ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಮ ಗೋಪಾಲ ವರ್ಮನ ಕನ್ನಡಕ್ಕೆ ಕರೆತರುತ್ತಿದ್ದಾರೆ ಸೃಜನ್!

ಹುಸೇನ್ ಪಾಷ

ಸ್ನೇಹಿತರೆ,
ಈ ಬಾರಿ ನನಗೆ ಸಂಕ್ರಾಂತಿ ಸ್ಪೇಷಲ್ ಅಂದ್ರೆ ನಾನು ಇಷ್ಟ ಪಡುವ ಬರಹಗಾರರಲ್ಲಿ ಒಬ್ಬರಾಗಿರುವ ಕಲಾದರು ಆಗಿರುವ ಸೃಜನ್ ಸಂಕ್ರಾಂತಿ ದಿನ ಕೊಪ್ಪಳದಲ್ಲಿ ನನಗೆ ಸಿಕ್ಕಿದ್ದು.

ಫೋನ್ ಮಾಡಿ ಕರೆಸಿ ಮಾತಾಡಿದ ಅವರ ಪ್ರೀತಿಗೆ ಥ್ಯಾಂಕ್ಸ್. ಆ ಎರಡು ತಾಸಿನಲ್ಲಿ ನಾವು ಮಾತಾಡಿದ ವಿಷಯಗಳು ನೂರೆಂಟು. ಬಾಲಿವುಡ್ ನಿರ್ದೇಶಕ ರಾಮಗೋಪಾಲ ವರ್ಮ ತಮ್ಮ ಮನೋವೃತ್ತಾಂತ ತೆಲುಗಿನಲ್ಲಿ ಬರೆದುಕೊಂಡಿದ್ದರು. ಅದನ್ನು ಕನ್ನಡಕ್ಕೆ ತಂದವರು ಸೃಜನ್ ಅವರು. ಈ ಪುಸ್ತಕ ಮುಂದಿನ ತಿಂಗಳು ವಿಜಾಪುರದಲ್ಲಿ ಜರುಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲಭ್ಯವಿರುತ್ತದೆ.

ಹಾಗೆ ಜಯಂತ್ ಕಾಯ್ಕಿಣಿ, ವಸುಧೇಂದ್ರರ ಕಥೆಗಳು, ತೆಲುಗು ಕಥೆಗಳು, ಆರೀಫ್ ರಾಜಾಗೆ ಪ್ರಶಸ್ತಿ, ಜಿ ಎನ್ ಮೋಹನ್ ರವರ…….ಕ್ಯೂಬಾ ಪುಸ್ತಕ ಅನೇಕ ವಿಷಯ ಮಾತಾಡಿದರು. ಅಂದ ಹಾಗೆ ರಾಮ ಗೋಪಾಲ್ ವರ್ಮಾರ ಪುಸ್ತಕದ ಕನ್ನಡ ಅನುವಾದಕ್ಕೆ ಕಥೆಗಾರ ಜಯಂತ್ ಕಾಯ್ಕಿಣಿ ಮುನ್ನುಡಿ ಬರೆದಿದ್ದಾರೆ. ಬಿಡುಗಡೆಯಾದ ತಕ್ಷಣ ನಾವೆಲ್ಲ ಓದೋಣ. ಏನಂತೀರಿ?

‍ಲೇಖಕರು G

19 January, 2013

3 Comments

  1. mudiraja

    kandita. a pustakada script odiddene. tumba kutuhaladinda nanantu aa pustakakkagi kaayta idini.

  2. Ramesh Aroli

    Really good translation. Ennu ollolle pustakagalu Srujan sir tarali endu haraisuve.

  3. Vithal Dalawai

    Bhala olledu. Srujan sir baravanige nirantara sagali

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading