ರಾ ಬಂದೋಳ್
ಮಾರ್ಕ್ವೆಜ್ ನ ಮೊಕಾಂಡೋದಲ್ಲಿ
ಹೀಗೊಂದು ಮಳೆ ಬಿತ್ತಂತೆ
ನಮ್ಮೂರುಗಳಲ್ಲಿ ಹೀಗೊಂದು ಮಳೆಯಾಗಿ
ಒದ್ದೆಯಾದ ಬೆಂಕಿ ಪೊಟ್ಟಣದ ಕಡ್ಡಿಗಳು
ಠುಸ್ ಎನ್ನುವಂತೆ
ಪಿರಂಗಿಗಳು ಠುಸ್ ಎನ್ನಲಿ
ನೆತ್ತರು ತೊಳೆದು ಹಸಿರು ಹುಟ್ಟಲಿ
ಬಿಳಿಯ ಬಟ್ಟೆಗೆ ಸೂಟು ಬೂಟುಗಳಿಗೆ ಕೆಸರು ಚಿಮ್ಮಲಿ
ಕಂತೆ ಕಂತೆ ನೋಟುಗಳು ಅಂಟಿಗೊಂಡು ರದ್ದಿಯಾಗಲಿ
ಬಚ್ಚಲ ರೊಜ್ಜೆ ಒಯ್ಯುವ ನದಿಗಳಿಗೆ ಜೀವ ಬರಲಿ
ಮೇಕಪ್ಪು ಮುಖವಾಡಗಳು ತೊಳೆದು ಹೋಗಲಿ
ಆಗಿನ್ನು ಗರ್ಭದಿಂದ ಬಂದ ಮಗುವಿನಂತೆ
ಕಾಣಲಿ ಕಣ್ಣಗಳು ಹೊಳೆಯಲಿ
0 ಪ್ರತಿಕ್ರಿಯೆಗಳು