I know it. Licence fee for houses is Rs.15 and Rs.75 for public places (hotels, shops, etc.). Most of the owners did not declared this. Later one time licence fee was added to the radio price (like cars and bikes). Later the system vanished.
Loading...
ಟಿ.ಕೆ.ಗಂಗಾಧರ ಪತ್ತಾರ
on 28 February, 2016 at 10:29 PM
ನಾನು 1971ರಿಂದ1977ರ ವರೆಗೆ ನಮ್ಮ ಸ್ವಗ್ರಾಮದಲ್ಲಿ ಬ್ರ್ಯಾಂಚ್ ಪೋಸ್ಟ್ ಮಾಸ್ತರ್ ಸೇವೆಯಲ್ಲಿದ್ದೆ. ಹೀಗಾಗಿ ರೇಡಿಯೋ ಲೈಸೆನ್ಸ್ ವಿಷಯ ನನ್ನ ಸ್ವಂತ ಅನುಭವ. ಸುತ್ತಮುತ್ತ ನಾಲ್ಕಾರು ಗ್ರಾಮಗಳಲ್ಲಿ ಯಾರ ಮನೆಯಲ್ಲಿ ರೇಡಿಯೋ ಇವೆಯೆಂಬುದೂ ನನಗೆ ಚೆನ್ನಾಗಿ ಗೊತ್ತಿತ್ತು. ನನಗೆ ರೇಡಿಯೋ ಅಂಗಡಿಯವರ ಪರಿಚಯ ಚೆನ್ನಾಗಿದ್ದುದರಿಂದ ಹೊಸದಾಗಿ ರೇಡಿಯೊ ಖರೀದಿಸುವವರ ವಿಷಯವೂ ನನಗೆ ತಕ್ಷಣ ಗೊತ್ತಾಗಿಬಿಡುತ್ತಿತ್ತು. ಸುತ್ತಮುತ್ತ ನಾಲ್ಕಾರು ಗ್ರಾಮದವರೆಲ್ಲರೂ ನನಗೆ ಸುಪರಿಚಿತರು, ಆತ್ಮೀಯರು, ಅಲ್ಲದೇ ನಾನೆಂದರೆ ಎಲ್ಲರಿಗೂ ಅಕ್ಕರೆ. ರೇಡಿಯೋ ಲೈಸೆನ್ಸ್ ಫೀ ಸಂದಾಯ ಮಾಡಲೇಬೇಕಾದ ಅನಿವಾರ್ಯತೆ, ತಪ್ಪಿಸಿದರೆ ಅದರಿಂದುಂಟಾಗುವ ಪರಿಣಾಮ, ದಂಡ, ಪೊಲೀಸ್ ರಿಪೋರ್ಟು, ರೇಡಿಯೋ ಮುಟ್ಟುಗೋಲು ಇವೆಲ್ಲದರ ಬಗ್ಗೆ ಎಲ್ಲರಿಗೂ ಹೇಳುತ್ತಿದ್ದುದರಿಂದ ಎಲ್ಲರಿಗೂ ಈ ಬಗ್ಗೆ ತಿಳುವಳಿಕೆಯುಂಟಾಗಿತ್ತು. ಅಲ್ಲದೇ ಬಹುತೇಕ ಮಂದಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. “ನಮಗ್ಯಾಕ ಅದರ ಚಿಂತಿ. ನಮ್ಮ ಗಂಗಾಧರ ಅದಾನಲ್ಲ ಬಿಡ್ರಿ. ಯಾವಾಗ ತುಂಬಬೇಕು ಅನ್ನೋದನ್ನ ಅವಾ ತಿಳಸ್ತಾನ.”ಅಂತಾ ಕೆಲವರು ಈ ಬಗ್ಗೆ ಕಾಳಜೀನೇ ಮಾಡುತ್ತಿದ್ದಿಲ್ಲ. ನಾನು ಅವರಿಗೆಲ್ಲಾ ರೇಡಿಯೊ ಲೈಸೆನ್ಸ್ ಫೀ ಸಂದಾಯ ಮಾಡೋ ಕೊನೇ ದಿನಾಂಕದ ಹದಿನೈದು ದಿನದ ಮುಂಚೇನೇ ತಿಳಿಸುತ್ತಿದ್ದೆ. ತಾವಾಗಿಯೇ ಸ್ವಪ್ರೇರಿತರಾಗಿ ಬಂದು ಮುಂಚಿತವಾಗಿಯೇ ರೇಡಿಯೋ ಲೈಸೆನ್ಸ್ ಫೀ ತುಂಬುವವರೂ ಕೆಲವರಿದ್ದರು. ನನ್ನ ಮಾತಿನಿಂದ ಇಂಥದೊಂದು ಜಾಗೃತಿ ಆಯಿತೇ? ಎಂದು ನೆನೆದಾಗ ಈಗಲೂ ವಿಸ್ಮಯ-ಸಂತೋಷವಾಗುತ್ತದೆ. ಆಗ ರೇಡಿಯೋ ಲೈಸೆನ್ಸ್ ಇನ್ ಸ್ಪೆಕ್ಟರ್ ಆಗಿದ್ದವರು ಅನ್ವರ್ ಸಾಬ್ ಅನ್ನೋವ್ರು. ಮನೆಯಲ್ಲಿ ಅತೀ ಹಳೆಯ ಕಾಲದಿಂದಲೂ ರೇಡಿಯೋ ಇದ್ದರೂ ಅಂಚೆ ಇಲಾಖೆಗೆ ತಿಳಿಸದಿದ್ದ ಕೆಲವರ ಅಡ್ರೆಸ್ ತೊಗೊಂಡು ಬರುತ್ತಿದ್ರು. ಆಗ ನಾವಿಬ್ಬರೂ ಅಂಥವರ ಮನೆಗೆ ಹೋಗಿ ತಪಾಸಣೆ ಮಾಡುತ್ತಿದ್ದುದುಂಟು. ಆದರೆ ಜೊತೆಯಲ್ಲಿ ನಾನು ಇರುತ್ತಿದ್ದುದರಿಂದ ಯಾರೂ ಚಕಾರ ಎತ್ತುತ್ತಿರಲಿಲ್ಲ. ಫಳಾರ-ಚಹಾ ಕೊಟ್ಟು ಉಪಚರಿಸಿ ಫೀ ಪಾವತಿಸುತ್ತಿದ್ದರು.
ಇದೇ ಅನ್ವರ್ ಸಾಹೇಬರು ಇಪ್ಪತ್ತು ವರ್ಷಗಳ ಮೇಲೆ ಒಮ್ಮೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಬಳ್ಳಾರಿ ಮೆಡಿಕಲ್ ಕಾಲೇಜಿಗೆ ಬಂದು ಮಾತಾಡಿಸಿದಾಗ ಹಿಂದಿನ ನೆನಪು ಮರುಕಳಿಸಿತು. ಅವರ ನೇಟಿವ್ ಬಳ್ಳಾರಿಯೆಂದು ತಿಳಿಯಿತು. ಈಗ ಅವರು ನನ್ನ ಆತ್ಮೀಯ ಮಿತ್ರರಾಗಿದ್ದಾರೆ. ಬ್ರ್ಯಾಂಚ್ ಪೋಸ್ಟ್ ಮಾಸ್ತರ್ ಆಗಿಯೂ ಸಾಕಷ್ಟು ವಿಭಿನ್ನ-ವಿಶಿಷ್ಟ ಅನುಭವ ಸಾಕಷ್ಟಿವೆ. ಅವಕಾಶ ಸಿಕ್ಕಾಗ ಒಂದೊಂದೇ ಬರೆಯುತ್ತೇನೆ.
Loading...
ಟಿ.ಕೆ.ಗಂಗಾಧರ ಪತ್ತಾರ
on 28 February, 2016 at 10:38 PM
ಹೌದು, ಮರೆತಿದ್ದೆ. ಸೂರ್ಯ ಹರದಳ್ಳಿಯವರ ಮಾತು ನಿಜ. ಮನೆಯ ರೇಡಿಯೋಗಳಿಗೆ “ಡೊಮೆಸ್ಟಿಕ್”ಎಂದು ರೂ.15/-ಶುಲ್ಕ ಹಾಗೂ ಅಂಗಡಿ-ಹೋಟೆಲ್ಲುಗಳ ರೇಡಿಯೋಗಳನ್ನು “ಕಮರ್ಶಿಯಲ್ಲ” ಎಂದು ಗುರುತಿಸಿ ಅವಕ್ಕೆ ರೂ.75/-ಶುಲ್ಕ ನಿಗದಿಪಡಿಸಲಾಗಿತ್ತು.
Volleyà sangraha