ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಣುಕಾ ರಮಾನಂದ್ ಕೃತಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ

ರೇಣುಕಾ ರಮಾನಂದ್ ಸೇರಿದಂತೆ ೯ ಕೃತಿಗಳಿಗೆ ಹಾಸನದ ಮಾಣಿಕ್ಯ ಪ್ರಕಾಶನವು ಕೊಡಮಾಡುವ ಕಾವ್ಯ ಮಾಣಿಕ್ಯ ರಾಜ್ಯ ಪ್ರಶಸ್ತಿಯನ್ನು ಘೋಷಿಸಲಾಗಿದೆ.

2016 ಹಾಗೂ 2017 ರಲ್ಲಿ ಪ್ರಕಟವಾದ ಕವನ ಸಂಕಲನಗಳಿಗೆ ಈ ಪ್ರಶಸ್ತಿಯನ್ನು ಕೊಡಲಾಗುವುದು. 2016 ರ ಸಾಲಿನಲ್ಲಿ ನಾಲ್ಕು ಹಾಗೂ 2017 ರ ಸಾಲಿನಲ್ಲಿ 5 ಕೃತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಾಶಕರಾದ ದೀಪಾ ಉಪ್ಪಾರ್  ತಿಳಿಸಿದ್ದಾರೆ.

ಜುಲೈ 01 ರಂದು ಹಾಸನದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರಕಾಶನವು ಹಮ್ಮಿಕೊಂಡಿರುವ ಕವಿ-ಕಾವ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಪಡೆದ ಕೃತಿಗಳು ಹಾಗೂ ಕವಿಗಳ ವಿವರ ಈ ಕೆಳಕಂಡಂತಿದೆ.

2016
1. ಜಾಡಮಾಲಿ ಇಲ್ಲದ ನಗರ (ಕವನ ಸಂಕಲನ) – ಸಿದ್ಧಾರೂಢ ಕಟ್ಟಿಮನಿ. ವಿಜಯಪುರ
2. ಜೀವ ಸೆಲೆ (ಕವನ ಸಂಕಲನ) – ಶಶಿಧರ ಉಬ್ಬಳಗುಂಡಿ. ಬಳ್ಳಾರಿ.
3. ಪ್ರತಿಬಿಂಬ (ಕವನ ಸಂಕಲನ) – ವನಿತಾ. ಕಾಸರಗೋಡು.
4. ಕತ್ತಲಿಗಂಟಿದ ಬೆಳಕು (ಕವನ ಸಂಕಲನ) – ಲಕ್ಷ್ಮೀದೇವಿ ಪತ್ತಾರ, ಗಂಗಾವತಿ.

2017
1. ಮೀನುಪೇಟೆಯ ತಿರುವು (ಕವನ ಸಂಕಲನ) – ರೇಣುಕಾ ರಮಾನಂದ, ಅಂಕೋಲ.
2. ಒಡೆದ ಬಣ್ಣದ ಚಿತ್ರಗಳು (ಕವನ ಸಂಕಲನ) – ಡಾ.ಮಹಾಂತೇಶ್ ಪಾಟೀಲ, ಬಾಗಲಕೋಟ.
3. ಬಿಳಿಮಲ್ಲಿಗೆಯ ಬಾವುಟ (ಕವನ ಸಂಕಲನ) – ಡಾ.ಅಜಿತ್ ಹೆಗಡೆ, ಶಿವಮೊಗ್ಗ.
4. ತೇಲಿಹೋದ ದೋಣಿ (ಕವನ ಸಂಕಲನ) – ಮಂಜುನಾಥ್ ಸರ್ಜಾಪುರ, ಬೆಂಗಳೂರು.
5. ಮೌನಗೀತ (ಕವನ ಸಂಕಲನ) – ವಿನಯಚಂದ್ರ, ಹಾಸನ.

‍ಲೇಖಕರು avadhi

11 June, 2018

4 Comments

  1. ಕೊಟ್ರೇಶ್ ತಂಬ್ರಳ್ಳಿ ಅಮರಗೋಳ ಮಠ

    ಎಲ್ಲರಿಗೂ ಅಭಿನಂದನೆಗಳು

  2. Naveen Sabarad

    ಒಂಭತ್ತು ಜನರಿಗೆ ಪ್ರಶಸ್ತಿ ಪ್ರಕಟವಾಗಿರುವಾಗ, ಒಬ್ಬರ ಹೆಸರಿನ್ನು ಶೀರ್ಷಿಕೆಯಾಗಿ ಬಳಸೂದು ಮತ್ತು ಅವರ ಕೃತಿಯ ಮುಖಪುಟವನ್ನಷ್ಟೇ ಬಳಸೂದು ಸರಿಯಲ್ಲ. ಲೇಖರ ಪ್ರಭಾವಕ್ಕೆ ಯಾವ ಪತ್ರಿಕೆಯೂ ಮಣಿಬಾರ್ದ್ರಿ.
    ಎಲ್ಲರ್ಗೂ ಅಭಿನಂದನೆ. ಒಳ್ಳೇದಾಗಲಿ.

    • avadhi

      ಅವಧಿ ಪ್ರತಿಕ್ರಿಯೆ-
      ನೀವು ಹೇಳುತ್ತಿರುವುದು ಮೇಲ್ನೋಟಕ್ಕೆ ಸರಿ ಅನಿಸುತ್ತದೆ
      ಆದರೆ ಅವಧಿಗೆ ಅವರ ಲೇಖಕರು ಎಂದರೆ ಹೆಮ್ಮೆ
      ಹಾಗಾಗಿ ಅವಧಿಯ ಲೇಖಕರಿಗೆ ಪ್ರಶಸ್ತಿ ಬಂದಾಗ ಅದನ್ನು ಒತ್ತು ಕೊಟ್ಟು ಪ್ರಕಟಿಸುತ್ತದೆ
      ಅವಧಿ ತನ್ನ ಹತ್ತೂ ವರ್ಷಗಳಲ್ಲಿ ತನ್ನ ಬರಹಗಾರರಿಗೆ ಕೊಡುತ್ತಿರುವ ಪ್ರೋತ್ಸಾಹ ಇದು.

      ತಲೆಬರಹಗಳಲ್ಲಿ ಎಲ್ಲಾ ೯ ಹೆಸರು ಹಾಕಲು ಸಾಧ್ಯವಿದ್ದಿದ್ದರೆ ಖಂಡಿತಾ ನಾವೂ ಒಂದು ಕೈ ನೋಡೇಬಿಡುತ್ತಿದ್ದೆವು.

      ಜೊತೆಗೆ ಪತ್ರಿಕಾ ಪ್ರಕಟಣೆ ಬರುವಾಗ ಫೋಟೋಗಳು ಬಂದರೆ ಹಾಕಲು ನಮಗೂ ಸಂತೋಷವೇ

      ನಾವು ಮಾಡುತ್ತಿರುವದು ಸಾಹಿತ್ಯ ಪತ್ರಿಕೋದ್ಯಮ
      ಹಾಗಾಗಿ ಪತ್ರಿಕೋದ್ಯಮ ಗೊತ್ತಿರುವವರಿಗೆ ತುಂಬಾ ಸಮಸ್ಯೆ ನಮ್ಮೊಂದಿಗಿಲ್ಲ

      • ರೇಣುಕಾ ರಮಾನಂದ

        ನನ್ನಂತಹ ಹಲವು ಹಿರಿಕಿರಿಯ ಹೊಸ ಬರಹಗಾರರನ್ನು ಬರೆಸಿದ,ನನ್ನ ಪುಸ್ತಕಕ್ಕೂ ಕಾರಣವಾದ “ಅವಧಿ” ಗೆ ಮೊದಲ ಪ್ರಶಸ್ತಿ ಅರ್ಪಣೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading