 ರಂದು ಉತ್ತರ-ಮಧ್ಯ ಫ್ರಾನ್ಸ್‌ನ ವೀಲೆಬ್ಲೂಸ ಬಳಿ ಮರಕ್ಕೆ ಅಪ್ಪಳಿಸಿದ ಕಾರು ಅವನನ್ನು ಮತ್ತು ಗ್ಯಾಲಿಮಾರ್ಡ್‌ನನ್ನು ಬಲಿ ತೆಗೆದುಕೊಂಡಿತು. ಅಂತಿಮವಾಗಿ 1994 ರಲ್ಲಿ ಪ್ರಕಟವಾದ ಈ ಕಾದಂಬರಿಯು ಆ ಕರಡಿನ ಪ್ರತಿಲೇಖವಾಗಿದೆ. ಇದರ ತುಂಬ ಟಿಪ್ಪಣಿಗಳಿವೆ. ಶಿಕ್ಷಿಸುವ ಸೂರ್ಯನ ಪದಗಳು ಮತ್ತು ವಿವರಣೆಗಳು ಸಹ ಇದ್ದು ಅವುಗಳನ್ನು ಹೊಡೆದುಹಾಕಲಾಗಿದೆ.
ರೇಮಂಡ್ ಕ್ವೀನಿಯೊನ ‘ಜೋನೋ 1914-1965’ ಕೃತಿಯನ್ನು ಕ್ರಿಸ್ ಕ್ಲಾರ್ಕ್ ಅನುವಾದಿಸಿದ. 1996 ರಲ್ಲಿ ಗ್ಯಾಲಿಮಾರ್ಡ್ / ಎನ್ಆರ್ಎಫ್ ಪ್ರಕಟಿಸಿದ ಈ ಕೃತಿಯಿಂದ ಆಯ್ದ ಭಾಗವಿಲ್ಲಿದೆ. ಇದು ಜನವರಿ 4, 1960 ರ ಮಾಹಿತಿಯನ್ನು ಒಳಗೊಂಡಿದೆ. ಅಂದು ಆಲ್ಬರ್ಟ್ ಕಮೂ ಮತ್ತು ಅವರ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಉತ್ತರ ಮಧ್ಯ ಫ್ರಾನ್ಸ್‌ನಲ್ಲಿ ಕಾರು ಅಪಘಾತದಲ್ಲಿ ನಿಧನರಾದರು.

ದೀರ್ಘ ವಾರಾಂತ್ಯದ ಬಳಿಕ ಸೋಮವಾರ ಬರುವುದು ಆಹ್ಲಾದಕರವಾಗಿರುತ್ತದೆ. ಏಕೆಂದರೆ ಆಗ ಸಾಕಷ್ಟು ಮೇಲ್ ಗಳು ಬಂದಿರುತ್ತವೆ. ನಾನು ಬಹಳಷ್ಟು ಮೇಲ್ ಪಡೆಯುವುದನ್ನು ಆನಂದಿಸುತ್ತೇನೆ. ಆದರೆ ಇವತ್ತು ಎಲ್ಲವೂ ಹೆಚ್ಚು ಇರಲಿಲ್ಲ. ನನ್ನ ಪಿಜನ್ ಹೋಲಿನಲ್ಲಿ ನಾನು ಎಷ್ಟೋ ಹುಡುಕಿ ನೋಡಿದ್ದೇನೆ. ಆದರೆ ಅಷ್ಟೊಂದು ಇರಲಿಲ್ಲ. ತದನಂತರ, ಸ್ವಲ್ಪ ಸಮಯದ
ಬಳಿಕ ದಿ ಫೋರೆಹ್ ತಮ್ಮ ಹಸ್ತಪ್ರತಿಯನ್ನು ಹೊತ್ತು ನನ್ನ ಬಳಿ ಬಂದರು. ಅವರು ಹಿಂದೆ ಹಸ್ತಪ್ರತಿಯನ್ನು ತಂದು ವರ್ಷಗಳೇ ಕಳೆದಿವೆ. ಈ ಬಾರಿ ಇದು ಐದು ಸಣ್ಣ ಕಥೆಗಳನ್ನು ಒಳಗೊಂಡಿದೆ. ಅವುಗಳಲ್ಲಿ ಒಂದು ಕ್ರಾಂತಿಯ ನಂತರ ಅರ್ಬಲೆಟ್‌ನಲ್ಲಿ ಪ್ರಕಟವಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಜರ್ನಲ್‌ಗಳಲ್ಲಿ ಪ್ರಕಟವಾದ ಮೂರು, ಲೆಟ್ರೆಸ್ ನೂವೆಲ್ಸ್ ದಿ ಎನ್ಎನ್‌ಆರ್ಎಫ್ ನಲ್ಲಿ ಬಂದ ಒಂದು ಮತ್ತು ಪ್ರಕಟವಾಗದ ಒಂದು.
ನಾವು ಸಂಗ್ರಹದಲ್ಲಿನ ಮೂರು ಕಥೆಗಳ ಬಗ್ಗೆ ಮಾತನಾಡುತ್ತೇವೆ. ಅವರು ಹೊರಡುತ್ತಾರೆ. ಅವರು ಅನ್ಸೈಕ್ಲೋಪೀಡಿಯ ಕೆಲಸಕ್ಕೆ ಮರಳಲಿದ್ದಾರೆ. ರೇಮಂಡ್ [ಗ್ಯಾಲಿಮಾರ್ಡ್] ಅವರನ್ನು ನೋಡಲು ನಾನು ಹೋಗುತ್ತೇನೆ. ನಿರ್ದಿಷ್ಟವಾಗಿ ಯಾವುದೇ ಕಾರಣವಿಲ್ಲ. ವಾಸ್ತವವಾಗಿ ನಾನು ಅವರನ್ನು ನೋಡಲು ಏಕೆ ಹೋಗಿದ್ದೆನೆಂದು ನನಗೆ ತಿಳಿದಿಲ್ಲ. ಮೈಕೆಲ್ ಅಪಘಾತಕ್ಕೊಳಗಾಗಿದ್ದಾನೆ ಎಂದು ಅವರು ನನಗೆ ಹೇಳುತ್ತಾರೆ. ನಾನು ಇನ್ನೂ ಸುದ್ದಿಗಾಗಿ ಕಾಯುತ್ತಿದ್ದೇನೆ ಎನ್ನುತ್ತಾರೆ.
ನಾನು ಅವರನ್ನು ಎಲ್ಲಿ ಎಂದು ಕೇಳುತ್ತೇನೆ. ಅವರು ಮಾಂಟೆರಿಯೊದಲ್ಲಿ ಎಂದು ಹೇಳುತ್ತಾರೆ. ನಾನು ಕೇಳುತ್ತೇನೆ: ಆ ವಿಚಾರ, ಅದು ಗಂಭೀರವಾಗಿದೆಯೇ ಎಂದು. ಅವರು ಗಾಯಗೊಂಡಿದ್ದಾರೆಂದು ನಾನು ಭಾವಿಸುತ್ತೇನೆ. ನಮಗೆ ಹೆಚ್ಚು ತಿಳಿದಿಲ್ಲ. ಆದರೆ ಮೈಕೆಲ್ ಮತ್ತು ಬಹುಶಃ ಕಮೂ.
ಕಮೂ ಅವನೊಂದಿಗೆ ಏಕೆ ಇದ್ದಾನೆಂದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ಗ್ಯಾಸ್ಟನ್ ಆಗಮಿಸುತ್ತಾರೆ. ಅವರು ಆತಂಕಕ್ಕೊಳಗಾಗಿದ್ದಾರೆ. ಅವರು ಬ್ಯೂರೆಗೆ ಕರೆ ಮಾಡಿದರು. ಅವರು ಸುದ್ದಿಗಾಗಿ ಕಾಯುತ್ತಿದ್ದಾರೆ. ಮತ್ತು ಈಗ ಸುಜಾನ್ ಏನೆಲಿ ಕಚೇರಿಗೆ ಬರುತ್ತಾಳೆ. ಕಮೂ ಸತ್ತಿದ್ದಾನೆ ಎಂದು ಹೇಳುತ್ತಾಳೆ. ಇದು ಸಾಕಷ್ಟು ದೊಡ್ಡ ಹೊಡೆತ. ಅವಳು ಅದನ್ನು ಹಾಗೆಯೆ ಹೇಳುತ್ತಾಳೆ. ಇದು ಸಾಕಷ್ಟು ದೊಡ್ಡ ಹೊಡೆತ. ಗ್ಯಾಸ್ಟನ್ ಅಳುತ್ತಿದ್ದಾನೆ. ಇದಕ್ಕಿಂತ ಜಾಸ್ತಿ ಏನು ಹೇಳಬೇಕೆಂದು ಯಾರಿಗೂ ತಿಳಿದಿಲ್ಲ. ಗ್ಯಾಸ್ಟನ್ ಅಳುವುದನ್ನು ನಿಲ್ಲಿಸುತ್ತಾನೆ. ಅವರು ದಿಕ್ಕು ದಿಕ್ಕಿಗೂ ದೂರವಾಣಿ ಕರೆ ಮಾಡುತ್ತಿರುವ ಒಡೆಟ್ಟೆ ಲೈಗಲ್ ಬಳಿ ಹೋಗುತ್ತಾರೆ.
ಅರ್ಲಂಡ್ ಕೂಡ ಆಗಮಿಸುತ್ತಾನೆ. ಅದು ನಿಜವೆ. ಅದು ದೃಢಪಟ್ಟಿದೆ ಎಂದು ತೋರುತ್ತದೆ. ಮಾಂಟೆರಿಯೊದಿಂದ ಈಗಷ್ಟೆ ರಾಬರ್ಟ್ ಫೋನ್ ಮಾಡಿದ್ದ. ಅವನು ಮತ್ತು ಪಿಯರೆ ಅಲ್ಲಿಗೆ ಹೋಗಿದ್ದಾರೆ ಮೈಕೆಲ್ ತೀವ್ರವಾಗಿ ಗಾಯಗೊಂಡಿದ್ದಾರೆ. ಜನೈನ್ ಮತ್ತು ಅನ್ನಿ ಮೈಕೆಲ್ – ಅವರ ಹೆಂಡತಿ ಮತ್ತು ಅವರ ಮಗಳು- ಚೆನ್ನಾಗಿದ್ದಾರೆ ಅಥವಾ ದೊಡ್ಡ ಅಪಾಯವೇನೂ ಆಗಿಲ್ಲ. ಕಮೂ ಖಂಡಿತವಾಗಿಯೂ ಸತ್ತಿದ್ದಾರೆ. ಎಲ್ಲರೂ ಸ್ವಲ್ಪ ಸಮಯ ತೆಗೆದುಕೊಂಡರು. ಗ್ಯಾಸ್ಟನ್ ಮತ್ತು ರೇಮಂಡ್ ಮಾಂಟೆರಿಯೊಗೆ ಹೋಗಲು ನಿರ್ಧರಿಸಿದರು.
ನನ್ನ ಹನ್ನೊಂದು ಗಂಟೆಯ ಭೋಜನ ಮತ್ತು ಸಿನೆಮಾಗೆ ಹೋಗುವ ಆಲೋಚನೆಗಳನ್ನು ರದ್ದುಗೊಳಿಸಲು ಇದು ಒಳ್ಳೆಯ ಸಮಯ ಎಂದು ನಾನು ಭಾವಿಸುತ್ತೇನೆ. ಸಿಮಾನ್ ವರ್ನಯರ್ ನನಗೆ ಕರೆ ಮಾಡಿದ್ದಾರೆ. ಅವರು ರೇಡಿಯೊದಲ್ಲಿ ಜನೈನ್ ಮಾತನಾಡುವುದನ್ನು ಕೇಳಿದ್ದಾರೆ. ಇದು ಬೆಳಗಿನ ಪತ್ರಿಕೆಗಳ ಸಂಜೆಯ ಆವೃತ್ತಿಗಳ ದೊಡ್ಡ ದೊಡ್ಡ ಮುಖ್ಯಾಂಶಗಳನ ವರದಿ ಆಘಾತಕಾರಿಯಾಗಿದೆ. ಪ್ರತಿಯೊಬ್ಬರೂ ಪತ್ರಿಕೆ ಖರೀದಿಸುವ ಉಮೇದಿನಲ್ಲಿದ್ದಾರೆ. ಅದರ ಬಗ್ಗೆ ಮಾತನಾಡುತ್ತಾ ಇದ್ದಾರೆ. ನೀವು ಕಮೂನ ನೋಡಿದ್ದೀರಾ … ಕಮೂಸತ್ತಿದ್ದಾನೆ … ಅವನು ನಿಜವಾಗಿಯೂ ಸಾಕಷ್ಟು ಪ್ರಸಿದ್ಧನಾಗಿದ್ದ. ಜನ ನಿಜಕ್ಕೂ ದಿಗ್ಭ್ರಾಂತರಾಗಿದ್ದಾರೆ. ಅವರು ಫೆಲೀಪ್ ವಿದಾಲ್ ಕಾಪ್ ಯನ್ನು ಪ್ರಸ್ತಾಪಿಸಿದ್ದಾರೆ. ಅದು ಅಗಾಧವಾಗಿದೆ. ಮರುದಿನ ಬೆಳಿಗ್ಗೆ ಮಂಗಳವಾರ. ನಾನು ಅಲ್ಲಿಗೆ ಹೋಗುತ್ತೇನೆ.
ಸುದ್ದಿ ಸಂತೋಷ ತರುವಂಥದಲ್ಲ. ರಾಬರ್ಟ್ ಮಾಂಟೆರೋಗೆ ಹಿಂತಿರುಗುತ್ತಾನೆ. ನಾನು ಅವನ ಜೊತೆ ಹೋದರೆ ಅವನಿಗೆ ತೊಂದರೆಯಾಗುತ್ತದೆಯೇ ಎಂದು ನಾನು ಕೇಳುತ್ತೇನೆ. ಇಲ್ಲ. ಅವನು ಬಳಸು ದಾರಿಯಲ್ಲಿ ಹೋಗುತ್ತಾನೆ. ರೆನೆಯನ್ನು ಕರೆದುಕೊಳ್ಳಬೇಕಾಗಿದೆ. ಮತ್ತು ನಾವು ಲೇಮನ್ ಅವರನ್ನು ಗಾರ್ ದಿ ಲೀಯೋನ್ ನಿಲ್ದಾಣದಲ್ಲಿ ಕರೆದುಕೊಳ್ಳಲು ಹೋಗುತ್ತೇವೆ. ಅವರು 403 ಓಡಿಸುತ್ತಾರೆ. ಬಹಳ ವೇಗವಾಗಿ ಹೋಗುವುದಿಲ್ಲ. ಅವರು ಹೇಳುತ್ತಾರೆ, ಮರಗಳನ್ನು ನೋಡಲು ಕಾರಿನ ಛಾವಣಿ ತೆರೆದುಕೊಂಡು ಹೋಗುತ್ತೇನೆ ಎಂದು.

ಕಾರಿನಿಂದ ಕಸ ಸ್ವಲ್ಪಮಟ್ಟಿಗೆ ಕೆರೆದು ಹಾಕಲಾಗಿದೆ. ಇನ್ನೂ ಪೊಲೀಸರು ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ. ನಂತರ ನಾವು ಸಿಟಿ ಹಾಲಿಗೆ ಹೋಗುತ್ತೇವೆ. ಅವಳು ಅಲ್ಲಿ ಇಲ್ಲ. ಅವರು ಮೇಯರ್ ಅನ್ನು ನೋಡಲು ನಮ್ಮನ್ನು ಕಳುಹಿಸುತ್ತಾರೆ. ಅವರು ಅಲ್ಲಿಲ್ಲ. ಅವರು ಏಲಿಸಿಯಲ್ಲಿದ್ದಾರೆ. ಸಮಯ ವ್ಯರ್ಥವಾಗಿದೆ. ಆದ್ದರಿಂದ ನಾವು ಮಾಂಟೆರೋಗೆ ಹಿಂತಿರುಗುತ್ತೇವೆ.
ನಾನು ಜಾನಿಯೇ ಅವರನ್ನು ನೋಡಲು ಹೋಗುತ್ತೇನೆ. ಮ್ಯಾಜಿಸ್ಟ್ರೇಟ್ ಅಲ್ಲಿಗೆ ಹೋಗಿದ್ದಾನೆ ಎಂದು ಅವಳು ನನಗೆ ಹೇಳುತ್ತಾಳೆ. ಅವನು ಅವಳನ್ನು ಪ್ರಶ್ನಿಸಿದ್ದಾನೆ. ಅವನು ತುಂಬಾ ವಿವೇಚನಾಯುಕ್ತ. ಥೋಮಾಸೆ ಜಾನಿಯೇಳ ತಂದೆ ಆಗಿದ್ದಾನೆ. ಅವರು ಕಮೂನ ಸಾವಿನ ಬಗ್ಗೆ ಪ್ರಸ್ತಾಪಿಸಲಿಲ್ಲ ಎಂದು ಅವರು ದೃಢಪಡಿಸಿದ್ದಾರೆ. ಅವರು ಕಮೂನ ಸಾವನ್ನು ಉಲ್ಲೇಖಿಸದಿದ್ದುದು ಒಳ್ಳೆಯದಾಯಿತು. ಅದು ಜಾನಿಯೇಗೆ ತಪ್ಪು ಮಾಹಿತಿ ನೀಡಿದ ಕತ್ತೆ ಪತ್ರಕರ್ತನ ಹಾಗೆ ಅಲ್ಲ. ಅವನು ರೇಡಿಯೊದಲ್ಲಿ ಅವಳನ್ನು ಮಾತನಾಡಿಸುವಂತೆ ಮಾಡಿದ. ಜಾನಿಯೇ ಈ ಎಲ್ಲದರ ಬಗ್ಗೆ ಮಾತನಾಡುತ್ತಿದ್ದಾಳೆ.
ಯಾವುದೇ ಗೋಚರವಾಗುವ ಭಾವನೆ ಅವಳಲ್ಲಿ ಕಾಣುವುದಿಲ್ಲ. ಅವಳ ಕುತ್ತಿಗೆ ಊದಿದೆ. ನುಂಗಲು ಕಷ್ಟವಾಗುತ್ತದೆ. ಆದರೆ ಅವಳಿಗೆ ಉಳಿದಿರುವುದು ಅಷ್ಟೆ. ಅವಳು ಕ್ಯಾಸ್ತೆಲ್ಲಾರಸ್‌ನಲ್ಲಿ ಕುಡಿದ ಅಮಲಿನಲ್ಲಿದ್ದ ಪ್ರಿವರ್ಟ್ ಜೊತೆ ಹೊಸ ವರ್ಷದ ಸಂಭ್ರಮಾಚರಣೆಯ ಬಗ್ಗೆ ಮತ್ತು ವಸಂತ ಸ್ಪರ್ಧೆಯ ಬಗ್ಗೆ ಹೇಳುತ್ತಾಳೆ. ಮೈಕೆಲ್ ಹೊರತುಪಡಿಸಿ ಎಲ್ಲಾ ಪುರುಷರು ತೀರ್ಪುಗಾರರ ಸಾಲಿನಲ್ಲಿದ್ದರು ಮತ್ತು ಅವರು ಉದ್ದೇಶಪೂರ್ವಕವಾಗಿ ಚರ್ಚಿಸಲು ಆಚರಣೆಯಿಂದ ಆಚೆ ಉಳಿದರು. ಮತ್ತು ಎಲ್ಲಾ ಮಹಿಳೆಯರು ಮೈಕೆಲ್ ಅವರೊಂದಿಗೆ ಸ್ವ ಇಚ್ಛೆಯಿಂದ ಅಲ್ಲಿಯೇ ಇದ್ದರು ಮತ್ತು ಪ್ರಾವರ್ಟ್ ಕುಡಿದಿದ್ದರಿಂದ ಎರಡು ಗಂಟೆಗಳ ಸಮಯ ತೆಗೆದುಕೊಂಡಿರುವುದು ತಮಾಷೆಯಾಗಿರಲಿಲ್ಲ
From Journal 1914–1965 by Raymond Queneau © Editions Gallimard, 1996
ರೇಮಂಡ್ ಕ್ವಿನೌ ಫ್ರೆಂಚ್ ಕಾದಂಬರಿಕಾರ, ಕವಿ, ವಿಮರ್ಶಕ ಮತ್ತು ಸಂಪಾದಕ. ಔಲಿಪೋ ಗುಂಪಿನ ಸ್ಥಾಪಕ ಸದಸ್ಯ. ಕ್ವಿನೌ ಅವರ ಪ್ರಾಯೋಗಿಕ ಬರಹಗಳಲ್ಲಿ ಒಂದು ಡಜನ್ನಿಗೂ ಹೆಚ್ಚು ಕಾದಂಬರಿಗಳು, ಹಲವಾರು ಕವನ ಮತ್ತು ಪ್ರಬಂಧಗಳ ಸಂಗ್ರಹಗಳಿವೆ. ಅವರು 1976 ರಲ್ಲಿ ನಿಧನರಾದರು.
ಲಾಸ್ ಏಂಜಲೀಸ್ರಿವ್ಯೂ ಆಫ್ಬುಕ್ಸ್ನಿಂದ






0 Comments