ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್: ರಾಮಚಂದ್ರ ದೇವ ಇನ್ನಿಲ್ಲ…


ದೆಹಲಿಯಲ್ಲಿ ಕೆಲ ತಿಂಗಳು ಅಮೆರಿಕದ ಒಂದು ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ಪ್ರಜಾವಾಣಿಗೆ ಸಹಾಯಕ ಸಂಪಾದಕ ಹುದ್ದೆಗೆ ವೈ ಎನ್ ಕೆ ಕೃಪೆಯಿಂದ ಬಂದಿದ್ದವರು ರಾಮಚಂದ್ರ ದೇವ. ಅವರು ಇಂದು ವಿಧಿವಶರಾದ ವಿಷಾದಕರ ಸುದ್ದಿ ಕೇಳಿ ವ್ಯಥೆಯಾಯಿತು.
ರಥಮುಸಲ  ಮೊದಲಾದ ನಾಟಕಗಳಲ್ಲದೆ, ಷೇಕ್ ಸ್ಪಿಯರ್ ನ ಕೆಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟ ರಾಮಚಂದ್ರ ದೇವ ಪತ್ರಿಕೋದ್ಯಮದ ಒತ್ತಡದ ಕೆಲಸಕ್ಕೆ ಒಗ್ಗಿರಲಿಲ್ಲ. ಸಹಾಯಕ ಸಂಪಾದಕರಾಗಿ ಸಂಪಾದಕೀಯ ಬರಹ ರೂಪಿಸಿಕೊಳ್ಳಲು ಶ್ರಮಪಡುತ್ತಿದ್ದ ಅವರನ್ನು ನಂತರ ಪ್ರಿಂಟರ್ಸ್ ಪ್ರಕಾಶನಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಂಸ್ಥೆ ನಷ್ಟ ಅನುಭವಿಸುವಂತಾದ ಮೇಲೆ ಅವರನ್ನು ಹುಬ್ಬಳ್ಳಿ ವಿಭಾಗಕ್ಕೆ ವರ್ಗ ಮಾಡಲಾಯಿತು. ಅಲ್ಲಿಗೆ ಹೋಗಿ ಕೆಲಸಕ್ಕೆ ವರದಿ ಮಾಡಿಕೊಂಡವರು ಅಲ್ಲಿಂದಲೇ ರಾಜೀನಾಮೆ ಸಲ್ಲಿಸಿದ್ದರು.
ಕುವೆಂಪು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಾಗ ಶಾಂತಿನಾಥ ದೇಸಾಯಿ ಅವರನ್ನು ಅವಲಂಬಿಸಿ ಅಲ್ಲಿನ ಇಂಗ್ಲಿಷ್‍ ವಿಭಾಗಕ್ಕೆ ಸೇರಿಕೊಂಡರೂ ಅಲ್ಲಿ ನೆಲೆ ಊರಲಾಗಲಿಲ್ಲ. ಅಲ್ಲಿಂದ ಸ್ವಂತ ಊರು ಸುಳ್ಯಕ್ಕೆ ವಾಪಸಾದವರು ಕೃಷಿ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡರು. ಈಚೆಗೆ ತೀವ್ರ ಅಸ್ವಸ್ಥರಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಲಭಿಸಲಿ

-ಲಕ್ಷ್ಮಣ ಕೊಡಸೆ

‍ಲೇಖಕರು avadhi

11 September, 2013

14 Comments

  1. Anonymous

    priya kodase, Deva illavaagiddu shock anisuttide. ello kaadina moleya tamma haLliyalli yarigoo sigade iruttiddaru. avara jathe naanu amoolya samaya kaLediruve. nannantha kiriya lekhakana baraha odi preethiyinda patra bareetiddaru. novaaguttide. rahamath tarikere

  2. anu pavanje

    ಒಹ್….ಬಹಳ ವಿಷಾದದ ಸುದ್ದಿ……ಸುಮಾರು ಎರಡು ವರ್ಷಗಳ ಹಿ೦ದೆ ತನ್ನ ಮು೦ಬರುವ ಒ೦ದು ಪುಸ್ತಕಕ್ಕೆ ಮುಖಪುಟ ಚಿತ್ರ ರಚಿಸಬೇಕು ಅ೦ತ ಕೋರಿ, ಅದಕ್ಕೆ ಮೊದಲು ತನ್ನ ಬರಹಗಳನ್ನು ಓದು ಅ೦ತ ಅವರ ಪುಸ್ತಕಗಳನ್ನ ಕಳುಹಿಸಿಕೊಟ್ಟಿದ್ದರು….ನ೦ತರ ಮತ್ತೊಮ್ಮೆ ಇನ್ನೂ ಸಮಯವಿದೆ…ಬರಹ ಪೂರ್ತಿಯಾದಾಗ ಮತ್ತೆ ತಿಳಿಸುವೆ ಅ೦ದಿದ್ದರು…..ಅದೇ ಕೊನೆ….ಈಗ ಉಳಿದಿರುವುದು ಅವರ ಪುಸ್ತಕಗಳ ಜೊತೆ ಅವರ ನೆನಪು ಮಾತ್ರ…..

  3. ರಮ್ಮಿಗ

    ದೇವ ಅವರು ಬರೆದ ಒಂದು ಸಣ್ಣ ಕತೆ ಯೂ ಆರ್ ಅನಂತಮೂರ್ತಿ ಅವರಿಗೆ ಭಾರತಿಪುರ ಬರೆಯಲು ಕಾರಣವಾಯಿತು ಅಂತ ಕೇಳಿದ್ದೆ.

  4. ಜಗದೀಶ್ ಕೊಪ್ಪ.

    ಕೊಡಸೆ ಸಾರ್. ಪ್ರಜಾವಾಣಿಯಲ್ಲಿ ಅವರು ಘನತೆಯಿಂದ ವೃತ್ತಿ ನಿಭಾಯಿಸಿದ್ದನ್ನು ನಾನಿನ್ನು ಮರೆತಿಲ್ಲ, ಗ್ರಂಥಪಾಲಕರಾಗಿದ್ದ ಜೆ. ರಾಮಮೂರ್ತಿ ಬಳಿ ಬಂದು ಅವರು ಚರ್ಚಿಸುತ್ತಿದ್ದ ವಿಷಯಗಳಿಗೆ ನಾನು ಕಿವಿಯಾಗುತ್ತಿದ್ದೆ. ಅವರ ಪ್ರತಿಭೆಯನ್ನು ಕನ್ನಡನಾಡು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ವ್ಯಥೆ ನನಗಿದೆ. ಡಿ.ವಿ. ರಾಜಶೇಖರ್ ನೋಡಿದಾಗಲೂ ಸಹ ಇದೇ ನೋವು ಕಾಡುತ್ತೆ.

  5. Gopaal Wajapeyi

    ಸರಿಯಾಗಿ ಮೂವತ್ತು ವರ್ಷಗಳ ಹಿಂದೆ ಮುದೇನೂರ ಸಂಗಣ್ಣ ಅವರ ಆತಿಥ್ಯದಲ್ಲಿ ಅವರ ಊರು ಚಿಗಟೇರಿಯಲ್ಲಿ ಒಂದು ರಂಗ ತರಬೇತಿ ಶಿಬಿರ ನಡೆಯಿತು. ಆ ಸಂದರ್ಭದಲ್ಲಿ ನನ್ನನ್ನವರು ಬರಮಾಡಿಕೊಂಡು, ದಿ. ಕೊರಡ್ಕಲ್ ಶ್ರೀನಿವಾಸರಾಯರ ‘ಧನಿಯ ಸತ್ಯನಾರಾಯಣ’ ಕಥೆಯನ್ನು ಆಧರಿಸಿ ಒಂದು ಮಕ್ಕಳ ನಾಟಕ ಬರೆದುಕೊಡಿ ಅಂತ ಕೇಳಿದರು. ಸಂಗಣ್ಣನವರ ಮಾತಿಗೆ ಒಪ್ಪಿ ನಾನು ಅವರಲ್ಲಿಯೇ ವಾರಕಾಲ ಉಳಿದು ಬರೆದುಕೊಟ್ಟೆ. ಅದಕ್ಕೆ ಸಂಗಣ್ಣನವರೇ ‘ನಾ ಬೆಳೆದ ಬಾಳೀಯ ಸುಳಿಯಾಗ…’ ಎಂಬ ಶೀರ್ಷಿಕೆಯನ್ನು ನೀಡಿದರು. ಅಲ್ಲಿಯ ಕಲಾವಿದರಿಗಾಗಿ ಆ ನಾಟಕದ ವಾಚನವನ್ನೂ ಏರ್ಪಡಿಸಿದರು.
    ಅದೇ ವೇಳೆಗೆ ‘ಮೈಸೂರ್ ಬ್ಯಾಂಕ್ ಕನ್ನಡ ಬಳಗ’ದವರು ಏರ್ಪಡಿಸಿದ ನಾಟಕ ಹಸ್ತಪ್ರತಿ ಸ್ಪರ್ಧೆಗೆ ನಾನು ‘ನಾ ಬೆಳೆದ ಬಾಳೀಯ ಸುಳಿಯಾಗ…’ ಕಳಿಸಿಕೊಟ್ಟೆ. ಅದಕ್ಕೆ ಎರಡನೆಯ ಬಹುಮಾನವೂ ಬಂದಿತು.
    ಮುಂದೊಮ್ಮೆ ಆಕಸ್ಮಿಕವಾಗಿ ಬೆಂಗಳೂರಿನ ‘ಪ್ರಜಾವಾಣಿ’ ಕಾರ್ಯಾಲಯಕ್ಕೆ ಹೋದ ನನಗೆ ಎದುರಾದವರು ರಾಮಚಂದ್ರದೇವ. ಅದಾಗಲೇ ಅವರ ನಾಟಕಗಳನ್ನು ಓದಿ, ಪ್ರಭಾವಿತನಾಗಿದ್ದೆನಲ್ಲ, ಅವರಿಗೆ ನನ್ನನ್ನು ಪರಿಚಯಿಸಿಕೊಂಡೆ. ಅವರು ಕೂಡಲೇ ‘ನಾ ಬೆಳೆದ ಬಾಳೀಯ ಸುಳಿಯಾಗ…’ ನಾಟಕದ ಬಗ್ಗೆ ಮಾತಾಡತೊಡಗಿದಾಗ ನನಗೆ ಅಚ್ಚರಿ. ಆಮೇಲೆ ಗೊತ್ತಾದ ವಿಷಯವೆಂದರೆ ರಾಮಚಂದ್ರದೇವ ಅವರು ಆ ಸ್ಪರ್ಧೆಯ ತೀರ್ಪುಗಾರರಲ್ಲೊಬ್ಬರಾಗಿದ್ದರು ಎಂಬುದು. ನಂತರ ಅಲ್ಲಿಯ ಉಳಿದ ಮಿತ್ರರೊಂದಿಗೆ ಅವರೂ ಕಾಫಿಗೆ ಬಂದರು.
    ಇವತ್ತು ಸಂಜೆ ನಾನು ಗಾಂಧೀ ಬಜಾರಿನಲ್ಲಿ ಸುತ್ತುತ್ತಿದ್ದಾಗ ಕಂಡವರು ಮಿತ್ರ ನಾರಾಯಣ ರಾಯಚೂರ. ಅವರಿಂದಲೇ ನನಗೆ
    ರಾಮಚಂದ್ರದೇವ ಇನ್ನಿಲ್ಲವೆಂಬ ಸುದ್ದಿ ತಿಳಿದದ್ದು.
    ರಾಮಚಂದ್ರದೇವ ಅವರ ಆತ್ಮಕ್ಕೆ ಶಾಂತಿ ಕೋರುವೆ.

  6. ದಿನೇಶ್ ಕುಕ್ಕುಜಡ್ಕ

    ನನ್ನೂರ ಜೀವ ಚಿಲುಮೆಯ ಈ ಹಿರಿಯ ಚೇತನಕ್ಕೆ ಅಶ್ರುನಮನ.

  7. ನ.ರವಿಕುಮಾರ

    ಇತ್ತೀಚಿಗಿನ ಕೆಲವು ವರ್ಶಗಳಲ್ಲಿ ಬಿಟ್ಟರೆ ಶ್ರೀನಗರದ ಅವರ ಮನೆಯಲ್ಲಿ ಅನೇಕ ಬಾರಿ ಬೇಟಿಯಾದ ನೆನಪು…ಆಗೆಲ್ಲ ನಮಗೆ ಸುಬ್ಬಣ್ಣನವರಂತೆ ಬೆಂಗಳೂರಿನಲ್ಲಿಯೂ ಸಾಹಿತ್ಯಕ ಶಿಬಿರ ಮಾಡಬೇಕೆಂಬ ಹಂಬಲ ರಾಮಚಂದ್ರ ದೇವ ಮತ್ತು ಎಸ್. ಮಾಲತಿ ಅವರನ್ನು ನಿರ್ದೇಶಕರನ್ನಾಗಿ ಮಾಡಿಕೊಂಡಿದ್ದೆವು…ಆಗ ಹಣಕಾಸಿನ ಬಲವಿಲ್ಲದೆ ಅದು ಹಾಗೇ ನಿಂತು ಹೋಯಿತು. ಎಷ್ಟೋ ಬಾರಿ ಅವರು ನಮ್ಮಂಥ ಸಣ್ಣ ಪ್ರಕಾಶಕರು/ಲೇಖಕರಿಂದ ಪುಸ್ತಕಗಳನ್ನು ತರಿಸಿಕೊಂಡು ತಕ್ಷಣವೇ ಹಣ ಕಳುಹಿಸುತ್ತಿದ್ದರು. ಅವರ ಹುಟ್ಟೂರಿಗೆ ಹೋದ ಮೇಲೆ ಸಂಪರ್ಕ ಕಡಿಮೆಯಾದರೂ ಪುಸ್ತಕ ವಹಿವಾಟು ನಮ್ಮ ಮಧ್ಯೆ ಸಣ್ಣ ಪ್ರಮಾಣದಲ್ಲಿಯಾದರೂ ನಡೆಯುತ್ತಿತ್ತು…ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು ಪುಸ್ತಕ ಕೃತಿ ಚೌರ್ಯ ಎಂಬ ಆಪಾದನೆ ಬಂದಾಗ ಅದರ ಎಲ್ಲ ಪ್ರತಿಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಂಡದ್ದನ್ನು ಮೆಚ್ಚಿ ಅವರಿಗಾದ ಅನುಭವವನ್ನೂ ಅವಧಿಗೆ ಬರೆದಿದ್ದರು…
    ಮನುಷ್ಯ ಯಾಕೆ ಹುಟ್ಟಿತ್ಟಾನೆ ಎನ್ನುವುದಕ್ಕೆ ಕಾರಣವಿದೆ ಆದರೆ ಯಾಕೆ ಸಾಯುತ್ತಾನೆ ಎಂದು ಕೇಳಿದರೆ ಅದೇ ಹಾರಿಕೆಯ ಉತ್ತರ… ಹುಟ್ಟಿದವನು ಸಾಯಲೇ ಬೇಕು…ಇಷ್ಟು ಬೇಗನೇ? ಎಂದರೆ…
    ಆದರೆ ದೇವ ನಮ್ಮ ಮಧ್ಯೆ ಇರುತ್ಟಾರೆ ಅವರ ಕಥೆ, ಅನುವಾದ, ನೆನಪು, ವಿಚಾರಗಳ ಕಾರಣದಿಂದ
    ರವಿ, ಅಭಿನವ

  8. Anonymous

    eegashte deva avaru anuvaadisida Hamlet naatakada kelavu saalugalannu odidde. mail check maadidare deva avaru innillavaada vaarthe!

  9. girijashastry

    ಯಾವಾಗಲೂ ಅವರ ಪ್ರಕಟಣೆಗಳನ್ನು ಮೈಲ್ ಮಾಡೋರು. ಅವರ ಪುಸ್ತಕವೊಂದನ್ನು ಕಳುಹಿಸಿ ಅದಕ್ಕೆ ವಿನಿಮಯವಾಗಿ ನನ್ನ ಪುಸ್ತಕವೊಂದನ್ನು ತರಿಸಿಕೊಂಡಿದ್ದರು. ಶೇಕ್ಸ್ ಪಿಯರ್ ಎರಡು ಸಂಸ್ಕೃತಿಗಳಲ್ಲಿ ವಿಷಯವಾಗಿ ಸಂಶೋಧನೆ ಮಾಡಿದ ಅವರನ್ನು ಅನೇಕ ವಿಚಾರ ಸಂಕಿರಣಗಳಲ್ಲಿ ಕಂಡಿದ್ದೇನೆ. ಬಹಳ down to earth ಮನುಷ್ಯ. ಅವರು ಇನ್ನಿಲ್ಲವೆಂದರೆ ನಂಬುವುದು ಕಷ್ಟ.

  10. ಸುದರ್ಶನ್

    ನೆತ್ತರಿನ ಬಿಸಿ ತಗ್ಗಿ
    ಕಾಮ ಪಳಗಿ
    ಅಂತಕನ ತೀರ್ಮಾನಕ್ಕೆ
    ಕಾಯುವ ಪ್ರಾಯ ನಿನ್ನದು…
    –ಹ್ಯಾಮ್ಲೆಟ್ ತನ್ನ ತಾಯಿಯನ್ನು ಜರೆಯುವ ಮಾತುಗಳು,
    ರಾಮಚಂದ್ರದೇವರ ಪರಿಣಾಮಕಾರಿ ಅನುವಾದದಲ್ಲಿ!

  11. venkatesh

    besaravayitu. ramachandra devaravara sahitya manassinalli sulidaduttive.

  12. P. Bilimale

    ನನ್ನೂರಿಗೆ ಗೌರವ ತನ್ದುಕೊಟ್ಟವರಲ್ಲಿ ದೇವ ಕೂಡ ಒಬ್ಬರು, ಒಳ್ಳೆಯ ಗೆಳೆಯ ಮತ್ತು ಮಾರ್ಗದರ್ಶಿಯನ್ನು ಕಳಕೊಂಡೆ. ಈ ಸಲ ಊರಿಗೆ ಹೋದಾಗ ಭೇಟಿ ಮಾಡಿ, ದೆಹಲಿಯ ಕಷ್ಟ ಸುಖ ಹಂಚಿಕೊಳ್ಳೋಣ ಎನ್ದಿದ್ದೆ.. ಇನ್ನೆಲ್ಲಿ ?

  13. ಚಂದ್ರಮೌಳಿ

    ಬ್ರೇಕಿಂಗ್ ನ್ಯೂಸ್ : ರಾಮಚಂದ್ರದೇವ ಇನ್ನಿಲ್ಲ ಎಂಬ ತಲೆಬರಹದ ಸುದ್ದಿ ವರದಿ ಮಾಡಿದವರು
    ಆ ಸುದ್ದಿಯಿಂದ ಏನು ಹೇಳ ಬಯಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು.
    * ಪ್ರಜಾವಾಣಿಗೆ ಸಹಾಯಕ ಸಂಪಾದಕ ಹುದ್ದೆಗೆ ವೈ ಎನ್ ಕೆ ಕೃಪೆಯಿಂದ ಬಂದಿದ್ದವರು
    ರಾಮಚಂದ್ರ ದೇವ.
    * ರಾಮಚಂದ್ರ ದೇವ ಪತ್ರಿಕೋದ್ಯಮದ ಒತ್ತಡದ ಕೆಲಸಕ್ಕೆ ಒಗ್ಗಿರಲಿಲ್ಲ.
    ಸಹಾಯಕ ಸಂಪಾದಕರಾಗಿ ಸಂಪಾದಕೀಯ ಬರಹ ರೂಪಿಸಿಕೊಳ್ಳಲು ಶ್ರಮಪಡುತ್ತಿದ್ದ ಅವರನ್ನು ನಂತರ ಪ್ರಿಂಟರ್ಸ್ ಪ್ರಕಾಶನಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಂಸ್ಥೆ ನಷ್ಟ ಅನುಭವಿಸುವಂತಾದ ಮೇಲೆ ಅವರನ್ನು ಹುಬ್ಬಳ್ಳಿ ವಿಭಾಗಕ್ಕೆ ವರ್ಗ ಮಾಡಲಾಯಿತು.
    * ಕುವೆಂಪು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಾಗ ಶಾಂತಿನಾಥ ದೇಸಾಯಿ ಅವರನ್ನು ಅವಲಂಬಿಸಿ ಅಲ್ಲಿನ ಇಂಗ್ಲಿಷ್‍ ವಿಭಾಗಕ್ಕೆ ಸೇರಿಕೊಂಡರೂ ಅಲ್ಲಿ ನೆಲೆ ಊರಲಾಗಲಿಲ್ಲ.
    …………..
    ಕೊಡಸೆ, ರಾಮಚಂದ್ರದೇವ್ ನಿಧನರಾಗಿರೋ ಈ ಸಂದರ್ಭದಲ್ಲಿ ನೀವು ಬರೆದ ವರದಿ ಅಸಂಪೂರ್ಣವಾಗಿದೆಯಾ? ಅಥವಾ ನೀವು ಬರೆದಿದ್ದು ಇಷ್ಟೆ ಎಂದಾದರೆ ಇದರ ಮೂಲಕ
    ನೀವೇನು ಹೇಳ ಹೊರಟಿದ್ದೀರಿ?
    ಮೂರು ಪ್ಯಾರದ ಸುದ್ದಿ ಓದಿದ ಎಂಥವರಿಗೂ ಈ ಪ್ರಶ್ನೆ ಮೂಡದೇ ಇರದು.
    ರಾಮಚಂದ್ರದೇವ್ ಅವರತ್ತ ನೆಗಿಟಿವ್ ನೋಟ ಬೀರಲಾಗಿದೆ ಎನಿಸಲ್ವಾ?

  14. mahantesh navalkal

    dev bagge asamarthateya apavaadane salla badalagi he was not compromising with as it is
    mahantesh navalkal

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading