ರಾಮಯ್ಯ ಗುಡುಗು: ‘ಜುಗಾರಿ ಕ್ರಾಸ್’ನಲ್ಲಿ ಇನ್ನಷ್ಟು ಚರ್ಚೆ

‘ದಿ ಸಂಡೇ ಇಂಡಿಯನ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ‘ಆದಿಮ’ದ ಕೆ ರಾಮಯ್ಯ ಅವರು ಇಂದಿನ ದಲಿತ ನಾಯಕತ್ವವನ್ನು ವಿಮರ್ಶಿಸಿದ್ದರು.

‘ಇಂದಿನ ದಲಿತ ನಾಯಕತ್ವ ಡಕಾಯಿತರ ತಂಡ’ ಎಂದು ಕರೆದಿದ್ದರು. ಹರ್ಷಕುಮಾರ ಕುಗ್ವೆ ನಡೆಸಿದ ಸಂದರ್ಶನ ಇಲ್ಲಿದೆ.

ರಾಮಯ್ಯ ಅವರ ನೋಟವನ್ನು ಈಗ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗಿಟ್ಟಿದ್ದೇವೆ. ನೇರ ನೋಟಕ್ಕೆ ಹೆಸರಾದ ನಾ ದಿವಾಕರ್ ಅವರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.

ಈ ಚರ್ಚೆ ಮುಂದುವರಿದಿದ್ದು ಸಿ ಎಸ್ ಎಲ್ ಸಿ ಯ ಶಂಕರಪ್ಪ ಹಾಗೂ ಜಿ ಎನ್ ನಾಗರಾಜ್  ನಡುವಣ ಚರ್ಚೆಯನ್ನು ಇಲ್ಲಿ ಮಂಡಿಸುತ್ತಿದ್ದೇವೆ.

ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ-

ಈ ಸ್ಫೋಟಕ ವಿಚಾರಗಳು ಗಂಭೀರ ಚರ್ಚೆಗೊಳಪಡಬೇಕಾಗಿದೆ. ಆದರೆ ರಾಮಯ್ಯನವರ ಮಾತುಗಳು ಸಿಟ್ಟಿನ ಕವಚ ಹೊದ್ದ ತೀವ್ರ ನಿರಾಶೆಯ ಮಾತುಗಳಾಗಿವೆ . ಎಪ್ಪತ್ತರ ದಶಕದ ಉತ್ತುಂಗ ಶಿಖರದಲ್ಲಿ ನಿಂತು ನೋಡಿದರೆ ಇಂದು ಎಲ್ಲವೂ ಕುಬ್ಜವಾಗಿ ಕಾಣುತ್ತಿದೆ . ಆದರೆ ಸಮಾಜ ಅರವತ್ತರ ದಶಕದ ತಗ್ಗಿನಿಂದ ಏರಲಾರಂಭಿಸಿದ್ದು ಹೇಗೆ?

ರಾಮಯ್ಯನಂಥವರು , ಸಿದ್ದಲಿಂಗಯ್ಯ ದೇವನೂರುರಂಥವರು ರೂಪುಗೊಂಡಿದ್ದು ಸಮಾಜದ ಯಾವ ಕುಲುಮೆಯಲ್ಲಿ ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವುದರಲ್ಲಿಯೇ ಅರವತ್ತು – ಎಪ್ಪತ್ತು – ತೊಂಬತ್ತರ ದಶಕಗಳ ಸಮಾಜದ ಚಲನೆಯನ್ನು ಒಟ್ಟಿಗೆ ಗುರುತಿಸುವುದರಲ್ಲಿಯೇ ಈ ಸಿಟ್ಟು ನಿರಾಶೆಗಳಿಗೆ ಆಶಾದಾಯಕ ಉತ್ತರ , ಮುಂದಿನ ದಾರಿ ಇದೆ .

ಸಮಾಜದ ಚಲನೆಯಲ್ಲಿನ ಒಂದು ಘಟ್ಟವಾಗಿ, ಆ ಘಟ್ಟದ [ಉದಾ : ೭೦ರ ೮೦ರ ಆರಂಭದ ಚಳುವಳಿಗಳ ಘಟ್ಟ ] ಉಗಮಕ್ಕೆ  ಕಾರಣವಾದ  ಸಾಮಾಜಿಕ  ಪರಿಸ್ಥಿತಿ ಏನು ಎಂಬ ಬಗ್ಗೆ ವಿಶ್ಲೇಷಣೆ ನಡೆಸಬೇಕು . ಹಾಗೆಯೇ ಅದು ಇಳಿಮುಖವಾಗಲು ಕಾರಣವಾದ ಪರಿಸ್ಥಿತಿಯ ಬಗ್ಗೆ ಕೂಡ . ಆಗ ವ್ಯಕ್ತಿಗಳು ಅವರ ದೋಷಗಳೇ ಈ  ಅವನತಿಗೆ ಕಾರಣ ಎಂಬ ನಿರಾಸೆ ಸಿಟ್ಟಿಗೆ ಬದಲಾಗಿ ಸಾಮಾಜಿಕ  ಚಳುವಳಿಗಳಿಗೆ  ಅಗತ್ಯವಾದ ಪರಿಸ್ಥಿತಿಯನ್ನು ರೂಪಿಸುವುದರಲ್ಲಿ  ನಮ್ಮೆಲ್ಲ  ಶಕ್ತಿಯನ್ನು ತೊಡಗಿಸಬಹುದು.

ಸಮಾಜದ ಚಲನೆಯ ಭಾಗವಾಗಿ ಚಳುವಳಿಗಳ ಏರು ಇಳಿವು ಸಹಜ . ಯಾವಾಗಲು ಏರುಮುಖವಾಗಿಯೇ ಅಥವಾ ಇಳಿಮುಖವಾಗಿಯೇ ಇರಲು ಸಾಮಾಜಿಕ ಪರಿಸ್ಥಿತಿ ಬಿಡುವುದಿಲ್ಲ.
ಹೇಗೆ ಸ್ವಾತಂತ್ರ್ಯ ಚಳುವಳಿ ನಮ್ಮ ಜನರ ಪ್ರಜ್ಞೆಯನ್ನು ಎತ್ತರಕ್ಕೆರಿಸಿದೆಯೋ ಹಾಗೆಯೆ ೭೦ರ ಚಳುವಳಿಗಳು ಅಂದು ಜನ ಸಮೂಹವನ್ನು ಎಚ್ಚರಗೊಳಿಸಿದೆ .ಇದರಲ್ಲಿ  ಯಾವ ಅನುಮಾನವೂ  ಇಲ್ಲ .ಈ  ಎಚ್ಚರ  ಮುಂದಿನ  ಚಳುವಳಿಗಳು ಮತ್ತಷ್ಟು  ಎತ್ಹ್ರಕ್ಕೆರಲು ಹಾಕಿದ ಅಸ್ಥಿವಾರ .ಅದ್ದರಿಂದ  ನಮ್ಮೆಲ್ಲರ  ಪ್ರಯತ್ನ  ಈ  ಅಸ್ಥಿವಾರವನ್ನು  ಅದಷ್ಟೂ  ವಿಸ್ತರಿಸುವುದು  ಹಾಗೂ ಗಟ್ಟಿಗೊಳಿಸುವುದರತ್ತ ತುಡಿಯಬೇಕು.

ಸಿಟ್ಟು , ದ್ವೇಷ  ಬಂಡಾಯದ  ಚಿಂತನೆಯ  ಮುಖ್ಯ  ಭಾಗ .ಘೋರ  ಅನ್ಯಾಯ  ನಡೆಯುತ್ತಿರುವಾಗ  ಸಿಟ್ಟು  ಬರದಿದ್ದರೆ  ಅದು  ಅಮಾನವೀಯ  ವರ್ತನೆ . ಅನ್ಯಾಯಕ್ಕೊಳಗಾದವರಲ್ಲಿ  ಮಾತ್ರವಲ್ಲ  ಅದರ ಬಗ್ಗೆ ಗೊತ್ತಿದ್ದವರಿಗೆಲ್ಲ  ಸಿಟ್ಟು  ಮೂಡುವುದಿಲ್ಲವೇ ?

ಪ್ರತಿಭಟನೆ, ಚಳುವಳಿ ಎಂಬುದೇ ಸಿಟ್ಟಿನ  ಅಭಿವ್ಯಕ್ತಿ . ಸಾಹಿತ್ಯದಲ್ಲಿ  ಸಿಟ್ಟಿನ  ಅಭಿವ್ಯಕ್ತಿ  ಅನಾದಿಕಾಲದಿಂದಲೂ  ಇದೆ . ಅದು  ೭೦ರ  ಸಾಹಿತ್ಯದ  ಹೊಸ  ಅನ್ವೇಷಣೆಯೇನೂ  ಅಲ್ಲ .
ರಾಮಯ್ಯನವರ  ಸಿಟ್ಟೂ  ಸಕಾರಣವಾದದ್ದೇ . ಚಳುವಳಿಯ  ಬಗ್ಗೆ  ಕೂಡ  ಅವರ  ಕೋಪಕ್ಕೆ  ಕಾರಣವಿದೆ .ಇನ್ನು  ಮಠಾಧಿಪತಿಗಳ  ಬಗ್ಗೆ  ಕೋಪಕ್ಕೆ  ಕಾರಣವಿಲ್ಲವೇ ?

ಇನ್ನು  ಮೇಲ್ಜಾತಿಯ  ಎಲ್ಲರನ್ನು  ಒಂದೇ  ತಕ್ಕಡಿಗೆ  ಹಾಕಿ  ಎಲ್ಲರ  ಬಗ್ಗೆಯೂ  ಸಿಟ್ಟಾಗುವುದರ  ಬಗ್ಗೆ :
ಶಂಕರಪ್ಪನವರು  ಬರೆದಂತೆ  ಅವರೆಲ್ಲರೂ  ಶೋಷಕರಲ್ಲ  ಹಾಗೆಯೆ  ಕೇವಲ  ಒಬ್ಬ  ವ್ಯಕ್ತಿ , ಒಂದು  ಕುಟುಂಬ  ಮಾತ್ರವೇ  ಶೋಷಕರು  ಎಂಬುದೂ  ಸರಿಯಲ್ಲ .
ಹಲವು  ಅಸ್ಥಿವಂತ ಕುಟುಂಬಗಳು  ಶೋಷಣೆಯ  ನೇತೃತ್ವ  ವಹಿಸುತ್ತವೆ .

ಆದರೆ  ಅದೇ  ಸಮಯದಲ್ಲಿ  ನಮ್ಮ  ಸಮಾಜದ  ಜಾತಿಬಧ್ಧತೆ  ಉಳಿದವರನ್ನು  ಮೂಕ  ಬೆಂಬಲಿಗರನ್ನಾಗಿ  ಅಥವಾ  ಪ್ರೆಕ್ಷಕರನ್ನಾಗಿಸುತ್ತದೆ .
ಇನ್ನು  ಅಸ್ಪ್ರುಶ್ಯತೆಯ  ಅಮಾನವೀಯ  ಆಚರಣೆಯಲ್ಲಿ  ಮೇಲ್ಜಾತಿಯ  ಎಲ್ಲರ  ಅಪ್ರಜ್ಞಾವಂತ ಪಾಳೆಗಾರಿಕೆಯನ್ನು ಕಂಡ  ದಲಿತರಿಗೆ  ಅದರಲ್ಲಿಯೂ  ದೌರ್ಜನ್ಯಗಳ  ಸಂಧರ್ಭದಲ್ಲಿ , ಮೇಲ್ಜಾತಿಯವರೆಲ್ಲ ಒಂದೇ ಎನಿಸಿದರೆ  ಏನಾಶ್ಚರ್ಯ ?
ಅದ್ದರಿಂದ  ಮೇಲ್ಜಾತಿಗಳ ಪ್ರಜ್ಞಾವಂತರು ತಮ್ಮ  ಜಾತಿಯ  ಸಾಮಾನ್ಯ  ಜನರಿಗೆ  ತಮ್ಮದೇ  ಜಾತಿಯ  ಶೋಷಕರ  ವಿರುಧ್ಧ  ನಿಲ್ಲಲು , ಅಸ್ಪ್ರುಶ್ಯತೆಯನ್ನು  ಆಚರಿಸದಿರಲು   ಭೋದಿಸಿ  ಸಫಲರಾದಾಗಲೇ , ದಲಿತರಿಗೆ  ಎಲ್ಲರ  ಮೇಲೂ  ಸಿಟ್ಟಾಗದಿರುವಂತೆ  ಬೋಧಿಸಲು ಸಾಧ್ಯವಾಗುವುದು .

-ಜಿ ಎನ್ ನಾಗರಾಜ


++

ಜಿ. ಎನ್. ನಾಗರಾಜ್ ರವರಿಗೆ,

ಸಿಟ್ಟು, ದ್ವೇಷ ಬಂಡಾಯ ಚಳುವಳಿಯ ಮುಖ್ಯ ಭಾಗ ಎನ್ನುವ ಮೂಲಕ “ರಾಮಯ್ಯರವರು ತಮ್ಮ ಸಂದರ್ಶನದ ವರದಿಯಲ್ಲಿ (೭೦ ಮತ್ತು ೮೦ರ ದಶಕಗಳಲ್ಲಿ ರಚನೆಗೊಂಡ ಪುಸ್ತಕಗಳಲ್ಲಿ) ಈ ಕ್ಷೇತ್ರಗಳ ಬಗ್ಗೆ ಹಗೆತನ/ದ್ವೇಷದ ಮಾತುಗಳನ್ನು ಆಡಿದ್ದಾರೆ” ಎಂಬ ನನ್ನ ವಾದವನ್ನು ನೀವು ಒಪ್ಪಿಕೊಂಡಿದ್ದೀರೆಂದು ನಾನು ಭಾವಿಸುತ್ತೇನೆ.

ದಲಿತರಲ್ಲಿರುವ ಈ ಸಿಟ್ಟು, ದ್ವೇಷಕ್ಕೆ ಮೇಲ್ಜಾತಿಗಳ್ಳಲ್ಲಿರುವ ಅಸ್ಪೃಶ್ಯತಾಚರಣೆ ಕಾರಣವೆಂದು ನೀವು ಹೇಳುತಿದ್ದೀರಿ. ಇದರ ಬಗ್ಗೆ ಸ್ವಲ್ಪ ಚರ್ಚಿಸುವ:

ಒಬ್ಬರಿಗೊಬ್ಬರು ಮುಟ್ಟದೆ ಇರುವುದನ್ನು ಅಸ್ಪೃಶ್ಯತಾಚರಣೆ ಎಂದರೆ ಪ್ರಪಂಚದಲ್ಲಿ ಎದೆಷ್ಟೋ ಜನ ಅದಿನೆಷ್ಟೋ ಜನರನ್ನ ಮುಟ್ಟುವುದಿಲ್ಲ ಅದೆನ್ನೆಲ್ಲ ಅಸ್ಪೃಶ್ಯತಾಚರಣೆ ಎಂದು ಏಕೆ ಕರೆಯುವುದಿಲ್ಲ? ಎಂಬ ಪ್ರಶ್ನೆಯು ಎದುರಾಗುತ್ತದೆ. ಆದರೆ ಇದನ್ನು ಅಸ್ಪೃಶ್ಯತಾಚರಣೆ ಎಂದು ಕರೆಯುವುದಿಲ್ಲ. ಏಕೆಂದರೆ ಈ ಅಸ್ಪೃಶ್ಯತಾಚರಣೆಯ ಬಗ್ಗೆ ಚರ್ಚಿಸುವವರು ಕೇವಲ ಮುಟ್ಟದಿರುವ ಕ್ರಿಯೆಯನ್ನು ಮಾತ್ರ ಇಟ್ಟುಕೊಂಡು ಚರ್ಚಿಸುವುದಿಲ್ಲ. ಬದಲಿಗೆ ಈ ಅಸ್ಪೃಶ್ಯತಾಚರಣೆ ಕೇವಲ ಭಾರತಕ್ಕೆ ಮಾತ್ರ ಸೀಮಿತವಾದದ್ದು ಎಂದು ಹೇಳುವುದಕ್ಕೆ ಕೆಲವು ನಿರ್ದಿಷ್ಟ ಆಚರಣೆಗಳನ್ನು ಸೂಚಿಸುತ್ತಾರೆ. ಅಂತಹ ಆಚರಣೆಗಳೆಂದರೆ: ದೇವಸ್ಥಾನಗಳ ಒಳಗೆ ಬಿಟ್ಟುಕೊಳ್ಳದಿರುವುದು, ಪಾತ್ರೆಗಳನ್ನು ಮುಟ್ಟಿಸಿಕೊಳ್ಳದಿರುವುದು, ಮನೆಗಳ ಒಳಗೆ ಬಿಟ್ಟುಕೊಳ್ಳದಿರುವುದು, ಮೇಲಿನಿಂದ ಕುಡಿಯುವ ನೀರನ್ನು ಬೊಗಸೆಗೆ ಹಾಕುವುದು ಇತ್ಯಾದಿ. ಈ ಆಚರಣೆಗಳನ್ನು ಅಸ್ಪೃಶ್ಯತಾಚರಣೆಯ ಎಂದು ಕರೆಯುತ್ತಾರೆ. ಇದನ್ನು ನೀವು ಪ್ರಜ್ಜವಂತರನ್ನೂ ಒಳಗೊಂಡಂತೆ ಎಲ್ಲಾ ಮೇಲ್ಜಾತಿಯವರು ಆಚರಿಸುತ್ತಾರೆಂದು ಹೇಳುತ್ತೀರಿ. ಇಲ್ಲಿ ನನಗೆ, ಮೇಲೆ ಸೂಚಿಸಿದ ಆಚರಣೆಗಳನ್ನು ಕೇವಲ ಮೇಲ್ಜಾತಿಗಳು ಮಾತ್ರ ಆಚರಿಸುತ್ತಾರೆಯೇ? ಎಂಬ ಪ್ರಶ್ನೆಯು ಎದುರಾಗುತ್ತದೆ. ಈ ಆಚರಗಳನ್ನು “ಕೆಳ ಜಾತಿಯವರು” ಆಚರಿಸುತ್ತಾರೆ ಎಂಬುದಕ್ಕೆ ಮುಂದಿನ ಘಟನೆ ಪೂರಕವಾಗಿದೆ:

ಯಾವ ಹೊಡೆತವನ್ನೂ ತಿನ್ನದೆ ಹೊಲಗೇರಿಯ ಮುಖಾಂತರ ಹಾದುಹೋಗಲು ಸಾಧ್ಯವಾಗುವುದಾದರೆ ಅದರಿಂದ ತಮಗೆ ಭಾರಿ ಅದೃಷ್ಟದ ಪ್ರಾಪ್ತಿಯಾಗುತ್ತದೆಂದು ಬ್ರಾಹ್ಮಣರು ಭಾವಿಸುತ್ತಾರೆ. ಆದರೆ ಇದಕ್ಕೆ ಹೊಲೆಯರ ತೀವ್ರ ಆಕ್ಷೇಪವಿದೆ. ಬ್ರಾಹ್ಮಣನೇನಾದರೂ ಅವರ ವಸತಿಸ್ಥಾನಕ್ಕೆ ಪ್ರವೇಶಿಲು ಪ್ರಯತ್ನಿಸಿದರೆ ಹೊಲೆಯವರೆಲ್ಲಾ ಇಡಿಯಾಗಿ ಹೊರಬಂದು ಅವನನ್ನು ಚಚ್ಚಿಹಾಕುತ್ತಾರೆ. ಹಿಂದಿನ ಕಾಲದಲ್ಲಿ ಅಂತಹವರನ್ನು ಹೊಡೆದು ಸಾಯಿಸುತ್ತಿದ್ದರೆಂದೂ ಹೇಳಲಾಗಿದೆ. ಬೇರೆ ಜಾತಿಗಳವರು ಹೊಲೆಯರ ಗುಡಿಸಲ ಬಾಗಿಲವರೆಗೂ ಬರಬಹುದು; ಆದರೆ ಗುಡಿಸಲೊಳಕ್ಕೆ ಪ್ರವೇಶಿಸುವಂತಿಲ್ಲ. ಏಕೆಂದರೆ ಅದರಿಂದ ಹೊಲೆಯರವನಿಗೆ ಹೀನ ಅದೃಷ್ಟ ಪ್ರಾಪ್ತಿಯಾಗುತ್ತದೆಂತೆ. ಹಾಗೇನಾದರೂ ಅಕಸ್ಮಾತ್ತಾಗಿ ಯಾರಾದರೂ ಒಳಗೆ ಪ್ರವೇಶಿಸಿದರೆ ಗುಡಿಸಲ ಯಜಮಾನನು ಆ ಆಗಂತುಕನ ಬಟ್ಟೆ ಹರಿದು ಅದರ ಒಂದು ಮೂಲೆಯಲ್ಲಿ ಸ್ವಲ್ಪ ಉಪ್ಪನ್ನು ಕಟ್ಟಿ ಅವನನ್ನು ಹೊರದೂಡಲು ಮರೆಯುವುದಿಲ್ಲ. [ಬಿ. ಆರ್. ಅಂಬೇಡ್ಕರ್. (೧೯೪೮) ೧೯೯೮. ಅಸ್ಪೃಶ್ಯರು: ಅವರು ಯಾರು ಮತ್ತು ಅವರು ಏಕೆ ಅಸ್ಪೃಶ್ಯರಾದರು? (ಕನ್ನಡ ಅನುವಾದ). ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ. ಪುಟ ೪೩೭).

(“ಕೆಳ ಜಾತಿ”ಗಳೆಂದು ತಿಳಿದ ಜನರು ಸಹ ಇಂತಹ ಆಚರಣೆಗಳನ್ನು ಮಾಡುತ್ತಾರೆಂದು ಹೇಳುವ ಹಲವು ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಮೈಕಲ್ ಮಾಫೆಟ್ ರವರ ಬರವಣಿಯಲ್ಲಿ ನೋಡಬಹುದು)

ಈ ಮೇಲಿನ ಘಟನೆಯನ್ನು ಗಮನಿಸಿದ ಅಂಬೇಡ್ಕರ್ ರವರು “ವಿಚಿತ್ರ” ಎಂದು ಹೇಳಿ ಕೈ ತೊಳೆದುಕೊಳ್ಳುತ್ತಾರೆ. ಇದರಿಂದ ಈ ಘಟನೆಯ ಬಗ್ಗೆ ಅಂಬೇಡ್ಕರ್ ರವರು ಏಕೆ ಈ ನಿಲುವನ್ನು ತೆಗೆದುಕೊಳ್ಳುತ್ತಾರೆ? ಎಂಬ ಪ್ರಶ್ನೆಯು ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗೆ ಮುಂದಿನ ಒಂದು ಉತ್ತರವನ್ನು ಊಹಿಸಬಹುದು: “ಮೇಲ್ಜಾತಿಗಳ ಜನರು” “ಕೆಳಜಾತಿಗಳ” ಜನರನ್ನು ಶೋಷಿಸುತ್ತಾರೆ ಎಂಬ ಆಗಾಗಲೆ ತೆಗೆದುಕೊಂಡ ಏಕಮುಖದ ನಿರ್ಧಾರ. ಹೀಗೆ ಏಕಮುಖವಾಗಿ ಒಪ್ಪಿತವಾದ ನಂಬಿಕೆಯು ಸುಳ್ಳದರೆ, ಈ ಮೇಲಿನ ಘಟನೆಗಳನ್ನು ಇಟ್ಟುಕೊಂಡು “ಮೇಲ್ಜಾತಿಗಳ” ಜನರು ಸಹ ತಮ್ಮನ್ನು “ಕೆಳ ಜಾತಿಗಳ” ಜನರು ಶೋಷಿಸುತ್ತಾರೆಂದು ಹೇಳಬಹುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಸ್ಪೃಶ್ಯಾಚಾರಣೆಗೆ ಪೂರಕವಾಗಿ ಬಳಸಿದ ಇದೇ ಘಟನೆಗಳನ್ನು ಇಟ್ಟುಕೊಂಡು ಎಲ್ಲಾ ಜಾತಿಗಳ ಜನರು ಪರಸ್ಪರ ದೂಷಿಸಿಕೊಳ್ಳಬಹುದು ಅಥವಾ ಭಾರತೀಯ ಸಮಾಜ ಬಹಳ ಸಂಕೀರ್ಣ, ಅದನ್ನು ಅರ್ಥಮಾಡಿಕೊಳ್ಳುದು ಕಷ್ಟವೆಂದು ವಾದಿಸಬಹುದು. ಒಂದು ಸಮಾಜವು ಸಂಕೀರ್ಣವಾಗಿರಲು ಸಾಧ್ಯವೆ? ಸಾಧ್ಯವಿಲ್ಲ. ಏಕೆಂದರೆ ಒಬ್ಬ ವ್ಯಕ್ತಿಯು ಒಂದು ಸಮಾಜವನ್ನು ಗ್ರಹಿಸುವಲ್ಲಿ ಸಂಕೀರ್ಣತೆ ಇರಬಹುದೆ ಹೊರತು ಸಮಾಜವೇ ಸಂಕೀರ್ಣವಾಗಿರಲು ಸಾಧ್ಯವಿಲ್ಲ. ಉದಾಹರಣೆಗೆ ಕಂಪ್ಯೂಟರನ್ನು ಅರ್ಥಮಾಡಿಕೊಳ್ಳಲು ಕಂಪ್ಯೂಟರ್ ವಿಜ್ಜಾನ ತನಗೆ ಗೊತ್ತಿಲ್ಲವೆಂದು ಒಬ್ಬ ವ್ಯಕ್ತಿ ಹೇಳಬೇಕೆ ಹೊರತು ಕಂಪ್ಯೂಟರ್ ತುಂಬ ಸಂಕೀರ್ಣಾವಾಗಿದೆ ಎಂದು ಹೇಳಿದರೆ ಅರ್ಥವಿರುವುದಿಲ್ಲ.

ಹಾಗಾಗಿ ಅಸ್ಪೃಶ್ಯತಾಚರಣೆ ಎಂಬ ವಿದ್ಯಮಾನದ ಬಗ್ಗೆ ಇಷ್ಟೊಂದು ಸಮಸ್ಯೆಗಳು ಇರುವಾಗ ಮೇಲ್ಜಾತಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಅದನ್ನು ಅಮಾನವೀಯ ಆಚರಣೆ ಎನ್ನುವುದರಲ್ಲಿ ಯಾವ ಅರ್ಥವಿದೆ. ಒಂದು ವೇಳೆ ಈ ಆಚರಣೆಗಳನ್ನು ಮಾಡುವವರು ಅಸ್ಪೃಶ್ಯತಾಚರಣೆಯನ್ನು ಆಚರಿಸುತ್ತಾರೆಂದಾರೆ, ಭಾರತದಲ್ಲಿರುವ ಎಲ್ಲಾ ಜಾತಿಗಳ ಬಹುತೇಕ ಜನರನ್ನು ಮನುಷ್ಯರಲ್ಲವೆನ್ನಬೇಕಾಗುತ್ತದೆ. ಹೀಗೆ ವಾದಿಸುವುದರಿಂದ ಏನು ಪ್ರಯೋಜನ?

ಧನ್ಯವಾದಗಳೊಂದಿಗೆ

-ಶಂಕರಪ್ಪ

 

‍ಲೇಖಕರು G

July 15, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Hanamantha haligeri

    ಜಿ.ಎನ್ ನಾಗರಾಜ್ ಬರೆದಿರುವ ಒಂದು ಪುಟದ ಪ್ರತಿಕ್ರಿಯೆಯಲ್ಲಿ ಕೇವಲ ವಾಕ್ಯವನ್ನು (ರಾಮಯ್ಯನವರ ಮಾತುಗಳು ಸಿಟ್ಟಿನ ಕವಚ ಹೊದ್ದ ತೀವ್ರ ನಿರಾಶೆಯ ಮಾತುಗಳಾಗಿವೆ) ತೆಗೆದುಕೊಂಡು ನನ್ನ ವಾದವನ್ನು ಜಿ.ಎನ್ ನಾಗರಾಜ ಒಪ್ಪಿದ್ದಾರೆ ಎಂಬ ವಕೀಲಕಿಯ ಜಾಣತನವನ್ನು ತೋರಿಸಿದ್ದೀರಿ. ಅವ್ರು ಇನ್ನೊಂದು ಕಡೆ ಹೇಳಿರುವ ವಾಕ್ಯವನ್ನು ಅದೇ ಜಾಣತನದಿಂದ ಮರೆತುಬಿತ್ತಿದ್ದಿರಿ.(ಪ್ರತಿಭಟನೆ, ಚಳುವಳಿ ಎಂಬುದೇ ಸಿಟ್ಟಿನ ಅಭಿವ್ಯಕ್ತಿ . ಸಾಹಿತ್ಯದಲ್ಲಿ ಸಿಟ್ಟಿನ ಅಭಿವ್ಯಕ್ತಿ ಅನಾದಿಕಾಲದಿಂದಲೂ ಇದೆ. ಅದು ೭೦ರ ಸಾಹಿತ್ಯದ ಹೊಸ ಅನ್ವೇಷಣೆಯೇನೂ ಅಲ್ಲ ರಾಮಯ್ಯನವರ ಸಿಟ್ಟೂ ಸಕಾರಣವಾದದ್ದೇ. ಚಳುವಳಿಯ ಬಗ್ಗೆ ಕೂಡ ಅವರ ಕೋಪಕ್ಕೆ ಕಾರಣವಿದೆ.) ಇದು ನೀವು ವಾದದಲ್ಲಿ ಗೆಲ್ಲಲೆಬೇಕೆನ್ನುವ ನಿಮ್ಮ ಹಠ ಮತ್ತು ಸಂಕುಚಿತ ಬುದ್ದಿಯನ್ನು ಸೂಚಿಸುತ್ತದೆ.
    ದಲಿತರ ಕೇರಿಯಲ್ಲಿ ಬ್ರಾಹ್ಮಣರು ಹೋದ್ರೆ ದಲಿತರು ಕಲ್ಲಿನಿಂದ ಹೊಡೆದು ಅವ್ರು ಕೂಡ ಅಸ್ಪ್ರುಷ್ಯತೆಯನ್ನು ಆಚರಿಸುತ್ತಾರೆ ಎಂದು ಬ್ರಾಹ್ಮಣರನ್ನು ಸಮರ್ಥಿಸಿಕೊಂಡಿದ್ದಿರಿ. ಆದರೆ ಇದರ ಹಿಂದೆಯೂ ಬ್ರಾಹ್ಮಣರ ಹುನ್ನಾರವಿದೆ ಎಂದು ನಿಮಗೆ ಏಕೆ ಅರ್ಥವಾಗುವುದಿಲ್ಲ. ಇಗಿನಂತೆ ಆಗಲು ಕೂಡ ಕೆಲವು ಪ್ರಗತಿಪರ ಮನಸ್ಸಿನ ಬ್ರಾಹ್ಮಣರು ಇದ್ರ್ರು. ಎಲ್ಲಿ ಅವ್ರು ದಲಿತ ಕೇರಿಗೆ ಹೋಗಿ ತಮ್ಮ ಪ್ರಗತಿಪರತೆಯನ್ನು ಆಚರಣೆಗೆ ತರುತ್ತಾರೆಯೋ ಎಂಬ ಭಯದಿಂದ ಅಚಾರರೆ ಮಾಡಿದ ಮತ್ತೊಂದು ಕುಟಿಲೋಪಾಯವಿದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಕುತಂತ್ರ.

    ಪ್ರತಿಕ್ರಿಯೆ
    • Shankarappa

      ಹನುಮಂತ ಹಲಿ(ಳಿ)ಗೆರಿಯವರೆ,

      ದಯವಿಟ್ಟು ಜಿ. ಎನ್. ನಾಗರಾಜ್ ರವರಿಗೆ ನೀಡಿದ ಎಲ್ಲಾ ಪ್ರತಿಕ್ರಿಯೆಗಳನ್ನು ಸಾಧ್ಯವಾದರೆ ಮತ್ತೊಮ್ಮೆ
      ಗಮನಿಸಿ ನನ್ನ ವಕೀಲ ಜಾಣ್ಮೆಯ ಬಗ್ಗೆ ಮಾತಾಡಿ ಎಂದು ವಿನಯವಾಗಿ ಕೇಳಿಕೊಳ್ಳುತ್ತೇನೆ.

      ಧನ್ಯವಾದಗಳು…
      ಶಂಕರಪ್ಪ

      ಪ್ರತಿಕ್ರಿಯೆ
  2. gn nagaraj

    eega mooru nalku dinagalinda asprushyathege, dalitha chaluvalige sambandisida kelavu charchegalu nadeyutthive.
    adare ramaiahanavaru etthida prshnegalinda bahala doora hogide.sahithya,samskruthika ranga, dalitha chaluvaligala indina sthithiya bagge,adara karanagala bagge charche madabeku. adarinda navu samajika chaluvalikararu kelavadaru pathagalannu kalithu indu navu madabekada kelasagala bagge gamana harisuvudu namma adyathe.

    dalitha chaluvaliyagali,70ra dashakada ella chaluvaligalu kelavu vyakthigala srustiyalla.svathanthryanantharada eradu dashakagalalli namma desha sagida dari,adara kelavu positive halavu negative ayamagalu[thurthu paristhithi,arebare bhoo sudharane,hasiru kranthi,gareebi hatavo,meesalathi,20 amshagalu ivu kela pramukha amshagalu] deshadalliye thallanagalannu srustisithu.idu karnatakadalli boosa, jathi vinasha,bhoo akramana chaluvali ithyadi agi nanthara 70ra dashakada chaluvaligalu,samskruthika chaluvaliyagi hommiddu ellarigoo gotthiruva vishaya.ottinalli samajika paristhithiya ee ella chaluvaligala chimmuvudakke moola karana.

    hagenda mele chaluvali kunthithavagalu kooda samajika paristhi, hagoo adarinda untada jana samudayada chalane moola karana.adare ee samajika paristhithiya ondu pramukha bhaga ee chaluvaligalinda moodibanda sanghatanegala svaroopa.janarindale moodibanda chaluvaligalinda meledda nayakaru thave eechaluvaligala srustikartharu enba bhramegolagadaru.
    nayakaru chaluvaliya hidithadadalliyo,athava chaluvali idiyagi nayakara hidithdalliyo.ee prashne ella chaluvaligalannoo kadithu.nayakarugalannu chaluvali hidithadallittukollabahudada margavannu caluvaligala arambhadalliye roopisikollalilla.
    idaralli ramaiahanavaroo seridanthe nishteyinda chaluvaligagi dudida ellara paloo ide.indina namma samaja vyakthi pradhanatheyannu neeru gobbara haki belasutthade.idee nayakaralli vyakthi prathisteyagi,nanemba ahankaravagi svarthavagi beleyithu.sanghatanegalu chidravagalu karanavayithu. yara ankegoo sigadanthayithu.

    ide vyakthi pradhanyathe aneka roopadalli chaluvaligalannu kadide.adara bagge,hagoo chaluvalige adheenaragi ellaroo dudiyuvanthe madabahudada vidhanagala bagge matthomme charchisabahudu.

    innu illi bandiruva siddhantha,samshodhane, sahithya,chaluvaligala bagge hagoo asprushyathe dalitharu, jathi vyavashe ithyadigala bagge kooda charchisona. adare adyathe yavudakke?

    ಪ್ರತಿಕ್ರಿಯೆ
  3. Shankarappa

    ಜಿ. ಎನ್. ನಾಗರಾಜ್ ರವರೆ,

    “dalitha chaluvaligala indina sthithiya bagge,adara karanagala bagge charche madabeku. adarinda navu samajika chaluvalikararu kelavadaru pathagalannu kalithu indu navu madabekada kelasagala bagge gamana harisuvudu namma adyathe. ನಿಮ್ಮ ಆಧ್ಯತೆಗಳ ಈ ಪಟ್ಟಿಯಿಂದ ಒಂದು ಅಂಶವನ್ನು ನಾನು ತೆಗೆದುಕೊಂಡಿದ್ದೇನೆಂದು ಭಾವಿಸಿದ್ದೇನೆ. ಆ ಅಂಶವೆಂದರೆ ದಲಿತ ಚಳುವಳಿಯ ಹಿಂದಿರುವ ಸಾಹಿತ್ಯವನ್ನು ಕುರಿತಾದದ್ದು. ಅಂದರೆ ೭೦ ಮತ್ತು ೮೦ರ ದಶಕಗಳ ದಲಿತ ಚಳುವಳಿಗಳ ಹಿಂದೆ ಇದ್ದ ಸಿದ್ಧಲಿಂಗಯ್ಯ, ದೇವನೂರು ಮಹಾದೇವ, ಅರವಿಂದ ಮಾಲಗತ್ತಿ, ರಾಮಯ್ಯ, ಮುಂತಾದ ದಲಿತ ಸಾಹಿತಿಗಳ ಸಾಹಿತ್ಯ ಮತ್ತು ದಲತರಿಗೆ ಸಂಬಂಧಿಸಿದ ಹಲವು ಘಟನೆಗಳ ಕುರಿತ ಬರವಣಿಗೆಗಳು ಹಾಗೂ ಈ ಸಾಹಿತ್ಯ ಮತ್ತು ಬರವಣಿಗೆಗೆ ಜ್ಯೋತಿರಾವ್ ಫುಲೆ, ಡಾ. ಬಿ. ಆರ್. ಅಂಬೇಡ್ಕರ್, (ಸ್ವಲ್ಪ ಮಟ್ಟಿಗೆ) ಎಂ. ಕೆ. ಗಾಂಧಿಯವರ ವಿಚಾರಗಳು ಮತ್ತು ಈಗಾಗಲೇ ಇರುವ “ಜಾತಿವ್ಯವಸ್ಥೆ”ಯ ಕುರಿತ ಸಿದ್ಧಾಂತಗಳು ಪ್ರಭಾವ ಆಗಾಧವಾಗಿದೆ. ದಲಿತ ಚಳುವಳಿಗೆ ಕಾರಣವಾಗಿದ್ದ ಈ ಸಾಹಿತ್ಯ, ಸಿದ್ಧಾಂತಗಳ ಪ್ರಸ್ತುತತೆಯ ಬಗ್ಗೆ ಚರ್ಚಿಸಿಕೊಂಡಾಗ ಹುಟ್ಟಿಕೊಂಡ ಕೆಲವು ಪ್ರಶ್ನೆಗಳು ಮತ್ತು ಪರಿಣಾಮಗಳನ್ನೇ ನನ್ನ ಹಿಂದಿನ ಪ್ರತಿಕ್ರಿಯೆಗಳಲ್ಲಿ ಹೇಳಿದ್ದು. ನನ್ನ ಈ ಪ್ರಯತ್ನದ ಮುಂದುವರಿಕೆಯ ಭಾಗವೆನಿಸಿದ “ನಿಮ್ಮ (ಈಗಾಗಲೇ ಇರುವ) ಸಂಶೋಧನೆ, ಸಿದ್ಧಾಂತಗಳು, ವಿತಂಡ ವಾದಗಳ್ಯಾವುವೂ ಅದ್ಯಾಕೆ ಇಂದಿಗೂ ನಡೆಯುತ್ತಿರುವ ಸಾಮಾಜಿಕ ಬಹಿಷ್ಕಾರಗಳನ್ನು ತಡೆಯುತ್ತಿಲ್ಲ..?” ಎಂಬ ಹುಲಿಕುಟೆ ಮೂರ್ತಿಯವರು ಕೇಳಿದ ಪ್ರಶ್ನೆಗೆ ಶಕ್ತಿ ಬರುವುದೆಂಬ ಆಶಯವಿದೆ.

    ಇನ್ನೂ indina namma samaja vyakthi pradhanatheyannu neeru gobbara haki belasutthade.idee nayakaralli vyakthi prathisteyagi,nanemba ahankaravagi svarthavagi beleyithu.sanghatanegalu chidravagalu karanavayithu. yara ankegoo sigadanthayithu”. ಎಂಬ ಹೇಳಿಕೆಗೆ ಬರೋಣ. ನೀವು ದಲಿತ ನಾಯಕರು ಪ್ರತಿಷ್ಟೆಯೂ ದಲಿತ ಚಳುವಳಿಯು ತನ್ನ ಮೊನಚನ್ನು ಕಳೆದುಕೊಳ್ಳುವುದಕ್ಕೆ ಕಾರಣವೆಂದು ಹೇಳುತ್ತೀರಿ. ಆದರೆ ಈ ಸಂಗತಿಯನ್ನು ಮುಂದಿಟ್ಟುಕೊಂಡು ಪದೆ ಪದೆ ಚರ್ಚಿಸಿದರೆ ಏನು ಪ್ರಯೋಜನವಿಲ್ಲ. ಏಕೆಂದರೆ ದಲಿತ ಚಳುವಳಿಯಲ್ಲಿದ್ದ ಅನೇಕ ನಾಯಕರು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರಾಜಕೀಯ ಮತ್ತು ಹಣಗಳಿಸುವ ಇತರೆ ಮೂಲಗಳನ್ನು ಹುಡುಕತೊಡಗಿದರು, ಅದರಲ್ಲೂ ಕೆಲವರು ಯಶಸ್ವಿಯಾದರು. ಇನ್ನುಳಿದವರು ಅಥವಾ ಇಂತಹ ಕ್ಷೇತ್ರಗಳ ಬಗ್ಗೆ ಆಸಕ್ತಿಯಿಲ್ಲದವರು ಅವಕಾಶ ಉಪಯೋಗಿಸುಕೊಂಡ ದಲಿತ ನಾಯಕರನ್ನು ನಿಂದಿಸುವಲ್ಲಿ ಕಾಲ ಕಳೆದರು ಎಂದು ಹೇಳಬಹುದು. ಅಂದರೆ ಒಬ್ಬ ಅಥವ ಕೆಲವು ವ್ಯಕ್ತಿಗಳ ಹಿಂದೇ ಈ ಇರುವ ಉದ್ದೇಶಗಳಿಂದ ( ಪ್ರತಿಷ್ಟೆ) ಚಳುವಳಿಯು ಸೋಲುವ ದಾರಿ ಹಿಡಿಯಿತು ಎಂದು ಹೇಳುತ್ತೀರಿ. ಒಬ್ಬ ಅಥವಾ ಕೆಲವು ವ್ಯಕ್ತಿಗಳ ಹಿಂದೆ ಇರುವ ಉದ್ದೇಶದ ಬಗ್ಗೆ ಹೇಳಬಹುದು, ಆದರೆ ರಾಜಕೀಯದಲ್ಲಿರುವ, ಉದ್ದಿಮೆಗಳಲ್ಲಿರುವ, ಸಂಘಟನೆಗಳಲ್ಲಿರುವ ಎಲ್ಲಾ ದಲಿತರಿಗೆ (ನಾಯಕರಿಗೂ) ಪ್ರತಿಷ್ಟೆ ಇದೆ ಎಂದು ನಿರ್ದಿಷ್ಟವಾಗಿ ಆರೋಪಿಸುವುದಕ್ಕೆ ಕಷ್ಟವಾಗುತ್ತದೆ.

    ೭೦ರ ದಶಕದಲ್ಲಿ ಆರಂಭವಾದ ಹಲವು ಚಳುವಳಿಗಳ ಆರಂಭಕ್ಕೂ ಮತ್ತು ೯೦ರ ದಶಕದ ನಂತರ ಅವು ಸೋಲಿನ ದಾರಿ ತುಳಿದಿದ್ದಕ್ಕೂ ಸಾಮಾಜಿಕ ಪರಿಸ್ಥಿತಿಗಳೇ ಕಾರಣವೆಂದು ಹೇಳುತ್ತೀರಿ. ಆದರೆ ಭಾರತದಲ್ಲಿರುವ ಈ ಸಾಮಾಜಿಕ ಪರಿಸ್ಥಿಗಳೆಂದರೆ ಜಾತಿವ್ಯವಸ್ಥೆಯೆಂದು ಭಾವಿಸಿಕೊಂಡಿರುವುದರಿಂದ ಮತ್ತೆ ಜಾತಿವ್ಯವಸ್ಥೆಯ ಕುರಿತ ಚರ್ಚೆಗೆ ಮರಳಬೇಕಾಗುತ್ತದೆ. ಅಂದರೆ ಹೇಳಿದನ್ನೆ ಮತ್ತೆ ಹೇಳಬೇಕಾಗುತ್ತದೆ. ಹಾಗಾಗಿ ಈ ಚರ್ಚೆಯನ್ನು ಇಲ್ಲಿಗೆ ಮುಗಿಸಿದರೆ ಸೂಕ್ತವೆನಿಸುತ್ತದೆ (ಅವಶ್ಯಕತೆ ಇದ್ದರೆ ಚರ್ಚಿಸೋಣ).

    ಧನ್ಯವಾದಗಳೊಂದಿಗೆ…

    ಶಂಕರಪ್ಪ

    ಪ್ರತಿಕ್ರಿಯೆ
    • GN Nagaraj

      ಈಗ ಮೂರು ನಾಲ್ಕು ದಿನಗಳಿಂದ ಅಸ್ಫ್ರಶ್ಯತೆ, ದಲಿತ ಚಳುವಳಿಗೆ ಸಂಬಂದಿಸಿದ ಕೆಲವು ಚರ್ಚೆಗಳು ನಡೆಯುತ್ತಿವೆ. ಆದರೆ ರಾಮಯ್ಯಾನವರು ಎತ್ತಿದ ಪ್ರಶ್ನೆಗಳಿಂದ ಬಹಳ ದೂರ ಹೋಗಿದೆ .ಸಾಹಿತ್ಯ ,ಸಾಂಸ್ಕೃತಿಕ ರಂಗ , ದಲಿತ ಚಳುವಳಿಗಳ ಇಂದಿನ ಸ್ಥಿತಿಯ ಬಗ್ಗೆ , ಅದರ ಕಾರಣಗಳ ಬಗ್ಗೆ ಚರ್ಚೆ ಮಾಡಬೇಕು . ಅದರಿಂದ ನಾವು ಸಾಮಾಜಿಕ ಚಳುವಳಿಕಾರರು ಕೆಲವಾದರೂ ಪಾಠಗಳನ್ನು ಕಲಿತು ಇಂದು ನಾವು ಮಾಡಬೇಕಾದ ಕೆಲಸಗಳ ಬಗ್ಗೆ ಗಮನ ಹರಿಸುವುದು ನಮ್ಮ ಆದ್ಯತೆ .

      ದಲಿತ ಚಳುವಳಿಯಾಗಲಿ ,೭೦ರ ದಶಕದ ಎಲ್ಲ ಚಳುವಳಿಗಳು ಕೆಲವು ವ್ಯಕ್ತಿಗಳ ಸೃಷ್ಟಿಯಲ್ಲ. ಸ್ವಾತಂತ್ರ್ಯದ ನಂತರ ಎರಡು ದಶಕಗಳಲ್ಲಿ ನಮ್ಮ ದೇಶ ಸಾಗಿದ ದಾರಿ ,ಅದರ ಕೆಲವು ಪಾಸಿಟೀವ್ ಹಲವು ನೆಗೆಟೀವ್ ಆಯಾಮಗಳು [ತುರ್ತು ಪರಿಸ್ಥಿತಿ , ಅರೆಬರೆ ಭೂ ಸುಧಾರಣೆ , ಹಸಿರು ಕ್ರಾಂತಿ , ಗರೀಬಿ ಹಠಾವೋ, ಮೀಸಲಾತಿ , 20 ಅಂಶಗಳು ಇವು ಕೆಲ ಪ್ರಮುಖ ಅಂಶಗಳು ] ದೇಶದಲ್ಲಿಯೇ ತಲ್ಲಣಗಳನ್ನು ಸೃಷ್ಟಿಸಿತು . ಇದು ಕರ್ನಾಟಕದಲ್ಲಿ ಬೂಸಾ , ಜಾತಿ ವಿನಾಶ , ಭೂ ಆಕ್ರಮಣ ಚಳುವಳಿ ಇತ್ಯಾದಿ ಆಗಿ ನಂತರ ೭೦ರ ದಶಕದ ಚಳುವಳಿಗಳು , ಸಾಂಸ್ಕೃತಿಕ ಚಳುವಳಿಯಾಗಿ ಹೊಮ್ಮಿದ್ದು ಎಲ್ಲರಿಗೂ ಗೊತ್ತಿರುವ ವಿಷಯ .ಒಟ್ಟಿನಲ್ಲಿ ಸಾಮಾಜಿಕ ಪರಿಸ್ಥಿತಿಯೇ ಈ ಎಲ್ಲ ಚಳುವಳಿಗಳು ಚಿಮ್ಮುವುದಕ್ಕೆ ಮೂಲ ಕಾರಣ .

      ಹಾಗೆಂದ ಮೇಲೆ ಚಳುವಳಿ ಕುಂಠಿತವಾಗಲು ಕೂಡ ಸಾಮಾಜಿಕ ಪರಿಸ್ಥಿತಿ, ಹಾಗೂ ಅದರಿಂದ ಉಂಟಾದ ಜನ ಸಮುದಾಯದ ಚಲನೆ ಮೂಲ ಕಾರಣ .ಆದರೆ ಈ ಸಾಮಾಜಿಕ ಪರಿಸ್ಥಿತಿಯ ಒಂದು ಪ್ರಮುಖ ಭಾಗ ಈ ಚಳುವಳಿಗಳಿಂದ ಮೂಡಿಬಂದ ಸಂಘಟನೆಗಳ ಸ್ವರೂಪ .ಜನರಿಂದಲೇ ಮೂಡಿಬಂದ ಚಳುವಳಿಗಳಿಂದ ಮೇಲೆದ್ದ ನಾಯಕರು ತಾವೇ ಈ ಚಳುವಳಿಗಳ ಸೃಷ್ಟಿಕರ್ಥರು ಎಂಬ ಭ್ರಮೆಗೊಳಗಾದರು.
      ನಾಯಕರು ಚಳುವಳಿಯ ಹಿಡಿತದಲ್ಲಿಯೋ, ಅಥವಾ ಚಳುವಳಿ ಇಡಿಯಾಗಿ ನಾಯಕರ ಹಿಡಿತದಲ್ಲಿಯೋ.ಈ ಪ್ರಶ್ನೆ ಎಲ್ಲ ಚಳುವಳಿಗಳನ್ನೂ ಕಾಡಿತು. ನಾಯಕರುಗಳನ್ನು ಚಳುವಳಿ ಹಿಡಿತದಲ್ಲಿಟ್ಟು ಕೊಳ್ಳಬಹುದಾದ ಮಾರ್ಗವನ್ನು ಚಳುವಳಿಗಳು ಆರಂಭದಲ್ಲಿಯೇ ರೂಪಿಸಿಕೊಳ್ಳಲಿಲ್ಲ .
      ಇದರಲ್ಲಿ ರಾಮಯ್ಯಾನವರೂ ಸೇರಿದಂತೆ ನಿಷ್ಠೆಯಿಂದ ಚಳುವಳಿಗಾಗಿ ದುಡಿದ ಎಲ್ಲರ ಪಾಲೂ ಇದೆ .ಇಂದಿನ ನಮ್ಮ ಸಮಾಜ ವ್ಯಕ್ತಿ ಪ್ರಧಾನತೆಯನ್ನು ನೀರು ಗೊಬ್ಬರ ಹಾಕಿ ಬೆಳಸುತ್ತದೆ .ಇದೇ ನಾಯಕರಲ್ಲಿ ವ್ಯಕ್ತಿ ಪ್ರತಿಷ್ಠೆಯಾಗಿ ,ನಾನೆಂಬ ಅಹಂಕಾರವಾಗಿ ಸ್ವಾರ್ಥವಾಗಿ ಬೆಳೆಯಿತು .ಸಂಘಟನೆಗಳು ಚಿದ್ರವಾಗಲು ಕಾರಣವಾಯಿತು . ಯಾರ ಅಂಕೆಗೂ ಸಿಗದಂಥಾಯಿತು .

      ಇದೆ ವ್ಯಕ್ತಿ ಪ್ರಾಧಾನ್ಯತೆ ಅನೇಕ ರೂಪದಲ್ಲಿ ಚಳುವಳಿಗಳನ್ನು ಕಾಡಿದೆ .ಅದರ ಬಗ್ಗೆ ,ಹಾಗೂ ಚಳುವಳಿಗೆ ಅಧೀನರಾಗಿ ಎಲ್ಲರೂ ದುಡಿಯುವಂತೆ ಮಾಡಬಹುದಾದ ವಿಧಾನಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಬಹುದು .

      ಇನ್ನು ಇಲ್ಲಿ ಬಂದಿರುವ ಸಿದ್ಧಾಂತ ,ಸಂಶೋಧನೆ , ಸಾಹಿತ್ಯ ,ಚಳುವಳಿಗಳ ಬಗ್ಗೆ ಹಾಗೂ ಅಸ್ಪ್ರುಶ್ಯತೆ ದಲಿತರು , ಜಾತಿ ವ್ಯವಸ್ತೆ ಇತ್ಯಾದಿಗಳ ಬಗ್ಗೆ ಕೂಡ ಚರ್ಚಿಸೋಣ . ಆದರೆ ಆದ್ಯತೆ ಯಾವುದಕ್ಕೆ ?

      ಪ್ರತಿಕ್ರಿಯೆ
  4. ಸಿ ಪಿ ನಾಗರಾಜ

    ಶ್ರೀ ಜಿ ಎನ್ ನಾಗರಾಜ ಅವರಿಗೆ ,
    ನನ್ನ ಕೋರಿಕೆಯನ್ನು ಈಡೇರಿಸಿದ್ದಾಗಿ ನಿಮಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ . ಸಾಮಾಜಿಕ ಚಳುವಳಿಯಲ್ಲಿ ಕ್ರಿಯಾಶೀಲರಾಗಿ ತೊಡಗಿರುವ ನೀವು ಮತ್ತು ನಿಮ್ಮಂಥವರು ಕನ್ನಡ ಲಿಪಿಯಲ್ಲೇ ವಿಚಾರಗಳನ್ನು ತಿಳಿಸಿದಾಗ , ಅದು ಹೆಚ್ಚು ಜನರನ್ನು ತಲುಪುತ್ತದೆ .

    ಪ್ರತಿಕ್ರಿಯೆ
    • gn nagaraj

      dear nagaraj this transliteration is effort of afreind. as you helped me once. i am yet to get that computer expertise

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: