ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಎದಿ ತನಕ ಬೆಳೆದು ನಿಂತ ಈ ನಿನ್ನ ಕನಸ..

10929092_761355523947453_4274843287700786039_n

ರಾಜಕುಮಾರ್ ಮಡಿವಾಳರ್

images (1)
ಪಪ್ಪಾ…
ಜೀವಕ ಜೀವ ಬಂದು
ಜೀವಂತ ನಿಂತರ ಎದುರ
ಜೀವದಾ ಗೆಳೆಯಾ ಬೆಳತನಕ
ನಿನ್ನ ಕಥಿ ಹೇಳತೀನಿ ಹಾರಿ ಖಬರ!
ಹೆಜ್ಜಿ ಹೆಜ್ಜಿಗೆ ಅಡ್ಡಬಂದ ಕಲ್ಲ
ಮ್ಯಾಲ ಅಂಗೈ ಇಟ್ಟ ಕಲಿಸಿದಿ ನಡಗಿ
ದಾರಿ ನಡುವಿನ ಮುಳ್ಳೆಲ್ಲ ಹೂವ್ವಾದವೋ
ನಿನ್ನ ಹಿರಿತನಕ ನಡುಗಿ..!
ಒಪ್ಪೊತ್ತು ಉಣಲಿಲ್ಲದ ಬಡತನ
ಇತ್ತದರ ಪಾಡಿಗದು ಶ್ರೀಮಂತ
ಎಲ್ಲಿಂದ ಕಡತಂದು
ಎಷ್ಟೊಂದು ಸುಖ ಸುರುವಿದಿ
ಹ್ಯಾಂಗ ಹಾಡಲಿ ಏನಂತ?
ಕಾಲೂರಿದಷ್ಟು ಮಲ್ಲಿಗೆ ನೆಲ
ಇಂದಿಗೂನು ಹಾದಿ ತುಂಬ ನಿನ್ನ ಮಾತ
ಇರಬೇಕಿತ್ತು ಇನ್ನೀಸು ದಿನ, ಯಾವ ಮನಿಸು?
ಹ್ಯಾಂಗ ಬಿಟ್ಟು ಹ್ವಾದಿ..?
ಎದಿ ತನಕ ಬೆಳೆದು ನಿಂತ ಈ ನಿನ್ನ ಕನಸ..!

‍ಲೇಖಕರು avadhi-sandhyarani

26 August, 2015

4 Comments

  1. mahesh kalal

    ಒಪ್ಪೊತ್ತು ಉಣಲಿಲ್ಲದ ಬಡತನ
    ಇತ್ತದರ ಪಾಡಿಗದು ಶ್ರೀಮಂತ
    ಎಲ್ಲಿಂದ ಕಡತಂದು
    ಎಷ್ಟೊಂದು ಸುಖ ಸುರುವಿದಿ
    ಹ್ಯಾಂಗ ಹಾಡಲಿ ಏನಂತ? haleya nenapugalu kedakuva kavana thumba chennagide

    • Anonymous

      thank you

  2. lakshmikanth itnal

    sundar kavana rajakumar ji

  3. mmshaik

    hrudaya tattuva kavana..nice..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading